ಬಂದಿದೆ ಉದಯವಾಣಿ ವಿಶೇಷಾಂಕ …

ಉದಯವಾಣಿ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ .ತಂಜಾವೂರು ಕಲಾ ಶೈಲಿಯ ಕಲಾಕೃತಿಯ ಆಕರ್ಷಕ ಮುಖ ಪುಟದೊಂದಿಗೆ ಮುದ್ರಿತವಾಗಿರುವ ಈ ವಿಶೇಷಾಂಕದಲ್ಲಿ   ಲಕ್ಷ್ಮೀಶ ತೋಳ್ಪಾಡಿ , ನೇಮಿಚಂದ್ರ , ಪ್ರೊ .ಬಿ.ಎ.ವಿವೇಕ ರೈ  ಇವರುಗಳ ಲೇಖನಗಳು . ವಿನಾಯಕ ನಾಯಕ್ , ಕೆ.ಈ.ರಾಧಾಕೃಷ್ಣ , ಹಾಗು ವೀಣಾ ಬನ್ನಂಜೆ ಇವರುಗಳ ಮಥುರಾ ಯಾತ್ರೆಯ ನೆನಪುಗಳು ಬರಹ ರೂಪದಲ್ಲಿ  ಕಾಣಿಸಿಕೊಂಡಿದೆ.

ನಟಿ ,ನಿರ್ದೇಶಕಿ ದಿವಂಗತ ವೈಶಾಲಿ ಕಾಸರವಳ್ಳಿ ಯವರ ಬಗ್ಗೆ ಗಿರೀಶ್ ಕಾಸರವಳ್ಳಿ ಅವರ ಮನದಾಳದ ಮಾತುಗಳು ,   ಶಾರದಾ ನಾಯಕ್ , ಮನೋಹರ ಪ್ರಸಾದ್ , ನೀಲಾ.ಕೆ ಇವರುಗಳ ಕತೆಗಳು , ಜಿ.ಎಸ್. ನಾಗನಾಥ್ , ಸತೀಶ ಆಚಾರ್ಯ , ಶೈಲೇಶ್ ಉಜಿರೆ ಇವರುಗಳ ಕಾರ್ಟೂನ್ ಗಳು ,ಸಿನಿಮಾ ಹಿಂದಿನ ಬದುಕಿನ ಬಗ್ಗೆ ಯೋಗರಾಜ ಭಟ್ಟರ ಮಾತುಗಳು ಈ ವಿಶೇಷಾಂಕದಲ್ಲಿ ಕಾಣಿಸಿಕೊಂಡಿವೆ . ಎಸ್ .ಸುರೇಂದ್ರ ನಾಥ್ ಅವರ ಕಿರು ಕಾದಂಬರಿ ಸೇರಿದಂತೆ , ಯಜ್ಞ , ಆಸ್ಟ್ರೋ ಮೋಹನ್ , ಸಂತೋಷ್ ಪೈ , ಶಮಂತ್ ಪಾಟೀಲ್  ಕ್ಯಾಮರಾ ಸೆರೆ ಹಿಡಿದ ಚಿತ್ರಗಳು ಈ ವಿಶೇಷಾಂಕದ ಅಂದವನ್ನು ಹೆಚ್ಹಿಸಿದೆ.

ಉದಯವಾಣಿ ವಿಶೇಷಾಂಕವನ್ನು  ಇಲ್ಲಿ ಓದಿ

3 ಟಿಪ್ಪಣಿಗಳು (+add yours?)

  1. Suri
    ನವೆಂ 17, 2010 @ 10:45:39

    ಇದರಲ್ಲಿನ ಪ್ರಸನ್ನರ ಕಥೆ ‘ಸ್ಮಿತ್ ಸಾನ್ ಸಾಹೇಬರು ತಾಳಮದ್ದಲೆಯಾಡಿಸಿದರು’ ಕಥೆಯನ್ನು ಎಲ್ಲ ಓದಲೇಬೇಕು.
    ಬಹಳಷ್ಟು ದಿನಗಳ ನಂತರ ಒಂದು ಒಳ್ಳೆ ಕಥೆಯನ್ನು ಓದಿದ ಅನುಭವವಾಯ್ತು.
    ಇದು ಈವರ್ಷದ ಒಂದು ಉತ್ತಮ ಕಥೆಯೆಂದರೂ ತಪ್ಪಿಲ್ಲ.
    ಅಲ್ಲದೆ ಶ್ರೀರಾಮ್ ಅವರ ‘ಸುದ್ದಿ ಇದು ಸುದ್ದಿ’ ಕಥೆ ಕೂಡ ಒಂದು ಹೊಸ ಅನುಭವ ನೀಡುತ್ತದೆ.
    ಇವುಗಳನ್ನು ಅವಧಿಯಲ್ಲಿ ಉಲ್ಲೇಖಿಸಬೇಕಿತ್ತು.

    ಉತ್ತರ

    • avadhi
      ನವೆಂ 17, 2010 @ 14:47:32

      ನೀವು ಹೇಳಿದ ಎರಡೂ ಕಥೆಗಳು ಅವಧಿಯಲ್ಲಿ ಕಾಣಿಸಿಕೊಳ್ಳಲಿದೆ. ಸುರೇಂದ್ರನಾಥ್ ಅವರ ಮನಕಲಕುವ ಧಾರಾವಾಹಿ ಮುಗಿದ ನಂತರ.

      ಉತ್ತರ

  2. Pramod
    ನವೆಂ 16, 2010 @ 14:12:20

    74.127.61.106/epaper/deepavali.html

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ