ಅವರು ದೇವರೇ ಆಗಿ ಹೋದರು….

ಮನೋಹರ ಉಪಾಧ್ಯರು ವೃತ್ತಿಯಿಂದ ಪಶು ವೈದ್ಯ. ಆದರೆ ಅವರೊಳಗಿರುವ ಯಕ್ಷಗಾನ ಪ್ರೇಮಿ ಅವರ ಹೆಗಲಿಗೆ ಕ್ಯಾಮೆರಾ ಏರುವಂತೆ ನೋಡಿಕೊಂಡಿದ್ದಾನೆ. ಎಲ್ಲಿಯೇ ಯಕ್ಷಗಾನ ನಡೆಯಲಿ ಅಲ್ಲಿ ಉಪಾಧ್ಯರು ಹಾಜರಿರಲೇಬೇಕು.

ಅವರ ಕ್ಯಾಮೆರಾ ಕಣ್ಣು ರಂಗವೇರಿದ ಪಾತ್ರಗಳನ್ನು ಹೇಗೆಲ್ಲಾ ಹಿಂಬಾಲಿಸಿದೆಯೋ ಅಷ್ಟೇ ಅಸ್ಥೆಯಿಂದ ಬಣ್ಣದ ಚೌಕಿಯಲ್ಲೂ ಅಡ್ಡಾಡಿದೆ. ಮನೋಹರ ಉಪಾಧ್ಯರು ಅಷ್ಟಕ್ಕೆ ಸುಮ್ಮನಾದವರಲ್ಲ. ತಾವಿರುವ ಮಂಗಳೂರಿಗೆ ಅನೇಕ ಯಕ್ಷ ತಂಡಗಳು ಬರಲು ಕಾರಣರಾದವರು.

ಅಷ್ಟೇ ಅಲ್ಲ – ಯಕ್ಷಗಾನ ಫೋಟೋಗ್ರಫಿ ಹುಚ್ಚಿರುವ ಎಲ್ಲಾ ಕ್ಯಾಮೆರಾ ಪ್ರೇಮಿಗಳನ್ನು Orkut ನಲ್ಲಿ ಒಂದೆಡೆ ಒಟ್ಟು ಮಾಡಿದವರು. ಈಗ ಯಕ್ಷಗಾನದ ಎಂತಹ ಫೋಟೋ ಬೇಕು ಎಂದರೆ ಒಮ್ಮೆ ಇವರ ಅಂಗಳಕ್ಕೆ ಹೆಜ್ಜೆ ಹಾಕಿದರೆ ಸಾಕು ಗೆಜ್ಜೆಯ ಶಬ್ದ ಕೇಳಿಬರುತ್ತದೆ.

ಮನೋಹರ ಉಪಾಧ್ಯರು ಕ್ಯಾಮೆರಾ ಕಣ್ಣಿಂದ ಕಂಡ ಯಕ್ಷಗಾನದ ದಿಗ್ಗಜ ಶಂಭು ಹೆಗಡೆ ಅವರ ಬಣ್ಣದ ಲೋಕ ಇಲ್ಲಿದೆ-

3253927720_4b20618d9b 3253927644_1c9e224cef 3253927420_eb58674c77 3253100811_9e7184e685  3253925146_c74f15a373 3253925236_076af0e51c

3253925542_d0ffa76702 3253926358_7b1a443140 3253924702_f9f675c89f 3253924886_b3ba91b30e 3253925794_c6e9f3a038 3253099859_d20429a060 3253098035_c928713951 3253097559_a1fe16e019 3251507745_18dec1dd4a

ಪ್ರತೀಕ್ಷಾ ಕೂಚಿಪುಡಿ

download

ನಾದದ ನದಿಯೊಂದು ನಡೆದಾಂಗ…

emailer

%d bloggers like this: