ಅದರ ಹೆಸರೇ 6 X 3

 

ಕಡಲ ತೀರ ಸಂದೀಪ್ ಕಾಮತ್

vlcsnap-2674244-1
ಆರಡಿ ಮೂರಡಿ ಅಳತೆಯ ಮನೆ ನಮ್ಮೆಲ್ಲರ ಮನೆ 
ಆಸೆ ನಿರಾಸೆ ಅನುಭವಿಸುತ್ತಾ ಬದುಕಿರುವೆವು ನಾವು ಸುಮ್ಮನೆ
ಹುಟ್ಟುವುದು ಆಕಸ್ಮಿಕ ಸಾಯುವುದು ನಿಶ್ಚಿತ
ದ್ವೇಷ ,ಜಗಳ,ಅಸೂಯೆ, ಮೀರಿ ಬದುಕಿದರೆ ಸಾಕು ನಗು ನಗುತಾ …. 

ಈ ಹಾಡಿನಿಂದ ಆ ಸಾಕ್ಷ್ಯಚಿತ್ರ ಮುಕ್ತಾಯವಾಗುತ್ತದೆ ! ಸಾವು – ಬದುಕಿನ ನಡುವೆ ಒಂದು ಪ್ರಪಂಚವಿದೆ ಅನ್ನೋದನ್ನು ತೋರಿಸುತ್ತದೆ ಈ ಸಾಕ್ಷ್ಯಚಿತ್ರ.

ಅದರ ಹೆಸರೇ 6 X 3 

ಮೇ ಫ್ಲವರ್ ಗೆ ಹೋದಾಗ ತಗೊಂಡಿದ್ದೆ (ಕಾಸು ಕೊಟ್ಟು!) ಅದರ ಡಿವಿಡಿ .

ಕನ್ನಡಿ ಕ್ರಿಯೇಶನ್ಸ್ ರವ್ರು ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಬಾಹ್ಯ ಜಗತ್ತಿನಿಂದ ದೂರವಾಗಿ ಸ್ಮಶಾನದಲ್ಲೇ ಬದುಕನ್ನು ಕಂಡಿರುವ ಶಕುಂತಲಮ್ಮನ ಕಥೆ.ಶಕುಂತಲಮ್ಮ ಸ್ಮಶಾನಕ್ಕೆ ಬರುವ ಹೆಣಗಳನ್ನು ಹೂಳುವವಳು.
ಒಬ್ಬನ ನಷ್ಟ ಇನ್ನೊಬ್ಬನ ಲಾಭ ಅನ್ನುವ ಹಾಗೆ ಒಬ್ಬರು ಸತ್ತರಷ್ಟೇ ಇವಳು ಬದುಕಲು ಸಾಧ್ಯವಾಗೋದು ! ಶಕುಂತಲಮ್ಮನ ಕಥೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ ’ಕನ್ನಡಿ’ಯ ರಾಘವೇಂದ್ರ ,ಸುಬ್ರಮಣಿಯವರು .

ನನಗೆ ಆರಡಿ ಮೂರಡಿ ಜಾಗದ ಬಗ್ಗೆ ಅಷ್ಟೊಂದು ವ್ಯಾಮೋಹವಿಲ್ಲ! ಯಾಕಂದ್ರೆ ನಮ್ಮ ಪದ್ದತಿಯಲ್ಲಿ ಹೆಣಗಳನ್ನು ಸುಡುತ್ತಾರೆ .ಆರಡಿ-ಮೂರಡಿ ಜಾಗ ಬರೀ ಹದಿನೆಂಟು ನಿಮಿಷಗಳಷ್ಟೇ ಸಾಕು ನನಗೆ -ಸುಟ್ಟು ಬೂದಿಯಾಗೋದಕ್ಕೆ 🙂 ಆದರೆ ಬಹುತೇಕ ಜನರಿಗೆ ಈ ಆರಡಿ-ಮೂರಡಿ ಜಾಗದ ಮಹತ್ವ ತುಂಬಾನೇ!

ಹೆಣಗಳನ್ನು ಹೂಳುವ ಕೆಲಸ ಮಾಡಿ ಬಾಹ್ಯ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕುವ ಶಕುಂತಲಮ್ಮ ತನ್ನ ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿ ,ಒಳ್ಳೆಯ ಕಡೆ ಮದುವೆ ಮಾಡಿ ಕೊಟ್ಟಿದ್ದಾರೆ.ಆ ಮಹಿಳೆಗೊಂದು ಅಭಿನಂದನೆ.

ಸಾಕ್ಷ್ಯಚಿತ್ರ ಚೆನ್ನಾಗಿದೆ. ಆದರೆ ಸಂಗೀತ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸಿತು ನನಗೆ. ಕೆಲವೊಂದು ಕಡೆ ಸಂಗೀತ ಅಷ್ಟೊಂದು ಪ್ರಭಾವ ಬೀರಿಲ್ಲ.
ಜಯಪ್ರಕಾಶ್ ಉಪ್ಪಳರ (ನನ್ನ ಊಹೆ,ಅವರ ಹೆಸರು ಎಲ್ಲೂ ನಮೂದಾಗಿಲ್ಲ) ಧ್ವನಿ ಬಹಳ ಪ್ರಭಾವಿಯಾಗಿದೆ .

ಆದರೆ ವ್ಯಾವಹಾರಿಕವಾಗಿ ನೋಡಿದ್ರೆ ಈ ಸಾಕ್ಷ್ಯಚಿತ್ರ ದುಬಾರಿ ಅನ್ನಿಸುತ್ತೆ . ಹತ್ತು ನಿಮಿಷದ ಸಾಕ್ಷ್ಯಚಿತ್ರಕ್ಕೆ ನೂರು ರೂಪಾಯಿ ತೆರುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ಆದರೆ Support Price: Rs1೦೦ ಅಂತ ಹಾಕಿರೋದ್ರಿಂದ ಸಪೋರ್ಟ್ ಮಾಡಲೇ ಬೇಕು ಅಲ್ವಾ?

ಮತ್ತೆ ಕೈತುತ್ತು

kaitutu

ನೆಲಮಂಗಲ ಕನ್ನಡ ಸಾಹಿತ್ಯ ಸಮ್ಮೇಳನ

 

2007110756441001

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ

ಬೆಂಗಳೂರು ಗ್ರಾಮಾಂತರ ಜಿಲ್ಲೆ-562123     

ನೆಲಮಂಗಲ ತಾಲ್ಲೂಕು  6ನೆ ಕನ್ನಡ ಸಾಹಿತ್ಯ ಸಮ್ಮೇಳನ           

ದಿನಾಂಕ: 20-02-2009

ಸ್ಥಳ: ತೆಪ್ಪದ ಬೇಗೂರು, ನೆಲಮಂಗಲ

dsc_5680-_edited

ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು

ಸಮ್ಮೇಳನಾಧ್ಯಕ್ಷರು

ಪರಿಷತ್ತಿನ ದ್ವಜಾರೋಹಣ    :  ಬೆಳಗ್ಗೆ  8 ಕ್ಕೆ

ಸಮ್ಮೇಳನಾಧ್ಯಕ್ಷರ ಮೆರವಣಿಗೆ : ಬೆಳಗ್ಗೆ9 ಕ್ಕೆ

ಪ್ರಸ್ತಾವನೆ  :   ಸಿದ್ಧರಾಜು, ಅಧ್ಯಕ್ಷರು, ನೆಲಮಂಗಲ ತಾ.ಕ.ಸಾ.ಪ.

ಸಮ್ಮೇಳನಾಧ್ಯಕ್ಷರ ನುಡಿ  : ಪ್ರೊ. ರಾಮಲಿಂಗಪ್ಪ.ಟಿ.ಬೇಗೂರು

 ಸ್ಮರಣ ಸಂಚಿಕೆ ಬಿಡುಗಡೆ    :   ಎಂ.ವಿ.ನಾಗರಾಜು, ಶಾಸಕರು, ನೆಲಮಂಗಲ

ನಿಕಟಪೂರ್ವ ಅಧ್ಯಕ್ಷರ ನುಡಿ :   ತ್ಯಾಮಗೊಂಡ್ಲು ಅಂಬರೀಶ್, ಸಾಹಿತಿಗಳು

ಗಣ್ಯರಿಗೆ ಸನ್ಮಾನ  :  ಪುಟ್ಟಣ್ಣ, ಉಪಸಭಾಪತಿಗಳು, ವಿಧಾನಪರಿಷತ್ತು

ಕವಿಗೋಷ್ಠಿ     :   ಮದ್ಯಾಹ್ನ 12-30ಕ್ಕೆ

ಅಧ್ಯಕ್ಷತೆ  :   ಲಕ್ಷ್ಮೀಪತಿ ಕೋಲಾರ

ಬಹಿರಂಗ ಅಧಿವೇಶನ  :   ಮದ್ಯಾಹ್ನ 2 ಕ್ಕೆ

ಸಮಾರೋಪ ಸಮಾರಂಭ:    ಸಂಜೆ 4 ಕ್ಕೆ

ಮುಖ್ಯ ಅತಿಥಿಗಳು  :      ಡಾ.ಎಂ.ಶಂಕರನಾಯಕ್, ಡಾ.ದೊಡ್ಡರಂಗೇಗೌಡ