Rights issue ಮತ್ತು FPO:

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ 39

There is no secret to success, it is the result of preparation, hard work and learning from failures. . . . . . . . Anon.

ಸಾಫಲ್ಯದ ಗುಟ್ಟು ಎಂಬುದಿಲ್ಲ. ಅದು ತಯಾರಿ, ಶ್ರಮ ಮತ್ತು ವೈಫಲ್ಯಗಳಿಂದ ಕಲಿಯುವುದರ ಫಲ. . . . ಅನಾಮಿಕ.

ಕಳೆದ ವಾರದ ಕಾಕು ಓದಿದವರಾದ ನೀವೀಗ ಬೋನಸ್ ಎಂಬ ಡಿಕ್ಷನರಿ ಶಬ್ದದ ಧ್ವನ್ಯಾರ್ಥದಿಂದಲೆ ಆನಂದ ತುಂದಿಲರಾದ ಜನತೆಯ ಮೇಲೆ ದೋಂಡುರಂಗ್ ಪಾಂಡುರಂಗ್ ಟೋಪಿವಾಲಾ ಕಂಪೆನಿ ಮಾಡಿದ ಮೋಡಿಯನ್ನು ಕೂಲಂಕಷವಾಗಿ ಅರಿತವರಾಗಿದ್ದೀರಿ.

ಇನ್ನೀಗ, ಅದೇ ದೋಂಡುರಂಗ್ ಪಾಂಡುರಂಗ್ ಕಂಪೆನಿಯನ್ನೇ ಮತ್ತೊಮ್ಮೆ ತೆಗೆದುಕೊಳ್ಳಿ. ಬೋನಸ್ ಹಂಚಿ ಅಜರಾಮರನಾದ ಬರ್ಸ ಮಗೆ ಮತ್ತಾರು ತಿಂಗಳುಗಳಲ್ಲಿ ಒಂದಕ್ಕೊಂದು (1:1) ಸುಪರ್ಡ್ಯೂಪರ್ ರೈಟ್ಸ್ ಇಶ್ಯೂ ಘೋಷಿಸಿ ಮಾರುಕಟ್ಟೆಯ ಬೆಳ್ಳಿಪರದೆಯಲ್ಲಿ ಮತ್ತೊಮ್ಮೆ ಮಿಂಚುತ್ತಾನೆ. ಕಂಪೆನಿಗೆ ಹೂಡಿಕೆಗಾಗಿ ಹೆಚ್ಚುವರಿ ದುಡ್ಡು ಬೇಕಾದಲ್ಲಿ ಇರುವ ಶೇರುದಾರರಿಗೆ ಮಾರುಕಟ್ಟೆಯ ಬೆಲೆಗಿಂತ ಕಡಿಮೆದರದಲ್ಲಿ ಹೊಸ ಶೇರುಗಳನ್ನು ನೀಡುವುದೇ ಈ ರೈಟ್ಸ್ ಆಫರ್. ಇದು ಸಧ್ಯದ ಶೇರುದಾರರಿಗೆ ಮಾತ್ರ ನೀಡಲಾಗುತ್ತದೆ. ಶೇರುದಾರರಲ್ಲದ ಹೊರಗಿನವರಿಗೆ ಇದು ಲಭ್ಯವಿಲ್ಲ.

ಈ ಸಂದರ್ಭದಲ್ಲಿ ಈ ಬಿರ್ಸ ಮಗೆ ಒಂದು ಶೇರಿಗೆ ಸಧ್ಯದ ಮಾರುಕಟ್ಟೆಯ ಬೆಲೆಯಾದ ರೂ 80 ಕ್ಕಿಂತ 50% ಕಡಿಮೆ ಬೆಲೆಗೆ, ಅಂದರೆ ರೂ 40ಕ್ಕೆ ಒಂದಕ್ಕೊಂದು ಶೇರುಗಳನ್ನು ಪ್ರಸ್ತುತ ಶೇರುದಾರರಿಗೆ ಕೊಡುವುದಾಗಿ ಘೋಷಿಸಿ ಜನರ ಕಣ್ಮನಗಳಲ್ಲಿ ಡಬ್ಬಲ್ ಬಿರ್ಸನಾಗುತ್ತಾನೆ. ಮಾರುಕಟ್ಟೆಯಲ್ಲಿ ರೂ 80 ಇರುವ ಶೇರು ಈಗ ರೂ 40 ಕ್ಕೆ!! ಆನರ ಆನಂದಕ್ಕೆ ಪಾರವೇ ಇಲ್ಲ. ಮಗನನ್ನು ಹಾಡಿ ಹೊಗಳುತ್ತಾರೆ. ಮೊದಲು ಬೋನಸ್ ಆಮೇಲೆ ರೈಟ್ಸ್ ಆಫರ್! ಇನ್ನೇನು ಬೇಕು? ಬಿರ್ಸದೇವನ ಮೂತರ್ಿಯಿಟ್ಟು ಮಂದಿರ ಕಟ್ಟುವುದೊಂದೇ ಬಾಕಿ.

ಆದರೆ, ರೈಟ್ಸ್ ಬಳಿಕ ಕಂಪೆನಿಯ ಬ್ಯಾಲನ್ಸ್ ಶೀಟ್ನ ಸ್ವರೂಪ ಹೇಗಾಗಿದೆ ಅಂತ ಒಮ್ಮೆ ನೋಡಿ:

ಶೇರು ಕಾಪಿಟಲ್ 200 ಕೋಟಿ (ರೂ 10 ಮುಖ ಬೆಲೆಯ 20 ಕೋಟಿ ಶೇರುಗಳು) ಶೇರೊಂದರ ರೂ 10 ರಂತೆ

ರೈಟ್ಸ್ ಇಶ್ಯೂ 800 ಕೋಟಿ (ರೂ 10 ಮುಖ ಬೆಲೆಯ 20 ಕೋಟಿ ಶೇರುಗಳು) ಶೇರೊಂದರ ರೂ 40 ರಂತೆ)

ರಿಸವ್ಸರ್್ 0

ಒಟ್ಟು ಇಕ್ವಿಟಿ 1000 ಕೋಟಿ (ರೂ 10 ಮುಖ ಬೆಲೆಯ 40 ಕೋಟಿ ಶೇರುಗಳು) ಶೇರೊಂದರ ರೂ 25 ಆದಂತಾಯಿತು.

ಮೊದಲಿದ್ದ ರೂ 10 ಮತ್ತು ಈಗ ಕೊಟ್ಟ ರೂ 40 ರ ಸರಾಸರಿಯೇ ರೂ 25. ಶೇರು ಮೌಲ್ಯದಲ್ಲಿ ಬೇರೇನೂ ವ್ಯತ್ಯಾಸವಾಗಲಿಲ್ಲ. 10 ಮತ್ತು 40 ರ ಎರಡು ಶೇರಿನ ಬದಲಾಗಿ ಸರಾಸರಿ 25 ರ ಎರಡು ಶೇರು ಈಗ ಕೈಯಲ್ಲಿರುತ್ತದೆ ಅಷ್ಟೆ. ಮುಖ್ಯವಾಗಿ ನಾವು ಕೊಟ್ಟ ದುಡ್ಡೇ ಇಕ್ವಿಟಿಯನ್ನು ತುಂಬಿದೆ ಹೊರತು ಬೇರೇನೂ ಹುಟ್ಟುವಳಿಯ ಕಾರ್ಯಕ್ರಮ ನಡೆದಿಲ್ಲ. ಆಂತರಿಕವಾಗಿ ಶೇರಿನ ಮೌಲ್ಯ ನಾವು ಹಾಕಿದ ಹೊಸ ದುಡ್ಡಿನಷ್ಟೇ ಇಕ್ವಿಟಿ ಹೆಚ್ಚಳವಾಗಿದೆ. ಬೇರೇನೂ ಆಗಿಲ್ಲ.

ಆಮೇಲೆ ಈಗ ಈ ಶೇರಿನ ಮಾರುಕಟ್ಟೆಯ ಬೆಲೆಯಲ್ಲಿ ಏನಾಗುತ್ತದೆ ಅಂತ ನೋಡೋಣ:

ಮಾರುಕಟ್ಟೆಯ ಬೆಲೆಯಿಂದ ಕಡಿಮೆ ಬೆಲೆಗೆ ರೈಟ್ಸ್ ಕೊಡುವುದೇ ಸಾಮಾನ್ಯ ಜನರಿಗೆ ಏನೋ ಭಾರಿ ಬೆನಿಫಿಟ್ ಸಿಕ್ಕಿದ ಭ್ರಮೆ ಹುಟ್ಟಿಸುತ್ತದೆ. 80 ರೂಪಾಯಿಗೆ ನಡೆಯುತ್ತಿರುವ ಶೇರು ಈಗ 40 ರೂಪಾಯಿಗಳಿಗೆ ಸಿಗುತ್ತದೆ ಎಂಬ ಭ್ರಮೆ! ಆದರೆ ವಾಸ್ತವವೇ ಬೇರೆ. ವಾಸ್ತವದಲ್ಲಿ, ಜಾಸ್ತಿ ಶೇರು ಬಿಡುಗಡೆಯಾಗಿ ಶೇರು ಮೌಲ್ಯ ಕಡಿಮೆಯಾದ ಕಾರಣಕ್ಕೆ ಮಾರುಕಟ್ಟೆ ಬೆಲೆಯೂ ಬಳಿಕ ಅದೇ ಪ್ರಮಾಣದಲ್ಲಿ ಇಳಿಯುತ್ತದೆ. ಮೊದಲು ಶೇರೊಂದರ 80 ರೂಪಾಯಿ ಇದ್ದ ಮಾರುಕಟ್ಟೆಯ ಬೆಲೆಗೆ ಈಗ – ಜನತೆ ಹಾಕಿದ ರೂ 40 ಸೇರಿಕೊಂಡು – ಎರಡು ಶೇರು ಕೈಯಲ್ಲಿ ಇರುತ್ತದೆ. ಅಂದರೆ ಒಟ್ಟು ರೂ 120 ಕ್ಕೆ 2 ಶೇರು.

ಇದೀಗ ಶೇರೊಂದರ ರೂ 60 ಹೊಸ ಮಾರುಕಟ್ಟೆ ಬೆಲೆಯಾಗುತ್ತದೆ. ಇದು ಅನಾಲಿಸ್ಟ್ಗಳು ಮಾಡುವ ವೈಜ್ಞಾನಿಕ ಲೆಕ್ಕಾಚಾರ. ಮೇಲ್ನೋಟಕ್ಕೆ ಮಾರುಕಟ್ಟೆಯ ಬೆಲೆಯಿಂದ ಕಡಿಮೆಗೆ ರೈಟ್ಸ್ ಶೇರು ಸಿಕ್ಕಿದಂತೆ ಕಂಡರೂ ರೈಟ್ಸ್ ಬಿಡುಗಡೆಯಾದ ತಕ್ಷಣ ಮಾರುಕಟ್ಟೆ ಅಷ್ಟರಮಟ್ಟಿಗೆ ಕುಸಿಯುತ್ತದೆ. ಈ ರೈಟ್ಸ್ ಕೂಡಾ ಬೋನಸ್ನಂತೆಯೇ ಯಾವುದೇ ಮೌಲ್ಯವರ್ಧನೆಯಿಲ್ಲದ ಒಂದು ಅಕೌಂಟಿಂಗ್ ಬಾಬ್ತು. ಇವೆರಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಬೋನಸ್ಸಿನಲ್ಲಿ ಯಾವುದೇ ಹೊಸಹೂಡಿಕೆ ಬರುವುದಿಲ್ಲ. ಆದರೆ ಇಲ್ಲಿ ಕಂಪೆನಿಗಳಿಗೆ ಅಗತ್ಯಕ್ಕೆ ತಕ್ಕಂತೆ ಹೊಸ ಹೂಡಿಕೆ ಬರುತ್ತದೆ. ಅದೇ ಮುಖ್ಯ ವ್ಯತ್ಯಾಸ.

ಹೂಡಿಕೆದಾರರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದರೂ ಈ ಆಫರ್ಗಳನ್ನು ಖರೀದಿಸಲೇ ಬೇಕಾಗುತ್ತದೆ. ಇದೊಂದು ವಿಚಿತ್ರ ಪ್ರಸಂಗ- ಕೊಂಡವರಿಗೆ ಯಾವುದೇ ವಿಶೇಷ ಪ್ರಯೊಜನವಾಗುವುದಿಲ್ಲವಾದರೂ ಕೊಳ್ಳದೆ ಹಾಗೇ ಸುಮ್ಮನೆ ಬಿಟ್ಟವರಿಗೆ ನಷ್ಟವಂತೂ ಖಂಡಿತ. ಅಂತಹವರ ಬಳಿ ಹಳೆಯ ರೂ 10 ಕ್ಕೆ ಕೊಂಡ ಮೊದಲು ರೂ 80 ಇದ್ದ ಒಂದು ಶೇರು ಈಗ ರೈಟ್ಸ್ ಕೇ ಬಾದ್ ರೂ 60 ಆಗಿ ಅಣಕಿಸುತ್ತಾ ಇರುತ್ತದೆ. ಅವರಿಗೆ ಶೇರೊಂದರ ರೂ 20 ನಷ್ಟ. ಹೊಸದಾಗಿ ರೂ 40 ಕ್ಕೆ ಕೊಂಡ ಎರಡನೆಯ ಶೇರುಗಳು ಇಲ್ಲವಾದ ಕಾರಣ ಎಲ್ಲರಿಗೂ ಸಿಗುವ ಸರಾಸರಿಯ ಲಾಭದ ಅವಕಾಶ ಪಡೆಯದವರಾಗಿತ್ತಾರೆ. ಅದು ಅವರ ಬದಲಿಗೆ ಅದನ್ನು ಪಡೆದುಕೊಳ್ಳುವವರ ಕೈಸೇರುತ್ತದೆ.

ಆದ್ದರಿಂದ ಪ್ರತಿಬಾರಿ ರೈಟ್ಸ್ ಬಂದಾಗಲೂ ಅದನ್ನು ಪಡೆಯಲೇ ಬೇಕಾಗುತ್ತದೆ ಅಥವ ಆ ಆಫರ್ ಅನ್ನು ಮಾರುಕಟ್ಟೆಯಲ್ಲಿ ಮಾರಿ ಅದರ ಮೇಲಿರುವ ಪ್ರೀಮಿಯಂ ಅನ್ನು ಪಡೆಯ ಬೇಕಾಗುತ್ತದೆ. 40 ರೂ ಗೆ ಸಿಗುವ ಬಳಿಕ 60 ರೂ ಬೆಲೆಯಾಗಲಿರುವ ಈ ರೈಟ್ಸ್ ಆಫರ್ಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ರೂ 20 ಆಗಬಹುದು. ರೈಟ್ಸ್ ಶೇರುಗಳನ್ನು ಕೊಳ್ಳಲು ಮನಸ್ಸಿಲ್ಲದವರು ಅವರ ಹಕ್ಕನ್ನು ಮಾರಿ ನಗದಾಗಿಸಬಹುದು. ಅಷ್ಟೂ ಮಾಡದೆ ಆಫರ್ ಅನ್ನು ಖಾಲಿ ಬಿಟ್ಟವರಿಗೆ ನಷ್ಟ. ಈ ಕಾರಣಕ್ಕಾಗಿಯೂ ರೈಟ್ಸ್ ಆಫರ್ ಅನ್ನು ಹೆಚ್ಚಾಗಿ ಯಾರೂ ಬಿಟ್ಟು ಬಿಡುವುದಿಲ್ಲ.

ಇದರಿಂದಾಗಿಯೂ ಕಂಪೆನಿಗಳಿಗೆ ಧನ ಸಂಗ್ರಹಿಸಲು ಸುಲಭವಾಗುತ್ತದೆ. ಧನ ಸಂಗ್ರಹಿಸುವ ಖಚರ್ು ವೆಚ್ಚಗಳೂ ಹೊಸ ಆಫರ್ಗಿಂತ ಸ್ವಲ್ಪ ಕಡಿಮೆಯಾಗುತ್ತದೆ.

Follow on Public Offer(FPO):

ಮಾರುಕಟ್ಟೆಯಲ್ಲಿ ಹೂಡಿಕೆಗಾಗಿ ಧನ ಸಂಗ್ರಹ ಮಾಡುವುದಕ್ಕೆ ಇದು ಇನ್ನೊಂದು ಮಾರ್ಗ.

ಪ್ರಪ್ರಥಮ ಬಾರಿಗೆ ಮಾರುಕಟ್ಟೆಯಲ್ಲಿ ಶೇರು ನೀಡಿ ಹೂಡಿಕೆಗಾಗಿ ಧನ ಸಂಗ್ರಹಕ್ಕೆ ಹೊರಟರೆ ಅದನ್ನು Initial Public Offer (IPO) ಅನ್ನುತ್ತಾರಾದರೆ ಆ ಬಳಿಕ ಮಾರುಕಟ್ಟೆಯಲ್ಲಿ ನೀಡುವ ಶೇರುಗಳಿಗೆ Follow-on Public Offer (FPO) ಎನ್ನುತ್ತಾರೆ. ಇದು ಸಾರ್ವಜನಿಕರಿಗೆ ಯಾರಿಗಾದರೂ ಸಿಗಬಹುದಾದಂತಹ ಆಫರ್. ಮೇಲೆ ಹೇಳಿದಂತೆ ಕೇವಲ ಸಧ್ಯದ ಶೇರುದಾರರಿಗೆ ಸಿಗುವಂತಹ ರೈಟ್ಸ್ ಆಫರ್ ಅಲ್ಲ. ಅಷ್ಟು ಬಿಟ್ಟರೆ ರೈಟ್ಸ್ಗೂ ಈಕಔ ಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಎರಡೂ ಕೂಡಾ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುವಂತಹ ಹೊಸ ಶೇರುಗಳು – ಕಂಪೆನಿಗೆ ಹೊಸಹೂಡಿಕೆಗಾಗಿ ಧನ ಸಂಗ್ರಹಿಸುವ ದಾರಿಗಳು.

ರೈಟ್ಸ್ ಇಶ್ಯುನಲ್ಲಿ ರೈಟ್ಸ್ ಕೊಳ್ಳದವರಿಗೆ ಅಥವ ಕನಿಷ್ಟ ಆ ಹಕ್ಕನ್ನು ಮಾರುಕಟ್ಟೆಯಲ್ಲಿ ಮಾರದೆ ಹಾಗೇ ಸುಮ್ಮನೆ ಕುಳಿತವರಿಗೆ ನಷ್ಟ ಎಂದು ಹೇಳಿದೆವಷ್ಟೆ? ಅದೇ ರೀತಿಯಲ್ಲಿ ನಷ್ಟಗಳು ಇಲ್ಲೂ ನಡೆಯುತ್ತದೆ. FPOದಲ್ಲೂ ಕೂಡಾ ಅದು ಬಂದಾಗ ಅಜರ್ಿಹಾಕದೇ ಅಥವ ಹಾಕಿದರೂ ಸಿಗದೇ ಇರುವ ಸಧ್ಯದ ಶೇರುದಾರರಿಗೆ ನಷ್ಟ. ಸಧ್ಯದ ಶೇರುದಾರರಲ್ಲದೆ ಹೊಸದಾಗಿ ಕಂಪೆನಿಗೆ ಪ್ರವೇಶ ಮಾಡುವವರಿಗೆ ಶೇರು ಸಿಕ್ಕಿದಾಗ ಅಂಥವರಿಗೆ ಆ ಲಾಭ ಹೋಗುತ್ತದೆ. ಇದರ ಲಾಜಿಕ್ ಮೇಲೆ ರೈಟ್ಸ್ ಸಂದರ್ಭದಲ್ಲಿ ಹೇಳಿದಂತೆಯೇ ಇರುತ್ತದೆ.

***********

ಬೋನಸ್ ಮತ್ತು ಶೇರು ವಿಭಜನೆ ಒಂದಕ್ಕೊಂದು ಸಂಬಂಧವಿಟ್ಟುಕೊಂಡಂತೆಯೇ, ರೈಟ್ಸ್ ಮತ್ತುFPO ಕೂಡಾ ಒಂದಕ್ಕೊಂದು ಸಂಬಂಧವಿರಿಸಿಕೊಂಡಿದೆ. ಬೋನಸ್ ಮತ್ತು ಶೇರು ವಿಭಜನೆ ಹೂಡಿಕೆಯಲ್ಲಿ ಯಾವುದೇ ವ್ಯತ್ಯಾಸವನ್ನೂ ಉಂಟು ಮಾಡದೆ ಪ್ರತಿ ಶೇರಿನ ಮೌಲ್ಯವನ್ನು ಕುಗ್ಗಿಸುವ ಕೆಲಸ ಮಾಡಿದರೆ ರೈಟ್ಸ್ ಮತ್ತು FPO ಗಳೆರಡೂ ಕೂಡಾ ಹೊಸ ಶೇರು ಕಾಪಿಟಲ್ ಸಂಗ್ರಹಿಸುವ ಕೆಲಸ ಮಾಡುತ್ತವೆ.

ಅವೆರಡೂ ಸುಮಾರಾಗಿ ಒಂದೇ ಆದರೆ ಕಂಪೆನಿಗಳು ಅವೆರಡರನ್ನು ಯಾವ ಸಂದರ್ಭಗಳಲ್ಲಿ ಹೇಗೆ ಉಪಯೋಗಿಸಿಕೊಳ್ಳುತ್ತವೆ? ಇದು ಮುಂದಿನ ಪ್ರಶ್ನೆ. ಹಾಗೂ ಸ್ವಲ್ಪ ಕಷ್ಟದ ಪ್ರಶ್ನೆಯೇ ಸರಿ. ಯಾಕೆಂದರೆ ಇದರಲ್ಲಿ ಇಧಮಿತ್ಥಂ ಎಂದು ಹೇಳುವ ಹಾಗಿಲ್ಲ.

ಕೆಲವು ಕಂಪೆನಿಗಳು ರೈಟ್ಸ್ ಆಫರ್ ಅನ್ನು ಅದು ಧನ ಸಂಗ್ರಹಕ್ಕೆ ಸುಲಭದ ದಾರಿ ಎಂಬ ಕಾರಣಕ್ಕೆ ಉಪಯೋಗಿಸಿಕೊಳ್ಳಬಹುದು. ಪಬ್ಲಿಕ್ ಆಫರ್ ಮಾಡಿದರೆ ಅದಕ್ಕೆ ರೆಸ್ಪಾನ್ಸ್ ಕಡಿಮೆಯಾದೀತೋ ಎಂಬ ಭೀತಿ ಅವರನ್ನು ಕಾಡುತ್ತಿರಬಹುದು ಅಥವ ಪಬ್ಲಿಕ್ ಆಫರ್ ಮಾಡಿ ಸಧ್ಯದ ಶೇರುದಾರರಿಗೆ ಅಪಚಾರ ಮಾಡಬಾರದು ಎಂಬ ಆದರ್ಶಕ್ಕಾಗಿ ರೈಟ್ಸ್ ಮಾಡುತ್ತಿರಬಹುದು ಅಥವ ಪ್ರಚಾರ ಮತ್ತು ಖಚರ್ು ಕಡಿಮೆ ಎಂಬ ಕಾರಣಕ್ಕಾಗಿ ರೈಟ್ಸ್ ಇಶ್ಯೂ ಮಾಡುತ್ತಿರಬಹುದು. ಕೆಲವು ಕಂಪೆನಿಗಳು FPO ಅನ್ನು ಜಾಸ್ತಿ ಪ್ರಚಾರ ಅಬ್ಬರ ಸೃಷ್ಟಿಸಿ ಜಾಸ್ತಿ ಪ್ರೀಮಿಯಂ ಚಾಜರ್್ ಮಾಡಲು ಬಳಸಿಕೊಳ್ಳುತ್ತಿರಬಹುದು ಅಥವ ತಮ್ಮ ಶೇರುದಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ಧೇಶದಿಂದ ಮಾಡುತ್ತಿರಬಹುದು.

 

ಈ ರೀತಿ ಒಂದೊಂದು ಕಂಪೆನಿಗೆ ತನ್ನದೇ ಆದ ವೈಯಕ್ತಿಕ ಕಾರಣಗಳಿರುತ್ತವೆ. ಅವೆಲ್ಲ ಪ್ರಸ್ತುತವಾದರೂ ಅಷ್ಟು ಮುಖ್ಯವಲ್ಲ. ಇದರಲ್ಲಿ ಮುಖ್ಯ ಏನೆಂದರೆ ಈ ಕಂಪೆನಿಗಳು ಈ ಹೊಸ ಧನರಾಶಿಯನ್ನು ಯಾವ ಉದ್ಧೇಶಕ್ಕೆ ಬಳಸಿಕೊಳ್ಳುತ್ತವೆ ಎನ್ನುವುದು. ಹೂಡಿಕೆಯ ಮಾಪನ ಅದರ ಮಾರ್ಗವನ್ನನುಸರಿಸಿ ಆಗಿರದೆ ಅದರ ಉದ್ಧೇಶಕ್ಕನುಗುಣವಾಗಿ ಆಗಬೇಕು ಅಲ್ಲವೆ? ಕೆಲವು ಕಂಪೆನಿಗಳು ತಮ್ಮ ಡೆಟ್ ಅಥವ ಸಾಲದ ಹೊರೆಯನ್ನು ತಪ್ಪಿಸುವ ಸಲುವಾಗಿ ಶೇರು ಇಶ್ಯೂ ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಂಪೆನಿ ಆ ಸಾಲಗಳ ಮೇಲೆ ನೀಡುತ್ತಿರುವ ಬಡ್ಡಿಯಂಶದಷ್ಟು ಮಾತ್ರ ಉಳಿತಾಯವಾದೀತು.

ಅದು ಸೇರಿಕೊಂಡು ಅಂತಿಮವಾಗಿ ಕಂಪೆನಿಯ ಲಾಭದಲ್ಲಿ ಎಷ್ಟು ವೃದ್ಧಿಯಾದೀತು ಎಂಬುದನ್ನು ನೋಡಬೇಕು. ಇನ್ನು ಕೆಲವು ಕಂಪೆನಿಗಳು ಬಿಸಿನೆಸ್ ವಿಸ್ತರಣೆಗಾಗಿ ಅಥವ ಇನ್ನೊಂದು ಕಂಪೆನಿಯನ್ನು ಖರೀದಿಸಲು ಹೊಸಹೂಡಿಕೆ ಬಯಸುತ್ತಿರಬಹುದು. ಆ ಸಂದರ್ಭಗಳಲ್ಲಿ ಅಂತಹ ಚಟುವಟಿಕೆಗಳಿಂದ ಆಗಬಹುದಾದ ದೀರ್ಘಕಾಲಿಕ ಪರಿಣಾಮಗಳತ್ತ ಜಾಸ್ತಿ ಗಮನಕೊಟ್ಟು ಹೂಡಿಕೆಯ ಬಗ್ಗೆ ನಿಧರ್ಾರ ತೆಗೆದುಕೊಳ್ಳಬೇಕೇ ಹೊರತು ಅದು ರೈಟ್ಸೇ? FPO ವೇ? ಇತ್ಯಾದಿ ಗೌಣ ಧ್ವನ್ಯಾರ್ಥ ಪೀಡಿತ ಆಕರ್ಷಣೆಗಳಿಂದ ವಿಚಲಿತರಾಗಬಾರದು.

ಓಂ ಶಾಂತಿ.

ಅಟ್ಯಾಚ್ಮೆಂಟ್:

ಕ್ರಿಸ್ಮಸ್ ಮುಗಿಯಿತು, ಹೊಸ ವರ್ಷದ ಸುದಿನವೂ ಮುಗಿದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಶಾಲೆ ಪುನರಾರಂಭವಾಗಿದೆ. ಇಷ್ಟು ದಿನ ಮನೆಯಲ್ಲೇ ಕೂರಿಸಿಕೊಂಡು ಅನುಭವಿಸುತ್ತಿದ್ದ ತಲೆನೋವನ್ನು ವಾಪಾಸು ಟೀಚರ್ಗಳ ತಲೆಗೆ ವಗರ್ಾಯಿಸಿ ಉಸ್ಸಪ್ಪ. . ಅಂತ ನಿಟ್ಟುಸಿರು ಬಿಟ್ಟದ್ದೂ ಆಯಿತು. ಈಗ ಗುರುಗುಂಟಿರಾಯರನ್ನು ವಿಚಾರಿಸಲು ಒಂದು ಚೂರು ಟೈಮ್ ಸಿಕ್ಕಿದೆ.

ರಾಯರ ಮುಖ್ಯ ಕಂಪ್ಲೈಂಟ್ ನಾಗಾನಾಥ್ ಮೇಲೆ ಅಂತೆ. ಅದು ನನಗೆ ಆಮೇಲೆ ತಿಳಿಯಿತು. ನಾನು ಅವರ ಬಗ್ಗೆ ಆಗೊಮ್ಮೆ ಈಗೊಮ್ಮೆ ಕಮೆಂಟ್ಸ್ ಪಾಸ್ ಮಾಡುವುದು ಇದ್ದದ್ದೇ. ಅವರೂ ಅದೇ ಧಾಟಿಯಲ್ಲಿ ಒಮ್ಮೊಮ್ಮೆPPF ಬಡ್ಡಿ ಸಹಿತ ನನಗೆ ಅದನ್ನು ವಾಪಾಸು ಕೊಡುವುದೂ ಇದ್ದದ್ದೇ. ಅದನ್ನೆಲ್ಲ ರಾಯರು ಅಷ್ಟು ತಲೆಗೆ ಹಚ್ಚಿಕೊಳ್ಳುವುದಿಲ್ಲ. ಈ ಮಳೆರಾಯನ ಹಣೆಬರಹವೇ ಇಷ್ಟು ಅಂತ ಬಿಟ್ಟು ಬಿಡುತ್ತಾರೆ. ಆದರೆ ಈ ಬಾರಿ ಅವರಿಗೆ ಅಸಾಧ್ಯ ಸಿಟ್ಟು ಬಂದದ್ದು ನಾಗಾನಾಥ್ ಮೇಲೆ. ನಾಗಾನಾಥ್ ಕೂಡಾ ನನ್ನೊಟ್ಟಿಗೆ ಸೇರಿಕೊಂಡು ರಾಯರನ್ನು ಈ ಡಿಸೆಂಬರ್ ಚಳಿಯಲ್ಲಿ ಸ್ವೆಟರ್ ಕೂಡಾ ಇಲ್ಲದೆ ಗಾಳಿಗೆ ಹಿಡಿದದ್ದು ಅವರಿಗೆ ತಡೆಯಲಾರದ ಸಿಟ್ಟನ್ನು ನೀಡಿತ್ತು.

ಅದಕ್ಕೆ ಮುಖ್ಯ ಕಾರಣವೇನೆಂದರೆ ನಾಥ್ ರಾಯರ ತಲೆ ಮೇಲಿನ ಬಿಡಿಸಿದ ಮೌಸ್. ಹಂಗಂದ್ರೆ ಏನರ್ಥ? ನನ್ ತಲೆ ಮೇಲೆ ಸತ್ತ ಹೆಗ್ಗಣ ಕೂಸರ್ೋದೂ ಒಂದು ತಮಾಷೇನಾ? ಮಾನನಷ್ಟ ಹಾಕದೆ ಬಿಡುವುದಿಲ್ಲ ಇವರನ್ನ ಅಂತ ಜೋರಾಗಿ ಫೋನಿನಲ್ಲಿ ಕಿರುಚಾಡುವುದನ್ನು ಕೇಳಿದರೆ ಫೋನೇ ಒಡೆದು ಹೋದೀತು ಎಂಬ ಶಂಕೆ ಮೂಡಿತು ನನಗೆ. ಇದೊಳ್ಳೆ ಕಷ್ಟ ಆಯಿತಲ್ಲ ಮಾರಾಯ್ರೇ!! ಯಾಕಾದ್ರೂ ಈ ನಾಗಾನಾಥ್ ಈ ಥರ ಚಿತ್ರ ಬಿಡಿಸಲು ಹೋದರೋ? ಇನ್ನು ಇವರನ್ನು ಹೇಗಪ್ಪಾ ಸುಧಾರಿಸುವುದು? ಅಂತ ಚಿಂತೆಗೊಳಗಾದೆ. ಅವರ ಲಾಯರ್ ಹತ್ರ ಮಾತನಾಡಿ ಕಾಂಪ್ರಮೈಸ್ ಮಾಡೋಣ ಅಂದ್ರೆ ಅವರದ್ದೂ ಸುದ್ದಿ ಇಲ್ಲದೆ ಸುಮಾರು ದಿನ ಆಯ್ತು.

ನಾನು ಹೀಗೆಲ್ಲಾ ಯೋಚನೆ ಮಾಡುವಷ್ಟರಲ್ಲಿ ಫೋನ್ ಕುಕ್ಕಿದ ಗುರುಗುಂಟಿರಾಯರು ಸೀದಾ ನಾಗಾನಾಥ್ ಹತ್ರ ಹೋಗಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗನ್ನು ಅವರ ಹತ್ರ ಆರಂಭ ಮಾಡಿದರಂತೆ. . . . . .

*************************

ನಿಮ್ಮ ಟಿಪ್ಪಣಿ ಬರೆಯಿರಿ