ಗುಲಾಬಿಗೆ ಒಂದು ನಮಸ್ಕಾರ

18slid2ನೊಂದುಕೊಂಡ ಒಂದು ಜೀವ ಈಗ ಸಂತಸದ ಗದ್ದುಗೆಯಲ್ಲಿದೆ. ಉಮಾಶ್ರೀ ನಮಗೆಲ್ಲಾ ಪರಿಚಯವಾಗಿದ್ದೇ, ಅಥವಾ ತುಂಬಾ ಹತ್ತಿರವಾಗಿದ್ದೇ ಅವರು ಬಿಚ್ಚಿಟ್ಟ ನೋವು ನೆನಪುಗಳ ಮೂಲಕ. ಆಕೆ ಬದುಕನ್ನು ಗೆದ್ದುಕೊಂಡ ಬಗೆ ಬಹುಷಃ ಎಲ್ಲಾ ಪ್ರಶಸ್ತಿಗೂ ಮಿಗಿಲಾದದ್ದು. ತನ್ನಿಂದ ಕಳೆದು ಹೋದ ವಿದ್ಯಾಭ್ಯಾಸ, ತನ್ನಿಂದ ದೂರವಾದ ಬದುಕು ಎಲ್ಲವನ್ನೂ ಆಕೆ ಹಲ್ಲು ಕಚ್ಚಿ ಗೆದ್ದುಕೊಂಡಿದ್ದಾರೆ. ಮೊನ್ನೆ ತಾನೇ ರಾಜಕೀಯ ಶಾಸ್ತ್ರ ಎಂ ಎ ಪರೀಕ್ಷೆ ಬರೆದಿದ್ದಾರೆ. ಮಕ್ಕಳನ್ನು ದಡ ಮುಟ್ಟಿಸಿದ್ದಾರೆ.

Umashreeಈ ಎಲ್ಲ ಮಾಡಿ ಮುಗಿಸಿರುವಾಗ ಕಷ್ಟಗಳನ್ನು ಸೈಡ್ ವಿಂಗ್ ಗೆ ತಳ್ಳಿದ ಮೇಲೆಯೇ ಸಂತಸದ ಕ್ಷಣಗಳು ಇವರ ಬಾಗಿಲು ತಟ್ಟುತ್ತಿದೆ.  ಈಗ ತಾನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಉಮಾಶ್ರೀಗೆ ಈ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಲಾಗಿದೆ. ನಮ್ಮೆಲ್ಲರೊಳಗೆ ಉಳಿದಿರುವ ಗುಲಾಬಿಗೆ ಒಂದು ನಮಸ್ಕಾರ. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ…

ಚಿತ್ರ ಪ್ರಶಸ್ತಿಗಳ ವಿವರಗಳಿಗೆ ಭೇಟಿ ಕೊಡಿ: ಮ್ಯಾಜಿಕ್ ಕಾರ್ಪೆಟ್

ಮೀಡಿಯಾ ಮೈಂಡ್ ನಲ್ಲಿ ಮೀಡಿಯಾ ಮಿರ್ಚಿ

gn sept 1 (1)

‘ಇಲ್ಲ ಆ ನ್ಯೂಸ್ ಬ್ರೆಕ್ ಮಾಡ್ಬಾರ್ದಿತ್ತು’ ಅಂತ ಗೆಳೆಯರೊಬ್ಬರು ಫೋನ್ ಮಾಡಿದಾಗ ರಾತ್ರಿ 8 ಗಂಟೆ ಕಳೆದು ಹೋಗಿತ್ತು. ದಟ್ಟ ನಕ್ಸಲೈಟ್ ಕೇಂದ್ರ ಎನಿಸಿಕೊಂಡಿದ್ದ ನಲ್ಲಮಲ್ಲ ಕಾಡಿನಲ್ಲಿ ಏನಾಗಿದೆ ಅನ್ನೋದೇ ಯಾರ ಊಹೆಗೂ ನಿಲುಕದಂತಾಗಿ ಹೋಗಿತ್ತು. ಫೋನ್ ಮಾಡಿದ್ದ ಗಳೆಯರಿಗಿದ್ದ ಆತಂಕ ನಕ್ಸಲೈಟುಗಳು ಹೆಲಿಕಾಪ್ಟರ್ ಹೊಡೆದುರುಳಿಸದೇ ಇದ್ರೂ ದಿಕ್ಕು ತಪ್ಪಿರುವ ‘ಬ್ರೆಕಿಂಗ್’ ಸುದ್ದಿ ಅವರನ್ನು ಅಲರ್ಟ್ ಮಾಡುತ್ತೆ. ‘ಸುಮ್ನೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳೋ ಸಮಾಚಾರ ಇದು. ಈ ಬ್ರೆಕಿಂಗ್ ನ್ಯೂಸ್ ಗಳು ಇಲ್ಲದೇ ಇರೋ ಪ್ರಾಬ್ಲಂನ ಸೃಷ್ಟಿ ಮಾಡುತ್ತೆ’ ಅಂತ ಕಿಡಿ ಕಾರಿದ್ರು.

ತಕ್ಷಣ ನನಗೆ ನೆನಪಾಗಿದ್ದು ಮುಂಬೈನಲ್ಲಿ ನಡೆದ ಟೆರರಿಸ್ಟ್ ಅಟ್ಯಾಕ್ . ಬಹುಷಃ ಮಾಧ್ಯಮದ ರೋಲ್ ಇಂತ ಸಂದರ್ಭದಲ್ಲಿ ಹೇಗಿರ್ಬೇಕು ಅಂತ ದೊಡ್ಡ ಚರ್ಚೆ ಆಗಿದ್ದು ಆಗ್ಲೇ. ‘ಕ್ಯಾಮರಾ ಆ ಕಡೆ ಪ್ಯಾನ್ ಮಾಡಿ, ಈ ಕಡೆ ತೋರಿಸಿ’ ಅಂತ ಹೇಳ್ತಾ ವರದಿಗಾರರು ಪಟ ಪಟ ವಿವರ ಕೊಡ್ತಾ ಇದ್ರೆ ಇತ್ತ ಟಿವಿ ಮಂದೆ ಕೂತಿರೋರಿಗೆ ಅಯ್ಯೋ ಟೆರರಿಸ್ಟಿಗೆ ಬೇಕಾದ ಮಾಹಿತಿ ಎಲ್ಲಾ ಟೀವೀನೋರೆ ಕೊಟ್ಬಿಡ್ತಾರಲ್ಲಪ್ಪ ಅಂತ ಅವಡುಗಚ್ಚಿಕೊಳ್ತಾ ಇದ್ರು. ಒಬೆರಾಯ್ ಟ್ರಿಡೆಂಟ್ ಹೋಟೆಲ್ ನಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಅಂತ ಆರ್ಮಿ ಹೇಳಿಕೆ ಕೊಟ್ಟ ಮೇಲೂ ಟಿ ವಿ ಯವರು ಹೋಟಲ್ ನ ರಿಸಪ್ಷನ್ನಿಗೇ ಫೋನ್ ಮಾಡಿ ಅಲ್ಲಿ ಇಂತಿಷ್ಟು ಜನ ಇದ್ದಾರೆ ಅನ್ನೋ ವಿವರ ಕೊಟ್ರು. ಅಲ್ಲಾ ಇದೆಲ್ಲಾ ಟೆರರಿಸ್ಟ್ ಗಳಿಗೆ ಮಾಡೋ ಹೆಲ್ಪ್ ಅಲ್ಲವಾ ಅಂತ ನೂರೆಂಟು ಚರ್ಚೆ ಎದ್ದೇಳ್ತು. ಟಿ ವಿ ಕ್ಯಾಮರಾ ಆಚೀಚೆ ತಿರುಗಿದಾಗ ಒಂದು ಕ್ಷಣ ಬೆರಗಾಗಿಬಿಡೋ ಅಷ್ಟು ವರದಿಗಾರರು, ಕ್ಯಾಮರಾಮನ್ ಗಳು ಸುದ್ದಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರು. ಒಂದು ಕಡೆ ಬರ್ಖಾ ದತ್ ಇನ್ನೊಂದ್ಕಡೆ ನೂರಾರು ‘ಬರ್ಖಾದತ್ಸ್ ಇನ್ ಮೇಕಿಂಗ್’

ಪೂರ್ಣ ಓದಿಗೆ: ಮೀಡಿಯಾ ಮೈಂಡ್

ಜನಭಾಷೆ ಮತ್ತು ಪ್ರಭುತ್ವ ಭಾಷೆ

ranganath-inv

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ…

ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು..

-ಚಿತ್ರಾ ಕರ್ಕೇರ

ಶರಧಿ

img_9009b

ಕಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು ಬರುತ್ತಿದ್ದ ಕುಲಕಸುಬಿದು. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.

ಹಾಗೇ ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು…ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು.

ಆಮೇಲೆ ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ…ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ…ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು.

ಅಷ್ಟೇ ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.

ಹೌದು..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ..”ಅಯ್ಯೋ ಅದನ್ನಾರು ಮಾಡುತ್ತಾರೆ” ಎಂದು ಉದಾಸೀನ ತೋರುವವರೇ ಜಾಸ್ತಿ.

ಎಷ್ಟು ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು ‘ಆರ್ಥಿಕ ಬಿಸಿ’ ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು ‘ಕಂಪ್ಯೂಟರ್ ಮೌಸ್’ (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?…!

ಕಾಶ್ಮೀರ: ಪ್ರಕ್ಷುಬ್ಧ ಕಣಿವೆ ಬಿಡುಗಡೆ

ಪ್ರಗತಿ ಗ್ರಾಫಿಕ್ಸ್ ನ ಪ್ರಕಟಣೆ ಕಾಶ್ಮೀರ: ಪ್ರಕ್ಷುಬ್ಧ ಕಣಿವೆ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು.

ಜಿ ರಾಮಕೃಷ್ಣ, ವಸು, ನಗರಗೆರೆ ರಮೇಶ್, ವಿ ಎಸ ಶ್ರೀಧರ್ ಭಾಗವಹಿಸಿದ್ದರು.

kashmirr 8

kashmirr 12 kashmirr 5

kashmirr 1 kashmirr 3

kashmirr 10

ಕನಸು ಕಾವ್ಯ

Invitation beneath the stars_inner for mail (1)

%d bloggers like this: