ಹಾಸಿಗೆಗಳು ರೆಡಿಯಾಗಿವೆ…

‘ಓದು ಬಜಾರ್’ ಗೂ ಈ ಹಾಸಿಗೆಗಳಿಗೂ ಏನ್ ಸಂಬಂಧ ಅಂತೀರಾ…?

ಹಾಗಾದರೆ ಓದುಬಜಾರ್ ಗೇ ಭೇಟಿ ಕೊಟ್ಟು ನೋಡಿ

tadi1

‘ನೆಟ್’ಗೆ ಬರ್ತಾವ್ರೆ ಕೊಟ್ಟೂರ್ ಗ್ಯಾಂಗ್

k

ಕನ್ನಡ ಸಾಹಿತ್ಯ ಲೋಕಕ್ಕೆ ಈಗ ‘ವೆಂಕಟಾಲ ಗ್ಯಾಂಗ್’ ಚಿರಪರಿಚಿತ.

ಫಾದರ್ 55, ಲೆವೆಲ್ ಕ್ರಾಸಿಂಗ್ ಮೂಲಕ ಕನ್ನಡ ಸಾಹಿತ್ಯಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟ ವಿ ಎಂ ಮಂಜುನಾಥ್ ಮುತುವರ್ಜಿಯಿಂದ ರೂಪಿಸಿದ ಗ್ಯಾಂಗ್ ಅದು.

ಅದರಲ್ಲಿ ಟೈಲರ್, ಕಾರ್ಪೆಂಟರ್ ಎಲ್ಲರೂ ಇದ್ದಾರೆ.

dsc_0362ಈಗ ಆ ಸಾಲಿಗೆ ಎಂಟ್ರಿ ಕೊಟ್ಟಿರುವ ಮತ್ತೊಂದು ಗ್ಯಾಂಗ್ ಕೊಟ್ಟೂರ್ ಗ್ಯಾಂಗ್. ಕೊಟ್ಟೂರು ಮಿರ್ಚಿ ತಿಂದಿದ್ದೀರೋ ಇಲ್ಲವೊ ಗೊತ್ತಿಲ್ಲ ಆದರೆ. ಈ ಹುಡುಗರು ಅದರಷ್ಟೇ ಚುರುಕು. ಆ ಕಾರಣಕ್ಕಾಗಿಯೇ ಬ್ಲಾಗಿನ ಹೆಸರು ಕೊಟ್ಟೂರ್ ಮಿರ್ಚಿ.

ಈಗಾಗಲೇ ‘ನಾವು ನಮ್ಮಲ್ಲಿ’ ಮೂಲಕ ಕೊಟ್ಟೂರು ಗೆಳೆಯರಿಗೆ ಒಂದು ನೆಲೆ ಕಲ್ಪಿಸಿರುವ ನಿರಂಜನ ಹಾಗೂ ಉಷಾ ಈಗ ಈ ‘ಮಿರ್ಚಿ’ ರೆಡಿ ಮಾಡಿದ್ದಾರೆ. ‘ನಾವು ನಮ್ಮಲ್ಲಿ’ ಅವರ ಖಾಸಗಿ ಬ್ಲಾಗ್ ಆಗಿತ್ತು. ನಿರಂಜನ ಹಾಗೂ ಉಷಾ ಇಬ್ಬರೂ ಊರಿಗೇ ಆಗಿ ಮಿಗುವಷ್ಟು ಗೆಳೆಯರನ್ನು ಹೊಂದಿದ್ದಾರೆ. ಹಾಗಿರುವಾಗ ಅವರ ಮನೆಯಲ್ಲಿ ಖಾಸಗಿ ಎಂಬ ಮಾತೇ ಇಲ್ಲ.

ಬಂದ ಗೆಳೆಯರೆಲ್ಲರೂ ಅದು ತಮ್ಮದೇ ಮನೆಯೇನೋ ಅನ್ನುವಂತೆ ಓಡಾಡುತ್ತಾರೆ. ಅದೇ ಆಗಿದ್ದು ಅವರ ಬ್ಲಾಗ್ನಲ್ಲಿಯೂ. ಇದು ನಮ್ಮದೇ ಏನೋ ಎನ್ನುವಂತೆ ಕೊಟ್ಟೂರು ಹುಡುಗರೆಲ್ಲಾ ಅಲ್ಲಿ ಬೀಡು ಬಿಟ್ಟರು. ಹಾಗಾಗಿ ಈಗ ಕೊಟ್ಟೂರು ಹುಡುಗರಿಗೆ ಎರಡು ಬ್ಲಾಗ್.

ಈ ಕೊಟ್ಟೂರ್ ಗ್ಯಾಂಗ್ ನಲ್ಲಿ ಯಾರ್ಯಾರಿದ್ದಾರೆ. ಅವರ ಕಲ್ಯಾಣ ಗುಣಗಳನ್ನು ಸೇರಿಸಿ ಅವರೇ ಕಟ್ಟಿದ ಡೈಲಾಗ್ ಗಳು ಇಲ್ಲಿವೆ.

ಪೀರ್ ಭಾಷಾ ಗೇ ಬಾವುಟಾನಾ?
ರುಗ್ವೇದಿಗೇ ಭಾಷಣಾನಾ ?
ಸಾಲೀಗೇ ಗಜಲ್ಲಾ
ವಿಕ್ರಮ್ ಗೇ ನೈಸಾ
ಕಲಾಲ್ ಗೇ ಪ್ರತಿಕ್ರಿಯೇನಾ
ಉಷನಿಗೇ ಉಪ್ಪಿಟ್ಟಾ?
ನಿರಂಜನನಿಗೇ ಸಂಘಟನೇನಾ?
ಸಿದ್ದುಗೇ ಮಿಸ್ ಕಾಲಾ?

ವಿಕಾಸ ಹೆಗಡೆ ಒಗ್ಗರಣೆ ವರದಿ

ಮೇಫ್ಲವರ್ ಸಂವಾದದ ಫೋಟೋ ಅಲ್ಬಮ್

ಹಾಗೂ ವಿಕಾಸ ಹೆಗಡೆ ಅವರ ಒಗ್ಗರಣೆ ವರದಿಗಾಗಿ

ಭೇಟಿ ಕೊಡಿ- ಮ್ಯಾಜಿಕ್ ಕಾರ್ಪೆಟ್

img_8397-11

ಸನ್ಮಾನ + ಅವಮಾನ~ ಸಮಾನ

avadhi

ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು ಯಾರಾದರೂ ಗುರುತಿಸಿ ಬೆನ್ನು ತಟ್ಟಿದರೆ ಇಲ್ಲವೇ ಬೆನ್ನಿಗೆ ಗುದ್ದು ಹಾಕಿದರೆ ಇನ್ನಷ್ಟು ಮುಂದೆ ತೆವಳುವುದಕ್ಕೆ ಸಹಾಯವಾಗುತ್ತದೆ.

-ನಗೆ ನಗಾರಿ ಡಾಟ್ ಕಾಮ್

ಹಾಲಿನ ಪ್ಯಾಕೆಟಿನಿಂದ, ಆಲ್ಕೋಹಾಲಿನಿಂದ ನೀರನ್ನು ಮಾತ್ರ ಹೀರಿ ಬಾಯಾರಿದವನಿಗೆ ನೀಡಿ ಪ್ರಾಣ ಉಳಿಸುವ ‘ಹಂಸ’ದ ಹಾಗಿರುವ ಅವಧಿಯಲ್ಲಿ ನಗೆ ನಗಾರಿಯ ಸದ್ದು ಪ್ರತಿಧ್ವನಿಸಿರುವುದು ನಮ್ಮ ಸಂಸ್ಥೆಯ ಸಮಸ್ತರಿಗೆ ಸಂತೋಷ ತಂದಿದೆ. ವರ್ಷವೊಂದನ್ನು ಪೂರೈಸಿರುವ ನಾವು ಹೀಗೇ ಸಾಗಿದಲ್ಲಿ ಎರಡು ವರ್ಷ ಪೂರೈಸಬಹುದು ಎಂದು ಆರ್ಥಿಕತೆಯ ಕುಸಿತದ ಬಗ್ಗೆ ವರ್ಷಗಳ ಹಿಂದೆ ಮುನ್ಸೂಚನೆ ನೀಡಿದ್ದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮುಂದಿನ ವರ್ಷದ ವಾರ್ಷಿಕೋತ್ಸವದ ರಹಸ್ಯ ಕಾರ್ಯಕ್ರಮಕ್ಕೆ ತಪ್ಪದೆ ಅವಧಿಯ ವರದಿಗಾರರನ್ನು ಆಹ್ವಾನಿಸುತ್ತೇವೆ ಎಂದು ನಾವು ಈ ಮೂಲಕ ಆಶ್ವಾಸನೆ ಕೊಡುತ್ತಿದ್ದೇವೆ.

– ನಗೆ ಸಾಮ್ರಾಟ್

%d bloggers like this: