`ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು…

a6ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನಿ ಅಷ್ಟೇ ಅಲ್ಲ, ವಿಜ್ಞಾನ ಬರಹಗಾರ ಕೂಡ. ನಾಗೇಶ ಹೆಗಡೆ ಅವರ ಸಹವಾಸಕ್ಕೆ ಸಿಕ್ಕವರು ಬರಹಗಾರರಾಗದೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕೆ ಎನ್ ಗಣೇಶಯ್ಯ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಇಬ್ಬರೂ ಹಾಗೆ ಕನ್ನಡ ಬರವಣಿಗೆಯಲ್ಲಿ ಹೊಸ ಎತ್ತರ ಕಂಡವರು. ಕರಿಸಿರಿಯಾನವನ್ನ್ನು ಹಾಲ್ದೊಡ್ಡೇರಿ ಸುಧೀಂದ್ರ ಇಲ್ಲಿ ಒರೆಗೆ ಹಚ್ಚಿ ನೋಡಿದ್ದಾರೆ. ಗಣೇಶಯ್ಯ ಎಂಬ ಬರಹ ಆಯಸ್ಕಾಂತದ ಬಗ್ಗೆ ಮಾತನಾಡಿದ್ದಾರೆ. ಪುಸ್ತಕ ಬಿಡುಗಡೆಗೆ ಮಾಡಿಕೊಂಡಿದ್ದ ಟಿಪ್ಪಣಿ ಇಲ್ಲಿ ನೀಡುತ್ತಿದ್ದೇವೆ.

ಸಿರಿ ಹುಡುಕುವ ಯಾನದಲ್ಲಿ ಕರಿಯ ಮೇಲೆ ಕುಳಿತುಕೊಂಡು …..

– ಸುಧೀಂದ್ರ ಹಾಲ್ದೊಡ್ಡೇರಿ

ಕೆಲವೊಂದು ಲೇಖಕರು ಕುತೂಹಲ ಹುಟ್ಟಿಸುತ್ತಾರೆ, ಮತ್ತೆ ಕೆಲವರು ಇಷ್ಟವಾಗುತ್ತಾರೆ, ಹಾಗೆಯೇ ಆಪ್ತರಾಗುತ್ತಾರೆ. ಕೆಲವರಂತೂ ಎಡೆಬಿಡದೆ ಕಾಡತೊಡಗುತ್ತಾರೆ. ಒಂದಷ್ಟು ಜನ ನಮ್ಮೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. `ಕರಿಸಿರಿಯಾನ’ ಓದುವಷ್ಟರಲ್ಲಿ ಈ ಗಣೇಶಯ್ಯನವರು ನನ್ನನ್ನು ಇಡಿಯಾಗಿ ಆವರಿಸಿಬಿಟ್ಟಿದ್ದರು. ಎಷ್ಟರ ಮಟ್ಟಿಗೆಂದರೆ ನಿನ್ನೆ ಕಚೇರಿಯಿಂದ ಹಿಂದಿರುಗಿ ಬರುವ ರಾತ್ರಿ ಪುಸ್ತಕದ ಕೊನೆಯ ಇಪ್ಪತ್ತು ಪುಟಗಳನ್ನು ಓದುತ್ತಿದ್ದೆ. ವಿಜಯನಗರದ ಅರಸರು ಹುದುಗಿಸಿಟ್ಟಿದ್ದ ನಿಧಿ ಕಾದಂಬರಿಯ ಪೂಜಾ-ಭಾವನಾರ ಕಣ್ಣಿಗೆ ಬಿದ್ದು ಮುಂದೆ ಅದು ಸಕರ್ಾರದ ಖಜಾನೆಯನ್ನು ತುಂಬುತ್ತದೆಂಬ ನನ್ನ ನಿರೀಕ್ಷೆ ಸುಳ್ಳಾಗಿತ್ತು. ಕತೆಯನ್ನು ದಿಢೀರೆಂದು ನಿಲ್ಲಿಸಿಬಿಟ್ಟರಲ್ಲ ಎಂದು ಗಣೇಶಯ್ಯನವರನ್ನು ಶಪಿಸುತ್ತಲೇ ಬಸ್ಸಿನಿಂದಿಳಿದೆ. ಪುಣ್ಯಕ್ಕೆ ಅದು ವಿಜಯನಗರವಾಗಿರಲಿಲ್ಲ, ಜಯನಗರವೇ ಆಗಿತ್ತು. ಮಾರತ್ಹಳ್ಳಿಯಿಂದ ಹೊರಟಿದ್ದ ಆ ವೋಲ್ವೊ ಬಸ್ ನಾನಿಳಿಯಬೇಕಿದ್ದ `ರಾಗಿಗುಡ್ಡ’, ನಂತರದ ಮಾರೇನಹಳ್ಳಿಯನ್ನೂ ದಾಟಿ ಜಯನಗರ ಐದನೇ ಬ್ಲಾಕ್ ಬಸ್ ನಿಲ್ದಾಣವನ್ನು ಮುಟ್ಟಿತ್ತು. ಅಲ್ಲಿಯವರೆಗೂ ಸ್ಟೇಜ್ ಬದಲಾವಣೆ ಇರದಿದ್ದ ಕಾರಣ, ಕಂಡಕ್ಟರ್ನ ಬೈಗಳಿಂದ ಬಚಾವಾಗಿದ್ದೆ. ಮತ್ತೆ ಮುಕ್ಕಾಲು ಗಂಟೆ ಎಚ್ಚರ ತಪ್ಪಿದ್ದರೆ ಆ ಬಸ್ಸು ಬೆಂಗಳೂರಿನ ವಿಜಯನಗರಕ್ಕಂತೂ ನನ್ನನ್ನು ತಲುಪಿಸಿರುತ್ತಿತ್ತು.

kari1kari2

`ಸುಧಾ’ದಲ್ಲಿ `ಕನಕ ಮುಸುಕು’ ಧಾರಾವಾಹಿಯಾಗಿ ಪ್ರಕಟವಾಗುವಷ್ಟರಲ್ಲಿ ನಾನು ಧಾರಾವಾಹಿಗಳನ್ನು ಓದುವುದು ಬಿಟ್ಟಿದ್ದೆ. ಕಾರಣ, ವಾರದಿಂದ ವಾರಕ್ಕೆ ಕತೆಗಳ ಮುಂದುವರಿಕೆಯನ್ನು ನೆನಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಈ ವಾರದ ಭಾಗವನ್ನು ಓದುವಷ್ಟರಲ್ಲಿ ಕಳೆದ ವಾರ ಏನಾಗಿತ್ತು? ಎಂಬ ಸಂಪರ್ಕ ಕೊಂಡಿ ಕಳಚಿ ಹೋಗಿರುತ್ತಿತ್ತು. ಪ್ರೌಢಶಾಲೆ/ಕಾಲೇಜು ವಿಧ್ಯಾಥರ್ಿಯಾಗಿದ್ದ ಕಾಲದಲ್ಲಿ `ಸುಧಾ’ದಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳು ನಮ್ಮಲ್ಲಿ ಚಚರ್ೆಯ ವಿಷಯಗಳಾಗಿದ್ದವು. ಟಿ.ಕೆ.ರಾಮರಾವ್, ಡಾ||ದೊಡ್ಡೇರಿ ವೆಂಕಟಗಿರಿರಾವ್ ಅವರ ಕಾದಂಬರಿಗಳು ಪ್ರಕಟವಾಗುತ್ತಿದ್ದ ಕಾಲದಲ್ಲಿ `ಸುಧಾ’ ಪತ್ರಿಕೆಗಾಗಿ ಅರ್ಧ ಗಂಟೆ ಮೊದಲೇ ಎದ್ದು ಕಾಯುತ್ತಿದ್ದುದು ನೆನಪಿದೆ. ಟೀವಿ/ಇಂಟರ್ನೆಟ್ಗಳಿಲ್ಲದಿದ್ದ ಆ ದಿನಗಳಲ್ಲಿ ಚಿತ್ರಮಂದಿರಗಳ ಸಿನಿಮಾ ವೀಕ್ಷಣೆ ಬಿಟ್ಟರೆ ವಾರಪತ್ರಿಕೆಗಳ ಧಾರಾವಾಹಿಗಳು ರೋಮಾಂಚನ ಹುಟ್ಟಿಸುತ್ತಿದ್ದವು.

ಕಾದಂಬರಿಯ ಶೀಷರ್ಿಕೆಗೊ, ಅದನ್ನು ಬರೆದವರ ಹೆಸರನ್ನು ಮೊದಲ ಬಾರಿ ಕೇಳುತ್ತಿದ್ದರಿಂದಲೊ, ಅಥವಾ ಮೊದಲ ಕಂತಿನಲ್ಲೇ ಲೇಖಕರು ಒದಗಿಸಿದ್ದ ಚಿತ್ರಗಳು, ಕ್ಲಿಷ್ಟ ಬಂಧಗಳು, ಆಕರ ಮಾಹಿತಿಯ ವಿವರಗಳಿಂದಲೊ …. `ಕನಕ ಮುಸುಕು’ ನನ್ನನ್ನು ಸೆಳೆದಿತ್ತು. ಮತ್ತೆ ಧಾರಾವಾಹಿ ಓದಿಗೆ ಅಂಟಿಕೊಳ್ಳುವಂತೆ ಮಾಡಿತು. ಮಿದುಳಿಗೆ ಸಾಕಷ್ಟು ಕೆಲಸ ಕೊಡುತ್ತಿದ್ದ ಆ ಕತೆಯ ಮುಂದಿನ ಕಂತಿಗೆ ಕಾಯುವಂತೆ ಮಾಡಿತು. ಕತೆ ಮುಗಿದಂತೆ ಅದನ್ನು ರಚಿಸಲು ಗಣೇಶಯ್ಯನವರು ಏನೆಲ್ಲಾ ತಯಾರಿ ಮಾಡಿಕೊಳ್ಳಬಹುದು? ಅದೆಷ್ಟು ಹೊಸ ವಿಷಯಗಳನ್ನು ಅಥರ್ೆಸಿಕೊಂಡಿರಬಹುದು? ಎಂದು ಅಚ್ಚರಿ ಪಟ್ಟಿದ್ದೆ. ಈ ಬಗೆಯ ಪೂರ್ವಸಿದ್ಧತೆಗಳನ್ನು ಎಸ್.ಎಲ್.ಭೈರಪ್ಪನವರು ಮಾಡುತ್ತಾರೆಂದು ಕೇಳಿದ್ದೆ.

`ಕನಕ ಮುಸುಕು’ ಕೃತಿಯ ನಂತರ ಗಣೇಶಯ್ಯನವರನ್ನು ಮರೆಯೋಣವೆಂದರೆ ಅವರೆಲ್ಲಿ ಬಿಡುತ್ತಾರೆ? `ಶಾಲಭಂಜಿಕೆ’ ಬಂತು, `ಕಪಿಲಿಪಿಸಾರ’ ಬಂತು, `ಪದ್ಮಪಾಣಿ’ಯೂ ಬಂತು, ಕೊನೆಗೆ `ಕರಿಸಿರಿಯಾನವೂ’ ಬಂದಿದೆ. ಇದೀಗ `ಚಿತಾದಂತ’ ಧಾರಾವಾಹಿಯಾಗಿ ಕಾಡುತ್ತಿದೆ. ಗಣೇಶಯ್ಯನವರು ನಮ್ಮನ್ನು ಕಾಡುತ್ತಾರೆಂದು ಮತ್ತೆ ಮತ್ತೆ ಆರೋಪಿಸಲು ನನ್ನಲ್ಲಿ ಬಲವಾದ ಕಾರಣವಿದೆ. ಅವರ ಕಾದಂಬರಿಗಳು ಕೇವಲ ಸಮಯ ಕಳೆಯಲಷ್ಟೇ ಅಲ್ಲ, ಮತ್ತಷ್ಟು ಓದಲು ಪ್ರೇರೇಪಿಸುತ್ತವೆ. ಆಪ್ತರೊಂದಿಗೆ ಚಚರ್ೆ ಮಾಡಲು ನಮ್ಮನ್ನು ದೂಡುತ್ತವೆ. ಕತೆಯ ಅಂತ್ಯಕ್ಕೆ ಹೀಗೂ ಒಂದು ಸಾಧ್ಯತೆ ಇತ್ತೆ? ಎಂದು ಚಿಂತಿಸುವಂತೆ ಮಾಡುತ್ತವೆ.

ಗಣೇಶಯ್ಯನವರ ಕತೆಯ ಹೆಚ್ಚುಗಾರಿಕೆಯೇನು? ಎಂದು ಪಟ್ಟಿ ಮಾಡಲು ಹೊರಟರೆ ನನಗೆ ಗೋಚರಿಸುವ ಮೊದಲ ವೈಶಿಷ್ಟ್ಯ ಸ್ಥಳ ವಿವರಣೆ. ತಿರುಪತಿ ಕ್ಷೇತ್ರವನ್ನು ನಾನು ಇದುವರೆಗೂ ನೋಡಿಲ್ಲ. ಗಣೇಶಯ್ಯನವರ ಕತೆಯ ಒಂದು ಪಾತ್ರಧಾರಿಯಂತೆ ನನಗೂ ಕ್ಯೂಗಳಲ್ಲಿ ಗಂಟೆ ಗಟ್ಟಲೆ ನಿಂತು, ವಿಶೇಷ ದರ್ಶನಕ್ಕೆ ವಶೀಲಿ ಪತ್ರಗಳನ್ನು ಹಿಡಿದೊಯ್ಯುವ ರೇಜಿಗೆ ಹಿಡಿಸುವುದಿಲ್ಲ. ಆದರೆ ಪುಸ್ತಕ ಓದಿದ ನಂತರ ವಿಜಯನಗರ-ತಿರುಪತಿಗಿದ್ದ ವಿಶೇಷ ನೆಂಟಿನ ಪರಿಚಯದೊಂದಿಗೆ, ತಿರುಪತಿ-ಪೆನುಕೊಂಡ ಕ್ಷೇತ್ರಗಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಿಗುತ್ತದೆ. ಆರ್.ಕೆ.ನಾರಾಯಣರು ಮಾಲ್ಗುಡಿಯನ್ನು ಪರಿಚಯಿಸುವಷ್ಟೇ ಸರಳವಾಗಿ ಗಣೇಶಯ್ಯನವರು ತಿರುಪತಿ ದರ್ಶನ ಮಾಡಿಸಿಬಿಡುತ್ತಾರೆ.

ಇನ್ನಷ್ಟು

%d bloggers like this: