ಮಲ್ಲಿಯ ಸಂಭ್ರಮದ ನೋಟ

‘ಮಲ್ಲಿ’ ಎಂದೇ ಹೆಸರಾದ ಡಿ ಜಿ ಮಲ್ಲಿಕಾರ್ಜುನ್ ಕ್ಯಾಮೆರಾ ಕಣ್ಣಿಗೆ ಹೆಸರಾದವರು. ಅದರೊಂದಿಗೆ ಬರಹದ ಬೆಡಗೂ ಅವರಿಗೆ ಧಕ್ಕಿದೆ. ಇಂತಹ ಎರಡರ ಸಂಗಮವೇ ‘ಅರೆಕ್ಷಣದ ಅದೃಷ್ಟ’. ನೇಮಿಚಂದ್ರ ಬರೆದಂತೆ ಎಂತಹವರೂ ಅವರ ಫೋಟೋಗಳ ಅಭಿಮಾನಿಯಾಗುವಂತೆ ಮಾಡುವ ಪುಸ್ತಕ.

ನವಕರ್ನಾಟಕ ಪ್ರಕಾಶನ ಹೊರ ತಂದಿರುವ ಈ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ನಾಗೇಶ ಹೆಗಡೆ, ಪ್ರೊ ಸಿ ಎನ್ ರಾಮಚಂದ್ರನ್, ನವಕರ್ನಾಟಕದ ಹಿರಿಯ ಆರ್ ಎಸ್ ರಾಜಾರಾಂ ಇದ್ದ ಕಾರ್ಯಕ್ರಮದ ನೋಟ ಇಲ್ಲಿದೆ.

‘ಅವಧಿ’ಯ ಎಂದಿನ ಪ್ರೀತಿಯ ಗೆಳೆಯ ಮತ್ತೊಬ್ಬ ಪ್ರತಿಭಾನ್ವಿತ ಕ್ಯಾಮೆರಾ ಕಣ್ಣಿನ ಹುಡುಗ ಕೆ ಶಿವು ಅವರು ತೆಗೆದ ಫೋಟೋಗಳು ಇಲ್ಲಿವೆ-

This slideshow requires JavaScript.

ಕರೇಗೌಡ ದಂಪತಿಗಳ ಕಥೆ ಕೇಳಿ

ಕೃಷಿ ಮಾಧ್ಯಮ ಕೇಂದ್ರದ ಹೊಸ ಪುಸ್ತಕ ‘ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ’ ಹಾಸನ ಸಮೀಪದ ಪುಣ್ಯಭೂಮಿ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ ‘ಜೈವಿಕ ಮೇಳ’ದಲ್ಲಿ (ಜನವರಿ 30 ಹಾಗೂ 31ರಂದು) ಬಿಡುಗಡೆಯಾಗಲಿದೆ.

ಕಾಮ್ ಫೆಲೋ ಪೂರ್ಣಿಮಾ ತೀರ್ಥಮಲ್ಲೇಶ್ ಅವರು ಬರೆದಿರುವ ಈ ಪುಸ್ತಕ ಸಕಲೇಶಪುರ ತಾಲೂಕಿನ ಕೊಂತನಮನೆಯ ಕರೇಗೌಡ-ಯಶೋದ ದಂಪತಿಯ ಪರಿಸರಸ್ನೇಹಿ ಒಕ್ಕಲುತನದ ಮೇಲೆ ಬೆಳಕುಚೆಲ್ಲುತ್ತದೆ. ಕಳೆದ ಒಂದೂವರೆ ದಶಕದಿಂದ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಪರಿಸರಸ್ನೇಹಿ ಒಕ್ಕಲುತನ ಮಾಡುತ್ತಿರುವ ಈ ದಂಪತಿ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡವರು. ಆಹಾರ ಭದ್ರತೆಗೆ ಭತ್ತ-ತರಕಾರಿಗಳು, ಆರ್ಥಿಕ ಮುನ್ನಡೆಗೆ ಕಾಫಿ-ಏಲಕ್ಕಿ ವಾಣಿಜ್ಯ ಬೆಳೆಗಳು, ಇವುಗಳ ನಡುವೆ ಸ್ವಂತ ದುಡಿಮೆ ಇವರ ವ್ಯವಸಾಯ ಬದುಕನ್ನು ನೆಮ್ಮದಿಯ ಹಾದಿಯಲ್ಲಿ ಮುನ್ನಡೆಸುತ್ತಿವೆ. ಇದು ರಾಸಾಯನಿಕರಹಿತ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿಯುವ ಕೇಂದ್ರದ ಪ್ರಯತ್ನದಲ್ಲಿ ಐದನೇ ಪುಸ್ತಕ.

 

 

ಗುಡ್ ಬೈ ಶಾನಭಾಗ್. ಟೇಕ್ ಕೇರ್

ಎಂ ಎಸ್ ಶ್ರೀರಾಮ್

ಇಂದು ಸುಚಿತ್ರದಲ್ಲಿ ಪ್ರೀಮಿಯರ್ ಬುಕ್ ಹೌಸ್ ನ ಶಾನಭಾಗರ ಬಗ್ಗೆ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನವಿದೆ. ಈ ಹಿನ್ನೆಲೆಯಲ್ಲಿ ಎಂ ಎಸ ಶ್ರೀರಾಮ್  ಈ ಹಿಂದೆ ಬರೆದ ಲೇಖನ ನೆನಪಾಯಿತು.

ಆ ಲೇಖನ ಆತ್ಮೀಯವಾಗಿ ಪುಸ್ತಕ ಅಂಗಡಿಯ ಎಲ್ಲಾ ಮೂಲೆಯನ್ನೂ ಪರಿಚಯಿಸುತ್ತದೆ. ಆ ಖುಷಿ ಓದಿಗಾಗಿ ಆ ಲೇಖನ ಇಲ್ಲಿದೆ.

ಎರಡು ವರ್ಷಗಳ ನಂತರ… ಮುಚ್ಚಿದ ಪ್ರೀಮಿಯರ್

ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: “ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ”. ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.

ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು… ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.

More

Tirumalesh on Akshara’s article

K.V. Akshara is a well-meaning person and has been doing a good job in Heggodu, but unfortunately his comparison between Madesnaana and IPL is far-fetched and sidetracks the issue of the heinous practice of rolling over leaves in which people have eaten. Rolling over the ground may be good exercise (indeed it is!) but the temple practice is medieval and is associated with superstitious beliefs and exploitation of ignorance. Akshara probably never realized the implications of the comparison he made. He should come out and condemn the Madesnaana practice unequivocally.

Although I am an agnost, I will not like our temples to be done away with. But there is a need to modernize them. At present they are awefully filthy! Get them cleaned, make them an iviting place where people of all faiths and beliefs can come together and worship. First of all, get them fitted with bathrooms, fans and lights! A good flooring please!

As for the IPL thing, I don’t know much about it. But people have always gone where they get wellpaid, even in the teaching profession.

If this is done by auction, well, there is the rub and Akshara may have a point! But this is a separate issue.

-k v tirumalesh

photo courtesy: Kendasampige

ಇಂದು ‘ರಂಗಶಂಕರ’ದಲ್ಲಿ

ಇಂದಿನ ನಾಟಕ
ಸಂಚಾರಿ ಥಿಯೇಟ್ರು ಅಭಿನಯಿಸುವ
ನರಿಗಳಿಗೇಕೆ ಕೋಡಿಲ್ಲ
ಮೂಲ ಕಥೆ : ಕುವೆಂಪು
ರಂಗರೂಪ : ಶಾಂತಾ ನಾಗರಾಜ್
ನಿರ್ದೇಶನ : ಎನ್.ಮಂಗಳಾ

ನೀವೂ ಬನ್ನಿ, ಒಮ್ಮೆ ನೋಡಿದ್ದರೆ ಇನ್ನೊಮ್ಮೆ ನೋಡಿ, ಕುಟುಂಬದವರನ್ನೂ ಗೆಳೆಯರನ್ನೂ ಕರೆತನ್ನಿ

‘ರೈತನಾಗುವ ಹಾದಿಯಲ್ಲಿ’ ಪೆಜತ್ತಾಯ

ಬಾಲಕೃಷ್ಣ ನಾಯಕ್

ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪ್ರಕಾಶನದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ ಅವರು ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಎಂದು ಬರೆಯುತ್ತಾರೆ.

ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜ ಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ, ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪನವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರಸದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು, ಎನ್ನುತ್ತಾರೆ ರಾವ್ ಅವರು.

ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ’ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಇವರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಅವರು ’ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ.

More

ದೆಹಲಿ ಕನ್ನಡ ಸಂಘಕ್ಕೆ ಹೊಸ ನೇತೃತ್ವ

ಅಧ್ಯಕ್ಷ ವೆಂಕಟಾಚಲ ಹೆಗಡೆ

ಕಾರ್ಯದರ್ಶಿ ಸಿ ಎಂ ನಾಗರಾಜ್

ಜನವರಿ ಒಂಬತ್ತರಂದು ನಡೆದ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಗೆದ್ದ ಹೊಸ ಕಾರ್ಯಕಾರಿ ಸಮಿತಿಯು ಅಧಿಕಾರ ವಹಿಸಿಕೊಂಡಿದೆ.

ಹೊಸ ಸಮಿತಿಯಲ್ಲಿ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ, ಉಪಾಧ್ಯಕ್ಷ ಬಿ.ಕೆ. ಬಸವರಾಜ್ ಮತ್ತು ಉಷಾ ಭರತಾದ್ರಿ, ಕಾರ್ಯದರ್ಶಿ ಸಿ.ಎಂ. ನಾಗರಾಜ್, ಜಂಟಿ ಕಾರ್ಯದರ್ಶಿ ಎನ್.ಆರ್.ಶ್ರೀನಾಥ್ ಮತ್ತು ರೇಣುಕಾ ನಿಡಗುಂದಿ ಮತ್ತು ಕೋಶಾಧಿಕಾರಿ ಕೆ.ಆರ್. ರಾಮಮೂರ್ತಿ ಅವರಿದ್ದಾರೆ. ಅಲ್ಲದೆ ಸಮಿತಿಯಲ್ಲಿ ಅಂಜನಿ ಗೌಡ, ಎಸ್.ಸಿ. ಹೇಮಲತಾ, ಟಿ.ಎಂ. ಮೈಲಾರಪ್ಪ, ಪಿ.ಸಿ. ಶ್ರೀನಿವಾಸ, ಸಿ.ಆರ್. ಶ್ರೀನಿವಾಸ್, ಜಿ.ಬಿ. ಹೆಗಡಿ, ಆನಂದ ಮುರುಗೋಡ್, ಬಿ. ನಾರಾಯಣ ಅವರು ಸೇರಿ ಎಂಟು ಸದಸ್ಯರಿದ್ದಾರೆ.

ಸುಮಾರು ೩೭೦೦ ಅಜೀವ ಸದಸ್ಯರಿರುವ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಸುಮಾರು ೮೦೦ ಸದಸ್ಯರು ಮತದಾನ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿ ಎರಡು ಮತಗಳ ಅಂತರದಲ್ಲಿ ಡಾ. ಹೆಗಡೆಯವರು ವಿಜಯ ಗಳಿಸಿದರು.

(ಕೆಂಪು ಕೋಟೆ ವರದಿ)

ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ..??

ಅಪ್ಪ ಲೂಸ ಅಮ್ಮ ಲೂಸ ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ ಹಿಸ್ಟ್ರಿ ಲೂಸ…. ಅದು ಸರಿ ಅದು ಸರಿ :-)…! ಈಗ ಹೆಚ್ಚು ಪ್ರಚಲಿತದಲ್ಲಿ ಇರುವ ಪ್ರೇಮಗೀತೆ . ಒಲವೆ ಜೀವನ ಸಾಕ್ಷಾತ್ಕಾರ ಎಂದು ಯಾರು ಹೇಳುವ ಅಗತ್ಯ ಇಲ್ಲ ಮನದಲ್ಲಿ ಇದ್ದಿದ್ದು ನೇರವಾಗಿ ಒಗೆದು ಬಿಡ್ತಾರೆ ಈಗಿನ ಪ್ರೇಮಿಗಳು.

ಅಯ್ಯೋ ಏನ್ರೀ ಈ ಕಥೆ ನಮ್ಮ ಕನ್ನಡ ಚಾನಲ್ ಗಳದ್ದು 🙂 ಎಲ್ಲಿ ನೋಡಿದ್ರೂ ಪ್ರೇಮಮಯ . ಫೆಬ್ರವರಿ ಹತ್ರ ಬಂದ0ಗೆ ಎಲ್ಲಾ ಚಾನೆಲ್ ನವರು ರೋಮಾಂಚಿತರಾಗಿ ಬಿಡ್ತಾರೆ. ಎಲ್ಲೋ ತನ್ನ ಪಾಡಿಗೆ ಇರುವ ಎಲ್ಲಾ ಹೆಣ್ಣು ಮಕ್ಕಳ ಅಣ್ಣ ಪ್ರಮೋದ್ ಮುತಾಲಿಕ್ ಅವರನ್ನು ಬಡಿದೆಬ್ಬಿಸುವ ಕೆಲ್ಸದಲ್ಲಿ ಸದಾ ನಿರತರಾಗಿ ಇರ್ತಾರೆ. ಪ್ರೇಮ ಗಾಳಿ, ಆ ಬಿಸಿ, ಆ ಕಥೆ ಎಲ್ಲವೂ ಕೇವಲ ಜನವರಿ ಅರ್ಧ ತಿಂಗಳಿಂದ ಶುರು ಆಗಿ ಫೆಬ್ರವರಿ ಅಂತ್ಯದಲ್ಲಿ ಟಾಟಾ ಬೈ ಬೈ 🙂

ಸೈಕಲ್ ಪೆಡಲ್ ಏಟು ಮತ್ತು ನಾನು

ಗೋವಿಂದರಾಜ್

ಸುಮ್ಮನೆ

“ಓದ್ಕೋ ಹೋಗಪ್ಪ. ಮಾವ ಬಂದ್ರೆ ಹೊಡಿತಾನೆ. ನೀನು ಅಳ್ತಿಯ.ನಂಗೆ ನೋಡಕ್ಕಾಗಲ್ಲ. ತಡ್ಕಲಕ್ ಬಂದ್ರೆ ನಂಗು ಬಯ್ತಾನೆ. ಅದಕ್ಕೆ ಈ ಉರಿಗಾಳು ತಿನ್ಕೊಂಡು ಓದ್ಕೋ..ಜಾಣ ನನ್ನ ಮಗ…” ಹಾಗಂತ ನನ್ನ ಅಜ್ಜಿ ಎಂಬ ಅಮ್ಮ ಒಂದು ಮುಸ್ಸಂಜೆ ಹೇಳುತ್ತಿದ್ದರೆ ನನಗೆ ಕೇಳುವ ವಯಸ್ಸಾಗಲಿ ಮನಸ್ಸಾಗಲಿ ಇರಲಿಲ್ಲ. ಆಗಿನ್ನೂ ಚಿಕ್ಕವನು. ಶಿಶುವಿಹಾರಕ್ಕೆ ಸೇರಿಸುವ ವಯಸ್ಸು ಆಗಿರಲಿಲ್ಲ. ಅದಕ್ಕೆ ಮೈಸೂರು ಎಂಬ ಅರಮನೆಗಳ ಊರಿನಲ್ಲಿ ಪಿಯುಸಿ ಓದಿಕೊಂಡು ಪ್ರತಿದಿನ ಮನೆಯಿಂದ ತಂಗಳು ತಿಂದು ಫೈರ್ ಅಂಡ್ ಲವ್ಲೀ ಸ್ನೌ ಹಾಕೊಂಡು ಓಡಾಡುತಿದ್ಧ ಮಾವ ನನಗೆ ಮನೆಯ ಮೇಷ್ಟ್ರು.

ಮಾವ ಎಂದರೆ ನನ್ನನ್ನೂ ಸೇರಿದಂತೆ ನನ್ನ ಮನೆಯ ಹಿರಿಯರು, ಕಿರಿಯರು ಅಲ್ಲದೆ ನನ್ನ ಹತ್ತಿರದ ಸಂಬಂದಿಕರಿಗೆಲ್ಲ ಎಲ್ಲಿಲ್ಲದ ಭಯ. ತಪ್ಪು ಎಂದು ತಿಳಿದಾಕ್ಷಣ ಮುಖ ಮೂತಿ ನೋಡದೆ ಚೆನ್ನಾಗಿ ಬಯ್ದು ಮಾನ ಹರಾಜು ಹಾಕುತಿದ್ದ. ಎಲ್ಲರು ಮಾವನ ಮಾತನ್ನು ಒಪ್ಪುಥ್ಥಿದ್ದುದಕ್ಕೆ ಕಾರಣವಿತ್ತು. ಮಾವ ಎಸ್ಸೆಸೆಲ್ಸಿ ಪಾಸಾಗಿಯೂ ದೌಲತ್ತು ಇರಲಿಲ್ಲ. ಜತೆಗೆ ಹೆಣ್ಣು ಮಕ್ಕಳನ್ನು ಕಣ್ಣೆತ್ತಿ ಕೂಡ ನೋಡುವ ಜಾಯಮಾನದವನಾಗಿರಲಿಲ್ಲ. ಅದರೊಂದಿಗೆ ಓದಿನಲ್ಲಿ ಕೂಡ ಹಿಂದೆ ಇರಲಿಲ್ಲ. ಮಧ್ಯಹ್ನ ಕಾಲೇಜು ಮುಗಿಸಿಕೊಂಡು ಬಂದವನೇ ತಂಗಳು ಮುದ್ದೆ ತಿಂದು ಸೂಳೆ ಮಂಟಿ ಹೊಲದ ಬೇವಿನ ಅಥವಾ ಹೊಂಗೆ ಮರದ ನೆರಳಲ್ಲಿ ಪವಡಿಸಿ ಪುಸ್ತಕ ತೆರೆದನೆಂದರೆ ಭಗವಂತ ಬಂದು ಎಬ್ಬಿಸಿದರು ಮುಸ್ಸಂಜೆ ಮುಂಚೆ ಪುಸ್ತಕ ಮಡಚುತಿರಲಿಲ್ಲ. ಹೆಂಗಸರೆಂದರೆ ಮೂರು ದೂರ. ಹೆಂಗಸರಿಂದ ದೂರ ಇರುವುದು ಓದುವವನ ಬಹುಮುಖ್ಯ ಲಕ್ಷಣ ಎಂಬುದು ಅಲಿಖಿತ ನಿಯಮ ನನ್ನ ಮನೆಯಲ್ಲಿ. ಹಾಗಾಗಿ ಮಾವನಿಗೆ ಅಲ್ಲಿ ಬಹು ಮುಖ್ಯ ಸ್ಥಾನ ಇತ್ತು.

More

ಯಾರ್ಯಾರ 4 ಫಾಥೆರ್ಸ್ ಏನೇನಾಗಿದ್ರು?

 

ಸೂತ್ರಧಾರ ರಾಮಯ್ಯ

ಆಕಾಶವಾಣಿ: ಸಂತೋಷ್ ಕುಮಾರ್ ಸದಾ ನಗುತ್ತಿರುತ್ತಾನೆ. ಮುಖ ಗಂಟು ಹಾಕಿಕೊಂಡ ದಿನವೇ ಇಲ್ಲಾ?

ಚಿತ್ರಗುಪ್ತ : ಅವನ ಹಿಂದಿನ ನಾಲ್ಕು ಜನ ರೇಷನ್, ಐ ಮೀನ್ ಫೋರ್ ಫಾದರ್ಸ್ ನಕ್ಕೇಇರಲಿಲ್ಲ! ಅಂದ ಹಾಗೇ ಅವರೆಲ್ಲ ಹರಳೆಣ್ಣೆ ವ್ಯಾಪಾರ ಮಾಡ್ತಿದ್ರಂತೆ.

…………

ಆಕಾಶವಾಣಿ: ಲಂಬು ರಂಗನ ಬಳಿ ಪ್ರಶಸ್ತಿ ಪಲಕಗಳ , ಬಿರುದು ಬಾವಲಿ ಬಿಲ್ಲೆಗಳ, ಮೊಮೆಂತೊಗಳ, ಪಾರಿತೋಷಕಗಳ ಮಳಿಗೆಯೇ ಇದೆಯಲ್ಲಾ?

ಚಿತ್ರಗುಪ್ತ : ಅವನ ಫೋರ್ ಫಾದರ್ಸ್ ರಾಜ್ಯದ ಅಗಲಕ್ಕೂ ಉದ್ದಾಮ ಸಾಹಿತಿ-ಕಲಾವಿದರಾಗಿದ್ದರಂತೆ. ರಾಜಕೀಯ ವಲಯದಲ್ಲೂ ಪ್ರಭಾವಿಗಳಂತೆ. ಸದರಿ ಪ್ರಭಾವ ವಶೀಲಿ ಭಾಜಿಗಳಿಂದ ಬಂಡಿಗಟ್ಟಲೆ ಬಿರುದು ಬಾವಲಿಗಳ್ನ ಗಿಟ್ಟಿಸಿ ಕೊಂಡರಂತೆ. ಅದ್ಸರಿ, ಪಿತ್ರಾರ್ಜಿತವಾಗಿ ರಂಗಣ್ಣ ಅವುಗಳ್ನೆಲ್ಲ ಪಡೆದು ಅದರ ಮಳಿಗೆ ಇಟ್ಟುಕೊಂಡರೆ ನಿಮಗ್ಯಾಕ್ ಹೊಟ್ಟೆ ಉರಿ? ಬೇಕಾದ್ರೆ ಪ್ರಶಸ್ತಿಗಳಿಗೆ ನೀವು ಟ್ರೈ ಮಾಡಿ, ಅದುಬಿಟ್ಟು ಸುಮ್ಮನೇ…? (ಕೆರಳಿದ ಗುಪ್ತ)

ಆಕಾಶವಾಣಿ: ಮೂರು ಹೊತ್ತು ಬಾರ್ ಗಳಲ್ಲಿ ಬೀರ್ ಕೊಂಡು, ಬ್ರಾನ್ದಿಯಾ ತಕೋ ಅಂತ, ಮನೆಯ ಚಿಂತೆಗೆ ಎಳ್ಳು ನೀರು ಬಿಟ್ಟು ಗಡನ್ಗಿನಲ್ಲೇ ಬಿದ್ದಿರ್ತಾನಲ್ರೀ ಆ ಜಯತೀರ್ಥ?

ಚಿತ್ರಗುಪ್ತ : ಅವನ ಫೋರ್ಫಾದರ್ಸು ‘ಧರ್ಮ ಭೀರು’ಗಳಾಗಿದ್ದು ಸದಾ ‘ಆ’ ಪರಮಾತ್ಮನ ಧ್ಯಾನದಲ್ಲೇ ಇದ್ರನ್ತಲ್ಲಾ ; ಹಾಗಾಗಿ

ಇವನೂ’ಈ’ ಪರಮಾತ್ಮನ ಧ್ಯಾನದಲ್ಲೇ ಮುಳುಗಿ ಹೋಗಿರ್ತಾನೆ ಅಷ್ಟೇ.

More

%d bloggers like this: