Photo exhibition by S Eshwar

ಕನಸೆಂಬೋ ಕುದುರೆಯನೇರಿ..

ಕ್ಯೂಬಾ- ಹೊಸ ಪುಸ್ತಕ

ಇದು ಜಾಣರ ಸಮಾಚಾರ..

ಬಯಲು ಸೀಮೆಯಿಂದ (ಕೊಪ್ಪಳದಿಂದ ) ಜಾಣರ ಜಿಲ್ಲೆ (ಉಡುಪಿ)ಗೆ ವರ್ಗವಾಗಿ ಬಂದ ‘ಪ್ರಜಾವಾಣಿ’ ವರದಿಗಾರ ಮಂಜುನಾಥ ಭಟ್ ಏನು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ . ‘ಪ್ರಜಾವಾಣಿ’ ಪತ್ರಿಕೆಯ ‘ಕರಾವಳಿ’ ಪುಟದಲ್ಲಿ ಎಂಥ ಮಾರಾಯ್ರೆ ….? ಅಂಕಣದ ಮೂಲಕ ಗಮನ ಸೆಳದಿದ್ದಾರೆ.

ಸುಮಾರು ಎಪ್ಪತ್ತೇಳು ವಾರಗಳವರೆಗೂ ನಿರಂತರವಾಗಿ ಹರಿದುಬರುತ್ತಿದ್ದ ಈ ಅಂಕಣ ಬರಹಗಳ ಭಾಷೆ, ಶೈಲಿ, ವಿಚಾರಗಳಿಂದ ಓದುಗರನ್ನು ಸೆರೆಹಿಡಿಯುವುದರಲ್ಲಿ ಯಶಸ್ಸನ್ನು ಗಳಿಸಿದೆ. ಆಯ್ದ ಬರಹಗಳ ಸುಂದರ ಗುಚ್ಛ ಈ ‘ಎಂಥ ಮಾರಾಯ್ರೆ’ ಇದು ಜಾಣರ ಸಮಾಚಾರ.

ಮಂಜುನಾಥ ಭಟ್ ರು ಉಡುಪಿಯಲ್ಲಿ ನೆಲೆಸಿದ್ದಾಗ ಇಲ್ಲಿಯ ವಿದ್ಯಮಾನಗಳಿಗೆ ಕಣ್ಣು ಕಿವಿಗಳನ್ನು ತೆರೆದಿಟ್ಟು ತನ್ನ ಸಹೃದಯೀ ಪ್ರತಿಕ್ರಿಯೆಗಳನ್ನು ಈ ಅಂಕಣಗಳ ಮೂಲಕ ಹೊರಗೆಡಹಿದ್ದಾರೆ. ಇಲ್ಲಿ ಹಾಸ್ಯವಿದೆ, ವಿಡಂಬನೆ ಇದೆ, ಆದೇಶವಿದೆ, ಸಂದೇಶವಿದೆ, ರೋಚಕತೆ ಇದೆ, ರಸಿಕತೆಯೂ ಇದೆ. ಬರಹಗೆಳಿಗೆ ತಮ್ಮ ರೇಖೆಗಳಿಂದ ಜೀವ ತುಂಬಿದ್ದಾರೆ ವ್ಯಂಗ್ಯ ಚಿತ್ರಕಾರ ಜೀವನ್. ಮುಖಪುಟದಲ್ಲಿ ಜೇಮ್ಸ್ ವಾಜ್ ತನ್ನ ಕೈಚಳಕ ತೋರಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯ ಮೆಚ್ಚುಗೆಯ ಮುನ್ನುಡಿ ಇದೆ. ಮಂಜುನಾಥ ಭಟ್ ರ ಈ ಚೊಚ್ಚಲ ಸಾಹಸಕ್ಕೆ ಭಲೇ ಎನ್ನಲೇಬೇಕು. ಹೌದು. ನೀವು ಕೊಂಡು ಓದಿ, ಆನಂದಿಸಬಹುದಾದ ಒಳ್ಳೆಯ ಕೃತಿ  ಎಂಥ ಮಾರಾಯ್ರೆ.

-ಕು ಗೋ

ಬೆನ್ನುಡಿಯಿಂದ

 

ನಾನೂ ಕದ್ದಿದ್ದೆ!!!

-ಮಾಲತಿ ಶೆಣೈ

ಸ್ಕೂಲಿನ ಗೇಟ್ ಬಳಿ ಒಬ್ಬ ಹಣ್ಣು ಹಣ್ಣು ಮುದುಕಿ ಚಿಕ್ಕ ಚಿಕ್ಕ ಬೋರೆ ಹಣ್ಣು, ಕತ್ತರಿಸಿದ, ಉಪ್ಪು, ಖಾರದ ಪುಡಿ ಹಚ್ಚಿಟ್ಟ ಪೇರಳೆ (ಸೀಬೆ)ಹಣ್ಣು, ಇಲಾಯಚಿ (ನೋಡಕ್ಕೆ ಒಂದು ತರಹ ಹಸಿ ಹುಣಸೆ ಹಣ್ಣಿನ ತರಹ ಇರುತ್ತೆ, ಬೀಜ ಮಾತ್ರ ತಿನ್ನಬೇಕು,ರುಚಿ ಮಾತ್ರ ಒಗರು), ಮತ್ತು ತ್ರಿಕೋಣಾಕಾರದ ಪುಟ್ಟ ಪುಟ್ಟ ಸುಪಾರಿ ಪುಡಿ ಪ್ಯಾಕೆಟ್ ಮಾರುತ್ತಿದ್ದಳು. ನನ್ನ ಆಜೋಬಾ ನನಗೆ ಕೇಳಿದ್ದನ್ನೆಲ್ಲ ಕೊಡಿಸ್ತಿದ್ದರು. ಆದರೆ ರಸ್ತೆ ಪಕ್ಕ ಮಾರುವವರಲ್ಲಿ ಏನು ತೆಗೆದು ಕೊಳ್ಳಲು ಬಿಡುತ್ತಿರಲಿಲ್ಲ. ಶಾಲೆಯ ಇತರ ಮಕ್ಕಳು ತ್ರಿಕೋಣಾಕಾರದ ಪ್ಯಾಕೆಟ್ ನಲ್ಲಿದ ಪುಡಿ ತಿಂದ ಮೇಲೆ ಅವರ ಬಾಯಿಗೆ ಸುವಾಸನೆ ಮತ್ತು ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ನೋಡಿದಾಗ ನನಗೆ ಒಂದು ತರಹ fascination. ನನಗೂ ಅದು ಒಂದು ಸಲನಾದ್ರೂ ತಿನ್ನಬೇಕು ಅನ್ನಿಸಿತ್ತು.ಆದರೆ ಕೇಳಿದ್ರೆ ಅಮ್ಮ, ಆಜೋಬಾ ಇಬ್ಬರು ದುಡ್ಡು ಕೊಡ್ತಿರಲಿಲ್ಲ.
ಒಂದು ಸಲ ಅಮ್ಮ ನನಗೆ ಬಟ್ಟೆಗಳನ್ನು ಕಪಾಟಿನಲ್ಲಿಡಲು ಹೇಳಿದಳು. ಅಲ್ಲೇ ಎದುರಿಗೆ 5 ನಯಾ ಪೈಸೆ ನೋಡಿದೆ. ಕೂಡಲೆ ಅದನ್ನು ತೆಗೆದು , ಶಾಲೆಯ ಯುನಿಫಾರ್ಮ್ ನ ಕಿಸೆಗೆ ಹಾಕಿದೆ. but my bad luck, ನನ್ನ ತಮ್ಮ ಕೃಷ್ಣ ನೋಡಿಬಿಟ್ಟ. ನಾನು ಸುಮ್ಮನಿರದೆ, ನೋಡು ಕೃಷ್ಣ ನಿನಗೂ ಚಾಕಲೇಟ್ ತರ್ತೀನಿ. ದುಡ್ಡು ತೆಗೆದದ್ದು ಅಮ್ಮನಿಗೆ ಹೇಳಬೇಡ ಅಂದೆ!!
ಸರಿ, ಶಾಲೆಗೆ ಹೋಗುವಾಗ ಅಜ್ಜಿ ಹತ್ರ ಪೊಟ್ಟಣಗಳನ್ನು ತೆಗೊಂಡೆ. 5 ಪೈಸೆಗೆ 5 ಪೊಟ್ಟಣಗಳನ್ನು ಕೊಟ್ಟಳು. ಕ್ಲಾಸಿಗೆ ಬಂದು ಒಂದೊಂದೆ ಪೊಟ್ಟಣ ಬಿಚ್ಚುತ್ತಾ ತಿನ್ನುತ್ತ ಹೋದೆ.. ಘಮ ಘಮ ಸುವಾಸನೆಯ, ತೀಕ್ಷ್ಣವಾದ ಸಿಹಿಯಿದ್ದ ಪುಡಿಗಳನ್ನು ತಿಂದು, ನಾಲಗೆ ನೋಡಿಕೊಂಡೆ, ಗುಲಾಬಿ ಬಣ್ಣಕ್ಕೆ ತಿರುಗಿಕೊಂಡಿತ್ತು. ನನ್ನ ಸಹಪಾಠಿ ಕೂಡ ನಿನ್ನ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗಿವೆ ಅಂದಾಗ ನಾನು ಖುಶ್. ಪರಿಮಳಯುಕ್ತ ಖಾಲಿಯಾದ ಪೊಟ್ಟಣಗಳನ್ನೆಲ್ಲ ನನ್ನ text book ಹಾಳೆಯೆಡೆಯಲ್ಲಿಟ್ಟೆ. ಸಂಜೆ ಮನೆಗೆ ಹೋದೆ.
ನನಗೆ ಮರೆತು ಹೋದ್ರೂ, ನನ್ನ ತಮ್ಮ ನಾನು ತರುವ ಚಾಕಲೇಟ್ ಗೋಸ್ಕರ ಕಾಯ್ತಾ ಇದ್ದ. ಚಾಕಲೇಟ್ ಎಲ್ಲಿ ಅಂದ , ಅರೇ ನನಗೆ ಮರೆತೇ ಹೋಯ್ತು, ಅಂದೆ. ಕೂಡಲೆ ಅಮ್ಮನಿಗೆ ಚಾಡಿ ಹೇಳಿದ. ಅಮ್ಮ ನನಗೆ’ದುಡ್ಡು ಕದ್ದೆಯ?’ ಅಂತ ಕೇಳಿದ್ರು. ತಲೆ ಕೆಳಗೆ ಹಾಕಿ ’ಹೌದು, ತಪ್ಪಾಯ್ತು, ಇನ್ನು ಮುಂದೆ ಕದಿಯಲ್ಲ’ ಅಂದೆ. ಅಮ್ಮ ಅಲ್ಲೆ ಹತ್ತಿರ ಇದ್ದ ಪೊರಕೆಯಿಂದ ನನಗೆ ಸರೀ ಥಳಿಸಿದರು. ನಾನು  ಪೆಟ್ಟು ತಿಂದೆ ವಿನಃ ಅಳಲಿಲ್ಲ. ಯಾಕೆಂದ್ರೆ ನಾನು ಮಾಡಿದ್ದು ತಪ್ಪು ಎಂದು ಗೊತ್ತಿತ್ತು. ಅಪ್ಪ ಬರಲಿ ನಿನಗೆ ಮಾಡ್ತೇನೆ ಶಾಸ್ತಿ ಅಂದಾಗ ಹೊಟ್ಟೆಯಲ್ಲಿ ಪುಕು ಪುಕು ಶುರು. ಅಪ್ಪ ಅಂದರೆ ನನಗೆ ಮೊದಲಿನಿಂದಲೂ ಹೆದರಿಕೆ. (ಈಗಲೂ, though i am 41 years old) ಮತ್ತೆ ಒಂದು ಸಲ ಮನೆಗೆ ಸುಣ್ಣ ಹೊಡೆಯುವ ಹುಡುಗ ಪಕ್ಕದ ಮನೆಯವರಿಗೆ ಏನೋ ಎದುರು ಜವಾಬು ಕೊಟ್ಟಿದ್ದಕ್ಕೆ,ಅಪ್ಪ ಅವನನ್ನು ಅಟ್ಟಿಸಿಕೊಂಡು, ಚಪ್ಪಲಿಯಿಂದ ಹೊಡೆದದ್ದು , ಅವನು ’ಬಸ್ ಕರೋ ಸಾಬ್’ಅಂತ ಅತ್ತಿದ್ದು ನೆನಪಿತ್ತು.ಇನ್ನಷ್ಟು ಹೆದರಿ, ಜ್ವರ ಬರುವ ಹಾಗಾಯಿತು.ಆಗಲೇ ಅಮ್ಮ ಹೊಡೆದಿದ್ದ ಜಾಗ ಎಲ್ಲ ಕೆಂಪಾಗಿ ಗೀರು ಬಿಟ್ಟಿತ್ತು, ಸ್ವಲ್ಪ ಉರಿಯುತ್ತ ಇತ್ತು. ಅಪ್ಪ ಬಂದು ಯಾವಾಗ ಇದರಿಂದ ಮುಕ್ತಳಾಗುತ್ತೇನೋ ಅಂತ ಕಾಯ್ತಾ ಇದ್ದರೆ, ಆ ದಿನ ಅಪ್ಪ ಬರುವಾಗ ತುಂಬ ಲೇಟ್.

ಹೋಗಿ, ಮತ್ತೆ ಬರಬೇಡಿ…

-ಎಸ್  ಸಿ ದಿನೇಶ್ ಕುಮಾರ್

ದೇಸಿಮಾತು


ಹಾಗೆ ದಡಬಡ ಅಂತ
ಬಾಗಿಲು ಬಡೀಬ್ಯಾಡಿ
ನಾನು ತೆರೆಯುವುದಿಲ್ಲ

 

ನಿಮ್ಮ ಹೆಜ್ಜೆ ಸಪ್ಪಳವನ್ನು ಗುರುತಿಸಬಲ್ಲೆ
ಸುಡುಸುಡು ನಿಟ್ಟುಸಿರು ಕೂಡ ತಾಕುತ್ತಿದೆ
ಕೂಗಿದ್ದೂ ಕೇಳಿಸಿದೆ, ಆದರೂ ಕದ ತೆಗೆಯಲೊಲ್ಲೆ

ನೀವು ಹೀಗೆ ಬರುತ್ತೀರೆಂದೇ
ಕುಯ್ಯೋ ಅನ್ನುವ ಬಾಗಿಲನ್ನು ಜೋರಾಗಿ ಬಡಿದು
ಚಿಲಕ ಹಾಕಿ, ಬೀಗ ಜಡಿದು ಕುಳಿತಿದ್ದೇನೆ

ಇಗೋ ಇವಳು ಈಗಷ್ಟೆ ಬಂದು
ನನ್ನ ಎದೆಗೊರಗಿ ನಿದ್ದೆ ಹೋಗಿದ್ದಾಳೆ
ಹಗಲಿಡೀ ದಣಿದಿದ್ದಾಳೆ, ಏಳಿಸಕೂಡದು

ನಾನು ಮಲಗಿದ ಜಾಗದಲ್ಲೇ ಗೋರಿಗಳಿವೆ
ನನ್ನವೇ ತರೇವಾರಿ ಗೋರಿಗಳು
ನಾನೇ ಕೈಯಾರೆ ನೆಲಬಗೆದು ಮಣ್ಣು ಮಾಡಿದ್ದೇನೆ

ಈ ಗೋರಿಗಳೋ, ಒಮ್ಮೊಮ್ಮೆ ಜೀವ ತಳೆದು
ಆಕಳಿಸಿ, ಮೈಮುರಿದೆದ್ದು ಊಳಿಡುತ್ತವೆ;
ಶತಮಾನಗಳ ಮಹಾಮೌನವನ್ನು ಮುರಿಯುತ್ತವೆ

ಇವಳಿಗೆ ಇದೇನೂ ಗೊತ್ತಿಲ್ಲ
ಪ್ರತಿರಾತ್ರಿ ಜೋಗುಳ ಹಾಡಿ
ತೋಳೊಳಗೆ ಮಲಗಿಸುತ್ತೇನೆ

ನನ್ನದಿನ್ನೂ ಬಿಸಿಬಿಸಿ ರಕ್ತ
ನೆತ್ತರ ಕಾವಿಗೆ ಅವಳು
ಬೆಚ್ಚಗೆ ಮಲಗುತ್ತಾಳೆ

ಬೇಡ, ಅವಳ ನಿದ್ದೆಗೆ ಭಂಗ ತಾರದಿರಿ
ಶಬ್ದವೆಂದರೆ ಅಲರ್ಜಿ ಅವಳಿಗೆ
ಅಪಶಕುನಗಳಿಗೆ ಬೆಚ್ಚುತ್ತಾಳೆ, ಹೊರಟು ಹೋಗಿ

ಮತ್ತೆ ವಾಪಾಸು ಬರಲೂಬೇಡಿ
ಬಂದು ಹೀಗೆಲ್ಲ ಬಾಗಿಲು ಬಡಿದು ಕಾಡಬೇಡಿ
ಸತ್ತವರನ್ನು ಹೀಗೆಲ್ಲ ಏಳಿಸುವುದು ಸಲ್ಲ

Posted by ದಿನೇಶ್ ಕುಮಾರ್ ಎಸ್.

ಜರ್ಮನಿಯಲ್ಲಿ ಇಂಡಿಯನ್ ಪಾಲಿಟಿಕ್ಸ್

ಬಿ ಎ ವಿವೇಕ ರೈ

ಇಲ್ಲಿ ಜರ್ಮನಿಯಲ್ಲಿ ಇವತ್ತು ಹಿಮ ಇಲ್ಲ. ಮಳೆ ಇಲ್ಲ. ಮೋಡ ಕವಿದಿದೆ. ೫ ಡಿಗ್ರಿ ಇದೆ, ದಶಂಬರ್ ಗಿಂತ ಉತ್ತಮ.

ಆದರೆ ಇಲ್ಲಿನ ಹವೆ ನಮ್ಮ ದೇಶದ ರಾಜಕೀಯದಂತೆ .

ಯಾವಾಗ ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ.

ಹೀಗೊಂದು ಕಥೆ

ಗರ್ಭಪಾತ

-ಬಿ ಎಂ ಬಷೀರ್

ಗುಜರಿ ಅಂಗಡಿ

ಅವಳು ಗರ್ಭಿಣಿ. ನೋವಿನಿಂದ ಒದ್ದಾಡುತ್ತಿದ್ದಳು.
ಆಕೆಯ ಗಂಡನೂ ಗರ್ಭ ಧರಿಸಿದ್ದಾನೆ. ಹೆರಿಗೆಯ ನಿರೀಕ್ಷೆಯಲ್ಲಿ ಒದ್ದಾಡುತ್ತಿದ್ದ.
ಆಕೆ ಹೆತ್ತಳು. ಗಂಡನ ಕಿವಿಗೆ ಬಿತ್ತು ‘‘ಮಗು ಹೆಣ್ಣು’’
ಅವನಿಗೆ ‘ಗರ್ಭಪಾತ’ವಾಯಿತು

‘ಅವಧಿ’ Recommends..

%d bloggers like this: