‘ನವಿಲಾದವರು’ ಚಿತ್ರ -ವಿಚಾರ ಸಂಕಿರಣ …

ವ್ಯಂಗ್ಯಚಿತ್ರ ಪ್ರದರ್ಶನ …

ಸೂರ್ಯ ಶಿಕಾರಿ…

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿರುವ 18  ನಾಟಕಗಳ  ರಂಗ ಹಬ್ಬದಲ್ಲಿ  ಇಂದಿನ ನಾಟಕ ಸೂರ್ಯ ಶಿಕಾರಿ.

ಸೂರ್ಯಶಿಕಾರಿ

ಸ್ಥಳ : ರವೀಂದ್ರ ಕಲಾಕ್ಷೇತ್ರ

ಸಮಯ: ಸಂಜೆ 6 ಗಂಟೆಗೆ
ಮೂಲ : ಬಂಗಾಳಿ
ರಚನೆ : ಉತ್ಪಲ್ ದತ್
ಕನ್ನಡಕ್ಕೆ : ಎಂ.ಪಿ. ಪ್ರಕಾಶ್
ವಸ್ತ್ರ ವಿನ್ಯಾಸ : ಶ್ರೀಮತಿ ಛಾಯಾಭಾರ್ಗವಿ. ಎಸ್.ಹೆಚ್

ನಿರ್ದೇಶನ : ಮಾಲತೇಶ್ ಬಡಿಗೇರ

ಇನ್ನಷ್ಟು ವಿವರಗಳಿಗೆ : ಸೈಡ್ ವಿಂಗ್

 

ಮತ್ತೆ ಮತ್ತೆ ಮುಖಪುಟಗಳು…

-ಅಪಾರ

ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ.

ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ, ಹಿಂದೆ ಮುಂದೆ ಓಡಿಸಿ, ಹಾಳೆಗಿಳಿಸಿದ್ದಲ್ಲದೆ ಪುಸ್ತಕವನ್ನು ಪ್ರಕಾಶಿಸುತ್ತಿರುವ ಅಕ್ಷತಾಗೆ ಅಭಿನಂದನೆಗಿಂತ ಹೆಚ್ಚಾಗಿ ಧನ್ಯವಾದವನ್ನೇ ಹೇಳಬೇಕು. ಎರಡನೇ ಪುಸ್ತಕ ನೀಷೆ ಕುರಿತದ್ದು. ಬಿಡುಗಡೆ ಕಾರ್ಯಕ್ರಮ ಶಿವಮೊಗ್ಗದಲ್ಲಿ

‘ಸತ್ತವರ ನೆರಳು’…

ಚಿತ್ರಗಳು : ಲಕ್ಷ್ಮೀನಾರಾಯಣ .ವಿ.ಎನ್

ಮೈಸೂರಿನಲ್ಲಿ ನಿರಂತರ ಫೌಂಡೇಶನ್ ವತಿಯಿಂದ ರಂಗಾಯಣದ ವನರಂಗದಲ್ಲಿ 5 ದಿನದ ನಾಟಕೋತ್ಸವ 23ರಿಂದ ಪ್ರಾರಂಭವಾಗಿದೆ.ಸಿ ಆರ್. ಸಿಂಹ ಉದ್ಘಾಟಿಸಿದ ಉತ್ಸವದ ಮೊದಲ ನಾಟಕ ‘ಸತ್ತವರ ನೆರಳು’ ಬೆಂಗಳೂರಿನ ಬೆನಕ ತಂಡ ಅಭಿನಯಿಸಿದ ನಾಟಕದ ಕೆಲವು ದೃಶ್ಯಗಳು ನಿಮಗಾಗಿ…

ಇನ್ನಷ್ಟು ಫೋಟೋಗಳು : ಸೈಡ್ ವಿಂಗ್


Celebrate Dance 2010…

ಜಯಶ್ರೀ ಕಾಲಂ:ಯಾರು ಹೆಚ್ಚು- ಯಾರು ಕಡಿಮೆ ಮುಖ್ಯವಲ್ಲ ಕಣ್ರೀ

ಶಶಿ ಸರ್ ಹಾಗೂ ರಂಗ ಸರ್ ವಿಷಯಕ್ಕೆ ಬಂದ್ರೆ ಇಬ್ಬರಲ್ಲಿ ಯಾರು ಹೆಚ್ಚು- ಯಾರು ಕಡಿಮೆ ಎಂದು ಹೇಳುವುದಕ್ಕಿಂತ ಯಾರು ಯಾವ ರೀತಿಯಲ್ಲಿ ಆ ಚಾನೆಲ್ ಬೆಳವಣಿಗೆಗೆ ಆದ್ಯತೆ ಕೊಟ್ರು ಎನ್ನುವುದಷ್ಟೇ ಮುಖ್ಯವಾಗುತ್ತದೆ.

ಶಶಿ ಸರ್ ನ್ಯೂಸ್ ಎನ್  ವ್ಯೂಸ್ ಅನ್ನುವ ಕಾರ್ಯಕ್ರಮದ ಮೂಲಕ, ರಸವತ್ತಾದ ಚರ್ಚೆಯ ಮುಖಾಂತರ  ನ್ಯೂಸ್ ಅಂದ್ರೆ-ಚರ್ಚೆ ಎಂದರೆ ಮೂಗು ಮುರಿತಾ ಇದ್ದ ಸಾಮಾನ್ಯರನ್ನು ಆಕರ್ಷಿಸಿದರು. ಆ ವಿಷಯದಲ್ಲಿ ಶಶಿ ಸರ್ ಸಾಧನೆಯ ಬಗ್ಗೆ ಗೌರವ ಸಲ್ಲಿಸ ಬೇಕಾದದ್ದೇ. ಅತಿಥಿಗಳ ಜೊತೆಯಲ್ಲಿ ಅವರು ಮಿಂಗಲ್ ಆಗುವ ರೀತಿಯು ಆಕರ್ಷವಾಗಿತ್ತು. ಮುಖ್ಯವಾಗಿ ಅವರೊಬ್ಬರೇ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು…

ಆದರೆ ರಂಗ ಸರ್ ವಿಷಯಕ್ಕೆ ಬಂದಾಗ ಅವರು ಅನೇಕರು ಹೇಳುವಂತೆ ತುಂಬಾ ಮಾತಾಡ ಬಹುದು,ಆದರೆ ನನ್ನ ಪ್ರಕಾರ ಅದು ಅವರ ಶೈಲಿ. ಮೌನವಾಗಿ ಪ್ರಿಂಟ್ ಮೀಡಿಯಾದಲ್ಲಿ ಬರೆದುಕೊಂಡು ಕೂತಿದ್ದವರು ಕ್ಯಾಮರ ಮುಂದೆ ಕೂತು ಢಂ ಢಮಾರ್ ಎಂದು ಗುಂಡು ಸಿಡಿಸಿದರೆ ನನ್ನ ವಯುಕ್ತಿಕ ಅಭಿಪ್ರಾಯದ ಪ್ರಕಾರ ಸಾಕಷ್ಟು ಜನರಿಗೆ ಸಹಿಸಲಿಕ್ಕೆ ಆಗಲಿಲ್ಲ.ಮತ್ತೊಂದು ಸಂಗತಿ ಕ್ಯಾಮರ ಮುಂದೆ ಕೂತರೆ ಎಂತಹವರಿಗೂ ಪುಳಕ ಆಗುತ್ತೆ ಕಣ್ರೀ, ರಂಗ ಸರ್ ಸಹ ಸ್ವಲ್ಪ ಎಂಜಾಯ್ ಮಾಡ್ಲಿ ಬಿಡಿ :-)

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಪುಸ್ತಕ ಓದು ವಿಮರ್ಶೆ …

ಇವತ್ತಿನ ಕಥೆ ಹೀಗೆ..

ಚಿತ್ರ: ಸತೀಶ್ ಆಚಾರ್ಯ

ಕಿ ರಂ ಮತ್ತು ‘ಮತ್ತೆ ಮತ್ತೆ ಬೇಂದ್ರೆ’

-ಅಕ್ಷತಾ ಕೆ


ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ

ಅಪ್ಪಿತಪ್ಪಿ ನೆಲದಲಿ

ಬಂದು ಇಳಿದರಿವುಗಳ

ಊದಿ ತೂರಿ ಹಾರಿಸು

ಮತ್ತೆ ಮೇಲೆ ಮುಗಿಲಲೀ

`ಗರಿಗಳಿರುವುದು ಹಾರಲಿಕ್ಕೆ. ಆದರೆ ಒಮ್ಮೊಮ್ಮೆ ಮಾತ್ರ ಅವು ಉದುರಿ ನೆಲಕ್ಕೆ ಬೀಳುತ್ತವಲ್ಲ, ಅದನ್ನು ಕವಿ ಒಂದೊಂದು ಗರಿ ಕವಿತೆಯ ರೂಪದಲ್ಲಿ ಸಿಗುತ್ತವೆ ಎನ್ನುತ್ತಾರೆ. ಒಂದೊಂದು ಗರಿಗೆ ಒಂದೊಂದು ತರದ ಶಕ್ತಿ-ಒಂದೊಂದು ತರದ ಜೀವ ಇರುತ್ತದೆ. ಓದುಗನಾದ ನೀನು ಅದನ್ನು ಚಿಠಿಠಿಡಿಜಛಿಚಿಣಜ ಮಾಡಿ ಊದಿ ತೂರಿಬಿಟ್ಟುಬಿಡು ಅದು ಇನ್ನೊಬ್ಬನಿಗೆ ಸಿಗತ್ತೆ ಅವನು ಅದನ್ನು ಮತ್ತೊಬ್ಬನೆಡೆಗೆ ಊದಿ ತೂರಿ ಕಳಿಸ್ತಾನೆ. ನನಗೆ ಪಂಪ ಹೇಗೆ ಸಿಕ್ಕಿದ್ದಾನೆ ಎಂದರೆ ಕಳೆದ ಸಾವಿರ ವರ್ಷದಿಂದ ಅವನನ್ನು ಊದಿ ತೂರಿ ಇಪ್ಪತ್ತೊಂದನೇ ಶತಮಾನದವರೆಗೂ ಕಳಿಸಿದ್ರಿಂದ ಪಂಪ ಸಿಕ್ಕಿದ್ದಾನೆ. ಇಲ್ಲಿತನಕ ಊದಿ ತೂರಿ ಕಳಿಸಿರುವುದರಿಂದ ಅಲ್ಲಮ ಸಿಕ್ಕಿದ್ದಾನೆ. ಅದು ನಮ್ಮಲ್ಲಿ ನಡೆದುಕೊಂಡು ಬಂದಿರೋ ಸಂಪ್ರದಾಯ. ಈಗ ನಮ್ಮದೇನು ಕರ್ತವ್ಯ ಎಂದರೆ ಊದಿ ತೂರಿ ಕಳಿಸಿ ಮುಂದೆ ಹೋಗ್ತಾ ಇರೋದು. ಆ ಪ್ರಯಾಣಕ್ಕೆ ಕೊನೆಯೇ ಇಲ್ಲ’.

ಬೇಂದ್ರೆಯವರ `ಗರಿ’ ಕವಿತೆಯ ಸಾಲುಗಳನ್ನು ಕಿರಂ ಗ್ರಹಿಸಿರುವ ಬಗೆ ಇದು.

ಕಾವ್ಯವನ್ನು ಊದಿ ತೂರಿ ಮುಂದಿನ ತಲೆಮಾರಿಗೆ ತಲುಪಿಸುವ ಸಂಪ್ರದಾಯದ ಬಗ್ಗೆ ಏನು ಹೇಳುತ್ತಿದ್ದಾರೋ ಅದನ್ನು ಕಿರಂ ಸ್ವತಃ ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಒಂದು ವ್ರತದಂತೆ ನಡೆಸಿಕೊಂಡು ಬಂದಿದ್ದರು. `ಕಾವ್ಯ’ ಬರೆಯದಿದ್ದರೂ ನಡೆದಲ್ಲೆಲ್ಲ ಕಾವ್ಯದೊರತೆಗಳನ್ನು ಚಿಮ್ಮಿಸಿದರು. ನುಡಿನುಡಿದು ಕಿಂದರಿಜೋಗಿಯಂತೆ ಅಸಂಖ್ಯರನ್ನು ಕಾವ್ಯದೆಡೆಗೆ ಸೆಳೆದರು.

More

Previous Older Entries

%d bloggers like this: