ಬಾ ಹುಲಿಕಲ್ ನೆತ್ತಿಗೆ-15
-ಪ್ರೊ. ಶಿವರಾಮಯ್ಯ
ಜೊತೆಗೆ ನಾನಿಲ್ಲಿ ಇನ್ನೊಂದು ಮಾತನ್ನು ಹೇಳಬೇಕಾಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಒಂದು ಪುರಾತನ ಥಿಯೇಟರ್ (1935)ನಲ್ಲಿ ತಿಛಿಞಜಜ ತಿಣಛಿ ಎಂಬ ಫೋಕ್ ನಾಟಕವನ್ನು ನೋಡುವ ಅವಕಾಶಸಿಕ್ಕಿತು. ಆ ನಾಟಕದ ವಿಶೇಷವೆಂದರೆ, ಸಮಾಜ ಯಾವ ಮಾಟಗಾತಿಯನ್ನು ತಿರಸ್ಕರಿಸಿ ದೂರ ಇಡುತ್ತದೋ ಅದೇ ಮಾಟಮಂತ್ರ ವೈದ್ಯ ಬಲ್ಲ ಹೆಂಗಸು ಅಂತಃಕರಣವುಳ್ಳವಳಾಗಿದ್ದು, ಅಂಗವಿಕಲರಿಗೆ ಪುನಃ ಚೇತನದಾಯಿಯಾಗಿರುತ್ತಾಳೆ; ಸಮಾಜ ಯಾರನ್ನು ಒಳ್ಳೆಯ ಹೆಂಗಸು ಎಂದು ನಂಬಿರುತ್ತದೋ ಅಂಥ ಹೆಂಗಸು ಸಮಾಜ ಬಾಹಿರ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಕಡೆಯಲ್ಲಿ ನಿಜವಾಗಿಯೂ ತಿಛಿಞಜಜ ತಿಣಛಿ ಎಂಬುದನ್ನು ಮಾಮರ್ಿಕವಾಗಿ ಆ ನಾಟಕ ಚಿತ್ರಿಸುತ್ತದೆ, ಸಂಗೀತ ಪ್ರಧಾನವಾದ ಆ ನಾಟಕದ ಇನ್ನೊಂದು ವಿಶೇಷವೆಂದರೆ, ಪಾತ್ರಧಾರಿಗಳು ತಾವೇ ಹಾಡುಗಳನ್ನು ಹಾಡುತ್ತಿದ್ದುದು. ತಿರುಗಾಟದಲ್ಲಿದ್ದ ಈ ನಾಟಕ ಆಗ ಸ್ಯಾನ್ಫ್ರಾನ್ಸಿಸ್ಕೋ ನಗರಕ್ಕೆ ಬಂದಿತ್ತು.
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಮತ್ತೂ ಹೇಳಬೇಕಾದ ವಿಚಾರವೆಂದರೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ರಂಗಭೂಮಿ ಥಿಯೇಟರ್ ಬಗ್ಗೆ. ರಿಮೋಟ್ ಕಂಟ್ರೋಲ್ ಮೂಲಕ ಟ್ರ್ಯಾಲಿಗಳನ್ನು ಚಲನೆಗೊಳಿಸುತ್ತ, ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ, ಅಕ್ಕಪಕ್ಕ ಹಿಂದೆ ಮುಂದೆ ಕ್ಷಣಾರ್ಧದಲ್ಲಿ ಸಂಬಂಧಪಟ್ಟ ಮಾಯಾದೃಶ್ಯಗಳನ್ನು ತೆರೆಯುತ್ತಿದ್ದುದು. ಮಳೆ ಚಳಿಗಾಳಿ, ಋತುಮಾನಗಳ ವೈಪರೀತ್ಯ ಪ್ರವಾಹ ಇತ್ಯಾದಿ ಪ್ರಾಕೃತಿಕ ವಿಕೋಪ-ಪ್ರಕೋಪಗಳನ್ನು, ಮಾನವ ಇಲ್ಲಿ ಉಳಿಯಲು ಕಟ್ಟುವ ನಾಗರಿಕ ಪ್ರಯತ್ನಗಳನ್ನು ರಂಗದ ಮೇಲೆ ನೋಡುವಂತಿತ್ತು.
ಈ ನಾಟಕವನ್ನು ನೋಡುತ್ತಿದ್ದ ನನಗೆ ನಮ್ಮ ರಂಗಭೂಮಿ ಸ್ಥಿತಿಯೆ ನೆನಪಾಗುತ್ತಿತ್ತು. ಮದುಮಗಳು ನಾಟಕಕ್ಕೆ ದ್ವಾರಕನಾಥ ಅಂಥವರು ಸುರಿಸುವ ಬೆವರು-ಪರಿಶ್ರಮ ಕಾಡುತ್ತಿತ್ತು. ದೇವರು-ದಿಂಡರು ಎಂದು ಕೋಟಿಗಟ್ಟಲೆ ದೇವಾಲಯಗಳಿಗೆ ಹಣ ತೆಗೆದಿಡುವ ನಮ್ಮ ಸಕರ್ಾರಗಳಿಗೆ ಸಾಂಸ್ಕೃತಿಕ ಒಳನೋಟಗಳಿದ್ದ ಪಕ್ಷದಲ್ಲಿ ನಮ್ಮಲ್ಲೂ ಇಂಥ ಒಂದು ರಂಗಭೂಮಿಯ ನಿಮರ್ಾಣ ಆಗುತ್ತದೆಯಲ್ಲವೆ? ಆಗ ಮದುಮಗಳು ನಾಟಕದಂತಹ ನಾಟಕದ ವಿವಿಧ ಊರುಕೇರಿಗಳನ್ನು ಪ್ರೇಕ್ಷಕ, ಅಲ್ಲಿಗಿಲ್ಲಿಗೆ ಎದ್ದು ಓಡಾಡದೆ, ಕುಳಿತಲ್ಲೇ ನೋಡಬಹುದಲ್ಲ ಎಂಬ ಅಪೇಕ್ಷೆ.
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು