ಚಂದ್ರಶೇಖರ ಆಲೂರು ಕಾಮೆಂಟರಿ: ಅಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ಒಟ್ಟಾಗಿ ನೆಲೆಸಲಿ

ಇಲ್ಲಿ ಚಂದ್ರಶೇಖರ್ ಆಲೂರು ಅವರು ಈಜಿಪ್ಟ್ ಬಗ್ಗೆ ತಮ್ಮ ಸ್ಪೆಷಲ್ ಒಳನೋಟವನ್ನು ನೀಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಮುಬಾರಕ್ ರಾಜಿನಾಮೆ ಘೋಷಿಸಿರಲಿಲ್ಲ.

ಅರಬ್ ಲೋಕವನ್ನು ಆವರಿಸಿದ ‘ಜಾಸ್ಮಿನ್ ಕ್ರಾಂತಿ’ಯ ಕಂಪು

chitra: satish Acharya

ಯಾವಾಗಲೂ ಮೊದಲು ಕೆಟ್ಟದ್ದೇ ನೆನಪಾಗುತ್ತದೆ ಎನ್ನುತ್ತಾರೆ. ಅಥವಾ ಮನಸ್ಸು ಕೆಡುಕನ್ನೇ ನಿರೀಕ್ಷಿಸುತ್ತದೆ. ಈಗ ಆಗಿದ್ದು ಅದೇ. ಅದೇಕೋ ಈಜಿಪ್ಟಿನ ಕೈರೊ, ಅಲೆಗ್ಝಾಂಡ್ರಿಯಾ, ಸುಯಜ್ ಮುಂತಾದ ನಗರಗಳಲ್ಲಿ ಆರಂಭದ ದಿನ ಬಂದ ಜೀನ್ಸ್ ಪ್ಯಾಂಟ್ ಟಿ-ಶರ್ಟ್ ನ ಯುವಕ ಯುವತಿಯರನ್ನು ಕಂಡಾಗ ನೆನಪಿಗೆ ಬಂದದ್ದು ೧೯೮೯ರಲ್ಲಿ ಚೈನಾದ ತಿಯಾನ್ ಮನ್ ಚೌಕದಲ್ಲಿ ನಡೆದ ಘಟನೆ. ಆರಂಭದ ದಿನ ಬಂದವರು ಚೈನಾ ಯುನಿವರ್ಸಿಟಿಯ ಐನೂರು ವಿದ್ಯಾರ್ಥಿಗಳು. ನಂತರ ಪ್ರತಿಭಟನೆ ತೀವ್ರವಾಗುತ್ತಾ ಹೋದಂತೆ ಚೈನಾದ ನಾಲ್ಕುನೂರು ನಗರಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಅಂದು ಬೀಜಿಂಗ್ ನ ತಿಯಾನ್ ಮನ್ ಚೌಕ ಸೇರಿದರು. ಎಲ್ಲರಲ್ಲಿಯೂ ಇದ್ದುದು ಸ್ವಾತಂತ್ರ್ಯದ ಅಭೀಪ್ಸೆ . ಚೈನಾದ ಕಮ್ಯುನಿಸ್ಟ್ ಆಡಳಿತ ಏಳು ವಾರಗಳ ಕಾಲ ಇದನ್ನು ಸಹಿಸಿ ನಂತರ ಎಲ್ಲ ವಿದೇಶಿ ಮಾಧ್ಯಮದವರನ್ನೂ ದೇಶದಿಂದ ಹೊರ ಹಾಕಿ ಜೂ. ನಾಲ್ಕರಂದು ಬೀಜಿಂಗ್ ನಲ್ಲಿ ಸೈನ್ಯದ ಕಾರ್ಯಾಚರಣೆ ನಡೆಸಿ ತನ್ನ ಮಕ್ಕಳನ್ನೇ ಹೊಡೆದು ಸಾಯಿಸಿ ಹುಳುಗಳಂತೆ ಹೊಸಕಿ ಹಾಕಿತು. ಸಾವಿರಾರು ಮಕ್ಕಳು ಈ ಕ್ರೂರ ಕೃತ್ಯದಿಂದ ಹತರಾದರೂ ಬೀಜಿಂಗ್ ಏನೇನೂ ಆಗಿಲ್ಲ ಎಂಬಂತೆ ಮರುದಿನವೇ ಮಡಿಮಾಡಿಕೊಂಡು ನಿಂತು ಬಿಟ್ಟಿತು.

ಆಗಲೂ ಹೊರ ಜಗತ್ತು ಮಕ್ಕಳ ಮೇಲಿನ ಈ ಕೃತ್ಯವನ್ನ ತೀವ್ರವಾಗಿ ಖಂಡಿಸಿತು. ಚೈನಾದ ಕಮ್ಯುನಿಸ್ಟ್ ಆಡಳಿತ ಅಮೆರಿಕ ಮತ್ತು ಯುರೋಪ್ ನ ದುಷ್ಟಪ್ರಭಾವದಿಂದ ಹಾಳಾಗಿದ್ದ ಮಕ್ಕಳನ್ನ ಸರಿ ದಾರಿಗೆ ತಂದುದಾಗಿ ಹೇಳಿಕೊಂಡಿತು.

ಚೈನಾದಲ್ಲಿರುವುದು ಕಮ್ಯುನಿಸ್ಟ್ ಆಡಳಿತವಾದರೆ ಈಜಿಪ್ಟ್ ನಲ್ಲಿರುವುದು ಏಕವ್ಯಕ್ತಿಯ ‘ಪ್ರಜಾಪ್ರಭುತ್ವ’. ಈಜಿಪ್ಟ್ ನ ಪಾರ್ಲಿಮೆಂಟ್ ಗೆ ನಾಲ್ಕು ನೂರ ಹದಿನಾಲ್ಕುಸದಸ್ಯರು ಜನರಿಂದ ಆಯ್ಕೆಯಾಗುತ್ತಾರೆ. ಆದರೆ ಮೂವತ್ತು ವರ್ಷಗಳಿಂದ ಹೊಸ್ನೆ ಮುಬಾರಕ್ . ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅಣಕ ಮಾಡುತ್ತಾನೆ. ಚುನಾವಣೆ ಎಂಬುದು ಹೆಸರಿಗೆ ಮಾತ್ರ . ಹಲವು ಕ್ರಾಂತಿಗಳನ್ನ , ಅನವರತ ರಕ್ತಪಾತವನ್ನು ಕಂಡ ರಾಷ್ಟ್ರ ಬಯಸುವುದು ಪ್ರಜಾಪ್ರಭುತ್ವವನ್ನಲ್ಲ, ಶಾಂತಿ ಮತ್ತು ಸ್ಥಿರತೆಯನ್ನ ಎಂಬುದನ್ನ ಅರಿತಿದ್ದ ಮುಬಾರಕ್ ಮೂವತ್ತು ವರ್ಷಗಳಿಂದ ಎಲ್ಲ ಬಗೆಯ ವಿರೋಧವನ್ನೂ ಹಣಿದು ಹಾಕಿದ. ಈಜಿಪ್ಟ್ ನಲ್ಲಿ ಶಾಂತಿ ಮತ್ತು ಸ್ಥಿರತೆತಂದಿರುವುದಾಗಿ ಹೇಳಿಕೊಂಡ. ನಮ್ಮ ದೇಶದ ಈಚಿನ ಚುನಾವಣೆಗಳು, ಪಕ್ಷಾಂತರ ರಾಜಕಾರಣಿ-ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟತೆಯನ್ನು ಕಂಡಾಗ ಮಿತ ಸರ್ವಾಧಿಕಾರ ಇದಕ್ಕೆ ಪರಿಹಾರವೇನೋ ಅನ್ನಿಸಿ ಬಿಡುತ್ತದೆ. ಆದರೆ ಸರ್ವಾಧಿಕಾರಕ್ಕೆ ಮಿತಿ ಎಂಬುದು ಇಲ್ಲ . ಇದಕ್ಕೆ ಮುಬಾರಕ್ ನೇ ಉದಾಹರಣೆ. ಆತ ಇಂದು ಹಲವು ಲಕ್ಷ ಕೋಟಿ ರುಪಾಯಿಗಳ ಒಡೆಯ. ಅಮೆರಿಕಾ ಮತು ಯುರೊಪ್ ನಲ್ಲಿ ಅಪಾರ ಆಸ್ತಿ ಮಾಡಿದ್ದಾನೆ. ಹಾಗೆಯೇ ಆತನ ಸಹಾಯಕರು ಮತ್ತು ಚೇಲಾಗಳುಕೂಡ ಕೊಬ್ಬಿದ್ದಾರೆ.

ಇನ್ನಷ್ಟು

ಡೊಳ್ಳಿನ ತಾಳಕ್ಕೆ ಬಣ್ಣದ ಹೆಜ್ಜೆ …

-ಭೀಮಣ್ಣ ಗಜಾಪುರ

ಕನ್ನಡ ಜಾನಪದ

(ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ ಡೊಳ್ಳು ಕಲೆಯ ಕಥಾನಕವನ್ನು ಕೂಡ್ಲಿಗಿಯ ಕ್ರಿಯಾಶೀಲ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಇಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. –ಸಂ)

ಬಣ್ಣ ಹಚ್ಚಿ ರಂಗಸಜ್ಜಿಕೆಯ ಮೇಲೆ 25ವಷ೯ಗಳಿಗಿಂತಲೂ ಹೆಚ್ಚು ಕಾಲ ನಟನೆ ಮತ್ತು ನಾಟ್ಯದ ಮೂಲಕ ರಂಗಾಸಕ್ತರನ್ನು ಸೆಳೆದ ಕೂಡ್ಲಿಗಿ ತಾ.ವಿರುಪಾಪುರ ಎಂಬ ಪುಟ್ಟ ಹಳ್ಳಿಯ ಹತ್ತಾರು ಕಲಾವಿದೆಯರು ಈಗ ಇಳಿವಯಸ್ಸಿನಲ್ಲಿಯೂ ತಮ್ಮ ಕ್ರಿಯಾಶೀಲತೆಯಿಂದ ಈಗ ಡೊಳ್ಳುಕುಣಿತ ಕಲಿಯಲು ಮುಂದಾಗಿದ್ದು ಈ ಮೂಲಕ ಹಿರಿಯ ರಂಗಕಲಾವಿದೆಯರು ತಮ್ಮ ಹಳ್ಳಿಯ ಇತರೆ ಕಿರಿಯ ರಂಗನಟಿಯರಿಗೂ ಮರೆಯಾಗುತ್ತಿರುವ ಭಜನೆ,ಕೋಲಾಟ,ಬಯಲಾಟ, ಜಾನಪದ ಸಣ್ಣಾಟ,ಡೊಳ್ಳುಕುಣಿತ ಕಲಿಸುವುದರ ಮೂಲಕ ಇಡೀ ಹಳ್ಳಿಯಲ್ಲಿಯೇ ಸಾಂಸ್ಕ್ರುತಿಕ ವಾತಾವರಣ ಮೂಡಿಸಿರುವುದು ಇಲ್ಲಿಯ ರಂಗನಟಿಯರ ಸಾಧನೆಯಾಗಿದೆ.

ಬಣ್ಣ ಹಚ್ಚಿ ಹಳ್ಳಿಗಳಲ್ಲಿ ಪೌರಾಣಿಕ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ನಿರಂತರ 35-40ವಷ೯ಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು ಕಂಡ ವಿರುಪಾಪುರದ ಹತ್ತಾರು ಮಹಿಳೆಯರು ಇನ್ನೇನು ನಮ್ಮ ವಯಸ್ಸು ಇಳಿಮುಖವಾಗ್ತಿದೆ ಸಾಕಾಪ್ಪಾ ಈ ನಟನೆ ಸಹವಾಸ ಎಂದು ಮನೆಯಲ್ಲಿ ಇರಬಹುದಾಗಿತ್ತು.

ಆದರೆ ವಿರುಪಾಪುರದ ಈ ಹಿರಿಯ ರಂಗನಟಿಯರು ತಮ್ಮ ಹಳ್ಳಿಯ ಈಗಿನ ಯುವ ವಯಸ್ಸಿನ ರಂಗನಟಿಯರಿಗೆ ಈಗ ಮಾಗ೯ದಶ೯ಕರಾಗಿ ರಂಗಕಲೆಯ ಜೊತೆಗೆ ಅವರಿಗೆ ನಮ್ಮ ಹಳ್ಳಿಗಳಿಂದ ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಕಲಿಸುತ್ತಾ ಇದರ ಜೊತೆಗೆ ತಾವು ಅಭಿನಯಿಸುತ್ತಾ ಇಡೀ ಗ್ರಾಮವನ್ನೇ ಕಲೆಯ ತವರೂರಾಗಿ ಮಾಡಿರುವ ಇಲ್ಲಿಯ ಹಿರಿಯ ರಂಗನಟಿಯರ ಕಾಯ೯ ಮಾತ್ರ ಮಾದರಿಯಾಗಿದೆ.

ಇನ್ನಷ್ಟು

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

ನಾಟಕ ಬರೆಯೋಣ …

ಕನ್ನಡಿ ಬಿಂಬದ ನೆರಳು …

%d bloggers like this: