ಈ ಲೇಖನ ಓದಿ ನೋಡಿ: ನಿಮ್ಮ ಪ್ರತಿಕ್ರಿಯೆ ಬೇಕು

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಈ ಲೇಖನ ‘ಹರಕೆ ಹರಾಜು’ ಪ್ರಕಟಗೊಂಡಿದೆ. ‘ಅವಧಿ’ ತನ್ನ ಚರ್ಚೆಯ ಅಂಗಳದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಜರುಗುವ ಮಡೆ ಸ್ನಾನದ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದು ಆ ಬಗ್ಗೆ ಚರ್ಚೆ ಆಗಿದ್ದು ಗೊತ್ತಿದೆ.

ಆದರೆ ಇದೀಗ ಕೆ ವಿ ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನ ಇಂದು 16-01-2011 ಸಂಚಿಕೆಯಲ್ಲಿದೆ. ಅದರ ಲಿಂಕ್ ಇಲ್ಲಿದೆ ಓದಿ. ಜುಗಾರಿ ಕ್ರಾಸ್ ಚರ್ಚೆಗಾಗಿಯೇ ಇರುವುದರಿಂದ ನಿಮ್ಮ ಅಭಿಪ್ರಾಯ ಕಳಿಸಿ


39 ಟಿಪ್ಪಣಿಗಳು (+add yours?)

  1. Prajwal Shetty
    ಜನ 21, 2011 @ 21:56:22

    Obbana nambike mathobbana maadanambike aaguthade.Yaavaaga devara astitvakke vaijnanika saakshi illavo,aavaga devara melina bhakthiye maadhanambike aaguvudillave??
    Madesnaanavannu vyakthi thanna svaichhe inda maaduthane,avanu aa aacharaneyinda “avamaana” pattukollala.bereyavarige aa acharaneyalli eenu sambandha illa.Haagiddhare “avamaana” yaarige.Bereyavaru yaake avamaana pattukolla beeku.Neevu ee aacharane saajakke “avamana” anthira….Haagadare madhyapaana,dhoomrapaana,tundu batte thoduvudu yaava reethi avamaanavagirade vayakthika swathantravo haage yaarigu thondare kodade madesnaana aacharisuvudu avamaanavagirade vayakthika swathantravaagvudallave.

    Haage nodidare sarvasvavannu tyaaga maadi sanyaasathva sweekarisi bikshe beedi hotte thumbisikolluvudhu,upavaasa aacharisuvudu,dharmagurugalannu prakrathi sahaja sansaarika kriyeyinda nishedisuvudu amaanaviya haagu ee kaalakke avamana allave.

    IPL haraaju matthu Madesnaana eradu vipareetha mooleya eradu visheyagalu.Modalaneyadalli vyakthi thannannu voastuvannagi maadi belyannu kattikondare inondaralli vaykthi devara munde thanage yaava beleye illa yendu torisikolluthane.

    ಉತ್ತರ

  2. ಸೋಮಲಿಂಗ
    ಜನ 18, 2011 @ 22:14:11

    ಪ್ರಿಯ ಶ್ರೀವತ್ಸ ಅವರೇ.
    ಮಡೆ ಸ್ನಾನದ ಹರಕೆಗೂ ಐಪಿಎಲ್ ಹರಾಜಿಗೂ ಎತ್ತಣಿಂದೆತ್ತ ಸಂಬಂಧವಯ್ಯ (ಅಥವಾ ಇದೆಂಥ ಅಸಂಬದ್ಧವಯ್ಯ)ಅಂತ ಯೋಚಿಸುವ ಗೋಜಿಗೆ ತಾವು ಹೋಗಲೇ ಇಲ್ಲವಾದ್ದರಿಂದ ತಾವು ಸ್ವಯಂ ನಿವೃತ್ತಿ ಘೋಷಿಸಿದ್ದೇ ಒಳ್ಳೆಯದಾಯಿತು. ನನಗೆ ತಾನೇ ಇನ್ನೇನು ಕೆಲಸ? ನಾನೂ ಸ್ವಯಂ ನಿವೃತ್ತಿ ಘೋಷಿಸುತ್ತಿರುವೆ.ಸಿಟ್ಟಿನಿಂದಾಗಲಿ ಬೇಸರದಿಂದಾಗಲಿ ಅಲ್ಲ.ತೌಡು ಕುಟ್ಟುತ್ತ ಕೂಡಲು ಮನಸ್ಸಿಲ್ಲ. ಧನ್ಯವಾದ.

    ಉತ್ತರ

  3. Bharath Kumar
    ಜನ 18, 2011 @ 21:01:43

    ಮಡೆಸ್ನಾನ ಮಾಡಿ ಅದಕ್ಕೆ ಫಲ ಸಿಗುತ್ತೊ ಇಲ್ವೊ ಗೊತ್ತಿಲ್ಲ ಆದರೆ ಹರಾಜ್ ಆದ ಐಪಿಎಲ್ ಆಟಗಾರರಿಗೇ(ಬ್ಯಾರೆ ಯಾರಿಗೋ ಅಲ್ಲ) ದುಡ್ಡು ಗ್ಯಾರಂಟಿ ಸಿಗುತ್ತೆ. ಸಿಗದೆ ಹೋದರೆ ಕೋರ್ಟ್ ಕೇಸ್ ಹಾಕಬೋದು. ಆದರೆ ಮಡೆಸ್ನಾನ ಮಾಡಿ ಏನೂ ಫಲ ಸಿಗ್ಲಿಲ್ಲ ಅಂದ್ರೆ ಯಾರನ್ನ ಕೇಳ್ಬೇಕು? ಚೆಂಬೇ

    ಇಶ್ಟು ಸುಳುವಾದ ವಿಶಯ( simple logic) ಕೆ.ವಿ.ಅಕ್ಶರ ಅಂತವರಿಗೆ ಹೊಳೆಯದೇ ಇದ್ದುದು ಅಚ್ಚರಿ.

    ಉತ್ತರ

  4. Dinesh Kumar S.C.
    ಜನ 18, 2011 @ 19:44:55

    ಅಕ್ಷರ ಕೆ.ವಿ. ಅವರ ಚಿಂತನೆಗಳು ಮಾನಾವಮಾನಗಳನ್ನು ಮಾತ್ರ ಯಾಕೆ ಪರಿಗಣಿಸುತ್ತಿವೆ? ಮಡೆ ಸ್ನಾನದಂಥ ಸಂಪ್ರದಾಯಗಳಲ್ಲಿ ‘ಅವಮಾನ ಒಂದೇ ಇದೆ ಎಂದು ಭಾವಿಸಬೇಕಿಲ್ಲ. ಕೇವಲ ಅವಮಾನದ ಪ್ರಶ್ನೆಯನ್ನು ಇಟ್ಟುಕೊಂಡು ಇದನ್ನು ಯಾರೂ ವಿರೋಧಿಸುತ್ತಿಲ್ಲ. ನಮ್ಮ ದೇವಸ್ಥಾನ-ಧಾರ್ಮಿಕ ಕೇಂದ್ರಗಳು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅನಾಚಾರಗಳಿಗೆ ಮಡೆಸ್ನಾನವೂ ಒಂದು ಉದಾಹರಣೆ. ಮಡೆ ಸ್ನಾನ ಒಂದು ಅಂಧಶ್ರದ್ಧೆ ಮಾತ್ರವಲ್ಲ, ಶೋಷಣೆಯ ವಿಧಾನ. ದೇವಸ್ಥಾನಗಳಲ್ಲಿ ಪ್ರತ್ಯೇಕ ಪಂಕ್ತಿಗಳಲ್ಲಿ ಊಟಕ್ಕೆ ನೀಡುವುದೇ ಅಸ್ಪೃಶ್ಯತೆಯ ಒಂದು ಭಾಗ. ಮಡೆಸ್ನಾನ ಅಸ್ಪೃಶ್ಯತೆಯನ್ನೇ ಆದರ್ಶವನ್ನಾಗಿ ಸ್ವೀಕರಿಸಿರುವ ಜನರ ಕುತ್ಸಿತ ಮನೋಭಾವಕ್ಕೆ ಕನ್ನಡಿ. ಇಂಥ ಆಚರಣೆಗಳನ್ನು ಬೆಂಬಲಿಸುವವರು, ಅವುಗಳ ಪರವಾಗಿ ವಕಾಲತ್ತು ವಹಿಸುವವರು ಯಥಾಸ್ಥಿತಿವಾದಿಗಳು. ಸಮಾಜ ಸುಧಾರಣೆಯಾಗುವುದು, ಜನರು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವುದು ಅವರಿಗೆ ಬೇಕಿಲ್ಲ.

    ಯಾವುದೇ ಮನುಷ್ಯ ಘನತೆಯಿಂದ ಬದುಕುವಂತಹ ಸಮಾಜ ನಮ್ಮದಾಗಬೇಕು. ಮಡೆಸ್ನಾನದಂಥವು ಮನುಷ್ಯತ್ವದ ವಿರೋಧಿ ಆಚರಣೆಗಳು, ಪುರೋಹಿತಶಾಹಿಯ ಪಳೆಯುಳಿಕೆಗಳು. ಇಂಥವನ್ನು ನಿರ್ಮೂಲನೆ ಮಾಡದ ಹೊರತು ಸಮಾಜ ಸುಧಾರಿಸುವುದಿಲ್ಲ. ಇಂಥ ಮೌಢ್ಯಗಳನ್ನು ಒಪ್ಪಿ ನಡೆಯುವ, ಬೆಂಬಲಿಸುವ ಒಂದು ಜನಸಮೂಹ ಇರುವುದೇನೋ ಸತ್ಯ. ಆದರೆ ಮೌಢ್ಯವೆಂದು ಗೊತ್ತಿದ್ದೂ ಬೇರೆ ಬೇರೆ ಕಾರಣಗಳಿಗೆ ಸಮರ್ಥಿಸಿಕೊಳ್ಳುವವರು ಅತಿ ಹೆಚ್ಚು ಅಪಾಯಕಾರಿಗಳು. ಅದರಲ್ಲೂ ಜಾತಿವ್ಯವಸ್ಥೆ ಮತ್ತು ಅದರಿಂದ ನಿರ್ಮಿತವಾಗಿರುವ ಮೇಲುಕೀಳಿನ ಸಮಾಜವ್ಯವಸ್ಥೆ ಹಾಗೇ ಇರಬೇಕು ಎಂಬ ಕಾರಣಕ್ಕೆ ಇಂಥ ಕಂದಾಚಾರಗಳನ್ನು ಬೆಂಬಲಿಸುವವರು ಅಥವಾ ವಿರೋಧಿಸದೇ ಇರುವವರು ಒಟ್ಟಾರೆಯಾಗಿ ಸಮಾಜಕ್ಕೆ ಅಂಟಿದ ಗೆದ್ದಲು ಹುಳುಗಳು.

    ಉತ್ತರ

  5. ಸೋಮಲಿಂಗ
    ಜನ 18, 2011 @ 18:33:26

    ಮಾನ್ಯ ಶ್ರೀವತ್ಸ ಅವರೇ,
    .ಈ ಮಾತುಗಳನ್ನು ಓದಿ:
    “ಎಂಜಲೆಲೆ ಮೇಲೆ ಜನ ಉರುಳುವದನ್ನು ಮೂಢನಂಬಿಕೆ ಎನ್ನುವ ಜನ ಕ್ರಿಕೆಟಿಗರ ಹರಾಜನ್ನು ಅವಮಾನ ಸೃಷ್ಟಿಸುವ ಘಟನೆ ಎಂದು ಭಾವಿಸುವದಿಲ್ಲ.” ಅಂದರೆ ಎಂಜಲೆಲೆ ಮೇಲೆ ಜನ ಉರುಳುವದು ಮೂಢನಂಬಿಕೆ ಎಂದು ಹೇಳುವ ‘ಜನ’ಕ್ರಿಕೆಟಿಗರ ಹರಾಜು ಅವಮಾನಕಾರಿ ಎಂದೂ ಭಾವಿಸಬೇಕು! ಇದು ಅಕ್ಷರ ವಿಧಿಸುವ ಪೂರ್ವಷರತ್ತು.
    ಅದೃಷ್ಟವಶಾತ್ ಅಕ್ಷರ ಅವರಿಗೆ ಎರಡೂ ಅವಮಾನಕರ ಎನಿಸಿವೆ. ೨೦೧೧ ರ ಭಾರತದಲ್ಲಿ ಬದುಕುತ್ತಿರುವ ‘ಅವರಂಥವರಿಗೆ’ ಯಾವುದು ಹೆಚ್ಚು ಅವಮಾನಕರ? ಎಂಬುದು ಪ್ರಶ್ನೆ. ಅವರ ಪ್ರಕಾರ ಕ್ರಿಕೆಟಿಗರ ಹರಾಜು ಹೆಚ್ಚು ಅವಮಾನಕರ.
    ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬುದು ಅವರ ಅನುಮಾನ. ಅಂಥ ಅನುಮಾನ ‘ನಮ್ಮಂಥವರಿಗೆ’ ಇಲ್ಲ ಸ್ವಾಮಿ.ಇನ್ನುಳಿದಂತೆ ಪ್ರಾಚಿನ ರೋಮು, ವಸಾಹತುಶಾಹಿ ರೂಪಿಸಿದ ಗ್ರಹಿಕೆ ಇತ್ಯಾದಿ ಹಳಸಲು ವಿವರಣೆಗಳು, ಒಂದು ರೂಪಕ. ಕಾಲ ಮೇಲೆ ಕಾಲು ಹಾಕಿ ಕುಳಿತ ಒಬ್ಬ, ಬಗ್ಗಿ ನಿಂತ ಇನ್ನೊಬ್ಬ ಹೀಗೆ ಇಬ್ಬರು ಭಾರತೀಯರು ಕೋಣೆಯೊಳಗೆ, ನಿಂತು ಇದನ್ನು ನೋಡುತ್ತಿರುವ ಒಬ್ಬ ಪಾಶ್ಚಾತ್ಯ ಮಾನವಶಾಸ್ತ್ರಜ್ಞ ಬಾಗಿಲಲ್ಲಿ ಅಕ್ಷರರು ಸೃಷ್ಟಿಸಿದ ಆ ರೂಪಕವನ್ನು ನಾವು ಹಾಗೆ ಕಲ್ಪಿಸಿಕೊಂಡು ಅಲ್ಲಿ ಉಂಟಾಗುವ ಇಕ್ಕಟ್ಟಿಗೆ ಹೊಸದೊಂದು ಸಾಂಸ್ಕೃತಿಕ ರಾಜಕಾರಣದ ಆಯಾಮ ಪ್ರಾಪ್ತವಾಗುವದನ್ನು ಅಕ್ಷರರ ಕಣ್ಣಿನಿಂದ ನೋಡಬೇಕು! ಹಾಗೆ ನೋಡಿದಾಗ ತಮಗೆ ‘ಮಾನಾವಮಾನಗಳ ವಿಷಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಪರಿಕಲ್ಪನೆಯಲ್ಲಿ ಕಂಡು ಬರುವ ಆಶ್ಚರ್ಯಕರ ವ್ಯತ್ಯಾಸಗಳು’ ಕಂಡಿವೆ. ನಮಗೆ ಮಾನಾವಮಾನಗಳ ವಿಷಯದಲ್ಲಿ ಅಕ್ಷರರ ಮನಸಿನಲ್ಲಿ ಕಂಡು ಬರುವ ಆಶ್ಚರ್ಯಕರ ದ್ವಂದ್ವಗಳು ಕಂಡಿವೆ. ಏಕೆಂದರೆ ಅಕ್ಷರರೆ ಹೇಳುವ ಹಾಗೆ ಇವೆಲ್ಲ ಅವರ ಮಟ್ಟಿಗೆ ‘ಅಸಹ್ಯಕರವಾಗಿ ಕಾಣಬಹುದಾದ’ ಆಚರಣೆಗಳಷ್ಟೇ.

    ಉತ್ತರ

    • ಶ್ರೀವತ್ಸ ಜೋಶಿ
      ಜನ 18, 2011 @ 21:53:07

      ಸೋಮಲಿಂಗ ಅವರಿಗೆ ಮತ್ತೊಮ್ಮೆ ನಮಸ್ಕಾರ.
      ಇಷ್ಟೆಲ್ಲ ಚರ್ಚೆಯ ನಂತರ, ಕೆ.ವಿ.ಅಕ್ಷರ ಅವರ ಲೇಖನವನ್ನು ಮತ್ತೊಮ್ಮೆ ನಾನು ಪ್ರಜಾವಾಣಿ e-paper ಆವೃತ್ತಿಯನ್ನು ತೆರೆದು ಓದಿದೆ. ಆಗಲೂ ನನಗನಿಸಿದ್ದು ಇದು “ಮಾನಾವಮಾನಗಳ ಬಗ್ಗೆ ಮನುಷ್ಯನ ಮನಸ್ಸಿನಲ್ಲಿ/ಪರಿಕಲ್ಪನೆಯಲ್ಲಿ ಆಶ್ಚರ್ಯಕರವಾಗಿ ಕಂಡುಬರುವ ವ್ಯತ್ಯಾಸಗಳು”ಕುರಿತು ಸೋದಾಹರಣವಾಗಿ ಬರೆದಿರುವ ಲೇಖನ ಎಂದು. ಚರ್ಚೆ ಆಗಬಹುದಾದದ್ದು (ಆಗಲೇಬೇಕಾದ್ದು ಎನ್ನುತ್ತಿಲ್ಲ :-)) ಅಂಥದೊಂದು ಮನೋವ್ಯಾಪಾರದ ಬಗ್ಗೆ, ಆದರೆ ಆಗುತ್ತಿರುವುದು ಲೇಖನದಲ್ಲಿ ಬಳಸಿಕೊಂಡ ಉದಾಹರಣೆಗಳ ಬಗ್ಗೆ. ಇದು ನನ್ನ ಅನಿಸಿಕೆ. ಹಾಗಾಗಿ ನಾನು ಈ ಚರ್ಚೆಯಿಂದ ಸ್ವಯಂನಿವೃತ್ತಿ ಘೋಷಿಸುತ್ತಿದ್ದೇನೆ. 🙂 ಸಿಟ್ಟಿನಿಂದ ಅಲ್ಲ, ಬೇಸರದಿಂದ ಮೊದಲೇ ಅಲ್ಲ (ಅದಕ್ಕೇ ಸಾಧ್ಯವಾದಷ್ಟು smileyಗಳನ್ನು ಸಿಂಪಡಿಸಿದ್ದೇನೆ). ನೀವು ಚರ್ಚೆಯನ್ನು ಮುಂದುವರಿಸಿ. 🙂

      ಉತ್ತರ

  6. D.M.Sagar,Dr.
    ಜನ 18, 2011 @ 17:38:14

    The article by Akshara is indeed a thought provoking, since there is a pressing need to define or set metric to discriminate “maana” and “avamaana” within the socio-cultural aspects of the contemporary world.
    Akshara has clearly mentioned that his objective is not to favour either IPL or madesnaana, however, he has asked/requested to initiate thinking along this direction.
    Now, there is a problem. Whenever people are asked to think, they say @I think..I think..@ , in reality, they never think. Or their version of thinking is, to blame somebody personally or attack personally or come out with violent rhetorics influenced by various retrospects.
    Now, having said all these, I am sure that people hate me for this, however, I regret to confess that I am not trained to express diplomatically, commensurate with the superficially-sugar coated rhetorics. After all, thinking is triggered by education and education is such an alchemy that it makes one feel less and think more!.

    ಉತ್ತರ

  7. ಸೋಮಲಿಂಗ
    ಜನ 18, 2011 @ 14:49:46

    ಶ್ರೀ ಶ್ರೀವತ್ಸ ಜೋಷಿಯವರ ಪ್ರತಿಕ್ರಿಯೆ ಓದಿದರೆ ಲೇಖನಗಳನ್ನು ಓದುವ ಒಂದು ಹೊಸ ಉಪಕ್ರಮವನ್ನೇ ಅವರು ಸೃಷ್ಟಿಸುತ್ತಿರುವಂತೆ ಕಂಡು ಬಂತು.ಅವರು ಅಕ್ಷರ ಅವರ ಲೇಖನದ ಅಕ್ಷರಗಳನ್ನಷ್ಟೇ ಓದಿದಂತೆ ಕಾಣುತ್ತದೆ. ಶ್ರೀವತ್ಸ ಸಾರ್, ಮಡೆಸ್ನಾನದ ಹರಕೆ ಹೊತ್ತ ಮಂದಿ, ಹರಾಜಾಗುವ ಕ್ರಿಕೆಟ್ ಆಟಗಾರರು, ಕೆ.ವಿ ಅಕ್ಷರ ಮತ್ತು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಸಂಪಾದಕ ವರ್ಗ ಈ ನಾಲ್ಕನ್ನು ಬದಿಗಿಟ್ಟು ವಿಷಯವನ್ನು ನೋಡಿ ಎನ್ನುತ್ತಿರಲ್ಲ. ಓದುಗರೇನು,ಪಂಜರದೊಳಗಿನ ಗಿಳಿ ನೋಡುತ್ತಿದ್ದಾರ, ತೇಲುವ ಮೋಡ ನೋಡುತ್ತಿದ್ದಾರ.. ಸಮಾಜದ ಬಗ್ಗೆ, ಮನುಷ್ಯ ಘನತೆಯ ಬಗ್ಗೆ, ಮಾಧ್ಯಮಗಳ ಸಾಮಾಜಿಕ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ ಸ್ವಾಮಿ. ಮುಸುರೆ ಮೇಲೆ ಉರುಳಾಡಿ, ಬೆತ್ತಲೆ ಮೈಗೆ ಬೇವಿನೆಲೆ ಕಟ್ಟಿಕೊಂಡು ಅನಾಗರಿಕ ಹರಕೆ ತೀರಿಸುವವರು ತಮ್ಮ ಒಡಹುಟ್ಟಿದ ಅಕ್ಕ ತಂಗಿಯರೋ, ಹೆಂಡತಿ ಮಕ್ಕಳೋ ಅಗಿರದಿದ್ದಾಗ ಹೀಗೆ ಅಕ್ಷರರಂತೆ ‘ಆಬ್ಜೆಕ್ಟಿವ್’ಆಗಿ ಬರೆಯುವದು, ಅದನ್ನು ಜೋಶಿಗಳು ತಮ್ಮೆಲ್ಲ ಜಾಣತನ ಉಪಯೋಗಿಸಿ ಮೆಚ್ಚುವದು, ಜೋಗಿಗಳು ತಮ್ಮ ಬೆರಗು, ಸೋಜಿಗಗಳ ಲಕ್ಸುರಿಗಾಗಿ ಇಂದ ಆಚರನೆಗಲಿಗಾಗಿ ಆಶಿಸುವದು ..ಯಾವುದೂ ಇನ್ನುಮುಂದೆ ಯಾರಿಗೂ ಶಾಕಿಂಗ್ ಅನ್ನಿಸಲಿಕ್ಕಿಲ್ಲ. ನೀವೇನೆಂದು ತೋರಿಸಿ ಕೊಟ್ಟಿದ್ದೀರಿ,ಧನ್ಯವಾದಗಳು.

    ಉತ್ತರ

    • ಶ್ರೀವತ್ಸ ಜೋಶಿ
      ಜನ 18, 2011 @ 16:51:15

      ಸೋಮಲಿಂಗ ಅವರಿಗೆ ನಮಸ್ಕಾರ. ಮೊದಲನೆಯದಾಗಿ, ನಾನೇನೆಂದು ತೋರಿಸಿಕೊಡುವುದಕ್ಕೆ ನಾನು ಏನೂ ಅಲ್ಲ 🙂 ಇನ್ನು, ಕೆ.ವಿ.ಅಕ್ಷರರಾಗಲೀ, ಅವರು ಬರೆದ ಈ ಲೇಖನವನ್ನು ಓದಿದ ನಾನಾಗಲೀ ‘ಮಡೆಸ್ನಾನ’ವನ್ನು ಸಮರ್ಥಿಸುತ್ತಿದ್ದೇವೆ ಎಂದು ದಯವಿಟ್ಟು ತಿಳಿಯಬೇಡಿ. ಮಡೆಸ್ನಾನ ಬಿಡಿ, ನಮ್ಮೂರಿನ ದೇವಸ್ಥಾನದಲ್ಲಿ ಬರೀ ‘ಅಂಗಪ್ರದಕ್ಷಿಣೆ’ (ಉರುಳುಸೇವೆ- ಅನುರಾಗ‌ಅರಳಿತು ಚಿತ್ರದಲ್ಲಿ ನಂಜನಗೂಡು ದೇವಸ್ಥಾನದ ಪ್ರಾಕಾರದಲ್ಲಿ ಡಾ.ರಾಜ್ ಮಾಡುತ್ತಾರಲ್ಲ ಅಂಥದು) ಅದನ್ನು ನೋಡಿಯೇ ಛೇ ಇದೂ ಒಂದು ಸೇವೆಯೇ, ಈಥರವೂ ಹರಕೆಯೇ ಎಂದು ಒಂದುರೀತಿಯ ಭಯ/ದುಗುಡ/ತಿರಸ್ಕಾರಗಳು ನನಗಾಗಿವೆ, ಈಗಲೂ ಇವೆ. ಮಡೆಸ್ನಾನದಂತೆಯೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿಯಿಂದ ದೇವಸ್ಥಾನದವರೆಗೂ ರಸ್ತೆಯ ಮೇಲೆ ಬಿರುಬಿಸಿಲಿನಲ್ಲಿ ಉರುಳುಸೇವೆ ಮಾಡುವವರಿದ್ದಾರೆ, ಮೈಕೈಯೆಲ್ಲ ಸುಲಿದು ರಕ್ತ ಒಸರುವ ದೃಶ್ಯವಂತೂ ಹೃದಯವಿದ್ರಾವಕ.
      ಆದರೆ, ಈ ಲೇಖನದಲ್ಲಿ ಇರುವುದು ಪಂಜರದೊಳಗಿನ ಗಿಳಿಯೂ ಅಲ್ಲ, ತೇಲುವ ಮೋಡವೂ ಅಲ್ಲ. ಇಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿರುವುದು “ಮಾನಾವಮಾನಗಳ ವಿಷಯದಲ್ಲಿ ಮನುಷ್ಯನ ಮನಸ್ಸಿನಲ್ಲಿ,ಪರಿಕಲ್ಪನೆಯಲ್ಲಿ ಕಂಡುಬರುವ ಆಶ್ಚರ್ಯಕರ ವ್ಯತ್ಯಾಸಗಳು” ಅಷ್ಟೇ. ಆ ವಿಷಯವನ್ನು ಪ್ರತಿಪಾದಿಸಲಿಕ್ಕೆ ಲೇಖಕರು ಉಪಯೋಗಿಸಿರುವುದು ಮಡೆಸ್ನಾನ ಮತ್ತು ಕ್ರಿಕೆಟಿಗರ ಹರಾಜಿನ ವಿದ್ಯಮಾನಗಳನ್ನು. ಹಾಗೆಯೇ ಸಾಂದರ್ಭಿಕವಾಗಿ “ಕೋಣೆಯಲ್ಲಿ ಕಾಲಿನಮೇಲೆಕಾಲು ಹಾಕಿ ಕುಳಿತವನ ಮತ್ತು ಅವನ ಕಾಲುಗಳ ಕೆಳಗಿರುವವನ ಮತ್ತು ಅವರಿಬ್ಬರನ್ನು ನೋಡುತ್ತಿರುವವನ ಮನದೊಳಗೆ ಮೂಡಬಹುದಾದ ಕಲ್ಪನೆಗಳ ಚಿತ್ರಣ”ವನ್ನು.

      ಉತ್ತರ

  8. guruve
    ಜನ 18, 2011 @ 11:34:18

    ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ಮಡೆ ಸ್ನಾನ ಮಾಡಿದಂತಿದೆ… ಅಕ್ಷರ ಅವರ ತರ್ಕದಂತೆಯೇ, ಸಾಪ್ತಾಹಿಕ ಪುರವಣಿಯ ಸಂಪಾದಕ ಮಂಡಲಿಗೆ ಅದು ನೆಮ್ಮದಿ ತಂದಿದ್ದರೆ, ಮನೆಯಲ್ಲಿ ಕೂತು ಓದುವ ಮೂರನೆಯವನಿಗೆ ಇದು ಸರಿ ಇಲ್ಲ ಎಂದು ಕಂಡು ಬಂದರೆ ಅದು ಓದುವವನ ತಪ್ಪಷ್ಟೇ!

    ಇರಲಿ, ಅಕ್ಷರ ಅವರು ಬಾದರಾಯಣ ಸಂಬಂಧದ ವಿಷಯಗಳನ್ನು ಹೋಲಿಸಿದ್ದರೂ ಯಾವುದು ಹೆಚ್ಚು ಅವಮಾನಕಾರಿ ಎಂಬುದನ್ನಷ್ಟೇ ಹೇಳಿದ್ದರೆ ಅದು ಅವರ ವ್ಯಯಕ್ತಿಕ ಅಭಿಪ್ರಾಯ ಎಂದುಕೊಳ್ಳಬಹುದಿತ್ತು. ನಂತರದ ಪಂಕ್ತಿಗಳಲ್ಲಿ ಕಾಲು ಮೇಲಿ ಕಾಲು ಹಾಕಿಕೊಂಡು ಕೂತವನ ಮತ್ತು ಅವಮಾನಿತನಿಗೇ ಅವಮಾನವೆನ್ನಿಸಬೇಕು ಎಂಬುವ ತರ್ಕವನ್ನಿಟ್ಟು ಮಡೆಸ್ನಾನ ಒಂದು ಮೌಢ್ಯವೇ ಅಲ್ಲವೆಂಬಂತೆ ವಾದವನ್ನು ಮುಂದುವರೆಸಿರುವುದೇ ಈ ಗೊಂದಲಕ್ಕೆ ಕಾರಣ. ಇಂದು ಯಾವುದೋ ಒಂದು ಆಚರಣೆಯನ್ನು ಮೂಢ ನಂಬಿಕೆಯೆಂತಲೋ, ಒಂದು ವರ್ಗದ ಕುತಂತ್ರದಿಂದ ಮತ್ತೊಂದು ವರ್ಗಕ್ಕೆ ಆಗಿರುವ ಅನ್ಯಾಯ ಅಂತಲೋ ವಾದಿಸುತ್ತಿದ್ದರೆ ಅದಕ್ಕೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಆ ವೈಜ್ಞಾನಿಕ ಕಾರಣಗಳ ಬೇರೊಂದು ಸಂಸ್ಕೃತಿಯಿಂದ ಆಮದಾಗಿದ್ದರೆ, ಅಥವಾ ಇಲ್ಲಿನ ಯಾರೋ ಒಬ್ಬರ ಉತ್ಕೃಷ್ಟ ವಿಚಾರವಾದದಿಂದ ತಳೆದಿದ್ದರೆ ಅದು ಹೇಗೆ ಅಪಾರ್ಥವಾಗಿ ಕಂಡೀತು? ಇಂತಹ ಸಣ್ಣ ಮೌಢ್ಯಗಳ ಯಾವನೋ ಒಬ್ಬನಿಗೆ ತನ್ನ ಅಜ್ಞಾನದಿಂದ ನೆಮ್ಮದಿ ಪಡೆಯುವ ಸಾಧನಗಳೆನಿಸಿ ಸಹಜವೆನಿಸಿದರೂ, ಮುಂದೆ ಅವುಗಳು ದುರಂತಕ್ಕೆ ಸಾಕ್ಷಿಯಾಗಬಹುದೆಂಬುದಕ್ಕೆ ಬಹುತೇಕ ಐತಿಹಾಸಿಕ ಉದಾಹರಣೆಗಳಿವೆ.

    ಉತ್ತರ

  9. savitri
    ಜನ 18, 2011 @ 11:16:41

    Mrs. Kathyayani Madam, listen me, we are 8 children to my parents. we two sisters are well educated and oppose the blind believes. But my 2 elder sisters are uneducated. They like to live with such believes. I have been telling them about the disadvantages from such things. But they oppose me and show the advantages from those customs.

    The matter is that, when the people believe the things, their mind automatically terns into positivity. So some of their problems will be solved or they get capacity to solve their problems. But unfortunately they do not know either the form of mind or their physical capacity themselves. So they want to submit everything to the concept the God and they can feel comfort. If the people like us think to remove the social problems like blind believes, we should educate every illiterate with the all angles. After that they can think like us. Please think is it possible?

    ಉತ್ತರ

  10. Avanindranath Rao
    ಜನ 18, 2011 @ 10:56:02

    ಕೆ.ವಿ.ಅಕ್ಷರ ಅವರು ಎಂಜಲೆಲೆಗಳ ಮೇಲೆ ಹೊರಳಾಡಿದ ಘಟನೆಯನ್ನು ಸಹಜವೆಂತಲೂ
    ಹಾಗೂ ಕ್ರಿಕೆಟಿಗರ ಹರಾಜು ಅತ್ಯಂತ ಅವಮಾನಕರ ಎಂದು ಬರೆದಿದ್ದಾರೆ. ಪ್ರತಿಭೆಗಳ ಹರಾಜನ್ನು ಅವಮಾನ ಎನ್ನುವುದಾದರೆ ನಾಟಕ ಸೇರಿದಂತೆ ದುಡ್ಡಿಗಾಗಿ
    ನಡೆಯುವ ಎಲ್ಲ ಪ್ರದರ್ಶನ ಕಲೆಗಳನ್ನು ಅವಮಾನಕರ ಘಟನೆ ಎಂದು ಭಾವಿಸಬೇಕಾಗುತ್ತದೆ.
    ತುಳುನಾಡಿನ ಅತ್ಯಂತ ಪ್ರಸಿದ್ಧ ಶೃದ್ಧಾ ಕೇಂದ್ರವೆನಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ
    ಯೆಂಜಲೆಲೆಸ್ನಾನದ ಆಚರಣೆಗೆ ಶತ ಶತಮಾನಗಳ ಇತಿಹಾಸ ಇದೆ ಎನ್ನುವುದು ಕಲ್ಪಿತ ಸುದ್ಧಿ. ಇದು ಕೇವಲ ಅರ್ಧ ಶತಮಾನಗಳಿಂದ ಈಚೆಗೆ ಆರಂಭಗೊಂಡ ಮಾನವ ಸ್ವಾಭಿಮಾನಕ್ಕೆ
    ಕುಂದು ತರುವ ಸ್ಥಾಪಿತ ಹಿತಾಸಕ್ತಿಗಳ ಜಾಣತನದ ಹುನ್ನಾರ.

    ಉತ್ತರ

  11. ಶ್ರೀವತ್ಸ ಜೋಶಿ
    ಜನ 18, 2011 @ 05:24:57

    ಕೆ.ವಿ.ಅಕ್ಷರ ಬರೆದ ಲೇಖನದ ಎಲ್ಲ ಅಕ್ಷರಗಳನ್ನೂ ಓದದೆಯೇ ಕೆಲವರು ‘ಪೂರ್ವಗ್ರಹಪೀಡಿತ’ರಾಗಿ ಅಭಿಪ್ರಾಯಮಂಡನೆಗೆ ಹೊರಟಿರುವಂತೆ ಭಾಸವಾಯ್ತು ನನಗೆ ಇಲ್ಲಿನ ಕೆಲವು ಪ್ರತಿಕ್ರಿಯೆಗಳನ್ನು ಓದಿದಾಗ. ಕೆ.ವಿ.ಅಕ್ಷರ ಅಷ್ಟು ಸ್ಪಷ್ಟವಾಗಿ ಹೇಳಿದ್ದಾರೆ- ‘ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದು ನನ್ನ ಉದ್ದೇಶವಲ್ಲ’ ಎಂದು.

    ಈಗ ಒಂದು ಕೆಲಸ ಮಾಡಿ. ೧) ಮಡೆಸ್ನಾನದ ಹರಕೆ ಹೊತ್ತ ಮಂದಿ ೨) ಹರಾಜಾಗುವ ಕ್ರಿಕೆಟ್ ಆಟಗಾರರು ೩) ಕೆ.ವಿ.ಅಕ್ಷರ ೪) ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಸಂಪಾದಕವರ್ಗ – ಈ ನಾಲ್ಕೂ ‘subject’ ಗಳನ್ನು ಬದಿಗಿಟ್ಟು, “ಮಾನಾವಮಾನಗಳಿಗೆ ಸಂಬಂಧಿಸಿದಂತೆ ಮನುಷ್ಯನ ಮನಸ್ಸಿನಲ್ಲಿ/ಪರಿಕಲ್ಪನೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕಂಡುಬರುವ ವ್ಯತ್ಯಾಸಗಳು” ಎಂದು objective ಆಗಿ, ಬೆರಗುಗಣ್ಣಿನಿಂದ ಈ ಲೇಖನವನ್ನು ಓದಿನೋಡಿ. ಬಹಳ ಅರ್ಥಪೂರ್ಣವಾದ, ಚಿಂತನೆಗೆ ಹಚ್ಚುವ, ಮನಃಶಾಸ್ತ್ರದೊಳಗೊಂದು ಇಣುಕನ್ನು ಕೊಡುವಂಥ ಲೇಖನ. ಕೆ.ವಿ.ಅಕ್ಷರ ಅವರು ಅಂಥದೊಂದು objective ದೃಷ್ಟಿಯಿಂದಲೇ ಇದನ್ನು ಬರೆದಿದ್ದಾರೆ ಎಂದು ನಾನು ಅಂದುಕೊಳ್ಳುತ್ತೇನೆ.

    ಉತ್ತರ

    • aditi
      ಜನ 18, 2011 @ 09:27:24

      yaavude ondara paravaagi vadisuvudilla endu heluttale yavudo ondara paravaagi vaadisudu avara haleyachali. dayavittu avara samrthanege g rajashekhar haagu k phaniraj avaru barabeku.

      ಉತ್ತರ

    • ಆತ್ರಾಡಿ ಸುರೇಶ ಹೆಗ್ಡೆ
      ಜನ 18, 2011 @ 09:43:28

      ಸ್ಪಷ್ಟನೆಯ ನಂತರವೂ ಲೇಖನದಲ್ಲಿ ದ್ವಂದ್ವಗಳು ಹರಿದಾಡಿ ಕಾಡತೊಡಗಿದರೆ, ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ (ಪೂರ್ವಗ್ರಹ ಅಲ್ಲ) ಓದುವ ಓದುಗರ ಪ್ರತಿಕ್ರಿಯೆಗಳೂ ಭಿನ್ನ ಭಿನ್ನವಾಗಿ ಹೊರಹೊಮ್ಮುತ್ತವೆ, ಅಷ್ಟೇ!

      ಉತ್ತರ

      • ಶ್ರೀವತ್ಸ ಜೋಶಿ
        ಜನ 18, 2011 @ 16:29:13

        ನನಗನಿಸುವಂತೆ ಈ ಲೇಖನದಲ್ಲಿ ದ್ವಂದ್ವ ಇಲ್ಲ. ಈ ಲೇಖನ ಬರೆದ ಲೇಖಕನಲ್ಲಿ ಈ ಲೇಖನದ ಮಟ್ಟಿಗೆ ದ್ವಂದ್ವ ಇಲ್ಲ (ಅವರ ವೈಯಕ್ತಿಕ ಸ್ವಭಾವವಾಗಲೀ, ಬೇರೆ ಲೇಖನಗಳಲ್ಲಿ ನಾಟಕ-ಶಿಬಿರಗಳಲ್ಲಿ ಅವರು ಹೇಗೆ ವ್ಯಕ್ತಗೊಂಡಿದ್ದಾರೆಂಬುದಾಗಲೀ ನನಗೆ ಗೊತ್ತಿಲ್ಲ. ಈ ಲೇಖನವನ್ನು ಓದುವಾಗ ನನಗದು ಅಗತ್ಯವೂ ಇಲ್ಲ). ಈಲೇಖನದ ವಸ್ತು “ಮನುಷ್ಯನು ಮಾನಾವಮಾನಗಳ ಬಗ್ಗೆ ತಾಳಿರುವ ದ್ವಂದ್ವಗಳು”. ಅದನ್ನು ಓದುವಾಗ ಲೇಖಕರ ದ್ವಂದ್ವ ಎಂದು ಹೇಗೆ/ಏಕೆ ಆಗುತ್ತದೆ?

        ಉತ್ತರ

        • ಆಸು ಹೆಗ್ಡೆ
          ಜನ 19, 2011 @ 12:19:54

          :::ಆದರೆ ಅದರ ಜತೆಗೇ, ಆತ್ಯಂತಿಕವಾಗಿ ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀರ್ಮಾನಿಸಲಾಗದು.:::

          ಈ ಹೇಳಿಕೆ ವ್ಯಕ್ತಪಡಿಸುವ ದೃಷ್ಟಿಕೋನ ಮತ್ತು ಲೇಖನದಲ್ಲಿ ಉಳ್ಳಿದೆಲ್ಲಾ ಅನಿಸಿಕೆಗಳು ಹೊಮ್ಮಿಸುವ ದೃಷ್ಟಿಕೋನಗಳ ದ್ವಂದ್ವ ಇದೆಯೇನೋ ಅನಿಸಿತು. ಮೊದಲ ಆ ಹೇಳಿಕೆಯ ನಂತರ, ಪೂರ್ಣ ಬರಹವೇ ತನ್ನ ಔಚಿತ್ಯವನ್ನು ಕಳೆದು ಕೊಳ್ಳುತ್ತದೆ ಎಂದು ನನ್ನೆಣಿಕೆ. ಅಷ್ಟೇ. ನನಗೆ ಕಂಡದ್ದೇ ಸತ್ಯವಲ್ಲ ಎನ್ನುವ ಅರಿವೂ ನನಗಿದೆ. 🙂

  12. ಅಶೋಕ ಶೆಟ್ಟ್ಟರ್
    ಜನ 17, 2011 @ 22:19:50

    ಹೌದು ಮತ್ತೆ.ಅಕ್ಷರ ಹೇಳುವದು ನಿಜ.ಬ್ರಾಹ್ಮಣರೋ ಇನ್ನಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮುಖಾಂತರ ತನಗೆ ಅವಮಾನ ಆಗುತ್ತದೆ ಎಂದು ತೀರ್ಮಾನಿಸುವವನು ಕೊನೆಗೂ ಆ ಅವಮಾನಿತನೇ ಆಗಿರಬೇಕು. ನಗ್ನವಾಗಿ ಬೇವಿನುಡುಗೆ ಉಟ್ಟು ಹರಕೆ ತೀರಿಸುವದು ಅವಮಾನಕರ ಎಂದು ಸ್ವತ: ಬೇವಿನ ತೊಪ್ಪಲು ಮೆತ್ತಿಕೊಂಡು ಹೋಗುವಾಕೆಗೆ ಅನಿಸಬೇಕು.ಪಶ್ಚಿಮದ ಎನಲೈಟನ್ಮೆಂಟ್ ಪ್ರೇರಿತ ಮೌಲ್ಯಪ್ರಜ್ನೆಯಿಂದ ಯಾಕೆ ನಿಮ್ಮಂಥ ಪ್ರಗತಿಪರರು ಅದನ್ನು ಅವಮಾನಕರ, ಅನಾಗರಿಕ ಅಂತೆಲ್ಲಾ ಹೇಳಿ ಅಕ್ಷರರಂಥ ಪ್ರಕಾಂಡ ಪಂಡಿತರನ್ನು ಕೆರಳಿಸಿ ಇಂಥ ಅತಿಬೌದ್ಧಿಕ ಲೇಖನ ಬರೆಯಲು ಹಚ್ಚುತ್ತೀರಿ? ಅದಕ್ಕಿಂತ ಐಪಿಎಲ್ ಹರಾಜಿನಂಥ ಸಂಗತಿಗಳನ್ನು ಅತ್ಯಂತ ಘೋರ, ಅವಮಾನಕಾರಿ ಎಂಬುದಾಗಿ ಗೋಳಾಡಿ ಅಕ್ಷರರಂಥ ಕಾಲಶೇಷಗಳನ್ನು ಸಂಪ್ರೀತಗೊಳಿಸಬೇಕು……

    ಉತ್ತರ

  13. mooDha
    ಜನ 17, 2011 @ 20:41:21

    ಹೌದು ಬಿಡಿ! ಯಾವುದೋ ಪುಟ್ಟ ಕಾಡಿನಲ್ಲಿ, ದೈವ ಸಾಕ್ಷಾತ್ ಮಕರ ಜ್ಯೋತಿ ನೋಡಲು ಹೋಗಿ ಕಾಲ್ತುಳಿತಕ್ಕೆ ಸಿಕ್ಕಿ ಸತ್ತದ್ದೂ ಸಹಜವೇ! ದೊಡ್ಡ ವಿಷಯವೇನಲ್ಲ.. ನಮ್ಮ ದೇಶದಲ್ಲಿ ಈ ರೀತಿ ದೈವ ಜಾತ್ರೆಗಳಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾಯುವುದು ಹಿಂದಿನಿಂದ ಬಂದಂತಹ ರೂಢಿಯೇ! ಮೌಢ್ಯವೆಂದುಬಿಟ್ಟೀರಿ ಜೋಕೆ!

    ಇದನ್ನೂ ಯಾರೂ ವಿರೋಧಿಸಬೇಡಿ! ನಂತರ ಯಾರಾದರೂ ಕೇಳಿಯಾರು! ಇದರಿಂದ ಆಗುವ ಉಪಯೋಗವನ್ನು ನೀವೇನು ಅಧ್ಯಯನ ಮಾಡಿ ಮಾತನಾಡುತ್ತಿದ್ದೀರೇ ಎಂದು!

    ಉತ್ತರ

  14. ಕಾರ್ತ್ಯಾಯಿನಿ
    ಜನ 17, 2011 @ 20:34:59

    @jogi
    ಸರ್ , ನಿಮ್ಮ ಕಮೆಂಟ್ ನೋಡಿ ಷಾಕ್ ಆಯಿತು.
    ಮೀಡಿಯಾ ಏನು ಮಾಡಬಹುದು , ಏನು ಮಾಡಬಲ್ಲದು, ಏನು ಮಾಡಬಾರದು ಎಂದು ಬರೆದಿದ್ದೀರಿ. ಈಗಿರುವ ಮೀಡಿಯಾಗಳು ಚರ್ಚೆಯನ್ನು SCIENTIFIC ಆಗಿ ಮಾಡಲ್ಲ, ಪರಿಣಿತರನ್ನು ಕರಯುವುದಿಲ್ಲ, ಅದನ್ನು ಒಪ್ಕೊಳ್ಳೋಣ. ಅದರೇ ನಿಮ್ಮ ತರ್ಕ ಇಲ್ಲಿನ ಮುಖ್ಯ ಚರ್ಚೆಯ ವಿಷಯದ ಬಗ್ಗೆ ತೋರುತ್ತಿರುವ ನಿಲುವು ಏನು?
    ಇಲ್ಲಿ ಮೀಡಿಯಾ ಏನು ನಿರ್ಧರಿಸಬೇಕು ಎನ್ನುವುದು ನನ್ನ ಪ್ರಕಾರ secondary …

    ಮಡೆ ಸ್ನಾನದಿಂದ ಅಥವಾ ಅಂಥಾ ನಂಬಿಕೆಯಿಂದ ಕಾಯಿಲೆಗಳು ವಾಸಿಯಾಗುತ್ತದೆ ಎಂದು ನೀವು ನಂಬುತ್ತೀರಾ? ಮಡೆ ಸ್ನಾನ ಅಮಾನವೀಯ ಮತ್ತು ಮೂಡನಂಬಿಕೆ ಎಂದು ಹೇಳುವುದಕ್ಕೆ, ನಿಮಗೆ ಪರಿಣಿತರ ಸಲಹೆ ಬೇಕಾ? Scientific study ಬೇಕಾಗಿರುವ ವಿಷಯ ಇದು ಎಂದು ನಂಬುತ್ತೀರಾ?

    “ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ”.
    ಏನಿದರ ಅರ್ಥ?

    ಬೆತ್ತಲೆ ಸೇವೆ , ದೇವದಾಸಿ ಪದ್ದತಿ, ಅಸ್ಪೃಶ್ಯತೆ ಇವೆಲ್ಲವೂ ಎಷ್ಟೋ ವರ್ಷಗಳಿಂದ ನಡೆಯುತ್ತಿದೆ. ಈ ಆಚರಣೆಗಳಿಂದ ಪ್ರಯೋಜನ ಸಿಕ್ಕಿದ ಅಥವಾ ತೆಗೆದುಕೊಂಡ ಜನರು(ಇತರರು) ಇರಬಹುದು. ಆ ಕಾರಣಕ್ಕಾಗಿ ಈ ಆಚರಣೆಗಳನ್ನು ಮುಂದುವರಿಸಬೇಕಾ..

    ನೀವು ಹೇಳುತ್ತಿರುವ ಮನಸಿನ ನೆಮ್ಮದಿ ಹೇಗೆ, ಎಲ್ಲಿಂದ ಬರುತ್ತೆ, ಎಂದು ಯೋಚನೆ ಮಾಡಿದ್ದೀರಾ.. ಈ ನಂಬಿಕೆಗಳು ಎಲ್ಲಿಂದ, ಯಾರು, ಯಾಕಾಗಿ ಹುಟ್ಟಿಸ್ಸಿದ್ದಾರೆ ಎಂಬುದು ತಿಳಿಯುವುದಕ್ಕೆ ವಿಜ್ಞಾನಿಗಳ, ಸಮಾಜಶಾಸ್ತ್ರಜ್ಞರ ಅಧ್ಯಯನ ಆಗಬೇಕಾ..
    ಜೋಗಿಯವರೇ ಸ್ವಲ್ಪ clarity ಕೊಡಿ.

    ಉತ್ತರ

    • ಜೋಗಿ
      ಜನ 17, 2011 @ 23:46:37

      ನಿಮ್ಮ ಮಾತು, ಪ್ರಶ್ನೆ ಸರಿಯಾಗಿದೆ. ನನ್ನ ಯೋಚನೆಯೇ ತಪ್ಪಿರಬಹುದು. ಆದರೆ ನೀವು ಕೇಳಿದ ಹಾಗೆ ತುಂಬ ಸ್ಪಷ್ಟವಾಗಿ ಹೇಳುವುದಕ್ಕೆ ನಂಗೂ ಆಗ್ತಿಲ್ಲ. ಇನ್ನೊಂದಷ್ಟು ಯೋಚಿಸಬೇಕೋ ಏನೋ. ಒಂದು ಸಣ್ಣ ಘಟನೆ ನೆನಪಾಗುತ್ತೆ. ನನಗೆ ಗೊತ್ತಿರುವ ಎಸ್. ಐತಾಳ ಎನ್ನುವವರ ಮಗನಿಗೆ ಮೈಯೆಲ್ಲ ಗುಳ್ಳೆಗಳು ಏಳಲು ಆರಂಭವಾಗಿ, ಹಾವು ಪೊರೆ ಬಿಟ್ಟಂತೆ ಮೈಯಿಂದ ಸಿಪ್ಪೆ ಏಳಲು ಶುರುವಾಯಿತು. ಅವರು ಸುಬ್ರಹ್ಮಣ್ಯಕ್ಕೆ ಹೋಗಿ ನಾಗಪ್ರತಿಷ್ಠೆ ಇತ್ಯಾದಿ ಮಾಡಿಸಿಕೊಂಡು ಬಂದರು. ವಾಸಿಯಾದರೆ ಮಡೆಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದರು. ವಾಸಿಯಾದ ಮೇಲೆ ಅದನ್ನೂ ಮಾಡಿಸಿಕೊಂಡು ಬಂದರು. ಮಗನಿಗೆ ಕಾಯಿಲೆ ಇದ್ದಾಗ ಅದು ಹೇಗಾದರೂ ವಾಸಿಯಾಗಲಿ ಎನ್ನುವ ಭಾವವೊಂದೇ ಇರುತ್ತದೆ. ಅದರಿಂದ ಮಗನ ಕಾಯಿಲೆ ವಾಸಿ ಆಯಿತು ಅನ್ನುವುದಷ್ಟೇ ಅವರಿಗೆ ಗೊತ್ತಿರುತ್ತದಯೇ ಹೊರತು ಅದನ್ನು ಅವರು ಅವಮಾನ ಎಂದು ಭಾವಿಸಿರಲಾರರು. ಅವರ ಹತ್ತಿರ ಹೋಗಿ ನಾನು ಬುದ್ಧಿಜೀವಿಯಂತೆ ಮಾತಾಡುತ್ತಾ, ನಿಮ್ಮದು ಮೌಢ್ಯ, ನೀನು ಶತಮೂರ್ಖ, ನಿನಗೆ ಅವಮಾನ ಆಯ್ತು ಅಂತ ಹೇಳಿದಾಗ ನಿಜವಾಗಿಯೂ ಅವಮಾನ ಆಗುತ್ತದೆ.
      ನಾನು ಹೇಳಬಯಸಿದ್ದು ಇದನ್ನು ಜಗತ್ತಿನಲ್ಲಿ ಎರಡು ವರ್ಗ. ಒಂದು ಆಚರಣೆಯನ್ನು ಅವಮಾನ ಎಂದು ಭಾವಿಸುವವರು, ಇನ್ನೊಂದು ಅದನ್ನೊಂದು ಆಚರಣೆ ಎಂದಷ್ಟೇ ತಿಳಿಯುವವರು. ಪಂಚಗವ್ಯ ಮಾಡಿದಾಗ ಅದಕ್ಕೆ ಗೋಮೂತ್ರ, ಗೋಮಯ ಬೆರೆಸಿರುತ್ತಾರೆ. ಅದನ್ನು ಬ್ರಾಹ್ಮಣರೂ ಕುಡಿಯುತ್ತಾರೆ. ಬಹುಶಃ ಅನ್ಯ ಜಾತಿಯವರಿಗೆ ಮಾತ್ರ ಕುಡಿಸಿದ್ದರೆ, ಅದೊಂದು ಸಾಮಾಜಿಕ ಪಿಡುಗಾಗಿ ಬಿಂಬಿತವಾಗುತ್ತಿತ್ತೋ ಏನೋ? ಗೊತ್ತಿಲ್ಲ. ಆ ಕ್ಷಣಕ್ಕೆ ಅನ್ನಿಸಿದ್ದು ಹೀಗಿರಬಹುದು ಅಂದುಕೊಳ್ಲುತ್ತೇನೆ.

      ಉತ್ತರ

  15. ನಾ ದಿವಾಕರ
    ಜನ 17, 2011 @ 19:13:42

    Mr. Akshara has tried to sail in two boat simultaneously. In fact this is a trend in intellectual world to juxtapose one issue against the other and nullify both. But one thing Mr. Akshara has to understand is that The socio-cultural aspects of human civilization has a vast and vital difference vis a vis socio-economic aspects. What happened in Madesnana of Kukke and Auction in IPL need not be looked into from the same angle and decide which is a better evil. This article deserves an article itself not just reaction. But suffice it to say, the writer has tried to confuse the readers and in a way has tried to defend obscurantism by covert methods.

    ಉತ್ತರ

  16. ಆತ್ರಾಡಿ ಸುರೇಶ ಹೆಗ್ಡೆ
    ಜನ 17, 2011 @ 16:36:40

    ::::ಆದರೆ ಅದರ ಜತೆಗೇ, ಆತ್ಯಂತಿಕವಾಗಿ ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀರ್ಮಾನಿಸಲಾಗದು.:::

    ಶ್ರೀಯುತ ಕೆ.ವಿ.ಅಕ್ಷರ ಅವರ ಈ ಮೇಲಿನ ಮಾತನ್ನು ಒಪ್ಪಿಕೊಂಡು ತೆಪ್ಪಗಿರುವುದಾದರೆ, ಎರಡೂ ಘಟನೆಗಳೂ ನಗಣ್ಯ.
    ಏಕೆಂದರೆ ಯಾರೊಬ್ಬನ ಪರವಾಗಿಯೂ ಇನ್ನೊಬ್ಬರು “ಅವನಿಗೆ ಅವಮಾನವಾಗುತ್ತಿದೆ” ಎಂದು ತೀರ್ಮಾನಿಸಲಾಗದು!

    ಉತ್ತರ

  17. ರೇಣುಕಾ ನಿಡಗುಂದಿ
    ಜನ 17, 2011 @ 16:11:45

    ಅಕ್ಷರ ಅವರ ಲೇಖನಗಳನ್ನು ’ದೇಶಕಾಲ’ದಲ್ಲಿ ಓದಿ ಅಭಿಮಾನಪಟ್ಟಿದ್ದ ನನಗೆ ಹರಕೆ -ಹರಾಜಿನ ವಿಷಯದ ಕುರಿತು ಅವರ ಅವಲೋಕನ ಒಪ್ಪಿಗೆಯಾಗಲಿಲ್ಲ. ಮೊದಲನೆದಾಗಿ ಎರದು ವಿಭಿನ್ನ ಘಟನೆಗಳನ್ನು ತಳಕುಹಾಕಿ ಹರಕೆ ವಿಷಯ ತೀರಾ ನಗಣ್ಯವೆಂದೂ, ಐಪಿಎಲ್ ಹರಾಜನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡಿರುವಂತೆಯೂ ತೋರುವ ಅವರ ವಿಚಾರಗಳು ಅಪಾಯಕರ ರೀತಿಯಲ್ಲಿವೆ. ಕಾತ್ಯಾಯನಿಯವರ ವಿಚಾರಗಳನ್ನು ನಾನೂ ಕೂಡ ಒಪ್ಪುತ್ತೇನೆ. ಕ್ರಿಕೆಟ್ ನನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಲ್ಲ. ಕ್ರಿಕೆಟ್ ಮನಸ್ಸಿಗೆ ಉಲ್ಲಾಸನೀಡುವ ಕ್ರೀಡೆಯಾಗಿರದೇ ಬಹಳಷ್ಟು ಹಣಕಾಸು -ವ್ಯವಹಾರ ಬ್ರಷ್ಟಕಾರ್ಯಗಳ ಕಣಜವಾಗಿದೆ. ದೇವರು-ದೇವಸ್ಥಾನ , ಧಾರ್ಮಿಕ ನಂಬುಗೆಗಳು ನಮ್ಮ ಪರಂಪರೆಯಲ್ಲಿ ಅವಿಭಾಜ್ಯವಾದವು. ನಮ್ಮ ಜೀವನ ರೀತಿ ಕೂಡ. ಅಮಾನವೀಯಕರ ಬೆತ್ತಲೆಸೇವೆ, ದೇವದಾಸಿ ಪದ್ಧತಿಗಳ ನಿರ್ಮೂಲವಾದಂತೆ (ಬಹಳಷ್ಟು ಪ್ರಮಾಣದಲ್ಲಿ ), ಎಂಜಲೆಲೆಯ ಉರುಳುಸೇವೆ ಕೂಡ ಖಂಡನೀಯ ಮತ್ತು ಅಮಾನವೀಕರ. ಇಂಥ ಹರಕೆಯ ನಿರ್ಮೂಲವಾಗಬೇಕು. ಮುಂದೊಂದು ದಿನ ಕ್ರಿಕೆಟ್ ತಾರೆಗಳ ಚಡ್ಡಿ-ಬನಿಯಾನ್ ಗಳೂ ಹರಾಜಿಗೆ ಬರಬಹುದು, ಕೊಳ್ಳುವವರೂ ಇದ್ದಿರಬಹುದು ಬಿಡಿ.

    ಉತ್ತರ

  18. naganna
    ಜನ 17, 2011 @ 15:42:15

    It is quite natural that (Some) found the article very pleasing. Those who does not have the first hand experience of untouchability of any sort will enjoy such writings as ‘tumba ishtavada lekhana’. They can not think the otherside of avamana. In South Kanara, there is one practice of Ajalu. Some Bunt scholars call is as social practice prevailed in primitive tribes like Koragas and should be preserved.

    ಉತ್ತರ

  19. savitri
    ಜನ 17, 2011 @ 11:22:57

    Namma deshada Bhikhsukanannu bekaadaru pareekshisi nodi. Avanallu saha manaapamanada arivu idde irutte. Sandeepannanavaru abhiprayapattante kelavu moodha nambikegalu aapatkaaladalliddavarige aashakiranavennuvadu oppikolluva vichaara. Haageye prastuta badalavanegalige olagagutta saguttiruva saamajika arthika vyavasthyeyalli Kricket aatagaarara haraju prakriyeyu kooda ondu badalavaneyaste. Baruva badalavanegalannu yaava reeti sweekarisutteve embudu badalavaneya kshetrada nikatavartigaligu, aa kshetrada horagiruva samudaayada janategu holisi nodidare vyatyasa kandu baruttade. e sukshma parikalpanegala vishleshane psychologist, economist, sociologist, writers, modaladavara prakara vibhinna vyakhyanakke olagaguttave.

    ಉತ್ತರ

  20. ಜೋಗಿ
    ಜನ 17, 2011 @ 09:51:14

    ಅಕ್ಷರ ಅನಿಸಿಕೆ ಇಷ್ಟವಾಯಿತು.
    ಇವತ್ತು ಯಾವುದು ಮೂಢನಂಬಿಕೆ, ಯಾವುದು ಅವಮಾನ, ಯಾವುದು ಶ್ರೇಷ್ಠ ಅನ್ನುವುದನ್ನು ನಿರ್ಧಾರ ಮಾಡುವುದು ಪತ್ರಿಕೆಗಳು ಮತ್ತು ಚಾನಲ್ಲುಗಳು. ಮೀಡಿಯಾಕ್ಕೆ ಆ ಹಕ್ಕು ಕೊಟ್ಟವರು ಯಾರು? ಮೀಡಿಯದಲ್ಲಾದರೂ ಅಂಥ ನಿರ್ಧಾರ ಕೈಗೊಳ್ಳಬಹುದಾದ ಸ್ವೋಪಜ್ಞರು ಇದ್ದಾರಾ? ಇದು ಕಂದಾಚಾರ, ಇದು ಅಂಧಶ್ರದ್ಧೆ, ಇದು ಮೌಢ್ಯ ಎಂದು ಒದರಿ ಅವೂ ಕೂಡ ಸುಮ್ಮನಾಗುತ್ತವೆ. ಮೀಡಿಯಾಗಳಿಗೆ ಅವು ಆ ಕ್ಷಣಕ್ಕೊಂದು ಸುದ್ದಿ ಮಾತ್ರ.
    ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.
    ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಜಾತ್ರೆಯಲ್ಲಿ ಮಗುವನ್ನು ಅಷ್ಟೆತ್ತರದಿಂದ ಕೆಳಗೆಸೆಯುವ ಆಚರಣೆ ಪ್ರಸಾರವಾಗುತ್ತಿತ್ತು. ವೈದ್ಯರೊಬ್ಬರು ಮಕ್ಕಳನ್ನು ಅಷ್ಟು ಎತ್ತರದಿಂದ ಎಸೆಯುವುದು ಅಪಾಯಕಾರಿ ಎಂದು ಹೇಳಿಕೆ ಕೊಡುತ್ತಿದ್ದರು. ಅದರ ಪರಿಣಾಮಗಳ ಬಗ್ಗೆ ಅವರಿಗ ಗೊತ್ತಿತ್ತೇ, ಎಷ್ಟೋ ವರ್ಷಗಳಿಂದ ನಡೆಯುತ್ತಿರುವ ಆಚರಣೆ ಅದು. ಐವತ್ತು ವರ್ಷದ ಹಿಂದೆ ಹಾಗೆ ಎಸೆಯಲ್ಪಟ್ಟವರು ಯಾರು, ಅವರು ಹೇಗಿದ್ದಾರೆ. ಅವರ ಮೇಲೆ ಅದರಿಂದ ಯಾವ ದುಷ್ಪರಿಣಾಮ ಆಗಿದೆ ಅನ್ನೋದನ್ನು ಅಧ್ಯಯನ ಮಾಡುತ್ತೀರಾ.. ಇಲ್ಲ, ಹೋಗಲಿ ಈ ವರ್ಷ ಮೇಲಿಂದ ಕೆಳಗೆ ಎಸೆಯದ ಒಂದೇ ಒಂದು ಮಗು ಮುಂದಿನ ಒಂದು ವರ್ಷದಲ್ಲಿ ಏನೇನೋ ಸಮಸ್ಯೆ ಎದುರಿಸಿತು ಎಂದು ಫಾಲೋ ಅಪ್ ಮಾಡಿದ್ದೀರಾ. ಅದೂ ಇಲ್ಲ. ಆ ಕ್ಷಣದ ತೆವಲಿಗ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತಿವೆ.
    ನಾವು ಏನು ಮಾಡಬೇಕು, ಯಾವುದು ಮೌಢ್ಯ, ಯಾವುದು ಸತ್ಯಂಪ್ರದಾಯ, ನಾನು ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪೂಜಸಬೇಕು ಅನ್ನುವುದನ್ನು ಮೀಡಿಯಾ ನಿರ್ಧಾರ ಮಾಡುವಂತಾಗಿರುವುದು ಇಂದಿನ ಮುಖ್ಯ ಸಮಸ್ಸೆ. ಇದರಿಂದಾಗಿ ಪ್ರತಿಯೊಂದೂ ಮೀಡಿಯಾವನ್ನು ಓಲೈಸುವ ಕ್ರಿಯೆಯಷ್ಟೇ ಆಗಿಬಿಟ್ಟಿದೆ. ಚಿಂತನೆಯಲ್ಲಾಗಲೀ, ಕ್ರಿಯೆಯಲ್ಲಾಗಲೀ ಒರಿಜಿನಾಲಿಟಿ ಕಾಣಿಸದು.
    ನನಗೆ ಪತ್ರಿಕೆ ಬೇಕಾಗಿರುವುದು ಸುದ್ದಿಗೆ ಮಾತ್ರ. ನನ್ನನ್ನು ತಿದ್ದುವುದಕ್ಕೋ ಬುದ್ಧಿವಂತನನ್ನಾಗಿ ಮಾಡುವುದಕ್ಕೋ ಅಲ್ಲ. ಈಗಿನ ಪತ್ರಿಕರ್ತರು, ಅದರಲ್ಲೂ ಇಂಗ್ಲಿಷ್ ಪತ್ರಕರ್ತರು ತಾವು ಸರ್ವಜ್ಞರು ಅಂದುಕೊಂಡಂತಿದೆ. ಆದರೆ, ನಾವು ಪತ್ರಕರ್ತರು ನೆನಪಿಬೇಕಾದ ಸಂಗತಿಯೊಂದಿದೆ. ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ ಅದನ್ನು ಯಾರು ವರದಿ ಮಾಡಿದರು ಅನ್ನುವುದಲ್ಲ.

    ಉತ್ತರ

  21. P. Bilimale
    ಜನ 17, 2011 @ 09:44:41

    ಅಕ್ಷರ ಅವರ ಲೇಖನ ಓದಿ ತುಂಬಾ ನಿರಾಶೆಯಾಯಿತು. ‘ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ. ಬತ್ತಲೆ ಸೇವೆ ನಿಂತು ಹೋದಂತೆ ಎಂಜಲು ಎಲೆಯಮೇಲೆ ಹೊರಳುವುದು ನಿಲ್ಲಬೇಕು.

    ಉತ್ತರ

  22. ಸುದರ್ಶನ್
    ಜನ 17, 2011 @ 09:33:40

    ಅಕ್ಷರ ಕೆ.ವಿ ಮಾನಾವಮಾನದ ಹಂದರದಲ್ಲಿ ಮಡೆಸ್ನಾನ ಹಾಗು ಐಪಿಲ್ ಆಟಗಾರರ ಹರಾಜನ್ನು ನೋಡಿರುವುದು ಭಿನ್ನವಾಗಿದೆ. ಆ ಭಿನ್ನತೆಯನ್ನು ಮೀರಿ ನೋಡಿದರೆ ಕೆಲವು ಎಡವಟ್ಟುಗಳು ಕಾಣುತ್ತವೆ.

    ೧. ಮಡೆಸ್ನಾನವಾಗಲೀ, ಐಪಿಲ್ ಹರಾಜಾಗಲಿ “ಅವಮಾನ”ದ ಚೌಕಟ್ಟಿನಲ್ಲಿಟ್ಟು ನೋಡುವುದಕ್ಕಿಂತ ಬೇರೆಯಾಗಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಅನಿಸುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ. ಅದಕ್ಕಿಂತ ಮೊದಲು ಸ್ಪಷ್ಟಪಡಿಸಬೇಕಾದುದು: ಅವೆರಡನ್ನೂ “ಅವಮಾನ”ದ ತಕ್ಕಡಿಯಲ್ಲಿಟ್ಟು ನೋಡಿದರೆ ಅವಕ್ಕಿರುವ ಇನ್ನುಳಿದ ಮುಖ್ಯವಾದ ಆಯಾಮಗಳು ತಪ್ಪಿಹೋಗಬಾರದೆನ್ನುವ ಇಚ್ಛೆ ಅಷ್ಟೆ.

    ೨. ಮಡೆಸ್ನಾನವನ್ನು “ಅವಮಾನ”ವಾಗಿ ನೋಡುವ ವಿಚಾರವಂತರು, ಐಪಿಎಲ್ ಹರಾಜನ್ನು ನೋಡುವುದಿಲ್ಲ ಎಂಬುದು ಅಕ್ಷರರವರ ಅಂಬೋಣವಷ್ಟೆ. ಅವರು ಅವೆರಡನ್ನೂ ಒಟ್ಟಿಗೆ ನೋಡಿದ ಮಾತ್ರಕ್ಕೆ ಎಲ್ಲ ವಿಚಾರವಂತರೂ ಹಾಗೆಯೇ ನೋಡಿ, ಐಪಿಎಲ್ ಹರಾಜನ್ನು “ಅವಮಾನ”ವೋ ಅಲ್ಲವೋ ಎಂದು ಪರಿಗಣಿಸಬೇಕಿಲ್ಲ ಅಲ್ಲವೆ? ಅಲ್ಲದೆ, ಎಲ್ಲ ವಿಚಾರವಂತರೂ ಹಾಗೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಎರಡನ್ನೂ “ಅವಮಾನ”ಕರವಾಗಿ ನೋಡುವ ಹಲವು ಮಂದಿ ಇದ್ದಾರೆ (ಹಾಗೆ ನೋಡುವುದು ಸರಿಯೋ ತಪ್ಪೋ). ನನಗೆ ಕೆಲವರು ವಯ್ಯಕ್ತಿಕವಾಗಿ ಗೊತ್ತಿದ್ದಾರೆ. ಅವರು ಪತ್ರಿಕೆ/ಟಿವಿಯಲ್ಲಿ ಬರೆದಿಲ್ಲ/ಬಂದಿಲ್ಲ ಎಂದ ಮಾತ್ರಕ್ಕೆ ಅಂತಹವರು ಇಲ್ಲ ಎಂದು ಪರಿಗಣಿಸುವುದು ಸರಿಯೆ? ಟಿವಿ/ಪತ್ರಿಕೆಯಲ್ಲಿ ಬರೆಯುವವರು ಮಾತ್ರ ವಿಚಾರವಂತರೆನಿಸಿಕೊಳ್ಳುತ್ತಾರೆಯೆ? (ಅಥವಾ ಅಕ್ಷರರು ಬರೇ ಟಿವಿ ವಿಚಾರವಂತರನ್ನು ಗುರಿಯಾಗಿಟ್ಟುಕೊಂಡಿದ್ದಾರೆಯೆ? ಅದು ಸಾಧುವೆ?)

    ೩. ಮಡೆಸ್ನಾನವನ್ನು “ಅವಮಾನ”ಕರ ಅನಿಸಲು ಅದು ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ’ ಎಂಬುದೇ ಕಾರಣವಾಗಬೇಕಾಗಿಲ್ಲ. ಬದಲಾಗಿ ಮಧ್ಯಯುಗದ ಹಲವು ಮನಃಸ್ಥಿತಿಗಳನ್ನು ಮನುಷ್ಯ ತನಗೆ ಉಪಯೋಗವಾಗುತ್ತದೆ ಎನ್ನುವ ಕಾರಣಕ್ಕೆ ಉಳಿಸಿಕೊಂಡೂ ಇದ್ದಾನೆ. ಅದನ್ನು ನೀವು ಕಾನೂನು, ವ್ಯವಾಹರ ಹಾಗು ಕಲೆಗಳಲ್ಲಿ ಇಂದಿಗೂ ನೋಡಬಹುದು. ನಮ್ಮ ಆಧ್ಯಾತ್ಮದ ಹಲವು ಸಂಗತಿಗಳು ಅಂತಹ ಒಂದು ಪಳೆಯುಳಿಕೆಯೇ. ಅದನ್ನು ಪಕ್ಕಕ್ಕಿಟ್ಟು Rationality ಹಾಗು ಸಮಾನತೆಯ ಹಂದರದಲ್ಲಿ ಮಡೆಸ್ನಾನವನ್ನು ಖಂಡಿತವಾಗಿಯೂ ಅವಲೋಕಿಸಬಹುದು. (ಬಹುಶಃ ಅಕ್ಷರರಿಗೆ ಅದು ಗೌಣ ಅನಿಸಿರಬಹುದು) Rationality – ಮಡೆಸ್ನಾನ ಚರ್ಮರೋಗ ನಿವಾರಕ ಎಂಬ ತಿಳುವಳಿಕೆಯನ್ನು ಪ್ರಶ್ನಿಸುತ್ತದೆ. ನಮಗೆ ತಿಳಿದಿರುವ ಎಲ್ಲ ಮಡೆಸ್ನಾನಗಳಲ್ಲೂ “ಬ್ರಾಹ್ಮಣರ ಎಂಜಲೆಲೆಯ ಮೇಲೇ ಉರುಳಾಡುತ್ತಾರೆಂಬ” ಅಸಮಾನತೆ ಅಕ್ಷರರನ್ನು ಕಾಡಿಯೇ ಇಲ್ಲ ಎನ್ನುವುದು ಆಶ್ಚರ್ಯ. ಹಾಗಾಗಿಯೇ ಮಡೆಸ್ನಾನವನ್ನು ಮೂರನೆಯವರ “ಅವಮಾನ”ದ ಮೂಲಕ ಪರೀಕ್ಷಿಸುತ್ತಿದ್ದಾರೇನೋ ಅಥವಾ ‘ಅವಮಾನ’ವನ್ನು ಈ ಎರಡು ಬಿಂದುವಿನ ನಡುವೆ ಚಿತ್ರಿಸಲು ಹವಣಿಸುತ್ತಿದ್ದಾರೇನೋ. “ಅವಮಾನ” ಎಂಬುದನ್ನು ಸುಲಭದಲ್ಲಿ define ಮಾಡಲಾಗದ್ದು ಎಂಬುದು ಅವರ ಮಾತಿನಲ್ಲೇ ತಿಳಿಯುತ್ತದೆ ಕೂಡ. ಹಾಗಾಗಿಯೇ ಅದೊಂದು ಪಲಾಯನವಾದೀಯ ನಿಲುವಿರಬಹುದೆ ಎನಿಸುತ್ತದೆ?

    ೪.ಅಕ್ಷರರು ಹೇಳಿರುವಂತೆ ಐಪಿಎಲ್ ಹರಾಜು ಕೂಡ ನಮ್ಮನ್ನು ಚಿಂತೆಗೆ ಹಚ್ಚಿಸಲೇ ಬೇಕು – ಆದರೆ “ಅವಮಾನ” ಎಂಬ ಕಾರಣಕ್ಕೆ ಅಲ್ಲ. ಮೊದಲನೆಯದಾಗಿ, ಅಕ್ಷರರು ರೋಮನರ “ಹೋರಿಕಾಳಗದ ಆಟಗಾರರನ್ನು ಮತ್ತು ಗುಲಾಮರನ್ನೂ ಸ್ತ್ರೀಯರನ್ನೂ ಇದೇ ಬಗೆಯಲ್ಲಿ ಹರಾಜು ಹಾಕುತ್ತಿದ್ದರೆಂದು ಪ್ರಾಥಮಿಕ ಇತಿಹಾಸದ ಪುಸ್ತಕಗಳೂ ಹೇಳುತ್ತವೆ.” ಎನ್ನುವ ಆ ತಿಳವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎನಿಸುತ್ತದೆ. “ಹರಾಜು” ಎಂಬ ಪದ ಮಾತ್ರವೇ ಅವರನ್ನು ದಿಕ್ಕು ತಪ್ಪಿಸಿದಂತಿದೆ. ರೋಮನರ ಕಾಲದ ಹೋರಾಟಗಾರ/ಗುಲಾಮ/ಸ್ತ್ರೀಯರ (ಒಟ್ಟಲ್ಲಿ ಗುಲಾಮರ) ಹರಾಜಿನಲ್ಲೂ ಹಾಗು ವಸಾಹತಿನ ಗುಲಾಮರ ಹರಾಜಿನಲ್ಲೂ ಗುಲಾಮರಿಗೆ ಆ ಹರಾಜಿನಿಂದ ಯಾವುದೇ ಲಾಭವಿರಲಿಲ್ಲ. ಹರಾಜಿನಲ್ಲಿ ಗೊತ್ತಾದ ಮೊತ್ತ ಅವರಿಗೆ ಸಂಬಂಧವಿರುತ್ತಿರಲಿಲ್ಲ. ಹಣ ಒಬ್ಬ ಒಡೆಯನ ಕೈಯಿಂದ ಇನ್ನೊಬ್ಬ ಒಡೆಯನ ಕೈಗೆ ಹೋಗುತ್ತಿತ್ತೇ ವಿನಹ ಗುಲಾಮರ ಕೈಗೆ ಬರುತ್ತಿರಲಿಲ್ಲ. ಕುರಿ ದನಗಳ ಹರಾಜಿನಲ್ಲಿಯೂ ಕೂಡ ಅಷ್ಟೆ. ಆದರೆ ಐಪಿಎಲ್ ಹರಾಜಿನಲ್ಲಿ ದುಡ್ಡು ದಕ್ಕುವುದು ಆಟಗಾರನಿಗೆ (ಅಕ್ಷರರು ಸಮಾನಾಂತರಗೊಳಿಸಿರುವ ಎಮ್ಮೆದನ/ಗುಲಾಮರಿಗೆ!). ಇದೊಂದು ಮುಖ್ಯ ವ್ಯತ್ಯಾಸವಲ್ಲವೆ? ರೋಮನರ “ಹರಾಜನ್ನು” ಹಾಗು ವಸಾಹತಿನ “ಹರಾಜನ್ನು” ಐಪಿಎಲ್ಲಿನ ಹರಾಜಿಗೆ ಹೋಲಿಸುವುದು ತೀರ ತಪ್ಪಾಗಿ ತೋರುತ್ತದೆ. ಇದನ್ನು ಅಕ್ಷರರು ಗಮನಿಸಿಲ್ಲವೆ? ಐಪಿಎಲ್ಲಿನ ಹರಾಜು ನಮ್ಮ ಸಮಾಜದ ಮೇಲೆ ಮಾಡುತ್ತಿರುವ ಹಲವು ಬೇರೆ ತೊಂದರೆಗಳು ಇವೆ. ಟಿವಿ/ಪತ್ರಿಕೆಗಳಲ್ಲಿ ಅದರದೇ ಸುದ್ದಿ ತುಂಬಿ ಹೋಗಿ ಬೇರೆಲ್ಲ ಗೌಣವಾಗುವತ್ತದೆ. ಟಿವಿ ಜಾಹಿರಾತಿಗೆ ಸುರಿಯುವ ಹಣದಿಂದಾಗಿ ನಮಗೆ ದಕ್ಕುವ ಸುದ್ದಿ ಸಾರಾಂಶಗಳಲ್ಲಾಗುವ ಕಡಿತ ಹಾಗು ವ್ಯತ್ಯಯಗಳು ಚಿಂತಾಜನಕ. ಹೀಗೆ ಪಟ್ಟಿ ಬೆಳೆಸಬಹುದು. ಆದರೆ “ಅವಮಾನ” ಎಂದು ನೋಡುವ ಸರಳೀಕರಣದಿಂದ ಈ ಎಲ್ಲ ಸಂಗತಿಗಳು ಹಿಂದಕ್ಕೆ ಸರಿಯುವ ಅಪಾಯವೇ ಹೆಚ್ಚು.

    ೫. ಚಿತ್ರಕೃತಿಗಳ ಹರಾಜು ನಮಗೆ ಸರಿ ಅನಿಸುತ್ತಿದೆಯಲ್ಲಾ ಎಂಬ ಅಕ್ಷರರ ಯೋಚನೆ ಸರಿಯಾದುದೇ. ಆದರೆ ಬಗ್ಗೆ ಕೂಡ ಈಗೀಗ ಚರ್ಚೆ ಶುರುವಾಗಿರುವುದು ಅಕ್ಷರರಿಗೆ ಗೊತ್ತಿರಬಹುದು. ಆಸ್ಟ್ರೇಲಿಯಾದಲ್ಲಿ ಚಿತ್ರಕೃತಿಗಳ ಹರಾಜಿನ ಫಲ ಕೃತಿಗಾರನಿಗೆ ತಲುಪುತ್ತಿಲ್ಲವೆಂಬ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಆಸ್ಟ್ರೇಲಿಯಾದ ಮೂಲನಿವಾಸಿಗಳ ಕೃತಿಗಳನ್ನು ಕಡಿಮೆ ಬೆಲೆಗೆ ಕೊಂಡು ಯೂರೋಪು ಅಮೇರಿಕಾಗಳಲ್ಲಿ ಕೋಟ್ಯಂತರ ಡಾಲರುಗಳಿಗೆ ಮಾರಾಟವಾಗುವುದು ಗೊತ್ತಿರುವ ಸಂಗತಿಯಷ್ಟೆ. ಹಾಗಾಗಿ ಆಸ್ಟ್ರೇಲಿಯಾದಲ್ಲಿ ಒಂದು ಕಾನೂನು ತರಲು ಹವಣಿಸುತ್ತಿದ್ದಾರೆ. ಚಿತ್ರಕೃತಿಯ ಪ್ರತಿ ಹರಾಜು/ಮಾರಾಟದಲ್ಲಿ ಶೇಕಡಾವಾರು ಕೃತಿಗಾರನಿಗೆ ನಿರ್ದಿಷ್ಟ ವರ್ಷಗಳವರೆಗೆ ತಲುಪವುದು ಖಡ್ಡಾಯ ಮಾಡಬೇಕೆಂದು ಯೋಚಿಸುತ್ತಿದ್ದಾರೆ. ಎಲ್ಲ ಕಡೆಯೂ ಈ ಕಾನೂನು ಬರುವುದು ಹೆಚ್ಚುಕಡಿಮೆ ಅನಿವಾರ್ಯವೇನೋ ಅನಿಸುತ್ತಿದೆ. ಹಾಗಾಗಿ ಹರಾಜಿನ ರೂಪವೂ ಬದಲಾಗುತ್ತಿದೆ. ಒಂದು ಪದಕ್ಕೆ ರೋಮನ್ನರ ಕಾಲದ ಯಾ ವಸಾಹತುವಿನ ಕಾಲದ ಅರ್ಥವನ್ನು ಇಟ್ಟುಕೊಂಡೇ ನೋಡುವುದು ಸರಿಯಲ್ಲ ಹಾಗು ಅದರಿಂದ ತೀರ ಎಡವಟ್ಟಾಗುವ ಸಾಧ್ಯತೆಯೇ ಹೆಚ್ಚು.

    ೬. ಕೊನೆಯದಾಗಿ, ಹರಾಜನ್ನು ಅರ್ಥೈಸುವುದರಲ್ಲೇ ಎಡವಿರುವುದರಿಂದ, ಹರಕೆ ಹಾಗು ಹರಾಜನ್ನು ಒಟ್ಟಿಗೆ ನೋಡುವ, ಅವೆರಡನ್ನೂ ‘ಅವಮಾನ’ದ ಚೌಕಟ್ಟಿನಲ್ಲಿಟ್ಟು ನೋಡುವ ಕೆಲಸವೇ ಅರ್ಥ ಕಳೆದುಕೊಳ್ಳುತ್ತದೆ. ಅವೆರಡನ್ನೂ ಬೇರೆ ಹಂದರದಲ್ಲಿಟ್ಟು ನೋಡುವುದು ಮುಖ್ಯ ಹಾಗು ಅಗತ್ಯ. ಹಾಗು ಮಾನಾವಮಾನವನ್ನು ಪ್ರತ್ಯೇಕವಾಗಿ ಅಥವಾ ಬೇರೆ ಯಾವುದಾದರೂ ಚೌಕಟ್ಟಿನಲ್ಲಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗಬಹುದು.

    ಉತ್ತರ

  23. ಮಂಜಣ್ಣ
    ಜನ 17, 2011 @ 08:21:31

    ಶ್ರೀಯುತ ಅಕ್ಷರ ಕೆ.ವಿ.ಅವರ analysis, ತಮ್ಮಲ್ಲಿ ಅಡಗಿರುವ (edited) ವಿಕೃತಿಯ ಅನಾವರಣ ಅಷ್ಟೇ. ಕಳೆದ ತಮ್ಮ ‘ತಿರುಗಾಟ’ದಲ್ಲಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ನ್ನು ಟೀಕಿಸುವ ಮತ್ತು ಕಾರಂತರ ‘ಬೆಟ್ಟದಜೀವ’ವನ್ನು ಶ್ರೇಷ್ಠೀಕರಿಸುವ ಕೆಲಸವನ್ನು ಮಾಡಿದ್ದರು. ಪ್ರಜಾವಣಿ ಮತ್ತು ಮಯೂರ ಪತ್ರಿಕೆಗಳು ಶ್ರೀಯುತರಿಗೆ ಬರಹ, ಅಂಕಣಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸರಿಯಷ್ಟೆ. ಇತ್ತೀಚೆಗೆ ಸಾಪ್ತಾಹಿಕ ಪುರವಣಿ ‘ದೇಶಕಾಲ’ಕ್ಕೆ ತತ್ತರಿಸಿ ತನ್ನ ಮೂಲ ಆಶಯಕ್ಕೆ ದಕ್ಕೆತರುತ್ತಿದೆ. ಜಾತ್ಯಾತೀತರೆಂಬ ಸೋಗ ತೊಟ್ಟುಕೊಂಡಿರುವ ಇಂತವರಿಂದ ಸಮಾಜಕ್ಕೆ ಹೆಚ್ಚು ಅಪಾಯ. ಪ್ರಜಾವಾಣಿ ಎಚ್ಚರವಹಿಸಲಿ.

    ಉತ್ತರ

  24. ಎಚ್ಚೆಸ್ವಿ
    ಜನ 17, 2011 @ 05:51:12

    ತುಂಬ ಇಷ್ಟವಾದ ಲೇಖನ.

    ಉತ್ತರ

  25. ಕುಮಾರ
    ಜನ 16, 2011 @ 23:39:32

    ಲೇಖನ ಈಗಿನ ಕಾಲಕ್ಕೆ ಸರಿಯಾಗಿದೆ

    ಉತ್ತರ

  26. Vasanth
    ಜನ 16, 2011 @ 22:42:24

    Very interesting comparison. IPL auction should disturb the minds of sensitive people. But it is other way around. The society expect their kith and kin should be sold in the market. So that they can feel proud themselves.
    The act in kuki subramanya is though individual faith. The society must rise its voice against all superstitious practices.

    ಉತ್ತರ

  27. ಕಾತ್ಯಾಯಿನಿ
    ಜನ 16, 2011 @ 22:22:25

    Very funny analysis. ಎರಡು ಘಟನೆಗಳನ್ನು compare ಮಾಡುವುದು ಸರಿಯಲ್ಲ. ಕ್ರಿಕೆಟ್ ಆಟಗಾರರ ಹರಾಜು ನನ್ನ ಪ್ರಕಾರ ಒಂದು commercial event ಅಷ್ಟೆ. ಅದು ಈಗಿನ ಗ್ಲೋಬಲೈಸೇಷನ್ ನ ಪರಿಣಾಮ. ಅದು ಹೇಗೆ ಒಂದು ವ್ಯಕ್ತಿಯನ್ನೂ , ಒಂದು ಸರಕಿನಂತೆ ನೋಡುತ್ತೆ ಎಂಬುವುದಕ್ಕೆ ಇದು ಉದಾಹರಣೆಯಷ್ಟೆ. ಕ್ರಿಕಟಿಗರ ಹರಾಜು ಪ್ರಕ್ರಿಯೆ, ಆ ಆಟಗಾರರಿಗೆ ಆಗುವ ಅವಮಾನ ಅಂತ ನಾವು ಅನ್ಕೋಬಹುದು, ಆದರೇ ಆವರಿಗೆ ಹರಾಜು ಅವರು ಭಾಗವಾಗಿರುವ ಮತ್ತು ಅವರು ಅವಲಂಭಿಸಿರುವ ವ್ಯವಸ್ಥೆಯ ಅವಿಭಾಜ್ಯ ಅಂಗ. ಕ್ರಿಕಟ್ ನಮ್ಮ ಸಂಸ್ಕೃತಿಯಲ್ಲ. ನಮ್ಮ ನಂಬಿಕೆಗಳ , ನಮ್ಮ ಸಮಾಜದ ಭಾಗ ಖಂಡಿತಾ ಅಲ್ಲ. ಹಾಗಿರುವಾಗ ಕ್ರಿಕೆಟಿಗರ ಹರಾಜಿನಿಂದ ನಮ್ಮ ದೇಶಕ್ಕಾಗಲಿ ನಮಗಾಗಲಿ ಅವಮಾನ ಎಂದು ನಂಬುವುದು ಕಷ್ಟ .

    ಆದರೆ ಎಂಜಲೆಲೆ ಮೇಲೆ ಜನ ಉರುಳಿದ್ದನ್ನು, ಕ್ರಿಕೆಟಿಗರ ಹರಾಜಿಗೆ ಹೋಲಿಸಿದರೆ ಕಡಿಮೆ ಅವಮಾನಾಸ್ಪದ ಎಂದು ಸಮರ್ಥಿಸುವುದು ಎಷ್ಟು ಸರಿ. ನನಗೆ ಕ್ರಿಕಟ್ ನನ್ನ ಸಂಸ್ಕೃತಿಯ ಭಾಗವಲ್ಲ ಆದರೇ ಈ ದೇವಸ್ಥಾನ, ದೇವರು ಮತ್ತು ಆ ಭಕ್ತರು ಅವರು ನನಗೆ ನನ್ನ ಸಂಸ್ಕೃತಿಯ ಭಾಗ. ಆ ಕಾರಣಕ್ಕೆ ಎಂಜಲೆಲೆ ಸೇವೆ ಅಮಾನವೀಯ ಮತ್ತು ಹೆಚ್ಚು ಅವಮಾನಕರ ಅನಿಸುತ್ತೆ.

    ಉತ್ತರ

  28. d.c.Satyanarayana
    ಜನ 16, 2011 @ 21:55:25

    ಈ ಲೇಖನ ಸರಿಯಾದ ದಿಕ್ಕಿನಲ್ಲಿದೆ. ಲೇಖಕರ ವಿಚಾರಗಳು fresh ಆಗಿವೆ. ಇದು ನಾವೆಲ್ಲರೂ ಯೋಚಿಸಬೇಕಾದ ವಿಷಯವೇ.
    ಸತ್ಯನಾರಾಯಣ.ಡಿ.ಸಿ.

    ಉತ್ತರ

  29. Gubbachchi Sathish
    ಜನ 16, 2011 @ 21:51:14

    ಲೇಖನವೂ ದ್ವಂದ್ವದಿಂದ ಕೂಡಿದೆ ಎಂದೆನಿಸುತ್ತಿದೆ. ಅವರವರ ದೃಷ್ಟಿ ಅವರಿಗೆ.

    ಉತ್ತರ

  30. ಸಂದೀಪ್ ಕಾಮತ್
    ಜನ 16, 2011 @ 21:34:07

    ಕೆಲವೊಂದು ಸಮಸ್ಯೆಗಳು ಮನುಷ್ಯನನ್ನು ತೀರಾ ಡೆಸ್ಪರೇಟ್ ಮಾಡಿಬಿಡುತ್ತವೆ. ಚಿಕ್ಕ ವಯಸ್ಸಿನಲ್ಲೆ ಕೂದಲು ಬೆಳ್ಳಗಾದವನಿಗೆ ನೀವು ಯಾವ ಎಣ್ಣೆ ಬೇಕಾದರೂ ಕೊಟ್ಟು ’ಇದನ್ನು ಹಚ್ಚಿ ಬಿಸಿಲಲ್ಲಿ ನಿಲ್ಲು’ ಅಂದ್ರೆ ಅವನು ಖಂಡಿತಾ ಹಾಗೆ ಮಾಡ್ತಾನೆ.
    ಬಹಳಷ್ಟು ವರ್ಷಗಳಿಂದ ಮಕ್ಕಳಾಗದೆ ಇದ್ದ ಹೆಂಗಸಿಗೂ ’ಆ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡು ’ ಅಥವಾ ’ಈ ದೇವಸ್ಥಾನಕ್ಕೆ ಹೋಗಿ ಮಾಡು ’ ಅಂದ್ರೆ ಪಾಪ ಅದನ್ನು ಆಕೆ ಮಾಡೋ ಸಾಧ್ಯತೆಗಳೇ ಹೆಚ್ಚು.

    ತಲೆ ತುಂಬಾ ಕೂದಲಿರುವವನಿಗೆ ಮೊದಲನೆಯವನು ಮಾಡೋದು ಮೂಢನಂಬಿಕೆ !

    ಮನೆ ತುಂಬಾ ಮಕ್ಕಳಿರುವ ಹೆಂಗಸಿಗೂ ಎರಡನೆಯವಳು ಮಾಡೋದು ಮೂಢನಂಬಿಕೆ !

    ಆದರೆ ಆ ಇಬ್ಬರಿಗೂ ಅದೊಂದು ಆಶಾ ಕಿರಣ ! A ray of hope !

    ಈ ಮಡೆ ಸ್ನಾನವೂ ಇಂಥದ್ದೇ ಒಂದು ನಂಬಿಕೆ ಮೂಢ ನಂಬಿಕೆಯ ಮಧ್ಯ ಬರುತ್ತೆ!

    ಇನ್ನು ಐಪಿ ಎಲ್ ದು ಇನ್ನೊಂದು ಸಮಸ್ಯೆ. ಹರಾಜು ಹಾಕುವವರಿಗೂ ಇದು ಅವಮಾನ ಅಂತ ಅನಿಸಿಲ್ಲ ! ಹರಾಜು ಹಾಕಿಸಿಕೊಂಡವರಿಗೂ ಅಂಥದ್ದೇನೂ ಅನಿಸಿಲ್ಲ! ಆದರೆ ನಮಗನಿಸಿದೆ.

    ಸೌರವ್ ಗಂಗೂಲಿ ಹರಾಜಗದೆ ಉಳಿದದ್ದು ಮಾನವೋ ಅವಮಾನವೋ ಇನ್ನೂ ಅರ್ಥ ಆಗ್ತಿಲ್ಲ!

    ಅವನನ್ನು ಕೇಳೋಕೇ ಹೋಗ್ಬೇಡಿ ಪ್ಲೀಸ್…

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ