
ಹಿಂಸೆಯೆಂಬ ಕಂಡಿಶನ್ಡ್ ರಿಫ್ಲೆಕ್ಸೂ, ತೆನಾಲಿರಾಮನ ಬೆಕ್ಕೂ
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
ಈ ಜಗತ್ತಿನಲ್ಲಿ ಕೆಟ್ಟದು ಅನ್ನುವುದಿಲ್ಲದಿದ್ದರೆ ಒಳ್ಳೆಯದಕ್ಕೆ ಬೆಲೆ ಬರುತ್ತಿತ್ತಾ? ಒಳ್ಳೆಯದು, ಕೆಟ್ಟದ್ದು ಅನ್ನುವ ಬೈನರಿ ನಿಯಮ ಈ ಪ್ರಪಂಚದಲ್ಲಿ ಇರಲೇಬೇಕು. ಆಗಲೇ ಒಳ್ಳೆಯದು ಒಳ್ಳೆಯದಾಗುವುದು. ಒಂದು ಕ್ರಿಯೆ ‘ಕೆಟ್ಟದ್ದು’ ಅನ್ನುವುದು ಗೊತ್ತಿದ್ದರೂ ಕೆಲವರು ಅದನ್ನು ತಮ್ಮ ಪ್ರವೃತ್ತಿಯಾಗಿ ಆಯ್ದುಕೊಳ್ಳುತ್ತಾರಲ್ಲ. ಅದನ್ನು ನಾವು ಒಪ್ಪಿಕೊಳ್ಳುವುದು ಹೇಗೆ?
ಒಳ್ಳೆಯದು ಕೆಟ್ಟದ್ದು ಎನ್ನುವ ನೈತಿಕ ಧ್ರುವಗಳನ್ನು ನಮಗೆ ಹೊರೆಸಬೇಕಾಗಿರುವುದು ಯಾರು? ನಮ್ಮ ಸಮಾಜವೇ? ನಮ್ಮ ಒಳಗಿನ ಧ್ವನಿಯೇ? ಅಥವಾ ಇಂತದ್ದು ಮಾಡಿದರೆ ನಿನಗೆ ಶಿಕ್ಷೆಯಾಗುತ್ತದೆ ಆದ್ದರಿಂದ ಇದನ್ನು ನೀನುಮಾಡಬಾರದು ಎಂದು ಹೇಳುವ ಸರಕಾರವೇ? ಒಂದು ಕ್ರಿಯೆಯ ಹೊಣೆಗಾರಿಕೆಯಿಂದ, ಅದರ ಪರಿಣಾಮದಿಂದ ಮಾತ್ರ ಅದನ್ನು ಒಳ್ಳೆಯದು, ಕೆಟ್ಟದ್ದು ಎಂದು ಕಪ್ಪುಬಿಳಿಯಾಗಿ ವಿಂಗಡಿಸಬಹುದೇ?
ಸರಕಾರ ಅಥವಾ ಇಂಥ ಯಾವುದೇ ಒಂದು ನೈತಿಕ ಪೋಲಿಸ್ ಆಗಿ ಕಾಯುವ ಸಂಸ್ಥೆ ಒಬ್ಬ ಮನುಷ್ಯ ಮಾಡಿದ ಅಪರಾಧಕ್ಕೆ ಶಿಕ್ಷೆ ಕೊಡಬಹುದೇ ಹೊರತು, ಆತ ಈ ಅಪರಾಧವನ್ನು ಮಾಡದೆಯೇ ಇರುವಂತೆ ತಡೆಯುವುದು ಸಾಧ್ಯವೇ? ಹಾಗೆ ಮಾಡುವುದು ಸಾಧ್ಯವಾದ ಪಕ್ಷದಲ್ಲಿ ಅಂತ ಜಗತ್ತಿನಲ್ಲಿ ಅಪರಾಧವೇ ಇರುವುದಿಲ್ಲವೇ? ಬರೇ ‘ಒಳ್ಳೆ’ಯವರಿಂದಲೇ ತುಂಬಿಹೋಗಿರುತ್ತದೆಯೇ? ಅಥವಾ ಅಪರಾಧ, ಹಿಂಸೆ ಕೂಡ ಒಂದು ಆಯ್ಕೆಯೇ?
ಪಾವ್ಲೋವ್‌ನ ಪ್ರಯೋಗ ಎಲ್ಲರಿಗೂ ಗೊತ್ತೇ ಇದೆ. ಈತ ನಾಯಿಯ ಮಾಂಸತಿನ್ನುವ ಕ್ರಿಯೆಗೆ ಗಂಟಾನಾದವನ್ನು ಜೋಡಿಸಿ ಮಾಂಸವಿಲ್ಲದೇ ಇದ್ದಾಗೂ ಬರೇ ಗಂಟಾನಾದಕ್ಕೆ ನಾಯಿ ಜೊಲ್ಲು ಸುರಿಸುವುದನ್ನು ನಿದರ್ಶಿಸಿ ಕಂಡಿಶನ್ಡ್ ರಿಫ್ಲೆಕ್ಸ್ ಅನ್ನು ವಿವರಿಸಿದ. ನಮ್ಮ ತೆನಾಲಿ ರಾಮನ ದಂತಕತೆಗಳಲ್ಲಿ ಇದನ್ನೇ ಸ್ವಲ್ಪ ಮಾರ್ಪಡಿಸಿ ಬೆಕ್ಕಿಗೆ ಬಿಸಿಹಾಲು ಕುಡಿಸಿ ಬೆಕ್ಕು ಮುಖ ಸುಟ್ಟಿಕೊಂಡಾಗ ಆ ಬೆಕ್ಕು ಹಾಲನ್ನೂ ಕುಡಿಯದ ಹಾಗೆ “ಡಿಕಂಡಿಶನ್’ ಮಾಡಿದ್ದೂ ಈ ಪಾವ್ಲೊವಿನ ಪ್ರಯೋಗದಷ್ಟೇ ಕುತೂಹಲಕಾರಿ.
ಈ ಹಿಂಸೆ ಒಂದು ಮನಸ್ಸಿನ ಈ ರೀತಿಯ ಕಂಡೀಶನ್ಡ್ ರಿಫ್ಲೆಕ್ಸ್ ಆದರೆ ಈ ಹಿಂಸೆಯನ್ನು ತೆನಾಲಿ ರಾಮನ ಬೆಕ್ಕಿಗಾದಂತೆ ‘ಡಿಕಂಡಿಷನ್’ ಮಾಡಲು ಸಾಧ್ಯವೇ? ಅಂದರೆ, ಹಿಂಸೆ ಮಾಡುವವನಿಗೆ ಹಿಂಸಿಸುವ ಕ್ರಿಯೆ ಸಂತೋಷವನ್ನು ಕೊಡುವಂತಿದ್ದರೆ (ಪಾವ್ಲೊವ್‌ನ ಪ್ರಯೋಗದಲ್ಲಿ ಮಾಂಸಕ್ಕೆ ಮತ್ತು ಮಾಂಸ ತಿನ್ನುವ ಮುಂಚಿನ ಗಂಟಾನಾದಕ್ಕೆ ನಾಯಿ ಜೊಲ್ಲು ಸುರಿಸಿದಂತೆ) ಈ ಸಂತೋಷವನ್ನು ಆತನಿಂದ ಕಿತ್ತುಕೊಂಡರೆ, ಆಗ ಆತ ಈ ಹಿಂಸೆಯನ್ನು ಪೂರ್ಣ ಬಿಟ್ಟುಬಿಡುತ್ತಾನೆಯೇ? ( ನಾಯಿ ಮಾಂಸ ತಿನ್ನುವುದನ್ನು ಬಿಟ್ಟಂತೆ ಅಲ್ಲ, ತೆನಾಲಿ ರಾಮನ ಬೆಕ್ಕುಹಾಲು ಕುಡಿಯುವುದನ್ನು ಬಿಟ್ಟಂತೆ)
* * *

ಆತನ ಹೆಸರು ಅಲೆಕ್ಸ್.
ಆತನಿಗೆ ಹಿಂಸೆಯೆಂಬುದು ಒಂದು ಆಟ, ಚಟ, ಕಲೆ. ಆತ ಹಾಲಿನಲ್ಲಿ ಹ್ಯಾಲಿಸಿನೋಜನ್ನುಗಳನ್ನು ಸೇರಿಸಿಕೊಂಡು ಕುಡಿಯುತ್ತಾನೆ, (ಇಲ್ಲಿನ ವಿಪರ್ಯಾಸವನ್ನು ಗಮನಿಸಿ. ಹಾಲು ಮುಗ್ಧತೆಯನ್ನು ಸಂಕೇತಿಸಿದರೆ, ಅದಕ್ಕೆ ಬೆರಸುವ ಮಾದಕವಸ್ತುಗಳ ಮಿಶ್ರಣ ಕಲುಶಿತ ಮುಗ್ಧತೆಯಾ?) ಲೈಬ್ರರಿಯಿಂದ ತಂಪಾಡಿಗೆ ತಾನು ಬರುತ್ತಿದ್ದ ಒಬ್ಬ ಮುದುಕನನ್ನು ಸ್ನೇಹಿತರ ಜತೆ ಸೇರಿ ಸಾಯಬಡಿಯುತ್ತಾನೆ. ಅಪ್ರಾಪ್ತ ವಯಸ್ಸಿನ ಹುಡುಗಿಯರ ಜತೆ ಸುಖಿಸುತ್ತಾನೆ, ಅಂಗಡಿಗೆ ಹೋಗಿ ಕದಿಯುತ್ತಾನೆ, ಮುದಿದಂಪತಿಗಳೆಂದು ಲವಲೇಶ ಕರುಣೆಯಿಲ್ಲದೆ ಸಾಯಬಡಿಯುತ್ತಾನೆ.
ಇವನಿಗೆ ತನ್ನ ಈ ಹಿಂಸೆಯ ಬಗ್ಗೆ ಸ್ವಲ್ಪವೂ ಪಾಪಪ್ರಜ್ಞೆಯಿಲ್ಲ. ಹಿಂಸಿಸುವುದನ್ನು ತನ್ನ ಧರ್ಮದಂತೆ ಆತ ನಡೆಸಿಕೊಂಡು ಬರುತ್ತಾನೆ. ಇದರಿಂದ ಯಾರು ಸತ್ತರೂ ಅವರನ್ನು ಈತನೇ ಸಾಯುವಂತೆ ಹೊಡೆದರೂ ಆತನಿಗೆ ಏನೂ ಅನ್ನಿಸುವುದೇ ಇಲ್ಲ. ಬದಲಿಗೆ ಒಂದು ವಿಲಕ್ಷಣ ಖುಷಿಯಾಗುತ್ತಿರುತ್ತದೆ.
ಇದಕ್ಕೆ ಕುಮ್ಮಕ್ಕು ಕೊಡುವುದಕ್ಕೆ ಅವನದೇ ಒಂದು ಗ್ಯಾಂಗಿದೆ. ವಿಚಿತ್ರವಾದ ಸ್ಲ್ಯಾಂಗುಗಳಲ್ಲಿ ಮಾತಾಡಿಕೊಂಡು, ಚಿತ್ರವಿಚಿತ್ರವಾದ ಬಟ್ಟೆಗಳನ್ನು ಹಾಕಿಕೊಂಡು, ತಮ್ಮ ಮನಸ್ಸಿಗೆ ನೇರವಾಗಿ ಅನಿಸುವುದನ್ನು ಮಾತ್ರ ಮಾಡುತ್ತಾ ರಾಕ್ಷಸರಂತೆ ತಾವು ಬದುಕುತ್ತಿದ್ದಾರೆ.
ವಿರೋಧಬಾಸವೋ, ಹುಚ್ಚೋ, ಅಥವಾ ಕಥಾನುಕೂಲವೋ ಗೊತ್ತಿಲ್ಲ, ಇಂಥವನಿಗೆ ಶಾಸ್ತ್ರೀಯ ಸಂಗೀತ ಅದರಲ್ಲಿಯೂ ಬೀಥೋವೆನ್ನಿನ ‘ಸೆವೆಂಥ್ ಹೆವೆನ್’ ಎಂದರೆ ಪ್ರಾಣ. ಯಾವಾಗಲೂ ಬೀಥೋವೆನ್ನಿನ ಸಂಗೀತವನ್ನು ಕೇಳುತ್ತಿರುತ್ತಾನೆ,
ಇನ್ನಷ್ಟು
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು