ಕಾಕತ್ಕರ್, ಬೆಳಗೆರೆ ನೀಡಿದ ಶೈಲಿಯನ್ನು ಯಾವ ವೀಕ್ಷಕನೂ ಮರೆಯಲಾರ

ಇಲ್ಲಿ ಕಾರ್ಯಕ್ರಮವನ್ನು ನಿರೂಪಕರು ನಕಲಿಸುತ್ತಾರೆ ಎಂದು ನಾನು ಎಲ್ಲಿಯೂ ತಿಳಿಸಿಲ್ಲ, ಮಾತಿನ ಶೈಲಿ ಇದೆಯಲ್ಲ ಕೆಲವರ ಅನುಕರಣೆಯಂತೆ ಕೇಳಿ ಬರುತ್ತದೆ ಎಂದು ನಾನು ತಿಳಿಸಲು ಹೊರಟಿದ್ದು. ಮುಖ್ಯವಾಗಿ ಕೆಲವು ಕಾರ್ಯಕ್ರಮಗಳು ಅತಿ ಹೆಚ್ಚು ಜನಪ್ರಿಯ ಪಡೆದೆ ಇದೆ, ಯಾರೆಷ್ಟೇ ಕೂಗಾಡಿದರು, ಕಿರುಚಾಡಿದರು ಸಹ!( ನಕಲಿಸೋದು ಅಂದ್ರೆ ಪ್ರತಿ ಸಂಗತಿಯನ್ನು ಯಥಾವತ್ ಮಾಡೋದು ಅಂದ್ರೆ ಫೋಟೋ ಕಾಪಿ )

ಕನ್ನಡ ಟೀವಿ ಲೋಕದಲ್ಲಿ ಕ್ರೈಂ,ದೇವರು ಪವಾಡಗಳ ಕಾರ್ಯಕ್ರಮಗಳು ಜನಪ್ರಿಯತೆಯನ್ನು ಕಂಡವು-ಕಾಣ್ತಾ ಇದೆ. ಕ್ರೈಂ ಕಾರ್ಯಕ್ರಮದ ವಿಷಯಕ್ಕೆ ಬಂದಾಗ ಬಾಲಕೃಷ್ಣ ಕಾಕತ್ಕರ್ , ರವಿ ಬೆಳಗೆರೆ ಅವರು ನೀಡಿದ ಶೈಲಿಯನ್ನು ಯಾವ ವೀಕ್ಷಕ ಮರೆಯಲಾರ. ಕ್ರೈಂ ಕಾರ್ಯಕ್ರಮ ಅಂದ್ರೆ ಕೊಲೆ ಸುಲಿಗೆ ಮಾತ್ರವಲ್ಲ , ಸಮಾಜದಲ್ಲಿ ಬೇರೂರಿರುವ ಲಂಪಟತನದ ಭಿನ್ನ ರೂಪವು ಈ ರೀತಿ ಇರುತ್ತದೆ. ಸುಮ್ಮನೆ ಯಾರೋ ಗೊತ್ತಿಲ್ಲದೇ ಇರುವವರ ಬಳಿ ಚೀಟಿ ಹಾಕ ಬೇಡಿ, ನಿಮಗಾಗಿ ಸುರಕ್ಷಿತ ಮಾರ್ಗಗಳು ಇವೆ. ಹೀಗೆ ಹತ್ತು ಹಲವಾರು . ಪ್ರಾಯಶ: ಅವರ ಕಾರ್ಯಕ್ರಮಗಳು ಆ ಪರಿ ಜನಪ್ರಿಯತೆ ಕಾಣಲು ಮುಖ್ಯ ಕಾರಣ ಅಂತಹ ಶೈಲಿ ವೀಕ್ಷಕರಿಗೆ ಹೊಸದಾಗಿತ್ತು.

ಪೂರ್ಣ ಓದಿಗೆ –ಮೀಡಿಯಾ ಮೈಂಡ್

ಮೌನೇಶ್ ಬಡಿಗೇರ್ ಗೆ ಟೋಟೋ ಪ್ರಶಸ್ತಿ

ಮೌನೇಶ್ ಬಡಿಗೇರ್, ಶ್ರೀದೇವಿ ಕಳಸದ, ಸುಶ್ರುತ ದೊಡ್ಡೇರಿ ಟೋಟೋ ಪ್ರಶಸ್ತಿ (ಕನ್ನಡ) ಅಂತಿಮ ಸುತ್ತಿಗೆ ಬಂದಿದ್ದರು. ಕನ್ನಡದಲ್ಲಿ ಸೃಜನಾತ್ಮಕ ಬರವಣಿಗೆ ಗುರುತಿಸಲು ಇದೇ ಮೊದಲ ಬಾರಿಗೆ ಸ್ಥಾಪಿಸಿರುವ ಪ್ರಶಸ್ತಿ ಕೊನೆಗೆ ಮೌನೇಶ್ ಬಡಿಗೇರ್ ಪಾಲಾಯಿತು.
ಜಯಂತ ಕಾಯ್ಕಿಣಿ, ಅಬ್ದುಲ್ ರಶೀದ್, ವಿವೇಕ ಶಾನಬಾಗ ರನ್ನು ಒಳಗೊಂಡ ಡ ತೀರ್ಪುಗಾರರ ಸಮಿತಿ ಇತ್ತು. ಕನ್ನಡ ಪ್ರಶಸ್ತಿಯ ವಿವರ ಇಲ್ಲಿದೆ.
ಇನ್ನೂ ವಿವರ ವರದಿ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ.
CREATIVE WRITING IN KANNADA
(one award, Rs 25,000)
(no. of applications: 126)
The three jurors were: short fiction writer, poet and film lyricist Jayant Kaikini, fiction writer and editor of the web magazine Kendasampige Abdul Rasheed, and fiction writer and editor of the quarterly journal Deshakaala Vivek Shanbag.
There was no long list.
Shortlist
There were three applicants on the shortlist:
  1. Shreedevi Kalasad (Bangalore)
  2. Mounesh L. Badiger (Bangalore)
  3. Sushrutha Dodderi (Bangalore)
The award went to Mounesh L. Badiger for his short fiction.

Jurors general remarks:
“The entries for this year have a lot of variety and enthusiasm. If this enthusiasm is coupled with reflection and forbearance, it is not far-fetched to anticipate significant works from these writers in the coming years. The entries have flown in from all parts of Karnataka, rich in thematic diversity. Beginning from the turbulences offset by globalization, to exploring an individual’s relevance in contemporary society, equality, the bewilderment of city experience, and the passionate love relationships of youth — there is an entire range of themes. This is a welcome situation.
“However, when one evaluates them in terms of craft of writing, there is scope for enormous improvement. The works do not bear testimony to a writer’s struggle to arrive at the right expression, language, form and structure. Most entries seemed to be content with what came to them effortlessly. When the writer is deeply engaged with language, the writing gets laced with a rare kind of dynamism. It’s important for these young writers to recognize their innate, organic rhythm. Many writers — the ones who were part of the long and short list — have a talent for this. The panelists have no grouse as far as talent is concerned; it is however imperative that these writers master their craft as well. These skills can be sharpened only with contemplation and wide reading.”

ಅಪ್ಪಾ, ಕುಮಾರವ್ಯಾಸ…

ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಗದುಗಿನ ನಾರಣಪ್ಪ, ಭಾಮಿನಿ ಷಟ್ಪದಿಯಲ್ಲಿ ಮಹಾಭಾರತವನ್ನು ರಚಿಸಿ ಕುಮಾರವ್ಯಾಸನಾದವನು. ಅವನ ಕರ್ಣಾಟ ಭಾರತ ಕಥಾಮಂಜರಿ ಇವತ್ತಿಗೂ ಓದುಗರಿಗೆ ರೋಮಾಂಚನವನ್ನುಂಟುಮಾಡುವ ಕೃತಿ. ಗಮಕಗಾಯನದಲ್ಲಿ ಅದನ್ನು ಕೇಳುವಾಗ ಶ್ರೋತೃಗಳಿಗೆ ಮೈನವಿರೇಳುತ್ತದೆ. “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!” ಎಂದು ಕುವೆಂಪು ಅವನನ್ನು ಹೊಗಳಿದ್ದಾರೆ.

ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!

೧೮ ಕ್ಕಿಂತ ಹೆಚ್ಚು ವಯಸ್ಸಿನವರಾದರೆ ಮಾತ್ರ

ಭೇಟಿ ಕೊಡಿ- ಮೋಟುಗೋಡೆಯಾಚೆ ಇಣುಕಿ

ನವೋಮಿ ಕಾಲಂ: ಕನಸಿನಲ್ಲಿ ಬಂದವನಾರೆ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.

 

 

 

 

ಅವನೆಂದರೆ ಲಕ್ಷಾಂತರ ಜನರಿಗೆ ಪ್ರಿಯ..ಅವನ ಒಂದು ಝಲಕ್ ಗಾಗಿ ಕಾಯೋ ಜನ ಅದೆಷ್ಟೋ..ಅವಳ ಹಣೆ ಬರಹ ಚೆನ್ನಾಗಿತ್ತೇನೋ..

ಅವನಿಗಾಗಿ ಕಾದಿರಿಸಿದ ಲಿಫ್ಟ್ ನಲ್ಲಿ ಇವಳು ನುಗ್ಗಿದ್ದಳು…ಪಕ್ಕದಲ್ಲೇ ನಿಂತಿದ್ದ. ಅವನ ಅಸಿಸ್ಟೆಂಟ್ ಮುಖಮುಖ ನೋಡುತ್ತಿದ್ದ…

ಆತನೂ ಒಮ್ಮೆ ನೋಡಿದ. ಇವಳಿಗೆ ಏನೂ ಮಾಡಬೇಕೋ ಅರ್ಥವಾಗಲಿಲ್ಲ..ಆತ ನಕ್ಕು ಹಾಯ್ ಎಂದ..ಇವಳು ನಡುಗುತ್ತಲೇ  ಹಲೋ ಎಂದಳು…

ನಾನು ನಿಮ್ಮ ದೊಡ್ಡ ಪ್ಯಾನ್ ಎಂದಳು ಅವಳಿಗೇ ಗೊತ್ತಾಗದಂತೆ.

ಥ್ಯಾಂಕ್ಸ್….ನಿಮ್ಮ ಹೆಸರು?

ಹೇಳಿದಳು.

ನಿಮ್ಮ ಫೋನ್ ನಂಬರ್ ?…ಕೇಳೋದು ಕೇಳಿ ಯಾಕಾದರೂ ಕೇಳಿದ್ನಪ್ಪಾ ಎಂದು ತುಟಿಕಚ್ಚಿಕೊಂಡಳು.

ನಿಮ್ಮದು ಹೇಳಿ. ನಾನು ಎಸ್ಎಂಎಸ್ ಮಾಡ್ತೀನಿ ಎಂದ.

……944… ಒಂದೇ ಉಸಿರಿಗೆ ಹೇಳಿದ್ದಳು.

ಲಿಪ್ಟ್ ನಿಂತಿತ್ತು.

ಹ್ಯಾವ್ ಎ ನೈಸ್ ಡೇ ಎಂದು ಹೊರಟಿದ್ದ..

ಇವಳು ಏನೂ ಹೇಳದೇ ಹಾಗೆ ನಿಂತಿದ್ದಳು. ಇವಳಿಗಾಗಿ ಕಾದು ನಿಂತಿದ್ದ ಗೆಳತಿ

ಏನೇ ಹಾಗೆ ನಿಂತಿದ್ದೀಯಾ..ಅಪರೂಪಕ್ಕೆ ಬಂದಿದ್ದೀಯಾ..ಬಾ

ಎಂದಳು.

ಫೈಸ್ಟಾರ್ ಹೊಟೆಲ್ನಲ್ಲಿ ಆಕೆ ಫ್ರಂಟ್ ಆಫೀಸರ್…

ಇಡೀ ಹೊತ್ತು ಎಸಿನಲ್ಲಿ ಬೇಜಾರಾಗಲ್ವೇನೆ?

ಗ್ರೇಟ್ ಹಂಕ್ಸ್ ಬರ್ತಾವಲ್ಲ..ಆ ಬಿಸಿಗೆ ಎಸಿ ಕಡಿಮೆ ಎನಿಸುತ್ತೆ ..ಆಕೆ ನಕ್ಕಿದ್ದಳು.

ಗೆಳತಿನ ನೋಡಲು ಬಂದವಳು ಅವನ ಧ್ಯಾನದಲ್ಲಿ ಮುಳುಗಿದ್ದಳು..ಮೊಬೈಲ್ ನೋಡುತ್ತಲೇ ಇದ್ದಳು.ಎಸ್ಎಂಎಸ್ ಈಗ ಬರಬಹುದು ಆಗ ಬರಬಹುದು ಎಂದು..ಒಂದೊಂದು ಕ್ಷಣವೂ ಕಳೆಯಲು ಅಸಾಧ್ಯ ಎನಿಸುತ್ತಿದೆಯಲ್ಲಾ.

ಬೇಕಂತ ಹೇಳಿರ್ಬೇಕು..ಛೇ..ಫೂಲ್ ಆಗ್ಬಿಟ್ನಲ್ಲಾ…ಫೋನ್ ನಂಬರ್ ಕೊಡಬಾರದಿತ್ತು…ಮತ್ತೆ ಮೊಬೈಲ್ ನೋಡುತ್ತಾಳೆ.ಛೇ..ನೆಟ್ವರ್ಕ ಇಲ್ಲ. ಒಳ್ಳೇ ಶವದ ಹಾಗೆ  ಮೊಬೈಲ್ ಒಂದೇ ಒಂದು ಕಡ್ಡಿಯಲ್ಲಿ  ಉಸಿರಾಡ್ತಾ ಇದೆ..

ಅವಳೇನು ಹೇಳಿದಳೋ ಇವಳೇನು ಕೇಳಿದಳೋ.ಟಾಟಾ ಬೈಬೈ ಎಂದು ಹೊರಗೋಡಿ  ಬಂದಿದ್ದಳು.ಥಟ್ಟನೆ ಬಂದಿತ್ತು. ಮೊಬೈಲ್ ಗೆ ಜೀವ.ಅದರೊಂದಿಗೆ ಬಂದಿತ್ತು…ಅವನ ಎಸ್ಸೆಂಎಸ್ಸ್…

Hai…Nice to meet  you..

ಮೊಬೈಲ್ ನ ಎದೆಗವುಚಿಕೊಂಡಿದ್ದಳು.

More

ಪುಟ್ಟ ಸ್ತನಗಳೂ, ದೊಡ್ಡ ದೇಶವೂ…

-ಹರೀಶ್ ಕೇರ

ಬೆಟ್ಟದಡಿ

 

 

 

 

 

 

 

 

 

 

 

 

ಪ್ರತಿವಾರ ಮಿಲಿಯಗಟ್ಟಲೆ ಕೊಲಂಬಿಯನ್ನರು ಟಿವಿ ಧಾರಾವಾಹಿಯೊಂದನ್ನು ನೋಡುತ್ತಾರೆ. ಪುಟ್ಟದಾಗಿರುವ ತನ್ನ ಸ್ತನಗಳನ್ನು ದೊಡ್ಡದಾಗಿಸಿಕೊಳ್ಳಬೇಕೆಂದು ಹಂಬಲಿಸುವ ಟೀನೇಜ್ ಹುಡುಗಿಯೊಬ್ಬಳು ಪಡುವ ವಿವಿಧ ಪಾಡುಗಳೇ ಈ ಸೀರಿಯಲ್ಲಿನ ತಿರುಳು.

ಈಕೆಯ ಹೆಸರು ಕತಲಿನಾ. ಬಡತನದ ಬೇಗೆ, ಶಾಲೆ ಕಲಿತರೂ ಸಿಗದ ಕೆಲಸದಿಂದಾಗಿ ಕತಲಿನಾ, ತನ್ನ ಗೆಳತಿಯರು ಮಾಡಿದ್ದನ್ನೇ ಮಾಡಲು ಬಯಸುತ್ತಾಳೆ. ಆಕೆಯ ಗೆಳತಿಯರು, ಸ್ತನ ಸರ್ಜರಿ ಮಾಡಿಸಿಕೊಂಡು, ಎದೆಯ ಗಾತ್ರ ಹಿಗ್ಗಿಸಿಕೊಂಡಿದ್ದರು. ಅದಕ್ಕೆ ಕಾರಣ, ಗ್ಯಾಂಗ್‌ಸ್ಟರ್ ಯುವಕರು ಅವರನ್ನು ಮೋಹಿಸಿ, ಅವರ ಬಗೆಗೆ ಕಾಳಜಿ ವಹಿಸುತ್ತಾರೆ ಎಂಬ ಆಶೆ.

ಸರ್ಜರಿಗೆ ಹಣ ಬೇಕು. ಅದನ್ನು ಭರಿಸಲು ಕತಲಿನಾ ವೇಶ್ಯಾವೃತ್ತಿಗೆ ಇಳಿಯುತ್ತಾಳೆ. ಆದರೆ, ಅವಳ ಸ್ತನಗಳ ಗಾತ್ರ ಚಿಕ್ಕದು ತಾನೆ ! ಇದರಿಂದಾಗಿ, ಗಿರಾಕಿಗಳೂ ಅವಳೆಡೆಗೆ ಆಕರ್ಷಿತರಾಗುವುದಿಲ್ಲ. ತನ್ನ ಸ್ತನ ದೊಡ್ಡದಾದೊಡನೆ ತನ್ನ ಬದುಕೂ ಈಗಿರುವ ಸ್ಥಿತಿಯಿಂದ ಸ್ವರ್ಗವಾಗಿ ಬಿಡಬಹುದೆಂಬ ಆಸೆಯಿಂದ ಕತಲಿನಾ ತನ್ನ ಯತ್ನ ಮುಂದುವರಿಸುತ್ತಾಳೆ. ಆಕೆಯ ಯತ್ನಗಳೆಲ್ಲ ಆಕೆಯನ್ನು ಇನ್ನಷ್ಟು ಅವಮಾನ, ಹಿಂಸೆಗಳ ಕಡೆಗೆ ಒಯ್ಯುತ್ತವೆ.

ನಿಜಘಟನೆಗಳಿಂದ ಪ್ರೇರೇಪಿತವಾಗಿರುವ ಈ ಸೀರಿಯಲ್ಲಿನ ಹೆಸರು “ವಿದೌಟ್ ಟಿಟ್ಸ್ ದೇರ್ ಈಸ್ ನೋ ಪ್ಯಾರಡೈಸ್.’ ಧಾರಾವಾಹಿಯನ್ನು ಮೆಚ್ಚುವವರೂ ಟೀಕಿಸುವವರೂ ಇಲ್ಲಿದ್ದಾರೆ. “ಈ ಧಾರಾವಾಹಿ ಕೊಲಂಬಿಯಾಕ್ಕೊಂದು ಅವಮಾನ’ ಎಂದು ಗರ್ಜಿಸುವವರಿದ್ದಾರೆ.

ಆದರೆ ಸೀರಿಯಲ್‌ನ ಕರಾಳ ವಿಡಂಬನೆಯಿಂದ ಖುಷಿಪಟ್ಟವರು, “ಇದು ಈ ದೇಶದ ವಿಲನ್‌ಗಳನ್ನು ವಿಡಂಬಿಸುತ್ತಿದೆ’ ಎನ್ನುತ್ತಿದ್ದಾರೆ.ಸುಲಭ ಹಣ ಗಳಿಕೆ ಜನಪ್ರಿಯವಾಗುತ್ತಿರುವ ಈ ದೇಶ ಜಗತ್ತಿನ ಅತಿ ದೊಡ್ಡ ಕೊಕೇನ್ ರಫ್ತುದಾರ. ಮಾದಕ ದ್ರವ್ಯ ವ್ಯವಹಾರದಿಂದ ಸೃಷ್ಟಿಯಾದ ಅಂತರ್ಯುದ್ಧ ನಾಲ್ಕು ದಶಕಗಳಾದರೂ ಮುಂದುವರಿದಿದೆ ಇಲ್ಲಿ. ಈಗಷ್ಟೇ ಕೊಲಂಬಿಯಾ ಚೇತರಿಸಿಕೊಳ್ಳುತ್ತಿದೆ.

ಇಲ್ಲಿನ ಗ್ಯಾಂಗ್‌ಸ್ಟರ್‌ಗಳು “ಟ್ರಾಕ್ವೆಟೋ’ಗಳು ಎಂದೇ ಕುಖ್ಯಾತರು. ಅದಕ್ಕೆ ಕಾರಣ- “ಟ್ರಕ್ವಾ ಟ್ರಕ್ವಾ ಟ್ರಕ್ವಾ’ ಎಂದು ದನಿ ಮಾಡುವ ಅವರ ಅಟೋಮ್ಯಾಟಿಕ್ ರೈಫಲ್‌ಗಳು. ಇವರು ತಮ್ಮ ಪ್ರೇಯಸಿಯರ ಅಂದಕ್ಕೆ, ಸೌಂದರ್‍ಯದ ಸರ್ಜರಿಗಳಿಗೆ ಖರ್ಚು ಮಾಡುವವರು.

ಹಾಗೇ ಇಲ್ಲಿನ ಹುಡುಗಿಯರು ; ಇಂಥ ಒಬ್ಬ ಪಾತಕಿ ತಮ್ಮನ್ನು ಇಟ್ಟುಕೊಳ್ಳಲಿ ಎಂದು ಬಯಸುವವರು.”ಶ್ರೀಮಂತಿಕೆ ನಮ್ಮ ಹುಡುಗಿಯರನ್ನು ಸೆಳೆದುಬಿಟ್ಟಿದೆ. ಇಂಥದ್ದೆಲ್ಲ ಮಾಡುವಂತೆ ಪ್ರೇರೇಪಿಸುತ್ತಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ ಅಷ್ಟೆ’ ಅನ್ನುತ್ತಾಳೆ ಸೀರಿಯಲ್ಲಿನ ಒಬ್ಬ ನಟಿ ಮಾರ್ಗರಿಟಾ ರೋಸಾ. ಈಕೆಗೆ ದೊಡ್ಡ ಎದೆಗಳಿವೆ ; ಕತಲಿನಾ ಇವಳನ್ನು ಅನುಕರಿಸಲು ಯತ್ನಿಸುತ್ತಾಳೆ. ಈಕೆ ಕೂಡ ತನ್ನ ೨೮ರ ವಯಸ್ಸಿನಲ್ಲಿ ಎದೆಗೆ ಸರ್ಜರಿ ಮಾಡಿಸಿಕೊಂಡಿದ್ದಳು.

ಸೀರಿಯಲ್ಲಿನ ಮುಖ್ಯ ಪಾತ್ರ, ಗುಸ್ತಾವೋ ಬೊಲಿವರ್ ಎಂಬ ಕಾದಂಬರಿಕಾರ ಬರೆದ ಕಾದಂಬರಿಯ ಮುಖ್ಯ ಪಾತ್ರ. ಆತನ ಕತೆಯ ಕೇಂದ್ರ, ಪಿರೇರಾ ಎಂಬ ನಗರ, ಅಲ್ಲಿನ ೧೪ ವರ್ಷದ ಚಪ್ಪಟೆ ಎದೆಯ ಹುಡುಗಿ. ಕೃತಿ ಬಿಡುಗಡೆಯಾದಾಗ, ಪಿರೇರಾದ ಜನ ಕ್ರುದ್ಧರಾಗಿದ್ದರು ; ಈಗ ಸೀರಿಯಲ್ ಗಾಯಕ್ಕೆ ಉ[ ಎರೆದಂತಾಗಿದೆ. ಪಿರೇರಾದ ವ್ಯವಹಾರಸ್ಥರು ನಗರದ “ಇಮೇಜ್ ಪರಿಪಡಿಸಲು’ ಯತ್ನಿಸುತ್ತಿದ್ದಾರೆ.

ಪಿರೇರಾ ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶದ ಹೃದಯ, ದೇಶದ ಪ್ರಮುಖ ನಗರ. ಡ್ರಗ್ ಸ್ಮಗ್ಲರುಗಳು, ಕಾಫಿ ಕಾರ್ಮಿಕರು, ಟ್ರಕ್ ಡ್ರೈವರುಗಳು ಸುಂದರ ವೇಶ್ಯೆಯರ ಮೇಲೆ ಹಣ ಚೆಲ್ಲಾಡುವ ಸ್ಥಳ. ಸೀರಿಯಲ್ಲನ್ನು ಸಮರ್ಥಿಸುವವರು, ಇದು ಪಿರೇರಾದಂಥ ನಗರಗಳಲ್ಲಿ ಕತಲಿನಾಳಂಥ ತರುಣಿಯರು ಎದುರಿಸುತ್ತಿರುವ ಸಮಸ್ಯೆಗಳ ದರ್ಶನ ಮಾಡಿಸುತ್ತಿದೆ ಎಂದು ಮೆಚ್ಚಿಕೊಂಡಿದ್ದಾರೆ.

ಇತ್ತ ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಲೆಗಳ ಸಂಖ್ಯೆ, ಬಡತನದಿಂದ ತಪ್ಪಿಸಿಕೊಳ್ಳಲು ಡ್ರಗ್ ಮಾಫಿಯಾ ಸೇರಿಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.ದೊಡ್ಡ ದೇಶ, ಹೆಚ್ಚುತ್ತಿರುವ ಸೌಂದರ್‍ಯ ಸ್ಪರ್ಧೆಗಳು ಮತ್ತು ಸಮಸ್ಯೆಗಳು, ಪುಟ್ಟ ಸ್ತನಗಳ ಹುಡುಗಿಯರು, ಬಾಹುಗಳನ್ನು ಚಾಚಿರುವ ಡ್ರಗ್ ಆಕ್ಟೋಪಸ್, ಪ್ರತಿ ನಗರದಲ್ಲೂ ಭೂಗತ ಮಾಫಿಯಾ, ಚೆಲ್ಲಾಡುತ್ತಿರುವ ಹಣ

…ಥೇಟ್ ಭಾರತದಂತೆ

ಡೈಲಿ ಪಿಂಚ್

ಬಿ ವಿ ಪಾಂಡುರಂಗ ರಾವ್

%d bloggers like this: