ಅಭಿನವ at 561

ಅಭಿನವ ಸದಾ ಚಟುವಟಿಕೆಯ ಬಿಂದು. ಒಂದಲ್ಲಾ ಒಂದು ಪುಸ್ತಕ, ಒಂದಲ್ಲಾ ಒಂದು ಚಟುವಟಿಕೆ..

ಚಿತ್ರದುರ್ಗ ಸಮ್ಮೇಳನ ಆರಂಭವಾಗುವ ಮುನ್ನವೇ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಕೃತಿ ಸಿದ್ಧಪಡಿಸಿ ಚಳ್ಳಕೆರೆಯಲ್ಲಿ, ಯು ಆರ್ ಅನಂತಮೂರ್ತಿ ಅವರು ಯೇಟ್ಸ್ ಬಗ್ಗೆ ಬರೆದಿರುವ ಕೃತಿಯನ್ನು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡಿದ್ದಾರೆ. ಇದಲ್ಲದೇ ಕೆ ಪಿ ಸುರೇಶ್ ಅನುವಾದಿಸಿರುವ ಓದಲೇಬೇಕಾದ ಕಾದಂಬರಿ ಕೊಸಾವೋ ಸಹಾ ಸಿದ್ಧವಾಗಿದೆ.

ಕೆಲ ದಿನಗಳ ಮುನ್ನವಷ್ಟೇ ಮಲ್ಲಿಕಾರ್ಜುನ ಮನ್ಸೂರರ ಆತ್ಮಚರಿತ್ರೆ ‘ನನ್ನ ರಸಯಾತ್ರೆ’ ಎರಡನೇ ಆವೃತ್ತಿ ಸಿದ್ಧಪಡಿಸಿದ್ದರು. ಈ ಎಲ್ಲಾ ಕೃತಿಗಳೂ ಅಭಿನವದ ಮಳಿಗೆ 561 ರಲ್ಲಿ ಲಭ್ಯ.

img_87811

bookrelease21

sahiti etalo

ಏನಿದು ಮೇ ಫ್ಲವರ್? ಸ್ಟಾಲ್ 592 ಕ್ಕೆ ಬನ್ನಿ …

mayflower_jpg

img_85701 img_8568

img_8814 img_8810

img_8816 img_8818

ಗೋಷ್ಠಿ ಆರಂಭವಾಗಿದೆ…

img_88451 img_8830

img_8820 img_8823

img_8832 img_8821

img_8843 img_8844

img_8824

ಅಯ್ಯೋ…ಸಮ್ಮೇಳನಕ್ಕೆ ತುಂಬಾ ಲೇಟ್ ಆಗೋಯ್ತು…

img_8690

ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ?

ಸ್ವಾಮಿ ಸಾಹಿತಿಗಳೇ ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ? ಅಯ್ಯೋ.. ಪತ್ರಕರ್ತರೇ ನಿಮಗೇನ್ ಸ್ವಾಮಿ ಆಗಿತ್ತು…ನೀವು ಗಡ್ಡ ಬಿಟ್ಕೊಂಡೆ ಬಂದಿದೀರಾ.. ಅಂತ ಪ್ರತಿಯೊಬ್ಬರನ್ನೂ ನಿಲ್ಲಿಸಿಕೊಂಡು ಕೇಳ್ತಾ ಇರೋರು ಇನ್ಯಾರೂ ಅಲ್ಲ- ಮುತ್ತುರಾಜ್.

ಯಾರು ಈ ಮುತ್ತುರಾಜ್? ಕನ್ನಡದ ಎಲ್ಲಾ ಸಾಹಿತಿಗಳಿಗೆ ಒಂದು ಬಾರಿ ಕಟ್ಟಿಂಗ್ ಮಾಡ್ಲೇಬೇಕು ಅಂತ ಆಸೆ ಪಟ್ಟು ಕೆಲವರ ಮನೆಗೋಗಿ, ಕೆಲವರನ್ನ ತಮ್ಮ ಅಂಗಡಿಗೆ ಕರೆಸಿ ಕಟ್ಟಿಂಗ್ ಮಾಡಿದವರು.

ಅದಿರಲಿ ಮಂಡೇಲಾ ಅಂಬೋ ಮಂಡೇಲಾ ದಕ್ಷಿಣ ಆಫ್ರಿಕಾಗೆ ಬೆಳಕಾಗಿದ್ದನ್ನು ಕಂಡು ಪ್ರತೀ ವರ್ಷ ಮಂಡೇಲಾ ಹುಟ್ಟಿದ ಹಬ್ಬವನ್ನ ಕೊಳೆಗೇರಿಗಳಲ್ಲಿ ಉಚಿತ ಕ್ಷೌರ ಮಾಡೋದರ ಮೂಲಕ ಕಲೀತಾ ಇರುವವರು.

ಅಷ್ಟಲ್ಲದೆ ಟಿ ವಿ ದಾರಾವಾಹಿಗಳಲ್ಲಿ ಹಾಸ್ಯ ನಟನೆಗೆ ಹೆಸರಾದವರು. ಈ ಮುತ್ತುರಾಜ್ ಈಗ ಚಿತ್ರದುರ್ಗ ದಲ್ಲಿ ಬೀಡು ಬಿಟ್ಟಿದ್ದಾರೆ. ಸ್ಥಳೀಯ ಸಂಘಟನೆಯ ಜೊತೆ ಕೈಗೂಡಿಸಿ ಸಾಹಿತಿಗಳ ಹಾಗೂ ಪತ್ರಕರ್ತರ ಗಡ್ಡ ಹಿಡಿದು ನಿಂತಿದ್ದಾರೆ.

ಅರೆ, ಲೇಟ್ ಆಗೋಯ್ತು ಅಂತೀರಾ. ಯೋಚನೆ ಮಾಡ್ಬೇಡಿ.. ಗಡ್ಡ ಸಮ್ಮೇಳನದಲ್ಲೇ ಮಾಡಿಸ್ಕೊಳ್ಲುವಿರಂತೆ.


img_8650

img_8652

ಪ್ರತೀ ‘ತಿಂಗಳು’ ಬಸವರಾಜು

ಜೋಗಿ ಇವರನ್ನು ‘ಮಯೂರ ವರ್ಮ’ ಎಂದು ಕರೆದಿದ್ದರು. ಓದುಗರೆಲ್ಲರೂ ಅದನ್ನು ಅಹುದಹುದು ಎಂದು ಸ್ವಾಗತಿಸಿದ್ದರು. ಮಯೂರಕ್ಕೆ ಒಂದು ಹೊಸ ರೂಪು ಕೊಟ್ಟು ಮತ್ತೆ ಅದನ್ನು ಶಿಲುಬೆಯಿಂದ ಇಳಿಸಿದ ಹೆಮ್ಮೆ ಜಿ ಪಿ ಬಸವರಾಜು ಅವರದ್ದು.

ತುಂಗೆಯಲ್ಲಿ ಹೆಣ, ಕಪ್ಪು ಗುಲಾಬಿ, ಪಂಚಮುಖಿ ಪಂಜಾಬ್, ಕರೆಯಿತೋ ಕಡಲ ತೀರ, ಕುಲು ಕಣಿವೆಯಲ್ಲಿ ಕೃತಿಗಳ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆದಿರುವ ಬಸವರಾಜು ಮಯೂರದ ನೇತೃತ್ವ ವಹಿಸಿಕೊಂಡ ನಂತರ ಹೊಸ ಲವಲವಿಕೆ ಪಡೆದರು. ತನ್ನ ಚೈತನ್ಯ ಇರುವುದ ಮಾಸಿಕದಲ್ಲಿ ಎಂಬಂತೆ ಮರು ಜೀವ ಪಡೆದರು. ಪತ್ರಿಕೆಗೂ ಜೀವ ಕೊಟ್ಟರು. ಆಮೇಲೆ…?

ಆಮೇಲೆ ಜಿ ಪಿ ಬಸವರಾಜು ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಮಯೂರಕ್ಕೆ ವಿದಾಯ ಹೇಳಿದ ಬಸವರಾಜು ಈಗ ‘ತಿಂಗಳು’ ಮಾಸಿಕ ರೂಪಿಸುತ್ತಿದ್ದಾರೆ. ಮೈಸೂರಿನ ಅಭಿರುಚಿ ಇದಕ್ಕೆ ಸಾಥ್ ನೀಡಿದೆ. ನಮ್ಮೆಲ್ಲರ ಪ್ರೀತಿಯ ಬಸವರಾಜು ಹೊಸ ಸಾಹಸದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತಾ ತಿಂಗಳು ಪತ್ರಿಕೆಯನ್ನು ನಿಮ್ಮ ಪತ್ರಿಕೆಯನ್ನಾಗಿಸಿಕೊಳ್ಳಿ ಎಂಬ ಕೋರಿಕೆ ನಮ್ಮದು.

ಚಂದಾವನ್ನು ‘ಅವಧಿ’ಗೂ ಕಳಿಸಬಹುದು. ಬುಕ್ಕಿಂಗ್ ಗಾಗಿ avadhi.pusthaka@gmail.com ಸಂಪರ್ಕಿಸಿ 

tingalubrochfrontmail

tingalubrochinsidemail

ವಿಚಾರ ಸಂಕಿರಣಕ್ಕೆ ಬನ್ನಿ

evichara-sankirana

ಇವತ್ತು ಬುಕ್ ಸ್ಟಾಲ್ ಕಡೆಗೆ….

ನಿನ್ನೆ ಎಲ್ಲಾ ಮೆರವಣಿಗೆ, ಉದ್ಘಾಟನೆ ಅಂತ ಓಡಾಡಿದ್ದಾಯ್ತು. ಇವತ್ತು ಬುಕ್ ಸ್ಟಾಲ್ ಕಡೆ ಹೆಜ್ಜೆ ಹಾಕಿ ಬರೋಣ. ಸಮ್ಮೇಳನಕ್ಕೆ ಅಂತ ಎಷ್ಟು ಜನ ಬರ್ತಾರೋ ಗೊತ್ತಿಲ್ಲ ಆದ್ರೆ ಬುಕ್ ನೋಡಲಿಕ್ಕೆ, ಕೊಂಡ್ಕೊಳೋಕೆ ಅಂತ ಸಾವಿರಾರು ಜನ ಬರ್ತಾರೆ.

ಅವರು ಸಮ್ಮೇಳನದ ಮುಖ್ಯ ಜಾಗಕ್ಕೆ ಹೋಗದೇನೂ ಇರಬಹುದು. ಆದ್ರೆ ಇಡೀ ದಿನ ಪುಸ್ತಕ ಅಂಗಡಿಗಳ ಸಾಲಲ್ಲಿ ಇರ್ತಾರೆ. ರಾತ್ರಿ ಊರಿಗೆ ವಾಪಸ್ ಹೋಗುವಾಗ ಅವರ ಮುಖದಲ್ಲಿನ ಸಂತೃಪ್ತಿ ಇನ್ನಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.

ಅಂತಹ ಪುಸ್ತಕ ಮಳಿಗೆಗಳು ಈ ಬಾರಿ ಗಬ್ಬು ಹಿಡಿದು ಕೂತಿವೆ. ಒಂದು ರಾಶಿ ಮಣ್ಣು ಸುರಿದು, ಬಿಸಿಲ ಝಳ ಮುಖಕ್ಕೆ ರಾಚುವಂತೆ ಮಾಡಿದ್ದಾರೆ. ಸಾಲದಕ್ಕೆ ೧೦ ಪುಸ್ತಕ ಸರಿಯಾಗಿ ಜೋಡಿಸಲೂ ವ್ಯವಸ್ಥೆ ಇಲ್ಲ. ಇದೆಲ್ಲಾ ಸಾಲದು ಅಂತ ಪಾನಿ ಪುರಿ , ಭೇಲ್ ಪುರಿ, ಮಸಾಲೆ ದೋಸೆ ನಡುವೆ ಈ ಬಾರಿ ಪುಸ್ತಕಗಳ ಮಳಿಗೆ.

ಸಮ್ಮೇಳನ ಅಧ್ಯಕ್ಷರು ಕಿಡಿ ಕಾರಿದಂತೆ ಸರ್ಕಾರಿ ಅನುದಾನಕ್ಕೆ ಕಾಯುವವರು ಸರ್ಕಾರವನ್ನು ತೃಪ್ತಿಪಡಿಸುವುದರಲ್ಲಿ ಮುಳುಗಿಹೋಗಿದ್ದಾರೆ. ಮಳಿಗೆ ಯಾರಿಗೆ ಬೇಕು?

-ನಂದೀಶ್ ಮಲ್ಲೇನಹಳ್ಳಿ

img_8805

img_8808

img_8809

img_8797

img_8800

img_8796img_8794

img_8785

img_8786

img_8780

ಸಮ್ಮೇಳನದ ಸೈಡ್ ವಿಂಗ್ ನಿಂದ-

ಚಿತ್ರಗಳು : ನಂದೀಶ್ ಮಲ್ಲೇನಹಳ್ಳಿ

img_8634

img_8681

img_8643

img_8667

img_8668

img_8675

img_8678

img_8679

img_86801

%d bloggers like this: