ಭಿಕ್ಷುಕರೊಡನೆ…

beggarsblues-2

ಅಲ್ಲಿ ಒಬ್ಬರು ಮಹಿಳೆ ಇದ್ದರು. ಅಧಿಕಾರಿಗಳ ಪ್ರಕಾರ, ಆಕೆಯ ಮಗಳು-ಅಳಿಯ ಆಕೆಯ ಅಸ್ತಿ ಪಡೆದು, ಮನೆಯಿಂದ ಹೊರಗೆ ಹಾಕಿದ್ದಾರೆ. ಮತಿ ಭ್ರಮಣೆಯಾದ ಆಕೆ, ಭಿಕ್ಷೆ ಬೇಡುವಾಗ ಇವರಿಗೆ ಸಿಕ್ಕಿ, ಕಾಲೋನಿಗೆ ಕರೆ ತಂದಿದ್ದಾರೆ. ನಾನು ಆಕೆಯ ಬಳಿ ಮಾತನಾಡಲು ಹೋದೆ. ಎಷ್ಟು ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದಳು, ಅದು Organic Chemistry ಬಗ್ಗೆ

ಇನ್ನೊಬ್ಬ ಹರೆಯದ ಹುಡುಗಿ ಇದ್ದಳು. ಬಹುಶ 21-22 ವರ್ಷ ಇರಬಹುದೇನೋ. ಮದುವೆ ಆಗಿ, ಇಬ್ಬರು ಮಕ್ಕಳು, ಆದರೆ ಅತ್ತೆಯ ಕಾಟ ತಡೆಯಲಾರದೆ, she left home. ಭಿಕ್ಷೆ ಬೇಡಲು ಶುರು ಮಾಡಿದ್ದಳಂತೆ. ಅವಳೇ ಹೇಳುವ ಪ್ರಕಾರ, ದಿನ ಒಂದಕ್ಕೆ ಮುನ್ನೂರು ರುಪಾಯಿ ಸಂಪಾದನೆ

ಪೂರ್ಣ ಓದಿಗೆ: ಮೀಡಿಯಾ ಮೈಂಡ್


ಮಂಗಗಳ ವ್ಯಾಪಾರ ಮತ್ತು ನಾಲ್ಕಾಣೆ ಶೇರುಗಳು !

– ಜಯದೇವ ಪ್ರಸಾದ ಮೊಳೆಯಾರ

how-to-draw-animals-31

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಪುಟ್ಟ ಹಳ್ಳಿಗೆ ಒಬ್ಬ ವರ್ತಕ ಬಂದ.

ನನ್ನ ಪಟ್ಟಣದಲ್ಲಿ ಮಂಗಗಳಿಲ್ಲ. ನಮಗೆ ಬೇಕು. ನಾನು ಮಂಗಗಳ ವ್ಯಾಪಾರ ಮಾಡುತ್ತೇನೆ. ಒಂದು ಮಂಗಕ್ಕೆ ಹತ್ತು ರೂಪಾಯಿಯಂತೆ ಎಷ್ಟು ಮಂಗಗಳನ್ನು ಬೇಕಾದರೂ ಖರೀದಿಸಬಲ್ಲೆ  ಅಂತ ಹಳ್ಳಿಗರಿಗೆ ಆಫರ್ ಮಾಡಿದ.

ಹಳ್ಳಿ ಜನರಿಗೆ ಖುಶಿಯೋ ಖುಶಿ. ಗುಡ್ಡಗಾಡಿನ ತಪ್ಪಲಲ್ಲಿರುವ ಹಳ್ಳಿಯಲ್ಲಿ ಮಂಗಗಳಿಗೆ ಬರವೇ? ಹಿಡಿದೂ ಹಿಡಿದೂ ಹತ್ತು ರೂಪಾಯಿಗೆ ಒಂದರಂತೆ ವರ್ತಕನಿಗೆ ಮಾರಿದರು. ವರ್ತಕ ಅವನ್ನೆಲ್ಲ ಖರೀದಿಸಿ ದೊಡ್ಡ ದೊಡ್ಡ ಬೋನುಗಳಲ್ಲಿ ಕೂಡಿಹಾಕಿದನು. ಕೆಲವು ದಿನಗಳ ಬಳಿಕ ಮಂಗಗಳ ಸಂಖ್ಯೆ ಕಡಿಮೆಯಾದಂತೆ ವರ್ತಕ ಮಂಗವೊಂದಕ್ಕೆ 25 ರೂ ಬೆಲೆಯನ್ನು ಘೋಷಿಸಿದ. ಹಳ್ಳಿಗರು ತುಸು ದೂರ ಕಾಡಿನಲ್ಲಿ ಅಲೆದು ಮಂಗಗಳನ್ನು ಹಿಡಿದು ಮಾರಿದರು. ದುಡ್ಡು ಕಿಸೆಗೇರಿಸಿದರು. ಇನ್ನೂ ಕೆಲವು ದಿನಗಳು ಸಂದವು. ಮಂಗಗಳು ಇನ್ನೂ ಕಡಿಮೆಯಾದವು.

ಈ ಬಾರಿ ವರ್ತಕ ಮಂಗವೊಂದಕ್ಕೆ 50 ರೂ ಎನೌನ್ಸ್ ಮಾಡೇ ಬಿಟ್ಟ. ಅಲ್ಲದೆ ತಾನು ಒಂದು ವಾರದ ಮಟ್ಟಿಗೆ ಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ತನ್ನ ಒಬ್ಬ ಸಹಾಯಕನನ್ನು ಹಳ್ಳಿಯಲ್ಲಿ ಕುಳ್ಳಿರಿಸಿ ಹೊರಟುಹೋದ.

ಆತ ಹೋದ ಬಳಿಕ ಆ ಸಹಾಯಕ ಹಳ್ಳಿಗರಿಗೆ ತನ್ನದೇ ಒಂದು ಆಫರ್ ನೀಡಿದ.  ಹಳ್ಳಿಗರೇ, ಬೋನಿನಲ್ಲಿರುವ ಮಂಗಗಳನ್ನು ನನ್ನಿಂದ 35 ರೂ ಗಳಂತೆ ನೀವು ತಗೊಳ್ಳಿ. ಧನಿ ಬಂದ ನಂತರ 50 ರೂ ಗಳಂತೆ ಆತನಿಗೆ ಮಾರುವಿರಂತೆ. ನಾನಂತೂ ಎಲ್ಲಾ ಮಂಗಗಳು ತಪ್ಪಿಸಿಕೊಂಡು ಹೋದವೆಂದು ಸೋಗು ಹಾಕುತ್ತೇನೆ. ನಿಮಗೂ ಲಾಭ, ನನಗೂ ಲಾಭ. ಏನಂತೀರಾ..??

ಈವರೆಗೆ ಸುಲಭದಲ್ಲಿ ದುಡ್ಡು ಮಾಡಿದ್ದ ಹಳ್ಳಿಗರಿಗೆ ಹಣದ ರುಚಿ ಹತ್ತಿತ್ತು. 35 ರಂತೆ ತಗೊಂಡು 50 ರಂತೆ ಮಾರಾಟ! 15 ರೂಪಾಯಿಗಳ ಸುಲಭದ ಗಳಿಕೆ. ಇದೊಂದು ವಂಡರ್ ಫುಲ್ ಅವಕಾಶ ಅಂತ ಅನಿಸಿತು. ಇದ್ದ ಹಣವನ್ನೆಲ್ಲ ಒಟ್ಟುಗೂಡಿ, ಸಾಲ ಸೋಲ ಮಾಡಿ ಬೋನಿನಲ್ಲಿದ್ದ ಮಂಗಗಳನ್ನೆಲ್ಲ ಆ ಸಹಾಯಕನಿಂದ ಖರೀದಿಸಿದರು. ಕೆಲವರಂತೂ ಆತನಿಗೆ ಕಮಿಶನ್ ಕೊಟ್ಟು ಜಾಸ್ತಿ ಮಂಗಗಳನ್ನು ತಮ್ಮದಾಗಿಸಿದರು.

ಮರುದಿನ ಬೆಳಗ್ಗೆ ಆ ಊರಿನಿಂದ ದುಡ್ಡು ಗಂಟುಕಟ್ಟಿಕೊಂಡು ಸಹಾಯಕ ಓಡಿ ಹೋಗುತ್ತಾನೆ. ವರ್ತಕ ಮೊದಲೇ ಪರಾರಿ.

ಈಗ ಊರಿಡೀ ಬರೇ ಮಂಗಗಳೇ ಮಂಗಗಳು. ಕೆಲವು ಬಾಲವಿರುವ. . . , ಕೆಲವು ಬಾಲವಿಲ್ಲದ !!!

ಇದು, ಹಳ್ಳಿಯೊಂದರಲ್ಲಿ ಮಂಗಗಳ ವ್ಯಾಪಾರದಲ್ಲಿ ಹಳ್ಳಿಗರು ಮಂಗಗಳಾದ ಕತೆ !!

ಈಗ ಆ ಹಳ್ಳಿ, ಆ ಕಾಲ ಬಿಟ್ಟು ಈ ನಗರ, ಈ ಕಾಲಕ್ಕೆ ಬರೋಣ:

ಇನ್ಫೋಸಿಸ್, ರಿಲಾಯನ್ಸ್, ಎಲ್ ಐನ್ಡ್ ಟಿ ಯಂತಹ ಹಲವು ಬ್ಲೂಚಿಪ್ ಕಂಪೆನಿಗಳಲ್ಲಿ ಹಣ ತೊಡಗಿಸಿ ಕೋಟ್ಯಾಧೀಶರಾದವರ ಕತೆಗಳನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಅವನ್ನೆಲ್ಲ ಕೇಳಿ, ನೋಡಿ ಅತಿಶೀಘ್ರ ಶ್ರೀಮಂತರಾಗುವ ಕನಸನ್ನು ನಾವೆಲ್ಲ ಕಟ್ಟಿಕೊಳ್ಳುತ್ತೇವೆ. ಅಲ್ಪ ಸ್ವಲ್ಪ ಹಣವನ್ನು ಕೆಲವು ಶೇರುಗಳಲ್ಲಿ ಮಾಡಿಯೂ ಇರುತ್ತೇವೆ. ಸ್ವಾಭಾವಿಕವಾಗಿ ಆಸೆ ಕುದುರುತ್ತದೆ. ಹೆಚ್ಚಿನ ಹೂಡಿಕೆಗೆ ತೊಡಗುತ್ತೇವೆ. ಆ ಸಂದರ್ಭದಲ್ಲೇ ಬುಲ್ ಮಾರ್ಕೆಟ್ ಆರಂಭವಾಗಿರುತ್ತದೆ. ನಾವೂ ಗೂಳಿಗಳಂತೆ ನುಗ್ಗುತ್ತೇವೆ. ಅವರಿವರಿಂದ ಹಾಟ್ ಟಿಪ್ಸ್ ತೆಗೆದುಕೊಳ್ಳುತ್ತೇವೆ. ಬ್ರೋಕರ್ ಅಡ್ಡಾಗಳನ್ನು ಎಡತಾಕುತ್ತೇವೆ.ಆಫೀಸು ಸಮಯದಲ್ಲೂ ಗುಟ್ಟುಗುಟ್ಟಾಗಿ ಈಗ ಟಿ.ಸಿ.ಎಸ್ ಎಷ್ಟು ಮೇಲೆ ಹೋಯಿತು? ಅಯ್ಯೋ, ವಿಪ್ರೋ ಬಿತ್ತಾ. .?

More

%d bloggers like this: