ಮಕ್ಕಳು ಕಂಡ ಬೇಂದ್ರೆ ಇಲ್ಲಿದ್ದಾರೆ..

ಖ್ಯಾತ ಕಲಾವಿದ ಮಧು ದೇಸಾಯಿ ಅವರು ಬೇಂದ್ರೆ ದಿನಕ್ಕಾಗಿ ಮಕ್ಕಳು ರಚಿಸಿದ ಬೇಂದ್ರೆ ಚಿತ್ರಗಳನ್ನು ‘ಅವಧಿ’ಗಾಗಿ ಒದಗಿಸಿದ್ದಾರೆ.

‘ಚೈತ್ರರಶ್ಮಿ’ ಕಥಾ ಸ್ಪರ್ಧೆ ಫಲಿತಾಂಶ

‘ಚೈತ್ರರಶ್ಮಿ’ ಪತ್ರಿಕೆ ತನ್ನ ಆರನೆಯ ವಾರ್ಷಿಕೋತ್ಸವದ ಅಂಗವಾಗಿ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಅದರ ಫಲಿತಾಂಶ ಇಲ್ಲಿದೆ.ತೀರ್ಪುಗಾರರು ಆಯ್ಕೆ ಮಾಡಿದ ಹಾಗೂ ಕಥಾ ಸಂಕಲನದಲ್ಲಿ ಪ್ರಕಟವಾಗುತ್ತಿರುವ ಹತ್ತು ಉದಯೋನ್ಮುಖ ಕತೆಗಾರರ ಕಥೆಗಳು

೧. ಮೊದಲ ಬಹುಮಾನ – ಕನ್ನಡಿ ಬಿಂಬದ ನೆರಳು –

ನವೀನ್ ಭಟ್ ಗಂಗೋತ್ರಿ ಶೃಂಗೇರಿ

೨. ಎರಡನೇ ಬಹುಮಾನ – ಊರು ಸುಟ್ಟರೂ ಹನುಮಪ್ಪ ಹೊರಗೆ –

ಹನುಮಂತ ಹಲಿಗೇರಿ, ಬಾಗಲಕೋಟೆ ,

೩. ಮೂರನೇ ಬಹುಮಾನ – ಗೇಣಿ – ಆರ್ .ಶರ್ಮ ತಲವಾಟ ,ಸಾಗರ

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು

೪. ಅವಳು ಮತ್ತು ನಾನು – ಪ್ರಜ್ಞಾ ಮಾರ್ಪಳ್ಳಿ ಉಡುಪಿ

೫. ಇರಲಿ ಬಿಡಿ, ದೂರದ ಬೆಟ್ಟ ನುಣ್ಣಗೆ – ಮಾವೆಂಸ ಪ್ರಸಾದ್ ಸಾಗರ

೬. ತಾಯವ್ವ – ಗವಿಸಿದ್ಧ ಹೊಸಮನಿ, ಹುಬ್ಬಳ್ಳಿ

೭. ಬಸ್ಸು ಪ್ರಯಾಣ – ಬಿ.ಜಕಣಾಚಾರಿ ಜಗಳೂರು

೮. ಶ್ರೀಧರ ದಾಮಲೆ – ಉಮೇಶ ದೇಸಾಯಿ, ಬೆಂಗಳೂರು

೯. ಕಾಲನರಮನೆ ಗೆಜ್ಜೆ ಮತ್ತು ಕಾಡವ್ವನ ಪ್ರೀತಿ – ಕಪಿಲಾ ಶ್ರೀಧರ್ , ಬೆಂಗಳೂರು

೧೦. ಸಹ್ಯ – ಆದರ್ಶ ಕೊಂಕೋಡಿ, ಪುತ್ತೂರು

ಜೋಗಿ ಬರೆಯುತ್ತಾರೆ: ಕಾಡಿನ ಕತೆಗಳನ್ನು ಓದುವ ಮುಂಚೆ..

ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿ

ತರಗಲೆ ಬಿದ್ದ ಕಾಡು. ಕಾಲಡಿಯಲ್ಲಿ ಮೆತ್ತೆ ಹಾಸಿದ ಹಾಗೆ ಒಣಗಿದ ಎಲೆಗಳು ರಾಶಿ ರಾಶಿ. ಅದರ ಮೇಲೆ ಹೆಜ್ಜೆಯಿಟ್ಟರೆ ಚರಬರ ಸದ್ದು. ಸದ್ದಾಗದಂತೆ ನಡೆಯಲು ಯತ್ನಿಸಿದರೆ ಕೆದಂಬಾಡಿ ಜತ್ತಪ್ಪ ರೈಗಳ ನೆನಪು. ಅವರು ಓಡಾಡಿದ ಜಾಗಗಳಿವು. ಸುಳ್ಯ ಪುತ್ತೂರು ಪಂಜ ಶಿರಾಡಿ ವೇಣೂರಿನ ಕಾಡುಗಳು. ಇಲ್ಲಿಗೆ ಯಾವ ಕೆನ್ನೆತ್ ಅಂಡರ್‌ಸನ್ನೂ ಬರಲಿಲ್ಲ. ಜಿಮ್ ಕಾರ್ಬೆಟ್ ಕಾಲಿಟ್ಟಿರಲಿಲ್ಲ. ಶ್ರೀಮಂತರಾದ ಬಂಟರು ಇಲ್ಲಿಯ ಕಾಡು ಪ್ರಾಣಿಗಳನ್ನು ನಿಯಂತ್ರಿಸಿದ್ದು. ಅವರು ಕೊಂದ ಹುಲಿಗಳ ಲೆಕ್ಕ ಯಮ ನೋಡಿ ನಕ್ಕ!

ಹುಲಿ ಕೊಂದವರ ನಾಡಿನಿಂದಲೆ ಬಂದವರು ಹುಲಿ ಸಂರಕ್ಷಣೆಯ ಉಲ್ಲಾಸ ಕಾರಂತರು. ಎರಡು ಪರಸ್ಪರ ವಿರುದ್ಧ ಕಾಲಘಟ್ಟದ ನಿಲುವನ್ನು ಗಮನಿಸಿ. ಒಂದು ಕಾಲದಲ್ಲಿ ಹುಲಿ ಕೊಲ್ಲುವುದು ಅನಿವಾರ್ಯವಾಗಿತ್ತು. ಈ ಉಳಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮಡಿಕೇರಿಯಲ್ಲೊಂದು ನರಭಕ್ಷಕ ಹುಲಿ ಸೇರಿಕೊಂಡಿದೆಯಂತೆ. ಅದನ್ನು ಕೊಲ್ಲುವುದಕ್ಕೂ ಅಪ್ಪಣೆ ಸಿಕ್ಕಿದೆಯಂತೆ.

ಕಾಡನ್ನು ಯಾರೂ ಗುಡಿಸುವುದಿಲ್ಲ. ಹೀಗಾಗಿ ಬಿದ್ದ ಎಲೆಯೆಲ್ಲ ಮಳೆಗಾಲದಲ್ಲಿ ಕೊಳೆತು ಮಣ್ಣಾಗಿ, ಮರಕ್ಕೆ ಗೊಬ್ಬರವಾಗಿ ಅಷ್ಟರ ಮಟ್ಟಿಗೆ ಪ್ರತಿಮರವೂ ಸ್ವಾವಲಂಬಿ. ಆ ಮಣ್ಣಲ್ಲಿ ಹುಟ್ಟಿ ಸಾಯುವ ಹೆಸರಿಲ್ಲದ ಗಿಡಗಳೂ ಗೊಬ್ಬರವಾಗಿಯೇ ಸಲ್ಲುತ್ತವೆ. ಆಷಾಢದ ಗಾಳಿ ಆ ತರಗೆಲೆಗಳನ್ನು ಹಾರಿಸಿಕೊಂಡು ಹೋಗಿ, ಮೊದಲ ಮಳೆಗೆ ಅವು ಕೊಚ್ಚಿಕೊಂಡು ಹೋಗಿ ಹತ್ತಿರದ ನದಿಯನ್ನು ಸೇರಿದರೂ ಹಾಗೆ ಹೋಗುವುದು ಸಾಸಿವೆ, ಉಳಿಯುವುದು ಸಾಸಿರ.

More

ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ!

ನಮ್ಮ ಹಿರಿಯ ಕಲಾವಿದರಾದ ಉಮೇಶ್, ದತ್ತಣ್ಣ, ಹಿರಿಯ ಪತ್ರಕರ್ತೆ ವಿಜಯಮ್ಮ, ನಿರ್ದೇಶಕ-ನಟ ರವಿ…ಇವರುಗಳ ಮನೆಯಲ್ಲಿ ಮನೆಕೆಲಸ ಮಾಡುವ ಒಂದು ಸ್ಪರ್ಧೆ. ಆ ಪರಿ ಮೆಡಿಕ್ಯೂರ್- ಪೆಡಿಕ್ಯೂರ್ ಮಾಡಿಸಿಕೊಂಡು, ಸಿ0ಗಾರವಾಗಿ ಬಂದ ಬಂಗಾರಿಗಳು ಕಸ ಗುಡಿಸುವ ಕೆಲಸ ಮನೆ ಒರೆಸುವ ಅಯ್ಯೋ ಪಾಪವೇ ಅನ್ನಿಸುವಂತಾಯಿತು.

ಹಿರಿಯ ಕಲಾವಿದರಾದ ದತ್ತಣ್ಣ, ರವಿ, ಉಮೇಶ್ ಸಿಕ್ಕಿದ ಚಾನ್ಸ್ ಚೆನ್ನಾಗಿ ಬಳಸಿಕೊಂಡು ಆ ಹುಡುಗಿಯರನ್ನು ರೇಗಿ ಕೆಲಸ ಮಾಡಿಸಿ ಕೊಂಡರು.ವೀಕ್ಷಕರಿಗೆ ಮಜ ಸಿಕ್ತು .

ಸ್ವಲ್ಪ ವಿಚಿತ್ರ ಎಂದು ಅನ್ನಿಸಿದರು ಇಲ್ಲಿ ಮೂಲ ಉದ್ದೇಶ ಸಹನೆ. ಅದು ಎಷ್ಟರ ಮಟ್ಟಿಗೆ ಆ ಹೆಣ್ಣು ಮಕ್ಕಳಲ್ಲಿ ಇದೆ ಎಂದು ಕಂಡು ಹಿಡಿಯುವ ಪ್ರಯತ್ನ. ಯಾಕೋ ಆ ಹೆಣ್ಣುಮಕ್ಕಳನ್ನು ಕಂಡಾಗ ಪಾಪವೇ ಕಸಮುಸರೆ ಕಮಲಿಗಳೇ ಎಂದು ವೀಕ್ಷಿಸುವಂತಾಯಿತು.

ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ !

ಪೂರ್ಣ ಓದಿಗೆ –ಮೀಡಿಯಾ ಮೈಂಡ್

ನನ್ನ ಕಣ್ಣು ಹನಿಗೂಡಿದೆ, ಇನ್ನು ನಾನು ನಾನಾಗಿರಲಾರೆ

ಉಷಾ ಕಟ್ಟೆಮನೆ

ಇವತ್ತು ನಾನು lasse hollstorm ನಿರ್ದೇಶನದ hachiko ಸಿನಿಮಾ ನೋಡಿದೆ. ಸತ್ತ ತನ್ನೊಡೆಯ ಮತ್ತೆ ಬರುವನೆಂದು ೧೧ ವರ್ಷ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಾ ಕೊನೆಯುಸಿರೆಳದ ನಾಯಿಯ ಸತ್ಯ ಕಥೆಯಿದು.

ನನ್ನ ಕಣ್ಣು ಹನಿಗೂಡಿದೆ. ನನ್ನ ಅಂಗೈಯಲ್ಲಿ ಬೆಳೆದ ’ಚುಕ್ಕಿ’ ಮಕ್ಕಳು ನೆನಪಾದವು.

ಇನ್ನು ೨ ದಿನ ನಾನು ನಾನಾಗಿರಲಾರೆ

HBO ಚಾನಲ್ ನಲ್ಲಿ. hachiko ನಾಯಿ ೧೯೨೩ರಲ್ಲಿ ಹುಟ್ಟಿ ೧೯೩೫ರಲ್ಲಿ ಇಹಲೋಕ ತ್ಯಜಿಸಿತ್ತು. ಅದು ಕಾಯುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಅದು ಬದುಕಿರುವಾಗಲೇ ಸ್ಥಾಪಿಸಿದ್ದ ಅದರ ಮೂರ್ತಿ ೨ನೇ ಮಹಾಯುದ್ಧದಲ್ಲಿ ದ್ವಂಸಗೊಂಡಿತ್ತು. ಅದನ್ನು ನಿರ್ಮಿಸಿದ ಶಿಲ್ಪಿಯ ಮಗನೇ ೧೯೪೮ರಲ್ಲಿ ಕಂಚಿನ ಮೂರ್ತಿಯನ್ನು ಸ್ಥಾಪಿಸಿದ. ಇಂದಿಗೂ ನೂರಾರು ಜನ ಅದರ ಜನ್ಮದಿನದಂದು ಜಪಾನಿನ ಆ ನಿಲ್ದಾಣಕ್ಕೆ ಬಂದು ಅದರ ಮೂರ್ತಿಯ ಮುಂದೆ ಅದಕ್ಕೆ ಇಷ್ಟವಾದ ತಿಂಡಿಯನ್ನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ

 

ಒಂದು ನೆನಪು: ಈ ಕಥೆ ಈಗ ಯಾಕೆ ?

-ಕೋ  ಚೆನ್ನಬಸಪ್ಪ

೧೯೩೧ನೆ ಆಗಸ್ಟ್ ೨೧ ರಂದು ಸ್ಥಾಪನೆ ಆದ ನಾನು ಓದಿದ ಹೈಯರ್ ಎಲಿಮೆಂಟರಿ ಶಾಲೆ ಇದೀಗ ತನ್ನ ವಜ್ರ ಮಹೋತ್ಸವ ವರ್ಷವನ್ನು ದಾಟಿದೆ. ಅದಕ್ಕೆ ೨೫ ವರ್ಷ ತುಂಬಿದಾಗ ೧೯೫೬ ರಲ್ಲಿ ಬೆಳ್ಳಿ ಹಬ್ಬವನ್ನೂ ಆಚರಿಸಲಿಲ್ಲ .೧೯೮೧ ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿಲ್ಲ. ಅದನ್ನು ಕುರಿತು ಯಾರೂ ಏನೂ ಬರೆಯಲಿಲ್ಲ. ಈಗ ಅದರ ಹುಟ್ಟು ಬೆಳವಣಿಗೆಯ ಕತೆ ಯಾಕೆ ನೆನಪಾಯಿತು? ೨೦೧೧ ನಮ್ಮ ಸಂಘ ಸ್ಥಾಪನೆ ಆದ ಅಷ್ಟದಶಮಾನೋತ್ಸವ!!.

೨೦೦೫ ಜೂನ್ ೨೯ ರಂದು ನಾನು ನಮ್ಮೂರಿಗೆ ಹೋದ ಸಂಗತಿಯನ್ನು ಈ ಹಿಂದೆ ಪ್ರಸ್ತಾಪಿಸಿದ್ದೇನೆ. ಆಲೂರಿನಿಂದ ಹೊರಟು ಬೆಂಗಳೂರಿಗೆ ಬರಲು ರಾಷ್ಟ್ರೀಯ ಹೆದ್ದಾರಿ ೧೩ ಕ್ಕೆ ಬಂದಾಗ , ನನ್ನ ಮಗ ಪ್ರಭುದೇವ ‘ನೀವು ಓದಿದ ಶಾಲೆ ಎಲ್ಲಿದೆ?’ ಎಂದು ಕೇಳಿದ. ‘ಇಲ್ಲೇ ರಸ್ತೆ ಆಚೆ ಬದಿಗೆ ಅರ್ಧ ಕಿ.ಮೀಟರ್ ದೂರದಲ್ಲಿ ಕಾನಾಮಡುವು ಇದೆ.ಆಗ ಊರಲ್ಲಿದ್ದ ಆ ಶಾಲೆ ಈಗ ಊರಾಚೆಗೆ ಸ್ಥಳಾಂತರವಾಗಿದೆ. ನೋಡುತ್ತಿಯಾ ? ‘ ನೋಡೋಣ’ ಎಂದ . ಗಾಡಿಯನ್ನು ಆ ಕಡೆಗೆ ಹೊರಳಿಸಿ ಅಲ್ಲಿಗೆ ಹೊರಟೆವು. ಐದಾರು ನಿಮಿಷಗಳಲ್ಲಿ ಹುಲಿಕೆರೆ ದಾರಿಯಲ್ಲಿರುವ ಆ ಶಾಲೆಯ ಕಾಂಪೌಂಡಿನ ಹೆಬ್ಬಾಗಿಲ ಮುಂದೆ ನಿಂತೆವು. ಉಕ್ಕಿನ ಅಕ್ಷರಗಳಲ್ಲಿ ಬರೆದಿದ್ದ ಯಾರದೋ ಒಂದು ಹೆಸರು ಎದ್ದು ಕಾಣುತ್ತಿತ್ತು . ನನ್ನ ಮಗ ಆ ಹೆಸರು ಓದಿ:

‘ಇವರೇನಾ ಈ ಶಾಲೆ ಕಟ್ಟಿಸಿದವರು?’ ಎಂದ

‘ಅಲ್ಲ ಅವರ್ಯಾರೋ ನನಗೆ ಗೊತ್ತಿಲ್ಲ

‘ಮತ್ತೆ ಅವರ ಹೆಸರನ್ನು ಯಾಕೆ ಹಾಕಿದ್ದಾರೆ?

ಗೊತ್ತಿಲ್ಲ ಬಹುಷಃ ಆ ಕಬ್ಬಿಣದ ಗೇಟ್ ಮಾಡಿಸಿ ಕೊಟ್ಟವರಿರಬೇಕು ಅದೂ ಸರಿಯಾಗಿ ತಿಳಿಯದು

ಕಟ್ಟಿಸಿ ಕೊಟ್ಟವರು ಯಾರು ಮತ್ತೆ?

ಈ ಕಟ್ಟಡ ನಿಂತಿರುವ ಈ ನಿವೇಶನ ಆರೂವರೆ ಎಕರೆ ದಾನ ಮಾಡಿದವರು ನನ್ನ ಸೋದರ ಮಾವ . ಅವರ ತಾಯಿ -ನನ್ನ ಅಜ್ಜಿಯ ಹೆಸರಿನಲ್ಲಿ…..

ಅಂದು ಭಾನುವಾರ. ಗೇಟಿಗೆ ಬೀಗ ಹಾಕಿತ್ತು . ಒಳಗೆ ಹೋಗುವುದು ಹೇಗೆಂದು ನಾನು ಅತ್ತಿತ್ತ ನೋಡುತ್ತಿದ್ದಾಗ ನನ್ನ ಮಾವನ ಮೊಮ್ಮಗ ಮಲ್ಲಿಕಾರ್ಜುನ ಎಲ್ಲಿಂದಲೋ ಬಂದ . ಗೇಟಿನ ಪಕ್ಕದಲ್ಲಿ ಸೊಂಟ ಮಟ್ಟ ಕಲ್ಲು ಬಂಡೆಗಳನ್ನು ಹೂಳಿ ಸಂದಿನ ದಾರಿ ತೋರಿಸಿದ. ಒಳಗೆ ಹೋದೆವು. ಬುನಾದಿಗೆ ಪಾಯ ಅಗೆದ ದಿನವೇ ಶಾಲಾ ಕಟ್ಟಡದ ಮುಂಭಾಗದಲ್ಲಿ ನೆಟ್ಟಿದ್ದ ಮರಗಳು ಬೆಳೆದಿದ್ದವು.ಎಡಬಲಕ್ಕೆ ವಿಸ್ತಾರವಾದ ಆಟದ ಮೈದಾನ. ಇತ್ತೀಚಿಗೆ ಹೈಸ್ಕೂಲು , ಪದವಿ ಪೂರ್ವ ಕಾಲೇಜು , ಐ.ಟಿ.ಐ. ಇತ್ಯಾದಿ ಶಾಲೆಯ ಕಟ್ಟಡಗಳು ಕಾಣಿಸಿದವು. ಅಲ್ಲೊಂದು ಸಣ್ಣ ಸಭಾ ಭವನವು ತಲೆ ಎತ್ತಿತ್ತು.

More

ಹೊಸ ಪುಸ್ತಕ

‘ಕಲಾಧ್ಯಾನ್’ ಬರ್ತಾ ಇದೆ

ಚರಿತ್ರೆಯ ಅವಲೋಕನ

%d bloggers like this: