ಕಳೆದ ಭಾನುವಾರ ಸಂಜೆ ಧಾರವಾಡದಲ್ಲಿ ‘ಚೆರ್ರಿಮನೆ’ ಉದ್ಘಾಟನೆ. ನಿಧಿ, ಕರುಣಾ, ಕನ್ನಿಕಾ, ಆರ್ಯ, ಸ್ನೇಹಲ್, ಭೂಮಿಕಾ, ಸಾನ್ವಿ, ಚಿನುವಾ ಸೇರಿದಂತೆ ನಾರಾಯಣಪುರದ ಏಳೆಂಟು ಚಿಣ್ಣರು ಮರಕ್ಕೆ ನೀರೆರೆವ ನೆಪದಲ್ಲಿ ನೀರಾಟವಾಡುತ್ತ, ಮರ ಹತ್ತಿಳಿಯುತ್ತ, ಚೆರ್ರಿಹಣ್ಣು ತಿನ್ನುತ್ತ ಖುಷಿಪಟ್ಟರು.
ಆ ಸಂಭ್ರಮದಲ್ಲಿ ಚಿನುವಾ ತಾನು ಉದ್ದೇಶಿಸಿದ್ದ ‘ಭಾಷಣ’ ಮಾಡುವುದನ್ನೇ ಮರೆತನಂತೆ!
ಈ ಗಿಡ ಮಾಡಿರುವ ಚಮತ್ಕಾರವನ್ನು ಅನಿತಾ ಸಣ್ಣ ಪುಸ್ತಕ ರೂಪದಲ್ಲಿ ತರಲು ಮುಂದಾಗಿದ್ದಾಳೆ. ನಿರೀಕ್ಷಿಸಿ!
ಇತ್ತೀಚಿನ ಟಿಪ್ಪಣಿಗಳು