ಸಾಹಿತ್ಯ ಸಮ್ಮೇಳನ ಅಂಗಳದಲ್ಲಿ ಕರಿಸ್ವಾಮಿ

ಇಲ್ಲಿದ್ದಾರೆ ‘ಜೀವಿ’ ನಮ್ಮೊಂದಿಗೆ..

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಇನ್ನೇನು ಕೆಲವೆ ಗಂಟೆಗಳಲ್ಲಿ “ನುಡಿನಮನದ” ಹಬ್ಬ. ನಲವತ್ತೊಂದು ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಜಾತ್ರೆಯ ತೇರನ್ನು ಎಳೆಯಲಾಗುತ್ತಿದೆ. ಎಪ್ಪತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಬೆಂಗಳೂರಿನಲ್ಲೇ ನೆಲೆಸಿರುವ, ನಿಘಂಟು ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರು.

ವಯಸ್ಸು 98, ಆದರೆ ಪದಗಳ ಬಗ್ಗೆವಿಮರ್ಶೆ, ಸಾಹಿತ್ಯದ ಬಗೆಗಿನ ಅವರ ಉತ್ಸಾಹ 28ರದು. ಕುಗ್ಗದ ಹುಮ್ಮಸ್ಸಿಗ್ಗೊಂದು ಉದಾಹರಣೆ ಕಳೆದ ವರ್ಷ ಪ್ರಕಟಗೊಂಡ ಜಿ.ವಿ.ಯವರ ಹೊಸ ಹೊತ್ತಿಗೆ “ಕುಮಾರವ್ಯಾಸನ ಅಂತರಂಗ-ಯುದ್ಧ ಪಂಚಕದಲ್ಲಿ”. ಒಂದು ಭಾಷೆಯ ಬೆಳವಣಿಗೆಗೆ ಪದಸಂಪತ್ತಿನ ಬೆಳವಣಿಗೆಯು ಅತಿಮುಖ್ಯ, ಇಂತಹ ಬೆಳವಣಿಗೆಯ ಸಂದರ್ಭದಲ್ಲಿ ಕನ್ನಡದಲ್ಲಿ ಹುಟ್ಟಿಕೊಂಡ ಪದಾರ್ಥಗಳ ಗೊಂದಲವನ್ನು ಸೂಕ್ತವಾಗಿ ವಿಶ್ಲೇಷಿಸಿ, ಅರ್ಥೈಸಲು ಶ್ರಮಪಟ್ಟವರಲ್ಲಿ ವೆಂಕಟಸುಬ್ಬಯ್ಯನವರು ಪ್ರಮುಖರು ಹಾಗೂ ಸತತ 18 ವರ್ಷಗಳ ಕಾಲ ಪ್ರತಿ ವಾರವೂ ಬರೆದ  “ಇಗೋ ಕನ್ನಡ” ಅಂಕಣ ಅತ್ಯಂತ ಜನಪ್ರಿಯ.

ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡಲು ಸಿದ್ಧತೆ ನಡೆಸುತ್ತಿರುವ

ಜಿ.ವೆಂಕಟಸುಬ್ಬಯ್ಯ ನವರೊಂದಿಗಿನ ನೇರ ಮಾತುಕತೆ ಇಲ್ಲಿದೆ;

* ಸಾಹಿತ್ಯ ಸಮ್ಮೇಳನ ಅಂದ್ರೆ ಒಂದು ಸಂತೆ, ಜಾತ್ರೆ ಅಂತಾರೆ…., ಆದರೆ ನಿಮ್ಮ ಅಭಿಪ್ರಾಯದಲ್ಲಿ ಸಮ್ಮೇಳನ ಅಂದ್ರೇ…..?

ಸಾಹಿತ್ಯವನ್ನು ರಚಿಸುವ ಸಾಹಿತಿಗಳ, ಅದನ್ನು ವಿಶ್ಲೇಷಿಸುವ-ವಿಮರ್ಷಿಸುವ ವಿದ್ಯಾವಂತರ, ತಿಳಿಯಲು ಹಾತೊರೆಯುವ ವಿದ್ಯಾರ್ತಿಗಳ, ಎಲ್ಲವನ್ನೂ ಆಸಕ್ತಿಯಿಂದ ನೋಡುವ, ಅನುಸರಿಸುವ ಯುವಕ-ಯುವತಿಯರು ಒಗ್ಗೂಡಲು ಸಾಹಿತ್ಯ ಸಂಸ್ಥೆಯೊಂದರಿಂದ ವಾರ್ಷಿಕವಾಗಿ ನಡೆಯುವ ಸಮಾವೇಶ ಈ ಸಾಹಿತ್ಯ ಸಮ್ಮೇಳನ. ಇಲ್ಲಿ ಎಲ್ಲರೂ ಎಲ್ಲರನ್ನೂ ಹತ್ತಿರದಿಂದ ಭೇಟಿಯಾಗುವ ಹಾಗೂ ಹೊಸತನ್ನು ಹಂಚಿಕೊಳ್ಳುವ ಅವಕಾಶ ಹೇರಳವಾಗಿರುತ್ತದೆ ಮತ್ತು ಬರವಣಿಗೆ ತಿಳಿಯಲಿ, ಬೆಳೆಯಲಿ ಎನ್ನುವುದು ಉದ್ದೇಶ. ಕೇವಲ ಊಟ-ಉಪಚಾರ, ಸಂಜೆಯ ಮನರಂಜನೆ ಇವಿಷ್ಟೇ ಸಮ್ಮೇಳನವಲ್ಲಾ. ಯುವಕರಿಗೆ ಮಾರ್ಗದರ್ಶನ ನೀಡಲು ಸೇರುವ ಹಿರಿಯರ ಕೂಟ ಇಲ್ಲಿ ಬಹಳ ಮುಖ್ಯವಾದದ್ದು.

* ಕನ್ನಡ ನಿಘಂಟನ್ನು ಹೊರತರಲು ಸ್ಪೂರ್ತಿ…..?

ಇದು ಒಬ್ಬನಿಂದಾದ ಕೆಲಸವಲ್ಲ, ಇದರ ಮೂಲ ಪುರುಷರು ಎ.ಆರ್. ಕೃಷ್ಣಶಾಸ್ತ್ರಿಗಳು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ಎಲ್ಲಾ ವಿದ್ವಾಂಸರು ಕೂಡಿ ಉದ್ದೇಶವನ್ನ ನಿಘಂಟಿನ ಅವಶ್ಯಕತೆಯನ್ನು ಸೂಚಿಸಲಾಯಿತು. ಆದರೆ 1943ರವರೆಗು ಹಳೆಗನ್ನಡದ ‘ರಳ’ನಿಘಂಟು ಮಾತ್ರ ಪ್ರಕಟವಾಗಿತ್ತು. ಆನಂತರದಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದ ಪದಗಳ ಸಂಗ್ರಹದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ, ಮುಂದೆ 1964ರಲ್ಲಿ ಪರಿಷತ್ತಿನ ಅಧ್ಯಕ್ಷನಾದಾಗ ಕೃಷ್ಣಶಾಸ್ತ್ರಿಗಳ ಸೂಕ್ತ ಮಾರ್ಗದರ್ಶನದಿಂದ ಹೆಚ್ಚಿನ ಕೆಲಸಗಳು ಸಾಗಿದವು.

* ಇಂದಿನ ಇಂಗ್ಲೀಷ್ ಪ್ರಭಾವದ ನಡುವೆ ಕನ್ನಡವನ್ನು ಬೆಳೆಸೋಕೆ ಇರೋ ಮಾರ್ಗ…..?

ಮುಖ್ಯವಾಗಿ ಕನ್ನಡದ ಬರಹಗಳು ಹೆಚ್ಚಾಗಬೇಕು, ಬಳಸದೇ ಉಳಿದ ಶಬ್ಧಗಳು ಹೊರಬಂದು ಜನರನ್ನು ತಲುಪಬೇಕು. ಒಂದು ಭಾಷೆ ಬೆಳೆಯುವಾಗ ಅದು ತನ್ನ ಸುತ್ತಮುತ್ತಲಿನಿಂದ ಪದಗಳನ್ನು ಎರವಲು ಪಡೆಯಬೇಕಾದದು ಅನಿವಾರ್ಯವಾಗುತ್ತದೆ, ಹೀಗೆಯೇ ಕನ್ನಡವು ಇಂಗ್ಲೀಷ್ ನಡುವೆ ಬೆಳೆಯುತ್ತಿದೆ.

More

ವೇದಿಕೆಯೂ ಸಿದ್ಧವಾಯ್ತು..

ಇಲ್ಲೂ ಭೇಟಿ ಕೊಡಿ- ನುಡಿನಮನ

ಅಡುಗೆ ಮನೆ ರೆಡಿ..


ಸಮ್ಮೇಳನಕ್ಕೂ ಬಂತು ಅರಿಷಿಣ ಕುಂಕುಮ!!

ಭೇಟಿ ಕೊಡಿ- ನುಡಿನಮನರಂಗೇರುತ್ತಿರುವ ಅಕ್ಷರ ಜಾತ್ರೆ …

ಅಕ್ಷರ ಜಾತ್ರೆಗೆ ಕುಶಲಕರ್ಮಿಗಳ ಭರದ ಸಿದ್ಧತೆ

ಭೇಟಿ ಕೊಡಿ- ನುಡಿನಮನ

ಟೈಮ್ ಪ್ಲೀಸ್..

ಸಮ್ಮೇಳನದ ಸಂಭ್ರಮಕ್ಕೆ ದುಡಿದಿದ್ದೇವೆ ನಾವು

ನೀವು ಬರುವವರೆಗೂ ಶಾಮಿಯಾನವೇ ನಮಗೆ ಆಶ್ರಯದ ತಾವು..

ಭೇಟಿ ಕೊಡಿ- ನುಡಿನಮನ

ಇಂದು ‘ಭಾಗವತರು’ ಉತ್ಸವದಲ್ಲಿ..

ಸಮ್ಮೇಳನದ ಅಂಗಳದಲ್ಲಿ ಆಡು, ಆಡೂ ನೀ ಆಟ ಆಡೂ..

ಒಂದರಿಂದ ಹತ್ತು ಹೀಗಿತ್ತು

ಸಮ್ಮೇಳನದ ಅಂಗಳದಲ್ಲಿ ಆಟವು ಮುಂದುವರೆದಿತ್ತು..

ಭೇಟಿ ಕೊಡಿ- ನುಡಿನಮನ

ಸಮ್ಮೇಳನ ನಮಗೆ ಇಂದಿನಿಂದಲೇ ಶುರು

ಎಲ್ಲರಿಗೂ ಸಮ್ಮೇಳನ ನಾಳೆಯಿಂದ ಶುರುವಾದರೆ ನಮಗೆ ಇಂದಿನಿಂದಲೇ ಶುರು. ಅವಧಿ- ಆಲೆಮನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ರೂಪಿಸಿರುವ ‘ನುಡಿನಮನ’ದ ಕೌಂಟ್ ಡೌನ್ ಶುರುವಾಗಿದೆ. ನಮ್ಮ ಇರುವೆ ಬಳಗ ಈಗಾಗಲೇ ಬೆಂಗಳೂರಿನ ಎಲ್ಲೆಡೆ ಸಂಚರಿಸುತ್ತಿದೆ.

ಸಮ್ಮೇಳನ ಎನ್ನುವುದು ವೇದಿಕೆಯ ಮೇಲೆ ಉದ್ಘಾಟನೆಯಿಂದ ಆರಂಭವಾಗುತ್ತದೆ ಎಂದು ನಾವು ನಂಬಿಲ್ಲ. ಹಾಗಾಗಿ ನೀವೇ ಕಾದು ನೋಡಿ ನಮ್ಮ ಬಳಗ ಹೊತ್ತು ತರುವ ಬೊಂಬಾಟ್ ಫೋಟೋ ಸುದ್ದಿಗಳನ್ನು

10-9-8-7-6-5-4-3-2-1….

Previous Older Entries

%d bloggers like this: