ಚಿತ್ರ: ಎ ಆರ್ ಮಣಿಕಾಂತ್
ತ್ರಿವೇಣಿ. ಗೀತೆರಚನೆ: ಹಂಸಲೇಖ
ಸಂಗೀತ: ಉಪೇಂದ್ರಕುಮಾರ್. ಗಾಯನ: ಜಿ. ಬಾಲಕೃಷ್ಣ.
ಸಿರಿನಂದನಾ, ಏನ ಕೇಳಲಿ ನಾ
ಓ ದಯಾಳು, ಬರಿದು ಬಾಳು
ಕರುಣಿಸೋ ನಗುಜೀವನಾ, ಸಿರಿನಂದನಾ
ಜನನ ಮರಣಾ ಬಾಳಪಥದಿ ಹರಿಸಿ ಸಾಗುವೆ ವಿನಾ
ನೀನಾ ಭಗವಂತಾ
ಜಗಕುಪಕರಿಸಿ ನನಗಪಕರಿಸೋ
ಜಗದೋದ್ಧಾರಕ ನೀನೇನಾ, ನೀನೇನಾ ||ನೀನಾ||
ಗೋರ್ಕಲ್ಲಿಗೆ ಗುಡಿ ಮಂದಿರ ನೂರು
ಮಾಡಿದ ನರನಿಗೆ ನೆಲೆಯಿಲ್ಲ
ಹೂ ಸೌಗಂಧವ ಲೇಪಿಸಿ ಹಾಡಿ
ಕರೆದರು ಕರುಣಿಸೆ ಕೃಪೆಯಿಲ್ಲ ||ನೀನಾ||
ನಶ್ವರ ಭೋಗದ ಆಸೆ ಕಡಲಲಿ
ತೇಲಿಸಿ ಮುಳುಗಿಸಲೇಕಯ್ಯ
ಅಂತರ ತಿಳಿಯದೆ ಪಾಲಿಸುವವಗೆ
ದೈವೋತ್ತಮ ಬಿರುದೇಕಯ್ಯ ||ನೀನಾ||
ಕರುಣೆ ಮಮತೆ ತೋರಿ ನಿಜದಿ
ಕಲಕಿ ಕದಡುವೆ ಮನ
ಇರುವೆ ಎಲ್ಲಿ ಶೂನ್ಯ ಜಗದಿ
ಪ್ರಸರಿಸೋ ಶಾಂತಿ ತಾ… ಸಿರಿನಂದನಾ… ||ನೀನಾ||

ಚಿತ್ರಸಾಹಿತಿಯಾಗುವ ಕನಸು ಕಂಡ ವ್ಯಕ್ತಿಗೆ, ಅದೇ ಮೊದಲಿಗೆ ಹಾಡು ಬರೆಯುವ ಅವಕಾಶ ಸಿಕ್ಕರೆ ಆತ ಏನು ಮಾಡ್ತಾನೆ ಹೇಳಿ? ಮೊದಲಿಗೆ, ಮನೆ ದೇವರಿಗೆ ನಮಿಸುತ್ತಾನೆ. `ದೇವ್ರೇ, ಒಳ್ಳೆಯದು ಮಾಡಪ್ಪಾ’ ಎಂದು ಪ್ರಾಥರ್ಿಸುತ್ತಾನೆ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುತ್ತಾನೆ. ಕಾಣಿಕೆ ಹಾಕುತ್ತಾನೆ. ಇಷ್ಟೆಲ್ಲ ಆದ ಮೇಲೆ ಶ್ರದ್ಧಾಭಕ್ತಿಯಿಂದ ಬರೆಯಲು ಕೂರುತ್ತಾನೆ. ಹಾಳೆಯ ಮೇಲೆ- ಶ್ರೀ/ಶ್ರೀಮಾತಾ ಎಂದೋ; ರಾಘವೇಂದ್ರಾಯ ನಮಃ/ಮಂಜುನಾಥಾಯ ನಮಃ/ಶ್ರೀ ವೆಂಕಟೇಶ್ವರ ಪ್ರಸನ್ನ ಎಂದೋ ಬರೆದು ನಂತರವೇ ಮುಂದುವರಿಯುತ್ತಾನೆ. ಆದರೆ, ಇವತ್ತು ಕನ್ನಡದ ನಂಬರ್ ಒನ್ ಗೀತರಚನೆಕಾರ ಎನಿಸಿಕೊಂಡಿರುವ ಹಂಸಲೇಖ ಅವರು, ದೇವರನ್ನು ಬಯ್ಯುವ ಹಾಡಿನಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಎಂದರೆ ನಂಬುತ್ತೀರಾ?
ನಂಬಲೇಬೇಕು. ಏಕೆಂದರೆ ಇದು ನಿಜ.
ಹಂಸಲೇಖ ಅವರ ಒರಿಜಿನಲ್ ಹೆಸರು ಜಿ. ಗಂಗರಾಜು. ಜಿ. ಫಾರ್ ಗೋವಿಂದರಾಜು. ಇದು ತಂದೆಯ ಹೆಸರು. ಗಂಗರಾಜು ಅವರಿಗೆ ಅವರ ಗುರುಗಳೊಬ್ಬರು ಹಂಸದಂಥ ವಿನ್ಯಾಸ ಹೊಂದಿದ್ದ ಪೆನ್ ಒಂದನ್ನು ಉಡುಗೊರೆಯಾಗಿ ನೀಡಿದರಂತೆ. ಅದನ್ನು ಅಮೂಲ್ಯ ವಸ್ತು ಎಂಬಂತೆ ಇಟ್ಟುಕೊಂಡಿದ್ದ ಗಂಗರಾಜು, ತುಂಬ ಮಹತ್ವದ್ದನ್ನು ಬರೆಯಬೇಕು ಅನ್ನಿಸಿದಾಗ ಅದೇ ಪೆನ್ ಬಳಸುತ್ತಿದ್ದರು. ಮುಂದೆ, ಚಿತ್ರಸಾಹಿತಿ ಆಗಬೇಕು ಅಂದುಕೊಂಡಾಗ, ಒರಿಜಿನಲ್ ಹೆಸರಿನ ಬದಲು ಒಂದು ಕಾವ್ಯನಾಮ ಇದ್ದರೆ ಚೆಂದ ಅಂದುಕೊಂಡರು ಗಂಗರಾಜು. ಆಗಲೇ, ಮೇಸ್ಟ್ರು ಉಡುಗೊರೆಯಾಗಿ ಕೊಟ್ಟಿದ್ದ ಪೆನ್ನು ಹಾಗೂ ಅದರಲ್ಲಿ ಬರೆಯುವಾಗ ಉಂಟಾಗುವ ಅವ್ಯಕ್ತ ಆನಂದ ನೆನಪಾಯಿತು. ತಕ್ಷಣವೇ `ಹಂಸಲೇಖ’ ಎಂಬುದನ್ನೇ ತಮ್ಮ ಕಾವ್ಯನಾಮ ಮಾಡಿಕೊಳ್ಳಲು ನಿರ್ಧರಿಸಿದರು ಗಂಗರಾಜು. ಮುಂದಿನದು ಇತಿಹಾಸ…
ಹಂಸಲೇಖ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರವಿಚಂದ್ರನ್ ನಿದರ್ೇಶನದ `ಪ್ರೇಮಲೋಕ’ದ ಮೂಲಕ ಎಂದು ಈಗಲೂ ಹಲವರು ಭಾವಿಸಿದ್ದಾರೆ. ಆದರೆ ವಾಸ್ತವ ಏನೆಂದರೆ, ಹಂಸಲೇಖ ಚಿತ್ರರಂಗ ಪ್ರವೇಶಿಸಿದ್ದು ಎಪ್ಪತ್ತರ ದಶಕದಲ್ಲಿ ತೆರೆಕಂಡ `ತ್ರಿವೇಣಿ’ ಚಿತ್ರದ ಮೂಲಕ. ಇವತ್ತು ಈ ಅಂಕಣದಲ್ಲಿದೆಯಲ್ಲ? ಅದೇ ಹಂಸಲೇಖ ಬರೆದ ಮೊದಲ ಹಾಡು.
ಅದ್ಸರಿ, ಹಂಸಲೇಖ ಅವರಿಗೆ ದೇವರ ಮೇಲೆ ಯಾಕೆ ಸಿಟ್ಟು? `ನೀನಾ ಭಗವಂತಾ?’ ಎಂದು ಬರೆಯುವಾಗ ಅವರಿಗೆ ಹೆದರಿಕೆ ಆಗಲಿಲ್ವ? ಮೊದಲ ಸಿನಿಮಾದಲ್ಲೇ ಅವರು ದೇವರಿಗೇ ತಗುಲಿಕೊಂಡಿದ್ದಾದರೂ ಏಕೆ? ಈ ಹಾಡು ಬರೆದಾಗ ಹಂಸಲೇಖ ಅವರ ಪರಿಸ್ಥಿತಿ ಹೇಗಿತ್ತು? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಅದೊಮ್ಮೆ ಹಂಸಲೇಖ ಹೀಗೆ ಉತ್ತರಿಸಿದ್ದರು:
ಇವತ್ತು ಎಲ್ಲಿ ಹೋದರೂ ಕೂಡ ಜನ ನನ್ನನ್ನು ಗುರುತಿಸ್ತಾರೆ. ಪ್ರೀತಿಸ್ತಾರೆ. ಆರಾಸ್ತಾರೆ. ಗೌರವಿಸ್ತಾರೆ. ಬಿಡಪ್ಪಾ, ಈಗ ಹಂಸಲೇಖ ಸ್ಟಾರ್ ಆಗಿದಾರೆ ಅಂತಾರೆ. ಎಲ್ಲವೂ ನಿಜ. ಆದರೆ, ನಾನು ಈ ಸ್ಥಿತಿಗೆ ರಾತ್ರೋರಾತ್ರಿ ಬಂದವನಲ್ಲ. ವಿಪರೀತ ಕಷ್ಟಪಟ್ಟಿದೀನಿ. ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲವಲ್ಲ ಅಂಥ ತುಂಬಾ ಕೊರಗಿದ್ದೀನಿ. ಯಾರಿಗೂ ಕಾಣದಂತೆ ಕಣ್ಣೀರು ಹಾಕಿದ್ದೀನಿ…
More
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು