ಬಾಗೂರು ಚಂದ್ರು ಇನ್ನಿಲ್ಲ

ಹಿರಿಯ ಹಾಸ್ಯಲೇಖಕ ಶ್ರೀ ಬಿ ಎಸ್ ಚಂದ್ರಶೇಖರ್ (ಬಾಗೂರು ಚಂದ್ರು) ಇಂದು ಬೆಂಗಳೂರಿನಲ್ಲಿ ನಿಧನರಾದರು. ಇವರ ಹಾಸ್ಯಬರೆಹಗಳ ಮೊದಲ ಸಂಕಲನ ‘ಮದುವೆಯ ಉಡುಗೊರೆ’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿತ್ತು. ಬಾಗೂರು ಚಂದ್ರು ಅವರ ಆಯ್ದ ಬರೆಹಗಳ ಸಂಕಲನವನ್ನು ಅಂಕಿತ ಪುಸ್ತಕ ‘ಬೆಸ್ಟ್ ಆಫ್ ಬಾಗೂರು’ ಹೆಸರಿನಲ್ಲಿ ಇತ್ತೀಚೆಗಷ್ಟೆ ಪ್ರಕಟಿಸಿತ್ತು. ದೂರದರ್ಶನ ವೀಕ್ಷಕ ಸಂಶೋಧನಾ ವಿಭಾಗದ ನಿರ್ದೇಶಕರಾಗಿ ನಿವೃತ್ತರಾಗಿದ್ದ ಅವರು ಹಾಸ್ಯ ಬರಹಗಳಷ್ಟೇ ಅಲ್ಲದೆ ಸಮೂಹ ಮಾಧ್ಯಮಗಳ ಬಗೆಗೂ ಗಮನಾರ್ಹ ಕೃತಿಗಳನ್ನು ಬರೆದಿದ್ದಾರೆ.

ಮಾಹಿತಿ:  ಶ್ರೀನಿಧಿ ಟಿ ಜಿ

ಬಿ ಎಸ್ ಚಂದ್ರಶೇಖರ್ ಅವರು ಆಕಾಶವಾಣಿ, ದೂರದರ್ಶನ ಎರಡರಲ್ಲೂ ಕೆಲಸ ಮಾಡಿದವರು. ಮಾಧ್ಯಮ ಕುರಿತ ಬರವಣಿಗೆಯ ಬಗ್ಗೆ ಆರಂಭದಿಂದಲೂ ಆಸಕ್ತಿ ಇಟ್ಟುಕೊಂಡವರು. ವಿಸ್ತಾರವಾದ ಅಧ್ಯಯನ ನಡೆಸಿ ಅದಕ್ಕೆ ತಮ್ಮ ನೇರ ಅನುಭವಗಳನ್ನು ಮೇಳೈಸಿ, ಎಲ್ಲಾ ರೀತಿಯ ಸಂವಹನ ಮಾಧ್ಯಮಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ‘ಸಂವಹನ ಮಾಧ್ಯಮಗಳು’ ಕೃತಿ ರಚಿಸಿದ್ದಾರೆ. ಇವರ ಆಳವಾದ ನೋಟ ಈ ಪುಸ್ತಕದಲ್ಲಿ ಪ್ರತಿಫಲಿಸಿದೆ.

ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಈ ಪುಸ್ತಕದಲ್ಲಿ ಚಂದ್ರಶೇಖರ್ ಅವರು ಪತ್ರಿಕೆ, ರೇಡಿಯೋ, ಟೆಲಿವಿಷನ್ ಅಲ್ಲದೆ ಚಲನಚಿತ್ರ, ನೂತನ ಮಾಧ್ಯಮವಾದ ವೆಬ್ ಸೈಟ್ ವರೆಗೆ ಗಮನ ಹರಿಸಿದ್ದಾರೆ. ಸಂವಹನ, ಮಾಧ್ಯಮ ಅಧ್ಯಯನ ವಿಭಾಗವಂತೂ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ಒಳ್ಳೇ ಚೌಕಟ್ಟನ್ನು ಒದಗಿಸುತ್ತದೆ

(‘ಮೀಡಿಯಾ ಮಿರ್ಚಿ’ಯಾ ಬುಕ್ ಟಾಕ್ ನಿಂದ)

‘ಸುವರ್ಣ’ದಲ್ಲಿ ತಿಮ್ಮಕ್ಕಜ್ಜಿ

ನಿನ್ನೆ ಸುವರ್ಣ ನ್ಯೂಸ್ನಲ್ಲಿ ಸಾಲು ಮರದ ತಿಮ್ಮಕ್ಕಜ್ಜಿ ಅವರ ಜೊತೆ ರಂಗನಾಥ್ ಸರ್ ಹಾಗೂ ಗೌರೀಶ್ ಅಕ್ಕಿ ಮಾತಾಡಿದರು. ತಮ್ಮ ಊರಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಬೇಕು ಎಂದು ಸತ್ಯಾಗ್ರಹಕ್ಕೆ ಕುಳಿತು ಭಾಗಶ: ಗೆದ್ದ ತಿಮ್ಮಕಜ್ಜಿಯನ್ನು ಪ್ರಶ್ನೆ ಕೇಳುತ್ತಿದ್ದರು. ಅಜ್ಜಿ ತನಗೆ ತೋಚಿದ ಉತ್ತರ ಹೇಳ್ತಾ ಇದ್ರು. ಅಲ್ಲ ಅಜ್ಜಿ ಈ ವಯಸ್ಸಿನಲ್ಲಿ ಇದೇನು ನಿನ್ನ ಸಾಹಸ ಎನ್ನುವ ಅರ್ಥ ಬರುವ ಪ್ರಶ್ನೆ ಹಾಕಿದರು ರಂಗ ಸರ್ . ಆಗ ಅಜ್ಜಿ ಸತ್ತ ಮೇಲೂ ಹೆಸರು ಉಳಿ ಬೇಕಲ್ವ ಅಂದ್ರು ಎಲ್ಲರು ಅದಕ್ಕೆ ಹೀಗೆ ಮಾಡಿದೆ ಎಂದು ಉತ್ತರ ನೀಡಿದರು :-). ಹೆರಿಗೆ ಆಸ್ಪತ್ರೆ ನಮ್ಮೂರಾಗೆ ಬೇಕೇ ಬೇಕು ಎಂದು ಹಟಕ್ಕೆ ಕೂತ ಅಜ್ಜಿಯ ಈ ಶಕ್ತಿ ಬಗ್ಗೆ ಖುಷಿಪಟ್ಟು ರಂಗ ಮಾಷ್ಟ್ರು ಕೇಳಿದ ಪ್ರಶ್ನೆ ಇದು. ಒಟ್ಟಾರೆ ಆಕೆ ಹೇಳಿದ ಉತ್ತರಗಳು ಮನಸೋಲ್ಲಾಸ ಹೆಚ್ಚಿಸಿತು…!

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಬೌದ್ಧಿಕ ದಿವಾಳಿತನವನ್ನು ಬಿಂಬಿಸುವ ‘ಅವಮಾನ’ದ ವ್ಯಾಖ್ಯಾನ


ಮಂಜುನಾಥ ಲತಾ

ಮಾನ್ಯರೆ,

ಪ್ರಜಾವಾಣಿಯ ಜನವರಿ 16, 2011ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕೆ.ವಿ. ಅಕ್ಷರ ಅವರಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ?’ ಲೇಖನಕ್ಕೆ ನನ್ನದೊಂದು ಪ್ರತಿಕ್ರಿಯೆ.

ಅಕ್ಷರ ಅವರ ವಿಚಾರಲಹರಿ ನಮ್ಮ ಸಮಸಮಾಜದ ಕನಸು ಕಾಣುವ ಮನಸ್ಸುಗಳಿಗೆ ಮಾಡಿದ ಅವಮಾನದಂತೆಯೂ ಅಕ್ಷರರಂಥವರ ಅಕ್ಷರದ ಬೌದ್ಧಿಕತೆಗೆ ಬಡಿದಿರುವ ಪೂರ್ವಗ್ರಹದ ಬಾಧೆಯಂತೆಯೂ ಕಾಣುತ್ತಿದೆ. ತಮ್ಮ ವಿಚಾರದ ಕೊನೆಯಲ್ಲಿ ಅವರು ‘…ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ’ ಎಂದು ಹೇಳುವಲ್ಲಿಯೇ ತಾವು ಯಾವುದರ ಪರವಾಗಿದ್ದಾರೆಂಬುದನ್ನು ತೋರಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಲೇಖನದ ಆರಂಭದಲ್ಲೇ ಇದೆ. ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಯ ಮೇಲೆ ಜನರು ಉರುಳಾಡುವುದು ಅವರಿಗೆ ನಗಣ್ಯವೆನ್ನಬಹುದಾದ ಘಟನೆ. ಅವರ ಲೇಖನದ ಶೀಷರ್ಿಕೆಯೇ ಹೇಳುವಂತೆ ಅದು ಈ ಸಮಾಜದಲ್ಲಿ ನಡೆಯಬಹುದಾದ ‘ಸಹಜ’ ಕ್ರಿಯೆ. ಅವರ ಪ್ರಕಾರ ಅದು ಮನುಷ್ಯನೊಬ್ಬನಿಗೆ ಮಾಡುವ ಅವಮಾನವೇನೂ ಅಲ್ಲ; ಅಸಮಾನತೆಯನ್ನು ಮತ್ತಷ್ಟು ಉತ್ತೇಜಿಸುವ, ಪಾವಿತ್ರ್ಯ-ಅಪಾವಿತ್ರ್ಯದ ಹುಸಿಯನ್ನು ವೈಭವೀಕರಿಸುವ, ಶ್ರೇಷ್ಠ-ಕನಿಷ್ಠದ ತಾರತಮ್ಯ ಬಿತ್ತುವ, ಮೇಲು-ಕೀಳನ್ನು ಎತ್ತಿ ಹಿಡಿಯುವ ಆಚರಣೆಯಂತೆ ಅದನ್ನು ನೋಡಬೇಕಿಲ್ಲ. ಹಾಗಾಗಿ ಅವರು ಅಂತಹುದೊಂದು ಮೌಢ್ಯದ ಪರವಾಗಿದ್ದಾರೆಂದು ಹೇಳಬಹುದು.

ಚಿತ್ರ ಕೃಪೆ: ದಟ್ಸ್ ಕನ್ನಡ

ಅವಮಾನ ಎನ್ನುವುದರ ಕುರಿತೂ ಅಕ್ಷರ ಅವರು ತಮಗೆ ಗೊಂದಲವಿರುವುದಾಗಿ ಹೇಳಿಕೊಂಡಿದ್ದಾರೆ; ಇದು ತಪ್ಪೇನೂ ಅಲ್ಲ. ಯಾಕೆಂದರೆ ಅಪಮಾನವೆಂಬುದನ್ನು ಅಕ್ಷರರಂಥವರೇನೂ (ಸಾಮಾಜಿಕವಾಗಿ, ದೈಹಿಕವಾಗಿ) ಅನುಭವಿಸಿದವರಲ್ಲವಲ್ಲ! ಸ್ವತಃ ಅಪಮಾನಿತನಿಗೇ ತನಗೆ ಆಗುತ್ತಿರುವುದು ಅಪಮಾನ ಎಂದು ಗೊತ್ತಿಲ್ಲದಿರುವುದರಿಂದ ಅದು ಅವಮಾನ ಅಥವಾ ಶೋಷಣೆ ಎನ್ನಿಸಿಕೊಳ್ಳುವುದಿಲ್ಲ ಎನ್ನುವುದು ಅಕ್ಷರ ಅವರ ವಾದ. ಹಾಗಾದರೆ ಮಲ ತಿನ್ನಿಸಿಕೊಂಡ, ತಲೆಯ ಮೇಲೆ ಮಲ ಸುರಿದುಕೊಂಡ ದಲಿತರಿಗೆ, ಬೆತ್ತಲೆ ಹರಕೆ ಸಲ್ಲಿಸುವ ಹೆಣ್ಣುಮಕ್ಕಳಿಗೆ ತಾವು ಅನುಭವಿಸುತ್ತಿರುವುದು ಅವಮಾನವೆಂದು ತಿಳಿದಿಲ್ಲವಾದರೆ ಅದನ್ನು ಅಕ್ಷರ ಅವರ ಪ್ರಕಾರ ಅಪಮಾನವೆಂದು ಭಾವಿಸಕೂಡದು! ಬದಲಿಗೆ ಅದನ್ನೊಂದು ಸಹಜವಾದ ಸಾಮಾಜಿಕ ಕ್ರಿಯೆಯೆಂಬಂತೆ ನೋಡಬೇಕು; ಅಥವಾ ನಮ್ಮ ಸಮಾಜ ಇರುವುದು ಹೀಗೆಯೇ ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಅನುಭವಕ್ಕೆ ಬಾರದ ಯಾವುದನ್ನೂ ನಾವು ಶೋಷಣೆ ಎಂದಾಗಲೀ, ಅತ್ಯಾಚಾರವೆಂದಾಗಲೀ ಕರೆಯಕೂಡದು ಎಂಬ ಅಕ್ಷರ ಅವರ ವಾದ ಕೇವಲ ವಿತಂಡವಾದವಾಗಿದೆ. ಹೀಗೆ ವಿತಂಡವಾದ ಹೂಡುತ್ತಾ ಹೋಗುವುದೇ ಆದರೆ, ನಾವು ಕೊಲೆಗೀಡಾಗುವ ಮನುಷ್ಯನನ್ನು, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳೊಬ್ಬಳನ್ನು, ದಬ್ಬಾಳಿಕೆಗೊಳಗಾಗುವ ಶೋಷಿತನೊಬ್ಬನನ್ನು ಸುಲಭವಾಗಿ ‘ಬ್ರೈನ್ ವಾಷ್’ ಮಾಡಿ ‘ನಿಮ್ಮ ಮೇಲೆ ನಡೆಯುತ್ತಿರುವುದು ಕೊಲೆ, ಅತ್ಯಾಚಾರ, ದಬ್ಬಾಳಿಕೆ, ಶೋಷಣೆ ಅಲ್ಲ’ ಎಂದು ನಂಬಿಕೆ ಹುಟ್ಟಿಸುವುದು ಸುಲಭ ಎಂದಾಯಿತು!

‘ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀಮರ್ಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೇ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀಮರ್ಾನಿಸಲಾಗದು’ ಎಂಬ ಅಕ್ಷರ ಅವರ ಇನ್ನೊಂದು ಥಿಯರಿ ಅಪ್ರಬುದ್ಧವಾದುದು. ಹಾಗೆ ಶೋಷಣೆ-ಅವಮಾನದ ಅರಿವನ್ನು ಶೋಷಿತರು-ಅವಮಾನಿತರಲ್ಲಿ ಬಿತ್ತದೆ ಹೋಗಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲ ಮಾನವಂತರು ಇಷ್ಟೆಲ್ಲ ಮಾನವಪರ ಚಳುವಳಿಗಳಿಗೆ ಸಾಕ್ಷಿಗಳಾಗಲು ಸಾಧ್ಯವೇ ಆಗುತ್ತಿರಲಿಲ್ಲ; ಗಾಂಧಿ, ಅಂಬೇಡ್ಕರ್ರಂಥವರು ಅಪಮಾನಿತರ ಪರವಾದ ನಾಯಕರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಸಂಸ್ಕೃತಿ ಚಿಂತಕರಾದ ಅಕ್ಷರ ಅಂಥವರಿಗೆ ಇದು ಗೊತ್ತಿಲ್ಲದ ಸಂಗತಿಯೇನಲ್ಲ.

More

ನನ್ನ ತಮ್ಮ ಶಂಕರ

-ಅಭಿನಂದನ್ ಎಸ್

asnblogger

ಇತ್ತೀಚೆಗ ನಾನು ಓದಿದ ಪುಸ್ತಕ, ಅನಂತ ನಾಗ್ ರವರು ತಮ್ಮ “ತಮ್ಮ” ಶಂಕರ ನಾಗ್ ರವರ ಬಗ್ಗೆ ಬರೆದಿರುವ “ನನ್ನ ತಮ್ಮ ಶಂಕರ”.

ಹೀಗೇ ಪುಸ್ತಕದ ಅಂಗಡಿಗೆ ಹೋದಾಗ ಕಣ್ಣಿಗೆ ಬಿದ್ದ ಪುಸ್ತಕ. ಹಾಗೇ ನೋಡೋಣ ಅಂತ ತಗೊಂಡೇ ಬಿಟ್ಟೆ.”ಈ ಬ್ಲಾಗ್” “ಆ ಪುಸ್ತಕ”ದ ವಿಮರ್ಶೆ ಅಲ್ಲ ಬಿಡಿ. ನನಗೆ ಓದಿದ್ದೆಲ್ಲಾ ಹಿಡಿಸೋ ವಯಸ್ಸು. “ಅಲ್ಲಿ” ಹಿಡಿಸಿದ ಒಂದೆರಡು ವಿಷಯ “ಇಲ್ಲಿ” ಬ್ಲಾಗೋಣ ಅಂತ ಅನ್ನಿಸಿತು. “ಹಾಗೇ ಸುಮ್ಮನೆ”.ಅಷ್ಟೆ.

ಸಂಕೇತ್ ಸ್ಟೂಡಿಯೊ, ಕಮರ್ಶಿಯಲ್/ಆರ್ಟ್ ಪಿಕ್ಚರ್, ನಾಟಕ, ಕರಾಟೆ, ರಾಜಕೀಯ, ಕಂಟ್ರಿ ಕ್ಲಬ್, ಲೋ ಕಾಸ್ಟ್ ಮಾಡಲ್ ಹೋಮ್ಸ್, ಅಮ್ಯೂಸ್ಮೆಂಟ್ ಪಾರ್ಕ್, ನಂದಿ ಬೆಟ್ಟಕ್ಕೆ ರೋಪ್ವೇ, ಮಾಲ್ಗುಡಿ ಡೇಸ್, ಅಂಡರ ವಾಟರ್ ಶೂಟಿಂಗು… ಹೀಗೇ ನಮ್ಮ “ಜಾಕಿ” ತರ “ಮೇಕೆ ತಿನ್ನದ ಸೊಪ್ಪೇ ಇಲ್ಲ, ಇವನು ತಿನ್ನದ ಮೇಕೆ ಇಲ್ಲ” ಹಾಗೆ ನಮ್ಮ ಶಂಕರ್ ನಾಗ್.

ಇದ್ದ ಮೂವತ್ತೈದು ವರ್ಷಾನ ಒಬ್ಬ ಮನುಷ್ಯ ಇಷ್ಟೊಂದು “ಮೇಕೆ” ತಿನ್ನೋದ್ರಲ್ಲಿ (ಪನ್ ಇಂಟೆಂಡೆಡ್) ಕಳೆದು ಅಷ್ಟೇ ಫಾಸ್ಟಾಗಿ “ಶಿವ” ಅಂತ ಹೇಳಿದ್ದು..”ಇದು ಸಾಧ್ಯ” ಅಂತ ಮಾತ್ರ ಹೇಳ್ಬೋದು. ನೋ ಅದರ್ ಕಾಮೆಂಟ್ಸ್.

ಪುಸ್ತಕದಲ್ಲಿ ಒಂದು ಕಡೆ, ಅನಂತ್ ಹೀಗೇ, ಮಾತಿಗೆ “ದೇವ್ರಿದಾನೆ” ಅನ್ನೋ ರೀತೀಲಿ ಶಂಕರ್ ಗೆ ಏನೋ ಹೇಳ್ದಾಗ ಶಂಕರ್, “ಅದು ಸರಿ. ದೇವ್ರಿದಾನೆ. ಬಟ್ ನನಗೆ ಅವನ ಪೇಸ್ ಸೆಟ್ ಆಗ್ತಿಲ್ಲ. ಐ ವಾಂಟ್ ಹಿಮ್ ಟು ಹರ್ರಿ”. ಅನ್ನೋ ರೀತೀಲಿ ರೆಸ್ಪಾಂಡ್ ಮಾಡ್ತಾರೆ. ದಟ್ ವಾಸ್ ಹಿಸ್ ಪೇಸ್ ಅಂತ ನನಗೆ ಈ ಪುಸ್ತಕ ಓದಿದಾಗ ತಿಳೀತು. ಪುಸ್ತಕದಲ್ಲಿ ನನಗೆ ತುಂಬಾ ಹಿಡಿಸಿದ್ದು “ಆ” ಭಾಗ.

ಬ್ರದರ್ಸ್ ಇಬ್ರೂ ನಾಟಕದ ಹಿನ್ನಲೆಯವರೇ ಅಂತೆ. ಸಿನೆಮಾಗೆ ಕಾಲಿಟ್ಟ ಮೇಲೆ, ಶಂಕರ ಆ ಗೀಳನ್ನ ಎಷ್ಟರ ಮಟ್ಟಿಗೆ ಕಾಪಾಡಿಕೊಂಡು, ಬೆಳೆಸಿಕೊಂಡು ಬಂದರು ಅಂತ ಅನಂತ್ ಚೆನ್ನಾಗಿ ವಿವರಿಸಿದಾರೆ(ದಯವಿಟ್ಟು ಇದನ್ನ ವಿಮರ್ಷೆ ಅಂದ್ಕೋಬೇಡೀಪ್ಪ). ಹಾಗೇ, ಅವರಿಗೆ ತಮ್ಮನ ಥರ ಎರಡನ್ನೂ ನಿಭಾಯಿಸೋಕ್ಕೆ ಆಗ್ಲಿಲ್ಲ ಅಂತಾನೂ ಹೇಳ್ತಾರೆ. ಅದಕ್ಕೆ ರಂಗಶಂಕರನೇ ಪ್ರೂಫು.

ಹೀಗೇ, ಅವರಿಬ್ಬರ ಬಾಲ್ಯ, ತಂದೆ-ತಾಯಿ, ಆನಂದಾಶ್ರಮ, ಬಾಂಬೆ ಜೀವನ, ಓದು-ಬರಹ, ಸಿನೇಮಾ ಪರಿಚಯ, ಕೆನಡ ಪ್ರವಾಸ, ಮೇಲೆ ಲಿಸ್ಟ್ ಮಾಡಿರೋ “ಮೇಕೆ”ಗಳ “ಸಾಕಾಣಿಕೆ”, ಮಾಲ್ಗುಡಿ ಹುಟ್ಟಿದ ಕಥೆ, ಗೋಕಾಕ್ ಚಳುವಳಿ ಬಗ್ಗೆ ಪುಸ್ತಕದಲ್ಲಿ ಒಳ್ಳೆ ವಿವರಣೆ ಇದೆ(ದಯವಿಟ್ಟು ಇದನ್ನ ವಿಮರ್ಷೆ ಅಂದ್ಕೋಬೇಡೀಪ್ಪ).

ಶಂಕರ ಹೇಗೆ ಸಡನ್ನಾಗಿ “ಎಕ್ಸಿಟ್” ಆದ್ರೊ, ಪುಸ್ತಕ ಕೂಡ ಹಾಗೆ ಸಡನ್ನಾಗಿ ಮುಗಿಯುತ್ತೆ. ಆ ರೀತಿಲಿ “ಆಕ್ಸಿಡೆಂಟ್”ನ ಶಾಕ್ ನಮ್ಮನ್ನೂ ಕಾಡದೆ ಬಿಡೋದಿಲ್ಲ. “ನಾಗ್” ಫ್ಯಾಮಿಲಿಗೆ ಆ ಆಕ್ಸಿಡೆಂಟ್ ಎಷ್ಟು ಸಡನ್ನಾಗಿ ಬಂದು, ಹೇಗೆ ಅಪ್ಪಳಿಸಿತು ಅನ್ನೋದು, ಪುಸ್ತಕದ ಮುಗಿಯುವಿಕೆಯಿಂದ ಚೆನ್ನಾಗಿ ಗೊತ್ತಾಯ್ತು.

ಓದೌರು ಈ ಪುಸ್ತಕಾನೂ ಓದಿ. ಶಂಕರ್ ನಾಗ್ ಮೇಲಿನೇ ಅಭಿಮಾನದಿಂದಲ್ಲದಿದ್ರೂ, ಒಬ್ಬ ಕ್ರಿಯಾಶೀಲ ವ್ಯಕ್ತಿ ಹೇಗೆ ಅಷ್ಟು ಕ್ರಿಯಾಶೀಲರಾಗಿದ್ದರು, ಎಷ್ಟು ಕ್ರಿಯಾಶೀಲರಾಗಿದ್ರು, ಅಂತ ತಿಳ್ಕೋಳಕ್ಕೆ ಅಂತ ಓದಿ

‘ಛಂದ’ ತಂದ ದತ್ತಾತ್ರಿ ಕಾದಂಬರಿ


 

ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಉಂಟಾಗಿರುವ ಹೊಸ ಕಾಲಮಾನದ ಪ್ರಭಾವಗಳು, ಐಟಿ ಬೀಟಿ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ, ವಲಸೆಗೆ ಒತ್ತಾಯಿಸುವ ಬೀಸುಗಾಳಿಯ ಶಕ್ತಿ- ಸೂಕ್ಷ್ಮ ಸಂವೇದಿಗಳಾದ ನಮ್ಮ ತರುಣ ಜನಾಂಗದ ಮೇಲೆ ಯಾವ ಬಗೆಯ ಒತ್ತಡ ತರಬಲ್ಲವೆಂಬುದರ ಹೃದಯವೇಧಕ ಚಿತ್ರ ಎಂ.ಆರ್.ದತ್ತಾತ್ರಿಯವರ ದ್ವೀಪವ ಬಯಸಿ ಕಾದಂಬರಿಯಲ್ಲಿ ಇದೆ.

ಇಲ್ಲಿನದು ಒಂದು ವಿಸ್ತೃತವಾದ ಪರಿಪ್ರೇಕ್ಷ್ಯ. ಭಾರತದಿಂದ ಅಮೆರಿಕೆಗೆ, ಅಮೆರಿಕೆಯಿಂದ ಭಾರತಕ್ಕೆ ತುಯ್ಯುವ ಕಥಾನಕವು ಈ ವಿರುದ್ಧ ಚಲನೆಗಳಿಂದಲೇ ತನ್ನ ಕರ್ಷಣ ದ್ರವ್ಯವನ್ನು ಪಡೆಯುತ್ತದೆ. ಶ್ರೀಕಾಂತ, ವಾಣಿ ಈ ಕರ್ಷಣೆಯ ಪ್ರಜ್ಞಾಕೇಂದ್ರಗಳಾಗಿದ್ದಾರೆ. ಅವರ ಅನುಭವವನ್ನು ಶೋಧಿಸುವಲ್ಲಿ ಬಳಸಲಾಗುವ ಪಾತ್ರ ಮತ್ತು ಘಟನೆಗಳ ಪ್ರತಿಮಾ ಸಮೂಹವು ಬೆರಗುಪಡಿಸುವಷ್ಟು ಧ್ವನಿಪೂರ್ಣವಾಗಿದೆ.

ಇಟಲಿಯ ಜಾನಪದ ಕಥೆ, ಡ್ಯಾನಜಾಕ್ಸನ್ ಅವರ ಹಕ್ಕಿಗಳ ಚಿತ್ರಿಕೆಗಳ ಪ್ರದರ್ಶನ, ಸಮಿಂದ ಮದುರಸಿಂಘೆಯವರ ಶ್ರೀಲಂಕಾದ ಆಂತರಿಕ ಯುದ್ಧಕ್ಕೆ ಸಂಬಂಧಿಸಿದಂತೆ ರಣರಂಗದಲ್ಲಿ ಬುದ್ಧನನ್ನು ಹುಡುಕುವ ಯೋಧನ ಫೋಟೋಗ್ರಾಫ್, ಮಹಿಂದನ ಡೈರಿ, ಯೊಸಿಮಿಟಿ ಎನ್ನುವ ಪ್ರಕೃತಿಸ್ವರ್ಗದಲ್ಲಿ ನಾಯಕ ನಾಯಕಿ ಪಡೆಯುವ ಅಭೌತಿಕ ದಿವ್ಯಾನುಭವ, ಲೈಫ್ ಆಫ್ ಪೈ ಕಥೆ, ಲಾಸೇಂಜಲೀಸಿನ ಕಾಡುಬೆಂಕಿ-ಹೀಗೆ ಇಡೀ ಕಾದಂಬರಿ ಧ್ವನಿಪೂರ್ಣಚಿತ್ರಿಕೆಗಳ ಮೂಲಕ ಮಾತಾಡುತ್ತದೆ.

ಈ ಎಲ್ಲ ಚಿತ್ರಗಳು ಒಗ್ಗೂಡಿ ಕಟ್ಟುವ ಕಥಾನಕ ಮನಸ್ಸನ್ನು ತಲ್ಲಣಗೊಳಿಸುವಷ್ಟು ಪ್ರಭಾವಶಾಲಿಯಾಗಿ ಬಂದಿದೆ. ಇದೀಗಿನ ತುರ್ತು ವರ್ತಮಾನಕ್ಕೆ ಆಕಾರಕೊಡಲು ಬಯಸುವ ಅಧುನಾಪ್ರಜ್ಞೆಯ ಈ ಕಥಾಕೃತಿಯು ಈಚಿನ ದಿನಗಳಲ್ಲಿ ಕನ್ನಡಲ್ಲಿ ಕಾಣಿಸಿಕೊಂಡ ಮಹತ್ವದ ಸಂಕಥನಗಳಲ್ಲಿ ಒಂದಾಗಿದೆ.

ಎಚ್.ಎಸ್.ವೆಂಕಟೇಶ ಮೂರ್ತಿ

ಬೆನ್ನುಡಿಯಿಂದ

 

ಕಿ ರಂ ಕಮ್ಮಟ ಸಾಲೆ

Short film on ‘Premier Book Shop’

ಸಮಯ

23 ಜನವರಿ · 11:00 – 12:30

ಸ್ಥಳ: SUCHITRA, BSK II STAGE (080-26711785)

PRESENTS

a short film from

100&One Rupee Productions

Mr. Shanbag’s Shop

by Asha Ghosh

14 min/DVD/English/

The screening will be followed by a discussion on

How to Manage Change

in Bangalore

Synopsis:

Mr. Shanbag’s Shop is a short documentary portrait of Bangalore’s much loved bookstore owner. Mr. Shanbag ran Premier Bookshop in Bangalore for over 35 years. In May 2006 a leading newspaper announced that the shop would be closing soon because the landlord had not agreed to renew the lease. The film captures Mr. Shanbag describing his shop and its history, interacting with customers, and stacking books in seemingly precarious piles within the small space this shop occupies. The film includes More

ಇಂದು ‘ಮಂಟೇಸ್ವಾಮಿ ಕಥಾ ಪ್ರಸಂಗ’

‘ರಂಗ ಶಂಕರ’ದಲ್ಲಿ
ಇಂದಿನ ನಾಟಕ
ಪ್ರಯೋಗರಂಗ
ಪ್ರಯೋಗಿಸುವ

ಮಂಟೇ ಸ್ವಾಮಿ ಕಥಾ ಪ್ರಸಂಗ
ರಚನೆ : ಎಚ್.ಎಸ್.ಶಿವಪ್ರಕಾಶ್
ನಿರ್ದೇಶನ ಸುರೇಶ ಆನಗಳ್ಳಿ

ದೃಷ್ಟಿ ನೃತ್ಯೋತ್ಸವ

ಪ ಸ ಕುಮಾರ್ ಗೆ ‘ಕಲಾ ಧ್ಯಾನ್’ ಪ್ರಶಸ್ತಿ

Previous Older Entries

%d bloggers like this: