ಕಾವ್ಯ -ಸಂಗೀತ ನಡೆಯುತ್ತಿದೆ..

ಸಾಹಿತ್ಯ “ಸಂತೆ”ಯಲ್ಲಿ ನಾನು ಕಂಡದ್ದು

-ರವಿಶಂಕರ್  ಕೆ ಭಟ್

1. ಒಳಗೆ ಹೋಗುತ್ತಿದ್ದವರ ಪೈಕಿ ಹೆಚ್ಚಿನವರಿಗೆ ಯಾಕೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಅನ್ನೋದು ಗೊತ್ತಿರಲಿಲ್ಲ. ಹೋದ ಮೇಲೆ ಏನು ಮಾಡಬೇಕು ಅನ್ನೋದೂ ಅಷ್ಟೆ. ನನಗೂ ಹಾಗೆಯೇ ಆಯಿತು.

2. ಇನ್ನು ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ತಂತಮ್ಮ ಗುಂಪಿನಲ್ಲೇ ಕಳೆದು ಹೋಗಿದ್ದರು. ಅಥವಾ ಪತ್ರಿಕೆಯೋ, ಪುಸ್ತಕವೋ ಓದುವುದರಲ್ಲಿ ತಲ್ಲೀನರಾಗಿದ್ದರು. ಇದಕ್ಕೆ ವೇದಿಕೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮುಂದಿನ ಕೆಲ ಸಾಲಿನಿಂದ ಈಚೆಗೆ ತಲುಪುತ್ತಿರದಿದ್ದುದು ಇದಕ್ಕೆ ಕಾರಣವಿರಬಹುದು. ಮಿತ್ರ ಗಾಣಧಾಳು ಶ್ರೀಕಂಠನ ಗೋಷ್ಠಿಗೆ ಹೋಗಿ ಏನೂ ಕೇಳಿಸದೆ ಹಿಂದಿರುಗುವ ಕರ್ಮ ನನ್ನದಾಯಿತು.

3. ಅತ್ತ ಪುಸ್ತಕ ಮಳಿಗೆಗಳಲ್ಲಿ ಯಾರೂ ಕಳೆದುಹೋದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ. ಅಲ್ಲಿ ಇತ್ತೀಚಿನ ಶಬರಿಮಲೆ ರೀತಿಯ ದುರಂತ ಸಂಭವಿಸದಿರಲಿ ಅಂತ ಮನಸ್ಸು ಪ್ರಾರ್ಥಿಸುತ್ತಿತ್ತು.

4. ಕೆಲ ಪುಸ್ತಕ ಮಳಿಗೆಗಳಲ್ಲಂತೂ ಅವ್ಯಾಹತವಾಗಿ ಪುಸ್ತಕಗಳ ಕಳ್ಳತನವಾಗುತ್ತಿದ್ದದ್ದು ನೋಡಿ “ಸಾಹಿತ್ಯಪ್ರೀತಿ” ಅಂದರೆ ಇದೇನಾ ಅಂತ ಪ್ರಶ್ನಿಸಿಕೊಳ್ಳುವಂತಾಯಿತು.

5. ಇಷ್ಟಾದ ಮೇಲೂ ಉಳಿದ ಕಡೆಗೆ ಕಾಲು ಹಾಕುವ ಸಾಹಸ ಮಾಡಲು ಮನಸ್ಸೇ ಆಗಲಿಲ್ಲ.

6. ಈ ಎಲ್ಲಾ ಕಾರಣಕ್ಕಾಗಿ ಸುರಕ್ಷಿತವಾಗಿ ಹೊರ ಬಂದ ಹೆಚ್ಚಿನವರ ಗತಿ ಸದ್ಯ ಬದುಕಿದೆ ಅನ್ನುವಂತಾಗಿತ್ತು.

ಕನ್ನಡ(ಕ) ಸಾಹಿತ್ಯ ಸಮ್ಮೇಳನ

ಶಿವೂ ಕನ್ನಡ ಸಮ್ಮೇಳನಕ್ಕೆ ಹೋಗಿದ್ದರೋ..ಇಲ್ಲಾ, ಕನ್ನಡಕ ಸಮ್ಮೇಳನಕ್ಕೆ ಹೋಗಿದ್ದರೋ ಗೊತ್ತಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದ ಕೆ ಶಿವೂ ಕಣ್ಣಿಗೆ ಕನ್ನಡಕಗಳೇ ಬಿದ್ದಿವೆ. ಅದರ ಸ್ಟೈಲ್ ಇಲ್ಲಿದೆ.

ದೊಡ್ಡ ಸೈಜ್ ನಲ್ಲಿ ಈ ಫೋಟೋಗಳನ್ನು ನೋಡಲು ಫೋಟೋದ ಮೇಲೆ ಕ್ಲಿಕ್ ಮಾಡಿ

ಅಂಜಲಿ ರಾಮಣ್ಣ ಕಂಡ ‘ಸಂತೆ’ ನೋಟ

ಅಂಜಲಿ ರಾಮಣ್ಣ

ಈ ದಿನ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಇಲ್ಲಿರುವ ಫೋಟೋಗಳು ರಸ್ತೆಯಲ್ಲಿನ ಕನ್ನಡ ಜಾತ್ರೆಯ ಧ್ಯೋತಕವೆನ್ನಬಹುದೇನೋ! ಜನ-ಜಾತ್ರೆ-ಜನ ಜಾತ್ರೆ….

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೆಲ್ಲಾ ಯಾಕೆ ಬೇಕು? ಎಂದು ಯೋಚಿಸುತ್ತಿತ್ತು, ಒಂದು ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ ಮನ. ಆದರೆ ಆ ರಸ್ತೆಯಲ್ಲಿ ನಡೆಯುತ್ತಿರುವಾಗ, ಯಾರ್ಯಾರದ್ದೋ ಮೈಕೈ ತಗುಲುತ್ತಿರುವಾಗ, ಸೂರ್ಯನೂ ಮುಂದಾಗಿ ನನ್ನನ್ನೇ ಪ್ರೀತಿ ಮಾಡುತ್ತಿದ್ದಾಗ , ದ್ವನಿವರ್ಧಕದಲ್ಲಿ ಕನ್ನಡ ಮಾತುಗಳು ಕಿವಿಗಪ್ಪಳಿಸುತ್ತಿರುವಾಗ ನನಗನಿಸಿದ್ದು ” ಪ್ರಾದೇಶಿಕ ಸಂಸ್ಕೃತಿಯ ಬೇರಿನಿಂದ ಬೇರ್ಪಟ್ಟು ಸಾಹಿತ್ಯ ಚಿಗುರುವುದು ಅಸಾಧ್ಯ ತಾನೆ?”……ಹೂಂ ಒಂಥರಾ ಚೆನ್ನಾಗಿತ್ತು…..

ಚಂದ್ರಶೇಖರ ಆಲೂರು ಕಾಲಂ: ನಿತ್ಯ ಮಡೆ ಸ್ನಾನ ಮಾಡುವ ಮನಸ್ಸುಗಳು

“ಅದೊಂದು polished version of TV-9 report. ಈ ಬಗೆಯ ಮೂಢನಂಬಿಕೆಗಳು, ಆಚರಣೆಗಳ ಬಗ್ಗೆ ಅಂಥ ಛಾನೆಲ್‌ಗಳು hype ಮಾಡಿ ತೋರುವ ಪರಿಣಾಮವನ್ನೇ ಈ ಲೇಖನ ಕೂಡ ಮಾಡುತ್ತದೆ. “ಈಚೀಚೆಗಂತೂ ‘ಮಡೆ ಸ್ನಾನ’ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ ಅಂತೆ ಯಾಕೆ?” ಎಂದು ಅವರು ಪ್ರಶ್ನಿಸುತ್ತಾರೆ. ಕಾಲ ಹಿಮ್ಮುಖವಾಗಿ ಚಲಿಸುತ್ತಿರುವುದೇ ಇದಕ್ಕೆ ಕಾರಣ. ಇಂಥ ಮೂಢನಂಬಿಕೆಗಳನ್ನ ಕಡೆಯ ಪಕ್ಷ ಬಹಿರಂಗವಾಗಿ ಸಮರ್ಥಿಸಲು ಹಿಂಜರಿಯುತ್ತಿದ್ದವರು ಇಂದು ರಾಜಾರೋಷವಾಗಿ ಕಿಂಚಿತ್ತು ಅಳುಕಿಲ್ಲದೆ ಆ ಕೆಲಸ ಮಾಡುತ್ತಿದ್ದಾರೆ. ಆ ಅಮಾಯಕರು ಹರಕೆ ತೀರಿಸಲು ಒಂದು ದಿನ ‘ಮಡೆ ಸ್ನಾನ’ ಮಾಡಿದರೆ ಮಾನಸಿಕವಾಗಿ ದಿನ ನಿತ್ಯ ಮಡೆ ಸ್ನಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ…”

ಹೀಗೆ ಏನೋ ಹೇಳಿ ಫೋನ್ ಇಟ್ಟೆ. ನೀವು ಹನ್ನೊಂದು ವರ್ಷಗಳಿಂದ ನನ್ನನ್ನು ಗಮನಿಸಿದ್ದೀರಿ. ‘ಒಲಿದಂತೆ ಹಾಡುವೆ’ಯಲ್ಲಿ ಸಾಹಿತ್ಯಕ ಚರ್ಚೆ, ವಾಗ್ವಾದಗಳು ಕಾಣಿಸಿಕೊಂಡಿರುವುದು ತೀರಾ ಅಪರೂಪ. ಇದಕ್ಕೆ ಮುಖ್ಯ ಕಾರಣ ಚರ್ಚಾ ಪಟುತ್ವದ ಬಗ್ಗೆ ನನಗಿರುವ ಅಲರ್ಜಿ. ‘ಅಕ್ಷರ ಅಟಾಟೋಪ’ ಲೇಖನವನ್ನ ಮೆಚ್ಚಿಕೊಂಡು ಅಸಂಖ್ಯಾತ ಓದುಗರು ನನಗೆ ಫೋನ್ ಮಾಡಿದರು. ನನ್ನ ಬರಹಗಳ ಖಾಯಂ ಓದುಗರಾದ ಮಿತ್ರ ಕೃಷ್ಣಪ್ರಸಾದ್ ಇತರರಂತೆಯೇ ಮೆಚ್ಚಿಕೊಂಡು ಮಾತಾಡಿದರೂ ಕಡೆಯಲ್ಲಿ “ಸಾರ್ ಇದು ನಿಮಗೆ ಬೇಕಿತ್ತಾ? ನೀವು ತೇಜಸ್ವಿಯವರಂತೆ ನಿಮ್ಮ ಪಾಡಿಗೆ ನೀವು ಬರೆದುಕೊಂಡಿದ್ದೀರಿ. ಈ ವಿವಾದ ಎಲ್ಲ ನಿಮಗೆ ಯಾಕೆ? ಸುಬ್ಬಣ್ಣ ಕೃಪಾ ಪೋಷಿತ ನಾಟಕ ಮಂಡಳಿ ಬಹು ದೊಡ್ಡದು ಸರ್. ಹರಕೆಗೂ ಹರಾಜಿಗೂ ಸಂಬಂಧ ಇಲ್ಲ ಅನ್ನೋದು ಅಕ್ಷರನಿಗೆ ಗೊತ್ತಿಲ್ಲ ಅಂದುಕೊಂಡಿದ್ದೀರಾ? ಅದು ಜಾಣ್ಮೆ ಅಷ್ಟೆ. ನೀವು ಏನೇ ಪ್ರತಿಕ್ರಿಯಿಸಿದರೂ ಅದು ಗಾಳಿಯಲ್ಲಿ ಗುದ್ದಿ ನೋಯಿಸಿಕೊಂಡಂತೆ…” ಮುಂತಾಗಿ ಹೇಳಿದರು.

ಹಾಗಿರುವುದೂ ಒಂದರ್ಥದಲ್ಲಿ ತಪ್ಪಾಗುತ್ತದೆ. ‘ದಿವ್ಯ ನಿರ್ಲಕ್ಷತೆಯೇ ವರ ಕವಿಯ ಪಂಥ’ ಎಂದ ಕುವೆಂಪು ಕೂಡ ಪುರೋಹಿತಷಾಹಿಯ ವಿರುದಟಛಿ ಹರಿಹಾಯ್ದರು. ತೇಜಸ್ವಿ ಕೂಡ ಹಲವು ಕಾಲಘಟ್ಟಗಳಲ್ಲಿ ಇಂಥ ಕ್ರಿಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ಅಷ್ಟೆ ಅಲ್ಲ ಕನ್ನಡದ ಎಲ್ಲ ಮಹತ್ವದ ಲೇಖಕರೂ ಈ ಕೆಲಸ ಮಾಡಿದ್ದಾರೆ. ಹಾಗೂ ಇದು ಒಬ್ಬ ಲೇಖಕನ ನೈತಿಕ ಹೊಣೆ ಕೂಡ. ಎಂಬತ್ತರ ದಶಕದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಪಾಲ್ಗೊಂಡಾಗಿನಿಂದ ಈವರೆಗೆ ನಾನೂ ಸಹ ನನ್ನದೇ ಆದ ರೀತಿಯಲ್ಲಿ ಸ್ಪಂದಿಸಿದ್ದೇನೆ. ಲಂಕೇಶರು ಅವರ ಪತ್ರಿಕೆಯಿಂದ ನನ್ನನ್ನು ದೂರ ಮಾಡಲು ಅವರ ಪರ್ಯಾಯ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರತಿಕ್ರಿಯಿಸಿದ್ದೇ ಕಾರಣ. (‘ಆಲೂರು

ತೀರಾ ಇಷ್ಟೊಂದು ಇನ್ನೊಸೆಂಟ್ ಅಂಥ ಗೊತ್ತಿರಲಿಲ್ಲ ಅವನಿಗೆ ಯಾಕೆ ಬೇಕಿತ್ತು ಇದೆಲ್ಲ ಉಸಾಬರಿ.’ಎಂದು ಲಂಕೇಶರು ಹಿರಿಯ ಕವಿ ರಾಮಚಂದ್ರ ಶರ್ಮರ ಬಳಿ ಹೇಳಿದ್ದರಂತೆ!) ಸದಾ ಹೃದಯದ ಮಾತನ್ನ ಆಲಿಸುವ ನಾನು ಎಂದೂ ನನಗೆ ಸರಿ ತೋರಿದ್ದನ್ನ ಹೇಳಲು ಹಿಂಜರಿದವನಲ್ಲ ಹಾಗೆಯೇ ವ್ಯಕ್ತಿ ನಿಂದನೆ ನನ್ನ ಹೃದಯದ ಪರಿಭಾಷೆ ಅಲ್ಲ.

***

ಕಳೆದೆರಡು ವಾರದ ಹಿಂದೆ ಈ ಅಂಕಣದಲ್ಲಿ ಅಕ್ಷರರ ಹರಕೆ-ಹರಾಜು ಬಗ್ಗೆ ಪ್ರತಿಕ್ರಿಯಿಸಿದ್ದನ್ನು ನೀವು ಓದಿದ್ದೀರಿ. ದಿನಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯಲ್ಲಿ ಆ ಲೇಖನ ಪ್ರಕಟವಾಗಿತ್ತು. ಈ ಭಾನುವಾರ ಕನ್ನಡದ ಹಿರಿಯ ಲೇಖಕಿ ವೈದೇಹಿಯವರು ಅಕ್ಷರರ ಲೇಖನವನ್ನ ಬೆಂಬಲಿಸಿ ಬರೆದಿದ್ದಾರೆ. ಅದನ್ನು ‘ನಾ ಓದಿದ ಅಪರೂಪದ, ಹೊಸತೊಂದು ಓದಿನಗತ್ಯದ, ಚಿಂತನಶೀಲ ಬರಹವದು’ ಎಂದು ಬಣ್ಣಿಸಿದ್ದಾರೆ. ಅಕ್ಷರರ ಹರಕೆ ಹರಾಜು ಲೇಖನ ಓದಿದಾಗ ನಾನು ವ್ಯಗ್ರನಾಗಿದ್ದೆ. ತುಂಬಾ ಕೋಪ ಬಂದಿತ್ತು. ಆದರೆ ವೈದೇಹಿಯವರ ಲೇಖನವನ್ನ ಓದಿದಾಗ ಮನಸ್ಸಿಗೆ ತುಂಬಾ ನೋವಾಯ್ತು. ಕನ್ನಡದ ಮುಖ್ಯ ಲೇಖಕರಲ್ಲಿ ಒಬ್ಬರೆಂದು ಹೆಸರಾಗಿರುವ ವೈದೇಹಿಯಂಥವರು ಹೀಗೆ ಚಿಂತಿಸಲು ಸಾಧ್ಯವಾ ಎಂಬ ನೋವು ಅದು. ತಮ್ಮ ವಾದಕ್ಕೆ ಪೂರಕವಾಗಿ ವೈದೇಹಿ ಥೇಟ್ ವರದಿಗಾರ್ತಿಯಂತೆ ಒಂದು ಘಟನೆಯನ್ನು ಬಣ್ಣಿಸುತ್ತಾರೆ. ವರದಿಗಾರ್ತಿ ಎಂದು ಕರೆಯಲು ಕಾರಣವಿದೆ. ಅವರು ಕೂಡ ನಮ್ಮ ದಿನಪತ್ರಿಕೆಗಳ ಕ್ರೈಂ ವರದಿಗಾರರಂತೆ “… ಹೆಸರು ಗೀತಾ ಮಯ್ಯ” ಎಂದು ಆರಂಭಿಸಿ ಆವರಣದಲ್ಲಿ (ಹೆಸರು ಬದಲಿಸಿದೆ) ಎಂದು ಕೊಡುತ್ತಾರೆ. ತಮ್ಮ ಗೆಳತಿಯೊಬ್ಬಳು ಹೀಗೆ ಮಾಡಿದಳು ಅಂದರೆ ಸಾಕಿತ್ತು.

ಕಾಲ್ಪನಿಕ ಹೆಸರು ಮತ್ತು ಅದಕ್ಕೊಂದು ಷರಾದ ಅಗತ್ಯವೇನೂ ಇರಲಿಲ್ಲ. ಇರಲಿ, ಅವರ ಗೆಳತಿಯೊಬ್ಬಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಲೇಖಕಿಯನ್ನ ಕರೆದುಕೊಂಡು ಹೋಗಿ ಅವರ ಅರಿವಿಗೆ ಬರುವ ಮುನ್ನವೇ ಹಠಾತ್ತನೆ ಲೇಖಕಿ ಉಂಡೆದ್ದ ಎಲೆಯ (ಪಂಕ್ತಿ ಭೋಜನ) ಮೇಲೆಯೇ ಉರುಳು ಸೇವೆ ಮಾಡುತ್ತಾಳೆ. ಅದೊಂದು ಕಾಲ್ಪನಿಕ ಹೆಸರಾದ್ದರಿಂದ ಏಕವಚನ ತಾನಾಗಿಯೇ ಬಂದು ಬಿಟ್ಟಿದೆ, ಕ್ಷಮೆ ಇರಲಿ. ನಂತರ ವೈದೇಹಿ ಗೆಳತಿಯ ಕ್ರಮವನ್ನು ಸುಂದರ ಪದಪುಂಜಗಳಿಂದ ಹೀಗೆ ಸಮರ್ಥಿಸಿಕೊಳ್ಳುತ್ತಾರೆ : ಪರಿಹಾರ ಕಾಣದ ವ್ಯಾಕುಲತೆ, ಸಂಕಟಗಳ ಪರಾಕಾಷ್ಠೆಯಲ್ಲಿ ಜಾತಿ ವರ್ಗ, ಮತ ವಿಚಾರ ಯಾವುದೂ ಇರುವುದಿಲ್ಲ. ‘ಸದ್ಯ ಇದು ಆಗಬೇಕು, ಬಂದಿರುವ ಆಪತ್ತು ಕಳೆಯಬೇಕು, ಎದುರಾದ ಗುಡ್ಡ ಮಂಜಿನಂತೆ ಕರಗಬೇಕು.  ಕಾಣದ ದೇವರೇ ಕಾಪಾಡು’ ಎಂಬುದು ಬಿಟ್ಟರೆ ಅಲ್ಲಿ ನಾಚಿಕೆ, ನಾನು, ಅಹಂ ಅವಮಾನ, ಜಾತಿ ಭೇದಗಳ ಗಣನೆಯಿಲ್ಲ. ಪ್ರಾಯಶಃ ಆ ಎಲ್ಲದರ ನೆನಪೇ ಕರಗಿ ಹೋಗುವ ಸ್ಥಿತಿ ಅದು.

ದೇವರ ದಾಸಾನುದಾಸನಾಗುವುದನ್ನ, ಭಕ್ತ ಪರಾನತೆಯನ್ನ ನಮ್ಮ ವಚನಕಾರರು ಹಾಗೂ ದಾಸ ಶ್ರೇಷ್ಠರು ಹೃದಯಂಗಮವಾಗಿ ಹಾಡಿದ್ದಾರೆ. ನಾನತ್ವ ಮೊದಲು ತೊರೆಯಬೇಕು ಎಂದು ಸರಳವಾಗಿ ಹೇಳಿದ್ದಾರೆ. ಇದನ್ನೇ ಲೇಖಕಿ ನಾಚಿಕೆ, ಅಹಂ ಮುಂತಾಗಿ ಕರೆದಿದ್ದಾರೆ. ಆದರೆ ವಚನಕಾರರಿಗಿಂಥ ಹಲವು ಶತಮಾನ ಹಿಂದೆ ಹೋಗಿದ್ದಾರೆ. ಲೇಖಕಿ ಗೀತಾಮಯ್ಯಳ ಬಗ್ಗೆ ಬರೆದದ್ದನ್ನೆ ಮುಂದುವರಿಸಿ, “ವಿಧವೆಯಾದ ಯಮುನಾ ಎಂಬ ಗೆಳತಿ ಗಂಡನ ಮನೆಯವರು, ತಾಯಿಯ ಮನೆಯವರು ಬೇಡವೆಂದರೂ ಕೇಳದೆ ಸ್ವ ಇಚ್ಛೆಯಿಂದ ತಲೆ ಬೋಳಿಸಿಕೊಂಡಳು; ಜಾನಕಿ ಎಂಬ ಸಹಪಾಠಿ ಅಷ್ಟೆಲ್ಲ ವಿದ್ಯೆ ಕಲಿತವಳಾದರೂ ಭಕ್ತಿಯಿಂದ ಬೆತ್ತಲೆ ಸೇವೆ ಮಾಡಿದಳು; ನಮ್ಮ ಮುತ್ತಜ್ಜಿಯ ಗೆಳತಿಯೊಬ್ಬಳು ತುಂಬು ಪ್ರೀತಿಯಿಂದ ಕೆರೆಗೆ ಹಾರವಾಗಿದ್ದಳಂತೆ” …ಮುಂತಾಗಿ ಹೆಸರು ಬದಲಿಸಿ ಅಥವಾ ಬದಲಿಸದೆ ಹೇಳಿಕೊಂಡು ಹೋಗಬಹುದು.

ಇನ್ನಷ್ಟು

ಅ..ಆ..ಇ..ಈ..ಉ..ಊ..

 

ಗೋಷ್ಠಿ ಜ್ಹಲಕ್

ಹೃದಯ ರಂಗೋಲಿ

ಅರಳಿದ ರಸಋಷಿ

 

 

Aspiring Film Maker?

Rama katha vismaya

Previous Older Entries

%d bloggers like this: