ಗೆಳೆಯ ಸುಧಾಂಶು ನಂದಾವರ ಈಗ ವ್ಯಾಲೆಂಟೈನ್ ಗುಂಗಿನಲ್ಲಿದ್ದಾರೆ.
‘ಅವಧಿ’ ಓದುಗರಿಗಾಗಿ ಆತ ಮೊನ್ನೆಯ ಏರ್ ಷೋ ನಲ್ಲಿ ಶೂಟ್ ಮಾಡಿದ ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
14 ಫೆಬ್ರ 2011 2 ಟಿಪ್ಪಣಿಗಳು
in 1
ಗೆಳೆಯ ಸುಧಾಂಶು ನಂದಾವರ ಈಗ ವ್ಯಾಲೆಂಟೈನ್ ಗುಂಗಿನಲ್ಲಿದ್ದಾರೆ.
‘ಅವಧಿ’ ಓದುಗರಿಗಾಗಿ ಆತ ಮೊನ್ನೆಯ ಏರ್ ಷೋ ನಲ್ಲಿ ಶೂಟ್ ಮಾಡಿದ ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
14 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಝೂಮ್
Madhav Goyal, Udaan Photo School
14 ಫೆಬ್ರ 2011 5 ಟಿಪ್ಪಣಿಗಳು
ನಾನು ಓದಿದ್ದಿ ಮ.ಮಾ.ಮು ಹೈಸ್ಕೂಲಿನಲ್ಲಿ. ಅಂದರೆ ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲಿನಲ್ಲಿ. ೧೯೫೭ರಿಂದ ೫೯ರ ವರೆಗೆ. ನಾನು ಕನ್ನಡ ಮೀಡಿಯಮ್ ತಗೊಂಡಿದ್ದೆ. ಜಿ.ಸೀತಾರಾಮಯ್ಯ ಅಂತ ನಮ್ಮ ಹೆಡ್ ಮಾಸ್ಟರ್. ಅವರ ವೇಷ ವಿಶೇಷವಾಗಿದ್ದುದರಿಂದ ನನಗೆ ಈವತ್ತೂ ಅವರನ್ನು ಮರೆಯಲಿಕ್ಕೇ ಆಗಿಲ್ಲ. ಮಲ್ಲು ಪಂಚೆಯನ್ನು ಕಚ್ಚೆ ಹಾಕಿ ಉಡುತ್ತಾ ಇದ್ದರು. ಮೇಲೆ ಒಂದು ಕರೀ ಕೋಟು. ತೆಳ್ಳನೆಯ ಚಪ್ಪಲಿಗಳು. ಬಿಸಿಲು ಇರಲಿ ಇಲ್ಲದಿರಲಿ ತಲೆಯ ಮೇಲೆ ಒಂದು ಕೊಡೆ. ಅದು ಮಾಮೂಲಿ ಕರೀಕೊಡೆಯಾಗಿದ್ದರೂ ಅದರ ಮೇಲೆ ಒಂದು ಬಿಳಿ ಬಟ್ಟೆಯ ಕವರ್ ಇರುತ್ತಾ ಇತ್ತು.
ಇಂಥ ಕೊಡೆ ನಾನು ಮೊಟ್ಟಮೊದಲು ನೋಡಿದ್ದು ನಮ್ಮ ಎಚ್.ಎಮ್ ಕೈಯಲ್ಲೇ. ಅವರು ತಲೆಗೆ ಮೈಸೂರು ರುಮಾಲು ಹಾಕುತ್ತಿದ್ದುದರಿಂದ ಅವರ ತಲೆಯ ಮೇಲೆ ಕ್ರಾಪಿತ್ತೆ, ಅಥವಾ ಜುಟ್ಟಿತ್ತೆ, ಅಥವಾ ಬೊಕ್ಕ ತಲೆಯೇ ಯಾವುದೂ ತಿಳಿಯುವಂತಿರಲಿಲ್ಲ. ಅವರಿಗೆ ಬೇರೆ ವೇಷವನ್ನು ನಾನು ಕಲ್ಪಿಸುವುದೂ ಸಾಧ್ಯವಿರಲಿಲ್ಲ. ಕೊಂಚ ಉಬ್ಬುಹಲ್ಲಿದ್ದ ಒಳ್ಳೆ ಕೆಂಬಿಳಿ ಬಣ್ಣದ ಅವರು ಹಣೆಯ ಮೇಲೆ ಸಣ್ಣಗೆ ಮತ್ತು ದುಂಡಗೆ ಒಂದು ಸಾದು ಇಟ್ಟುಕೊಳ್ಳುತ್ತಿದ್ದರು. ಬಂದಿದ್ದೇನೇಯೇ, ಹೋದದ್ದೇನೆಯೇ, ಕೊಟ್ಟಿದ್ದೇನೆಯೇ ಎಂದು ಯೇ ಸೇರಿಸಿ ದೀರ್ಘವೆಳೆದು ಮಾತಾಡುವುದು ಅವರ ರೂಢಿಯಾಗಿತ್ತು.
14 ಫೆಬ್ರ 2011 1 ಟಿಪ್ಪಣಿ
ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ, ಹೆಚ್ಚು ಕಡಿಮೆ ಐದೂಕಾಲು ದಿನ ಅಥವಾ ೧೨೭ ಗಂಟೆಗಳ ಕಾಲ ಈತ ಏಕಾಂಗಿಯಾಗಿಯೇ ನಡೆಸಿದ ಅಸಾಧಾರಣ ದೇಹ-ಮನಸ್ಸುಗಳ ಸಾಹಸದ ಫಲವಾಗಿ ಬದುಕಿ ಬರುತ್ತಾನೆ. ಇದು ಒಂದು ಸತ್ಯ ಘಟನೆ. ಇಂದೂ ತನ್ನ ಮೊಂಡುಗೈಯೊಡನೆ ಈ ಅಮೆರಿಕನ್ ಪ್ರಜೆ ಸಾಹಸಾನ್ವೇಷಣೆಯನ್ನು ಮುಂದುವರಿಸಿದ್ದಾನೆ! ಅದರ ಕಥಾ ಸಿನಿಮಾ ರೂಪವೇ ‘127 Hours’.
ಅಭಯ ಹತ್ತಿಪ್ಪತ್ತು ದಿನಗಳ ಹಿಂದೆಯೇ ಈ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿದ ಮೇಲೆ ಹೇಳಿದ್ದ. ಗೆಳೆಯ ನಿರೇನ್ ಎಂದೂ ಕರೆಯದವರು “ಸಂಜೆ ಏಳೂಮುಕ್ಕಾಲರ ಶೋಗೆ ನಮ್ಮೊಡನೆ ಬನ್ನಿಯಪ್ಪಾ” ಎಂದು ಒತ್ತಾಯಿಸಿದರು. ಅಂಗಡಿಯನ್ನು ದಿಢೀರ್ ಬಿಡಲಾಗದ ಕಷ್ಟಕ್ಕೆ ನಾನು ಹೋಗಲಿಲ್ಲ. ಅಡ್ಲ್ಯಾಬ್ಸಿನ ಬಿಗ್ ಸಿನಿಮಾದಲ್ಲಿ (ಮಲ್ಟಿಪ್ಲೆಕ್ಸ್) ಮೊನ್ನೆಯವರೆಗೆ ಅದು ದಿನಕ್ಕೆ ಮೂರು ಪ್ರದರ್ಶನ ಕಾಣುತ್ತಿದ್ದದ್ದು ಇಂದು ಒಂದೇ ಎಂದು ಕಂಡಾಗ ನಾನು ಯೋಚನೆಗೆ ಬಿದ್ದೆ. ಮೂಡಬಿದ್ರೆಯಿಂದ ಇನ್ನೋರ್ವ ಗೆಳೆಯ ಕೃಶಿ ದೂರವಾಣಿಸಿ ಒತ್ತಾಯಿಸಿದಾಗ ಸೋತೆ. ದೇವಕಿಯನ್ನು ಅಂಗಡಿಗೆ ಮಾಡಿ ಮಧ್ಯಾಹ್ನ ಒಂದೂವರೆಯ ಪ್ರದರ್ಶನಕ್ಕೆ ಹಾಜರಾದೆ.
ಇತ್ತೀಚಿನ ಟಿಪ್ಪಣಿಗಳು