
ಇಲ್ಲಿದೆ ಸಮ್ಮೇಳನ ಅಧ್ಯಕ್ಷರ ಭಾಷಣದ ಸಂಪೂರ್ಣ ಪಾಠ
04 ಫೆಬ್ರ 2011 7 ಟಿಪ್ಪಣಿಗಳು
in 1, ಸಾಹಿತ್ಯ ಸಮ್ಮೇಳನ
ಸರ್ವಜ್ಞಂ ತದಹಂ ವಂದೇ ಪರಂಜ್ಯೋತಿಸ್ತಮೋಪಹಂ
ಪ್ರವೃತ್ತಾಯನ್ಮುಖಾದ್ದೇವೀ ಸರ್ವಭಾಷಾ ಸರಸ್ವತೀ
-ನಾಗವರ್ಮ
ಭಾಷೆಯೆಲ್ಲಕು ದೇವಿ ಸರಸತಿ
ಅಂಥ ದೇವಗೆ ಎಲ್ಲ ಬಲ್ಲಗೆ
ತಮವ ದೂಡುವ ಹೊಳೆವ ಬೆಳಕಿಗೆ
ಇದಿಗೊ ನನ್ನಯ ವಂದನೆ
ಎಲ್ಲ ಸಾರಸ್ವತ ಚೇತನಗಳಿಗೂ ನನ್ನ ನಮಸ್ಕಾರ,
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಲೇಖಕರಿಗೆ ನೀಡುವ ಅತ್ಯಂತ ಪ್ರಮುಖವಾದ ಗೌರವ–ಇಂಥ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಪದವಿ. ನನಗೆ ಈ ಗೌರವವನ್ನು ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸಿ ನನ್ನ ಕೆಲವು ಅರಿವಿನ ಮಾತುಗಳನ್ನು ಹೇಳುತ್ತೇನೆ. ಶಾಂತವಾಗಿ ಕೇಳಬೇಕೆಂದು ನನ್ನ ಬಿನ್ನಹ.
ಕನ್ನಡದ ಕಥೆ ಬಲು ದೊಡ್ಡದು. ಕನ್ನಡನಾಡಿನ ಚರಿತ್ರೆಯಲ್ಲಿ ಕ್ರಿ.ಶ. ಹದಿನೆಂಟನೆಯ ಶತಮಾನದ ಕೊನೆಯ ಭಾಗಕ್ಕೂ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗಕ್ಕೂ ಉಂಟಾದ ಸಂಧಿಕಾಲವು ಕನ್ನಡ ಭಾಷಾ ಸಾಹಿತ್ಯಗಳ ದೃಷ್ಟಿಯಿಂದ ಒಂದು ವಿಶಿಷ್ಟ ಪರಿಸರದಲ್ಲಿ ಮುಳುಗಿದ್ದ ಕಾಲ. ರಾಜಕೀಯವಾಗಿ ಕನ್ನಡ ಪ್ರದೇಶಗಳು ವಿವಿಧ ಆಡಳಿತಗಳಿಗೆ ಸಿಕ್ಕಿಕೊಂಡು ಯಾರಿಗೂ ಯಾವ ರಾಜಾಶ್ರಯವೂ ದೊರಕದಿದ್ದ ಕಾಲ. ಇಂಥ ಸಮಯದಲ್ಲಿ ಪಾಶ್ಚಾತ್ಯ ದೇಶಗಳಿಂದ ಕ್ರಿಸ್ತಮತ ಪ್ರಚಾರಕರು ಭಾರತ ದೇಶಕ್ಕೆ ಬಂದು ಭಾರತೀಯರಲ್ಲಿದ್ದ ಶೋಷಿತವರ್ಗದ ಬಡಜನರನ್ನು ಕ್ರಿಸ್ತಮತಕ್ಕೆ ಮತಾಂತರಗೊಳಿಸುವ ಪ್ರಯತ್ನವನ್ನು ಪ್ರಾರಂಭ ಮಾಡಿದ್ದರು. ಜರ್ಮನಿಯಿಂದ ಬಂದ ಬಾಸೆಲ್ ಮಿಷನ್ನಿನ ಮತ ಪ್ರಚಾರಕರು ಭಾರತದ ಪಶ್ಚಿಮ ಕರಾವಳಿಯಲ್ಲಿ ಮಂಗಳೂರನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಕರಾವಳಿಯ ಉದ್ದಕ್ಕೂ ತಮ್ಮ ಉದ್ದೇಶವನ್ನು ಸಾರ್ಥಕಗೊಳಿಸುತ್ತಿದ್ದರು. ಈ ಮತಪ್ರಚಾರಕರೆಲ್ಲ ತುಂಬ ಸಮರ್ಥರಾದ ಬುದ್ಧಿವಂತರು. ವಿಶ್ವವಿದ್ಯಾನಿಲಯಗಳಲ್ಲಿ ತಿಳಿವಳಿಕೆಯನ್ನು ಸಂಪಾದಿಸಿದ್ದವರು. ಮತಪ್ರಚಾರದಲ್ಲಿ ಸಿದ್ಧಹಸ್ತರು. ಅವರು ತಮ್ಮ ಮತಪ್ರಚಾರ ಕಾರ್ಯವು ಕರ್ನಾಟಕದಲ್ಲಿ ಸಫಲವಾಗಬೇಕಾದರೆ ದೇಶಭಾಷೆಯಾದ ಕನ್ನಡದ ಸಹಾಯವು ಅಗತ್ಯವೆಂಬುದನ್ನು ಮನಗಂಡು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತರು. ಅದರಲ್ಲಿ ವಿದ್ವಾಂಸರಾಗಿ ಕಾವ್ಯ, ವ್ಯಾಕರಣ, ನಿಘಂಟು ಇತ್ಯಾದಿ ವಿಷಯಗಳಲ್ಲಿ ನಿಷ್ಣಾತರಾಗಿ ತಮ್ಮ ಪ್ರಚಾರ ವರ್ಗದವರಿಗೆ ತಿಳಿವಳಿಕೆಯನ್ನು ನೀಡಲು ಉತ್ತಮ ಸಾಹಿತ್ಯವನ್ನು ರಚಿಸಿದರು. ಅವರು ಮಾಡಿದ ಕಾರ್ಯವೆಲ್ಲ ಸಮರ್ಥರು ಮಾಡುವ ಕಾರ್ಯವಾಗಿತ್ತು. ಅವರ ಉದ್ದೇಶ ಮತಪ್ರಚಾರವಾದರೂ ಅದು ಕನ್ನಡದ ಹಳೆಯ ಗ್ರಂಥಗಳ ಪರಿಷ್ಕರಣಗಳಿಗೆ ಕಾರಣವಾಯಿತು. ಡಾ. ಫರ್ಡಿನಾಂಡ್ ಕಿಟ್ಟಲನು ೧೮೯೪ರಲ್ಲಿ ಮುದ್ರಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಇಂಥ ಕಾರ್ಯದ ತಲೆಮಣಿಯಾಯಿತು.
ಆಹ್ವಾನ ಪತ್ರಿಕೆ ಸಿಗದವರಿಗೆ, ಇಲ್ಲಿದೆ..
04 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
ಈ ಲಿಂಕ್ ಒತ್ತಿದರೆ ಆಹ್ವಾನ ಪತ್ರಿಕೆಯ ಎಲ್ಲಾ ಪುಟಗಳೂ ತೆರೆದುಕೊಳ್ಳುತ್ತವೆ- ಇಲ್ಲಿ ಕ್ಲಿಕ್ಕಿಸಿ
ಶ್ರೀನಿಧಿ ಡಿ ಎಸ್ ಕಂಡ ಸಮ್ಮೇಳನ
04 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
ಸಾಹಿತ್ಯ ಸಮ್ಮೇಳನ- ದಿನ-೧







ಅಂದ ಹಾಗೆ, ದಕ್ಷಿಣ ಬೆಂಗಳೂರಿಗೆ ಬರುತ್ತಿರೋ ಸಾಹಿತ್ಯ ಪ್ರೇಮಿಗಳಿಗೆ, ಒಳ್ಳೊಳ್ಳೇ ತಿಂಡಿ ತಿನಿಸುಗಳು ಇಲ್ಲೆಲ್ಲಸಿಗುತ್ತವೆ ನೋಡಿ.
ಇತ್ತೀಚಿನ ಟಿಪ್ಪಣಿಗಳು