ಏ ಜೋಗಿ..!

ಅತಂತ್ರ ಫಲಿತಾಂಶ

ಸತೀಶ್ ಆಚಾರ್ಯ


ನ್ಯೂತನ ಹರ್ಷದ ಎಕ್ಸ ಪ್ರಶ್ನೆ-ವೈಯಾನ್ಸರ್

-ಸೂತ್ರಧಾರ ರಾಮಯ್ಯ

ಎಕ್ಸ್: ಲೆಟ್ ದ ಬೈಯ್ಯರ್ ಬಿವೇರ್. ಇದರ ಆಧುನಿಕ ಕನ್ನಡ ಅನುವಾದವೇನು?

ವೈ : ಪದಾರ್ಥಗಳನ್ನು ಎಚ್ಚರಿಕೆಯಿಂದ ತೆಗೆದು’ಕೊಳ್ಳ’ಬೇಕು, ಅನ್ನೋದು ಇಂಗ್ಲಿಷ್ ಸೂತ್ರ. ಆದರೆ ಇತ್ತೀಚಿಗೆ ರಾಜಕಾರಣದಲ್ಲಿ ನಡೆದಿರುವ ಎಕ್ಸ್ಚೇಂಜ್ಗಳನ್ನು ಕೇಳಿದರೆ , ಎದುರಾಳಿಗಳನ್ನು ಬಯ್ಯುವವರು ಎಚ್ಚರದಿಂದಿರಬೇಕು, ಇಲ್ಲಾ, “ತಕ ‘ನಿಂದನೆ’ ನಿನಗೆ” ಅಂತಾ ವಾಪಸ್ ತಿರುಗಿಸಿ ಬಯ್ಯುತ್ತಾರೆ ಎಂದನುವಾದಿಸಬಹುದು.ಇದೊಂಥರಾ auction ಅಂಡ್ ರಿಯಾಕ್ಷನ್ ಈಸ್ ಈಕ್ಬಲ್ ಅಂಡ್ ಆಪೋಜಿಟ್ ಅನ್ನೋ ನ್ಯೂ ಟನ್ ವಾದದ ಹಾಗೆ.

ಎಕ್ಸ್: ಅಧಿಕಾರದಲ್ಲಿದ್ದಾಗ ಅಧಿಕ ಕಾರ! ಬಕ್ಕಳಿಸಿ ತಿನ್ನೋದು. ಅಪರಾಧಿ ಮನೋಭಾವ ಹೆಚ್ಚಾದಾಗ, ಸಾರ್ವಜನಿಕ ಸಭೆಗಳಲ್ಲೇ ಬಿಕ್ಕಳಿಸಿ ಅಳುವುದು! ಹಾಗೆ, ಬಡಜನರನ್ನು , ರೈತರನ್ನು ಓಲೈಸುವ ನಾಟಕವಾಡೋದು! ಇವೆಲ್ಲ ಅನೂಚಾನವಾಗಿ ರಾಜ್ಯದಲ್ಲಿ ನಡೆದು ಬ( ರು)ತ್ತಲೇ ಇದೆ; ಮುಚ್ಚು ಮರೆಯಿಲ್ಲದೆ! ಇಂತಹಾ ವೈರುಧ್ಯಕ್ಕೆ ಏನಂತೀರಾ- ವೈ ಯಾಕರಣಿಗಳೇ?

ವೈ: ದ CRY ಸಿಸ್ ಆಫ್ ಕರ್ ನಾಟಕಾ

ಎಕ್ಸ್: ಬಿಹಾರದ ನಿತೀಶ್ ಕುಮಾರ್ ಅವರ ಅಭಿವೃದ್ಧಿ ಪಾಲಿಸಿಗಳನ್ನು ಅನು’ ಮೋದಿ’ ಸುವವರ ಕುರಿತು ನಿನ್ನ ಪ್ರತಿಕ್ರಿಯೆ?

ವೈ: ಪುತ್ರ ಪುತ್ರಿ ಅಳಿಯಾಭಿವೃದ್ಧಿ ಅನುವ ‘ಉರಿ’ಯಾಳುಗಳ ಬದಲು, ಬ್ರಹ್ಮಚಾರಿಗಳಿಗೆ ಅಥವಾ ಮದುವೆ ಯಾಗದ ಹುರಿಯಾಳುಗಳಿಗೆ ಮತ ಕೊಡಿ- ಸ್ಕ್ಯಾಮುಗಳನ್ನ ದೂರ ಇಡಿ.

More

ಮಲೆಗಳಲ್ಲಿ ಮದುಮಗಳು: ಭೀರುವಿಗೆ ಭಯಂಕರ ರಸಿಕ ಧೀರಂಗೆ ಕಲಾಶಂಕರ

ಬಾ ಹುಲಿಕಲ್ ನೆತ್ತಿಗೆ-13

-ಪ್ರೊ. ಶಿವರಾಮಯ್ಯ

ಸ್ವಲ್ಪ ದೂರ ಹೋದಮೇಲೆ ಗುಡ್ಡದ ಕಡಿಪು ಕಡಿಮೆಯಾಗತೊಡಿಗಿ, ಕಡೆಗೆ ಸಮತಟ್ಟಾಗುತ್ತಾ ಬಂದಿತು. ಇನ್ನೂ ಸ್ವಲ್ಪ ಮುಂದೆ ಹೋದಮೇಲೆ ಮರಗಳೂ ವಿರಳವಾಗಿ, ಹಳು ಹಕ್ಕಲಾದಂತೆ ತೋರಿ, ಕಡೆಗೆ ಬಂಡೆಯ ಹಾಸುಗಲ್ಲಿನ ಮೇಲೆ ನಿಂತಾಗ ನೆತ್ತಿಯ ಮೇಲೆ ಆಕಾಶವೂ ಕಾಣಿಸತೊಡಗಿತು. ಚುಕ್ಕಿ ಕಿಕ್ಕಿರಿದು ಕಾಡಿನ ಒಳಗಿದ್ದ ಕಗ್ಗತ್ತಲೆಗೆ ಬದಲಾಗಿ ನಕ್ಷತ್ರ ಕಾಂತಿಯ ಮಬ್ಬುಗತ್ತಲೆ ಹಬ್ಬಿ, ವಸ್ತುಗಳ ಬಹಿರಾಕಾರಗಳೂ ಮಂಜುಮಂಜಾಗಿ ಹೆಂದಕ್ಕೆ ಸರಿದು, ದೂರದೂರದ ಪರ್ವತ ಶ್ರೇಣಿಗಳ ಮಷೀಮಯ ರೂಪಗಳಲ್ಲಿ ಕೊನೆಗೊಂಡಿತ್ತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಇದೇ ಹುಲಿಕಲ್ಲು ನೆತ್ತಿ ಕಣೇ! ಎಂದನು ಗುತ್ತಿ. (ಮಲೆಗಳಲ್ಲಿ ಮದುಮಗಳು, ಪು. 235-237. ಮೂರನೇ ಮುದ್ರಣ 1985, ಉದಯರವಿ ಪ್ರಕಾಶನ, ವಾಣೀವಿಲಾಸಪುರಂ, ಮೈಸೂರು)

ಆದ್ದರಿಂದಲೇ ಹುಲಿ ಸಂಚಾರದ ತಂಗುದಾಣವಾದ ಗುಡ್ಡಕ್ಕೆ ಹುಲಿಕಲ್ಲುಗುಡ್ಡ ಎಂಬ ಅನ್ವರ್ಥನಾಮ! ಅಕ್ಷರಶಃ ಅದು ‘ಭೀರುವಿಗೆ ಭಯಂಕರ ರಸಿಕ ಧೀರಂಗೆ ಕಲಾಶಂಕರ’ ಇಂಥ ಭಯಾನಕ ಗುಡ್ಡದ ಮೇಲಿರುವ ಕಾವಲು ಮಂಟಪದಲ್ಲಿ ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ ಗುತ್ತಿ ತಿಮ್ಮಿಯರು ಒಂದು ರಾತ್ರಿ ಕಳೆಯುತ್ತಾರೆ. ‘ಶಿವ ಮಂದಿರ ಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕ್ಕೆ ಈ ಆರು ಜನ ಮದುಮಕ್ಕಳನ್ನು ತಂದುನಿಲ್ಲಿಸುವ ಕುವೆಂಪು ಅವರ ಸಂವಿಧಾನ ಕೌಶಲ ಅನನ್ಯ.

More

ಬಸೂ ಕಳಿಸಿದ ಭಾವಗೀತೆ

ಕಳಿಸಿದವರು- ಅಗ್ನಿ ಬಸವರಾಜು 

ಬೇಲಿ ಮತ್ತು ಹೊಲ….

ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ, ನಮ್ಮ ನಡುವಿನ ಅನನ್ಯ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ಕಿರುಕಾದಂಬರಿ ಬೇಲಿ ಮತ್ತು ಹೊಲ. ಇದರ ಹೆಸರೇ ಸೂಚಿಸುವಂತೆ “ಬೇಲಿ” ಆಳುವ ವ್ಯವಸ್ಥೆಯನ್ನು ಮತ್ತು “ಹೊಲ” ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸುತ್ತದೆ.

ಕಾನೂನಿನಡಿ ನುಸುಳುವ ಹಾಗೂ ಭ್ರಷ್ಟತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು ಹೇಗೆ ಆಳುವ ಪ್ರಕ್ರಿಯೆಯಲ್ಲಿ ಅಂತರ್ಗತನಾಗುತ್ತಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಹಾಗೂ ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪ…ೋತುರಾಜು, ದಲ್ಲಾಳಿ ವ್ಯವಸ್ಥಯ ಹರಿಕಾರನಾಗಿ ವಿಠ್ಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ಕಹಳೆ ಪಾಟೀಲ್, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಸಾಮಾನ್ಯ ಪ್ರಜೆಯ ಪ್ರತಿನಿಧಿಯಾಗಿ ಚಂಬಸ್ವ, ಪಾರವ್ವ, ಬಡಕೊಟ್ರಯ್ಯ ಹಾಗೂ ಹಳ್ಳಿಗರು ಪ್ರತಿನಿಧಿಸುತ್ತಾರೆ.

ಇಡೀ ಕಥಾವಸ್ತುವಿನ ಅಂತರಾಳ ಪ್ರಜಾಸಮೂಹ ಅಥವಾ ಒಬ್ಬ ಸಾಮಾನ್ಯನಿಗೆ ಅನ್ಯಾಯ, ಶೋಷಣೆ, ಹಿಂಸೆಗೆ ಗುರಿಯಾದಾಗ ಪ್ರಸ್ತುತ ಸುದ್ದಿಮಾಧ್ಯಮಗಳು ಅದನ್ನು ತಿದ್ದುವ ಕಾಯಕದಲ್ಲಿ ಮಾಡುವ ಸದ್ದಾಗಲೀ, ಪ್ರಬುದ್ಧರು ನಡೆಸುವ ಪ್ರತಿಭಟನೆ, ಮುಷ್ಕರ, ಚಳುವಳಿಗಳಾಗಲೀ ಬರಬರುತ್ತಾ ತೀರಾ ಮಾಮೂಲಿಯೂ, ಯಾಂತ್ರಿಕವೂ ಆಗಿ ನಮ್ಮನ್ನಾಳುವ ಪ್ರಭುಗಳನ್ನು ತಿದ್ದುವ, ಶಿಕ್ಷಿಸುವ ಪರಿಣಾಮದ ತೀವ್ರತೆ ಕಳೆದುಕೊಳ್ಳುತ್ತಿವೆ ಎನ್ನುವುದು ನಮ್ಮ ಮುಂದಿರುವ ದುರಂತ..

ಪೂರ್ಣ ಓದಿಗೆ – ಸೈಡ್ ವಿಂಗ್

ಆಕಾಶದಿಂದ ಅಂತರಜಾಲ

ಟಿ ಜಿ ಶ್ರೀನಿಧಿ

೨೦೧೦ರ ಕೊನೆಯ ವಾರದಲ್ಲಿ ಕಾ-ಸ್ಯಾಟ್ ಎಂಬ ಯುರೋಪಿನ ಉಪಗ್ರಹ ಉಡಾವಣೆಯಾಯಿತು. ಉಪಗ್ರಹದ ಉಡಾವಣೆಯಲ್ಲೇನೂ ವಿಶೇಷವಿಲ್ಲವಾದರೂ ಈ ಉಪಗ್ರಹದ ಉದ್ದೇಶವೇ ವಿಶೇಷವಾದದ್ದು – ಯುರೋಪಿನ ಗ್ರಾಮೀಣ ಪ್ರದೇಶಗಳಿಗೆ ಈ ಉಪಗ್ರಹದ ಮೂಲಕ ಅಂತರಜಾಲ ಸೌಲಭ್ಯ ಒದಗಿಸಲಾಗುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಎನ್ನುವುದು ಅಪಾರ ಸಂಖ್ಯೆಯ ಗಣಕಗಳನ್ನು ಒಂದುಗೂಡಿಸುವ ಒಂದು ಬೃಹತ್ ಜಾಲ. ಯಾವುದೇ ಒಂದು ಗಣಕ ಈ ಬೃಹತ್ ಜಾಲದ ಅಂಗ ಎನ್ನಿಸಿಕೊಳ್ಳಬೇಕಾದರೆ ಅದು ಅಂತರಜಾಲದೊಡನೆ ಸಂಪರ್ಕ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಅದು ಅಂತರಜಾಲದ ಇತರ ಗಣಕಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯ. ಅಂತೆಯೇ ಆ ಗಣಕದ ಬಳಕೆದಾರರು – ಅಂದರೆ ನಾವು – ವಿಶ್ವದ ವಿವಿಧೆಡೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಂತಹ ಅಂತರಜಾಲ ಸಂಪರ್ಕಗಳಲ್ಲಿ ಹಲವಾರು ಬಗೆ – ಬ್ರಾಡ್‌ಬ್ಯಾಂಡ್, ಡಯಲ್‌ಅಪ್, ಜಿಪಿಆರ್‌ಎಸ್ ಹೀಗೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಮೇಲೆ ಹೇಳಿದ ಉಪಗ್ರಹ ಅಂತರಜಾಲ ಸಂಪರ್ಕ.

More

ಕೊಡಸೆ ಅವರ ‘ಹಾಯಿ ದೋಣಿ’

 

ಆನಂದರ ‘ವಾರೆನೋಟ’

%d bloggers like this: