ಎನ್ ಗುರುರಾಜ್, ಬಷೀರ್, ಹಿಲರಿ ಕ್ರಾಸ್ತಾ ಗೆ ಪುರಸ್ಕಾರ

‘ಛಂದ’ದ ಚಂದ ನೋಟ

‘ಛಂದ’ ಪುಸ್ತಕ ಇಂದು ನಾಲ್ಕು ಕೃತಿಗಳ ಬಿಡುಗಡೆ ಹಮ್ಮಿಕೊಂಡಿತ್ತು. ಸುನಂದಾ ಪ್ರಕಾಶ್ ಕಡಮೆ, ಎಂ ಆರ್ ದತ್ತಾತ್ರಿ, ಕಣಾದ ರಾಘವ, ಪ್ರಶಾಂತ್ ಬೀಚಿ ಅವರ ಕೃತಿಗಳನ್ನು ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬಿಡುಗಡೆ ಮಾಡಿದರು. ಆ ಸಂಭ್ರಮದ ನೋಟ ಇಲ್ಲಿದೆ.

ನಮ್ಮ ಪ್ರೀತಿಯ, ‘ಇಟ್ಟಿಗೆ ಸಿಮೆಂಟು’ ಖ್ಯಾತಿಯ ಹಸನ್ಮುಖಿ ಪ್ರಕಾಶ್ ಹೆಗಡೆ ಈ ಫೋಟೋಗಳನ್ನು ‘ಅವಧಿ’ಗಾಗಿ ನೀಡಿದ್ದಾರೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ವೀಕ್ಷಿಸಲು ಫೋಟೋದ ಮೇಲೆ ಕ್ಲಿಕ್ ಮಾಡಿ

ಎಚ್ಚೆಸ್ವಿಕಾಲಂ: ಉಗ್ಗುಸುಬ್ಬಜ್ಜನ ಕುದುರೇ ಬಾಕಿ….

-ಎಚ್.ಎಸ್.ವೆಂಕಟೇಶಮೂರ್ತಿ

ನಮ್ಮ ಪುಟ್ಟಜ್ಜನ ಅಣ್ಣನ ಹೆಸರು ಸುಬ್ಬಣ್ಣ ಅಂತ. ಆತನಿಗೆ ಸ್ವಲ್ಪ ಉಗ್ಗು ಇದ್ದುದರಿಂದ ಎಲ್ಲರೂ ಸುಬ್ಬಜ್ಜನನ್ನು ಉಗ್ಗುಸುಬ್ಬಣ್ಣ ಎಂದೇ ಕರೆಯುತ್ತಿದ್ದರು. ನಾನು ನೋಡಿದ ಹಾಗೆ ಸುಬ್ಬಜ್ಜನಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಮನೆ ಮಾರಿನ ಜವಾಬುದಾರಿಯೂ ಇರಲಿಲ್ಲ. ಹಾಗಾಗಿ ಆತ ಅಲಕ್ ನಿರಂಜನ್ ಅಂತ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಇದ್ದರು. ಪುಟ್ಟಜ್ಜ ಅರ್ಧ ಹಾಸ್ಯ ಅರ್ಧ ವ್ಯಂಗ್ಯದಿಂದ ನಮ್ಮ ನಾರದ ಮಹರ್ಷಿಗಳು ಇನ್ನೂ ಉಪಹಾರಕ್ಕೆ ಆಗಮಿಸಿಲ್ಲವೇ? ಎಂದು ನರಸಮ್ಮಜ್ಜಿಯನ್ನು ಕೇಳುತ್ತಾ ಇದ್ದರು.

ಸುಬ್ಬಜ್ಜನ ಮೂಲ ನೆಲೆ ಅವರ ತಮ್ಮ ಪುಟ್ಟಣ್ಣ ವಾಸ್ತವ್ಯ ಹೂಡಿದ್ದ ಕೆಲ್ಲೋಡೇ ಆಗಿದ್ದರೂ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಾದುದರಿಂದ ವರ್ಷಪೂರ ತಮ್ಮ ಬಂಧುಬಳಗದ ಮನೆಗಳಿಗೆ ಭೆಟ್ಟಿ ಕೊಡುತ್ತಾ ದಿಮ್ ರಂಗ ಎಂದುಕೊಂಡು ಆರಾಮವಾಗಿ ಬಾಳು ನೂಕುತ್ತಾ ಇದ್ದರು. ಒಂದು ವಿಶೇಷ ಎಂದರೆ ಅವರು ಯಾರ ಮನೆಯಲ್ಲೂ ಒಂದು ರಾತ್ರಿಗಿಂತ ಹೆಚ್ಚು ಉಳಿಯುತ್ತಿರಲಿಲ್ಲ. ಸುಬ್ಬಜ್ಜ ನಮ್ಮೂರಿಗೂ ವರ್ಷಕ್ಕೊಂದು ಬಾರಿಯಾದರೂ ಭೆಟ್ಟಿ ಕೊಡುತ್ತಾ ಇದ್ದರು. ದೊಡ್ಡಪ್ಪಾ ಇನ್ನೂ ಒಂದು ದಿನ ಇದ್ದು ಹೋಗಬಾರದೆ? ಎಂದು ಸೀತಜ್ಜಿ ಉಪಚಾರದ ಮಾತು ಹೇಳಿದರೆ, ಸುಬ್ಬಜ್ಜ ತುಟಿಯ ಸಂದಿಯಲ್ಲೇ ನಕ್ಕು “ನಂಟರ ಮನೇಲಿ…ಒಂದು ದಿ ದಿ ದಿನಕ್ಕಿಂತ ಹೆಚ್ಚು ನಿಲ್ಲ ಬಾರದವ್ವಾ…” ಅನ್ನುತ್ತಿದ್ದರು. ದಕಾರ ಬಂದಾಗಲೆಲ್ಲಾ ಅವರಿಗೆ ಉಗ್ಗು ಒತ್ತಿಕೊಂಡು ಬರುತ್ತಾ ಇತ್ತು.

ಸುಬ್ಬಜ್ಜನನ್ನು ಕಂಡರೆ ನನಗಂತೂ ವಿಪರೀತ ಪ್ರೀತಿ. ಅದಕ್ಕೆ ಕಾರಣ ಅವರು ಬಂದವರೇ ,” ಪುಟ್ಟಾ ಬಾರೋ ಇಲ್ಲಿ. ದಿ ದಿ ದಿವಿನಾದ ಉತ್ತುತ್ತಿ ತಂದಿದೀನಿ…ಬಾ…ಒಂದು ಮುತ್ತಿಗೆ ಒಂದು ಉತ್ತುತ್ತಿ….ಬಾ ….ಬಾ…” ಎನ್ನುತ್ತಾ ಹತ್ತಿರ ಹೋದರೆ ನನ್ನನ್ನು ಬಾಚಿತಬ್ಬಿಕೊಂಡು ಮುಖದ ತುಂಬ ಲೊಚ ಲೊಚ ಮುದ್ದುಕೊಡುತ್ತಾ ಇದ್ದರು. ಸೀತಜ್ಜಿಗೆ ಇದು ಕಸವಿಸಿಯ ಸಂಗತಿಯಾಗಿತ್ತು. ನಾನು ಎಲ್ಲಿ ಸುಬ್ಬಜ್ಜ ಕೊಟ್ಟ ಉತ್ತುತ್ತಿ ತಿಂದು ಬಿಡುತ್ತೇನೋ ಅಂತ ಅವಳ ಆತಂಕ. ಆ ಆತಂಕಕ್ಕೆ ಏನು ಕಾರಣ ಎಂದು ನಾನು ಊಹಿಸದವನಾಗಿದ್ದೆ.

ಸುಬ್ಬಜ್ಜನ ವೇಷ ಭೂಷಣ ಮರೆಯಲಿಕ್ಕೇ ಸಾಧ್ಯವಿಲ್ಲ. ಈಶ್ವರನ ಗುಡಿ ತಿರುವಿನಲ್ಲಿ ಅವರು ಕಂಡ ಕೂಡಲೇ ಅದು ಸುಬ್ಬಜ್ಜನೇ ಎಂಬುದು ನನಗೆ ತಿಳಿಯುತ್ತಿತ್ತು. ಓ..ಸುಬ್ಬಜ್ಜ ಬಂತು ಅಂತ ನಾನು ಗಟ್ಟಿಯಾಗಿ ಅರಚುತ್ತಾ ಇದ್ದೆ. ಸುಬ್ಬಜ್ಜನದು ಬಣ್ಣ ಮಾಸಿದ ಕರೀಟೋಪಿ. ಕರೀಬಣ್ಣದ ಕೋಟು. ಹೆಗಲಿಗೆ ಒಂದು ಚೀಲ, ಒಂದು ಸಿಲವರ ಚೊಂಬು ಹುರಿ ಕಟ್ಟಿ ಜೋತುಬಿಟ್ಟುಕೊಂಡಿರುತ್ತಿದ್ದರು. ಚೀಲವೇನೋ ಸರಿ. ಆದರೆ ಆ ಸಿಲವರ ಚೊಂಬನ್ನು ಹೆಗಲಿಗೆ ನೇಲಿಸಿಕೊಂಡು ಈ ಮುದುಕ ಯಾಕೆ ಅಲೆಯುತ್ತಾರೋ ಎಂದು ನಾನು ಕುತೂಹಲದಿಂದ ಸುಬ್ಬಜ್ಜನ ಸಿಲವರ್ ಚೊಂಬನ್ನೇ ನೋಡುತ್ತಾ ಇದ್ದೆ. ಸುಬ್ಬಜ್ಜನ ಕಚ್ಚೆಪಂಚೆ ಮಾಸಿ ಗಿಮಟವಾಗಿರುತ್ತಾ ಇತ್ತು. ಅವರ ಬಾಯಿಂದ ಬೀಡಿ ವಾಸನೆ ಗಮ್ಮಂತ ಹೊಡೆಯುತ್ತಾ ಇತ್ತು. ಬಂದವರೇ ಸುಬ್ಬಜ್ಜ ತಮ್ಮ ಕೈಚೀಲವನ್ನು ಮಂಚದ ಮೇಲೆ ಇಟ್ಟು, ಸಿಲವರದ ಚೊಂಬನ್ನು ಮಾತ್ರ ಪಡಸಾಲೆ ಮೂಲೆಯಲ್ಲಿ ಇಟ್ಟು, ಏ ಹುಡುಗ ಇದನ್ನ ಮುಟ್ಟಿಗಿಟ್ಟೀ ಮತ್ತೆ…ಇದರಲ್ಲಿ ನಮ್ಮೂರ ಚೌಡೀನ ಮಡಗಿದೀನಿ…ದು ದು ದು ದ್ದೂರ ಇರಬೇಕು ಇದರಿಂದ…”ಅನ್ನುತ್ತಿದ್ದರು!.

More

ಇಲ್ಲೊಂದು ಗಣ’ಕಾವ್ಯ’

ನಾನು, ನನ್ ಲವ್ ಸ್ಟೋರಿ

ಯಾವ ವಿಷಯ ಇರಬಹುದು? ಹೇಗೆ ಕಾರ್ಯಕ್ರಮ ಆರಂಭಿಸ ಬಹುದು ಎನ್ನುವ ಬಗ್ಗೆ ಕೆಲವು ಕಾರ್ಯಕ್ರಮಗಳ ಬಗ್ಗೆ ಸಣ್ಣ ಕುತೂಹಲ ಇದ್ದೆ ಇರುತ್ತದೆ .ಅಂತಹುದೇ ಕುತೂಹಲ ಸಮಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಾನು ನನ್ ಲವ್ ಸ್ಟ್ರೋರಿ ಕಾರ್ಯಕ್ರಮದ ಬಗ್ಗೆ ಇತ್ತು. ಗುಡ್ ಬಿಗಿನಿಂಗ್ ಯ 🙂 ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ ಅದು.

ಹಿರಿಯ ಸಾಹಿತಿ ದಂಪತಿಗಳಾದ ಹಂಪನ ಹಾಗೂ ಕಮಲ ಹಂಪನ ಅವರ ಬಾಳ ಪಯಣದ-ಪ್ರೇಮ ಕಥೆಯ ಬಗೆಗಿನ ಪಕ್ಷಿನೋಟ ಅದ್ಭುತ ವಾವ್ !ಸರಳ ಮನದ ಬುದ್ಧಿವಂತ ಹೆಣ್ಣುಮಗಳು . ಆಕೆಯ ಮಾತು ದಾರಿದೀಪದಂತೆ ಇತ್ತೇ ವಿನಃ ಟೈಪಾಸ್ ಕಡಲೆಪುರಿಯಂತೆ ಇರಲಿಲ್ಲ.

ಅಂತರ್ಜಾತೀಯ ವಿವಾಹ ಅಂದ್ರೆ ಈಗಲೇ ಕಷ್ಟವು ಕಾಮನ್. ದುಡ್ಡಿನವರು ಆದ್ರೆ ಓಕೆ ನಡೀತದೆ, ಅದು ಬಿಟ್ರೆ ಆ ದಂಪತಿಗಳು ತ್ರಿಶಂಕು ಸ್ವರ್ಗ ಅನುಭವಸುವ ಸ್ಥಿತಿ .ಇಲ್ಲ ಹಾಗೇನು ಇಲ್ಲ ಎಂದು ಹೇಳುವ ಮಂದಿ ಇದ್ದಾರೆ.ಕೆಲವು ಕಷ್ಟಗಳು ಕಣ್ಣಾರೆ ಕಂಡಿದ್ದೇನೆ. ಆ ಒಂದು ಆಧಾರದ ಅನ್ವಯ ಈ ಮಾತುಗಳನ್ನು ಟೆಲ್ಲಿಂಗ್ ಅಷ್ಟೆ 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ರಂಗಶಂಕರದಲ್ಲಿ ಇಂದು

ಇಂದಿನ ನಾಟಕ
ಕಲಾಗಂಗೋತ್ರಿ ಅಭಿನಯಿಸುವ

ಪೂರಕ ಓದಿಗೆ- ಮೈಸೂರು ಮಲ್ಲಿಗೆ ಮಿಸ್ ಮಾಡ್ಬೇಡಿ

ಜನ ಗಣ ಮನ..

ಗಣರಾಜ್ಯೋತ್ಸವದ ಬಣ್ಣಗಳು

ನನ್ನ ಬಾಳಿನಲ್ಲಿ ಬಾಪು

ಲೈಫು ಚಿತ್ರಾನ್ನ

-ಮಧು ಕೃಷ್ಣಮೂರ್ತಿ

ರಸಿಕರ ರಾಜ್ಯ

This article was first published in Swarnasetu 2004, an annual magazine brought out by Kannada Koota of Northern California. Later it was also published in thatskannada web portal.

ಏನ್‌ ಗುರು ಸಮಾಚಾರ? ಸಪ್ಪೆ ಮುಖ ಹಾಕಿಕೊಂಡಿದ್ದ ಆಪ್ತ ಗೆಳೆಯನ್ನ ಈ ರೀತಿ ನಾನು ಕೇಳಿದಾಗ ಬಂದ ಉತ್ತರ ’ಲೈಫು ಚಿತ್ರಾನ್ನ ಆಗೋಗಿದೆ ಗುರು’ ಎಂದು. ಮನಸ್ಸಿಗೆ ಬಹಳ ವ್ಯಥೆಯಾಯಿತು. ಪಾಪ! ಹೀಗೇಕಾಯಿತು? ಚಿತ್ರಾನ್ನಕ್ಕೆ ಈ ಗತಿ ಏಕೆ ಬಂತು? ಜೀವನದ ಅರಾಜಕತೆಯನ್ನು ಹಾಗು ನೀರಸತೆಯನ್ನು ವರ್ಣಿಸಲು ಚಿತ್ರಾನ್ನವೇ ಆಗಬೇಕೆ? ಹಾಗೆ ನೋಡಿದರೆ ಚಿತ್ರಾನ್ನ ತಿನ್ನಲು ಬಹಳಾ ರುಚಿ ಅಗಿರುತ್ತೆ. ಜೊತೆಗೆ ನೋಡಲು ಅಂದವಾಗಿರುತ್ತೆ ಕೂಡ.

14 ವರುಷದ ಹಿಂದೆ ಚನ್ನರಾಯಪಟ್ಟಣದ ನನ್ನ ಚಿಕ್ಕಮ್ಮ ಮಾಡಿದ್ದ ಚಿತ್ರಾನ್ನವನ್ನು ಜ್ಞಾಪಿಸಿ ಕೊಂಡರೆ ಇಂದಿಗೂ ನನ್ನ ಬಾಯಲ್ಲಿ ನೀರೂರುತ್ತೆ. ಮಲ್ಲಿಗೆ ಹೂವಿನಂತ ಹಳದಿ ಬಣ್ಣದ ಅನ್ನ, ಎಣ್ಣೆಯಲ್ಲಿ ಹುರಿಯಲ್ಪಟ್ಟ ಕಂದು ಬಣ್ಣದ ಕಡ್ಲೆ ಬೀಜ, ಅಲ್ಲಲ್ಲಿ ಮೆರಗು ನೀಡುವ ಹಸಿ ಮೆಣಸಿನ ಕಾಯಿ, ಕರಿಬೇವು ಮತ್ತು ಕರಿ ಸಾಸಿವೆ! ಇಂತಹ ಚಿತ್ರಾನ್ನವನ್ನು ಇವನ ಗೋಳಿನ ಜೀವನಕ್ಕೆ ಹೋಲಿಸುವುದೆ? ಅವನಿಗೆ ಹೇಳಿದೆ ‘ತಪ್ಪು! ದೊಡ್ಡ ತಪ್ಪು! ಇನ್ನೂ ಬೇಕಾದರೆ ಸಾರನ್ನಕ್ಕೆ ಹೋಲಿಸ್ಕೊ.’ ಇದನ್ನು ಕೇಳಿದ ಸ್ನೇಹಿತ ನಿಬ್ಬೆರಗಾಗಿ ನನ್ನನ್ನೇ ನೋಡುತ್ತಾ ನಿಂತ. ಸಾರನ್ನದ ಈ ಮಹತ್ವ ತನಗೆ ತಿಳಿದಿರಲಿಲ್ಲವಲ್ಲ ಎಂದು ಅವನಿಗೆ ತನ್ನ ಬಗ್ಗೆಯೇ ಸ್ವಲ್ಪ ನಿರಾಶೆಯಾಗಿರಬೇಕು. ಅದಕ್ಕೆ ಇರಬೇಕು ಅದಾದ ನಂತರ ಅವನು ನನ್ನ ಬಳಿ ಆ ವಿಷಯ ಮಾತಾಡಿಲ್ಲ.

ನಿಜ ಹೇಳ್ಬೇಕು ಅಂದ್ರೆ ನನಗೂ ಸಾರನ್ನಕ್ಕು ಸ್ವಲ್ಪ ಅಷ್ಟಕ್ಕಷ್ಟೆ ! . ಒಂದು ಮನೇಲಿ ಇವತ್ತು ಅಡಿಗೆ ಮಾಡಲಾಗಿದೆ ಅನ್ನೋದಕ್ಕೆ ಅನ್ನ ಸಾರು ಒಂದು ಸುಳ್ಳು ಸಾಕ್ಷಿಯೇ ಹೊರತು ಅದಂರಿಂದಲೇ ಹೊಟ್ಟೆ ತುಂಬಿಸ್ಕೋಬೇಕಾದ್ರೆ ಬಹಳ ಕಷ್ಟ ಸ್ವಾಮಿ. ಜೊತೆಗೆ ಹಪ್ಪಳ ಸಂಡಿಗೆ ಕರಿದಿದ್ರೆ ಚೆನ್ನಾಗಿರುತ್ತೆ. ಆದ್ರೆ ಇಲ್ಲಿ ಅಮೇರಿಕಾದಲ್ಲಿ ಅದನ್ನೆಲ್ಲ ಕರಿಯೋದೊ ಂದು ದೊಡ್ಡ ತಲೇನೋವು. ಕರಿಯೋದು ಸುಲಭ. ಆದ್ರೆ ಆ ಕರಿದ ಎಣ್ಣೆ ಎಸಿಯೋದು ಒಂದು ರಂಪ? ಅಂಗಡಿ ಸಮೋಸ ಇರೋದ್ರಿಂದ, ಏನೋ ಒಂದಷ್ಟು ಸಾರನ್ನವನ್ನ ಗಂಟಲಲ್ಲಿ ಇಳಿಸ್ಬೋದು.

More

ಓದಲೇಬೇಕಾದ ಪುಸ್ತಕ

Previous Older Entries

%d bloggers like this: