ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು…

ಅದೊಂದು ಮಾತಲ್ಲೇ ಅವಳ ಅಂತಃ ಕರಣ


ಹಾಲುಂಡ ತವರಿಗೆ ಏನೆಂದು ಹಾಡಲೆ
ಹೊಳೆ ದಂಡೆಲಿರುವ ಕರಕಿಯ ಕುಡಿಯಂಗೆ
ಹಬ್ಬಲೇ ಅವರ ರಸಬಳ್ಳಿ
ಒರಿಯಾ ಲೇಖಕ ಗೋದಾವರೀಶ್ ಮಹಾಪಾತ್ರ ಅವರ ನೀಲಾ ಮೇಡಂ ಎಂಬ ಕಥೆಯನ್ನು ಓದಿಕೊಳ್ಳುವಾಗ, ತವರಿನ ಕುರಿತ ಹೆಣ್ಣಿನ ಈ ಎದೆಯಾಳದ ಹಂಬಲ ಮರುದನಿಸಿದಂತಾಗುವುದು ಸುಳ್ಳಲ್ಲ . ಅದೊಂದು ಪುಟ್ಟ ಕಥೆ. ನೀಲಾ ಮೇಡಂ ನಾಯಕಿ. ಅವಳನ್ನು ದುರಂತ ಬೆಂಬತ್ತಿಯೇ ಬಂದಿದೆ.
ಅದನ್ನು ಮೀರಿಯು  ನಮ್ಮೊಳಗೊಂದು ಕಲರವವನ್ನು ತಂದು  ಸುರಿಯುವುದು  ಅವಳ ಅಂತಃ  ಶಕ್ತಿ .ನೀಲಾ ಮೇಡಂ . ಶಾಲಾ  ಶಿಕ್ಷಕಿಯಾಗಿದ್ದುದರಿಂದ  ಅಕೆಗೆ ಆ ಹೆಸರು ಕೂತಿತು. ಆದರೆ ಇದು ಗತವೈಭವ. ಇಂದು ಆಕೆ ಶಿಕ್ಷಕಿಯಲ್ಲ. ಅಗಸಗಿತ್ತಿ.
ಶಿಕ್ಷಕಿಯಾಗಿದ್ದವಳು ಅಗಸಗಿತ್ತಿಯಾದುದು ಹೇಗೆ?   ಈ ಕಥೆಗಿಂತ ಮುಂಚಿನ   ವಿವರಗಳು ಅವಳ  ಕರುಣ ಕಥೆಯನ್ನು ಕಣ್ಣೆದುರು ಹಿಡಿಯುತ್ತವೆ . ಆ ಪುಟ್ಟ  ಬ್ರಾಹ್ಮಣ   ಕುಟುಂಬದಲ್ಲಿ ಅವರು ಮೂವರೇ . ನೀಲಾ ಅವಳ ತಮ್ಮ ಮತ್ತು  ಅವರ ತಂದೆ. ತಾಯಿಯನ್ನು ಅಷ್ಟು  ಚಿಕ್ಕ ವಯಸ್ಸಲ್ಲೇ ಕಳೆದುಕೊಂಡ  ಆ ಮಕ್ಕಳನ್ನು  ತಾಯಿಯಾಗಿಯೂ  ನೋಡಿಕೊಳ್ಳಬೇಕಾದ  ಹೊಣೆ ತಂದೆಯ ಮೇಲೆ . ಪುಟ್ಟ ಹುಡುಗಿ ನೀಲಾ  ಇನ್ನೂ ಜಗತ್ತು ಅರಿಯುವ ಮೊದಲೇ  ವಧುವಾಗಿ ಹಸೆಮಣೆಯೇರಬೇಕಾಯಿತು.

ನಿರಂತರ ರಂಗ ಉತ್ಸವ ಸಮಾರೋಪ …

ಸಂಪದ ಸಮ್ಮಿಲನ …

ಡಿಸೆಂಬರ್ 5, 2010
ಭಾನುವಾರ
ಮಧ್ಯಾಹ್ನ 3.00 ಗಂಟೆಗೆ

ಸ್ಥಳ:
‘ಸಾರಂಗ’, s1197,
ಭಾರತ್ ನಗರ ಎರಡನೇ ಹಂತ,
ಬೆಂಗಳೂರು.

ಬಹಳ ದಿನಗಳಾದುವು ಎಲ್ಲರೂ ಒಟ್ಟು ಸೇರಿ. ಈ ನಡುವೆ ಸಂಪದ ಬದಲಾಗಿದೆ. ಐದು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಮುಂದುವರೆದ ಸಂಪದ ಯೋಜನೆ ಈಗ ಬದಲಾದ ಇಂಟರ್ನೆಟ್ ಜಗತ್ತಿನ ಹೊಸ್ತಿಲಲ್ಲಿ ಹೊಸ ರೂಪದಲ್ಲಿ ನಿಂತಿದೆ. ಇಂಟರ್ನೆಟ್ ಕೂಡ ಎಂದಿನಂತೆ ಬದಲಾಗುತ್ತಲೇ ಇದೆ.  ಹೊಸ ಕಾಲಕ್ಕೆ ಸಂಪದದ ಉದ್ದೇಶಗಳು ಏನಿರಬೇಕು, ‘ಸಂಪದ’ದ ಹೊಸ ಹೆಜ್ಜೆಗಳು ಹೇಗಿರಬೇಕು – ಇವೆಲ್ಲದರ ಮುಕ್ತ ಚರ್ಚೆಗೆ ಸಂಪದಿಗರೆಲ್ಲರೂ ಜೊತೆಗೂಡೋಣ. ಜೊತೆಗೆ ಸಂಪದ ನಡೆದುಬಂದ ಇಷ್ಟು ದಿನಗಳಲ್ಲಿ ಅದರ ಮೌಲ್ಯ ಹೆಚ್ಚಿಸಿದ ಸಹೃದಯಿ ಬರಹಗಾರರಲ್ಲಿ ಕೆಲವರು ನಮ್ಮೆಲ್ಲರೊಡನೆ ಒಂದಷ್ಟು ಅನುಭವ, ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಇದೆಲ್ಲದರೊಂದಿಗೆ ಸಂಪದಿಗರಿಗಾಗಿ ಎರಡು ವಿಶೇಷ ಸ್ಪರ್ಧೆಗಳೂ ಉಂಟು.

ಹೆಚ್ಹಿನ ವಿವರಗಳಿಗೆ:ಸಂಪದ

 

ವಿಳಾಸ ಇಲ್ಲದವರ ಹುಡುಕುತ್ತ …

 

ಜಯಶ್ರೀ ಕಾಲಂ: ಖುಷಿ ಕೊಡುವ ಮಾತಿನ ಶೈಲಿ…

ಕಳೆದ ಎರಡು ದಿನಗಳಿಂದ ಕಸ್ತೂರಿ ವಾಹಿನಿ ಮಾಂಗಲ್ಯಂ ತಂತು ನಾನೆನಾಂ…!ಕಾರ್ಯಕ್ರಮವನ್ನು ವೀಕ್ಷಿಸ್ತಾ ಇದ್ದೆ. ಅದ್ಭುತ ಕಣ್ರೀ. ಮುಖ್ಯವಾಗಿ ನನ್ನ ಅತಿ ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರ್ತಿ ಚಿತ್ರ ಶೆಣೈ ಅವರ ವರ್ತನೆ. ತುಂಬಾ ಇಷ್ಟ ಆಯ್ತು ನನಗೆ ಅವರ ಮಾತಿನ ಶೈಲಿ.ಮುಖ್ಯವಾಗಿ ಈ ಕಾರ್ಯಕ್ರಮ ಹೆಚ್ಚು ಆಸಕ್ತಿಯಿಂದ ಕೂಡಿರುವುದಕ್ಕೆ ಕಾರಣ ಮದುವೆಯ ಸ್ವಯಂವರವಲ್ಲ  ಇದು.

ಈಗಾಗಲೇ ಎರಡು ಮನಗಳು ಒಪ್ಪಿ, ಮನೆಯವರು  ಸಮ್ಮತಿಸಿ, ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು , ಎರಡು ಕುಟುಂಬವೂ ಅವರ ಬದುಕಿನ ಭಾಗ ಇನ್ನು ಮುಂದೆ ಎನ್ನುವ ಸತ್ಯವನ್ನು ಅರಿತು ಕೊಂಡು ಒಂದು ಹಂತಕ್ಕೆ ತಲುಪಿರುವ ಸ್ಥಿತಿ. ಸ್ವಯಂವರದಲ್ಲಿ ಅದ್ಬುತ ಅನ್ನಿಸುವ  ಅಂಶಗಳು, ಅತಿರೇಕಗಳು , ಅಬ್ಬರ ,ಗಲಾಟೆ ಎಲಿಮಿನಶನ್ ಆಗುವ ಆತಂಕಗಳು ಇಲ್ಲಿ ಇಲ್ಲ. ಒಟ್ಟಾರೆ  ಇದೊಂದು ಆರೋಗ್ಯಪೂರ್ಣ  ಕಾರ್ಯಕ್ರಮ :-)

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಮೇಷ್ಟ್ರ ದಿನ …

ಸೂರಿ -9:ಕೋಟು ಪರಿತ್ಯಕ್ತ ಅಪ್ಸರೆಯಂತೆ ನೆಲದ ಮೇಲೆ ಬಿತ್ತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 9

 

ತುಕ್ಕೋಜಿ ಚೀಲವನ್ನು ಕೈಗೆತ್ತಿಕೊಂಡ. ಒಳಗಿದ್ದ ಪ್ರಜಾಮತದ ಹಾಳೆಗಳ ಮಧ್ಯೆಯಿದ್ದ ಕರೀಬಟ್ಟೆಯ ಮುದ್ದೆಯನ್ನು ಈಚೆಗೆ ಸೆಳೆದ. ಪ್ರಜಾಮತದ ಹಾಳೆಗಳನ್ನು ರಪರಪ ಹರಿದು ಮುದ್ದೆ ಮಾಡಿ, ಮೂಲೆಗೆಸೆದು, ಕೋಟನ್ನು ಕೈಲಿ ಎತ್ತಿ ಹಿಡಿದು ನೋಡಿದ. ಏನೂ ಹೊಳೆಯಲಿಲ್ಲ. ಹಳೇಬೀಡು ಸುಂದರರಾಯರತ್ತ ನೋಡಿದ.
’ಸೊಲೂಪ ಹರ‍್ದಂಗಿದೆ. ರಿಪೇರಿ ಮಾಡಬೇಕೂ-’
ತುಕ್ಕೋಜಿಗೆ ಒಮ್ಮೆಲೇ ಅರ್ಥವಾಗಲಿಲ್ಲ. ತಾನು ಯಾವುದನ್ನು ರಿಪೇರಿ ಮಾಡಬೇಕು, ಯಾವುದು ಸೊಲೂಪ ಹರಿದಿದೆ ಅಂತ. ಕೋಟನ್ನೇ ಮತ್ತೆ ಕೈಲಿ ಹಿಡಿದು ಬಿಚ್ಚಿ ನೋಡಿದ. ಹಿಂದೆ ಮುಂದೆ ಮಾಡಿ ನೋಡಿದ. ಮತ್ತೆ ಅದೇ ಸಮಸ್ಯೆ ಕಾಡಿತು. ಯಾವ ದಿಕ್ಕಿನಿಂದ ನೋಡಿದರೂ ಈ ಕೋಟು ಅನ್ನುವ ವಸ್ತು ರಿಪೇರಿಗೆ ಹೇಗೆ ಲಾಯಕ್ಕು ಎಂದು ಹೊಳೆಯಲಿಲ್ಲ. ಇದುನ್ನ ಕೋಟು ಅಂತ ಯಾವ ಸೂಳಾಮಗ ಕರೀತಾನೆ. ಅದನ್ನೇ ಬಾಯಿಬಿಟ್ಟು ಕೇಳಿದ.
’ಯದನ್ನ ರಿಪೇರಿ ಮಾಡಬೇಕ್ರೀ?’
’ಕೋಟ್ನ. ಸೊಲೂಪ ಹರ‍್ದಂಗಿದೆ.’
’ಏನಿದು, ಕೋಟಾ?’
ಹಳೇಬೀಡು ಸುಂದರರಾಯರು ‘ಹ್ಹೀ ಹ್ಹೀ‘ ನಕ್ಕರೇ ಹೊರತು ಉತ್ತರಿಸುವ ಬಾಬತ್ತಿಗೆ ಹೋಗಲಿಲ್ಲ.
’ಯಿದ್ನ ಯಲ್ಲಿ ರಿಪೇರೀ ಮಾಡಬೇಕ್ರೀ?’
’ತೋಳೂ, ಬುಜಾ ಸೊಲ್ಪ ಹರ‍್ದಿದೆ. ಗುಂಡಿಗಳು ಬಿಚ್ಕೆಂಡಿದವೆ.’
ತುಕ್ಕೋಜಿ ಕೋಟಿನ ತೋಳೂ ಭುಜ ನೋಡಿದ.
More

ಎಚ್ಹೆಸ್ವಿ ಕವಿತೆ ಓದುತ್ತಿದ್ದಾರೆ …

‘ಈಕವಿ’ ತಾಲೂಕು ಘಟಕ ಉದ್ಘಾಟನಾ ಸಮಾರಂಭ

%d bloggers like this: