ದೇವನೂರು: ಕಳೆದು ಹೋಗದ ಅರಿವಿನ ಕಿಡಿ

ಚಿತ್ರ : ಅಬ್ದುಲ್ ರಶೀದ್

ಮಹಾದೇವ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ. ಇಂದಿನ ಜಾಗತೀಕರಣ ನಮ್ಮೆಲ್ಲರ ಮನಸ್ಸಿಗೆ ಎಲ್ಲರೊಂದಿಗೂ, ಎಲ್ಲ ವಿಷಯಕ್ಕೂ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿಸಿಬಿಟ್ಟಿರುವಾಗ ಇದಕ್ಕೆ ಭಿನ್ನವಾಗಿ ನಿಂತವರು ದೇವನೂರು. ಇನ್ನೂ ಕಳೆದು ಹೋಗದ ಅರಿವಿನ ಕಿಡಿ. ದೇವನೂರು ಇದ್ದದ್ದನ್ನು ಇದ್ದಹಾಗೆ, ನೇರವಾಗಿ ಹೇಳಬಲ್ಲರು.

ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿ ನೀಡಿ ಗೌರವಿಸುತ್ತೇನೆ ಎನ್ನುವಾಗ ಕನ್ನಡ ಕಲಿಕೆಯ ಕಾರಣ ಮುಂದಿಟ್ಟು ಪ್ರಶ್ನೆ ಕೇಳಬಲ್ಲವರು. ಇಲ್ಲಿ ದೇವನೂರು ಕನ್ನಡ ಸಾಹಿತ್ಯ ಪರಿಷತ್ ಗೆ ಬರೆದಿರುವ ಪತ್ರದ ಪೂರ್ಣ ಪಾಠ ಇದೆ.

ಶಿವಮೊಗ್ಗದಿಂದ ಕೆ ಅಕ್ಷತಾ ದೇವನೂರು ಅವರ ಈ ಪತ್ರವನ್ನು ಕಳಿಸಿಕೊಟ್ಟಾಗ ಇದು ರಾಜ್ಯೋತ್ಸವದ ಈ ಸಂದರ್ಭದಲ್ಲಿ ಚರ್ಚಿಸಲೇ ಬೇಕಾದ ಸಂಗತಿ ಎನಿಸಿತು. ದೇವನೂರು ಅವರ ಕನ್ನಡ ನೋಟವನ್ನು ಒಪ್ಪಬಹುದು ಬಿಡಬಹುದು. ಈ ಕಾರಣಕ್ಕಾಗಿ ಒಂದು ಚರ್ಚೆಗೆ ಇಲ್ಲಿ ಜಾಗ ಕಲ್ಪಿಸುತ್ತಿದ್ದೇವೆ. ಕನ್ನಡದ ಬಗ್ಗೆ ಎತ್ತಿದ ಪ್ರಶ್ನೆಯೊಂದಿಗೆ ದೇವನೂರು ಅವರು ಹಲವು ಸಂಕಷ್ಟದ ಸಂದರ್ಭದಲ್ಲಿ ಎತ್ತಿದ ಪ್ರಶ್ನೆಗಳನ್ನೂ ನಿಮ್ಮ ಮುಂದಿಟ್ಟಿದ್ದೇವೆ. ಯಥಾಪ್ರಕಾರ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

ರಾಜ್ಯೋತ್ಸವಕ್ಕಾಗಿ ಈ ದೇವನೂರು ಸ್ಪೆಷಲ್ ರೂಪಿಸುವಾಗ ನಮಗೆ ಅಗತ್ಯವಾಗಿ ಒದಗಿ ಬಂದದ್ದು ‘ಅವಧಿ’ಯಲ್ಲೇ ಈ ಹಿಂದೆ ಪ್ರಕಟವಾಗಿದ್ದ ಲೇಖನಗಳು, ಅಬ್ದುಲ್ ರಶೀದ್ ಈ ಹಿಂದೆ ಬರೆದ ಪೋಸ್ಟ್ ನೆನಪಿತ್ತು  ಆ ನೆನಪಿನಿಂದಲೇ ‘ಕೆಂಡಸಂಪಿಗೆ’ಗೆ ಪೂರ್ವದಲ್ಲಿ ಬರೆಯುತ್ತಿದ್ದ ‘ದಿ ಮೈಸೂರ್ ಪೋಸ್ಟ್’ ಹುಡುಕಲಾಯಿತು. ಓದಲೇಬೇಕಾದ ಲೇಖನ ಇದು. ರಶೀದ್ ಗೆ, ಫೋಟೋಕ್ಕಾಗಿ ನೇತ್ರ ರಾಜು ಗೆ ವಂದನೆ

ಹಾಗೆಯೇ ರವಿ ಅಜ್ಜೀಪುರ ಬರಹ ಸಹಾ ಆತ್ಮೀಯವಾಗಿದೆ. ಇದರೊಂದಿಗೆ ‘ವಾರ್ತಾ ಭಾರತಿ’, ‘ಗಲ್ಫ್ ಕನ್ನಡಿಗ’ ದಲ್ಲಿದ್ದ ವರದಿಗಳನ್ನೂ ಪ್ರಕಟಿಸಿದ್ದೇವೆ. ಇಲ್ಲಿನ ಅನೇಕ ಚಿತ್ರಗಳು ಕೆ ಅಕ್ಷತಾ, ಮೈಸೂರ್ ಪೋಸ್ಟ್, ಕೆಂಡಸಂಪಿಗೆ, ಏನ್ ಗುರು ಕಾಫಿ ಆಯ್ತಾ ದಿಂದ ಆರಿಸಲಾಗಿದೆ. ಎಲ್ಲರಿಗೂ ಒಂದು ನಮಸ್ಕಾರ.

ಇಲ್ಲಿನ ಎಲ್ಲಾ ಲೇಖನಗಳಿಗೂ ಪ್ರತಿಕ್ರಿಯೆಗೆ ಸ್ವಾಗತ.

1 ಟಿಪ್ಪಣಿ (+add yours?)

  1. ಹುಲಿಕುಂಟೆ ಮೂರ್ತಿ
    ನವೆಂ 01, 2010 @ 23:10:25

    ನಮ್ಮೆಲ್ಲರ ಪ್ರೀತಿಯ ಅವಧಿಯಲ್ಲಿ ಮಾದೆವಣ್ಣನ ಬಗ್ಗೆ ವಿಶೇಷ ಗಮನ ಹರಿಸಿರುವುದು ಈ ಸಲದ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಿದೆ.. ಇದಕ್ಕಾಗಿ ಅವಧಿಗೆ ತುಂಬಾ ಧನ್ಯವಾದಗಳು….

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ