ಮಣಿಕಾಂತ್ ಬರೆದಿದ್ದಾರೆ: ಹಾಡು ಬರೀತೀನಿ, ಹಾಡಲು ಬರಲ್ಲ…

6213_1079515355773_1462958320_30205965_5660699_n11ಎ ಆರ್ ಮಣಿಕಾಂತ್

ಚಿತ್ರ: ಪರಮೇಶಿ ಪ್ರೇಮ ಪ್ರಸಂಗ. ಗೀತೆರಚನೆ: ಎಂ.ಎನ್. ವ್ಯಾಸರಾವ್.

ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಎಸ್ಪೀಬಿ-ಎಸ್. ಜಾನಕಿ.

ಉಪ್ಪಿಲ್ಲ ಮೆಣಸಿಲ್ಲ, ತರಕಾರಿ ಏನಿಲ್ಲ

ಎಣ್ಣಿಲ್ಲ ಬೆಣ್ಣಿಲ್ಲ, ಕಾಯನ್ನು ತಂದಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ ||ಪ||

ಉಪ್ಪಿಲ್ಲ ಇಂಗಿಲ್ಲ, ಕರಿಬೇವು ಸೊಪ್ಪಿಲ್ಲ

ಸೊಪ್ಪಿಲ್ಲ, ಮೆಂತ್ಯವಿಲ್ಲ, ದಾಲ್ಚಿನ್ನಿ ಚೂರಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ

ಹೇಳಮ್ಮ ಏನ್ಮಾಡಲೀ, ಸುತ್ತೂರ ಸಿಂಗಾರಿ ಸುರಸುಂದರೀ ||ಅ.ಪ||

`ರಮಾಮಣಿ, ಎಲ್ಲೆಲ್ಲಿ ಏನೇನಿದೆ ಅಂತ ಸ್ವಲ್ಪ ಹೇಳೆ

ನನ್ನ ಕೈಗೆ ಏನೂ ಸಿಕ್ತಾ ಇಲ್ವಲ್ಲೆ?’

`ನಾಕನೆ ಸಾಲಲ್ಲಿ ಜೀರಿಗೆ ಡಬ್ಬ, ಮೂರ್ನೇ ಸಾಲಲ್ಲಿ ಸಾಸ್ವೆ ಡಬ್ಬ

ಅಲ್ಲಿ ನೋಡಪ್ಪ, ಮುಂಚೆ ಬೇಳೆ ಹಾಕಪ್ಪ’

`ಏನೇನೇನೇನೂ ಏನೂ?’

`ಅಯ್ಯೋ, ಮುಂಚೆ ಬೇಳೆ ಹಾಕ್ರಿ’

`ಬೇಳೆ ಇಲ್ಲಿದೆಯಾ?’

`ಅದ್ರಲ್ಲಿ ಹುಳ ಇದೆ, ಸ್ವಲ್ಪ ಆರಿಸಿ ಹಾಕ್ರಿ’

`ಬರೀ ಆಲೂಗೆಡ್ಡೆ ಈರುಳ್ಳಿ ಇದೆ, ಸಾಕೇನೆ?’

`ಅಯ್ಯೋ, ಕೈಗೆ ಸಿಕ್ಕಿದ್ದು ಹಾಕಿ, ಏನೋ ಒಂದು ಮಾಡ್ರಿ’

ನೀರು ಕುದೀತಾ ಇದೆ, ಬೇಗ ನೀರು ಹಾಕ್ರಿ

ಹಾಗೇ ಒಗ್ಗರಣೇನೂ ಹಾಕ್ಕೊಳ್ರೀ  ||1||

`ಮೈಮುಟ್ಟದಂತೆ ನೀನಲ್ಲಿ ಕೂತೆ

ಪ್ರಾರಬ್ಧ ನಾನೇ ಕೈ ಹೆಚ್ಚಿಕೊಂಡೆ’

`ಬಳಿಯಿದ್ದರೇನು, ಬರಲಾರೆ ನಾನು

ಮನಸೆಲ್ಲಾ ಅಲ್ಲೇ, ಮನದಾಸೆ ಬಲ್ಲೆ’

`ರಗ್ಗಿಲ್ಲ ದಿಂಬಿಲ್ಲ, ಜತೆಯಲ್ಲಿ ನೀನಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ’

ಹೇಳಮ್ಮ ಏನ್ಮಾಡಲೀ, ಸುತ್ತೂರ ಸಿಂಗಾರಿ ಸುರಸುಂದರೀ ||2||

`ಸ್ನಾನಕ್ಕೆ ಮುಂಚೆ ಕಾಡದಂತೆ, ಕದ್ದು ಹೊಂಚು ಹಾಕದಂತೆ

ನೀರು ಹಾಕಪ್ಪ, ಸೀರೆ ಟವೆಲ್ಲು ನೀಡಪ್ಪ’

`ಮೈ ಮಂಚ ಕಾದು ಬೆಂಡಾಗಿ ಹೋದೆ

ಮೈ ತುಂಬಿ ಬಂದು ಆರೈಕೆ ಮಾಡೆ’

`ಹುಸಿ ಕೋಪ ತಳ್ಳಿ, ಸಂತೋಷ ತಾಳಿ

ಸಿಹಿ ಮಾತನಾಡಿ, ಆಫೀಸ್ಗೆ ಹೋಗಿ’

`ತೋಳನ್ನು ಬಳಸಿಲ್ಲ, ಸಿಹಿಮುತ್ತು ಕೊಟ್ಟಿಲ್ಲ

ಏನ್ಮಾಡಲಿ, ನಾನು ಏನ್ಮಾಡಲಿ?’

`ಹೋಗಪ್ಪ ಆಫೀಸಿಗೇ, ಪುಟ್ನಾಳ ಪರಮೇಶಿ ಬಸ್ಸ್ಟಾಪಿಗೇ

ಪುಟ್ನಾಳ ಪರಮೇಶಿ ಬಸ್ಸ್ಟಾಪಿಗೇ’ ||3||

Ramesh_Bhat_300

ಹೆಂಡತಿ `ತಿಂಗಳ ರಜೆ’ಯ ಸಂಕಟದಲ್ಲಿ ಇರ್ತಾಳೆ. ಅಂಥ ಸಂದರ್ಭದಲ್ಲಿ ಗಂಡ ಅನ್ನೋ ಮಹರಾಯ ಅಡುಗೆ ಮನೆಗೆ ಬರ್ತಾನೆ. ಅದೂ ಹೇಗೆ ಅಂತೀರ? `ತಿಂಡಿ ಮಾಡಬೇಕು ತಾನೆ? ಮಾಡ್ತೀನಿ ಬಿಡೆ. ಅದೆಲ್ಲಾ ನನಗೆ ಗೊತ್ತಿಲ್ಲ ಅನ್ಕೊಂಡಿದೀಯ? ಬಿಸಿಬೇಳೆ ಬಾತನ್ನೇ ಮಾಡ್ತೀನಿ. ನೋಡ್ತಾ ಇರು…’ ಹೀಗೆಂದು ಬಡಾಯಿ ಕೊಚ್ಚಿಕೊಂಡೇ ಅಡುಗೆ ಮನೆಗೆ ನುಗ್ಗುವ ಗಂಡನಿಗೆ, ಯಾವ್ಯಾವ ಪದಾರ್ಥ ಎಲ್ಲೆಲ್ಲಿದೆ? ಹೇಗಿದೆ ಎಂಬುದೇ ಗೊತ್ತಾಗುವುದಿಲ್ಲ. ಬೇಗ ತಿಂಡಿ ತಯಾರಿಸಿ, ಹೆಂಡತಿಗೆ ಸ್ನಾನಕ್ಕೆ ಬಿಸಿನೀರು ಹಾಕಿ, ತಾನೂ ಸ್ನಾನ ಮುಗಿಸಿ, ತಿಂಡಿ ತಿಂದು, ಬಟ್ಟೆ ಇಸ್ತ್ರಿ ಮಾಡಿಕೊಂಡು ಬೇಗನೆ ಮನೆಬಿಟ್ಟು, ಬಸ್ ಹಿಡಿದು, ಆಫೀಸಿಗೆ ಹೊರಡಬೇಕು ಎಂದುಕೊಂಡು ಅಡುಗೆ ಮನೆಗೆ ಬಂದವನು- ಯಾವ ಪದಾರ್ಥವೂ ಕೈಗೆ ಸಿಗದೆ ಹೋದಾಗ `ಉಪ್ಪಿಲ್ಲ, ಮೆಣಸಿಲ್ಲ, ತರಕಾರಿ ಏನಿಲ್ಲ…’ ಎಂದು ಹಾಡಲು ಶುರುಮಾಡುತ್ತಾನೆ. ಹೀಗೆ ಹಾಡುತ್ತ, ಅಡುಗೆ ಮನೆಯಲ್ಲಿ ಮಾತ್ರವಲ್ಲ `ಹೆಂಡತಿಯ ಮೂರು ದಿನದ ರಜೆಯಿಂದ’ ತನ್ನ ನಿತ್ಯದ ರೂಟೀನ್ನಲ್ಲಿ ಆಗಿರುವ ಫಜೀತಿಗಳನ್ನೂ ಹೇಳಿಕೊಳ್ಳುತ್ತಾನೆ.

ಶಂಕರ್ನಾಗ್ ಅವರ-ಚಿತ್ರಕಥೆ, ರಮೇಶ್ ಭಟ್ ನಿದರ್ೇಶನದ `ಪರಮೇಶಿ ಪ್ರೇಮ ಪ್ರಸಂಗ’ ಸಿನಿಮಾ ನೋಡಿದವರಿಗೆಲ್ಲ ಈ ದೃಶ್ಯ ನೆನಪಿರುತ್ತದೆ. ಒಂದು ರೀತಿಯಲ್ಲಿ ಮನೆಮನೆಯ ಕಥೆಯಂತಿರುವ; ಎಲ್ಲ ಗಂಡಂದಿರ ಖಾಸ್ಬಾತ್ನಂತಿರುವ ಈ ಹಾಡು ಬರೆದವರು ಎಂ.ಎನ್. ವ್ಯಾಸರಾವ್. `ಸರ್, ಈ ಹಾಡನ್ನು ಎಲ್ಲಿ ಬರೆದಿರಿ? ಹೇಗೆ ಬರೆದಿರಿ? ಎಷ್ಟು ದಿನದಲ್ಲಿ ಬರೆದಿರಿ? ಸ್ವಂತ ಅನುಭವವನ್ನೇ ಹಾಡಾಗಿಸಿದ್ದೀರೋ ಹೇಗೆ?’ ಎಂದು ಕೇಳಿದರೆ- `ಅಯ್ಯೋ, ಅದೊಂದು ದೊಡ್ಡ ಕಥೆ’ ಎಂದು ವ್ಯಾಸರಾವ್ ಆರಂಭಿಸಿಯೇಬಿಟ್ಟರು. ಮುಂದಿನದನ್ನು ಅವರ ಮಾತಲ್ಲೇ ಕೇಳೋಣವಾಗಲಿ:

ಇನ್ನಷ್ಟು

ಗುಹಾಶೋಧದ ಸರಣಿ ಮುಗಿಸಿದ್ದೇನೆ

ಪ್ರಿಯರೇ

gview (1)

ಗುಹೆಯ ನೆನಪಿನೊಡನೆ ‘ಹಳಸಿಹೋಗುತ್ತಿದ್ದೀರಿ’ ಎಂದು ಎಚ್ಚರಿಸಿದ ಮಿತ್ರರಿಗೆ ಅಭಾರಿ. ತೊಡಗಿದ ಮೇಲೆ ಒಂದು ತಾರ್ಕಿಕ ಕೊನೆ ಕಾಣಬೇಕಲ್ಲ ಎಂದು ಇಲ್ಲಿ ಕೌಂಡಿಕಾನದ ಕಥೆಯೊಡನೆ ನಿಜಕ್ಕೂ ಒಂದು ಘಟ್ಟದ ಗುಹಾಶೋಧದ ಸರಣಿ ಮುಗಿಸಿದ್ದೇನೆ. ನಾನು ಪತ್ನೀವ್ರತಸ್ಥ, ಸಸ್ಯಾಹಾರಿ. ಆದರೂ ನಿಮ್ಮ ಪ್ರತಿಕ್ರಿಯೆ ಎಂಬ ವಿಟ+ಮೀನು ಇಲ್ಲದೆ ಸೊರಗಿದ್ದೇನೆ. ದಯವಿಟ್ಟು ಗಮನಿಸಿ, ನನಗೆ ಬಿರುದು ಬಾವಲಿ, ಹೊಗಳಿಕೆ ಬೇಡ. ನಿಮ್ಮ ಜೀವನಾನುಭವದಲ್ಲಿ ನನ್ನೀ ಅನುಭವಗಳಿಗೆ ಇರಬಹುದಾದ ಸಮ-ಅನುಭವಗಳನ್ನು, ಪೂರ‍ಕ ಟಿಪ್ಪಣಿಗಳನ್ನು, ತಿದ್ದುಪಡಿಗಳನ್ನು, ಒಟ್ಟು ಪ್ರಸಂಗಗಳ ವಿಮರ್ಶೆಯನ್ನು ಬಯಸುತ್ತಿದ್ದೇನೆ. ಧಾರಾಳಿಗಲಾಗ್ತೀರಲ್ಲಾ?

ಇಂತು ವಿಶ್ವಾಸಿ
ಅಶೋಕವರ್ಧ

%d bloggers like this: