ಒಂದು ಪುಸ್ತಕ ಹುಡುಕುತ್ತಾ..

-ಉಷಾ ಕಟ್ಟೆಮನೆ

ಮೌನ ಕಣಿವೆ

ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ ಪುಸ್ತಕವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಕೆಲ ಸಮಯದ ಹಿಂದೆ ಅಂಕಿತಾ, ಸ್ವಪ್ನ, ನವಕರ್ನಾಟಕ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಹುಡುಕಾಡಿದ್ದೆ. ಸಿಕ್ಕಿರಲಿಲ್ಲ. ನವೆಂಬರಿನಲ್ಲಿ ಪ್ರತಿ ಬಾರಿ ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಲ್ಲೂ ಸಿಕ್ಕಿರಲಿಲ್ಲ.

ಪ್ರಸ್ತುತ ವರ್ಷ ರಹಮತ್ ತರಿಕೆರೆಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆಯಲ್ಲ ಹಾಗಾಗಿ ಅವರ ಕೃತಿಗಳೆಲ್ಲಾ ಸಮ್ಮೆಳನದಲ್ಲಿ ದೊರಕಬಹುದೆಂಬ ನಿರೀಕ್ಷೆಯಿತ್ತು.

ಆದರೆ ಶುಕ್ರವಾರ ಟೀವಿ ಮುಂದೆ ಕುಳಿತೆ ನೋಡಿ, ಸಮ್ಮೆಳನಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ಕನ್ನಡದ ನ್ಯೂಸ್ ಚಾನಲ್ ಗಳು ಪೈಪೋಟಿಗೆ ಬಿದ್ದವರಂತೆ ಸಮ್ಮೇಳನದ ಲೈವ್ ಕವರೇಜ್ ಗಳನ್ನು ನೀಡತೊಡಗಿದವು. ಹಿಂದೆ ಒಂದೆರಡು ಸಮ್ಮೇಳನದಲ್ಲಿ ಭಾಗವಹಿಸಿದ್ದ ನನಗೆ ಗೊತ್ತಿತ್ತು. ಸಮ್ಮೇಳನದ ಎಲ್ಲಾ ಸೂಕ್ಷ ವಿವರಗಳನ್ನು ನಮಗೆ ಕಾಣಲು ಸಾಧ್ಯವಿಲ್ಲವೆಂದು. ಆದರೆ ಕ್ಯಾಮರ ಕಣ್ಣುಗಳ ವ್ಯಾಪ್ತಿ ದೊಡ್ಡದು. ಅವು ಯಾವುದೇ ವ್ಯಾಖ್ಯಾನವಿಲ್ಲದೆ ಸಮಸ್ತ ವಿವರಗಳನ್ನು ಬಹು ಸುಲಭವಾಗಿ ವಿಕ್ಷಕರಿದ್ದೆಡೆಗೇ ತಲುಪಿಸಬಲ್ಲವು.

ಇದಲ್ಲದೆ ಸಮ್ಮೇಳನದ ವರದಿಗೆಂದೇ ’ಅವಧಿ’ ಯ ಸಹಯೋಗದಲ್ಲಿ ’ನುಡಿಮನ’ ಎಂಬ ಬ್ಲಾಗ್ ಹುಟ್ಟಿಕೊಂಡಿತ್ತು. ಅದು ಸಚಿತ್ರ ವರದಿಯೊಂದಿಗೆ ಸದಾ ಅಪ್ಡೇಟ್ ಆಗುತ್ತಲಿತ್ತು. ಜನಜಂಗುಳಿಯಿಂದ ಸದಾ ದೂರವಿರಲು ಇಷ್ಟಪಡುವ ನನಗಿದು ಸಾಕಾಗಿತ್ತು.

ಇನ್ನಷ್ಟು

ಹಕ್ಕಿ ಹಾರುತಿದೆ ನೋಡಿದಿರಾ?..

-ಜಿ ಎನ್ ಮೋಹನ್

‘ಓ ಬಿ ವ್ಯಾನ್ ಬೇಕು’ ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ‘ ನೋ’ ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ ವ್ಯಾನ್ ಗೂ ಸಾಹಿತ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬೆಟ್ಟದ ಮೇಲಿನ ನೆಲ್ಲೀಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..?

ಇಂತದ್ದೇ ಗಾಬರಿ ನೇರಾ ನೇರಾ ರಾಮೋಜಿರಾಯರಿಗೇ ಆಗಿತ್ತು. ತೇಜಸ್ವಿ ಇಲ್ಲವಾದಾಗ ಈಟಿವಿಯ ಬುಲೆಟಿನ್ ಗಳೆಲ್ಲವೂ ಶೋಕ ಹೊದ್ದು ಕೂತಿತು. ಗಂಟೆಗೊಮ್ಮೆ ಪ್ರಸಾರವಾಗುವ ಬುಲೆಟಿನ್ ಗಳು ಹಾಂ, ಹ್ಞೂ ಎನ್ನುವುದರೊಳಗೆ ಮುಗಿದು ಹೋಗಿರುತ್ತವೆ. ಹಾಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೈಮ್ ಬುಲೆಟಿನ್ ಮಾತ್ರ ಎಲ್ಲರ ಗರುಡಗಣ್ಣನ್ನೂ ದಾಟಿಯೇ ಬರಬೇಕು. ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲರೂ ‘ನೈಟ್ ವಾಚ್ ಮನ್’ ಗಳೇ..ಹಾಗಿರುವಾಗ ತೇಜಸ್ವಿ ಇಲ್ಲವಾದ ದಿನ ಇಡೀ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟಿದ್ದು ಎಲ್ಲರಿಗೂ ಷಾಕ್ ನೀಡಿತ್ತು. ತೇಜಸ್ವಿ ಇಲ್ಲ ಎನ್ನುವ ಸುದ್ದಿಯ ಮುಂದೆ ಇನ್ನೊಂದು ಸುದ್ದಿಯಾದರೂ ಎಲ್ಲಿ ಅನ್ನೋದು ನನ್ನ ನಿಲುವು. ಚೇರ್ಮನ್ ರಿಂದ ಬುಲಾವ್ ಬಂತು. ಅಲ್ಲ, ಇಡೀ ಬುಲೆಟಿನ್ ಅನ್ನು ಒಬ್ಬರಿಗೇ ಮೀಸಲಿಡೋದು ಎಷ್ಟು ಸರಿ? ಜಗತ್ತಿನ ಎಲ್ಲೂ ಇವತ್ತು ಏನೂ ಘಟಿಸಿಲ್ವ? ಅದೂ ಪ್ರೈಮ್ ಬುಲೆಟಿನ್ ನಲ್ಲಿ’ ಅಂದ್ರು. ನನಗಂತೂ ಅವತ್ತಿನ ಮೆಗಾ ನ್ಯೂಸ್ ತೇಜಸ್ವಿಯೇ ಅನ್ನೋದು ಖಚಿತವಾಗಿ ಹೋಗಿತ್ತು. ‘ತೇಜಸ್ವಿ ವಿನಾ ಬುಲೆಟಿನ್ ನ ಚಲತಿ’ ಅಂತ ನಿರ್ಧರಿಸಿಬಿಟ್ಟಿದ್ದೆ.

ಸಾರ್, ನಮ್ಮ ನ್ಯೂಸ್ ಗೆ ಟಿ ಆರ್ ಪಿ ಬರೋದೇ ಮೊದಲ ಆದ್ಯತೆ ಆದ್ರೆ ನನ್ನನ್ನ ಬಿಟ್ಬಿಡಿ. ನನ್ನ ಮನಸ್ಸು ಹೇಳ್ತಿದೆ. ತೇಜಸ್ವಿ ಇಲ್ಲ ಅನ್ನೋ ಸುದ್ದಿ ಮಾತ್ರಾನೇ ಇವತ್ತು ಜನರಿಗೆ ಮುಖ್ಯ. ಅಕಸ್ಮಾತ್ ಟಿ ಆರ್ ಪಿ ಬರಲಿಲ್ಲ ಅಂದ್ರೆ ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳ್ತೀನಿ. ನೀವೇ ಹೇಳಿದ್ದೀರಲ್ಲಾ ಮೊದಲ ತಪ್ಪು ಮಾಡೋದಿಕ್ಕೆ ಎಲ್ಲರಿಗೂ ಅವಕಾಶವಿದೆ ಅಂತ ಅವರು ಹೇಳಿದ್ದ ಮಾತನ್ನೇ ರಕ್ಷಣೆಗೆ ಗುರಾಣಿಯಾಗಿ ಬಳಸಿದೆ. ರಾಮೋಜಿರಾಯರು ನನ್ನನ್ನ ಒಂದು ಕ್ಷಣ ನೋಡಿದವರೇ ‘ಗೋ ಅಹೆಡ್’ ಅಂದ್ರು. ತೇಜಸ್ವಿ ತೇಜಸ್ವಿಯೇ. ಸತತ ಮೂರು ದಿನ ಈಟಿವಿ ಚಾನಲ್ ತೇಜಸ್ವಿ ಎನ್ನುವ ‘ನಿಗೂಢ ಮನುಷ್ಯ’ ನನ್ನು ಸಾಧ್ಯವಿದ್ದ ದಿಕ್ಕಿನಿಂದೆಲ್ಲಾ ಸ್ಪರ್ಶಿಸಲು ಯತ್ನಿಸಿತು.

ಇನ್ನಷ್ಟು

ನಾವು ಬರತೇವಿನ್ನ ನೆನಪಿರಲಿ, ನಮ್ ನಮಸ್ಕಾರ ನಿಮಗ..

ಸಮ್ಮೇಳನದ ನೂರಾರು ಫೋಟೋಗಳು, ಇನ್ನಷ್ಟು ಮತ್ತಷ್ಟು ನೋಡಬೇಕು ಎನಿಸುವ ಚಿತ್ರಗಳು,

ಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಪ್ರದರ್ಶನ, ಸಾಕಷ್ಟು ಸೈಡ್ ಲೈಟ್ ಗಳ ಫೋಟೋಗಳು

ನಮ್ಮದೇ ‘ನುಡಿ ನಮನ’ದಲ್ಲಿದೆ. ನೋಡಲು ಇಲ್ಲಿ ಕ್ಲಿಕ್ಕಿಸಿ

ಮತ್ತೆ ಗಂಗಾವತಿಯಲ್ಲಿ ಭೇಟಿಯಾಗೋಣ

ಅಲ್ಲೀವರೆಗೆ ‘ನಮ್ ನಮಸ್ಕಾರ ನಿಮಗ’..

ಈ ಚಿತ್ರ: ಚಂದ್ರಕೀರ್ತಿಯದ್ದು

ಇನ್ನು ನೀವು ಯಾರೋ, ಇನ್ನು ನಾನು ಯಾರೋ…

ಸಮ್ಮೇಳನ ಮುಗಿಸುವ ಮುನ್ನ..

ಕನ್ನಡಮ್ಮನ ಪ್ರತಿಮೆ- ಬೇಕೋ ಬೇಡವೋ..?

ಮುಖ್ಯಮಂತ್ರಿ ಯಡಿಯೂರಪ್ಪನವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ. ಅದನ್ನು ಕವಿ ಕೃಷ್ಣಮೂರ್ತಿ ಬೆಳಗೆರೆ ಸಮಾನಾಂತರ ಘೋಷ್ಟಿಯಲ್ಲಿ ತರಾಟೆಗೆ ತೆಗೆದುಕೊಂಡದ್ದೂ ಆಗಿದೆ.

ಈಗ ನೀವು ಹೇಳಿ..ಪ್ರತಿಮೆ ಬೇಕೋ ಬೇಡವೋ..?

ಜೀವಿಯವರ ಭಾಷಣವೂ, ಮುಖ್ಯಮಂತ್ರಿ ಭಾವವೂ..

ಅದಕ್ಕೆ ಹೇಳೋದು ಜರ್ನಲಿಸ್ಟ್ ಗಳು ಅಂದ್ರೆ ಜರ್ನಲಿಸ್ಟ್ ಗಳು ಅಂತ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ ಜಿ ವೆಂಕಟಸುಬ್ಬಯ್ಯ ಅವರು ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಅಂತ ಹೇಳುತ್ತಿದ್ದಾಗೆ ಚಂದ್ರಕೀರ್ತಿಯ ಕ್ಯಾಮೆರಾ ನೋಡಿದ್ದು ಜೀವಿಯವರನ್ನಲ್ಲ, ಬದಲಿಗೆ ಮುಖ್ಯಮಂತ್ರಿ ಯೆಡಿಯೂರಪ್ಪನವರ ಮುಖವನ್ನ.

ಜೀವಿ ಕೊಟ್ಟ ಏಟಿಗೆ ಬದಲಾದ ಸಿ ಎಂ ಭಂಗಿ ಇಲ್ಲಿದೆ

ರವೀಂದ್ರ ಮಾವಖಂಡ ಕಲೆಕ್ಷನ್: ಕಾಯ್ಕಿಣಿ ಮತ್ತು ಕಾಯ್ಕಿಣಿ

ತಂದೆ ಗೌರೀಶ ಕಾಯ್ಕಿಣಿ ಮಗ ಜಯಂತ ಕಾಯ್ಕಿಣಿ

ಅಕ್ಷರ, ಮಡೆಸ್ನಾನ, ಗಾಂಧಿ, ಗೋಡ್ಸೆ..

ಕೆ ವಿ ಅಕ್ಷರ ಪ್ರಜಾವಾಣಿಯಲ್ಲಿ ಬರೆದ ಲೇಖನ ‘ಹರಕೆ ಹರಾಜು’ ಲೇಖನವನ್ನು ನೀವು ಓದಿದ್ದೀರಿ. ಅದು ಇಲ್ಲಿದೆ. ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಈ ಲೇಖನಕ್ಕೆ ಹಿರಿಯ ಚಿಂತಕ ಡಿ ಎಸ್ ನಾಗಭೂಷಣ ಅವರು ಪ್ರತಿಕ್ರಿಯೆ ಕಳಿಸಿದ್ದರು.

ಅದು ಅಲ್ಲಿ ಪ್ರಕಟವಾಗದ ಕಾರಣ ಆ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ. ಅದು ಇಲ್ಲಿದೆ.

-ಡಿ.ಎಸ್.ನಾಗಭೂಷಣ

ಮಾನ್ಯರೇ,

ಪ್ರಜಾವಾಣಿಯ 16.1.2011ರ ಸಾಪ್ತಾಹಿಕ ಪುರವಣಿಯಯಲ್ಲಿ ಕೆ.ವಿ.ಅಕ್ಷರ ಅವರು ಬರೆದಿರುವ ಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ? ಎಂಬ ಲೇಖನ ಓದುತ್ತಿದ್ದಂತೆ, ಗಾಂಧಿ ಕೊಲೆ ವಿಚಾರಣೆ ಸಂದರ್ಭದಲ್ಲಿ ನಾಥೂರಾಮ ಗೋಡ್ಸೆ ಪ್ರಸ್ತುತಪಡಿಸಿದ ಒಂದು ವಾದ ಸರಣಿ ನೆನಪಿಗೆ ಬಂತು. ಗಾಂಧೀಜಿಯವರ ಕೊಲೆಯ ಹಿಂದೆ ಕೆಲಸ ಮಾಡಿದ ಸಿದ್ಧಾಂತ ಮತ್ತು ಅದರ ಪ್ರಭಾವದಿಂದಾಗಿ ಆಯೋಜಿತವಾದ ಕೊಲೆ ಪಿತೂರಿಯ ಸ್ವರೂಪವನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸುವಲ್ಲಿ ನಿರತರಾಗಿದ್ದ ಸರ್ಕಾರಿ ವಕೀಲ ದಫ್ತರಿಯವರು ತಮ್ಮ ವಾದದ ಸಂದರ್ಭವೊಂದರಲ್ಲ್ಲಿ ಗಾಂಧೀಜಿ ಕೊಲೆಯನ್ನು ಅನೈತಿಕ ಅಪರಾಧವೆಂದು ಬಣ್ಣಿಸಿದರು. ಆಗ ಗೋಡ್ಸೆ ಅದನ್ನು ತೀವ್ರವಾಗಿ ಪ್ರತಿಭಟಿಸಿ ಈ ರೀತಿ ವಾದ ಮಂಡಿಸಿದನು:

ಕನಿಷ್ಟ ಪಕ್ಷ ಈ ಪ್ರಕರಣದಲ್ಲಿ ನೀತಿ ಅಥವಾ ಅನೀತಿಯ ಕುರಿತು ಶೋಧಿಸಲು ಸರ್ಕಾರಿ ವಕೀಲರಿಗೆ ಅಧಿಕಾರವಿರುವುದಿಲ್ಲ. ಅಲ್ಲದೇ, ಆ ಪ್ರಶ್ನೆಯ ಬಗೆಗೆ ನಿರ್ಣಯ ಕೊಡುವ ಅಧಿಕಾರವು ಈ ನ್ಯಾಯಾಲಯಕ್ಕೆ ಇರುವುದಿಲ್ಲ. ಇದು ಅವರ ಅಧಿಕಾರ ವ್ಯಾಪ್ತಿಯ ಹೊರಗಿನ ವಿಷಯ. ನೈತಿಕತೆಯ ವ್ಯಾಖ್ಯೆಯು ಸಮಾಜ-ಸಮಾಜಗಳಲ್ಲಿ, ದೇಶ-ದೇಶಗಳಲ್ಲಿ ಯಾವಾಗಲೂ ಬೇರೆ ಬೇರೆಯಾಗಿರುತ್ತದೆ. ಒಂದು ಸಮಾಜದಲ್ಲಿ ಮಹಿಳೆಯರು ಬುರ್ಖಾ ಹಾಕಿಕೊಳ್ಳದಿದ್ದರೆ ಅನೈತಿಕವೆಂದು ತಿಳಿಯಲಾಗುತ್ತದೆ. ಕೆಲವು ದೇಶಗಳಲ್ಲಿ ಮದ್ಯಪಾನವನ್ನು ಅನೈತಿಕವೆಂದು ತಿಳಿಯಲಾಗುವುದಿಲ್ಲ. ಒಂದು ಯುಗದಲ್ಲಿ ಬ್ರಾಹ್ಮಣರಲ್ಲದವರಿಗೆ ವೇದವಿದ್ಯೆಯನ್ನು ಕಲಿಸಲಾಗುತ್ತಿರಲಿಲ್ಲ. ಆದರೆ ಕಾಲಕ್ಕನುಗುಣವಾಗಿ ಎಲ್ಲ ಕಡೆಗಳಲ್ಲೂ ಇದೆಲ್ಲವೂ ಬದಲಾಗುತ್ತಾ ಹೋಯಿತು. ಹಾಗಾಗಿ ಇದರ ಆಧಾರದ ಮೇಲೆ ತ್ರಿಕಾಲಾಬಾಧಿತವಾದ ನೀತಿ-ಅನೀತಿಯ ಬಗೆಗಿನ ಸ್ಥಿರವಾದ ನಿಯಮವನ್ನು ನಿರ್ಧರಿಸಲಾಗುವುದಿಲ್ಲ.

ಇನ್ನಷ್ಟು

ಮತ್ತೆ ಬರ್ತಿದೆ ‘ನಾಟಕ ಬೆಂಗ್ಳೂರ್’

Previous Older Entries

%d bloggers like this: