12.971606
77.594376
ಇಲ್ಲಿದೆ ಎಲ್ಲಾ ನಿರ್ಣಯಗಳು..
06 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು
ನಿರ್ಣಯ 1:
ಇದುವರೆಗೂ ನಡೆದ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಆ ನಿರ್ಣಯಗಳು ಕಾರ್ಯರೂಪಕ್ಕೆ ತರಲು ಸರ್ಕಾರ ಕ್ರಿಯಾಶೀಲವಾಗಿ ಸಹಕರಿಸಬೇಕು.
ನಿರ್ಣಯ 2:
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಆಯಾ ನಗರದ ಕೇಂದ್ರ ಭಾಗದಲ್ಲಿ ಉಚಿತ ನಿವೇಶನ ಮತ್ತು ಸಾಹಿತ್ಯ ಭವನ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವನ್ನು ಮಂಜೂರುಗೊಳಿಸಬೇಕು.
ನಿರ್ಣಯ 3:
ಪ್ರಾಥಮಿಕ ಹಂತದ ಶಿಕ್ಷಣ 1ರಿಂದ ನಾಲ್ಕನೇ ತರಗತಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರದಂತೆ ನ್ಯಾಯಾಲಯದ ತೀರ್ಪಿನಂತೆ ಕನ್ನಡ ಭಾಷೆ ಕಡ್ಡಾಯವಾಗಿ ಒಂದು ವಿಷಯವಾಗಿ ಕಲಿಸಲು ಸಮ್ಮೇಳನ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ ಒತ್ತಾಯಿಸುತ್ತದೆ.
ನಿರ್ಣಯ 4:
ನಾಲ್ಕು ದಶಕದಿಂದ ದೂರ ಉಳಿದಿದ್ದ ಡಬ್ಬಿಂಗ್ ಸಂಸ್ಕೃತಿಯನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ತರುವ ಪ್ರಯತ್ನ ನಡೆದಿರುವದನ್ನು ಸಮ್ಮೇಳನ ವಿರೋಧಿಸುತ್ತದೆ. ಭಾಷೆ ಮತ್ತು ಸಂಸ್ಕೃತಿಗೆ ಮಾರಕವಾದ ಡಬ್ಬಿಂಗ್ ಚಿತ್ರ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಮ್ಮೇಳನ ಒತ್ತಾಯಿಸುತ್ತದೆ.
ನಿರ್ಣಯ 5:
ಪ್ರತಿ ವರ್ಷ ನೀಡುತ್ತಿರುವ ಪಂಪ ಪ್ರಶಸ್ತಿಯನ್ನು ಪಂಪನ ಜನ್ಮ ಸ್ಥಳವಾದ ಗದಗ್ ಜಿಲ್ಲೆಯ ಅಣ್ಣಿಗೇರಿಯಲ್ಲೇ ನೀಡಬೇಕು ಎಂದು ಸಮ್ಮೇಳನ ಸರ್ಕಾರವನ್ನು ಒತ್ತಾಯಿಸುತ್ತದೆ.
ನಿರ್ಣಯ 6:
ಡಾ|| ಎಂ ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡುವ ಸಲುವಾಗಿ ಉಂಟಾದ ವಿದ್ಯಮಾನ ಕನ್ನಡ ಸಾರಸ್ವತ ಲೋಕಕ್ಕೆ ಅಪಮಾನ ಉಂಟು ಮಾಡಿದೆ. ಇದನ್ನು ಸಮ್ಮೇಳನ ಒಕ್ಕೊರಲಿನಿಂದ ಖಂಡಿಸುತ್ತದೆ.
ನಿರ್ಣಯ 7:
ಹೈದರಾಬಾದ – ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಮುನ್ನೂರ ಎಪ್ಪತ್ತೊಂದನೆಯ ಕಾಯಿದೆಯನ್ನು ಅಭಿವೃದ್ಧಿ ದೃಷ್ಟಿಯಿಂದ ಅನುಷ್ಠಾನಗೊಳಿಸಬೇಕು ಎಂದು ಸಮ್ಮೇಳನ ಒತ್ತಾಯಿಸುತ್ತದೆ.
ನಿರ್ಣಯ 8:
ಅನ್ಯಭಾಷಿಕರು ಜೀವನಕ್ಕಾಗಿ ಬೆಂಗಳೂರು ಮತ್ತು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅವರು ಕಡ್ಡಾಯವಾಗಿ ಕನ್ನಡವನ್ನು ಕಲಿತು ವ್ಯಾವಹಾರಿಕ ದೃಷ್ಟಿಯಲ್ಲಿ ಕನ್ನಡ ಭಾಷೆಯನ್ನು ಆಡಬೇಕೆಂದು ಸಮ್ಮೇಳನ ಅನ್ಯಭಾಷಿಕರಿಗೆ ಕರೆ ನೀಡುತ್ತದೆ.
ನಿರ್ಣಯ 9:
77ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಕೊಟ್ಟ ಎಲ್ಲರಿಗೂ ಈ ಮಹಾ ಸಭೆ ಅಭಿನಂದಿಸುತ್ತದೆ.
‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು!’
06 ಫೆಬ್ರ 2011 1 ಟಿಪ್ಪಣಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲನೆಯ ಬಾರಿ ನಾನು ಭಾಗವಹಿಸಿದ್ದು ೧೯೭೦ರಲ್ಲಿ ಬೆಂಗಳೂರಿನಲ್ಲಿ. ದೇಜಗೌ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೇಂದ್ರೆ ಅವರ ಕವಿಗೋಷ್ಠಿಯ ಅಧ್ಯಕ್ಷತೆ ಸಹಿತ ಕನ್ನಡ ಹಿರಿಯ ಮತ್ತು ಆಗಿನ ನವ್ಯದ ಸಾಹಿತಿಗಳನ್ನು ಕಂಡದ್ದು, ಅವರ ಮಾತುಗಳನ್ನು ಕೇಳಿದ್ದು ಒಂದು ಸುಂದರ ಅನುಭವ.
ಅಂದಿನ ಅನೇಕ ಸಾಹಿತಿಗಳು ಇಂದು ನಮ್ಮೊಂದಿಗಿಲ್ಲ. ನಿಸಾರ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ ‘ಕವನ ವಾಚನ ತನ್ನ ಓರಗೆಯ ನವ್ಯ ಕವಿಗಳನ್ನು ನೋಡುತ್ತಾ ನಡೆದಾಗ ಸಭೆಯಲ್ಲಿ ಚಪ್ಪಾಳೆ.
ಬೆಂಗಳೂರಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸುದ್ದಿಗಳನ್ನು ಅಂತರ ಜಾಲದ ತಾಣಗಳಲ್ಲಿ ಓದುತ್ತಾ ನೋಡುತ್ತಾ ಅಂದುಕೊಳ್ಳುತ್ತೇನೆ,
‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು !’
ಸ್ಟಾಲ್ ನಂ 332 ರಲ್ಲಿ ಕಂಡದ್ದು..
06 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
ಹಿರಿಯ ಪತ್ರಕರ್ತ ಕೆ ಕರಿಸ್ವಾಮಿ ಅವರ ಕವನ ಸಂಕಲನ ಸಮ್ಮೇಳನದ ಸ್ಟಾಲ್ ನಮ್ ೩೩೨ರಲ್ಲಿ ಬಿಡುಗಡೆಯಾಯಿತು.
‘ಉಕ್ಕೆಕಾಯಿ’ಯನ್ನು ನಾಗತಿಹಳ್ಳಿ ಚಂದ್ರಶೇಖರ್, ಎಲ್ ಎನ್ ಮುಕುಂದ್ ರಾಜ್ ಬಿಡುಗಡೆ ಮಾಡಿದರು. ಕವನ ವಾಚನವೂ ಜರುಗಿತು.
ಮಂಜುನಾಥ್ ಚಾಂದ್ ಕಂಡ ಸಮ್ಮೇಳನ
06 ಫೆಬ್ರ 2011 1 ಟಿಪ್ಪಣಿ
ಸಾಹಿತ್ಯ ಸಮ್ಮೇಳನದಲ್ಲಿ ಸುತ್ತು…

ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದ ದಿನ ಬೆಳ್ಳಂಬೆಳಗ್ಗೆಯೇ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಂದ ಹೊರಗೆ ಹೋಗಬೇಕಾಗಿ ಬಂತು. ಎಲ್ಲವನ್ನೂ ಮುಗಿಸಿ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಬಂದಾಗ ಮೆರವಣಿಗೆ ಬೆವರು ಇಳಿಸಿಯಾಗಿತ್ತು. ಶೃಂಗರಿಸಿಕೊಂಡಿದ್ದ ಆನೆಗಳು, ಕುದುರೆಗಳು ಕಾಲೆಳೆದುಕೊಂಡು ಬದಿಗೆ ಸರಿದಿದ್ದವು.
ಅಧ್ಯಕ್ಷರನ್ನು ಹೊತ್ತ (ಸಾರೋಟು) ವಾಹನ ಇನ್ನೇನು ಒಳ ಪ್ರವೇಶ ಪಡೆಯುವ ತರಾತುರಿಯಲ್ಲಿತ್ತು. ಅಷ್ಟು ಹೊತ್ತಿಗೇ ಅಭಿಮಾನಿಗಳು, ಕನ್ನಡದ ಕಟ್ಟಾಳುಗಳೆಲ್ಲ ಮುತ್ತಿಗೆ ಹಾಕಿದ್ದರು. ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಗೋ ಮಾಡಿ ಕೆಳಗೆ ಇಳಿದಿದ್ದರು. ಹಿರಿಯ ಜೀವ ವೆಂಕಟಸುಬ್ಬಯ್ಯನವರಿಗೆ ಅದು ಕಷ್ಟವಾಯಿತು.
ನಲ್ಲೂರು ಪ್ರಸಾದ್ ಕೈ ಹಿಡಿದು ಇಳಿಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ನೆರವಿಗೆ ಬಂದರು.

ಹೇಗೋ ಮಾಡಿ ಅಧ್ಯಕ್ಷರನ್ನು ಹಿಂಭಾಗಿಲಿನಿಂದ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು. ಪೊಲೀಸರು, ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು.
ಮುಂದೆ ಪ್ರಧಾನ ವೇದಿಕೆಯಲ್ಲಿ ಭಾಷಣಗಳು ಶುರುವಾದವು…. ಸಭಾಂಗಣದ ಮೂರು ದಿಕ್ಕಿನಲ್ಲಿ ಜನವೋ ಜನ. ಎಲ್ಲಿಂದ ಇಣುಕಿದರೂ ವೇದಿಕೆಯಲ್ಲಿ ಯಾರಿದ್ದಾರೆ ಎಂಬುದೇ ಕಾಣಿಸದ ಸ್ಥಿತಿ. ಧೂಳೋ ಧೂಳು…!
ಭಾಷಣವನ್ನು ಕೇಳಿಸಿಕೊಳ್ಳಲು, ಸಾಹಿತಿಗಳನ್ನು ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳ ದಂಡನ್ನು ನೋಡಲು
ಕೆಲ ಹುಡುಗರು ಆ ಮೈದಾನದ ಮೂಲೆಯಲ್ಲಿದ್ದ ಬಾಸ್ಕೆಟ್ ಬಾಲ್ ಕಂಬವನ್ನೇ ಹತ್ತಿ ಕುಂತರು…!
ಅಧ್ಯಕ್ಷರು ಆಕಡೆ ವೇದಿಕೆ ಹತ್ತಿದ ಕೂಡಲೇ ಮೆರವಣಿಗೆಯ ಉದ್ದಕ್ಕೂ ಅವರ ಹಿಂದೆಯೇ ಬಂದಿದ್ದ ಅನೇಕ ಮಂದಿ
ಕನ್ನಡದ ಕಟ್ಟಾಳುಗಳು ನಮ್ಮದೂ ಒಂದು ಫೋಟೊ ತೆಗೀರಿ ಸಾರ್ ಅಂದರು…!
ಈ ಕಡೆ ಭಾಷಣದ ಭರಾಟೆ ಆರಂಭವಾಗುತ್ತಿದ್ದಂತೆ ಜನಸಾಗರದಿಂದ ತಪ್ಪಿಸಿಕೊಳ್ಳಲು ಸಾಹಿತ್ಯ ಪ್ರಿಯರು,
ಪುಸ್ತಕ ಪ್ರಿಯರು ನರಸಿಂಹಯ್ಯ ಸಭಾಂಗಣದತ್ತ ಹೆಜ್ಜೆ ಹಾಕಿದರು. ಪುಸ್ತಕ ಮಳಿಗೆಗಳಲ್ಲಿ ಜನ ತುಂಬಿಕೊಳ್ಳತೊಡಗಿದರು.
ಮಣಿ ಅಭಿಮಾನಿಗಳು ಪುಸ್ತಕ ಕೊಂಡಿದ್ದಲ್ಲದೇ ಹಸ್ತಾಕ್ಷರಕ್ಕಾಗಿ ಹಾತೊರೆಯುತ್ತಿದ್ದರು.
ಕಾಲೇಜು ಹುಡ್ಗೀರು ಆಟೋಗ್ರಾಫ್ ಪಡೆಯುತ್ತಿದ್ದರು…
ಪುಸ್ತಕ ಮಳಿಗೆಗಳಲ್ಲಿ ತಾಸುಗಟ್ಟಳೆ ಅಡ್ಡಾಡಿದೆ. ಕಾಣದೇ ಮರೆಯಾಗಿದ್ದ ಅನೇಕ ಮಂದಿ ಮಿತ್ರರು ಸಿಕ್ಕರು.
ಪುಸ್ತಕ ಮಳಿಗೆಗಳಲ್ಲಿ ತಾಸುಗಟ್ಟಳೆ ಅಡ್ಡಾಡಿದೆ. ಕಾಣದೇ ಮರೆಯಾಗಿದ್ದ ಅನೇಕ ಮಂದಿ ಮಿತ್ರರು ಸಿಕ್ಕರು.
ಅಕ್ಕಪಕ್ಕದಲ್ಲಿ ಎಲ್ಲಾದರೂ ಕಾಫಿ-ಟೀ ಸಿಕ್ಕೀತೆ ಎಂದು ಮಿತ್ರರ ಜೊತೆ ಹೊರಟಾಗ
‘ಅವಧಿ- ನುಡಿನಮನ’ಕ್ಕೆ ಜೀವಿ ಮೆಚ್ಚುಗೆ
06 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
ಸಮ್ಮೇಳನದ ಅಧ್ಯಕ್ಷರಾದ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ಇಂದು ನೇರ ಮೀಡಿಯಾ ಸೆಂಟರ್ ನತ್ತ ಬಂದರು. ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಸಾಕಷ್ಟು ಮಾಹಿತಿ ತುಂಬಿ ಕೊಡುತ್ತಿರುವ ‘ಅವಧಿ-ನುಡಿನಮನ’ ದತ್ತ ಬಂದು ನಮ್ಮೆಲ್ಲಾ ಕೆಲಸಗಳನ್ನೂ ವೀಕ್ಷಿಸಿದರು.
ಒಂದೇ ಏಟಿಗೆ ಜಗತ್ತಿನ ತುಂಬಾ ಸಮ್ಮೇಳನದ ಸುದ್ದಿ ನೀಡುವ ಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿನೆಮೆಟೋಗ್ರಫಿಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿರುವ, ಹಿರಿಯ ವಿಚಾರವಂತ ಎಚ್ ವಿ ವೇಣುಗೋಪಾಲ್ ಅವರ ಮಗ, ಈ ಆನ್ಲೈನ್ ಸಾಹಸದ ಮುಂದಾಳತ್ವ ವಹಿಸಿರುವ ಪೃಥ್ವಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಇತ್ತೀಚಿನ ಟಿಪ್ಪಣಿಗಳು