ಅಭಿನಯ ತರಂಗ: ಘಟಿಕೋತ್ಸವ

ಚಿತ್ರಗಳು : ಗೌರಿ ದತ್ತು

ಅಭಿನಯ ತರಂಗ ನಾಟಕ ಶಾಲೆಯ ಘಟಿಕೋತ್ಸವ ಸಮಾರಂಭದ ಒಂದು ನೋಟ ಇಲ್ಲಿದೆ .ಚಲನ ಚಿತ್ರ ನಿರ್ದೇಶಕ ಸೂರಿ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ….
ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

ಮಲೆಗಳಲ್ಲಿ ಮದುಮಗಳು: ಎಂಥ ಚಾನ್ಸ್ ಕಳಕೊಂಡ್ರಿ ಸಾರ್..

ಬಾ ಹುಲಿಕಲ್ ನೆತ್ತಿಗೆ-14

-ಪ್ರೊ. ಶಿವರಾಮಯ್ಯ

ನಾಯಿ ತನಗೇ ಬೇಕೆಂದು ಮುಕುಂದಯ್ಯ ಒಮ್ಮೆ ಕಟ್ಟಿಹಾಕಿ ‘ಬೆಲ್ಲದ ಪಾಕ ತಿನ್ನಿಸಿದರೆ ಇನ್ನು ಬಿಟ್ಟು ಹೋಗುವುದಿಲ್ಲ’ವೆಂಬ ನಂಬಿಕೆಯ ಮೇರೆಗೆ ಬೆಲ್ಲ ಹಾಕಿದ್ದೆ. ಆದರೂ ಅದು ಕೇರ್ ಮಾಡದೆ ಹಗ್ಗ ಬಿಚ್ಚಿದ ಕೂಡಲೇ ಗುತ್ತಿಯನ್ನು ಹುಡುಕುತ್ತ ಪರಾರಿಯಾಗಿತ್ತು. ತಿಮ್ಮಿ ಗುತ್ತಿಯರಿಬ್ಬರು ಆ ದಿನ ರಾತ್ರಿ ಹುಲಿಕಲ್ಲುನೆತ್ತಿಯ ಕಾವಲು ಮಂಟಪದಲ್ಲಿ ತಂಗಿದ್ದಾಗ ಕುರ್ಕನ ಜೊತೆ ಹೋರಾಡಿ, ಅದು ಒಕ್ಕಣ್ಣನಾಗಿದ್ದರೂ ಅವನ ಸಂಗಾತಿಯಾಗಿಯೇ ಬರುತ್ತಿತ್ತು.

ಗುತ್ತಿ ಇಲ್ಲದೆ ನಾಯಿಯನ್ನು ನಾಯಿ ಇಲ್ಲದೆ ಗುತ್ತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗದು. ಕಡೆಯಲ್ಲಿ ಕಾನೂರು, ಮುತ್ತಳ್ಳಿ ಮುಂತಾದ ಕಡೆಗೆ ಹೋಗುವ ಗೌಡರೊಂದಿಗೆ ತಿಮ್ಮಿ ಮತ್ತು ಗುತ್ತಿಯರು ತುಂಗಾ ಪ್ರವಾಹವನ್ನು ದಾಟುವರಾದರೂ, ಅವನೆಷ್ಟೇ ಅಂಗಲಾಚಿದರೂ ಅಂಬಿಗ ಹುಲಿಯನನ್ನು ದೋಣಿ ಹತ್ತಿಸದಿದ್ದಾಗ, ಒಂಟಿ ಕಣ್ಣಿನ ನಾಯಿ ಈಜಲು ಹೋಗಿ ಪ್ರವಾಹದಲ್ಲಿ ಕೊಚ್ಚಿ ಹೋಗುವುದು, ಅದನ್ನು ಗುತ್ತಿಕಣ್ಣಾರೆ ಕಂಡು ಚಿಂತಾಕ್ರಾಂತನಾಗಿ ಅಸಹಾಯಕ ಸ್ಥಿತಿಯಲ್ಲಿ ಉಳಿಯುವುದು ಇತ್ಯಾದಿ ಕರುಣಾಜನಕ ದೃಶ್ಯ ಕಂಡಾಗ ಜನಪದ ಮಹಾಭಾರತದ ಸೋಗರ್ಾರೋಹಣ ಪರ್ವ ನೆನಪಾಗುತ್ತದೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಜನಪದ ಗಾಯಕಕವಿ ಬೆಟ್ಟದ ಬೀಡು ಸಿದ್ದಶೆಟ್ಟರಿಂದ ಹೇಳಲ್ಪಟ್ಟು ಪಿ.ಕೆ.ರಾಜಶೇಖರ ಅವರಿಂದ ಸಂಪಾದಿಸಲ್ಪಟ್ಟಿರುವ ಜನಪದ ಮಹಾಭಾರತದ ಸೋಗರ್ಾರೋಹಣ ಪರ್ವದಲ್ಲಿ ಧರ್ಮರಾಯನನ್ನು ಸ್ವರ್ಗಕ್ಕೆ ಕರೆತರಲು ಪರಮಾತ್ಮ ಪುಷ್ಪಕವಾಹನವನ್ನು ಕಳುಹಿಸುತ್ತಾನೆ. ಚಾರಕರು ಹಾಗೆಂದು ಹೇಳಿದ ಕೂಡಲೇ ಧರ್ಮರಾಯ ಕಡೆಯವರಿಗೂ ತನ್ನನ್ನು ಹಿಂಬಾಲಿಸಿ ಬಂದಿದ್ದ ನಾಯಿಮರಿಯನ್ನೂ ಎತ್ತಿ ಕಂಕುಳಲ್ಲಿರಿಸಿಕೊಂಡು ವಾಹನ ಹತ್ತಲು ಉಪಕ್ರಮಿಸುವನು. ಆದರೆ ದೇವದೂತರು ಆತನನ್ನು ತಡೆದು ಸ್ವಾಮಿಗಳೇ ನೀವೋಬ್ಬರಲ್ಲದೆ ಈ ನಾಯಿಮರಿಯ ಕರ್ಕೊಂಡ್ಬರಕೆ ಆಡ್ರಾಗಿಲ್ಲ ಎನ್ನುವರು.

More

ಕನ್ನಡ ಸಾಹಿತ್ಯ ಪತ್ರಿಕೆಗಳು ವಿಚಾರ ಸಂಕಿರಣ

ಭ್ರಷ್ಟ ಶ್ರೇಷ್ಟರಾರು

ಸತೀಶ್ ಆಚಾರ್ಯ


 

ಜೋಗಿ ಹೊಸ ಕಾದಂಬರಿ

‘ಜೋಗಿ ಎಲ್ಲಿ ಕಾಣಿಸ್ತಾ ಇಲ್ವಲ್ಲ?’ ಅಂತ ಕೇಳ್ತಾ ಇದ್ದವರಿಗೆ ಇಲ್ಲಿ ಉತ್ತರ ಇದೆ. ಅವರು ಅಂಡರ್ ಗ್ರೌಂಡ್ ಆಗಿದ್ದಾರೆ. ಯಾವ ಆಪಾದನೆಯೂ ಅವರ ಮೇಲಿಲ್ಲ.

ಅಂಡರ್ ಗ್ರೌಂಡ್ ಆಗಿರೋದು ಕಾದಂಬರಿ ಬರೆಯೋದಿಕ್ಕೆ, ಅಪಾರ ನಿಜಕ್ಕೂ ಕವರ್ ಪೇಜ್ ಮುಗಿಸಿ ಪ್ರಕಾಶ್ ಕಂಬತ್ತಳ್ಳಿ ಕೈಗಿತ್ತಿದ್ದಾರೆ ಅಂತ ಗೊತ್ತಾದ ಮೇಲೆ ಸೀರಿಯಸ್ ಆಗಿದ್ದಾರೆ. ಕಂಬತ್ತಳ್ಳಿ ಅವರು ಪುಸ್ತಕ ಇಲ್ಲದೆ ಹೋದರೂ ಪರವಾಗಿಲ್ಲ, ಕವರ್ ಪೇಜೇ ಬಿಡುಗಡೆ ಮಾಡಿಸ್ತೀನಿ ಅಂತ ಆವಾಜ್ ಹಾಕಿದ ಮೇಲೆ ಅಯ್ಯೋ ಇನ್ನು ನಾಲ್ಕು ದಿನ ಇದೆ ಇನ್ನಾದರೂ ಕಾದಂಬರಿ ಬರೀಲೆಬೇಕಾಗುತ್ತೆ ಅಂತ ಗೊತ್ತಾಗಿದೆ.

ಸೋ, ಜೋಗಿ ಕಾದಂಬರಿ ಖಂಡಿತಾ ಬರುತ್ತೆ. ನೀವು ಬನ್ನಿ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ. ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ..

ಜಯಶ್ರೀ ಕಾಲಂ: I love Blogging

ಹೀಗೆ ಬ್ಲಾಗ್ ಪ್ರಪಂಚವನ್ನು ಸುತ್ತಾಡ್ತಾ ಇದ್ದೆ.. ಎಷ್ಟೆಲ್ಲಾ ಬದಲಾವಣೆಗಳು, ಏನೆಲ್ಲಾ ಸಂಗತಿಗಳು :-) ನಾನು ಈ ಲೋಕಕ್ಕೆ ಎಂಟ್ರಿ ಕೊಟ್ಟು ಸುಮಾರು ಮೂರುವರ್ಷವಾಯಿತು, ಅಂದಿನಿಂದ ಇಂದಿನವರೆಗೂ ನನ್ನ ಗಮನ ಇರುವ ವಿಷಯ ದೃಶ್ಯ ಮಾಧ್ಯಮಗಳು :-) .

ಆರಂಭದಲ್ಲಿ ನಾನು ಯಾವ್ಯಾವ ಸಂಪಾದಕರು- ಪತ್ರಕರ್ತರ ಬಳಿ ನನ್ನ ಬ್ಲಾಗ್ ಲಿಂಕ್ ಕೊಟ್ಟಿದ್ದೇನೋ ಆಗ ಬ್ಲಾಗ್ ಬಗ್ಗೆ ಅವರ ಕಣ್ಣಲ್ಲಿ ಇದ್ದುದು ಸಣ್ಣ ಹೇವರಿಕೆ :-) ಯಾಕಂದ್ರೆ ಅವರು ದೊಡ್ದ ಮಟ್ಟದ ವಿಷಯಗಳನ್ನೇ ಬರೆಯುವುದು .ಇಲ್ಲದೆ ಇದ್ರೆ ಬೇರೆ ಸಾಮಾಜಿಕ ರೀತಿ, ಕಡೆಗೆ ಆಸಕ್ತಿ ತರದ ವಿಷಯ ಇಲ್ಲದ ಬ್ಲಾಗ್ , ಇದ್ಯಾವುದು ಇದು ಬ್ಲಾಗ್ ಛೀ! ಅದೂ ಟೀವಿ ಬಗ್ಗೆ ಛೇ :-)

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಹೀಗೊಂದು ಪ್ರೇಮ ಪ್ರಸಂಗ

ಸಂಜೆ ೭ ಕ್ಕೆ
ರವೀಂದ್ರ ಕಲಾಕ್ಷೇತ್ರದಲ್ಲಿ
ಕಲಾಗಂಗೋತ್ರಿ ಆಭ್ಹಿನಯಿಸುವ
ಹೀಗೊಂದು ಪ್ರೇಮ ಪ್ರಸಂಗ
ರಚನೆ ಮತ್ತು ನಿರ್ದೇಶನ : ಶ್ರೀನಿವಾಸಪ್ರಭು More

ಅರಬ್ಬರ ನಾಡಿನಲ್ಲಿ ಕಾಮಿನಿ ಕಮಲಳ ಕರುಣಾಜನಕ ಕಥೆ

-ಹೊಳೆನರಸೀಪುರ ಮಂಜುನಾಥ

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ “ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್” ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ.

“ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ, ನೀನು ಬಾರಿನಲ್ಲಿ ಕುಣಿಯುವ ನರ್ತಕಿ, ನಿನ್ನ ಕಥೆ ನಾನೇಕೆ ಕೇಳಬೇಕು?” ಎ೦ದವನ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಕಮಲ, “ನಮಗೂ ಒ೦ದು ಮನಸ್ಸಿದೆ ಸಾರ್, ಅದರಲ್ಲೂ ಸಾಕಷ್ಟು ತುಡಿತಗಳಿವೆ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ನಮಗೂ ಅರ್ಥವಾಗುತ್ತದೆ ಸಾರ್, ನೀವು ಆಗಾಗ ಬರುವುದು, ಮೂಲೆಯಲ್ಲಿ ಕುಳಿತು ಬಿಯರ್ ಹೀರುತ್ತಾ ಹಾಡುಗಳನ್ನು ಕೇಳುತ್ತಾ, ನಮ್ಮ ನಾಟ್ಯವನ್ನು ನೋಡುತ್ತಾ ಮೈಮರೆಯುವುದು, ಬಾರಿನ ಸಮಯ ಮುಗಿದ ನ೦ತರ ಸದ್ದಿಲ್ಲದ೦ತೆ ಎದ್ದು ಹೋಗುವುದನ್ನು ನಾನು ನೋಡುತ್ತಾ ಬ೦ದಿದ್ದೇನೆ, ನೀವು ಒಳ್ಳೆಯವರಿರಬಹುದೆ೦ದು ನಿಮ್ಮ ಬಳಿ ನನ್ನ ಮನದ ಮಾತುಗಳನ್ನು ಹೇಳಿಕೊಳ್ಳಬೇಕನ್ನಿಸಿತು, ಅದಕ್ಕೇ ನಿಮ್ಮನ್ನು ಭೇಟಿಯಾಗಲು ಬಯಸಿದೆ, ನಾನೇನಾದರೂ ತಪ್ಪಾಗಿ ತಿಳಿದುಕೊ೦ಡಿದ್ದಲ್ಲಿ ಈಗಲೂ ನೀವು ವಾಪಸ್ ಹೋಗಬಹುದು, ನನ್ನ ಮಾತುಗಳನ್ನು ನನ್ನ ಮನದಲ್ಲೇ ಇಟ್ಟುಕೊ೦ಡು ನಾನೂ ಹಿ೦ದಿರುಗುತ್ತೇನೆ” ಎ೦ದವಳನ್ನು ಒಮ್ಮೆ ಆಪಾದಮಸ್ತಕ ನೋಡಿ “ಸರಿ, ನಿನ್ನ ಕಥೆ ಮು೦ದುವರೆಸು” ಎ೦ದೆ. ತನ್ನ ಕೈಲಿದ್ದ ಪುಟ್ಟ ಜ೦ಭದ ಚೀಲದಿ೦ದ ಒ೦ದು ಮುದ್ದಾದ ಮಗುವಿನ ಫೋಟೊ ತೆಗೆದು ನನ್ನ ಮು೦ದಿಟ್ಟು “ಇವಳು ನನ್ನ ಮಗಳು ಕಾವ್ಯ, ಇವಳಿಗಾಗಿಯೇ ನಾನು ಬದುಕುತ್ತಿರುವುದು ಸಾರ್” ಎ೦ದಳು. ಮಾಣಿಯನ್ನು ಕರೆದು ಎರಡು ಕಾಫಿ ತರಲು ಹೇಳಿದೆ. ಮಾಣಿ ತ೦ದಿತ್ತ ಕಾಫಿಯನ್ನು ನಿಧಾನವಾಗಿ ಗುಟುಕರಿಸುತ್ತಾ ತನ್ನ ಕಥೆಯನ್ನು ಬಿಚ್ಚಿಟ್ಟಳು ಕಮಲ.

ಅವಳು ತುಮಕೂರು ಜೆಲ್ಲೆಯ ಚಿಕ್ಕನಾಯಕನ ಹಳ್ಳಿಯವಳು, ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಎಲ್ಲ ಹೆಣ್ಣು ಮಕ್ಕಳ೦ತೆ ಅವಳೂ ಸಹ ತನ್ನ ಪ್ರಾಯದಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ, ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಜೊತೆಯಲ್ಲಿ ಓದುತ್ತಿದ್ದ ನಾಯಕರ ಹುಡುಗನೊಬ್ಬನೊ೦ದಿಗೆ ಪ್ರೇಮಾ೦ಕುರವಾಗಿದೆ. ಲಿ೦ಗಾಯಿತ ಸಮುದಾಯಕ್ಕೆ ಸೇರಿದ ಅಪ್ಪ ಅಮ್ಮ ಇವರ ಪ್ರೀತಿಗೆ ಒಪ್ಪದಿದ್ದಾಗ ಅವನೊ೦ದಿಗೆ ಬೆ೦ಗಳೂರಿಗೆ ಓಡಿ ಬ೦ದಿದ್ದಾಳೆ. ಪ್ರೀತಿಸಿದವನನ್ನು, ಅವನ ಪ್ರೇಮದ ನುಡಿಗಳನ್ನು ಸರ್ವಸ್ವವೆ೦ದು ಭ್ರಮಿಸಿ ಹೆತ್ತವರನ್ನು ತೊರೆದು ಓಡಿ ಬ೦ದವಳಿಗೆ ವಾಸ್ತವ ಅರಿವಾಗಿದ್ದು ದೇಹದ ಬಿಸಿ ಆರಿದ ನ೦ತರವೇ! ಅಷ್ಟು ಹೊತ್ತಿಗಾಗಲೇ ಅವರ ಪ್ರೇಮದ ಫಲ ಅವಳ ಗರ್ಭದಲ್ಲಿ ಬೆಳೆಯುತ್ತಿತ್ತು. ಜವಾಬ್ಧಾರಿ ಹೊತ್ತು ತನ್ನನ್ನು ನ೦ಬಿ ಬ೦ದ ಹೆ೦ಡತಿಯನ್ನು, ಅವಳ ಹೊಟ್ಟೆಯಲ್ಲಿದ್ದ ತನ್ನ ಕೂಸನ್ನು ಸಾಕಿ ಸಲಹಬೇಕಿದ್ದ ಪ್ರೀತಿಯ ಗ೦ಡ ಅದಾಗಲೇ ಬೇರೆ ದಾರಿ ಹಿಡಿದು ಇವಳಿ೦ದ ದೂರಾಗತೊಡಗಿದ್ದ. ಅವನ ಒ೦ದೊ೦ದೇ ಅವಗುಣಗಳು ಇವಳಿಗೆ ತಿಳಿಯುತ್ತಾ ಹೋದ೦ತೆ ಭವಿಷ್ಯದ ಬಗ್ಗೆ ಚಿ೦ತಿಸಿ ಪಾತಾಳಕ್ಕೆ ಕುಸಿದು ಹೋಗಿದ್ದಳು.

More

ಡಿ ಕೆ ಚೌಟರ ‘ಮಿತ್ತಬೈಲು ಯಮುನಕ್ಕ’

ಥಾಯ್ಲ್ಯಾಂಡ್ ಗೆ ಬನ್ನಿ

Previous Older Entries

%d bloggers like this: