‘ನೆನಪಿರಲಿ, ಪ್ರೀತಿ ಕಾಮವಲ್ಲ’

‘ನೆನಪಿರಲಿ, ಪ್ರೀತಿ ಕಾಮವಲ್ಲ’ ಎನ್ನುವ ಬೆಸ್ಟ್ ವ್ಯಾಲೆಂಟೈನ್ ಗಿಫ್ಟ್ ಸಿದ್ಧವಾಗಿದೆ. ಪತ್ರಕರ್ತ ರವಿ ಅಜ್ಜೀಪುರ ಬರೆದ ಪುಸ್ತಕವನ್ನು ರವಿ ಬೆಳಗೆರೆ, ಶಶಿಕಲಾ ವೀರಯ್ಯಸ್ವಾಮಿ ಬಿಡುಗಡೆ ಮಾಡಿದರು.

ಗಾಣಧಾಳು ಶ್ರೀಕಂಠ ಸಂಭ್ರಮದಿಂದ ತೆಗೆದ ಚಿತ್ರಗಳು ಇಲ್ಲಿವೆಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ  ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‘ರಿಯಾಲಿಟಿ ಶೋ’ಗಳ ರಿಯಾಲಿಟಿ

-ಜಿ ಎನ್ ಮೋಹನ್

‘ಅರ್ಬುದ ಕಾಡು’ ನಾಟಕ ಮಾಡುತ್ತಿದ್ದೇವೆ ಬನ್ನಿ ಅಂತ ‘ವಿಜಯನಗರ ಬಿಂಬ’ದ ಶೋಭಾ ವೆಂಕಟೇಶ್ ಅವರು ಕರೆದಾಗ ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ…’ ನೆನಪಿಗೆ ಬಂತು. ಯಾಕೆಂದರೆ ‘ಅರ್ಬುದ’ ಎಂಬ ಹೆಸರೇ ಹಾಗೇ..ಅದು ಪುಣ್ಯಕೋಟಿಯನ್ನೂ, ಅದು ಸತ್ಯವಾಕ್ಯ ಪರಿಪಾಲನೆ ಮಾಡಿದ್ದನ್ನು ನೋಡಿ ಮನನೊಂದು ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟ ಆ ಅರ್ಬುದನನ್ನೂ ನೆನಪಿಸಿಬಿಡುತ್ತದೆ. ಎಸ್ ವಿ ಕಶ್ಯಪ್ ಅರ್ಬುದ ಇದ್ದ ಕಾಡನ್ನು ತಮ್ಮ ನಾಟಕದ
ವಸ್ತುವಾಗಿ ಕೈಗೆತ್ತಿಕೊಂಡಿದ್ದಾರೆ ಎಂದು ಗೊತ್ತಾದಾಗ ಇದು ಅಗೈನ್ ಅದೇ ಪುಣ್ಯಕೋಟಿ-ಹುಲಿರಾಯನ ಕಥೆಗೆ ಕೊಟ್ಟ ಮತ್ತೊಂದು ರೀತಿಯ ವ್ಯಾಖ್ಯಾನ ಅಷ್ಟೇ ಎಂದುಕೊಂಡಿದ್ದೆ.

ಆದರೂ ಈ ನಾಟಕ ನೋಡಲು ನನಗೆ ಕುತೂಹಲ ಇದ್ದದ್ದು ಯಾಕೆಂದರೆ ಎಸ್ ವಿ ಸುಷ್ಮಾ ಈ ನಾಟಕ ನಿರ್ದೇಶಿಸುತ್ತಿದ್ದಾರೆ ಎಂಬ ಕಾರಣಕ್ಕೆ. ಸುಷ್ಮಾ ಈ ಹಿಂದೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಹೂ ಅರಳುವ ಸಮಯ’ವನ್ನು ರಂಗಕ್ಕೆ ತಂದು ಕೂರಿಸಿದ ರೀತಿ ನೋಡಿ ದಂಗಾಗಿ ಹೋಗಿದ್ದೆ. ಮಕ್ಕಳ ಒಳಗಿನ ಆ ನವಿರುತನವನ್ನು ಹಾಗಾಗೇ ಎತ್ತಿ ಕೊಟ್ಟು ಬಿಡುವ ಸುಷ್ಮಾ ರಂಗದ ಮೇಲೆ ಒಂದು ಮ್ಯಾಜಿಕ್ ಸಾಧಿಸಿದ್ದರು.

ಆ ಕಾರಣದಿಂದ ನಾಟಕಕ್ಕೆ ಹೋದ ನನಗೆ ಒಂದು ರೀತಿಯಲ್ಲಿ ನನ್ನನ್ನೇ ಕಟಕಟೆಯಲ್ಲಿ ನಿಲ್ಲಿಸಲು ನೋಡುತ್ತಿದ್ದಾರೇನೋ ಎನ್ನುವ ಅನುಭವವಾಯಿತು. ಅರ್ಬುದ ಕಾಡನ್ನು ಕಶ್ಯಪ್ ಕಂಡ ರೀತಿಯೇ ಭಿನ್ನ. ‘ಶುದ್ಧಗೆ’ ಬರೆದ ಕಶ್ಯಪ್ ಭಾಷೆಗೆ ಒಂದು ಚಂದಾದ ಅರ್ಥ ಕೊಟ್ಟಿದ್ದಾನೆ ಎಂದು ಕೇಳಿ ಗೊತ್ತಿತ್ತು. ಆದರೆ ‘ಅರ್ಬುದ ಕಾಡು’ ನೋಡಿದಾಗ ಎ ಎಸ್ ಮೂರ್ತಿ ಅವರ ಕುಟುಂಬದಲ್ಲಿ ಸಮರ್ಥ ನಾಟಕಕಾರನ ಆಗಮನವಾಗಿದೆ ಎಂಬುದಂತೂ ಗೊತ್ತಾಗಿ ಹೋಗುತ್ತದೆ.

More

ಪ ಸ ಕುಮಾರ್ ಗೆ ಪ್ರಶಸ್ತಿ ಸಂಭ್ರಮ

ಹಿರಿಯ ಕಲಾವಿದ ಪ ಸ ಕುಮಾರ್ ಹಾಗೂ ಶಿಲ್ಪಿ ಮೌನೇಶ್ ಬಡಿಗೇರ್ ಅವರಿಗೆ ಕಲಾಧ್ಯಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಜೆ ಎಸ ಖಂಡೆ ರಾವ್, ಚಿ ಸು ಕೃಷ್ಣ ಸೆಟ್ಟಿ, ದೇವು ಪತ್ತಾರ್,  ಕೃಷ್ಣ ರಾಯಚೂರು ಭಾಗವಹಿಸಿದ್ದರು.

ಆ ಸಂಭ್ರಮದ ನೋಟ ಇಲ್ಲಿದೆ..

ಕಿ ರಂ ನಿಮ್ಮ ಚಿತ್ರ

ಅಕ್ಷತಾ.ಕೆ

ಚಿತ್ತಜ್ಞಾನಿಗಳ ಸಭೆಯಲ್ಲಿ

ಆಸನವು ಇವರಿಗಾಗಿ ಸಜ್ಜಾಗುವ ಹೊತ್ತಲ್ಲಿ

ಕಿರಂ ಅದೇ ಸಭಾಂಗಣದ

ಪಕ್ಕದ ಗಲ್ಲಿಯ ಪುಟ್ಟ ಹೊಟೇಲಿನಲ್ಲಿ

ಶಿಷ್ಯರಿಗೆ ಒತ್ತಾಯ ಮಾಡುತ್ತಾ

ದೋಸೆ ತಿನ್ನಿಸುತಿದ್ದರು

.

ದೋಸೆಯ ಜೊತೆ ಕ್ರಿಕೆಟ್,

ರಾಜಕೀಯ, ಬಂಡಾಯ ಎಲ್ಲವನ್ನು ನೂತು

ಕೆಲವೊಮ್ಮೆ ಜೋತು,

ಹಲವೊಮ್ಮೆ ಸೋತು,

ಕೊನೆಗೊಮ್ಮೆ ಕಾವ್ಯಕ್ಕೇ ಆತು

ಮರೆಯದೇ ಮಾಣಿಯ

ಜೇಬಿಗೆ ಹಸಿರು ನೋಟು ತುರುಕಿ

ಧನ್ಯತೆಯ ನಗೆ ಪಡೆದು

ವೇದಿಕೆಗೆ ನಡೆದು ಬಂದರೆ ನಿಗದಿತ ಅವಧಿಗೆ

ಐದ್ಹತ್ತು ನಿಮಿಷ ಉಳಿದಿರುತಿತ್ತು.

More

ನಾನೇಕೆ ಮೊಬೈಲ್ ಬಿಸಾಡಿದೆ..

-ವಿ ಎನ್ ಲಕ್ಷ್ಮೀನಾರಾಯಣ

2ಜಿ, 3ಜಿ ಹಗರಣ ನನಗೆ ಮೊಬೈಲ್ ವ್ಯಾಪಾರದ ಇನ್ನೊಂದು ಮುಖವನ್ನು ಪರಿಚಯಿಸಲು ಸಹಾಯಕವಾಗಿದೆ. ಇದು ಕೇವಲ ಯಾರೋ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಗೋಲ್ ಮಾಲ್ ಪ್ರಶ್ನೆಯಲ್ಲ. ಮನಮೋಹನ ಸಿಂಗ್ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಎಲ್ಲಾ ಕ್ರಮಗಳೂ  ಉದ್ದೇಶದಲ್ಲಿ ಪ್ರಜಾತಾಂತ್ರಕವೆಂಬಂತೆ ಕಾಣುತ್ತಲೇ ಪರಿಣಾಮದಲ್ಲಿ ಅಮೆರಿಕನ್ ಬಂಡವಾಳ/ರಾಜಕೀಯ ಮಾದರಿಯ ಕೇಂದ್ರೀಕರಣ ಮತ್ತು ಖಾಸಗೀಕರಣದ ಉದ್ಯಮಪತಿ ಸರ್ವಾಧಿಕಾರಕ್ಕೆ ಭಾರತೀಯರ ಜೀವನಕ್ರಮವನ್ನು ಬದಲಿಸುವ ರಾಜಕೀಯ ಕ್ರಮಗಳು.

ಮಹಾ ಸಾಧ್ವಿಯಂತೆ ತೋರುವ ಅವರ ಭಾವ-ಭಂಗಿ-ಮಾತುಗಳು, ಜನಸಾಮಾನ್ಯರ ಹಿತಕ್ಕೆ ವಿರುದ್ಧವಾದ ಅವರ ಉದ್ದೇಶಗಳನ್ನು ಮರೆಮಾಚುತ್ತವೆ. ಖಾಸಗೀಕರಣದ ಆರ್ಥಿಕನೀತಿಯ ಭಾಗವಾಗಿ ಪ್ರಪಂಚದ ಎಲ್ಲಾ ಕಡೆ, ಸಾಮಾನ್ಯಜನರಿಗೆ ವರದಾನವೆಂಬಂತೆ ಮೊಬೈಲ್ ಬಳಕೆಗೆ ಬಂತು. ಅದರಲ್ಲಿನ ಅನುಕೂಲಗಳನ್ನು ಮಾನ್ಯ ಮಾಡುತ್ತಲೇ ಇಂದಿಗೂ ಅನೇಕರು ಮೊಬೈಲ್ ನ ಮಾರಕ ಅಂಶಗಳನ್ನು ಟವರ್ ಗಳ ಘಾತಕ ಪರಿಣಾಮಗಳನ್ನೂ ಪಟ್ಟಿಮಾಡುತ್ತಲ್ಲೇ ಇದ್ದಾರೆ.

More

ಮಣಿಕಾಂತ್ ಬರೆಯುತ್ತಾರೆ: ಸಹಪ್ರಯಾಣಿಕ ಹುಟ್ಟಿಸಿದ ಹಾಡು

ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು!

ನಾಡ ಚರಿತೆ ನೆನಪಿಸುವಾ ವೀರಗೀತೆಯಾ

ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್.

ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು

ಲತಾ, ಬಿ.ಆರ್. ಛಾಯಾ, ಕೋರಸ್

ನಾಡ ಚರಿತೆ ನೆನಪಿಸುವಾ ವೀರಗೀತೆಯಾ

ಹಾಡು ನೀನು ಕನ್ನಡಿಗಾ ದೇಶಗೀತೆಯಾ ||ಪ||

 

ವೀರರಾದ ನಾಡವರ ಸಾಹಸದಾ ನಾಡಿದು

ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು

ಚಿತ್ರದುರ್ಗ ವೀರರ ಪೌರುಷದಾ ನಾಡಿದು

ಕೆಳದಿಯಾ ನಾಯಕರು ಆಳಿದಂಥ ನಾಡಿದು ||೧||

 

ಬೃಂದಾವನ ಚೆಲುವಲಿ ನಲಿವಂಥ ನಾಡಿದು

ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು

ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು

ಸ್ವಾಭಿಮಾನಿ ಪ್ರಜೆಗಳಾ ಸಂತಸದಾ ನಾಡಿದು ||೨||

 

ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ

ಸಂಗೊಳ್ಳಿ ರಾಯಣ್ಣನ ತ್ಯಾಗಭೂಮಿ ನಮ್ಮದು

ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು

ಎಂದೆಂದೂ ಅಳಿಯದಾ ಇತಿಹಾಸ ನಮ್ಮದು ||೩||

More

CNR ಅವರ ‘ಕಸಾಂದ್ರ’

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

‘ರೂಪಾಂತರ’ದ ರಾಮ ಧಾನ್ಯ

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ


 

ಕುವೆಂಪು ಸಾಹಿತ್ಯ ನಮನ

%d bloggers like this: