12.971606
77.594376
ಗೋಕರ್ಣದಿಂದ ನ್ಯೂಜೆರ್ಸಿಗೆ ಕಾಯ್ಕಿಣಿ..
17 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಬುಕ್ ಬಝಾರ್
ಕಳೆದ ವರ್ಷ ನನಸಾದ ನನ್ನ ಕನಸು…..‘ಗುಬ್ಬಿಗೂಡು’
-ಮೀರಾ ರಾಜಗೋಪಾಲ್
ಅಕ್ಕ 2010ರ ಪ್ರಕಟಣೆಗಳಲ್ಲಿ ಹೊರಬಂದ ಎರಡು ಪುಸ್ತಕಗಳು ‘ದೀಪ ತೋರಿದೆಡೆಗೆ’ ಕಥಾ ಸಂಕಲನ ಮತ್ತು ‘ಗುಬ್ಬಿಗೂಡು’ ಮಕ್ಕಳ ಪುಸ್ತಕ. ಈ ಎರಡೂ ಪುಸ್ತಕಗಳನ್ನು ಕುರಿತ ಮಾತುಕತೆ ಈ ದಿನ ನಮ್ಮ ಮನೆಯಲ್ಲಿ ನಡೆಯಿತು…‘ಪ್ರಸ್ತಾಪ’ ವತಿಯಿಂದ. ನ್ಯೂಜೆರ್ಸಿಯ ನಮ್ಮ ಮನೆಯಲ್ಲಿ ನಾವೆಲ್ಲ ಕುಳಿತು, ಸ್ಕೈಪ್ ಮೂಲಕ ಗೋಕರ್ಣದಲ್ಲಿದ್ದ ಜಯಂತ ಕಾಯ್ಕಿಣಿ ಮತ್ತು ಮೈಸೂರಿನಲ್ಲಿದ್ದ ಅಬ್ದುಲ್ ರಶೀದ್ ಅವರನ್ನು ಕಾಣಲು, ಕೇಳಲು, ಅವರೊಂದಿಗೆ ಮಾತಾಡಲು ಸಾಧ್ಯವಾಗಿದ್ದಕ್ಕೆ ತುಂಬಾ ಖುಶಿಯಾಗ್ತಿದೆ.
ಜಗತ್ತು ಇನ್ನೂ ಇನ್ನೂ ಚಿಕ್ಕದಾಗುತ್ತಾ ನಮ್ಮನ್ನೆಲ್ಲ ಹೀಗೇ ಹತ್ತಿರ ತರುತ್ತಿರಲಿ.
ಈ ಪುಸ್ತಕಗಳು ಹೊರಬರಲು ನೆರವಾದ ಎಲ್ಲರನ್ನೂ ನೆನೆಯುತ್ತಾ……..
ಇಂದು ಸಂಜೆ ಬರಗೂರು ಅಭಿನಂದನೆ
17 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in Invite
ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಕನ್ನಡ ವಿ.ವಿ.
“ನಾಡೋಜ ಗೌರವ”
ನೀಡಿರುವ ಪ್ರಯುಕ್ತ ಒಂದು ಸಂತೋಷ ಸಮಾರಂಭ.
ಅಧ್ಯಕ್ಷತೆ : ಡಾ|| ಮರಿಗಪ್ಪ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಅತಿಥಿಗಳು : ಡಾ|| ಜಿ. ರಾಮಕೃಷ್ಣ, ಸಂಪಾದಕರು, “ಹೊಸತು ಪತ್ರಿಕೆ”
ಡಾ|| ಬಸವರಾಜ ಕಲ್ಗುಡಿ, ವಿಮರ್ಶಕರು
ದಿನಾಂಕ 17-01-2011 ಸೋಮವಾರ ಸಂಜೆ 5.30 ಕ್ಕೆ
ಸ್ಥಳ : ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರ, ಕನ್ನಡ ಸಾಯಿತ್ಯ ಪರಿಷತ್ತು. ಬೆಂಗಳೂರು
ನಾನು, ಅಮಿತಾಬ್ ಬಚನ್…
17 ಜನ 2011 2 ಟಿಪ್ಪಣಿಗಳು
in ಝೂಮ್
ಇಂದು ಫೋಟೋ ಜರ್ನಲಿಸ್ಟ್ ಎಸ್ ಈಶ್ವರ್ ಅವರ ಛಾಯಾಚಿತ್ರಗಳ ಉತ್ಸವ ‘ಡ್ರೀಮ್ ವೀವರ್ಸ್’ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆರಂಭವಾಗುತ್ತಿದೆ. ಆ ಉತ್ಸವಕ್ಜ್ಕೆ ಮುನ್ನುಡಿಯಾಗಿ ಈಶ್ವರ್ ತೆಗೆದ ಅಪರೂಪದ ಚಿತ್ರವನ್ನು ಇಲ್ಲಿ ನೀಡುತ್ತಿದ್ದೇವೆ.
ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆ ನಡೆಸಿದ ಅಮಿತಾಬ್ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿಧಾನಸೌಧದಲ್ಲಿಯೇ ಪತ್ರಿಕಾ ಘೋಷ್ಟಿ ಏರ್ಪಡಿಸಿದ್ದರು. ಪತ್ರಿಕಾ ಘೋಷ್ಟಿ ನಡೆಸುತ್ತಿದ್ದಾಗ ಪತ್ರಕರ್ತರು ನೀವು ನಮಗೆ ಕಾಣಿಸುತ್ತಿಲ್ಲ ಎಂದದ್ದಕ್ಕೆ ತಾವು ಕುಳಿತಿದ್ದ ಖುರ್ಚಿಯನ್ನೇ ಏರಿ ಪ್ರಶ್ನೆಗಳ ಬಾಣಕ್ಕೆ ಉತ್ತರ ನೀಡಿದರು. ಆ ಚಿತ್ರ ಇಲ್ಲಿದೆ. ಥ್ಯಾಂಕ್ಸ್ ಈಶ್ವರ್.
ಛಿ ಪುಂಗ ಏನಿದು, ಛಿ ಹೀಗಾ ಮಾತಾಡೋದು..?
17 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
104 ಎಫೆಮ್ನಲ್ಲಿ ಪುಂಗ ಎಸೆಸೆಲ್ಸಿ ಎನ್ನುವ ಮಹನೀಯನ ಧ್ವನಿ ಬರುತ್ತದೆ. ಆತನ ಬಾಯಿ ಬೊಂಬಾಯಿ 🙂 . ಥೂ ಕೊಳೆತು ಹೋಗಿರುವ ಈರುಳ್ಳಿ ಮುಖದವನೆ , ಕೆಟ್ಟ ರುಚಿಯ ಚಟ್ನಿ ಅಂತಹವನೇ, ಅಂತಹವನೇ.. ಯಪ್ಪಾ ಆ ಪುಂಗನ ಮಾತು ಕೇಳಿದ್ರೆ ಹಾಗೆನ್ನುವುದಕ್ಕಿಂತ ಬೈದರೆ ಪಾಪ ಬೈಸಿ ಕೊಂಡವನ ಕಥೆ ಹೇಗೇ ಇರಲಿ ನಮ್ಮ ಕಥೆ ಬ್ಯಾಡ.. ಛಿ ಪುಂಗ ಏನಿದು, ನಿಮ್ಮ ಧ್ವನಿ ಹೆಣ್ಣುಮಕ್ಕಳು ಸಹ ಕೇಳ್ತಾ ಇರ್ತಾರೆ ಛಿ ಹೀಗಾ ಮಾತಾಡೋದು.. 🙂
ಪೂರ್ಣ ಓದಿಗೆ- ಮೀಡಿಯಾ ಮೈಂಡ್
ಅಕ್ಷತಾ ಬರೆದದ್ದು: ಥ್ಯಾಂಕ್ಸ್
17 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ದಣಪೆಯಾಚೆ...
ಅಹರ್ನಿಶಿ ಪ್ರಕಾಶನದ ಮೂಲಕ ಸಾಕಷ್ಟು ಮೌಲ್ಯಯುತ ಪುಸ್ತಕಗಳನ್ನು ಕೊಟ್ಟಿರುವ ಕೆ ಅಕ್ಷತಾ ಎರಡು ವರ್ಷದ ಹಿಂದೆ ‘ಅವಧಿ’ಗೆ ಅಂಕಣ ಬರೆಯುತ್ತಿದ್ದರು. ದಣಪೆಯಾಚೆ..ಅಂತ.
ಆ ಸರಣಿಯ ‘ಪಲ್ಯ ಎಂಬ ಆತ್ಮವಿಶ್ವಾಸ‘ ಲೇಖನವನ್ನು ಮತ್ತೆ ಪ್ರಕಟಿಸಿದ್ದೆವು. ಆ ಲೇಖನ ಕೊಟ್ಟ ಆತ್ಮವಿಶ್ವಾಸದ ಬಗೆಗೂ ಅಕ್ಷತಾ ಇಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ಎರಡು ವರುಷದ ಹಿಂದೆ ನಾನು ಬರೆದ ಲೇಖನವನ್ನು ಅವಧಿಯಲ್ಲಿ ಮತ್ತೊಮ್ಮೆ ನೋಡಿ ನಂಗೆ ನಿಜ ಖುಷಿಯಾಯಿತು. ಪ್ರಕಟಿಸಿದ ಅವಧಿ ಬಳಗಕ್ಕೂ ಮತ್ತು ಓದಿ ಪ್ರತಿಕ್ರಿಯಿಸಿದ ಸಹೃದಯಿ ಓದುಗ ಮಿತ್ರರೆಲ್ಲರಿಗೂ ಥ್ಯಾಂಕ್ಸ್.
ಒಂದು ರೀತಿಯಲ್ಲಿ ಸ್ವಂತದ ಬರವಣಿಗೆಯನ್ನೇ ಮರೆತಿದ್ದವಳನ್ನು ಈ ಲೇಖನ ಮತ್ತೆ ನನ್ನಲ್ಲಿ ಕವಿತೆ , ಇತ್ಯಾದಿ ಬರವಣಿಗೆ ಮಾಡುವ ಆಶೆಯನ್ನು ಹುಟ್ಟಿಸಿದೆ . ಕಿ.ರಂ , ಅನಂತಮೂರ್ತಿ, ಶಾಮಣ್ಣ ಮತ್ತಿತರ ಮಾತು ಗಳನ್ನು ಬರಹಕ್ಕೆ ಇಳಿಸುವುದನ್ನೆ ಮತ್ತೆ ಮತ್ತೆ ಅಭ್ಯಾಸ ಮಾಡುತ್ತಾ ಮತ್ತು ಅದರಲ್ಲಿ ಅಗಾಧವಾದ ಸುಖವನ್ನು ಕಾಣುತಿದ್ದ ನನಗೆ ಸ್ವಂತದ ಬರವಣಿಗೆ ಮರೆತೇ ಹೋದಹಾಗೆ ಆಗಿತ್ತು ಅಂದ್ರು ಸುಳ್ಳಲ್ಲ .
ನಿಜ ಅಂದ್ರೆ ಇತ್ತೀಚಿನ ದಿನದಲ್ಲಿ ನಾನು ಏನು ಬರೆದು ಇಲ್ಲ . ಗೆಳೆಯರ ಕೈಲಿ ಈ ಬಗ್ಗೆ ಬಯ್ಯಿಸಿಕೊಳ್ಳುವುದು ಅಭ್ಯಾಸ ಆಗಿತ್ತು . ಪ್ರಕಾಶನದ ದಸೆಯಿಂದ ನಾನು ಸ್ವಂತದ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಗೆಳೆಯರ ಅಭಿಪ್ರಾಯ ಆದರೆ ನಿಜವೆಂದರೆ ಅದಲ್ಲ ಕಾರಣ . ಬೇರೆಯೇ ಇದೆ. ಏನೆಂದರೆ ಬೇರೆಯವರ ಮಾತುಗಳನ್ನು ಬರಹಕ್ಕೆ ತರುವುದೆಂದರೆ ಆಲಿಸುವುದು ಮತ್ತು ಅದನ್ನು ಯಥಾವತ್ತಾಗಿ ಬರೆಯುವುದಲ್ಲ ನನ್ನ ಪಾಲಿಗೆ . ಆ ಮಾತಿನ ಒಳಗಿನ ದ್ವನಿಯನ್ನು ಗ್ರಹಿಸಬೇಕು . ಅದನ್ನು ಅಭ್ಯಾಸ ಮಾಡುತ್ತಲೇ ಇದ್ದೇನೆ .
ಅದರ ನಡುವೆ ಸ್ವಂತದ ಬರವಣಿಗೆಯನ್ನು ಮರೆತೇ ಬಿಟ್ಟಿದ್ದ ನನ್ನೆದುರಿಗೆ ನನ್ನ ಬರವಣಿಗೆಯನ್ನು ಹಿಡಿದು ಮತ್ತೆ ಬರೆಯುವ ಆಶೆಯನ್ನು ಉಕ್ಕಿಸಿದ್ದೀರಿ,ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮಿ . ಯಾಕೆಂದರೆ ನನಗೀಗ ಇಂಥದೊಂದು ಸಾಕ್ಷಾತ್ಕಾರದ , ಮೆಚ್ಚಗೆಯ, ಸ್ಪಂದನೆಯ ಅಗತ್ಯವಿತ್ತು . ಬರವಣಿಗೆಯ ಮನಸ್ಸೇ ವಿಚಿತ್ರ ಅನಿಸ್ತದೆ.ಯಾರು ಕೇಳಲಿ ಬಿಡಲಿ ನಾನು ನನಗಾಗಿ ಹಾಡುವೆ ಅಂತ ಗಟ್ಟಿ ಮಾಡಿಕೊಂಡೆ ಬರವಣಿಗೆ ಮಾಡ್ತೀವಿ. ಆದರೆ ಕೇಳೋ ಹಾಗೆ ಹಾಡಬೇಕು ಅನ್ನೋ ಪ್ರಜ್ಞೆ ಇರೋ ಹಾಗೆ ಓದೋ ಹಾಗೆ ಬರೀಬೇಕು ಅನ್ನೋ ಆಶೆಯೂ ಸುಪ್ತವಾಗಿ ಇದ್ದೆ ಇರ್ತದೆ.
ಹಾಗೆ ತುಂಬಾ ಸರ್ತಿ ಬರವಣಿಗೆ ಮಾಡಿದ ಮೇಲೆ ಅದು ನನ್ನದಲ್ಲ ಓದುಗನದು.ಹೊಗಳಲಿ ಬಯ್ಯಲಿ ಏನಾದ್ರು ಮಾಡ್ಕೊಳಿ ಅಥವಾ ಪ್ರತಿಕ್ರಿಯಿಸದೇನೆ ಇರೋದು ಅವರ ಹಕ್ಕು ಅಂದುಕೊಳ್ಳುವವಳು ನಾನು. ಆದರೆ ಈ ಹೊತ್ತು ಇದನ್ನ ನೋಡಿ ಖುಷಿ ಆಗಲಿಲ್ಲ ಅಂದ್ರೆ ಸುಳ್ಲಾಗ್ತದೆ. ಮತ್ತೆ ಬರೆಯೋ ಆಶೆ ಹುಟ್ಟಲೇ ಇಲ್ಲ ಅಂದ್ರೆ ಸುಳ್ಲಾಗ್ತದೆ
ಬಿ ಸುರೇಶ ಓದಿದ್ದು..
17 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಬುಕ್ ಬಝಾರ್
ಬಿ ಸುರೇಶ ಓದಿದ್ದು ಇಲ್ಲಿದೆ. ನೀವು ಓದಿದ ಪುಸ್ತಕಗಳ ಪಟ್ಟಿಯನ್ನೂ ಕೊಡಿ- ಕಳೆದ ವಾರದ ಲೆಕ್ಕ, ಓದಿ ಮುಗಿಸಿದ ಪುಸ್ತಕಗಳದ್ದು :
ಪಮುಖ್‌ನ ‘ಇಸ್ತಾನ್‌ಬುಲ್’, ಜೋಗಿ ‘ಮಾಯಾ ಕಿನ್ನರಿ’, ‘ರೂಪ-ರೇಖೆ’, ‘ಸೂಫಿ ಕತೆಗಳು, ಭಟ್ಟರ ‘ಕಾವ್ಯಪ್ರತಿಮೆ’, ಜಯಶ್ರೀ ಹೆಗಡೆ ಅವರ ‘ಅಭಿನವ ಶಾಕುಂತಲ’, ಸಂಚಯ ದವರ ‘ಕಿ.ರಂ.ನೆನಪು’
ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕ ಒಂದು ಅಪರೂಪದ ಪಾಠ!
ಇತ್ತೀಚಿನ ಟಿಪ್ಪಣಿಗಳು