12.971606
77.594376
ಸುರ್ ಪ್ರಭಾತ್‌ನಲ್ಲಿ ಶೌನಕ್ ಅಭಿಷೇಕಿ
28 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in Invite
ಮಾಹಿತಿ- ರವೀಂದ್ರ ಮಾವಖಂಡ
ಚಿತ್ರ – ಆರ್ ರಾಜು
ರಾಜಗುರು ಸ್ಮೃತಿ ಸಂಸ್ಥೆ ಕಳೆದ ೧೨ನೇ ವರ್ಷಗಳಿಂದ ‘ಸುರ್ ಪ್ರಭಾತ್’ ಶೀರ್ಷಿಕೆಯಡಿಯಲ್ಲಿ ಬೆಳ್ಳಂಬೆಳಗ್ಗೆಯೇ ಪ್ರಸಿದ್ಧ ಕಲಾವಿದರ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿದೆ. ಇದರಲ್ಲಿ ಈ ಬಾರಿ ವಿಖ್ಯಾತ ಹಿಂದುಸ್ಥಾನಿ ಗಾಯಕ ಶೌನಕ್ ಅಭಿಷೇಕಿ ಅವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದೆ. ಇವರಿಗೆ ಹಾರ್ಮೋನಿಯಂನಲ್ಲಿ ಡಾ.ರವೀಂದ್ರ ಕಾಟೋಟಿ ಹಾಗೂ ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಸಾಥ್ ನೀಡಲಿದ್ದಾರೆ. ಈ ಭಾನುವಾರ (ಜ.೩೦) ಬೆಳಗ್ಗೆ ನಡೆಯಲಿರುವ ಈ ‘ಸುರ್ ಪ್ರಭಾತ್’ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ರೆಷ್ ಆಗಿ. ಸೀಟ್ ಬೇಕಿದ್ದವರು ಅರ್ಧಗಂಟೆ ಮೊದಲೇ ಬರಬೇಕು.
ಸ್ಥಳ: ಸುಚಿತ್ರಾ ಫಿಲ್ಮ್ ಸೊಸೈಟಿಯ ಹೊರಾಂಗಣ, ೩೬, ೯ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ.
ಸಮಯ: ಬೆಳಗ್ಗೆ ೭
ಮಿ ಯಡ್ಡಿ, ಐ ಆಮ್ ಉಪ್ಪಿ ಫಾರ್ ಟಿವಿ 9
28 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಝೂಮ್
ಇನ್ನೂ ಬೇಕಾದಷ್ಟು ಫೋಟೋಗಳಿವೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಜೇನುತುಪ್ಪದಲ್ಲಿ ಕಲಸಿ ನೆಕ್ಕಿಸಿದಂತೆ!
28 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಬುಕ್ ಬಝಾರ್
ಬುದ್ಧಮಾರ್ಗದ ಎರಡು ಮಹಾಕಾವ್ಯಗಳು
ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಅನುವಾದ ಕೃತಿಗಳಲ್ಲಿ ಅಶ್ವಘೋಷನ ‘ಬುದ್ಧಚರಿತ’ ಮತ್ತು ‘ಸೌಂದರನಂದ’ ಕೃತಿಗಳಿಗೆ ಪ್ರಮುಖವಾದ ಸ್ಥಾನವಿದೆ. ಆದರೆ ಈ ಅನುವಾದಗಳ ಬಗ್ಗೆ ಅಷ್ಟೊಂದು ಚಚರ್ೆ ನಮ್ಮಲ್ಲಿ ನಡೆದಿಲ್ಲ. ಹಾಗೆಂದು ಈ ಕೃತಿಗಳನ್ನು ಕನ್ನಡದ ಜನತೆ ಕಡಗಣಿಸಿದ್ದಾರೆಂದೂ ಅಲ್ಲ. ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಈ ಅನುವಾದಗಳು ಎರಡು ಮೂರು ಮುದ್ರಣಗಳನ್ನು ಕಂಡಿವೆ. ಕನ್ನಡಿಗರು ಬುದ್ಧನ ಬಗ್ಗೆ ಮತ್ತು ಈ ಕೃತಿಗಳ ಬಗ್ಗೆ ಪ್ರೀತಿ ಮತ್ತು ಆದರಗಳನ್ನು ತೋರಿಸಿರುವುದನ್ನು ಈ ಮರು ಮುದ್ರಣಗಳು ಸೂಚಿಸುತ್ತವೆ.
ಸಂಸ್ಕೃತದಲ್ಲಿ ಅಶ್ವಘೋಷ ಈ ಕೃತಿಗಳನ್ನು ರೂಪಿಸಿದ್ದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ. ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಈ ಆಶ್ವಘೋಷನಿಗೆ ಮಹತ್ವದ ಸ್ಥಾನ ಇದೆ. ಈತ ಮಹಾಕವಿ; ಬೌದ್ಧ ಧರ್ಮದ ಅನುಯಾಯಿ. ಬೌದ್ಧಧರ್ಮ ಪ್ರಚಾರಕ, ನಾಟಕಕಾರ, ವಿದ್ವಾಂಸ ಮತ್ತು ಹಾಡುಗಾರ. ಇದೆಲ್ಲದಕ್ಕಿಂತ ಮಿಗಿಲಾಗಿ ಬುದ್ಧನ ನಂತರ ಸುಮಾರು ಐದು ನೂರು ವರ್ಷಗಳ ಅವಧಿಯಲ್ಲಿ ಈ ಮಹಾಕವಿ ಇದ್ದ ಕಾರಣದಿಂದಾಗಿ ಬುದ್ಧನ ಬಗ್ಗೆ ಮತ್ತು ಆತನ ಧರ್ಮದ ಬಗ್ಗೆ ಅಶ್ವಘೋಷ ತನ್ನ ಎರಡು ಕಾವ್ಯಗಳಲ್ಲಿ ಕೊಡುವ ವಿವರಗಳನ್ನು ಅಧಿಕೃತ ಎಂದು ಪರಿಗಣಿಸಬಹುದಾಗಿದೆ. ಬುದ್ಧನ ನಂತರದ ಅತ್ಯಲ್ಪ ಕಾಲಾವಧಿಯಲ್ಲಿಯೇ ಬೌದ್ಧಧರ್ಮ ಬಗೆಬಗೆಯ ರೂಪಾಂತರಕ್ಕೆ ಒಳಗಾಯಿತು, ಹಲವು ಶಾಖೆಗಳಲ್ಲಿ ಹಂಚಿಹೋಯಿತು ಎನ್ನುವುದು ನಿಜವಾದರೂ ಅಶ್ವಘೋಷನ ಕಾಲಕ್ಕೆ ಅದು ಸಂಪೂರ್ಣವಾಗಿ ನಾಶವಾಗಿರಲಿಲ್ಲ ಅಥವಾ ಹೊಸ ರೂಪವನ್ನು ಪಡೆದುಕೊಂಡಿರಲಿಲ್ಲ. ಅನೇಕ ರಾಷ್ಟ್ರಗಳಿಗೆ ಅದು ಚಾಚಿಕೊಳ್ಳುವಷ್ಟು ಪ್ರಭಾವಶಾಲಿಯಾಗಿತ್ತು.
ಆಶ್ವಘೋಷನ ಕಾಲವನ್ನು ಸಾಹಿತ್ಯ ಚರಿತ್ರಕಾರರು ಸುಮಾರು ಕ್ರಿ.ಪೂ. ಎರಡನೆಯ ಶತಮಾನ ಎಂದು ಗುರುತಿಸುತ್ತಾರೆ. ಈತ ಅನೇಕ ಕೃತಿಗಳನ್ನು ರಚಿಸಿದ ಎಂದು ಹೇಳಿದರೂ ಸಿಕ್ಕಿರುವವು ಮಾತ್ರ ಮೂರೇ ಕೃತಿಗಳು: ಬುದ್ಧಚರಿತೆ, ಸೌಂದರನಂದ ಮತ್ತು ಸಾರಿಪುತ್ರ ಪ್ರಕರಣ. ಬುದ್ಧಚರಿತೆಯ ಹದಿನಾಲ್ಕು ಅಧ್ಯಾಯಗಳು ಮಾತ್ರ (ಅಂದರೆ ಕೃತಿಯ ಮೊದಲ ಅರ್ಧ) ಸಿಕ್ಕಿವೆ. ಉತ್ತರಾರ್ಧ ಕಳೆದು ಹೋಗಿದೆ. ಆದರೆ ಚೀನೀ ಮತ್ತು ಟಿಬೆಟಿಯನ್ ಭಾಷೆಗಳಲ್ಲಿ ಈ ಕೃತಿ ಸಂಪೂರ್ಣವಾಗಿ ಇರುವುದರಿಂದ ಉತ್ತರಾರ್ಧವನ್ನು ಟಿಬೆಟಿಯನ್ ಭಾಷೆಯಿಂದ ಇಂಗ್ಲಿಷ್ಗೆ ಮತ್ತು ಮರಳಿ ಸಂಸ್ಕೃತಕ್ಕೆ ಅನುವಾದಿಸಿಕೊಂಡು ಬುದ್ಧಚರಿತೆಯನ್ನು ಪೂರ್ಣ ಮಾಡಿಕೊಳ್ಳಲಾಗಿದೆ. ಟಿಬೆಟಿಯನ್ ಭಾಷೆಯಲ್ಲಿರುವ ಬುದ್ಧಚರಿತೆಯೇ ಅಧಿಕೃತವಾದದ್ದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಆಶ್ವಘೋಷ ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸ ಮತ್ತು ಭಾಸರಿಗಿಂತಲೂ ಹಿಂದಿನವನು. ಬುದ್ಧಚರಿತೆ ಸಂಸ್ಕೃತ ಸಾಹಿತ್ಯ ಮತ್ತು ಬೌದ್ಧ ಸಾಹಿತ್ಯಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕಾಳಿದಾಸನ ರಘುವಂಶದ ಮೇಲೆ ಬುದ್ಧಚರಿತೆಯ ಪ್ರಭಾವ ನಿಚ್ಚಳವಾಗಿದೆ ಎಂದು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಮಾಡಿರುವ ವಿದ್ವಾಂಸ ಪ್ರೊ.ಕೆ.ಜಿ.ನಾಗರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ. ರಘುವಂಶದಲ್ಲಿ ಬರುವ ಕಾಮ-ಶಿವ ಪ್ರಸಂಗ ಮತ್ತು ಬುದ್ಧಚರಿತೆಯ ಮಾರ-ಬುದ್ಧರ ಸಂವಾದವನ್ನು ಇದಕ್ಕೆ ಉದಾಹರಣೆಯಾಗಿ ಕೊಡುತ್ತಾರೆ. ಅಶ್ವಘೋಷ ಮಹಾಕವಿ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ.
ಭೀಮಸೇನ ಜೋಷಿ ಜೋಡಿ ಕ್ರಿಕೆಟ್..
28 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಭೀಮಸೇನ್ ಜೋಶಿ ಅವರ ಎರಡು ಓವರ್ ಬ್ಯಾಟಿಂಗ್
-ಡಿ ಗರುಡ
ನಮ್ಮೂರಿನ ಮಹಾ ಗಾಯಕಾ ಭೀಮಸೇನ್ ಜೋಶಿ ಅವರು ನಮ್ಮನ್ನ ಬಿಟ್ಟು ಹೋದ್ರು. ಅದಕ್ಕ ಭಾಳ ಧುಕ್ಕಾ ಆತು. ನಮ್ಮೂರಿನ ಇಬ್ಬರು ಮಹಾ ಗಾಯಕರು ಒಬ್ಬರಾದಮ್ಯಾಗ ಒಬ್ರು ಹ್ವಾದ್ರು. ಅದಕ್ಕ ಭಾರಿ ಧುಕ್ಕಾ ಆಗ್ಯದ. ಪಂಡಿತ್ ಪುಟ್ಟರಾಜ ಗವಾಯಿಗೋಳು ಹ್ವಾದ್ರು; ಆಮ್ಯಾಗ ಪಂಡಿತ್ ಭೀಮಸೇನ್ ಜೋಶಿಯವ್ರು ಹ್ವಾದ್ರು. ಇಬ್ರೂ ದೊಡ್ಡ ಗಾಯಕ್ರು. ದೇಶಾ ಮಾತ್ರ ಅಲ್ಲ ವಿದೇಶಾನೂ ಮೆಚ್ಚಿಕೊಂಡಿದ್ದ ಗಾಯಕ್ರು ಅವ್ರು. ಅಂಥಾ ಗಾಯಕ್ರು ನಮ್ಮೂರಿನವ್ರು ಅಂತ ಹೇಳಿಕೊಳ್ಳಾಕ ಹೆಮ್ಮೆ ಆಗ್ತತ.
ಗವಾಯಿಗಳನ್ನ ಮಠದಾಗ ಪಾದ ಮುಟ್ಟಿ ನಮಸ್ಕಾರಾ ಮಾಡಿ ಆಶಿರ್ವಾದಾ ಪಡೀತಿದ್ವಿ. ಅವ್ರಿಗೆ ನಮ್ಮ ಊರಿನ್ಯಾಗ ದೇವ್ರ ಸ್ಥಾನ. ಭೀಮಸೇನ್ ಜೋಶಿ ಅವರೂ ಹಾಂಗ ಇದ್ರು. ದೇವರಹಾಂಗ ಇದ್ದ ಮನುಷಾರು ಅವರು. ಯಾರಿಗೂ ಕೆಟ್ಟದ್ದು ಮಾತಡಿದ್ದು ನಾವಂತೂ ಊರಾಗಿದ್ದವ್ರು ಕೇಳಿಲ್ಲಾ. ಹಾಡಿಕೊಂಡು, ಹಾಡು ಕೇಳಿಸಿ ಸಂತೋಷಾ ಪಡತಿದ್ರು.
ನಾನು ಸಣ್ಣವಾಗಿದ್ದಾಗ ಅವರನ್ನ ಮೂರು-ನಾಕ್ ಬಾರಿ ನೋಡಿದ್ದೆ. ಹತ್ತಿರದಾಗಿಂದ ಮಾತಾಡಿಸಿದ್ದೆ, ಮಜಾ ಅಂದ್ರ ಒಮ್ಮೆ ಅವರ ಜೊತಿಗೆ ಕ್ರಿಕೆಟ್ ಆಟಾನೂ ನಮ್ಮ ಗೆಳೆಯಾರ ಆಡಿದ್ದೆ. ಆಮ್ಯಾಗ ನೋಡಿದ್ದು ಒಮ್ಮೆ ಪುಣೆನ್ಯಾಗ ನಮ್ಮ ಗೆಳಿಯಾ ಸುನಿಲ್ ಮರಾಠೆ ಹೋಟೆಲಿನ್ಯಾಗ. ಆವಾಗ ಅವರ ಜೊತಿಗೆ ಮಾತಾಡಿ, ಗದಗಿನ ನಮ್ಮ ಓಣ್ಯಾಗ ಒಮ್ಮೆ ಕ್ರಿಕೆಟ್ ಆಡಿದ್ದನ್ನ ನಾನು ಮತ್ತ ಸುನಿಲ್ ಮರಾಠೆ ನೆನಪಿಸಿದ್ವಿ. ಆವಾಗ ಅವ್ರು “ಭಾಳ ದೊಡ್ಡವ್ರ ಆಗಿರಲ್ಲಾ” ಅಂತ ಹೇಳಿದ್ದು ಇನ್ನು ನನ್ನ ನೆನಪಿನ್ಯಾಗ ಐತಿ.
ಸುನಿಲ್ ಮರಾಠೆ ಗದಗಿನಿಂದ ಹ್ವಾದಮ್ಯಾಗ, ಪುಣೆನ್ಯಾಗ ಹೋಟೆಲ್ ಮಾಡಿಕೊಂಡು ದೊಡ್ಡ ಹೋಟೆಲ್ ಉದ್ಯಮಿ ಆದಾವ. ಭಿಮಸೇನ್ ಜೋಶಿ ಅವರು ಆಗಾಗ ಅವನ ಹೋಟೆಲಿಗೆ ಬರತಿದ್ರು. ನಾನೂ ಒಮ್ಮೆ ಹಿಂಗ ಹೋಗಿದ್ದಾಗ ಅಲ್ಲೆ ಸಿಕ್ಕಿದ್ರು. ಗರುಡರ ಮನಿ ಹುಡುಗಾ ಅಂತ ಹೇಳಿ ನೆನಪು ಮಾಡಿಕೊಟ್ಟಾಗ “ವಲ್ಲಭನ ಮಗಾ ಏನು…?” ಅಂತ ಕೇಳಿದ್ರು. ನಾನು “ಹೌದ್ರಿ; ಅವತ್ತ ನಾವು ಸಣ್ಣವ್ರು ಇದ್ದಾಗ ನಿಮ್ಮನಿ ಹಿಂದಿನ ಓಣಿನ್ಯಾಗ ಕ್ರಿಕೆಟ್ ಆಡಿತಿದ್ವಿ. ಅವತ್ತೊಮ್ಮೆ ನೀವು ನಮ್ಮ ಜೊತಿಗೆ ಆಟಾ ಆಡಿದ್ರ್ಯಲ್ಲಾ…!” ಅಂತ ಹೇಳಿ ನೆನಪು ಮಾಡಿಕೊಟ್ಟಿದ್ದೆ. ಆವಾಗ ಅವರು ಸಣ್ಣ ಮಕ್ಕಳಹಾಂಗ ನಕ್ಕಿದ್ದು ಇನ್ನೂ ಕಣ್ಣಮುಂದ ಕಟ್ಟಿಧಾಂಗ ಅದ.
ಇತ್ತೀಚಿನ ಟಿಪ್ಪಣಿಗಳು