ಜೋಗಿ ಬರೆದ ಕಥೆ: ಜರಾಸಂಧ

IMG_0491ಸುಮ್ಮನೆ ಗಾಳಿ ಬೀಸುತ್ತಿತ್ತು. ಮನೆ ಮುಂದಿನ ಗಾಳಿ ಮರದ ನೆರಳು ಅಲ್ಲಾಡುತ್ತಿತ್ತು. ಆಕಾಶದಲ್ಲಿ ದಟ್ಟೈಸಿದ ಮೋಡಗಳಿಗೆ ಹೆಸರೇ ಇರಲಿಲ್ಲ. ಸೂರ್ಯ ಕಣ್ಣಾಮುಚ್ಚಾಲೆ ಆಡುತ್ತಿದ್ದ. ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ ಬೆಟ್ಟ ಇಳಿದು ನಿಟ್ಟುಸಿರೇ ಮೈವೆತ್ತಂತೆ ನಡೆದುಕೊಂಡು ಹೋಗುತ್ತಿದ್ದರು. ಮನೆ ಹಿಂದಿನ ಹಟ್ಟಿಯಲ್ಲಿ ಕಪಿಲೆ ಒಮ್ಮೆ ಸುದೀರ್ಘ ಅಂಬಾ ಎಂದು ಸುಮ್ಮನಾದಳು.

ರಂಗನಾಥ ಕನ್ನಡಿಯ ಮುಂದೆ ಕೂತಿದ್ದ. ಆವತ್ತು ಅವನ ಕೊನೆಯ ಪ್ರದರ್ಶನವಿತ್ತು. ಮೂರು ವರುಷಗಳ ಹಿಂದೆ ಯಕ್ಷಗಾನದಿಂದ ನಿವೃತ್ತಿ ಹೊಂದಿದ ಅವನನ್ನು ಆವತ್ತು ಊರಿನ ಮಿತ್ರರೆಲ್ಲ ಸೇರಿ ಸನ್ಮಾನಿಸುವುದಾಗಿ ತೀರ್ಮಾನಿಸಿದ್ದರು. ಆ ಸನ್ಮಾನದ ಕೊನೆಗೆ ಅವನೊಂದು ಏಕವ್ಯಕ್ತಿ ಅಭಿನಯ ಮಾಡಬೇಕು ಎಂದು ಒತ್ತಾಯಿಸಿದ್ದರು. ಮತ್ತೆ ಬಣ್ಣ ಹಚ್ಚುವುದಿಲ್ಲ ಎಂದು ತೀರ್ಮಾನಿಸಿದ್ದ ರಂಗನಾಥ ಅವರೆಲ್ಲರ ಒತ್ತಾಯಕ್ಕೆ ಮಣಿದು ಬಣ್ಣ ಹಚ್ಚಿಕೊಳ್ಳಲು ತೀರ್ಮಾನಿಸಿದ್ದ.

ಮೂರು ವರುಷಗಳಿಂದ ಕೂತಲ್ಲೇ ಕೂತು ಕೈ ಕಾಲು ಜಡ್ಡುಗಟ್ಟಿತ್ತು. ಅವನ ಮೆಚ್ಚಿನ ಪಾತ್ರವೆಂದರೆ ಜರಾಸಂಧನದು. ಸೀಳಿ ಎಸೆದರೂ ಕೂಡಿಕೊಳ್ಳುವ ಜರಾಸಂಧ ಅವನಿಗೆ ವೈಯಕ್ತಿಕವಾಗಿಯೂ ಅಚ್ಚುಮೆಚ್ಚು. ಅದು ಮನಸ್ಸಿಗೆ ಸಂಕೇತ ಎಂದು ಅವನು ತಾಳಮದ್ದಲೆ ಪ್ರಸಂಗದಲ್ಲಿ ವಾದಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ. ಆ ಪಾತ್ರ ಅವನೊಳಗೆ ಮನೆ ಮಾಡಿಕೊಂಡಿತ್ತು. ಹುಟ್ಟುತ್ತಲೇ ಎರಡು ಹೋಳಾಗಿ ಹುಟ್ಟಿದ ಜರಾಸಂಧನ ಇತಿಹಾಸವನ್ನೂ ರಂಗನಾಥ ಅಧ್ಯಯನ ಮಾಡಿದ್ದ. ಜರಾಸಂಧನ ವಂಶಕ್ಕೆ ಸೇರಿದ ಶೂರಸೇನನ ಮಗಳು ಸುಮಿತ್ರೆ. ಅವಳನ್ನು ದಶರಥ ಮದುವೆ ಆಗಿದ್ದ. ಹೀಗೆ ಜರಾಸಂಧನ ವಂಶಕ್ಕೆ ತನ್ನದೇ ಆದ ಗೌರವ ಇದೆ. ರಾಮಾವತಾರದಿಂದ ಕೃಷ್ಣಾವತಾರದ ತನಕ ಹಬ್ಬಿರುವ ವಂಶ ಅದು ಎಂದು ರಂಗನಾಥ ವಾದಿಸುವ ಮೂಲಕ ತನ್ನ ಪಾಂಡಿತ್ಯವನ್ನೂ ಪ್ರದರ್ಶಿಸುತ್ತಿದ್ದ. ಮಗಧದ ರಾಜನಾದ ಜರಾಸಂಧ ರಾಕ್ಷಸನಲ್ಲ, ಕ್ಷತ್ರಿಯ ಎನ್ನುವುದೂ ಅವನ ಮತ್ತೊಂದು ವಾದವಾಗಿತ್ತು.

baluಚಿತ್ರ: ಬಾಲು ಮಂದರ್ತಿ

ತನ್ನ ವೃತ್ತಿ ಜೀವನದ ಕೊನೆಕೊನೆಯ ದಿನಗಳು ಸಮೀಪಿಸುತ್ತಿದ್ದ ಹಾಗೇ, ಪ್ರತಿಯೊಂದು ಪ್ರದರ್ಶನದಲ್ಲೂ ಹೊಸ ಹೊಸ ಸಂಗತಿಗಳು ರಂಗನಾಥನಿಗೆ ಹೊಳೆಯುತ್ತಿದ್ದವು. ಅವನು ತನ್ನ ಅಲಂಕಾರವನ್ನು ತಾನೇ ಮಾಡಿಕೊಳ್ಳುವುದು ರೂಢಿ. ಬೇರೆ ಯಕ್ಷಗಾನದ ಕಲಾವಿದರ ಹಾಗೆ ಆತ ಕಿರೀಟ ತೊಡುತ್ತಿರಲಿಲ್ಲ. ಬದಲಾದಿ ಉದ್ದನೆ ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಹಣೆಗೊಂದು ಕುಂಕುಮ ಇಟ್ಟುಕೊಂಡು ರಂಗಕ್ಕಿಳಿಯುತ್ತಿದ್ದ. ಬಿಡುಬೀಸಾಗಿ ಹರಿಯುವ ಮಾತಿನ ರಭಸ ಮತ್ತು ಗತ್ತಿಗೆ ಅನುಗುಣವಾಗಿ ಅವನ ಕೂದಲು ನರ್ತಿಸುತ್ತಿತ್ತು. ಜರಾಸಂಧನ ಪಾತ್ರಕ್ಕೆ ಹೊಸ ಆಯಾಮ ಕೊಟ್ಟವನು ಎಂದು ರಂಗನಾಥನನ್ನು ಅನೇಕರು ಕೊಂಡಾಡುತ್ತಿದ್ದರು. ಜರಾಸಂಧ ಎಂದಾಗೆಲ್ಲ ಎಲ್ಲರಿಗೂ ನೆನಪಾಗುತ್ತಿದ್ದದ್ದು ರಂಗನಾಥನೇ.

ಇನ್ನಷ್ಟು

ಹುಬ್ಬಳ್ಳಿಯಲ್ಲಿ ಪುಸ್ತಕ ಹಬ್ಬ

ಡಾ ಡಿ ಎಸ್ ಕರ್ಕಿ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ವಿಶ್ವೇಶ್ವರ ಭಟ್ ಅವರ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಗಿರಡ್ಡಿ ಗೋವಿಂದರಾಜ್, ರಂಗಕರ್ಮಿ ಯಶವಂತ ಸರದೇಶಪಾಂಡೆ, ಅಂಕಣಕಾರ ಎಸ್ ಷಡಕ್ಷರಿ ಸಮಾರಂಭದಲ್ಲಿದ್ದರು.

ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ: ಓದು ಬಜಾರ್

DSC_0140

DSC_0151 DSC_0159

‘ಮೀಡಿಯಾ ಮಿರ್ಚಿ’ಯಲ್ಲಿ ಬದಲಾವಣೆಯ ಹರಿಕಾರರು

cam-news-1-3

ಕುವೆಂಪು ಅವರ ‘ಜಲಗಾರ’ ನಾಟಕದಲ್ಲಿ ಜಗದ ಕೊಳೆ ತೆಗೆಯುವ ಜಲಗಾರನೊಬ್ಬ ಬರುತ್ತಾನೆ. ಹಾಗೆ ಅಲ್ಲೊಬ್ಬ ಸೌದಿ, ಇಲ್ಲೊಬ್ಬ ಪ್ಯಾಟಿ, ಇನ್ನೆಲ್ಲೋ ಒಂದು ಪತ್ರಕರ್ತರ ಸಂಘ ಪೊರಕೆ ಹಿಡಿದು ನಿಂತಿದೆ. ಅವರಿಗೆ ಗೊತ್ತಾಗಿದೆ ನಮ್ಮ ಊರುಗಳ ಕೊಳೆ ನಾವೇ ತೊಳೆಯಬೇಕು ಅಂತ. ಪಿ ಸಾಯಿನಾಥ್ ಎಂಬ ಮಾಧ್ಯಮ ಲೋಕದ ಭಿನ್ನ ಪಯಣಿಗನೊಬ್ಬ ಹುಟ್ಟಿದ್ದೂ ಹೀಗೇ  ಅಲ್ಲವೇ. ರವೀಂದ್ರನಾಥ ಟ್ಯಾಗೂರರ ಪದ್ಯವೊಂದಿದೆ. ಜಗತ್ತೆಲ್ಲಾ ಕತ್ತಲೆಯಲ್ಲಿ ಮುಳುಗಿದ್ದಾಗ ಪುಟ್ಟ ಹಣತೆಯೊಂದು ಹೇಳುತ್ತದೆ- ‘ಭಯಪಡಬೇಡಿ ನಾನಿದ್ದೇನೆ’.

ಚಂದ್ರನ ಮೇಲೆ ನೀರಿದೆ ಎಂಬುದನ್ನು ಕಂಡು ಹಿಡಿಯುತ್ತೇವೆ. ಆದರೆ ನಮ್ಮ ಊರುಗಳಲ್ಲೇ ಕುಡಿಯಲೂ ಒಂದು ಹನಿ ನೀರಿಲ್ಲ ಎಂದು ಗೊತ್ತಾಗದೇ ನಿಂತಿದ್ದೇವೆ. ಅಂತಹವರ ಮಧ್ಯೆ ಈ ಬದಲಾವಣೆಯ ಹರಿಕಾರರು ಇದ್ದಾರೆ ಎಂಬುದೇ ಸಮಾಧಾನ.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

%d bloggers like this: