ಅಪಾರನ ಕಡಲ ತಡಿಯ ಗುಡಾರ

ಅಪಾರ ಮತ್ತೊಂದು ವಾಹ್ !ಎನ್ನಿಸುವ ಮುಖಪುಟ ರೂಪಿಸಿದ್ದಾರೆ.

ಅದರ ಇನ್ನಷ್ಟು ವಿವರಗಳಿಗೆ- ಅಪಾರ

front

ಪಕ್ಕಾ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಹಾಗೆ..

media_mirchi_cartoon_7

ಈಟಿವಿ ಬೆಂಗಳೂರು ಮುಖ್ಯಸ್ಥ, ಗೆಳೆಯ ರಂಗನಾಥ ಮರಕಿಣಿ ನನಗೆ ಫೋನ್ ಮಾಡಿದಾಗ ರಾತ್ರಿ 11 ಗಂಟೆ. ಸಾರ್ ಇನ್ನರ್ಧ ಗಂಟೆಯೊಳಗೆ ಮೈಸೂರಿನಲ್ಲಿ ಒಂದು ಎನ್ಕೌಂಟರ್ ನಡೆಯುತ್ತೆ, ನಮ್ಮ ಟೀಂನ ಅಲರ್ಟ್ ಮಾಡಿ ಅಂದ. ಅರೆ! ಇನ್ನರ್ಧ ಗಂಟೆಯೊಳಗೆ ಎನ್ಕೌಂಟರ್ ಆಗುತ್ತದೆ ಎನ್ನುವುದು ಗೊತ್ತಾಗುವುದಾದರೂ ಹೇಗೆ? ಅದು ಇನ್ನರ್ಧ ಗಂಟೆಯಲ್ಲಿ ಈ ರೋಡಿನಲ್ಲಿ ಆಕ್ಸಿಡೆಂಟ್ ಆಗಿ ನಾಲ್ಕು ಜನ ಸಾಯುತ್ತಾರೆ ಅಂತ ಹೇಳೋ ಥರಾನೇ. ಯಾವ ಜ್ಯೋತಿಷಿ ಎಷ್ಟೇ ಕವಡೆ ಹಾಕಿದರೂ ಇಂತಹ ನಿಚ್ಚಳ ಭವಿಷ್ಯ ಹೇಳಲು ಸಾಧ್ಯವೇ ಇಲ್ಲ. ಆದರೂ ಇದು ‘ನ್ಯೂಸ್’ ವಿಷಯ. ರಿಸ್ಕ್ ತೆಗೆದುಕೊಳ್ಳುವಂತಿಲ್ಲ. ನಿಂಗೆ ಹೇಗೆ ಗೊತ್ತಾಯ್ತು..? ಅಂತ ಕೇಳುವುದು ನ್ಯೂಸ್ ಬಿಸಿನಸ್ ನಲ್ಲಿ ಮೊದಲ ಮೂರ್ಖತನ. ಹಾಗಾಗಿ ಮೈಸೂರಿನಲ್ಲಿದ್ದ ರಮೇಶ್ ಪೆರ್ಲ ಟೀಂಗೆ ರೆಡಿ ಇರಲು ಹೇಳಿದೆ. ವರದಿಗಾರ, ಕ್ಯಾಮರಾಮನ್, ಟೆಕ್ನೀಶಿಯನ್ ಎಲ್ಲರೂ ‘ಆನ್ ದಿ ಟೋಸ್’ ಇದ್ದರು. ಮರಕಿಣಿ ಮತ್ತೆ ಫೋನ್ ಮಾಡಿದಾಗ 11.45 . ಈಗ ನಮ್ಮ ಟೀಂ ರಿಂಗ್ ರೋಡಿಗೆ ಹೋಗಲಿ, ಅಲ್ಲಿ ಎನ್ಕೌಂಟರ್ ಆಗುತ್ತೆ ಅಂದ. ಆಶ್ಟರ್ಯ, ಆದರೂ ನಿಜ. ಲಷ್ಕರ್ ಎ ತೊಯಿಬಾ ತಂಡದೊಂದಿಗೆ ಗುಂಡಿನ ಚಕಮಕಿ ನಡೆದು ಶಂಕಿತ ಉಗ್ರಗಾಮಿಗಳು ಬಂಧಿಸಲ್ಪಟ್ಟರು. ಮರುಕ್ಷಣ ಈಟಿವಿಯ ನ್ಯೂಸ್ ಈ ಎಕ್ಸ್ಕ್ಲುಸಿವ್ ಸುದ್ದಿಯನ್ನು ದೊಡ್ಡ ದನಿಯಲ್ಲಿ ಬಿತ್ತರಿಸುತ್ತಿತ್ತು.

ಮೊನ್ನೆ ಗೆಳೆಯರೊಬ್ಬರಿಗೆ ಬೇಕಾಗಿದ್ದ ಪುಸ್ತಕ ಹುಡುಕಲು ನನ್ನ ಮಾಧ್ಯಮ ಪುಸ್ತಕ ಸಂಗ್ರಹಕ್ಕೆ ಕೈಹಾಕಿದೆ. ನೂರೆಂಟು ಕಟ್ಟುಗಳನ್ನು ಹುಡುಕುತ್ತಿದ್ದಾಗ ಕೈಗೆ ತಾಕಿದ್ದು ವೈ ಎನ್ ಕೆ ಅವರ ‘ಇದು ಸುದ್ದಿ ಇದು ಸುದ್ದಿ’. ಓದಿದಾಗ ಕಾಲಕೋಶದಲ್ಲಿ ಕೂತು ಬಟನ್ ಒತ್ತಿ ಸುಂಯ್ಯನೆ ಮೂರು ದಶಕ ಹಿಂದಕ್ಕೆ ಸರಿದಂತಾಯಿತು. ಹೌದಲ್ಲಾ?.. ಸುದ್ದಿ ಎಷ್ಟೊಂದು ಬದಲಾಗಿ ಹೋಗಿದೆ ಎನಿಸಿತು.

ಮೈಸೂರಿನ ಸುದ್ದಿಗೆ ನಾವು ಕೊಟ್ಟ ಬಣ್ಣ ಎಷ್ಟು ..ನಮಗೆ ಹೇಗೆ ಫೋನ್ ಕರೆ ಬಂತು? ಹೇಳಿದ್ದೇನು? ನಂತರ ನಮ್ಮ ಟೀಂ ರೆಡಿ ಮಾಡಿದ್ದು ಹೇಗೆ? ಅವರು ಹೇಳಿದ ಜಾಗ ಹೇಗೆ ತಲುಪಿಕೊಂಡರು? ಎನ್ಕೌಂಟರ್ ಜಾಗ, ಅಲ್ಲಿದ್ದ ಗುಂಡು, ಶಸ್ತ್ರಾಸ್ತ್ರ, ಪೋಲೀಸ್ ಜೀಪ್ ಗಳ ಸದ್ದು, ಕೆಂಪುದೀಪ .. ಪಕ್ಕಾ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಹಾಗೆ. ಬಯಸಿದ್ದು ಸಿಕ್ಕಿಹೋಗಿತ್ತು. ಅಂದಿನ ಟಿ ಆರ್ ಪಿ ಸರ್ರನೇ ಮೇಲೇರಿತ್ತು.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

ಲಿಂಬೆ ಹಿಚುಕಿದಾಗ

29 Aug 2

%d bloggers like this: