ಬಿ ಸುರೇಶ್ ಓದಿದ್ದು..

ಒಂದು ವಾರದಿಂದ ಎಡಬಿಡದೆ ಓದುತ್ತಾ ಇದ್ದೇನೆ. ಗುರುಪ್ರಸಾದ್ ಕಾಗಿನೆಲೆ ಅವರ ‘ಗುಣ’, ಆರ್‌.ವಿ.ಆರ್‌ ಶಾಸ್ತ್ರಿ ಅವರ ’ಯಾವುದು ಚರಿತ್ರೆ?’, ಕುಂ.ವೀ. ಅವರ ‘ಗಾಂಧಿ ಕ್ಲಾಸು’, ವರ್ಗಿಸ್ ಅವರ ಆತ್ಮಚರಿತ್ರೆ… ಹೀಗೇ ಪಟ್ಟಿ ದೊಡ್ದದಿದೆ. ಆದರೆ ಓದುವ ಆನಂದ ಅದಕ್ಕಿಂತ ಬೃಹತ್ತಾಗಿದೆ. ಕಳೆದ ಎರಡು ತಿಂಗಳಲ್ಲಿ ಓದದೇ ಉಳಿದ ದೊಡ್ಡ ಪಟ್ಟಿ ಇದೆ. ಎಲ್ಲವನ್ನೂ ಬೇಗ ಓದಿ, ಹೊಸ ಪುಸ್ತಕಗಳಿಗೆ ಕಾಯಬೇಕಿದೆ. ಏನಂತೀರಿ?

Rights issue ಮತ್ತು FPO:

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ 39

There is no secret to success, it is the result of preparation, hard work and learning from failures. . . . . . . . Anon.

ಸಾಫಲ್ಯದ ಗುಟ್ಟು ಎಂಬುದಿಲ್ಲ. ಅದು ತಯಾರಿ, ಶ್ರಮ ಮತ್ತು ವೈಫಲ್ಯಗಳಿಂದ ಕಲಿಯುವುದರ ಫಲ. . . . ಅನಾಮಿಕ.

ಕಳೆದ ವಾರದ ಕಾಕು ಓದಿದವರಾದ ನೀವೀಗ ಬೋನಸ್ ಎಂಬ ಡಿಕ್ಷನರಿ ಶಬ್ದದ ಧ್ವನ್ಯಾರ್ಥದಿಂದಲೆ ಆನಂದ ತುಂದಿಲರಾದ ಜನತೆಯ ಮೇಲೆ ದೋಂಡುರಂಗ್ ಪಾಂಡುರಂಗ್ ಟೋಪಿವಾಲಾ ಕಂಪೆನಿ ಮಾಡಿದ ಮೋಡಿಯನ್ನು ಕೂಲಂಕಷವಾಗಿ ಅರಿತವರಾಗಿದ್ದೀರಿ.

ಇನ್ನೀಗ, ಅದೇ ದೋಂಡುರಂಗ್ ಪಾಂಡುರಂಗ್ ಕಂಪೆನಿಯನ್ನೇ ಮತ್ತೊಮ್ಮೆ ತೆಗೆದುಕೊಳ್ಳಿ. ಬೋನಸ್ ಹಂಚಿ ಅಜರಾಮರನಾದ ಬರ್ಸ ಮಗೆ ಮತ್ತಾರು ತಿಂಗಳುಗಳಲ್ಲಿ ಒಂದಕ್ಕೊಂದು (1:1) ಸುಪರ್ಡ್ಯೂಪರ್ ರೈಟ್ಸ್ ಇಶ್ಯೂ ಘೋಷಿಸಿ ಮಾರುಕಟ್ಟೆಯ ಬೆಳ್ಳಿಪರದೆಯಲ್ಲಿ ಮತ್ತೊಮ್ಮೆ ಮಿಂಚುತ್ತಾನೆ. ಕಂಪೆನಿಗೆ ಹೂಡಿಕೆಗಾಗಿ ಹೆಚ್ಚುವರಿ ದುಡ್ಡು ಬೇಕಾದಲ್ಲಿ ಇರುವ ಶೇರುದಾರರಿಗೆ ಮಾರುಕಟ್ಟೆಯ ಬೆಲೆಗಿಂತ ಕಡಿಮೆದರದಲ್ಲಿ ಹೊಸ ಶೇರುಗಳನ್ನು ನೀಡುವುದೇ ಈ ರೈಟ್ಸ್ ಆಫರ್. ಇದು ಸಧ್ಯದ ಶೇರುದಾರರಿಗೆ ಮಾತ್ರ ನೀಡಲಾಗುತ್ತದೆ. ಶೇರುದಾರರಲ್ಲದ ಹೊರಗಿನವರಿಗೆ ಇದು ಲಭ್ಯವಿಲ್ಲ.

ಈ ಸಂದರ್ಭದಲ್ಲಿ ಈ ಬಿರ್ಸ ಮಗೆ ಒಂದು ಶೇರಿಗೆ ಸಧ್ಯದ ಮಾರುಕಟ್ಟೆಯ ಬೆಲೆಯಾದ ರೂ 80 ಕ್ಕಿಂತ 50% ಕಡಿಮೆ ಬೆಲೆಗೆ, ಅಂದರೆ ರೂ 40ಕ್ಕೆ ಒಂದಕ್ಕೊಂದು ಶೇರುಗಳನ್ನು ಪ್ರಸ್ತುತ ಶೇರುದಾರರಿಗೆ ಕೊಡುವುದಾಗಿ ಘೋಷಿಸಿ ಜನರ ಕಣ್ಮನಗಳಲ್ಲಿ ಡಬ್ಬಲ್ ಬಿರ್ಸನಾಗುತ್ತಾನೆ. ಮಾರುಕಟ್ಟೆಯಲ್ಲಿ ರೂ 80 ಇರುವ ಶೇರು ಈಗ ರೂ 40 ಕ್ಕೆ!! ಆನರ ಆನಂದಕ್ಕೆ ಪಾರವೇ ಇಲ್ಲ. ಮಗನನ್ನು ಹಾಡಿ ಹೊಗಳುತ್ತಾರೆ. ಮೊದಲು ಬೋನಸ್ ಆಮೇಲೆ ರೈಟ್ಸ್ ಆಫರ್! ಇನ್ನೇನು ಬೇಕು? ಬಿರ್ಸದೇವನ ಮೂತರ್ಿಯಿಟ್ಟು ಮಂದಿರ ಕಟ್ಟುವುದೊಂದೇ ಬಾಕಿ.

More

Everyone killed cbi!!!!

ಸತೀಶ್ ಆಚಾರ್ಯ

ಸಂಚಾರಿ ಕಳವಾಗಿ ವಾಪಾಸು ಸಿಕ್ಕಿದ ಪ್ರಸಂಗವು…

ರುಕ್ಮಿಣಿ ಮಾಲಾ

ಮಾಯಾ ಲಹರಿ

೩೦-೧೦-೨೦೧೦ರಂದು ಮೈಸೂರು ನಿಲ್ದಾಣದಿಂದ ರಾತ್ರಿ ೯ ಗಂಟೆಗೆ ಮಧುರೆಗೆ ಹೋಗಲು ನಾವು ೧೨ ಮಂದಿ ಸರ್ಕಾರಿ ರಾಜಹಂಸ ಬಸ್ಸೇರಿದಾಗ ಬಾಗಿಲಲ್ಲಿ ಇಬ್ಬರು ನನ್ನನ್ನು ನೂಕುತ್ತ ಇಳಿದರು. ಬಸ್ಸು ಹತ್ತುವ ಜಾಗ ಇಕ್ಕಟ್ಟು. ಒಬ್ಬರಿಗೆ ಮಾತ್ರ ಹೋಗಲು ಜಾಗ ಅಲ್ಲಿ. ನಾನು ಒಳಗೆ ಹತ್ತಿ ಕುಳಿತು ಜಂಭದ ಚೀಲ ನೋಡುತ್ತೇನೆ ಜಿಪ್ ಅರ್ಧ ತೆರೆದಿದೆ. ಅರೆ ಇದು ಯಾರು ಜಿಪ್ ತೆರೆದದ್ದು ಎಂದು ಆಶ್ಚರ್ಯದಿಂದ ಒಳಗೆ ಕೈ ಹಾಕಿದರೆ ನನ್ನ ಸಂಚಾರಿ (ಮೊಬೈಲ್) ಮಾಯ. ಪಕ್ಕದಲ್ಲಿ ಕುಳಿತ ಅಮ್ಮನಿಗೆ ಹೇಳಿ, ಅಮ್ಮನ ಸಂಚಾರಿಯಿಂದ ಕೂಡಲೇ ಮನೆಯಲ್ಲಿದ್ದ ಮಗಳು ಅಕ್ಷರಿಗೆ ನಡೆದ ಸಂಗತಿ ತಿಳಿಸಿ, ಸಿಮ್ ಬ್ಲಾಕ್ ಮಾಡಲು ಹೇಳಿದೆ.

ಅದರಲ್ಲಿದ್ದ ಸಿಮ್ ಅವಳದ್ದು (ಚೆನ್ನೈ ಸಿಮ್). ತಮಿಳುನಾಡಿಗೆ ಹೋಗುವುದೆಂದು ರೋಮಿಂಗ್ ದರ ತಪ್ಪಿಸುವ ಸಲುವಾಗಿ ನನಗೆ ಅವಳ ಸಿಮ್ ಕೊಟ್ಟಿದ್ದಳು. ನನ್ನಲ್ಲಿದ್ದ ಮೊಬೈಲಿನಲ್ಲಿ tracker ಇತ್ತು. ಅದಕ್ಕೆ ಬೇರೆ ಯಾವುದೇ ಸಿಮ್ ಹಾಕಿದರೂ ಕೂಡಲೇ ಅನಂತನ ಸಂಚಾರಿಗೆ ಕ್ಷಿಪ್ರ ಸಂದೇಶ ಬರುತ್ತದೆ ಸಿಮ್ ಕಳುವಾಗಿದೆ ಎಚ್ಚರ ಎಂದು ಹಾಗೂ ಯಾವ ಸಿಮ್ ಹಾಕಿದ್ದಾರೋ ಆ ಸಂಖ್ಯೆ ಬರುತ್ತದೆ. ಮೊಬೈಲ್ ನ imie ಸಂಖ್ಯೆಯನ್ನು ತಡೆಗಟ್ಟಲು ಆಗುತ್ತ ನೋಡು ಎಂದು ಹೇಳಿದೆ. ಮುಂದೆ ೩ ದಿನ ನಮ್ಮ ಪ್ರಯಾಣದುದ್ದಕ್ಕೂ ನಾನು ಅಕ್ಷರಿಗೆ ದೂರವಾಣಿಸಲಿಲ್ಲ. ಆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅದೃಷ್ಟ ಇದ್ದರೆ ಸಿಕ್ಕೀತು ಎಂದು ಸುಮ್ಮನಾದೆ.

More

Mellows of musical mountain…

‘ಮೈಸೂರು ಮಲ್ಲಿಗೆ’ ಮಿಸ್ ಮಾಡ್ಬೇಡಿ..

Attended ‘Mysoor Mallige’ play at Rangashankara.

Lovely experience. One of the best plays i have watched in RS. For those who have missed it, there is a show on 26th Jan 2011.

Thanks to Aviratha Sateesh Gowda for alerting me wrt this play….:-)

-Malathi Shenoy


ವಾಸ್ತು …

-ಬಿ.ವಿ. ಪಾಂಡುರಂಗ ರಾವ್

ಮಲೆಗಳಲ್ಲಿ ಮದುಮಗಳು:ಗುತ್ತಿ ರಾತ್ರೋ ರಾತ್ರಿ ತಿಮ್ಮಿಯನ್ನು ಕರೆಕೊಂಡು ಸಿಂಬಾವಿಗೆ ಹೊರಟಿದ್ದ

ಬಾ ಹುಲಿಕಲ್ ನೆತ್ತಿಗೆ-12

-ಪ್ರೊ. ಶಿವರಾಮಯ್ಯ

ಬಾ, ಹುಲಿಕಲ್ನೆತ್ತಿಗೆ!

ಗುತ್ತಿ ರಾತ್ರೋ ರಾತ್ರಿ ಬೆಟ್ಟಳ್ಳಿ ಕೇರಿಯಿಂದ ತಿಮ್ಮಿಯನ್ನು ಕರೆಕೊಂಡು ಹುಲಿಕಲ್ಲು ಗುಡ್ಡದ ಮೇಲಿನ ದಾರಿಹಿಡಿದು ಸಿಂಬಾವಿಗೆ ಹೊರಟಿದ್ದ. ಅವಳು ನಡೆದುನಡೆದು ಕುಂಟಿ ಕುಂಟಿ ಗುತ್ತಿಯ ಹಿಂದೆ ಗುಡ್ಡ ಹತ್ತುತ್ತಿದ್ದಾಗಲೇ ನೆತ್ತರು ಹೆಪ್ಪುಗಟ್ಟುವಂತಹ ಆ ರುದ್ರ ಘಟನೆ ನಡೆದದ್ದು:

ಅದೇ ಸಮಯದಲ್ಲಿ ಐತ ಪೀಂಚಲು ಇಬ್ಬರೂ ಅವರ ಬಿಡಾರದಲ್ಲಿ ಊಟ ಮುಗಿಸಿ ಐತನ ಬತ್ತಲೆ ಮೈಗೆ ಪೀಂಚಲು ತೆಂಗಿನೆಣ್ಣೆ ನೀವುತ್ತಿದ್ದುದ್ದು: ಇದ್ದಕ್ಕಿದ್ದ ಹಾಗೆ ಹೆಬ್ಬಲಿಯ ಆರ್ಭಟೆ ಕಂದರಾದ್ರಿ ವಿಪಿನಗಳನ್ನೆಲ್ಲ ಆಲೋಡಿಸಿತ್ತು; ದೊಡ್ಡಿನ ಹಿಂಡು ಭೂಮಿಯನ್ನೆಲ್ಲ ಗುಡುಗಿಸುವಂತೆ ಓಡಿದ ಸದ್ದಾಗಿತ್ತು! ಐತ ಕಮ್ಮಾರಸಾಲೆಯಲ್ಲಿ ದೊಂದಿ ಹೊತ್ತಿಸಿಕೊಂಡು ಸಿಂಬಾವಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಗುತ್ತಿಯನ್ನು ನೆನೆದು, ಅವನ ಸುರಕ್ಷತೆಗೆ ಕಾತರನಾಗಿ ಪೀಂಚಲುವಿಗೆ ಹೇಳಿದ್ದನು; `ಏನಿರಬೇಕು ಅವನ ಎದೆ? ಆ ಹುಲಿಕಲ್ನೆತ್ತಿ, ಬೆತ್ತದಸರ, ಎಲ್ಲಾ ದಾಟಿಕೊಂಡು ಹೋಗಬೇಕಲ್ಲಾ!’ ಎಂದು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ತಟಕ್ಕನೆ ನಿಂತನು ಗುತ್ತಿ. ಕಿವಿಗೊಟ್ಟನು, ಹುಬ್ಬು ನಿಮಿರಿತು. ಹಣೆ ಬಿತ್ತರಿಸಿತು. ಉಸಿರು ಒಮ್ಮೆಗೆ ನುಗ್ಗಿ ಶ್ವಾಸಕೋಶ ಹಿಗ್ಗಿ ತುಂಬಿತು. ಕ್ಷಣಾರ್ಧದಲ್ಲಿ ಗ್ರಹಿಸಿತ್ತು ಅವನ ಬೇಟೆಗಾರ ಮನಸ್ಸು, ನಡೆಯುತ್ತಿದ್ದುದು ಏನು ಎಂದು. ತೆಕ್ಕನೆ ತಿರುಗಿ, ಜೀವ ಹಾರಿಹೋಯಿತೊ ಎಂಬಂತೆ ಹೆದರಿ ಹೌವ್ವನೆ ಹಾರಿ ತನ್ನನ್ನು ಒತ್ತಿ ನಿಂತಿದ್ದ ತಿಮ್ಮಿಯನ್ನು ಬಳಿಯಿದ್ದ ಒಂದು ಹೆಮ್ಮರದ ಬುಡಕ್ಕೆ ಎಳೆದು ನಿಲ್ಲಿಸಿ, ಅವಳಿಗೆ ಅಡ್ಡಲಾಗಿ ನಿಂತು, ಕೈಯಲ್ಲಿದ್ದ ದೊಂಎಇಯನ್ನು ಬೀಸುತ್ತಲೇ, ಉಜ್ವಲಗೊಳಿಸಿದನು. ದೊಂದಿಯ ತುದಿಯ ಅಗ್ನಿಜ್ವಾಲೆ ಆ ಕತ್ತಲೆಯಲ್ಲಿ ಅಲಾತಚಕ್ರದಂತೆ ಹಿಂದಕ್ಕೂ ಮುಂದಕ್ಕೂ ಬೆಂಕಿಗೆರೆ ಎಳೆಯುತ್ತಿತ್ತು.

More

ಶುಭಾ ಮುದ್ಗಲ್ ಸಂಗೀತ ಸಂಜೆ …

ಚಿತ್ರಗಳು :ರಜನಿ ಗರುಡ

ಧಾರವಾಡದಲ್ಲಿ ನಡೆದ ಶುಭಾ ಮುದಗಲ್ ಅವರ ಸಂಗೀತ ಕಾರ್ಯಕ್ರಮದ ಒಂದು ನೋಟ…

ಜಯಶ್ರೀ ಕಾಲಂ: ತುಂಬಾ ಆಶ್ಚರ್ಯ ಆಯ್ತು ಕಣ್ರೀ

ಕಣ್ಣಾ ಸನ್ನೆಯಲಿ ಹೆಣ್ಣ ಕೇಳೋನಿವ…! ರಾಜ್ ದಿ ಷೋ ಮ್ಯಾನ್ ಚಿತ್ರ ಸುಂದರ ಹಾಡಿದು. ಸಾಕಷ್ಟು ಜನರಿಗೆ ಹೊಸ ಹಾಡುಗಳ ಬಗ್ಗೆ ಸಸಾರ ಇದ್ರೂ ಈಗಿನ ಸಂಗೀತಗಾರರು ಸಾಕಷ್ಟು ಕೆಲಸ ಮಾಡಿ ಒಳ್ಳೊಳ್ಳೆಯ ಹಾಡುಗಳನ್ನು ನೀಡ್ತಾ ಇದ್ದಾರೆ.ಕೇಳುಗರನ್ನು ಆಕರ್ಷಿಸಲು ಕಷ್ಟಪಡುತ್ತಿದ್ದಾರೆ ಫೈನ್ :-)

ಆ ಹೊಸ ಹಾಡು ಗೊತ್ತಾ ಎಂದರೆ ಬಹುಸಂಖ್ಯಾತ  ಹಿರಿಯರು ಛೇ ಇಲ್ಲಪ್ಪ ನಾಟ್ ಅಟ್ ಆಲ್  ,ಅದೂ ಹಾಡಾ ಅಂತಹುದು ಸಾಹಿತ್ಯಾನ ಎಂದು ಮೂಗುಮುರಿತಾ ಇದ್ದವರೇ  ಈಗ ಸಿವ ಅಂತ ಹೋಗುತಿದ್ದೆ ರೋಡಿನಲ್ಲಿ ಸಿಕ್ಕಾಪಟ್ಟೆ ಸಾಲ ಇತ್ತು..!,ಹಾಡುವಷ್ಟು ಮೋಡಿ ಮಾಡಿದ್ದಾರೆ ಸಂಗೀತ ನಿರ್ದೇಶಕರು-ಗೀತ ರಚನೆಕಾರರು :-).ಆದರೆ ಕಳೆದ ವಾರ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ  ಸ ರೆ ಗ ಮ ಪ… ಕಾರ್ಯಕ್ರಮದಲ್ಲಿ ಒಂದು ಸಂಗತಿ ನನಗೆ ಸಿಕ್ಕಾಪಟ್ಟೆ ಆಶ್ಚರ್ಯ ಹಾಗೂ ಬೇಸರ ಉಂಟು ಮಾಡಿತು.

ಪೂರ್ಣ ಓದಿಗೆ :ಮೀಡಿಯಾ ಮೈಂಡ್

%d bloggers like this: