ಚಲನಚಿತ್ರ ಪ್ರಶಸ್ತಿ- ಅಭಿನಂದನೆ

invitation chitrasamuha

ಹೋಗಿ, ಕಮೀನೆ ನೋಡಿಬನ್ನಿ

103_0355ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ತ ಕಲ್ಟ್‌ಗಾಗಿ ಧನ್ ಟ ಣಾ..

-ಗುರುಪ್ರಸಾದ ಕಾಗಿನೆಲೆ

ಸಮಶೀತೋಷ್ಣ

“ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ. ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ. ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್ ನಿಧಾನವಾಗಿ ಬಂದು “ಬ್ಲೂ ಥಂಡರ್” ಎನ್ನುತ್ತಾನೆ. ಆಕೆ, ಸುಮ್ಮನೆ ಮಾದಕವಾಗಿ ನಗುತ್ತಾಳೆ. ಆಗ ಗಾಳಿಯಲ್ಲಿ ಒಂದು ನೋಟು ಹಾರಿಕೊಂಡು ಬರುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋಗಿತ್ತಾನೆ. ನಿಧಾನವಾಗಿ ಆ ದೃಶ್ಯ ಇನ್ನೊಂದು ದೃಶ್ಯದೊಂದಿಗೆ ಲೀನವಾಗುತ್ತದೆ. ಅಲ್ಲಿ ಒಂದು ಟೆಲಿಫೋನು ಬೂತಿನಂತ ಡಬ್ಬದ ಮೇಲೆ “ಚಾರ್ಲೀಸ್ ಡ್ರೀಮ್ಸ್” ಎಂದು ಬರೆದಿದೆ. ಮೇಲಿಂದ ನಿಧಾನವಾಗಿ ದುಡ್ಡು ಮಳೆಯೋಪಾದಿಯಲ್ಲಿ ಕೆಳಗೆ ಬೀಳುತ್ತಿದೆ. ಚಾರ್ಲಿಯ ಕನಸು ಏನು ಎಂಬುದು ಆತನಿಗಲ್ಲ ನಮಗೂ ಸ್ಪಷ್ಟವಾಗಿದೆ.

film_roll

“ತೊದಲುವ ಶಾಹಿದ್ ಕಪೂರನಿಗೆ ಗೊತ್ತಿರುವ ರಹಸ್ಯ ಭ್ರಷ್ಟ ಪೋಲೀಸನೊಬ್ಬನಿಗೆ ಬೇಕಾಗಿದೆ. ಆದರೆ ಈ ಉಗ್ಗನಿಗೆ ಇಂಥ ಅತಂಕದ ಸನ್ನಿವೇಶಗಳಲ್ಲಿ ತೊದಲಾಟ ಇನ್ನೂ ಜಾಸ್ತಿಯಾಗುತ್ತದೆ. ಈ ಪೊಲೀಸನಿಗೆ ಇವನಿಂದ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳಲು ಸಮಯವಿರುವುದು ಮಾರನೆಯ ದಿನ ಎಂಟರ ತನಕ ಮಾತ್ರ. “ಇವನಿಗೆ ಹೀಗೇ ಬಿಟ್ಟರೆ ಇವನ ಹೆಸರು ಹೇಳುವುದಕ್ಕೇ ಬೆಳಿಗ್ಗೆ ಎಂಟರತನಕ ತಗೋತಾನಪ್ಪಾ” ಎಂದುಕೊಂಡು ಅವನ ಹತ್ತಿರ ಬಂದು “ಏಕ್ ಗಾನಾ ಗಾವ್” ಎಂದು ಹಾಡು ಹೇಳಲಿಕ್ಕೆ ಹೇಳುತ್ತಾನೆ. ಯಾಕೆಂದರೆ, ಹಾಡು ಹೇಳಬೇಕಾದರೆ ತೊದಲುವುದಿಲ್ಲವಲ್ಲಾ. ಈತ ತನಗೆ ಗೊತ್ತಿರುವ ರಹಸ್ಯವನ್ನು “ಕಬೀ ಕುಶಿ ಕಬೀ ಗಮ್” ರಾಗದ ಮೂಲಕ ಮೂಲಕ ಹೇಳಿ ಮುಗಿಸುತ್ತಾನೆ.

ವಿಶಾಲ ಭಾರದ್ವಾಜನ ಹೊಸ ಚಿತ್ರ ಕಮೀನೆ ಚಿತ್ರದ ಕೆಲವು ದೃಶ್ಯಗಳಿವು. ಸಿನೆಮಾ ಪ್ರಪಂಚದಲ್ಲಿ ಬಹಳ ವರ್ಷಗಳಿಗೊಮ್ಮೆ ನಟರ ಆಯ್ಕೆ, ನಟನೆ. ಚಿತ್ರಕಥೆ, ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಒಂದಕ್ಕೊಂದು ಪೂರಕವಾಗಿ ವ್ಯಾಪಾರಿ ಚೌಕಟ್ಟಿನೊಳಗೇ ಒಂದು ನೋಡಬಹುದಾದ ಚಿತ್ರ ತಯಾರಾಗುತ್ತದೆ. ಇಂಥ ಒಂದು ಚಿತ್ರ ಕಮೀನೆ.

ಶೇಕ್ಸ್‌ಪಿಯರನ ನಾಟಕಗಳಾದ ಮ್ಯಾಕ್‌ಬೆತ್ ಮತ್ತು ಒಥೆಲೊ ವನ್ನು ಸಿನೆಮಾದ ಸಮಕಾಲೀನಕ್ಕೆ ಅಳವಡಿಸಿ ಮಕ್‌ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ನಿರ್ದೇಶಿಸಿದ್ದ ವಿಶಾಲ್ ಭಾರದ್ವಾಜ್, ಮಕಡೀ ಮತ್ತು ಬ್ಲೂ ಅಂಬ್ರೆಲಾ ಎಂಬ ನವಿರು ನಿರೂಪಣೆಯ ಸಿನೆಮಾಗಳನ್ನು ನಿರ್ದೇಶಿಸಿದ್ದಾನೆ. ಈತನ ಪಕ್ಕಾ ವ್ಯಾಪಾರೀ ಸಾಹಸ ‘ಕಮೀನೆ’ ಕ್ವಿಂಟಿನ್ ಟರಂಟಿನೋ, ಗೈ ರಿಚೀಗಳ ಕಲ್ಟ್ ಸಿನೆಮಾಗಳ ಸಾಲಿಗೆ ಸೇರಬಹುದಾದ ಸಿನೆಮಾ. ಅತಿ ಬಿಗಿಯಾದ ಚಿತ್ರಕಥೆ, ನಿರೂಪಣೆಯಲ್ಲಿನ ಬಿಗಿ ಮತ್ತು ಪಾತ್ರಗಳಿಗೆ ಬೇಕಾದ ನಟರ ಆಯ್ಕೆ ಮತ್ತು ಆ ನಟರುಗಳಿಂದ ಸರಿಯಾದ ನಟನೆ ತೆಗೆಯುವುದರಲ್ಲಿ ವಿಶಾಲ್ ಭಾರದ್ವಾಜ್ ಯಶಸ್ವಿಯಾಗಿದ್ದಾನೆ. ಬಾಲಿವುಡ್ಡಿನ ಎಲ್ಲ ಬಾಯ್ ಮೀಟ್ಸ್ ಗರ್ಲ್ ಫಾರ್ಮುಲಾಗಳನ್ನು ಮುರಿದು, ಒಂದು ಬುದ್ಧಿವಂತ ಸಿನೆಮಾವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಮೂಲಕ ತನ್ನದೇ ಆದ ಒಂದು ಛಾಪನ್ನು ಅನ್ನು ಆತ ಬಾಲಿವುಡ್‌ನಲ್ಲಿ ಮೂಡಿಸಿದ್ದಾನೆ..

ಇನ್ನಷ್ಟು

ಕೈಲಾಸ ಮಾನಸ

kailasa maanasa0001

‘ಸೀರೆ ಹೋಯ್ತು , ಲಂಗ ಬಂತು ಡುಂ, ಡುಂ, ಡುಂ’

gn-sept-1-1

‘ಇಲ್ಲ ಆ ನ್ಯೂಸ್ ಬ್ರೆಕ್ ಮಾಡ್ಬಾರ್ದಿತ್ತು’ ಅಂತ ಗೆಳೆಯರೊಬ್ಬರು ಫೋನ್ ಮಾಡಿದಾಗ ರಾತ್ರಿ 8 ಗಂಟೆ ಕಳೆದು ಹೋಗಿತ್ತು. ದಟ್ಟ ನಕ್ಸಲೈಟ್ ಕೇಂದ್ರ ಎನಿಸಿಕೊಂಡಿದ್ದ ನಲ್ಲಮಲ್ಲ ಕಾಡಿನಲ್ಲಿ ಏನಾಗಿದೆ ಅನ್ನೋದೇ ಯಾರ ಊಹೆಗೂ ನಿಲುಕದಂತಾಗಿ ಹೋಗಿತ್ತು. ಫೋನ್ ಮಾಡಿದ್ದ ಗಳೆಯರಿಗಿದ್ದ ಆತಂಕ ನಕ್ಸಲೈಟುಗಳು ಹೆಲಿಕಾಪ್ಟರ್ ಹೊಡೆದುರುಳಿಸದೇ ಇದ್ರೂ ದಿಕ್ಕು ತಪ್ಪಿರುವ ‘ಬ್ರೆಕಿಂಗ್’ ಸುದ್ದಿ ಅವರನ್ನು ಅಲರ್ಟ್ ಮಾಡುತ್ತೆ. ‘ಸುಮ್ನೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳೋ ಸಮಾಚಾರ ಇದು. ಈ ಬ್ರೆಕಿಂಗ್ ನ್ಯೂಸ್ ಗಳು ಇಲ್ಲದೇ ಇರೋ ಪ್ರಾಬ್ಲಂನ ಸೃಷ್ಟಿ ಮಾಡುತ್ತೆ’ ಅಂತ ಕಿಡಿ ಕಾರಿದ್ರು.

ತಕ್ಷಣ ನನಗೆ ನೆನಪಾಗಿದ್ದು ಮುಂಬೈನಲ್ಲಿ ನಡೆದ ಟೆರರಿಸ್ಟ್ ಅಟ್ಯಾಕ್ . ಬಹುಷಃ ಮಾಧ್ಯಮದ ರೋಲ್ ಇಂತ ಸಂದರ್ಭದಲ್ಲಿ ಹೇಗಿರ್ಬೇಕು ಅಂತ ದೊಡ್ಡ ಚರ್ಚೆ ಆಗಿದ್ದು ಆಗ್ಲೇ. ‘ಕ್ಯಾಮರಾ ಆ ಕಡೆ ಪ್ಯಾನ್ ಮಾಡಿ, ಈ ಕಡೆ ತೋರಿಸಿ’ ಅಂತ ಹೇಳ್ತಾ ವರದಿಗಾರರು ಪಟ ಪಟ ವಿವರ ಕೊಡ್ತಾ ಇದ್ರೆ ಇತ್ತ ಟಿವಿ ಮಂದೆ ಕೂತಿರೋರಿಗೆ ಅಯ್ಯೋ ಟೆರರಿಸ್ಟಿಗೆ ಬೇಕಾದ ಮಾಹಿತಿ ಎಲ್ಲಾ ಟೀವೀನೋರೆ ಕೊಟ್ಬಿಡ್ತಾರಲ್ಲಪ್ಪ ಅಂತ ಅವಡುಗಚ್ಚಿಕೊಳ್ತಾ ಇದ್ರು. ಒಬೆರಾಯ್ ಟ್ರಿಡೆಂಟ್ ಹೋಟೆಲ್ ನಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ ಅಂತ ಆರ್ಮಿ ಹೇಳಿಕೆ ಕೊಟ್ಟ ಮೇಲೂ ಟಿ ವಿ ಯವರು ಹೋಟಲ್ ನ ರಿಸಪ್ಷನ್ನಿಗೇ ಫೋನ್ ಮಾಡಿ ಅಲ್ಲಿ ಇಂತಿಷ್ಟು ಜನ ಇದ್ದಾರೆ ಅನ್ನೋ ವಿವರ ಕೊಟ್ರು. ಅಲ್ಲಾ ಇದೆಲ್ಲಾ ಟೆರರಿಸ್ಟ್ ಗಳಿಗೆ ಮಾಡೋ ಹೆಲ್ಪ್ ಅಲ್ಲವಾ ಅಂತ ನೂರೆಂಟು ಚರ್ಚೆ ಎದ್ದೇಳ್ತು. ಟಿ ವಿ ಕ್ಯಾಮರಾ ಆಚೀಚೆ ತಿರುಗಿದಾಗ ಒಂದು ಕ್ಷಣ ಬೆರಗಾಗಿಬಿಡೋ ಅಷ್ಟು ವರದಿಗಾರರು, ಕ್ಯಾಮರಾಮನ್ ಗಳು ಸುದ್ದಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರು. ಒಂದು ಕಡೆ ಬರ್ಖಾ ದತ್ ಇನ್ನೊಂದ್ಕಡೆ ನೂರಾರು ‘ಬರ್ಖಾದತ್ಸ್ ಇನ್ ಮೇಕಿಂಗ್’

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

%d bloggers like this: