ಕಾರ್ನಾಡ್ ಆತ್ಮಕಥೆ

ನ್ಯೂಸ್ ಚಾನಲ್ ಸ್ವಾಮಿ ಇದು ನ್ಯೂಸ್ ಚಾನಲ್ …

ಸುದ್ದಿವಾಹಿನಿಗಳು ತಿದ್ದಿಕೊಳ್ಳಬೇಕು

-ಎಚ್ .ಆನಂದರಾಮ ಶಾಸ್ತ್ರಿ

ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.

* ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. “ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?”
ಕನ್ನಡಕ್ಕಾಗಿ ದುಡಿಯುತ್ತಲೇ 97 ವಸಂತಗಳನ್ನು ದಾಟಿರುವ ಹಿರಿಯ ಜೀವಕ್ಕೆ ಕೇಳುವ ಪ್ರಶ್ನೆಯೇ ಇದು? ಈ ಪ್ರಶ್ನೆ ಆಲಿಸಿ ಜಿವೆಂ ಅವರಿಗೆ ನಗು ಬಂತು.
ಅವರು, “ನನಗೀಗ 98ನೆಯ ವರ್ಷ. ಎಲ್ಲ ಕೆಲಸಗಳನ್ನೂ ನಿಲ್ಲಿಸಬೇಕೂಂತ ಇದ್ದೇನೆ”, ಎಂದು ಉತ್ತರಿಸಿದರಾದರೂ, ಬೆನ್ನಿಗೇ, “ಅಧ್ಯಕ್ಷ ಪದವಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ”, ಎಂದು ನುಡಿದು ಮುಂದಿನೆರಡು ವರ್ಷಗಳಲ್ಲಿ ತಾವು ಕೈಕೊಳ್ಳಬೇಕೆಂದಿರುವ ಕನ್ನಡದ ಕೆಲಸದ ಬಗ್ಗೆ ವಿವರಿಸಿ ಆ ವರದಿಗಾರ್ತಿಯ  ಬೆಲೆ ಉಳಿಸಿದರು

ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ …

ಸೂತ್ರಧಾರ ರಾಮಯ್ಯ

ಕನ್ನಡ ಭಾಷೆಗೆ ಸಂ’ಜೀವಿ’ನಿ ನೀಡುತ್ತಾ ಉಪಕರಿಸುತ್ತಿರುವ ಚಿರಂ’ಜೀವಿ’ಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ… ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ ..

ಒಂದು = ಒನ್                                  ಸಂತ = ಸೇಯ್ನ್ಟ್
ತ್ರಿ      = ತ್ರೀ                                   ಕೊಲ್ಲು = ಕಿಲ್
ಕ್ರಿಯಾಶೀಲ = ಕ್ರಿಯೇಟಿವ್                    ದ್ವಾರ್ = ಡೋರ್
ದಿವಿನ = ಡಿವೈನ್                               ಮಾಡು =ಮೇಡ್
ಸಮಿತಿ= ಕಮಿಟಿ                                 ಮರ್ತ್ಯ = ಮಾರ್ಟಲ್
ಗುಂಪು = ಗ್ರೂಪ್                                 ಸ್ಪೂರ್ತಿ = ಸ್ಪಿರಿಟ್
ನಾವೆ = ನೇವಿ                                    ನಯ = ನ್ಯೂ
ನರ = ನರ್ವ್                                      ಮಧ್ಯಮ = ಮೀಡಿಯಂ
ಸರ್ಪ = ಸರ್ಪೆಂಟ್                                 ಜ್ಯಾಮಿತಿ = geometry
ಹೀನ = ಹೀನಸ್                                  ಸಿಲ್ಲಿಮಿಳ್ಲಿ  = ಸಿಲ್ಲಿ
ತ್ರಿಪಾದಿ = Trip0d                             ನಾಮ = ನೇಮ್

ಪುಟ ತಿರುಗಿಸಿ ಓದಿ (pto)= ಪ್ಲೀಸ್ ಟರ್ನ್ ಓವರ್

end ಗುಟುಕು

ಹಿತವಾದ ಭೋಜನವನ್ನು ನೀಡಿ, ನಿಮಗೆ ಒಳಿತಾಗಲೆಂದು ಶುಭ ನುಡಿದರು ಅಥವಾ ‘ಆಹಾರೈಕೆ’ ಮಾಡಿದರು.(ಒನ್ ವರ್ಡ್)


ಚಿನಾರ: ಮಕ್ಕಳ ನಾಟಕ ಸ್ಪರ್ಧೆ…

ಟಿ.ಬಿ.ಡ್ಯಾಮ್‍ನ ಕನ್ನಡ ಕಲಾ ಸಂಘ ಕಳೆದ ಹತ್ತು ವರ್ಷದಿಂದ ಬಳ್ಳಾರಿ ಜಿಲ್ಲೆಯ ಮಕ್ಕಳಿಗಾಗಿ ಚಿನಾರ – ಮಕ್ಕಳ ನಾಟಕ ಸ್ಪರ್ಧೆಯನ್ನು ಸತತವಾಗಿ ಏರ್ಪಡಿಸುತ್ತ ಬರುತ್ತಿದೆ. ಪ್ರಸಕ್ತ ಸಾಲಿನ ಮಕ್ಕಳ ನಾಟಕ ಸ್ಪರ್ಧೆಯು ನವೆಂಬರ್ 12 ರಿಂದ 14 ರ ವರೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಬಾರಿ ಜಿಲ್ಲೆಯ 9 ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸ್ಥಳ :ಪಂಪ ಕಲಾ ಮಂದಿರ – ಹೊಸಪೇಟೆ
ದಿನಾಂಕ :ನವಂಬರ್ 12ರಿಂದ 14 – 2010

ಪ್ರಜಾಪ್ರಭುತ್ವ ಮತ್ತು ಬಿಜೆಪಿ: ಚಿಂತಕರ ಮಾತು…

‘ನಿರುಪಮ’ ಪತ್ರಿಕೆಗೆ ಈಗ ಮೂರರ ಹರಯ. ಅಂದರೆ ಮೂರು ವರ್ಷ ಖಂಡಿತಾ ಅಲ್ಲ. ಮೂರು ಸಂಚಿಕೆ ಮಾತ್ರ. ಆದರೆ ಇಷ್ಟು ಅಲ್ಪ ಅವಧಿಯಲ್ಲಿಯೇ ಅದು ಹಲವರನ್ನು ಕಾಡುವ ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದರ ಸಾರಥ್ಯ ವಹಿಸಿರುವವರು ಈ ಹಿಂದೆ ‘ಕನ್ನಡ ಟೈಮ್ಸ್’, ಮೈಸೂರಿನ ‘ಸಕಾಲ’ ಪತ್ರಿಕೆಯನ್ನು ರೂಪಿಸಿದ ಮಂಜುನಾಥ ಲತಾ ಅವರು. ಈಗ ನಿರುಪಮ ಸಾಹಸಕ್ಕೆ ಮುಂದಾಗಿದ್ದಾರೆ. ಈ ಪತ್ರಿಕೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪರ್ಕಿಸಿ- manjunathlatha@gmail.com

ಇವತ್ತು ಕರ್ನಾಟಕದ ರಾಜಕಾರಣ ತಲುಪಿರುವ ಸ್ಥಿತಿ ಕಂಡು ಏನನ್ನಿಸುತ್ತಿದೆ? ಚಳುವಳಿಗಳ ನಿಷ್ಕ್ರಿಯತೆಯಿಂದಾಗಿ ಬಿಜೆಪಿಯಂತಹ ಪಕ್ಷ ಕೊಬ್ಬಲು ಕಾರಣವಾಯಿತೆ? ಜನತೆಯನ್ನು ಎಚ್ಚರಿಸುವ ಕೆಲಸ ಮಾಡುವುದು ಹೇಗೆ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ನಿರುಪಮ ಪತ್ರಿಕೆಯು ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್, ಡಾ.ಸಿ.ಎಸ್. ದ್ವಾರಕಾನಾಥ್, ಎನ್.ಎಸ್.ಶಂಕರ್, ರಂಜಾನ್ ದರ್ಗಾ ಮತ್ತು ಪ್ರೊ.ಚಂದ್ರಶೇಖರ ಪಾಟೀಲರನ್ನು ಮಾತಿಗೆಳೆದಾಗ ಅವರು ಕೊಟ್ಟ ಉತ್ತರ ಇಲ್ಲಿದೆ.

ಮಾತನಾಡಿಸಿದವರು: ಕೆ.ಎಲ್.ಚಂದ್ರಶೇಖರ್ ಐಜೂರ್

ಕೋಮುವಾದವಲ್ಲ; ಕಳ್ಳಹಣ

ಡಾ. ಬಂಜಗೆರೆ ಜಯಪ್ರಕಾಶ್
ಇವತ್ತಿನ ಕರ್ನಾಟಕದ ರಾಜಕಾರಣದ ಸಂದರ್ಭದಲ್ಲಿ ಬಿಜೆಪಿಯನ್ನು ಕೋಮುವಾದದ ಪಕ್ಷ ಎಂದು ಕರೆಯುವುದಕ್ಕಿಂತ ಕಳ್ಳಹಣದ ಪಕ್ಷ ಎಂದು ಕರೆಯಬಹುದು. ತನ್ನ ಕೋಮು ಸಿದ್ಧಾಂತದಿಂದ ಬಿಜೆಪಿಗೆ ಒಬ್ಬ ಶಾಸಕನಿರಲಿ, ಒಬ್ಬ ಶ್ರೀಸಾಮಾನ್ಯನನ್ನು ಖರೀದಿ ಮಾಡಲು, ತನ್ನತ್ತ ಸೆಳೆಯಲು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದು ಕಳ್ಳಹಣದಿಂದ. ಪ್ರಜಾಪ್ರಭುತ್ವದ quಚಿಟiಣಥಿಯನ್ನು ಕಾಪಾಡಬೇಕಾದರೆ ಸಂಪತ್ತಿನ ಸಂಗ್ರಹ, ವಹಿವಾಟು, ಹಂಚಿಕೆ, ಒಡೆತನಗಳ ಮೇಲೆ ಕೆಲವು ಗಂಭೀರ ಮಿತಿಗಳನ್ನು ಒಡ್ಡಬೇಕು. ಈ ಹಿಂದೆ ಹಣವುಳ್ಳ ಟಾಟಾ, ಬಿರ‍್ಲಾ, ಅಂಬಾನಿಗಳು ನೇರ ರಾಜಕಾರಣಕ್ಕೆ ಇಳಿದವರಲ್ಲ. ಯಾವುದೇ ಪಕ್ಷದ ಯಾವುದೇ ಸರ್ಕಾರವಿರಲಿ ದುಡ್ಡು ಚೆಲ್ಲಿ ಸಲೀಸಾಗಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ನಮ್ಮ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಹೇರಳವಾಗಿ ಕಪ್ಪುಹಣ ಹೊಂದಿದ ಸಮಾಜದ ಶ್ರೀಮಂತರು ಇವತ್ತು ನೇರ ರಾಜಕಾರಣಕ್ಕಿಳಿಯುತ್ತಿದ್ದಾರೆ.

ನಾವು ಮುಕ್ತ ಮಾರಕಟ್ಟೆಯ ಆರ್ಥಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಅಪಾರ ಧನ ಸಂಗ್ರಹದ ಮೇಲೆ ಪ್ರಭುತ್ವದ ನಿಯಂತ್ರಣವಿಲ್ಲದಿದ್ದರೆ ಪ್ರಜಾಪ್ರಭುತ್ವ ಕುಸಿಯುವ ಗಣಿಗಾರಿಕೆ, ರಿಯಲ್ ಎಸ್ಟೇಟ್ ದಗಾಕೋರರು ಸಮಾಜವನ್ನು ಕೊಳ್ಳುವ ಪರಿಸ್ಥಿತಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಹಣವಂತರು ಇಡೀ ಪ್ರಜಾಪ್ರಭುತ್ವವನ್ನೇ ಖರೀದಿ ಮಾಡಿ ತಮಗೆ ಬೇಕಾದ ರಾಜಕಾರಣ ಮಾಡುವ ಸಾಧ್ಯತೆಗಳು ಇಲ್ಲಿ ಕಾಣುತ್ತವೆ. ಅಕ್ರಮವಾಗಿ ೧೦೦೦ ಕೋಟಿ ರೂಪಾಯಿ ಹೊಂದಿರುವ ಒಬ್ಬ ಶ್ರೀಮಂತ ಸಲೀಸಾಗಿ ೧೦೦ ಶಾಸಕರನ್ನು ಖರೀದಿಮಾಡಿ ತನ್ನಿಚ್ಛೆಯ ರಾಜಕಾರಣ ಮಾಡಬಹುದಲ್ಲವೇ?
More

How Deve Gowda is more like Obama…

-ಸತೀಶ್ ಆಚಾರ್ಯ

ಪುಟ್ಟಕ್ಕನ ಹೈವೇ …

ಬಿ.ಸುರೇಶ ಅವರ ನಿರ್ದೇಶನದ ಪುಟ್ಟಕ್ಕನ ಹೈವೇ ಸಿನಿಮಾ ಚಿತ್ರೀಕರಣ ಸಂದರ್ಭದ ಒಂದು ನೋಟ ಇಲ್ಲಿದೆ .  ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆಪ್ರಕಾಶ್ ರೈ ,  ಶೈಲಜಾನಾಗ್ , ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮತ್ತಷ್ಟು ಫೋಟೋಗಳು : ಮ್ಯಾಜಿಕ್ ಕಾರ್ಪೆಟ್

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧಾ ಫಲಿತಾಂಶ …

ಸಾಗರ್ ಫೋಟೊಗ್ರಫಿ ಸೊಸೈಟಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ.

ಮಲೆನಾಡಿನ ಮಡಿಲಲ್ಲಿ ಕಾರ್ಯನಿರತರಾಗಿರುವ ಸಾಗರ ಫೋಟೊಗ್ರಫಿಕ್ ಸೊಸೈಟಿಯು 10ನೇ ರಾಜ್ಯಮಟ್ಟದ ಎರಡು ವಿಷಯಾಧಾರಿತ ಛಾಯಾಚಿತ್ರ ಸ್ಪರ್ಧೆಯನ್ನು ಯುವಜನರಿಗಾಗಿ ಇತ್ತೀಚೆಗೆ ಅಯೋಜಿಸಿದ್ದು ರಾಜ್ಯದ 15 ಜಿಲ್ಲೆಗಳಿಂದ ನೂರಾರು ಛಾಯಾಚಿತ್ರಗ್ರಾಹಕರು ಭಾಗವಹಿಸಿದ್ದು, ಅವರ 120 ಚಿತ್ರಗಳು ಪ್ರದರ್ಶನ ಯೋಗ್ಯವೆಂದು ಹಾಗೂ ಅವುಗಳಲ್ಲಿ ಕೆಲವೊಂದು ಬಹುಮಾನ ವಿಜೇತವೆಂದು, ಖ್ಯಾತ ಛಾಯಾ ಚಿತ್ರಕಾರ ಹಾಗೂ ಪತ್ರಕರ್ತ ಶ್ರೀ ಎಂ.ಈಶ್ವರಯ್ಯ, ಉಡುಪಿ ಅವರು ತೀರ್ಪು ನೀಡಿರುತ್ತಾರೆ.

ಬಹುಮಾನ ವಿತರಣ ಸಮಾರಂಭ ಹಾಗೂ ಛಾಯಾಚಿತ್ರ ಪ್ರದರ್ಶನವೂ ಇದೇ ನವೆಂಬರ್ 26ರಂದು ಸಾಗರದಲ್ಲಿ ನಡೆಯಲಿದೆ. ಹಾಗೂ ಪ್ರದರ್ಶನವೂ ನವೆಂಬರ್ 28ರವರೆಗೆ ತೆರೆದಿರುತ್ತದೆ. ನಂತರ ರಾಜ್ಯದ ಅನೇಕ ಸ್ಥಳಗಳಲ್ಲಿ ಪ್ರತಿವರ್ಷದಂತೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಸ್ಪರ್ಧೆಯ ಪಲಿತಾಂಶ ಹೀಗಿದೆ.

ಬಹುಮಾನ ವಿಜೇತರು.
ವಿಭಾಗ ೧: ಗ್ರಾಮೀಣ ಬದುಕು.
ಪ್ರಥಮ ಬಹುಮಾನ: ರಾಮು ಕುಂಜೂರು. ಉಡುಪ
ದ್ವಿತೀಯ ಬಹುಮಾನ: ಸುದೀಂದ್ರ ಎಂ.ಹಬೀಬ್, ಹುಬ್ಬಳ್ಳಿ,
ತ್ರತೀಯ ಬಹುಮಾನ: ಶ್ರವಣ ಪಿ.ಎಂ. ತಾಳಗುಪ್ಪ

ವಿಭಾಗ ೨: ಕ್ರೀಡಾಕ್ಷಣಗಳು.
ಪ್ರಥಮ ಬಹುಮಾನ: ಸಲೀಂ ಬಾಳಬಟ್ಟಿ, ಮುಂಡರಗಿ.
ದ್ವಿತೀಯ ಬಹುಮಾನ: ಎಂ ರಾಮು. ಬೆಂಗಳೂರು.
ತ್ರತೀಯ ಬಹುಮಾನ: ನಾಗರಾಜ ಟಿ ಸುರಣಗಿ. ಲಕ್ಷ್ಮಿಶ್ವರ ಗದಗ.

ಮೇಲಿನ ಎರಡು ವಿಭಾಗಗಳಿಂದ ಒಟ್ಟಾರೆ ವಿಶೇಷ ಬಹುಮಾನ
ಅತ್ಯುತ್ತಮ ಬೆಳಕಿನ ಸಂಯೋಜನ ಪ್ರಶಸ್ಥಿ : ಹೇಮನಾಥ ಪಡುಬಿದ್ರಿ. ಉಡುಪಿ.
ಅತ್ಯುತ್ತಮ ಶಾಲ ವಿದ್ಯಾರ್ಥ ಪ್ರಶಸ್ಥಿ : ಟಿ.ಎ.ಸಾರಂಗ ಸಾಗರ.
ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ಥಿ : ಹೇಮಾಶ್ರೀ. ಬೆಂಗಳೂರು.

ಪ್ರಶಂಸಾ ಪತ್ರಗಳು.
ಗ್ರಾಮೀಣ ಬದುಕು: ೧]ಹೆಚ್.ಎಸ್.ಬ್ಯಾಕೋಡ್. ಬೆಂಗಳೂರು.
೨]ಉಮಾಶಂಕರ್ ಬಿ.ಎನ್. ದೊಡ್ಡಬಳ್ಳಾಪುರ.
೩]ನಾಮದೇವ ಕಾಗದಗಾರ, ಕುರುವಟ್ಟಿ. ಬಳ್ಳಾರಿ.
೪]ವಿ.ಜಿ.ಶ್ರೀಧರ್. ಮೈಸೂರು.

ಕ್ರೀಡಾಕ್ಷಣಗಳು. ೧] ಕಾರ್ತಿಕ್ ಯಾದವ್ ಮೈಸೂರು.
೨]ತೇಜಸ್ ಕೆ.ಅರ್. ಬೆಂಗಳೂರು.
೩]ನಾಗರಾಜ್ ಜಿ. ಬೆಲ್ಲದ. ಕೊಪ್ಪಳ.
೪]ಹೇಮಾಶ್ರೀ. ಬೆಂಗಳೂರು.

ರಂಗ ಸಪ್ತಾಹ …

ಜಯಶ್ರೀ ಕಾಲಂ:ನಗು ಅದೆಲ್ಲಿ ಉದ್ಭವ ಆಗುತ್ತೋ ದೇವ್ರೇ ಬಲ್ಲ,

ಭಾನುವಾರ ಹಬ್ಬದ ಪ್ರಯುಕ್ತ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ಸಿಹಿ ಕಹಿ ಚಂದ್ರು ದಂಪತಿಗಳು, ಮ್ಯಾಜಿಶಿಯನ್ ರಮೇಶ್   ದಂಪತಿಗಳು, ಜಯಶ್ರೀ ದಂಪತಿಗಳು ಹಾಗೂ ಲಕ್ಷ್ಮಿ ದಂಪತಿಗಳು ( ಸುವರ್ಣದಲ್ಲಿ ಪ್ರಸಾರ ಆಗಿದ್ದ  ಸ್ಟಾರ್ ಸಿಂಗರ್ ಸೀಸನ್ -1 ವಿಜೇತೆ ). ಆದ್ರೆ ಕಾರ್ಯಕ್ರಮದ ಕೊನೆಯವರೆಗೂ ಉಳಿದಿದ್ದು ಸಿಹಿ ಕಹಿ ದಂಪತಿಗಳು :-) .  ಚಂದ್ರುಗೆ ಅಪ್ಪಪ್ಪ  ನಗು ಅದೆಲ್ಲಿ ಉದ್ಭವ ಆಗುತ್ತೋ ದೇವ್ರೇ ಬಲ್ಲ, ನಕ್ಕು ನಕ್ಕು :-) . ಒಳ್ಳೇದು ಬಿಡಿ ಉರ್ ಅನ್ನುವ  ಉರಿಸಿಂಗನಿಗಿಂತ ಈ ರೀತಿಯ ಗುಣ ತುಂಬಾ ಇಷ್ಟ ಆಗುತ್ತದೆ. ಅದೆಷ್ಟು ಚೆನ್ನಾಗಿ ಅವರ ಜೋಡಿ ಮ್ಯಾಚ್ ಆಗಿತ್ತು ಗೊತ್ತ..! ಅದ್ಭುತ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

Previous Older Entries

%d bloggers like this: