ಒಂದು ಹೆಸರಿಲ್ಲದ ಕಥೆ

ಕನ್ನಡಕ್ಕೆ: ಮಹಾಬಲ ಸೀತಾಳಭಾವಿ

antonಒಂಬತ್ತನೇ ಶತಮಾನದಲ್ಲೂ ಈಗಿನಂತೆ ಪ್ರತಿದಿನ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದ ಮತ್ತು ಪ್ರತಿ ಸಂಜೆ ವಿಶ್ರಾಂತಿಗೆ ತೆರಳುತ್ತಿದ್ದ. ಬೆಳಗ್ಗೆ ಅವನ ಮೊದಲ ಕಿರಣಗಳು ಮಂಚಿನ ಪರದೆಗೆ ಮುತ್ತಿಕ್ಕಿದಾಗ ಭೂಮಿ ಮೈಕೊಡವಿ ಏಳುತ್ತಿತ್ತು; ಗಾಳಿ ಸಂತೋಷ ಮತ್ತು ಭರವಸೆಗಳ ಧ್ವನಿಯಿಂದ ತುಂಬಿಕೊಳ್ಳುತ್ತಿತ್ತು; ಮತ್ತೆ ಸಂಜೆ ಅದೇ ಭೂಮಿ ಮೌನಕ್ಕೆ ಶರಣಾಗಿ ಬೇಸರದ ಕತ್ತಲೆಗೆ ಜಾರುತ್ತಿತ್ತು. ಒಂದು ಹಗಲು ಮತ್ತೊಂದು ಹಗಲಿನಂತೆ, ಒಂದು ರಾತ್ರಿ ಮತ್ತೊಂದು ರಾತ್ರಿಯಂತೆ… ಯಾವ

ವ್ಯತ್ಯಾಸವೂ ಇರಲಿಲ್ಲ. ಆಗಾಗ ಗಾಳಿಯ ಮೋಡ ದಟ್ಟೈಸುತ್ತಿತ್ತು. ಅದರೊಂದಿಗೇ ಗುಡುಗಿನ ಕೋಪದ ಗರ್ಜನೆ ಕೇಳಿಸುತ್ತಿತ್ತು, ಅಥವಾ ಉದಾಸೀನ ನಕ್ಷತ್ರವೊಂದು ಆಗಸದಿಂದ ಕಳಚಿಬೀಳುತ್ತಿತ್ತು, ಅಥವಾ ಬಿಳುಚಿದ ಮುಖದ ಸನ್ಯಾಸಿಯೊಬ್ಬ ಆಶ್ರಮದ ಸನಿಹದಲ್ಲೇ ಹುಲಿಯೊಂದನ್ನು ನೋಡಿದೆ ಎಂಬುದನ್ನು ತಿಳಿಸಲು ಸಹವರ್ತಿಗಳ ಬಳಿಗೆ ಓಡುತ್ತಿದ್ದ – ಅಷ್ಟೆ, ನಂತರ ಪ್ರತಿದಿನವೂ ಮುಂದಿನ ಮತ್ತೊಂದು ದಿನದಂತೆಯೇ ಇರುತ್ತಿತ್ತು. ಸನ್ಯಾಸಿಗಳು ತಮ್ಮ ಕೆಲಸ ಮಾಡುತ್ತಿದ್ದರು, ಪ್ರಾರ್ಥಿಸುತ್ತಿದ್ದರು, ಅವರ ಗುರು ಸಂಗೀತ ವಾದ್ಯ ನುಡಿಸುತ್ತಿದ್ದ, ಲ್ಯಾಟಿನ್ ಭಾಷೆಯಲ್ಲಿ ಗೀತೆಗಳನ್ನು ರಚಿಸುತ್ತಿದ್ದ. ಅದಕ್ಕೆ ಸ್ವರ ಸಂಯೋಜಿಸುತ್ತಿದ್ದ. ಆ ವೃದ್ಧ ಸನ್ಯಾಸಿಗೊಂದು ಅತ್ಯದ್ಭುತ ವರವಿತ್ತು. ವಾದ್ಯ ನುಡಿಸುವುದರಲ್ಲಿ ಅವನು

ಎಂಥಾ ಕಲೆಗಾರನಾಗಿದ್ದ ಅಂದರೆ, ಅವನ ಕೋಣೆಯಿಂದ ವಾದ್ಯದ ಮಧುರ ಧ್ವನಿ ಅಲೆಅಲೆಯಾಗಿ ಹೊರಬರುತ್ತಿದ್ದರೆ, ಕಿವಿ ಮಂದವಾದ ಹಣ್ಣು ಹಣ್ಣು ಮುದಿ ಸನ್ಯಾಸಿಗಳೂ ಕೂಡ ಕಣ್ಣೀರು ಕಟ್ಟಿಡಲಾಗದೆ ಬಿಕ್ಕುತ್ತಿದ್ದರು. ಅವನು ಯಾವುದರ ಬಗ್ಗೆ ಮಾತನಾಡಿದರೂ, ಅವು ಅತೀ ಸಾಧಾರಣ ಸಂಗತಿಗಳೇ ಆಗಿರಲಿ – ಉದಾಹರಣೆಗೆ, ಮರಗಳ ಬಗ್ಗೆ, ಕ್ರೂರ ಪ್ರಾಣಿಗಳ ಬಗ್ಗೆ, ಅಥವ ಸಮುದ್ರದ ಬಗ್ಗೆ – ಇತರ ಸನ್ಯಾಸಿಗಳ ಮುಖದಲ್ಲೂ ಒಂದು ನಗೆ ಅಥವಾ ಕಣ್ಣೀರಿನ ಪಸೆ ತಂದುಕೊಳ್ಳದೆ ಅದನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವನ ವಾದ್ಯದಲ್ಲಿ ಕಂಪಿಸುವ ರಾಗಗಳೇ ಅವನ ಆತ್ಮದಲ್ಲೂ ಕಂಪಿಸಿದಂತೆ ಭಾಸವಾಗುತ್ತಿತ್ತು. ಅವನು ಸಿಟ್ಟಾದರೆ ಅಥವಾ ಅಮಿತ ಆನಂದದಲ್ಲಿ ಮುಳುಗಿದ್ದರೆ, ಅಥವಾ

ಭಯಾನಕವಾದ, ಇಲ್ಲವೇ ಮಹತ್ತರವಾದ ಏನನ್ನಾದರೂ ಹೇಳಲು ಆರಂಭಿಸಿದರೆ ಹುಚ್ಚು ಸ್ಫೂರ್ತಿಯೊಂದು ಅವನನ್ನು ಆವರಿಸುತ್ತಿತ್ತು. ಕಣ್ಣಿನಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು, ಮುಖ ಕೆಂಪೇರುತ್ತಿತ್ತು. ದ್ವನಿ ಗುಡುಗುತ್ತಿತ್ತು ಮತ್ತು ಅವನನ್ನು ಕೇಳುತ್ತಿರುವ ಸನ್ಯಾಸಿಗಳ ಆತ್ಮಗಳೂ ಕೂಡ ಅವನ ಸ್ಫೂರ್ತಿಯಲ್ಲಿ ತಳುಕುಹಾಕಿಕೊಂಡಂತೆ ತೋರುತ್ತಿತ್ತು. ಅಂತಹ ಅದ್ಭುತ ಕ್ಷಣಗಳಲ್ಲಿ ಅವರೆಲ್ಲರ ಮೇಲೆ ಈತನ ಪ್ರಭಾವ ಮಿತಿಯಿಲ್ಲದ್ದಾಗಿರುತ್ತಿತ್ತು. ಆಗ ಅವನು ತನಗಿಂತ ವಯಸ್ಸಾದ ಸನ್ಯಾಸಿಗಳಿಗೆ ಸಮುದ್ರಕ್ಕೆ ಜಿಗಿಯಿರಿ ಎಂದು ಹೇಳಿದರೂ ಅವರಲ್ಲಿ ಯಾರೊಬ್ಬರೂ ಹಿಂದೆ ಮುಂದೆ ಯೋಚಿಸದೆ ಅವನ ಇಚ್ಛೆಯನ್ನು ಪೂರ್ಣಗೊಳಿಸುತ್ತಿದ್ದರು.

ಅಲ್ಲಿರುವ ಎಲ್ಲ ಸನ್ಯಾಸಿಗಳಿಗೆ ಈ ಗುರುವಿನ ಸಂಗೀತ, ಅವನ ಧ್ವನಿ, ದೇವರನ್ನು, ಸ್ವರ್ಗವನ್ನು ಮತ್ತು ಭೂಮಿಯನ್ನು ವರ್ಣಿಸುವ ಕವಿತ್ವ ನಿರಂತರ ಆನಂದದ ಸೆಲೆಯಾಗಿದ್ದವು. ಕೆಲವೊಮ್ಮೆ ಬದುಕಿನ ಏಕತಾನದಿಂದ ಬೇಸತ್ತ ಅವರಿಗೆ ಮರಗಳು, ಹೂಗಳು, ಬೇಸಿಗೆ, ವಸಂತವನ್ನು ನೋಡಿದರೂ ರೇಜಿಗೆಯಾಗುತ್ತಿತ್ತು. ಸಮುದ್ರದ ಮೊರೆತ ಕೇಳಿ ಕಿವಿ ಸುಸ್ತಾಗುತ್ತಿತ್ತು. ಹಕ್ಕಿಗಳ ಹಾಡು ಕರ್ಕಶವಾಗುತ್ತಿತ್ತು. ಆಗೆಲ್ಲ ಆ ಗುರುವಿನ ಕೌಶಲಗಳು ಅವರಿಗೆ ನಿತ್ಯದ ರೊಟ್ಟಿಯಂತೆ ಅವಶ್ಯವಾಗಿ ಬೇಕಾಗುತ್ತಿದ್ದವು.

ಡಜನ್ಗಟ್ಟಲೆ ವರ್ಷಗಳು ಕಳೆದುಹೋದವು. ಎಲ್ಲ ದಿನಗಳೂ ಬೇರೆಲ್ಲ ದಿನಗಳಂತೆಯೇ ಇದ್ದವು. ಎಲ್ಲ ರಾತ್ರಿಗಳೂ ಮತ್ತೊಂದು ರಾತ್ರಿಯಂತೆ. ಕ್ರೂರ ಪ್ರಾಣಿಗಳು ಹಾಗೂ ಹಕ್ಕಿಗಳ ಹೊರತಾಗಿ ಆಶ್ರಮದ ಸುತ್ತಮುತ್ತ ಒಂದೇ ಒಂದು ಮನುಷ್ಯ ಪ್ರಾಣಿ ಸುಳಿಯಲಿಲ್ಲ. ಆಶ್ರಮಕ್ಕೆ ಹತ್ತಿರದ ಜನಾವಾಸವೂ ಬಹಳ ದೂರದಲ್ಲೇ ಇತ್ತು ಅಂದರೆ, ಆಶ್ರಮದಿಂದ ಆ ಸ್ಥಳವನ್ನು ತಲುಪಬೇಕಾದರೆ ಮರುಭೂಮಿಯಲ್ಲಿ ಎಪ್ಪತ್ತು ಮೈಲಿಗಳ ಪ್ರಯಾಣ ಬೆಳೆಸಬೇಕಾಗಿತ್ತು. ಬದುಕನ್ನು ತಿರಸ್ಕರಿಸಿದ, ಅದರಿಂದ ಬೇರೆಯಾದ ಹಾಗೂ ಆಶ್ರಮಕ್ಕೆ, ಸ್ಮಶಾನಕ್ಕೆ ಹೇಗೆ ಬರುತ್ತಾರೋ ಹಾಗೆ ಬರುವವರು ಮಾತ್ರ ಆ ಮರುಭೂಮಿಯನ್ನು ದಾಟುವ ಸಾಹಸಕ್ಕೆ ಮುಂದಾಗುತ್ತಿದ್ದರು.

ಸನ್ಯಾಸಿಗಳಿಗೆಲ್ಲ ಅಚ್ಚರಿಯಾಗುವಂತೆ ಒಂದು ರಾತ್ರಿ ಪಟ್ಟಣದಿಂದ ಬಂದವನಂತೆ ಕಾಣುವ ಮನುಷ್ಯನೊಬ್ಬ ಆಶ್ರಮದ ಹೊರಬಾಗಿಲು ಬಡಿದ. ಬದುಕನ್ನು ಪ್ರೀತಿಸಿದ ಅತಿ ಸಾಮಾನ್ಯ ಪಾಪಿಯಂತೆ ಅವನಿದ್ದ. ಪ್ರಾರ್ಥನೆ ಹೇಳಿ, ಗುರುವಿನ ಆಶೀವರ್ಾದ ಪಡೆಯುವುದಕ್ಕೂ ಮೊದಲೇ ಆತ ಕುಡಿಯಲು ಒಂದಷ್ಟು ವೈನ್ ಹಾಗೂ ಹೊಟ್ಟೆ ತುಂಬಿಸಿಕೊಳ್ಳಲು ಊಟ ಕೇಳಿದ. ನೀನು ಪಟ್ಟಣದಿಂದ ಮರುಭೂಮಿಗೆ ಬಂದಿದ್ದೇಕೆ ಎಂದು ಕೇಳಿದರೆ, ಬೇಟೆಯ ದೊಡ್ಡ ಕತೆಯನ್ನೇ ಹೇಳಿದ. ಬೇಟೆಗೆಂದು ಬಂದವನು ಸಿಕ್ಕಾಪಟ್ಟೆ ಕುಡಿದು ದಾರಿ ತಪ್ಪಿ ಅಲೆದಾಡುತ್ತ ಇಲ್ಲಿಗೆ ಬಂದನಂತೆ.

ಆಶ್ರಮ ಪ್ರವೇಶಿಸಿ ಆತ್ಮವನ್ನು ಉಳಿಸಿಕೋ ಎಂಬ ಸಲಹೆಗೆ, “ನಾನು ನಿಮಗೆ ಯೋಗ್ಯ ಜೊತೆಗಾರ ಅಲ್ಲ! ಎಂದು ನಗುತ್ತ ಉತ್ತರಿಸಿದ.ವೈನ್ ಕುಡಿದು, ಊಟ ಮಾಡಿದ ಮೇಲೆ ತನಗೆ ಬಡಿಸುತ್ತಿದ್ದ ಸನ್ಯಾಸಿಯತ್ತ ನೋಡಿ ತಲೆ ಆಡಿಸುತ್ತ ಕೇಳಿದ:

“ನೀವು ಸನ್ಯಾಸಿಗಳು, ಏನನ್ನೂ ಮಾಡುವುದಿಲ್ಲ. ತಿನ್ನುವುದು ಮತ್ತು ಕುಡಿಯುವುದು ಬಿಟ್ಟರೆ ನೀವು ಬೇರೆ ಯಾವುದಕ್ಕೂ ಲಾಯಕ್ಕಲ್ಲ. ಆತ್ಮವನ್ನು ಕಾಪಾಡಿಕೊಳ್ಳಲು, ನಮ್ಮನ್ನು ಉದ್ಧಾರ ಮಾಡಿಕೊಳ್ಳಲು ಇದೇ ಮಾರ್ಗವೇ? ನೀವಿಲ್ಲಿ ಶಾಂತರಾಗಿ ಕುಳಿತುಕೊಂಡು, ತಿನ್ನುತ್ತ, ಕುಡಿಯುತ್ತ ಸುಂದರವಾದ ಕನಸು ಕಾಣುತ್ತ ಕಾಲ ಕಳೆಯಬೇಕಾದರೆ ನಿಮ್ಮ ಅಕ್ಕಪಕ್ಕದಲ್ಲಿರುವವರು ಏನೇನೋ ಪಾಪ ಮಾಡಿ ನರಕಕ್ಕೆ ಹೋಗುತ್ತಿದ್ದಾರೆ; ಅದನ್ನು ಯೋಚಿಸಿ. ಪಟ್ಟಣದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಬೇಕು! ಒಂದಷ್ಟು ಜನ ಹಸಿವಿನಿಂದ ಸಾಯುತ್ತಿದ್ದಾರೆ. ಇನ್ನುಳಿದವರು, ತಮ್ಮಲ್ಲಿರುವ ಬಂಗಾರವನ್ನು ಏನು ಮಾಡಬೇಕೆಂದು ತಿಳಿಯದೆ, ಹಣ ಪೋಲು ಮಾಡಿ ದೈಹಿಕ ಸುಖದಲ್ಲಿ ಮುಳುಗೇಳುತ್ತ, ಜೇನು ತುಪ್ಪದಲ್ಲಿ ಬಿದ್ದ ನೊಣದಂತೆ ನಾಶವಾಗುತ್ತಿದ್ದಾರೆ. ಮನುಷ್ಯರಲ್ಲಿ ನಂಬಿಕೆ, ಸತ್ಯ ಯಾವುದೂ ಉಳಿದಿಲ್ಲ. ಅವರನ್ನೆಲ್ಲ ಕಾಪಾಡುವುದು ಯಾರ ಕೆಲಸ? ಅವರಿಗೆಲ್ಲ ಒಳ್ಳೆಯದನ್ನು ಬೋಧಿಸುವುದು ಯಾರ ಜವಾಬ್ದಾರಿ? ಬೆಳಗಿನಿಂದ ಸಂಜೆಯವರೆಗೆ ಕುಡಿಯುತ್ತ ಬಿದ್ದಿರುವ ನನ್ನ ಕೆಲಸವಲ್ಲ ಅದು. ಸಾತ್ವಿಕ ಶಕ್ತಿ, ಪ್ರೀತಿಸುವ ಹೃದಯ ಮತ್ತು ದೇವರಲ್ಲಿ ನಂಬಿಕೆ ನಿಮಗೆ ದೊರೆತಿರುವುದು ಹೀಗೆ ನಾಲ್ಕು ಗೋಡೆಗಳ ಮಧ್ಯೆ ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವುದಕ್ಕಾಗಿಯೇ?

ಪಟ್ಟಣಿಗ ಕುಡುಕನ ಮಾತುಗಳು ಒರಟಾಗಿದ್ದವು. ಆದರೆ ಅವು ಆಶ್ರಮದ ಗುರುವಿನ ಮೇಲೆ ವಿಲಕ್ಷಣ ಪ್ರಭಾವ ಬೀರಿದವು. ಅವನು ಒಮ್ಮೆ ಅಕ್ಕಪಕ್ಕ ಕುಳಿತಿದ್ದ ಸನ್ಯಾಸಿಗಳೊಂದಿಗೆ ದೃಷ್ಟಿ ವಿನಿಮಯ ಮಾಡಿಕೊಂಡು, ಬಿಳುಚಿದ ಮುಖದಲ್ಲಿ ಹೇಳಿದ: “ನನ್ನ ಸೋದರರೆ, ಈತ ಸತ್ಯ ಹೇಳುತ್ತಿದ್ದಾನೆ. ನಿಜವಾಗಿಯೂ ಬಡ ಮನುಷ್ಯರು ತಮ್ಮ ದೌರ್ಬಲ್ಯ ಮತ್ತು ತಿಳಿವಳಿಕೆಯ ಕೊರತೆಯಿಂದ ದುಷ್ಟತನ ಮತ್ತು ಅಪನಂಬುಗೆಯಿಂದ ನಾಶವಾಗಿ ಹೋಗುತ್ತಿದ್ದಾರೆ. ಆದರೆ ನಾವಿಲ್ಲಿ ಅವೆಲ್ಲ ನಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಕುಳಿತಿದ್ದೇವೆ. ನಾನೇಕೆ ಅವರ ಬಳಿಗೆ ಹೋಗಿ ಅವರಿಗೆ ತಾವು ಮರೆತ ಕ್ರಿಸ್ತನನ್ನು ನೆನಪಿಸಬಾರದು?

ಪಟ್ಟಣಿಗನ ಮಾತು ಗುರುವನ್ನು ವಿಚಲಿತಗೊಳಿಸಿದ್ದವು. ಮರುದಿನ ಅವನು ತನ್ನ ಸಹವರ್ತಿ ಸನ್ಯಾಸಿಗಳನ್ನೆಲ್ಲ ಕರೆದು ವಿದಾಯ ಹೇಳಿ, ಆಶ್ರಮದಿಂದ ಪಟ್ಟಣಕ್ಕೆ ಹೊರಟ. ಅವನು ಹೋದ ಮೇಲೆ ಸನ್ಯಾಸಿಗಳೆಲ್ಲ ಸಂಗೀತವಿಲ್ಲದೆ, ಗುರುವಿನ ಪ್ರವಚನವಿಲ್ಲದೆ, ಕವಿತ್ವವಿಲ್ಲದೆ ಬೇಸರಗೊಂಡರು. ಹೇಗೋ ದಿನ ತಳ್ಳುತ್ತಲೇ ಒಂದು ತಿಂಗಳು ಕಳೆದರು.ನಂತರ ಮತ್ತೊಂದು, ಆದರೆ ಗುರು ಮಾತ್ರ ಬರಲಿಲ್ಲ.

ಅಂತೂ ಮೂರು ತಿಂಗಳು ಕಳೆದ ಮೇಲೆ ಒಂದು ದಿನ ಆಶ್ರಮದ ಬಾಗಿಲ ಮೇಲೆ ಅವರಿಗೆ ಪರಿಚಿತವಾದ ಬಡಿತ ಕೇಳಿಸಿತು. ಎಲ್ಲ ಸನ್ಯಾಸಿಗಳು ಸಂಬವ್ರ ುದಿಂದ ತಮ್ಮ ಗುರುವಿನತ್ತ ಓಡಿ, ಅವನನ್ನು ಮುತ್ತಿಕೊಂಡು ಪ್ರಶ್ನೆಗಳ ಮಳೆ ಸುರಿಸಿದರು.

ಇವರನ್ನೆಲ್ಲ ನೋಡಿ ಸಂತೋಷಗೊಳ್ಳುವ ಬದಲು ಆ ಗುರು ಗಳಗಳನೆ ಅಳಲು ಶುರುಮಾಡಿದ. ಒಂದು ಮಾತನ್ನೂ ಆಡಲಿಲ್ಲ. ಅವನು ಬಡಕಲು ಬಡಕಲಾಗಿ ಬಹಳ ವಯಸ್ಸಾದವನಂತೆ ಕಾಣುತ್ತಿದ್ದ. ತೀರಾ ಸುಸ್ತಾದವನಂತೆ ತೋರುತ್ತಿದ್ದ ಮುಖದಲ್ಲಿ

ಅಪಾರ ವಿಷಾದವಿತ್ತು, ಬೇಸರವಿತ್ತು. ಅಳುವಾಗ ಅವನಲ್ಲಿ ವಿಚಲಿತ ಮನುಷ್ಯನೊಬ್ಬನ ಗಾಳಿ ಸಂಚಾರವಾಗುತ್ತಿರುವಂತಿತ್ತು.

ಉಳಿದ ಸನ್ಯಾಸಿಗಳೂ ಅಳಲು ಶುರು ಮಾಡಿದರು. ಒಂದೇ ಸಮನೆ ಅಳುತ್ತಿದ್ದ ಗುರುವನ್ನು ನೋಡಿ ಕನಿಕರ ಪಟ್ಟರು. ಅವನ ದುಃಖಕ್ಕೆ ಕಾರಣವೇನೆಂದು ಎಷ್ಟು ಪರಿ ಪರಿ ಯಾಗಿ ಕೇಳಿದರೂ ಗುರು ಮಾತ್ರ ತನ್ನ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಒಂದೇ ಒಂದು ಮಾತನಾಡದೆ ಕುಳಿತುಬಿಟ್ಟ. ಏಳು ದಿನ ಅನ್ನ ನೀರು ಬಿಟ್ಟು, ತನ್ನ ಪ್ರೀತಿಯ ವಾದ್ಯವನ್ನು ನುಡಿಸದೆ ಬರೀ ಅಳುವುದರಲ್ಲೇ ಹೊಟ್ಟೆ ತುಂಬಿಸಿಕೊಂಡವನಂತೆ ಉಪವಾಸ ಉಳಿದುಬಿಟ್ಟ. ದುಃಖ ಹಂಚಿಕೊಳ್ಳಲು ಬಯಸಿ ತನ್ನ ಕೋಣೆಯ ಕದ ಬಡಿದ ಸನ್ಯಾಸಿಗಳಿಗೆ ಅವನ ಮೌನವೇ ಉತ್ತರವಾಗಿತ್ತು.

ಗುರು ಅಂತೂ ಕೊನೆಗೊಂದು ದಿನ ಕೋಣೆಯಿಂದ ಹೊರಬಂದ. ಎಲ್ಲ ಸನ್ಯಾಸಿಗಳನ್ನೂ ಕೂರಿಸಿಕೊಂಡು ಅಳುಮುಖದಲ್ಲಿ ತನ್ನನ್ನು ಈ ಮೂರು ತಿಂಗಳು ಹೈರಾಣಾಗಿಸಿದ ಸಂಗತಿಗಳ ಬಗ್ಗೆ ಹೇಳತೊಡಗಿದ. ಆಶ್ರಮದಿಂದ ಪಟ್ಟಣಕ್ಕೆ ಹೋಗುವಾಗಿನ

ಅನುಭವಗಳ ಬಗ್ಗೆ ಹೇಳುವಾಗ ಅವನ ಧ್ವನಿ ಶಾಂತವಾಗಿ, ಕಣ್ಣುಗಳು ನಗುತ್ತಿದ್ದವು.

ದಾರಿಯಲ್ಲಿ ಹಕ್ಕಿಗಳು ತನಗಾಗಿ ಹಾಡಿದ್ದರ ಬಗ್ಗೆ, ತೊರೆಗಳು ಜುಳುಜುಳು ನಿನಾದ ಕೇಳಿಸಿದ್ದರ ಬಗ್ಗೆ, ಸಿಹಿಯಾದ ತರುಣ ಭರವಸೆಗಳು ತನ್ನ ಆತ್ಮವನ್ನು ತೋಯಿಸಿದ್ದರ ಬಗ್ಗೆ ಹೇಳಿದ. ಗೆದ್ದೇ ಗೆಲ್ಲುವೆನೆಂಬ ವಿಶ್ವಾಸದಲ್ಲಿ ಸೈನಿಕನೊಬ್ಬ ಯುದ್ಧಕ್ಕೆ ಹೋಗುವಂತೆ ಅವನು ದಾರಿ ಕ್ರಮಿಸಿದ್ದ. ಕನಸು ಕಾಣುತ್ತ, ಕವಿತೆಗಳನ್ನು, ಪ್ರಾರ್ಥನೆಗಳನ್ನು ತಟ್ಟುತ್ತ,ಅಷ್ಟು ದೂರ ನಡೆದಿದ್ದು ಗೊತ್ತೇ ಆಗದಂತೆ ಪ್ರಯಾಣದ ಕೊನೆಯನ್ನು ತಲುಪಿದ್ದ. ಆದರೆ, ಪಟ್ಟಣ ಮತ್ತು ಅಲ್ಲಿ ತಾನು ನೋಡಿದ ಜನರ ಬಗ್ಗೆ ಮಾತನಾಡುವಾಗ ಅವನ ಧ್ವನಿ ನಡುಗಿತು, ಕಣ್ಣುಗಳು ಮತ್ತೆ ಒದ್ದೆಯಾದವು. ಮೈ ಪೂರ್ತಿ ಸಿಟ್ಟಾಯಿತು.

ಪಟ್ಟಣದಲ್ಲಿ ಅವನಿಗೆ ಎದುರಾದ ಸಂಗತಿಗಳನ್ನು ಜೀವನದಲ್ಲಿ ಒಮ್ಮೆಯೂ ಅವನು ನೋಡಿರಲಿಲ್ಲ. ಅಷ್ಟೇಕೆ, ಅವುಗಳ ಬಗ್ಗೆ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ಜೀವನದಲ್ಲಿ ಅದೇ ಮೊದಲ ಬಾರಿಗೆ, ವೃದ್ಧಾಪ್ಯದ ಸಮೀಪವಿರುವ ದಿನಗಳಲ್ಲಿ, ಅವನು ದೆವ್ವ

ಎಷ್ಟು ಪ್ರಬಲವಾದುದು, ಎಷ್ಟು ಕೆಟ್ಟದ್ದು, ಎಷ್ಟು ಸುಂದರವಾಗಿರುತ್ತದೆ, ಮನುಷ್ಯರು ಎಷ್ಟು ದುರ್ಬಲ ಹೃದಯದವರು ಮತ್ತು ಕ್ಷುಲ್ಲಕರು ಎಂಬುದನ್ನು ನೋಡಿ, ಅರ್ಥ ಮಾಡಿಕೊಂಡ.

ದುರದೃಷ್ಟವಶಾತ್ ಪಟ್ಟಣದಲ್ಲಿ ಅವನು ಮೊಟ್ಟಮೊದಲು ಪವ್ರ ೇಶಿಸಿದ್ದೇ ದುಷ್ಟ ಖೂಳರ ನಿವಾಸವಾಗಿತ್ತು. ಒಂದು ಐವತ್ತು ಮಂದಿ ಭರ್ಜರಿ ಶ್ರೀಮಂತರು ಅಲ್ಲಿ ಕುಳಿತು ಲೆಕ್ಕತಪ್ಪಿ ವೈನ್ ಕುಡಿಯುತ್ತಿದ್ದರು. ಮತ್ತೇರಿದ ನಂತರ ಜೋರಾಗಿ ಹಾಡಿದರು,

ಅಸಂಬದ್ಧಗಳನ್ನೆಲ್ಲ ಮಾತನಾಡಿದರು. ಅವರ ಮಾತುಗಳು ಎಷ್ಟು ಕೊಳಕಾಗಿದ್ದವೆಂದರೆ ದೇವರಿಗೆ ಹೆದರುವ ಮನುಷ್ಯ ಅವುಗಳನ್ನು ಉಚ್ಚಾರ ಮಾಡಲೂ ಸಾಧ್ಯವಿರಲಿಲ್ಲ. ಮೇರೆಯೇ ಇಲ್ಲದ ಸ್ವೇಚ್ಛೆ, ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೊಂದಿದ್ದ ಅವರು ದೇವರಿಗೂ ಹೆದರುತ್ತಿರಲಿಲ್ಲ, ದೆವ್ವಕ್ಕೂ ಹೆದರುತ್ತಿರಲಿಲ್ಲ. ಸಾವು ಕೂಡ ಅವರನ್ನು ಅಂಜಿಸಲು ಶಕ್ಯವಿರಲಿಲ್ಲ. ಅವರಿಗೆ ಏನು ತೋಚಿತೋ ಅದನ್ನು ಆಡಿದರು, ಹಾಗೇ ಮಾಡಿದರು, ಕೆಟ್ಟ ಬಯಕೆ ಎಲ್ಲಿಗೆ ಕರೆದೊಯ್ಯಿತೋ ಅಲ್ಲಿಗೆ ಹೋದರು. ಅವರು

ಕುಡಿಯುತ್ತಿದ್ದ ವೈನ್ ಆಭರಣದಲ್ಲಿ ಸೇರಿಸುವ ಹಳದಿ ಲೋಹದಷ್ಟು ಸ್ವಚ್ಛವಾಗಿತ್ತು. ಬಂಗಾರದಂತೆ ಹೊಳೆಯುತ್ತಿದ್ದ ಅದು ಅಷ್ಟೇ ಸಿಹಿಯೂ, ಸುವಾಸನೆ ಭರಿತವೂ ಆಗಿದ್ದಿರಬೇಕು. ಅದನ್ನು ಕುಡಿದವರೆಲ್ಲ ಕೃತಾರ್ಥರಾದಂತೆ ನಗುತ್ತಿದ್ದರು, ಮತ್ತು ಮತ್ತಷ್ಟು

ಇನ್ನಷ್ಟು

ನ್ಯೂಸ್ ಪೇಪರ್ ನಲ್ಲೊಂದು ಮನೆಯ ಮಾಡಿ…

ನ್ಯೂಸ್ ಪೇಪರ್ ನಲ್ಲಿಯೇ ಒಂದು ಮನೆ…!

ಆಶ್ಚರ್ಯ ಆದರೂ ನಿಜ

ಮನೆ ಕಟ್ಟಿದ ಪರಿ ನೋಡಲು ಭೇಟಿ ಕೊಡಿ- ಮೀಡಿಯಾ ಮೈಂಡ್

_wsb_515x347_sm-sumer-w-house


ಕ್ಲಿಕ್ ಮೈಸೂರು

MysorePhotojournalistexhibition

ಒಂದು ರಾಗದ ಬೆನ್ನು ಹತ್ತಿ..

ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ 27 ರಂದು

ಭಾನುವಾರ ಸಂಜೆ 6-30 ಕ್ಕೆ

sanchari

%d bloggers like this: