ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ

ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ ಯಾಕೆ ಮುಖ್ಯವಾಗಿ ಕಂಡಿತು ಎಂದರೆ , ಈಗ ಬರೆಯುವ ಅನೇಕ ಕನ್ನಡ ಕವಿಗಳು ತಾವೇ ಮೊದಲ ಬಾರಿ ಕಾವ್ಯ ಬರೆಯುತ್ತಿರುವವರು ಎಂಬಂತೆ ಬರೆಯುತ್ತಾರೆ.

ಕನ್ನಡ ಕಾವ್ಯ ಪರಂಪರೆಯ ಪರಿಚಯವೇ ಅವರಿಗಿಲ್ಲ! ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ನನಗೆ ಕಂಡದ್ದು ಹಿಂದುತ್ವದ ವಿರುದ್ಧ ನೀವು ತೆಗೆದುಕೊಂಡ ಸ್ಪಷ್ಟವಾದ ನಿಲುವು. ಇದು ಕೂಡ ಈಗ ಕನ್ನಡ ‘ಬುದ್ದಿ ಜೀವಿಗಳಲ್ಲಿ’ ಅಪರೂಪವಾಗುತ್ತಿದೆ. ಹಿಂದೂ ಧರ್ಮದುರಂಧರರ ಬಗ್ಗೆ ನಿಮ್ಮ ವ್ಯಗ್ರತೆ , ವ್ಯಂಗ್ಯಗಳು ನನಗೆ ತುಂಬಾ ಇಷ್ಟವಾದವು. ಹಿಂದುತ್ವದ ವಿರುದ್ಧ ನಾವೆಲ್ಲರೂ ನಮಗೆ ಸಾಧ್ಯವಿರುವ ನೆಲೆಗಳಲ್ಲಿ ಹೋರಾಟ ಮಾಡುವ ಅಗತ್ಯವಿದೆ. ಇಲ್ಲವಾದರೆ ಅದು ನಮ್ಮನ್ನು ಹಂದಿಗಳನ್ನಾಗಿ ಮಾಡುತ್ತದೆ .

1 ಟಿಪ್ಪಣಿ (+add yours?)

  1. Gubbachchi Sathish
    ಫೆಬ್ರ 15, 2011 @ 22:20:48

    “ಈಗ ಬರೆಯುವ ಅನೇಕ ಕನ್ನಡ ಕವಿಗಳು ತಾವೇ ಮೊದಲ ಬಾರಿ ಕಾವ್ಯ ಬರೆಯುತ್ತಿರುವವರು ಎಂಬಂತೆ ಬರೆಯುತ್ತಾರೆ.” ಈ ಸಾಲುಗಳು ಏಕೆ? ಆ ರೀತಿಯಿದ್ದವರು ಇದ್ದರೆ ಕೋಟ್ ಮಾಡಿ ಪ್ಲೀಸ್…

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ