ಜೋಗಿ ಮೆದ್ದ ‘ಜಿಲೇಬಿ’

ಸುಮ್ಮನೆ ಮೆಲ್ಲುತ್ತಾ ಹೋದ ಒಂದು ಜಿಲೇಬಿ

jogi2ಜೋಗಿ

 


ಇತ್ತೀಚೆಗೆ ಕವನ ಸಂಕಲನ ಕೈಗೆ ಬಂದ ತಕ್ಷಣ ಗಾಬರಿ ಶುರುವಾಗುತ್ತದೆ. ಪುಟಗಳನ್ನು ತೆರೆಯುತ್ತಿದ್ದಂತೆ ಆತಂಕವಾಗುತ್ತದೆ. ಒಂದೇ ಒಂದು ಕವಿತೆಯೂ ಅರ್ಥವಾಗದೇ ಹೋದರೆ ಎಂದು ಭಯವಾಗುತ್ತದೆ. ಅರ್ಥದ ಮಾತು ಹಾಗಿರಲಿಕವಿತೆ ನನ್ನ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲವಲ್ಲ ಎಂದು ಸಂಕೋಚವಾಗುತ್ತದೆ. ಓದಿ ಮುಚ್ಚಿಟ್ಟ ನಂತರ ಒಂದೇ ಒಂದು ಸಾಲು ಕೂಡ ನೆನಪಾಗದೇ ಹೋದಾಗ ಡಿಮೆನ್ಷಿಯಾ ಶುರುವಾಗಿರಬಹುದೇ ಎಂದು ಬೆಚ್ಚಿಬಿದ್ದು ಆ ಕಾಯಿಲೆಯ ಲಕ್ಷಣಗಳನ್ನು ಓದಲು ಶುರುಮಾಡುತ್ತೇನೆ. ಇನ್ಯಾರೋ ಅದು ಡಿಮೆನ್ಷಿಯಾ ಅಲ್ಲಆಲ್‌ಜೈಮರ್ ಎಂದು ಹೊಸ ಹೆಸರು ಕೊಟ್ಟರು. ಕವಿತೆ ರುಚಿಸದೇ ಇರುವ ಕಾಯಿಲೆಗೆ ಕಾವ್ಯಜಾಡ್ಯ ಎಂದು ಕರೆಯಬಹುದೇನೋ?

ಇಂಥ ಸಂದಿಗ್ಧ ಮತ್ತು ಸಂಕಟದಲ್ಲಿರುವಾಗಲೇ ಅಂಕಿತದ ಕಂಬತ್ತಳ್ಳಿ ಪ್ರಕಾಶ್ ಜಯಂತ ಕಾಯ್ಕಿಣಿಯ ಮೂರು ಕವನ ಸಂಕಲನಗಳನ್ನು ಕೈಗಿಟ್ಟರು. ಜಿ ಎನ್ ಮೋಹನ್ ಬರೆದ ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ ಸಂಕಲನದ ನಂತರ ನಾನು ಓದಲು ಯತ್ನಿಸಿದ ಕವಿತಾ ಸಂಕಲನಗಳೆಲ್ಲ ನನ್ನಲ್ಲಿ ವಿಚಿತ್ರ ನಿರುತ್ಸಾಹವನ್ನೂ ನನ್ನ ಓದಿನ ಧಾಟಿಯೇ ಸರಿಯಿಲ್ಲ ಎಂಬ ನಂಬಿಕೆಯನ್ನೂ ನಾನು ಹಳೆಯ ತಲೆಮಾರಿಗೆ ಸೇರಿಕೊಂಡುಬಿಟ್ಟೆ ಎನ್ನುವ ವಿಷಾದವನ್ನೂ ಹುಟ್ಟಿಸಿದ್ದವು.  ಕಾವ್ಯಮೋಹಿನಿಯನ್ನು ಮತ್ತೆ ಹೇಗಾದರೂ ಒಲಿಸಿಕೊಳ್ಳಬೇಕು ಎಂಬ ಹಟದಲ್ಲಿ ನಾನು ಬೇಂದ್ರೆಗಂಗಾಧರ ಚಿತ್ತಾಲಯರ್ಮುಂಜ ರಾಮಚಂದ್ರಮ್ಯಾಥ್ಯೂ ಆರ್ನಾಲ್ಡ್ ಪದ್ಯಗಳನ್ನು ಓದಲು ಆರಂಭಿಸಿದ್ದೆ. ತಿರುಮಲೇಶರ ಮುಖಾಮುಖಿ ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಅದರಲ್ಲಿ ಬರುವ ಬೆಕ್ಕು ಥೇಟ್ ಕವಿತೆ ಅನ್ನಿಸತೊಡಗಿತು. ಕವಿತೆಯ ಕಣ್ಣಲ್ಲಿ ಅಂಥ ವಿಷಾದ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ತಿರುಮಲೇಶರ ಸಾಲುಗಳನ್ನು ಬದಲಾಯಿಸಿಕೊಂಡು ಓದತೊಡಗಿದ ಮೇಲೆ ಎಷ್ಟೋ ಸಮಾಧಾನವಾಯಿತು.

 

kaikini3-cover

ಜಯಂತ್ ಕಾಯ್ಕಿಣಿ ಕವನ ಸಂಕಲನ ಅಂಥ ಗಾಬರಿಯನ್ನು ಹುಟ್ಟಿಸದೇ ಇರುವುದಕ್ಕೆ ಎರಡು ಕಾರಣ. ಸಂಕಲನಕ್ಕೆ  ನಿನ್ನೆ ನಾಳೆಯ ನಡುವೆಅಂತಸ್ತಾಪವಾಸ್ತವದ ಲೆಕ್ಕಾಚಾರಮಬ್ಬಿನ ಹಾಗೆ ಕಣಿವೆಯಾಸಿಮನದ ಮರ್ಮರವೆಂಬ ಮೂಕ ಚೀತ್ಕಾರ- ಮುಂತಾದ ನಿಗೂಢದುಸ್ತರ ಶೀರ್ಷಿಕೆಯನ್ನು ಜಯಂತ್  ಕೊಟ್ಟಿರಲಿಲ್ಲ. ಮುಖಪುಟದಲ್ಲಿ ಬಣ್ಣಗಳ ವಿಚಿತ್ರ ವಿನ್ಯಾಸವಾಗಲೀ ನಿದ್ದೆಗೆಡಿಸುವಂಥ ನವ್ಯಚಿತ್ರದ ತುಣುಕಾಗಲೀ ಇರಲಿಲ್ಲ. ಕಣ್ಣಿಗೂ ಮನಸ್ಸಿಗೆ ಖುಷಿಕೊಡುವ ವರ್ಣವಿನ್ಯಾಸಬೆಳ್ಳಗಿನ ಮುಖಪುಟದ ನಡುವೆ  ಒಂದು ಜಿಲೇಬಿ ಎಂಬ ಶೀರ್ಷಿಕೆ. ಇಷ್ಟವಾಗುವಂಥ ಶೈಲಿಯಲ್ಲಿ ಜಯಂತ್ ಸ್ವತಃ ಬರೆದಿರಬೇಕು ಎಂದೆನ್ನಿಸುವಂತೆ ಬರೆದ ಜಯಂತ್ ಕಾಯ್ಕಿಣಿ ಕವಿತೆಗಳು ಎಂಬ ಮೂರು ಸಾಲು- ಸಂಕಲನದ ಪುಟಗಳನ್ನು ತೆರೆಯುವ ಧೈರ್ಯ ತುಂಬಿತು.

ಸಂಕಲನದ ಶೀರ್ಷಿಕೆಯ ಕವಿತೆಯನ್ನು ಮೊದಲು ಓದುವುದು ನನ್ನ ದುರಭ್ಯಾಸಗಳಲ್ಲಿ ಒಂದು. ಹಾಗಂತಲೇ ಒಂದು ಜಿಲೇಬಿ ಓದಲು ಆರಂಭಿಸಿದರೆ ಮತ್ತೆ ಗಾಬರಿಯಾಯಿತು. ಓದಿದ ನಂತರ ಒಂದೂ ಸಾಲು ನೆನಪಲ್ಲಿ ಉಳಿಯಲಿಲ್ಲ. ಪುಸ್ತಕ ಮುಚ್ಚಿಟ್ಟು ಮತ್ತೊಂದು ವಾರ ಸಂತೋಷದಲ್ಲಿ ಕಳೆದೆ. ನಿದ್ರೆಯಲ್ಲೂ ಜಿಲೇಬಿ ನೆನಪಾಗುತ್ತಿತ್ತು. ನನಗೆ ಡಯಾಬಿಟೀಸ್ ಶುರುವಾಗಿರಬಹುದೇ ಎಂದು ಅನುಮಾನ ಶುರುವಾಯಿತು.

ಈಗ ವಾರದ ನಂತರ ಮತ್ತೆ ಕಾಯ್ಕಿಣಿ ಕವಿತೆಗಳನ್ನು ಕೈಗೆತ್ತಿಕೊಂಡು ಕೂತೆ. ಜಿಲೇಬಿಯನ್ನು ಮರೆತು ಉಳಿದ ಕವಿತೆಗಳನ್ನು ಓದತೊಡಗಿದೆ. ಈಗಲೂ ಮೊದಲು ಕಣ್ಣಿಗೆ ಬಿದ್ದದ್ದು ಸಣ್ಣಸೊಲ್ಲು ಎಂಬ ಕವಿತೆ.

ಚಪಾತಿಯಂಥ ದೊಡ್ಡದೇಶದ

ಸಣ್ಣ ಜನ ನಾವು

ನಮ್ಮ ಸಂಕಟಗಳು ಸಣ್ಣ

ಜೀವ ಹೋದರೂ ಮಿಂಟಿಯ ರ್ರ್ಯಾಪರ್   

ಸುಲಿಯಲೇ ಆಗದಣ್ಣ.

ಇದು ಕೂಡ ನಾನು ಬಯಸಿದ ಕವಿತೆಯಲ್ಲ ಎನ್ನಿಸಿ ಮತ್ತೆ ಬೋರಾಯಿತು. ನವ್ಯ ಕವಿತೆಗಳ ಗುಂಗಿನಿಂದ ನಾನಿನ್ನೂ ಹೊರಬಂದಿಲ್ಲವೇನೋ ಅನ್ನಿಸಿತು. ಕ್ರಾಂತಿಬಂಡಾಯಒದೆಸಿಕೊಂಡ ನೋವು,ಅವಮಾನಕೀಳರಿಮೆವರ್ಗಸಂಘರ್ಷಆಗೊಮ್ಮೆ ಬುದ್ಧಈಗೊಮ್ಮೆ ಅಲ್ಲಮ- ಇದಲ್ಲದೇ ಕವಿತೆಗೆ ವಸ್ತುವಿರಲು ಸಾಧ್ಯವೇ ಎಂದು ಯೋಚಿಸುವಂತಾಯಿತು. ಕವಿತೆ ಆಳವಾಗಿರಬೇಕು ಎಂದು ಬ್ಲಾಗ್ ಓದುಗರು ಮಾಡಿದ ಕಾಮೆಂಟುಗಳು ನೆನಪಾದವು. ಸರಳವಾದ ಕವಿತೆಯನ್ನು ಮೆಚ್ಚಿಕೊಳ್ಳುವುದುಂಟೇ ಛೇ. ನನ್ನ ಅಹಂಕಾರದ ಗತಿ ಏನಾಗಬೇಡ?

ಆದರೂ ನಾನು ಹಠ ಬಿಡಲಿಲ್ಲ. ಜಿಲೇಬಿಯ ಕವಿತೆಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಹೋದೆ. ಸಿನಿಮಾ ಹಾಡುಗಳನ್ನು ಬರೆದು ಕಾಯ್ಕಿಣಿಯೊಳಗಿನ ಕವಿ ಕಾಣೆಯಾಗಿದ್ದಾರೆ ಎಂದು ಪತ್ರಕರ್ತನ ಶೈಲಿಯಲ್ಲಿ ಚಿಂತಿಸಿದೆ. ಇಡೀ ಕವನಸಂಕಲನಕ್ಕೆ ಒಂದು ಬಂಧವಿಲ್ಲಸೈದ್ಧಾಂತಿಕ ತಳಹದಿಯಿಲ್ಲತಾತ್ವಿಕ ನೆಲೆಗಟ್ಟು ಕಾಣಿಸುತ್ತಿಲ್ಲ ಎಂದು ಪಕ್ಕಾ ವಿಮರ್ಶಕರಂತೆ ಯೋಚಿಸಲು ಆರಂಭಿಸಿದೆ. ಇವು ಭಾವಗೀತೆಗಳಂತಿವೆಯಲ್ಲ ಎಂದು ರಾಮಚಂದ್ರ ಶರ್ಮರ ಧಾಟಿಯಲ್ಲಿ ಟೀಕಿಸಬಹುದು ಎಂದುಕೊಂಡೆ.

ಕೊನೆಗೆ ಇದ್ಯಾವುದೂ ಸರಿಹೋಗುವುದಿಲ್ಲ ಎಂದುಕೊಂಡು ಆಗಷ್ಟೇ ಕವಿತೆಗಳನ್ನು ಓದಲು ಕುಳಿತೆ. ನಮ್ಮೂರಲ್ಲಿ ಕೂತು ಅವರ ರಂಗದಿಂದೊಂದಷ್ಟು ದೂರ ಸಂಕಲನದ ಪದ್ಯಗಳನ್ನು ಓದಿದ್ದನ್ನು ನೆನಪಿಸಿಕೊಂಡೆ. ಓದುವ ಕ್ರಮವನ್ನು ಮರೆತು ಸುಮ್ಮನೆ ಓದುತ್ತಾ ಹೋದೆ.

ಕೊಳ: ರಸ್ತೆ ಬದಿ ಕೂತ ಮುದಿ

ಸ್ವಾತಂತ್ರ್ಯ ಯೋಧನ ಕಣ್ಣು

ಚಂದ್ರಇರುವೆಗಳ ನಡುವೆ ಚಲಿಸುತಿರುವ

ಸ್ತಬ್ಧ ಚೂರು ರೊಟ್ಟಿ

ನದಿ: ಮನೆ ಬಿಟ್ಟೋಡಿದ ಪೋರಿಯ

ಏದುಸಿರಿನ ಜಾಡು.

 ಈ ಸಾಲಿಗೆ ತಲುಪುತ್ತಿದ್ದಂತೆ ಆಹಾಎಲ್ಲವೂ ಸರಿಹೋಯಿತು. ಅಮ್ಮ ಅಪ್ಪರನ್ನು ಅವರು ಮಗುವಾಗಿದ್ದಾಗ ನಾವು ಮುದ್ದಿಸಲೇ ಇಲ್ಲವಲ್ಲ ಎಂಬ ಸಾಲು ಕಣ್ಮುಂದೆ ಸುಳಿಯುತ್ತಿದ್ದಂತೆ ಮಗುವಿನಂತೆ ಕಾಣುವ ನಮ್ಮಮ್ಮ ನೆನಪಾದರು.  ಗುಂಡಿ ಹಾಕುತ್ತಾ ಸಂಭಾವಿತ ಲೋಕಕ್ಕೆ ಹೊರಟು ನಿಂತವರನ್ನೆಂದೂ ಅವಳು ಹಿಂದೆ ಕರೆದು ಹೆಸರು ಕೇಳುವುದಿಲ್ಲ ಎನ್ನುವುದನ್ನು ಓದುತ್ತಿದ್ದಾಗ ಅವಳು ಎರಡು ಗುಂಡಿಯ ಬ್ಲೌಸಿನೊಳಗೆ ಇಟ್ಟುಕೊಂಡ ಎಷ್ಟೊಂದು ಬಗೆಯ ಹೆಸರುಗಳು ಕಣ್ಮುಂದೆ ಸುಳಿದವು. ಮಂಗಳೂರಿನ ಕ್ವಾಲಿಟಿ ಕ್ಯಾಬರೇ ಹಾಲ್‌ನ ಜಾಹೀರಾತಿನಲ್ಲಿ ಬರುತ್ತಿದ್ದ ಲಿಲ್ಲೀಜಾಸ್ಮಿನ್ರೇಖಾ,ಮಾರ್ಗರೆಟ್ ಹೆಸರುಗಳು ನೆನಪಾದವು. ದಿನಾ ದಿನ ಅವರವರೇ ಹೆಸರು ಬದಲಾಯಿಸಿಕೊಂಡು ಬೇರೆಯವರಾಗಲು ಯತ್ನಿಸುತ್ತಾ ಕುಣಿಯುತ್ತಾರೆ ಎಂದು ನಮ್ಮೂರಿನ ಕೇಶವ ಹೇಳಿದ್ದು ನೆನಪಿಗೆ ಬಂತು.

 

ಕೊನೆಯ ತಿರುವಿನಲ್ಲಿ ನೀನೊಮ್ಮೆ

ತಿರುಗಿ ನೋಡಬೇಕಿತ್ತು

ಎಲ್ಲ ಹಾಗೇ ಉಳಿದುಹೋಗಿದೆ

ಪೇಟೆಯಲ್ಲಿ ನಿಂತವರೆಲ್ಲ ಹಠಾತ್ತನೇ

ಮನೆ ಸೇರಲು ಆರ್ತರಾಗಿದ್ದಾರೆ.

ಆಡದ ಮಾತು ಮೂಡದ ಲಿಪಿಗಳೇ ಸೇರಿ

ಸಂಜೆಯ ಬಣ್ಣಗಳನ್ನು ಪಾಕಗೊಳಿಸುತ್ತಿದೆ

ಎಂದು ಓದಿದಾಗ ಜಿಲೇಬಿಯ ರುಚಿ ಎದೆಯ ನಾಲಗೆಯನ್ನು ಮುದಗೊಳಿಸಿತು.  ಕಣ್ಣುಗಳ ನೆನೆಹಾಕಿ ಕೂತಿದೆ ರಾತ್ರಿ ಊರು. ಬಿಕೋ ನಿಲ್ದಾಣದಲ್ಲಿ ಒಬ್ಬನನ್ನೂ ಇಳಿಸದೇ ಹಾದು ಹೋಗುತ್ತಿದೆ ಇಡೀ ಒಂದು ರೈಲು- ಎಂದಾಗ ಅಕ್ಷರ ಕಲಿತದ್ದೂಹಳೆಯ ಕವಿತೆಗಳನ್ನು ಮರೆತದ್ದೂ ಸಾರ್ಥಕವಾಯಿತು ಎಂದು ಖುಷಿಯಾಯಿತು.

ಇರಾನಿ ಸಿನಿಮಾಗಳಲ್ಲಿ ಕಣ್ಮುಂದೆ ಹಾಗೇ ಸಾಗಿಹೋಗುವ ಚಿತ್ರಗಳು ಈ ಕವಿತೆಗಳಲ್ಲಿ ಸಾಲಾಗಿ ಮೂಡಿದ್ದು ಸೋಜಿಗ ತರುತ್ತಿದೆ. ರೇನ್ ಕೋಟ್ ತೊಟ್ಟ ಮುಖಹೀನ ವಿಗ್ರಹದಂತೆ ಅವನೀಗ ಚಲಿಸುತ್ತಾನೆಸಿಗ್ನಲ್ ಸಿಕ್ಕಿದ್ದೇ ದಾಟುತ್ತಾನೆ ದೊಡ್ಡ ರಸ್ತೆ ! ಆಮೇಲೆ ಹಿಡಿದು ನಿಲ್ಲಿಸಿದ್ದು ಈ ಸಾಲು:

ಇಂಥದ್ದೊಂದು ಸೆಳೆತದಲ್ಲಿ ಉಕ್ಕಿ ಬಂದರೇನೇ

ಚೊಕ್ಕವಾಗಿ ಹೊಳೆದೀತು ನಿನ್ನ ಬಿಸಿಲ ಕೋಣೆ.

ಕವಿತೆಯ ಓದೂ ಹೀಗೆ ಸೆಳೆತದಲ್ಲಿ ಉಕ್ಕಿ ಬರಬೇಕಲ್ಲ. ನಮ್ಮ ಬಿಸಿಲ ಕೋಣೆ ಚೊಕ್ಕವಾಗಿ ಹೊಳೆಯಬೇಕಲ್ಲ ಎಂದು ಬೆರಗಾಗುತ್ತಾ ಮತ್ತೆ ಒಂದು ಜಿಲೇಬಿಯತ್ತ ಕಣ್ಣು ಹಾಯಿಸಿದರೆಎಂಥ ಬದಲಾದ ಚಿತ್ರ. ಹೊಸದಾಗಿ ಕಂಡದ್ದು ನಾನೋ ಕವಿತೆಯೋತೆರೆದುಕೊಂಡದ್ದು ನನ್ನ ಮನವೋಕವಿಯ ಸಾಲೋ?

ಬಸ್ ಸ್ಟಾಂಡ್ ತನಕ ಬಿಟ್ಟು ಬಾರೋ

ಅಂದಿದ್ದಕ್ಕೆ ಯಾಕಿಷ್ಟು ಸಿಟ್ಟು ಪೋರಾ

ನಿನ್ನ ಬೇಬಕ್ಕ ಕಣೋ ಅವಳು

ಈ ಕಂದನ ಮಾಮನಪ್ಪಾ ನೀನು ಎತ್ತಿಕೊಳ್ಳೋ

ಮುದ್ದು ಮಾಡೋ..

ನಮ್ಮೂರಿನಿಂದ ಬಸ್‌ಸ್ಟಾಂಡಿಗೆ ಮೂರು ಮೈಲಿ. ಮನೆಗೆ ಬಂದ ನೆಂಟರನ್ನು ಬಸ್‌ಸ್ಟಾಂಡಿಗೆ ಬಿಟ್ಟುಬರಲು ಹಿಂದೇಟು ಹಾಕುತ್ತಿದ್ದ ದಿನಗಳು. ಅಮ್ಮ ಪುಸಲಾಯಿಸಿಅಪ್ಪ ಬೈದು ಅವರ ಜೊತೆ ಅಟ್ಟಿದರೆ ಮನಸ್ಸಿಗೆ ಮಿಜಿಮಿಜಿ.  ನಮ್ಮದೂ ಬಾಬುವಿನದ್ದೇ ಸ್ಥಿತಿ.

ಬೇಬಿಗಂತ ತಂದಿದ್ದ ಜಿಲೇಬಿಯಲ್ಲಿ ಒಂದನ್ನು

ಅವಳ ಕಂದನ ಕಣ್ಣಿಂದಲೂ ತಪ್ಪಿಸಿ ಬಚ್ಚಿಟ್ಟಿದ್ದೇನೆ

ಆ ಮೇಲೆ ಬಂದು ತಿನ್ನು

ಏಳು ಚಿನ್ನ ಹೊರಡು.

ಇಲ್ಲಿಗೆ ತಲುಪುವ ಹೊತ್ತಿಗೆ ತಡೆದಿದ್ದ ಕಣ್ಣೀರು ಹನಿಯಾಗಿ ಕೆನ್ನೆ ಒದ್ದೆಮಾಡಿತು.

ಮತ್ತೊಮ್ಮೆಮತ್ತೆ ಮತ್ತೆ ಎಲ್ಲ ಕವಿತೆಗಳನ್ನು ಸುಮ್ಮನೆ ಓದುತ್ತಾ ಇದ್ದೇನೆ.  ಬಾಯಿಗಿಟ್ಟ ತಕ್ಷಣ ಕರಗುವ ಬಿಸಿಬಿಸಿ

ಜಿಲೇಬಿಯ ಹಾಗೆ ಕವಿತೆಯೂ ಕರಗುತ್ತಿದೆ.  ರುಚಿಬಿಸುಪು ಮತ್ತು ಸಕ್ಕರೆಪಾಕದ ಸವಿ ತುಂಬ ಹೊತ್ತು ನಾಲಗೆಯಲ್ಲೂ ಮನಸ್ಸಲ್ಲೂ ನೆಲೆಗೊಂಡಂತೆ ಭಾಸವಾಗುತ್ತಿದೆ.

ಪುಸ್ತಕದಿಂದ ಕಣ್ಣೆತ್ತಿನೋಡಿದರೆ ಹೊಸಹಗಲು ಕಣ್ಣು ಕೋರೈಸುತ್ತಿದೆ. ನಲುವತ್ತರ ಚಾಳೀಸು ಕೂಡ ಅನಗತ್ಯ ಎಂದು ಕೊಂಡು ಹಾಗೇ ನೋಡುತ್ತಾ ಕೂತಿದ್ದೇನೆ.

ಶತಮಾನದ ಕವಿ ಯೇಟ್ಸ್

yeats_08_johnsingersargent

ಅಭಿರುಚಿ

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ, ಚಿತ್ರದುರ್ಗ

ಮತ್ತು

ಅಭಿನವ

17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

ಇವರ ಸಂಯುಕ್ತ ಆಶ್ರಯದಲ್ಲಿ

2008011552830301ಯು.ಆರ್. ಅನಂತಮೂರ್ತಿ ಅವರ

ಶತಮಾನದ ಕವಿ ಯೇಟ್ಸ್

ಪುಸ್ತಕ ಬಿಡುಗಡೆ:  ರಾಜೇಂದ್ರ ಚೆನ್ನಿ ಅವರಿಂದ

ಕೃತಿ ಪ್ರತಿಕ್ರಿಯೆ:   ಕೆ. ಸಜಾತ್

ಅಧ್ಯಕ್ಷತೆ:  ಶ್ರೀ ಬಿ.ಪಿ.ವಿರೇಂದ್ರಕುಮಾರ್

ಸ್ಥಳ: ಐ ಎಂ ಎಂ ಹಾಲ್, ಮದಕರಿ ವೃತ್ತದ ಬಳಿ, ಚಿತ್ರದುರ್ಗ

ದಿನಾಂಕ: 01-02-2009: ಭಾನುವಾರ

ಬೆಳಿಗ್ಗೆ 10:30 ಕ್ಕೆ

ದಯಮಾಡಿ ಬನ್ನಿ

ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ..

kolam-patterns-b9

ದುಂಡಾದ ಅಕ್ಷರಗಳಿಗೆ ಐದು ಅಂಕ ಅಂತ ಪ್ರಶ್ನೆ ಪತ್ರಿಕೆಯಲ್ಲಿ ಇರುತ್ತಿದ್ದುದು ನೆನಪಿದೆಯೆ? ಸುದ್ದಿ ಪತ್ರಿಕೆಗೂ ಅದು ಅನ್ವಯಿಸುತ್ತೆ. ಅದೇ ಸುದ್ದಿ, ಅದೇ ವಿವರ, ಅದೇ ಫೋಟೊ ಇರುವ ಎರಡು ಪತ್ರಿಕೆಗಳನ್ನು ಓದುಗ ಅವುಗಳ ನೋಟದಿಂದ ಅಳೆಯುತ್ತಾನೆ. ಆಹಾ ಎಂಥ ಚಂದದ ವಿನ್ಯಾಸ ಅಂತ ಅವನು ಹೇಳದಿದ್ದಾಗಲೂ ಒಳ್ಳೆಯ ವಿನ್ಯಾಸ ತನ್ನ ಪರಿಣಾಮವನ್ನು ಸದ್ದಿಲ್ಲದೆ ಮಾಡಿಯೇ ಇರುತ್ತದೆ.

ಯಾಕೆಂದರೆ ಪುಟವಿನ್ಯಾಸ ಬರಿಯ ಸೌಂದರ್ಯಪ್ರಜ್ಞೆಗೆ ಸಂಬಂಧಿಸಿದ್ದಲ್ಲ. ಸುದ್ದಿಯನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದು ಅದರ ಮುಖ್ಯ ಪಾತ್ರ. ಹಾಗಾಗಿ ಜನಸಾಮಾನ್ಯರಿಗೆ ವಿನ್ಯಾಸವೆಲ್ಲ ಎಲ್ಲಿ ಅರ್ಥವಾಗುತ್ತೆ ಹೇಳಿ, ಅವರಿಗೆ ಸುದ್ದಿ ಮಾತ್ರ ಮುಖ್ಯ ಅಷ್ಟೆ ಎಂದು ವಾದಿಸುವವರು ಮತ್ತೊಮ್ಮೆ ಯೋಚಿಸಬೇಕು.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಅಪಾರ

+++

2022314103_7858ea5a93

ಕಾಯಿಲೆ-ಕಸಾಲೆ ಎಂದು ಆಸ್ಪತ್ರೆಗಳಿಗೆ ಅಲೆದಾಡದೆ, ಹಾಸಿಗೆ ಹಿಡಿಯದೆ, ಚೆಂದಾಗಿ ತಿರುಗಾಡಿಕೊಂಡಿದ್ದ, ಇಂದಿದ್ದು ನಾಳೆ ಇಲ್ಲ ಎಂದು ನಂಬಲಸಾಧ್ಯವಾದ ರೀತಿಯಲ್ಲಿ ತೀರಿಕೊಂಡ ಅಮ್ಮಮ್ಮ ಬದುಕಿನ ಅನೇಕ ಕ್ಷಣಗಳಲ್ಲಿ ನೆನಪಾಗುತ್ತಲೇ ಇರುತ್ತಾಳೆ. ಈಗಲೂ, ಅಂಗಳದ ಮೆಟ್ಟಿಲಮೇಲೆ ಬಿಸಿಲು ಕಾಯಿಸುತ್ತಾ, ಸೂಜಿಮೆಣಸಿನಕಾಯಿ ಒಣಗಿಸುತ್ತಾ ಕುಳಿತ ಅಮ್ಮಮ್ಮನ ಚಿತ್ರ ಕಣ್ಣಮುಂದೆ ; ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲಾ ಪಕ್ಕದ ಮನೆಯ ಅಜ್ಜಿಯ ಜೊತೆ ಹರಟುತ್ತಿದ್ದ ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ ಎಂದೇ ನಿರೀಕ್ಷೆ . .

ಸಂಪೂರ್ಣ ಓದಿಗೆ ಭೇಟಿ ಕೊಡಿ:  ಗ್ರೀಷ್ಮ ಗಾನ

+++

hampi-pravin-final

ವಸುಧೇಂದ್ರರದು ಮೂಲಭೂತವಾಗಿ ಅನುಕಂಪದ ಮನಸ್ಸು.
ಇವರನ್ನು ‘ಹೆಂಗರುಳಿನ ಲೇಖಕ’ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ.
ವಸುಧೇಂದ್ರರ ಕೃತಿಗಳನ್ನು ಓದಿದವರಿಗೆ ಥಟ್ಟನೆ ಕಾಣುವ ಮಾತೆಂದರೆ ಅಸಹಾಯಕರಿಗಾಗಿ ಮಿಡಿಯುವ ಇವರ ಮನಸ್ಸು.
ಸಂಡೂರೇ ಆಗಲಿ, ಬೆಂಗಳೂರೇ ಆಗಲಿ, ಗಂಡೇ ಆಗಲಿ, ಹೆಣ್ಣೇ ಆಗಲಿ ಅಥವಾ ಅರೆಗಂಡೇ ಆಗಲಿ, ವಸುಧೇಂದ್ರರು ಎಲ್ಲರನ್ನೂ ಸಹಾನುಭೂತಿಯಿಂದಲೇ ನೋಡುತ್ತಾರೆ.
ಮನುಷ್ಯರಷ್ಟೇ ಅಲ್ಲ, ಕೋತಿಗಳೂ ಸಹ ಇವರ ಸಹಾನುಭೂತಿಗೆ ಪಾತ್ರವಾಗುತ್ತವೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಸಲ್ಲಾಪ

ಬಿಕ್ಕು ಹೇಳಿದ ಕಥೆ

-ಅಕಾಲ

budda-1
ಅದು ಬುದ್ಧನ ಊರು. ಆ ಊರಿನವರೂ ಬುದ್ಧನಂತವರೇ. ಉದ್ದ ಕಿವಿ, ಗುಂಗುರು ಕೂದಲು, ಅರೆ ತೆರೆದ ಕಣ್ಣುಗಳು, ತೆಳ್ಳನೆ ನಗೆ.
ಕೃಶ ದೇಹದವನೊಬ್ಬ ಬಂದ.
ಆಸೆಯೇ ದುಃಖಕ್ಕೆ ಮೂಲ ಎಂದ.
ಬುದ್ದನಂತವರು ಮುಖವಾಡ ಕಳಚಿಟ್ಟರು.
ನಗಲು ಯತ್ನಿಸಿದರು.

ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ…

ಹರೀಶ್ ಕೇರ ಕೊಟ್ಟ ಈ ಕಥೆ ಒಂದು ದೊಡ್ಡ ನಿಟ್ಟುಸಿರಿನ ಕಥೆ

ಖಯ್ಯಾಮನ ದುರಂತ

larry_pesce‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.

ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’

ಖಯ್ಯಾಮ್ ಕಡೆಗಣ್ಣಿನಿಂದ ನೋಡಿ ಕುಡಿತ ಮುಂದುವರಿಸಿದ.

ಕೊಂಚ ಹೊತ್ತಿನಲ್ಲೇ ಹೊರಗೆ ಗದ್ದಲ ಜೋರು ಜೋರಾಗತೊಡಗಿತು. ಜತೆಗಿದ್ದ ತರುಣರು ಓಡುತ್ತಾ ಕೂಗಿದರು- ‘ಖಯ್ಯಾಮ್, ಓಡಿ ಜೀವ ಉಳಿಸಿಕೋ. ಅವರು ಬಂದೇ ಬಿಟ್ಟರು. ಇಲ್ಲೇ ಇದ್ದರೆ ದುರಂತ ಖಂಡಿತ’

ಖಯ್ಯಾಮ್ ಕಡೆಗಣ್ಣು ತೆರೆದು ಹೇಳಿದ : “ಮೂರ್ಖರೇ ! ದುರಂತ ಎಂದೋ ಆರಂಭವಾಗಿದೆ. ಚಲಿಸುತ್ತಿದೆ. ಅದು ಶುರುವಾದಾಗ ನೀವೆಲ್ಲ ನಿದ್ರಿಸುತ್ತಿದ್ದಿರಿ ! ಈಗ ಅದನ್ನು ನೀವಾದರೂ ಹೇಗೆ ತಡೆಯಬಲ್ಲಿರಿ ?!”

ಅಷ್ಟು ಹೇಳಿ ಮತ್ತೆ ಮತ್ತೊಂದು ಬಾಟಲಿ ಬಿರಡೆ ಬಿಚ್ಚಿದ.

ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

ಬ್ಲಾಗ್ ಲೋಕದಲ್ಲಿ ನಗೆ ಹಂಚುತ್ತಲೇ ಸಮಾಜವನ್ನು ಬೆಳಕಿಗೆ ಒಡ್ಡುತ್ತಿರುವ ‘ನಗೆ ನಗಾರಿ ಡಾಟ್ ಕಾಂ’ ಗೆ ಈಗ ಒಂದು ವರ್ಷದ ಸಂಭ್ರಮ.

ಕನ್ನಡದಲ್ಲಿ ಪ್ರಜಾವಾಣಿಯಲ್ಲಿ ‘ಛೂ ಬಾಣ’ ಬರೆದ ಟಿಎಸ್ ಆರ್ ಸಹಾ ಹೀಗೆ ವ್ಯಂಗ್ಯ ಬಾಣಗಳ ಮೂಲಕವೇ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ್ದರು. ‘ಎಡಗಾಲು ಮುಂದಿಟ್ಟು ಬನ್ನಿ’ ಎಂದು ತನ್ನ ಬ್ಲಾಗ್ ಗೆ ಬರುವವರಿಗೆ ಆಹ್ವಾನ ನೀಡುವ ನಗೆ ನಗಾರಿ ಹಾಸ್ಯದ ಬಾಣದ ಮೂಲಕವೇ ಸಮಾಜವನ್ನು ಚುಚ್ಚಿ ಎಬ್ಬಿಸಲು ನೋಡುತ್ತಿದೆ.

ಟಿ ಪಿ ಕೈಲಾಸಂ ಹೇಳಿದ್ದರಲ್ಲ-

ಕಿರುಆಳದ ನಗೆ ನೀರಿನ ಮೇಲೆ

ತಿರುಗುತ ಬಹುವೇಳೆ

ಕಣ್ಣೀರಿನ ಕಡಲಿನ ಪಾಲು

ಹಾಸ್ಯದ ಹರಿಗೋಲು

ಅಂತ ಅಂತಹ ಹಾಸ್ಯದ ಹರಿಗೋಲನ್ನು ಹಿಡಿದು ನಗೆ ನಗಾರಿ ಬಳಗ ಹೊರಟಿದೆ. ಬೆಸ್ಟ್ ಆಫ್ ಲಕ್..

ನಗೆ ನಗಾರಿ ಮೊದಲ ವರ್ಷದ ಆಚರಣೆಗಾಗಿ ಅವರೇ ಬರೆದ ಒಂದು ಬರಹ ಇಲ್ಲಿದೆ. ಸ್ಯಾಂಪಲ್ ರುಚಿಗಾಗಿ-

 

 

cropped-title1

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

enews-party-hatಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

ದೇಸಿ ಮಾತು- ಬ್ಲಾಗ್ ಅಲ್ಲ, ಪುಸ್ತಕ

‘ದೇಸೀಮಾತು’ ಬ್ಲಾಗ್ ನ ದಿನೇಶ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹರಿತ, ನೇರ ಬರಹಗಳಿಂದ ಬ್ಲಾಗ್ ಅಂಗಳದಲ್ಲಿ ಸುದ್ದಿ ಮಾಡಿದ್ದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.

ಬ್ಲಾಗ್ ಲೋಕದಲ್ಲಿ ಸಮಕಾಲೀನ ವಿಚಾರಗಳ ಚರ್ಚೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ದಿನೇಶ್ ದೇಸಿ ಮಾತು ಮೂಲಕ ಪ್ರವೇಶಿಸಿದರು. ಅವರ ಲೇಖನಗಳೆಲ್ಲವೂ ಚರ್ಚೆಗೆ ಒಳಗಾಗಿವೆ ಎನ್ನುವುದೇ ಅವರ ಬರಹಕ್ಕಿರುವ ಶಕ್ತಿಯನ್ನೂ ತೋರಿಸುತ್ತದೆ.

ಈ ಪುಸ್ತಕವನ್ನು ಬೆಂಗಳೂರು ಪ್ರೆಸ್ ಕ್ಲಬ್ ಹೊರತಂದಿದೆ. ಬ್ಲಾಗ್‌ನ ಬರಹಗಳೊಂದಿಗೆ ಕೆಲವು ತಾಜಾ ಬರಹಗಳೂ ಇವೆ. ನಾಳೆ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ. ‘ದೇಸಿ ಮಾತು’ಗೆ ಡಾ.ಶತೇಂದ್ರ ಕುಮಾರ್ ಬರೆದ ಬೆನ್ನುಡಿಯ ಆಯ್ದ ಸಾಲುಗಳು ಇಲ್ಲಿವೆ-

desimatu

ಪತ್ರಕರ್ತ ಎಸ್.ಸಿ.ದಿನೇಶ್ ಕುಮಾರ್ ಅವರ ದೇಸೀಮಾತು ಕೃತಿ ಹಲವು ದೃಷ್ಟಿಯಲ್ಲಿ ಮಹತ್ವದ ಕೃತಿ. ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಾಗಿಸುವ ಇಲ್ಲಿನ ಲೇಖನಗಳು ನಮ್ಮ ವರ್ತಮಾನದ ತಲ್ಲಣಗಳನ್ನು ಹಸಿಹಸಿಯಾಗಿ ಧ್ವನಿಸುತ್ತವೆ. ಮತಾಂಧತೆ, ಮಠಾಧೀಶರ ಕಪಟಗಳು, ಕಾರ್ಪರೇಟ್ ಸಂಸ್ಕೃತಿಯ ವೈರುಧ್ಯಗಳು, ಹಿಂದುಳಿದವರ ಸಮಸ್ಯೆಗಳು, ಸಮೂಹಮಾಧ್ಯಮಗಳ ಗೋಸುಂಬೆತನ, ಕನ್ನಡತನದ ಪ್ರಶ್ನೆಗಳು ಇಲ್ಲಿನ ಲೇಖನಗಳಲ್ಲಿ ಚರ್ಚೆಗೆ ಒಳಗಾಗಿವೆ.

editorದಿನೇಶ್ ಅವರು ಮೂಲತಃ ಕವಿ, ಭಾವಜೀವಿ. ಪತ್ರಿಕಾರಂಗದ ಚೌಕಟ್ಟಿಗೆ ಒಳಪಟ್ಟು ಅವರೊಳಗಿನ ಕವಿ ತನ್ನ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಂಡಂತೆ ಕಾಣುತ್ತಾನೆ. ಅವರ ಗದ್ಯ ಬರವಣಿಗೆ ಸರಳ, ಸ್ಪಷ್ಟ ಹಾಗು ನೇರವಾಗಿ ಎದೆಗೆ ತಾಕುವಂಥದ್ದು. ಇಲ್ಲಿ ಅತಿರಂಜಕತೆ, ಜಟಿಲ ವಾಕ್ಯಸಂಯೋಜನೆ, ಅಸ್ಪಷ್ಟ ಅಭಿವ್ಯಕ್ತಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತನಗೆ ಅನಿಸಿದ್ದನ್ನು ನೇರವಾಗಿ, ರಮ್ಯ ಉಪಮೆಗಳ ನೆರವಿಲ್ಲದೆ ಹೇಳುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಇಲ್ಲಿನ ಲೇಖನಗಳು ಪಂಡಿತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗನಿಗೂ ಸುಲಭವಾಗಿ ತಲುಪುತ್ತವೆ.

ಹೇಮಶ್ರೀ, Sunnyvale, California…

 

dsc04091

ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.

ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !

೧. ಹೋಟೇಲ್‍ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!

ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ ಜಾತಿ ಧರ್ಮ ಭಾಷೆ ಇಲ್ಲ ಅಂದ್ರೆ ಸುಳ್ಳೇ. ಕೆಲವರ ಅನುಭವಕ್ಕೆ, ಗಮನಕ್ಕೆ ಬರದೇ ಹೋಗಿರಬಹುದು ಅಷ್ಟೆ.

– ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಂದರ್ಭದಲ್ಲಿ ( ನಾಲ್ಕು-ಐದು ವರ್ಷಗಳ ಹಿಂದೆ) … ನಾನು ಯಾವ ಜಾತಿ / ವೆಜ್ಜಾ … ನಾನ್ ವೆಜ್ಜಾ / ಹುಡುಗರು ಫ್ರೆಂಡ್ಸ್ ಇದ್ದಾರಾ ಇಲ್ವಾ, ಇವೆಲ್ಲಾ ಸಂದರ್ಶನ ಆಗಿಯೇ ಕೊನೆಗೆ ಮನೆ ಬಾಡಿಗೆಗೆ ಸಿಕ್ಕಿದ್ದು.
ಮೊನ್ನೆ ಮೊನ್ನೆ ಎರಡು ತಿಂಗಳ ಹಿಂದೆ ನನ್ನ ಗೆಳೆಯನೊಬ್ಬನ ಗಾಡಿ ಕಳುವಾಗಿ ಪೋಲಿಸ್ ಸ್ಟೇಶನ್‍ಗೆ complaint ಕೊಡ ಹೋದರೆ, ಅವನನ್ನು ಎಂತಹ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು ಎನ್ನುವುದನ್ನು ಕೇಳಿದರೆ ಇದು ಬೆಂಗಳೂರಾ ಅನ್ನಿಸಿಬಿಡ್ತು. ಅವನ ಹೆಸರು ಒಂದು ಧರ್ಮಕ್ಕೆ ಅಂಟಿಕೊಂಡಿತ್ತು. ಆದರೆ ಅವನಲ್ಲ. ಅವನು ಧರ್ಮವನ್ನು ಬಿಟ್ಟು ಯಾವ ಕಾಲವಾಗಿದೆಯೋ !!!

೨. ನಮಗೆ ಅಂದ್ರೆ, ಯಾರು (ಮಾನಸಿಕವಾಗಿ ಮತ್ತು ದೈಹಿಕವಾಗಿ) ತುಳಿತಕ್ಕೆ/ ಶೋಷಣೆಗೆ ಒಳಗಾಗದ ಅನುಭವ ಪಡೆದಿದ್ದಾರೆ ಅವರಿಗೆ ಮಾತುಗಳಲ್ಲಿ , ಬರಹಗಳಲ್ಲಿ – ಹೀಗಾದರೆ ಎಷ್ಟು ಒಳ್ಳೆಯದು ಎನ್ನುವ ಮೇಲ್ನೋಟದ ಆದರ್ಶದ ಭ್ರಮೆ ಇರುತ್ತದೆ. ಎಲ್ಲಾ ರೀತಿಯಲ್ಲೂ.
ಅದು ಧರ್ಮ ಇರಬಹುದು, ರಾಜಕೀಯ ಇರಬಹುದು, economy ಇರಬಹುದು. anything and everything . ಎಲ್ಲವೂ ಬಿಟ್ಟಿ ಅನಿಸಿಕೆಗಳು ಅಲ್ವಾ. ಓದಿ ತಿಳಿದುಕೊಂಡೇ ಈ ರೀತಿ ಅಭಿಪ್ರಾಯ ನೀಡಲು ಸಾಧ್ಯ.!!!
ನನ್ನನ್ನೂ ಸೇರಿಸಿಕೊಂಡೇ.

– ಈ ವರೆಗೂ ನನಗೆ, ನಾನು particular ಜಾತಿಯವಳು ಎನ್ನುವ ಕಾರಣಕ್ಕೆ ಯಾವ ರೀತಿಯ ಅವಮಾನವಾಗಲೀ, ಬೇಸರವಾಗಲೀ, ದೂಶಣೆಯಾಗಲೀ ಅನುಭವಕ್ಕೆ ಬಂದಿಲ್ಲ. ಅಂದ ಮಾತ್ರಕ್ಕೆ it does not exist ಅಂತ ನಾನು ಅಂದುಕೊಂಡರೆ ತಪ್ಪಾಗಲ್ವಾ.!

೩.. ಕೆಲವು ಸ್ತರಗಳಲ್ಲಿ ಪ್ರಜ್ನಾಪೂರ್ವಕವಾಗಿಯಾದರೂ ನಾವು ವೈಯಕ್ತಿಕ ನೆಲೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತಬೇಕಲ್ಲಾ. ಹಿಂದಿನಿಂದಲೂ ಎಷ್ಟೊಂದು ಜನ ಇದನ್ನು ಮಾಡಿಕೊಂಡೇ ಬಂದಿದ್ದಾರೆ. ಸಮಾಜ ಅಂದ್ರೆ ನಾವೇ ಅಲ್ವಾ. ನಿಧಾನವಾಗಿಯಾದರೂ ಈ ಬಗ್ಗೆ ಯಾವ ಭಯ ಆತಂಕವಿಲ್ಲದೆ ಚರ್ಚೆ ಮಾಡುತ್ತಿದ್ದೇವೆ ಎಂದರೆ something must be happening over the period of time !!!

೪. ಕ್ರಾಂತಿ ಗಾಗಿ ಕ್ರಾಂತಿ ಎನ್ನುವ ಅನಿವಾರ್ಯತೆ ಈಗಲೂ ನಮ್ಮಲ್ಲಿ ಇದೆಯೇ !
ಹೌದು ಅಂದರೆ ಇನ್ನೂ ನಾವು ಮಾಡಬೇಕಾಗಿರುವುದು ತುಂಬಾ ಇದೆ. ಒಟ್ಟು ಸಾಮಾಜಿಕ ಕ್ರಾಂತಿಯಲ್ಲಿ ನನ್ನದೂ ಒಂದು ಪಾತ್ರ ಇರುವುದರಿಂದ ಅದಾಗಿಯೇ ಅದು ಆಗುತ್ತದೆ ಎಂದರೆ ಅದು ದೊಡ್ಡ ಸುಳ್ಳು.

– ನಾನು ಮದುವೆಯಾಗಲು ಯೋಚಿಸಿದಾಗ, ನನ್ನ ಅಪ್ಪ ಅಮ್ಮ ಮೊದಲು ಹುಡುಕಿದ್ದು ನಮ್ಮ ಜಾತಿಯಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ದಾನಾ ಅಂತ. ಅಷ್ಟು ವರ್ಷ ಅವರಿಬ್ಬರೂ ಪ್ರಗತಿಪರರಾಗಿ ಬರೆದದ್ದು, ಭಾಷಣ ಮಾಡಿದ್ದು, ಚಿಂತನೆ ನಡೆಸಿದ್ದು, ಇವೆಲ್ಲ ಸುಳ್ಳಾ ಅಂತ ಮೊದಲ ಬಾರಿಗೆ ನನಗೆ ಅನ್ನಿಸಿತ್ತು. ಆ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಆಯ್ತು ಅಂತ ನನ್ನ ಸ್ನೇಹಿತರಿಗೇ, ಅಪ್ಪ ಅಮ್ಮ ನ ಸ್ನೇಹಿತರಿಗೇ ಆಶ್ಚರ್ಯ. ಯಾಕಂದ್ರೆ ವಿಚಾರವಂತ ಬರಹಗಾರರ ಕುಟುಂಬ. ಇದು ಒಂದು ಚರ್ಚೆಯ ವಿಶಯವೇ ಅಲ್ಲ ನಮಗೆ. ಅನಾಯಾಸವಾಗಿ ನಮ್ಮ ಸಹಜ ಯೋಚನಾಕ್ರಮದಲ್ಲಿ ಇದು ಬಂದು ಹೋಗಿರಬೇಕಿತ್ತು. ಹಾಗಂತ ತಿಳ್ಕೊಂಡಿದ್ರು. ನಾನೂ ಹಾಗೇ ಅಂದ್ಕೊಂಡಿದ್ದೆ.

ಆದ್ರೆ ಸಮಸ್ಯೆ ಅದಲ್ಲ. ವೈಯಕ್ತಿಕವಾಗಿ ನಾವು ಈ ಬಗ್ಗೆ ಯೋಚನೆ ಮಾಡುವಾಗ ಎಲ್ಲರೂ ನಮ್ಮ ನಮ್ಮ ಅನುಭವಗಳ ನೆಲೆಯಲ್ಲೇ ನಮಗೆ ಬೇಕಾಗುವ comfort zoneಗಳಲ್ಲೇ ಬದುಕಲು ಇಷ್ಟ ಪಡುವವರು.

ಜಾತಿ, ಧರ್ಮ, ದೇವರನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಬಿಸಾಡಿದ ನನ್ನ ಮನೆಯಲ್ಲೇ ನನ್ನ ನಿರ್ಧಾರದ ಬಗ್ಗೆ ಚರ್ಚೆಯಾದರೆ, ಪಾಪ ಅವನ್ನೆಲ್ಲಾ ಇನ್ನೂ ಹೊತ್ತುಕೊಂಡು ತಿರುಗುತ್ತಿರುವವರ ಪಾಡೇನು ಅಂತ ಯೋಚಿಸಿದೆ.
ಎಲ್ಲವೂ ಒಮ್ಮೆಲೇ ಬದಲಾಗಬೇಕು ಅಂದ್ರೆ ಹೇಗೆ. ಬಸವಣ್ಣ ಕ್ರಾಂತಿ ಮಾಡಿದ್ದು ಎಷ್ಟು ಶತಮಾನಗಳ ಹಿಂದೆ. ನಾವು ಈಗಲೂ ಹಾಗೆಯೇ ಇದ್ದೇವೆ ಅಲ್ವಾ. ನಿಧಾನವಾಗಿ ಬದಲಾಗುವ ಪ್ರಕ್ರಿಯೆ ಇದು.

ನಾನು ಮದುವೆಯಾದಾಗ, ನಾನು ಏನೋ ದೊಡ್ದ ಕ್ರಾಂತಿ ಮಾಡಿದೆ ಎಂದು ಅನ್ನಿಸಲೇ ಇಲ್ಲ. ಯಾಕಂದ್ರೆ, ಮೊದಲೇ ನಾನು ಈ ಜಾತಿ, ಆ ಧರ್ಮ, ಈ ದೇಶ ಎನ್ನುವ ನೆಲೆಗಟ್ಟನ್ನು ಮೀರಿ ಯೋಚಿಸಲು ಸಾಧ್ಯವಾಗಿದ್ದರಿಂದ. ಜತೆಗೆ ನನ್ನ ಮೊದಲೇ ಎಷ್ಟೊಂದು ಜನ ಈ ಮೆಟ್ಟಿಲು ಹತ್ತಿ ಹೋಗಿದ್ದಾರೆ ಎನ್ನುವ ಸರಳ ಸತ್ಯದ ಅರಿವು ನನಗೆ ಇದ್ದ ಕಾರಣ. ಮತ್ತು ನನಗೆ ನನ್ನ ಅಪ್ಪ ಅಮ್ಮ ನೀಡಿದ ಆತ್ಮಬಲ. (ದ್ವಂದ್ವಗಳು ಏನೇ ಇದ್ದರೂ ಅವರ ಧೈರ್ಯ ಮತ್ತು ಪ್ರೋತ್ಸಾಹ ಜತೆಗಿದ್ದರಿಂದ).

ನನ್ನ ಕುಟುಂಬದ ಪ್ರತಿಕ್ರಿಯೆ ಅತ್ಯಂತ ಸಹಜ and I do understand it.
Its a micro example ಅಷ್ಟೆ. ನಮ್ಮ ಸಮಾಜ ಮಾನಸಿಕವಾಗಿ ಬದಲಾವಣೆಗೆ ರೆಡಿಯಾಗಿಲ್ಲ ಎನ್ನುವುದಕ್ಕೆ.
ಯಾಕಂದ್ರೆ, ನಾನು ಜಾತಿ ಧರ್ಮ ದೇವರನ್ನು ಬಿಟ್ಟರೂ ನನ್ನ ಸುತ್ತಮುತ್ತ ಇರುವ ಜನರು ಇನ್ನೂ ಅದೇ ಲೇಬಲ್ ಹಚ್ಚಿಕೊಂಡಿದ್ದಾರಲ್ಲಾ. ಅವರೆಲ್ಲಾ ಯಾವಾಗ ಈ tag ಗಳನ್ನು ಕಳಚಿಡುತ್ತಾರೋ ಅಲ್ಲಿಯವರೆಗೆ ನಾನು ಅವರ ಜತೆ ಗುದ್ದಾಡಲೇಬೇಕಲ್ಲ.

೫. ನಾವು ಎಷ್ಟು ಮಂದಿ ಧರ್ಮ, ಜಾತಿ ಬಿಡಲು ತಯಾರು.???
ನಮ್ಮ ನಮ್ಮ ಹೆಸರುಗಳಲ್ಲಿನ ಜಾತಿ ಸೂಚಕ, ಧರ್ಮ ಸೂಚಕ ಹೆಸರುಗಳನ್ನು ( ಸರ್ ನೇಮ್ ) ಬಿಟ್ಟರೂ ಸ್ವಲ್ಪ ಮಟ್ಟಿನ ಬದಲಾವಣೆ ಬಂದೀತು. ಅಲ್ಲವೇ.

ಎಲ್ಲಿವರೆಗೆ ಜಾತಿ, ಧರ್ಮ ಎನ್ನುವ ಬಾಲ ಕಟ್ಟಿಕೊಳ್ಳುತ್ತೇವೆಯೋ ಅಲ್ಲಿವರೆಗೆ ಯಾವ ಮೀಸಲಾತಿ ಯಾರಿಗೆ ನೀಡಿದರೂ ಉಪಯೋಗವಾಗದು.

೬. ಪ್ರಸ್ತುತ ಭಾರತದ ದುರಂತ ಅಂದರೆ ಯಾವುದೇ ಸಾಮಾಜಿಕ ಬದಲಾವಣೆಯೂ, ರಾಜಕೀಯವಾದ ಫಿಲ್ಟರ್ ‍ನಿಂದ ಹಾದು ಹೋಗಲೇ ಬೇಕಾದ ಸಂದರ್ಭ ಇದೆ. ಅದನ್ನು ಅರಿತೇ ಸಿದ್ಧಲಿಂಗಯ್ಯನವರು ಇ ಮನವಿಯನ್ನು ಮಂಡಿಸಿರುವುದು.

ಅಂಬೇಡ್ಕರ್ ಅನ್ನೋ ಮಹಾನ್ ಚಿಂತಕ ಭಾರತದಲ್ಲಿ ಹುಟ್ಟದೇ ಇರುತ್ತಿದ್ದಲ್ಲಿ ಈಗಿನ ಚರ್ಚೆ, ವಾದ, ಮೀಸಲಾತಿಯ ಹೊಸ ಹೊಳಹುಗಳು ಸಾಧ್ಯವೇ ಆಗುತ್ತಿರಲಿಲ್ಲ. ಮಾರ್ಟಿನ್ ಲುಥರ್ ನ civil rights movement ಆಗದೇ ಇರುತ್ತಿದ್ದಲ್ಲಿ ಒಬಾಮಾ ಅಮೇರಿಕಾ ಅಧ್ಯಕ್ಷನಾಗುವುದು ಸಾಧ್ಯವಿತ್ತಾ?
ಆತ ಎಷ್ಟು ಸಬಲ ಮತ್ತು ಪರಿಣಾಮಕಾರಿ ಎನ್ನುವುದು ಬೇರೆಯೇ ಮಾತು. ಅಥವಾ ಜಾತಿ ರಾಜಕೀಯ, ಧರ್ಮ ರಾಜಕೀಯ ಅಮೇರಿಕೆಯಲ್ಲಿ ಇಲ್ಲವೇ ಎನ್ನುವ ಪ್ರತಿವಾದ ಬೇರೆಯೇ. ಅದು ಇಲ್ಲಿ ಬೇಡ.
ಕುವೆಂಪು ಅವರ ವಿಶ್ವಮಾನವ concept ಆದರ್ಶ. ಅದು practical ಆದಾಗ ಮಾತ್ರ ಅಲ್ವಾ ನಿಜವಾದ ಬೆಲೆ.

೭. ಇನ್ನು ಮೀಸಲಾತಿಯಿಂದ ಉಪಯೋಗ ಏನು ಎನ್ನುವ ಅಥವಾ ಕೇವಲ ಬಡವ – ಶ್ರೀಮಂತ ಎನ್ನುವುದನ್ನು ಪರಿಗಣಿಸಿ ಎನ್ನುವ ವಾದಗಳು, ಮತ್ತೆ basic point ಗೇ ಮರಳುವಂತೆ ಮಾಡುತ್ತವೆ. ಅದು ಪ್ರಸ್ತುತ ಸಮಯ ಸಂದರ್ಭದಲ್ಲಿ ಅನಗತ್ಯ. ಯಾಕಂದ್ರೆ ಆ ಕಾಲಘಟ್ಟವನ್ನು ದಾಟಿ ಯಾವತ್ತೋ ನಾವು ಮುಂದೆ ಬಂದಾಗಿದೆ.

೮. ಅಂತರ್ ಧರ್ಮೀಯ, ಅಂತರ್ ಜಾತೀಯ ವಿವಾಹಗಳು ನಡೆಯುತ್ತಲೇ ಇರುತ್ತವೆ. ಆದರೆ ಸಿದ್ಧಲಿಂಗಯ್ಯ ಅವರು ಪ್ರಸ್ತಾಪಿಸಿದ ರೀತಿಯಲ್ಲಿ ….
[ ಅವರು ಈ ರೀತಿ ವಿವಾಹವಾಗಬೇಕಾದರೆ ಅವರ ಮನಸ್ಸಿನಲ್ಲಿ ಒಂದು ಬದಲಾವಣೆ, ಆಂದೋಲನ ನಡೆದಿರುತ್ತದೆ. ಅವರು ಕ್ರಾಂತಿಯ ಕಡೆ ಒಲಿದಿರುವುದರಿಂದ ಇಂತಹ ವಿವಾಹ ಆಗಿದ್ದಾರೆ. ] …
ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಿಕೊಳ್ಳಲಾರೆ. ಮತ್ತು ಇದೇ ಕಾರಣದಿಂದಾಗಿ ಮೀಸಲಾತಿ ನೀಡುವ ಪ್ರಯತ್ನ ಸಾಮಾಜಿಕ ಕ್ರಾಂತಿಗೆ ಉಪಯೋಗವಾಗಲಾರದು. ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೇ ಈ ರೀತಿಯ ಮದುವೆಗಳಾದರೂ ಆಶ್ಚರ್ಯವಿಲ್ಲ. ಲಾಭಕ್ಕಾಗಿ ಏನು ಬೇಕಾದರು ಮಾಡುವ ಜನ ನಾವು.

೯. ಅವರೇ ಹೇಳಿದ ಇನ್ನೊಂದು ಅಂಶ ಹೆಚ್ಚು ಸೂಕ್ತ : …… [ ಇವರು ಜಾತಿರಹಿತರು, ನಿಜವಾದ ಭಾರತೀಯರು, ಜಾತ್ಯತೀತರು ಎಂದು ಇವರನ್ನು ಗುರುತಿಸುವಂತಾಗಬೇಕು. ]

ಅಂತರ್ ಜಾತಿ/ ಧರ್ಮ ವಿವಾಹವಾದವರು ತಮ್ಮ ಜಾತಿ / ಧರ್ಮ / ಭಾಷೆ ಎನ್ನುವ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
ಆ ನೆಲೆಗಟ್ಟನ್ನು ಮೀರಿ ತಾವು, ತಮ್ಮ ಮಕ್ಕಳು ಜಾತಿ / ಧರ್ಮ ರಹಿತ ಮಾನವರು ಎನ್ನುವುದು ಗಟ್ಟಿಯಾಗಿ ಪ್ರತಿಪಾದಿಬೇಕು. ಮತ್ತು ಅದು ಮಕ್ಕಳ ಮನಸ್ಸಲ್ಲೂ ಬೆಳೆಯಬೇಕು.

ಇಲ್ಲವಾದಲ್ಲಿ ಈಗ ಹೆಚ್ಚಾಗಿ ಆಗುತ್ತಿರುವ ಹಾಗೆ, ಒಂದು ಜಾತಿ/ ಧರ್ಮದ ಪ್ರಾಬಲ್ಯವಾಗುತ್ತದೆಯೇ ಹೊರತು ಜಾತಿ ರಹಿತ , ಧರ್ಮ ರಹಿತ ಸಮಾಜ ಸಾಧ್ಯವಾಗಲಾರದು. ಮಕ್ಕಳು ತಂದೆಯ ಜಾತಿ/ಧರ್ಮವನ್ನೇ (dominant paradigm) ಆಧಾರವಾಗಿಸಿಕೊಳ್ಳುವ ಸಂದರ್ಭವೇ ಹೆಚ್ಚು, ಅದು ಪೂರ್ವಾಗ್ರಹ ಪೀಡಿತ ಸಮಾಜದೊಳಗೆ ಬದುಕುವ ಅನಿವಾರ್ಯ ಆಯ್ಕೆ.

ಯಾಕಂದ್ರೆ, ಪ್ರತಿಯೊಂದು application ನಲ್ಲೂ ನಿಮ್ಮ ಜಾತಿ ಯಾವುದು, ನಿಮ್ಮ ಧರ್ಮ ಯಾವುದು ಎನ್ನುವ box ಗಳು ಇರುತ್ತವಲ್ಲ. ಅವುಗಳನ್ನು ತುಂಬದೇ ಇದ್ದರೆ ಎದುರಿಗಿರುವ clerk/officer ನೀವು ಬೇರೆ ಗ್ರಹದಿಂದ ಬಂದವರೇನೋ ಅಂತ ನೋಡ್ತಾರಲ್ಲಾ. (ಈಗ ಇವು optional ಆಗಿವೆ ಅಂತ ಅಂದ್ಕೊಂಡಿದ್ದೇನೆ … ಗೊತ್ತಿಲ್ಲ). ಆ embarrassment ಯಾರಿಗೆ ಬೇಕು. ಮತ್ತೆ ಹಾಗೆ ಪ್ರತಿ ಸಲ ಎಲ್ಲರಿಗೂ ಹೇಳ್ಕೊಂಡೇ ಇರ್ಬೇಕು ಅಲ್ವಾ. ನಾನು ಹುಟ್ಟಿದ್ದು ಅಂತರ್ ಜಾತಿ / ಧರ್ಮೀಯ ವಿವಾಹವಾದ ನನ್ನ ಅಪ್ಪ ಅಮ್ಮನಿಗೆ ಅಂತ.

– ಈಗಾಗಲೇ ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ ಅಂತರ್ ಜಾತಿ ವಿವಾಹವಾಗಿದ್ದ ನನ್ನ ಒಬ್ಬ ಅಜ್ಜ-ಅಜ್ಜಿಯ (ನನ್ನ ಅಜ್ಜನ ತಮ್ಮ) ಮಕ್ಕಳ ಮದುವೆಯ ಸಂದರ್ಭದಲ್ಲಿ ( ಇಪ್ಪತ್ತು – ಇಪ್ಪ್ಪತೈದು ವರ್ಶಗಳ ಹಿಂದೆ) ಮತ್ತೆ ಅದೇ ಪ್ರಶ್ನೆಗಳು, ಅದೇ ಸಂದರ್ಭ, ಗೊಂದಲಗಳು – ಅವರನ್ನು ಕಾಡಿದ್ದವು. ಇನ್ನು ಈಗ ಅವರ ಮೊಮ್ಮಕ್ಕಳ ಸಂದರ್ಭದಲ್ಲೂ ಹೆಚ್ಚೇನೂ ಬದಲಾಗಲಿಲ್ಲ.!!!
ಈಗಲೂ ಸಂದರ್ಭ ಹಾಗೇ ಇದೆ ಅಂದರೆ !!! ಮೀಸಲಾತಿಯಿಂದ ಕ್ರಾಂತಿ ಸಾಧ್ಯವೇ??? …ಕೆಲವೊಮ್ಮೆ ಅನ್ನಿಸುತ್ತದೆ!!!.

೧೦. ಬಹುಶಃ as a concept – ಮೀಸಲಾತಿ ಎನ್ನುವುದು ಆದರ್ಶ.
ಆದರೆ ಅದು ಆಮಿಶವಾದರೆ … ಮದುವೆ ಅನ್ನುವುದೂ ರಾಜಕೀಯ ದಾಳವಾಗಿ … ಇನ್ನು ಏನೇನೋ ಹೊಸ ಹೊಸ ರೀತಿಯ ಸಮಸ್ಯೆಗಳು ಸೃಷ್ಟಿ ಮಾಡಿಕೊಳ್ಳಬಾರದಲ್ಲಾ ನಾವು. !!!

ಹಾಗಾಗದೇ … ಸರಿಯಾಗಿ ಸಲ್ಲುವ ಪಾತ್ರರಿಗೇ ಅದು ದಕ್ಕಿದರೆ ಆಗ ಸಹಜವಾಗಿ ಹೋರಾಟದ ದಾರಿ ಸುಲಭವಾಗುತ್ತದೆ.
ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. ! ಅದನ್ನು ಸಿದ್ಧಲಿಂಗಯ್ಯ ಶುರು ಮಾಡಿದ್ದಾರೆ.

– ಹೇಮಶ್ರೀ

ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…

-ಅಮರೇಶ ನುಡಗೋಣಿ

 

kt4ಚಿತ್ರ: ಸೃಜನ್

 

ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ ಉತ್ಸಾಹದಿಂದೇನೂ ಏರಿ ಇಳಿಯುವುದು ಕಾಣಲಿಲ್ಲ. ಶಾಲೆಗೆ ಹೋಗುವ ಮಕ್ಕಳು ಮಾತ್ರ ಉಮೇದಿನಿಂದ ಇದ್ದದ್ದು ಕಂಡಿತು. ನಾನು, ರಾಜಶೇಖರ ರೈಲಿನಿಂದ ಇಳಿದಾಗ ಸ್ಟೇಷನ್ನಿನಲ್ಲಿ ಜನ ಅಷ್ಟೇನೂ ಇರಲಿಲ್ಲ. ನಮಗಾಗಿ ನಮ್ಮ ಕ್ಲಾಸ್ಮೇಟ್ ಒಬ್ಬರು ಕಾಯುತ್ತಾ ನಿಂತಿದ್ದರು ಎಂ.ಎ.ನಲ್ಲಿ ನಾನು ಆತ ಒಂದೇ ಕಡೆ ಕುಳಿತು ಪಾಠ ಕೇಳಿದ್ದೆವು. ವಿಚಿತ್ರವೆಂದರೆ ಈಗ ಬೆಟ್ಟಿಯಾಗುತ್ತಿದ್ದುದು 20ವರ್ಷಗಳ ನಂತರ. ನಡುವೆ ಕಂಡದ್ದು, ಮಾತಾಡಿದ್ದು ಇಲ್ಲ.

ರೈಲು ನಿಲ್ದಾಣದಿಂದ ಹೊರಗೆ ಬಂದಾಗ ಊರಿನ ಜನ ವಿಚಿತ್ರ ಕುತೂಹಲದಿಂದ ಒಂದೇ ವಿಷಯ ಮಾತಾಡಿಕೊಳ್ಳುತ್ತಿದ್ದರು. ಮುಂಜಾನೆಯ ಸಮಯದಲ್ಲಿ ಅಂದು ಬಜಾರದ ಉದ್ದಕ್ಕೂ ಜನ. ದಾಳಿಗೆ ಮುನ್ನ ಆವರಿಸುವ ಭೀತಿಯನ್ನು ತುಂಬಿಕೊಂಡು ಗುಂಪುಗುಂಪಾಗಿ ಬೆಂಕಿಯ ಮೇಲೆ ನಿಂತವರಂತೆ ಚಡಪಡಿಸುತ್ತಿದ್ದರು.

ನನಗೆ ಈ ಊರಿನ ಓಣಿ, ಬಜಾರಗಳಲ್ಲಿ ನಡೆಯುತ್ತಿದ್ದರೆ ನುಣುಪಾದ ಶಹಾಬಾದ್, ತಾಂಡೂರ್, ಸೇಡಂ ವರಸೆಗಳು (ತೆಳುವಾದ ನುಣುಪಾದ ಬಂಡೆಗಳು) ಕಣ್ಣಿಗೆ ಹೊಡೆಯುತ್ತಿದ್ದವು. ಹಂಪೆಯ ಬಂಡೆ, ಕಲ್ಲುಗಳನ್ನು ನೋಡಿದ ನನಗೆ ನೆಲದಲ್ಲಿ ಸಿಗುವ ಪದರು ಪದರು ಹಾಸುಕಲ್ಲುಗಳನ್ನು ನೋಡುವುದೇ ಹಬ್ಬವಾಯಿತು. ಊರ ಮುಕ್ಕಾಲು ಪಾಲು ಮನೆಗಳು ಈ ಪರಸೆಗಳಿಂದ ಮನೆಗಳೇ, ಚರಂಡಿಗಳಿಲ್ಲ. ಇದ್ದರೂ ಸುಮ್ಮನೆ ಬಿದ್ದಿದ್ದವು. ಓಣಿಯಲ್ಲಿ ನಡೆದರೆ ಯಾವುದೋ ಪುರಾತನ ಕಾಲದ ಊರುಗಳಲ್ಲಿ ನಡೆದ ಅನುಭವ. ಸಿಮೆಂಟ್ ಉದ್ದಿಮೆಯಿಂದ ಈ ಊರಿಗೆ ಯಾವ ಲಾಭವಾದಂತೆ ಕಾಣಲಿಲ್ಲ. ಓಣಿಗಳಲ್ಲಿ ಸಿಮೆಂಟಿನ ದಾರಿಗಳು ಅವರವರ ಮನೆಯ ಮುಂದೆ ಸಿಮೆಂಟಿನ ದಾರಿಗಳ ಮೇಲೆ ಬಟ್ಟೆ ಒಗೆಯುವುದು, ಕಟ್ಟಿಗೆ ಒಣ ಹಾಕುವುದು, ಕಾಳುಕಡಿಗಳನ್ನು ಒಣಗಲು ಹಾಕಿರುವುದು ಕಂಡಿತು.

ಮಕ್ಕಳು ಮನೆ ಮುಂದಿನ ಸಿಮೆಂಟಿನ ದಾರಿಯಲ್ಲೇ ಮಂಡಿಯೂರಿಕೊಂಡು ಓದುವುದು, ಬರೆಯುವುದು, ಆಡುವುದು ನಡೆದಿತ್ತು. ಗೆಳೆಯನ ಮನೆ ಹೊಕ್ಕಾಗ ಎಂಟುಗಂಟೆ. ಅವರು ಉಪನ್ಯಾಸಕರು ಮನೆ ಅಂದರೆ ಉದ್ದಕ್ಕೆ ಮೂರು ಕೊಠಡಿಗಳು, ದೊಡ್ಡದಾದ ಅಡಿಗೆ ಮನೆಯಲ್ಲೇ ಬಚ್ಚಲು. ಮನೆಯೊಡತಿ ಒಲೆ ಮುಂದೆ ಕುಂತು ಅಡಿಗೆ ಮಾಡುತ್ತಿದ್ದಳು. ಅಲ್ಲೇ ಮಕ್ಕಳು ಹೋಂ ವರ್ಕ್ ಮಾಡುತ್ತಿದ್ದರು. ಎಲ್ಲವೂ ಅಡಿಗೇ ಮನೆಯಲ್ಲೇ. ಬಚ್ಚಲ ಎತ್ತರ ಮೂರು ಅಡಿ. ಅಲ್ಲಿ ಸ್ನಾನ ಮಾಡಲು ತೊಡಗಿದೆ. ಮನೆಯೊಡತಿ ಖಾಸಗಿ ಶಾಲೆಯಲ್ಲಿ ಮೂರಂಕಿ ದಾಟದ ಸಂಬಳಕ್ಕೆ ದುಡಿಯುವ ಶಿಕ್ಷಕಿ.

‘ನಿಮ್ಮ ಪಾಠ ಬಸಯ್ಯ ಮತ್ತು ಜೇನುಗೂಡು ನಾನೇ ಓದಿಸ್ತೀನಿ, ಅಣ್ಣೋರೆ ‘ ಅಂದಳು. ತಣ್ಣಗೆ ನಿಂತು ‘ಹೌದೇನಮ್ಮ?’ ಅಂದೆ. ‘ಪಾರ್ಗೋಳು ಪಾಠ ಕೇಳಿ ಅಳ್ತಾವ್ರೀ! ಮತ್ತೆ ಮತ್ತೆ ಅದೇ ಪಾಠ ಮಾಡ್ರೀ, ಟೀಚರ್ ಅಂತ ಗಂಟು ಬೀಳ್ತಾವ್ರೀ’ ಅಂದಳು. ನನಗೆ ಮಾತಾಡಲು ಮುಜುಗುರವಾಯ್ತು. ಅದೇ ಹೊತ್ತಿಗೆ ಆಕೆಯ ದೊಡ್ಡ ಮಗಳು ಓಡಿ ಬಂದು. ‘ಅವ್ವಾ, ಬಸಯ್ಯ ಮತ್ತು ಜೇನುಗೂಡು ಪಾಠ ಬರೆದೋರು ಇವರೇ ಅಲ್ಲೇನು?’ ಅಂತ ನಿಂತಳು. ‘ಹೂಂನೇ’ ಅಂದಳು ಖುಷಿಯಿಂದ.

ಅಲ್ಲಿಂದ ರಾವೂರು ಎಂಬ ಹಳ್ಳಿಗೆ ಹೊರಟಾಗ ಸಂಜೆಯ ಮೂರುಗಂಟೆ. ತಾಲ್ಲೂಕು ಕೇಂದ್ರದ ಬಜಾರದಲ್ಲಿ ಹೊರಟಾಗ ಇಡೀ ಊರೇ ಬಜಾರದಲ್ಲಿತ್ತು. ಬಜಾರದ ರಸ್ತೆಯ ಅಗಲೀಕರಣ ನಡೆದಿತ್ತು. ಪಾನ್ಬೀಡಾ ಅಂಗಡಿಗಳನ್ನು ಯಂತ್ರ ಎತ್ತಿ ಎತ್ತಿ ಲಾರಿಯಲ್ಲಿ ಇಡುತ್ತಿತ್ತು. ಅದರ ಮಾಲೀಕ ಕುಟುಂಬ ವರ್ಗ ನಿಂತು ತಮ್ಮ ಜೀವವನ್ನೇ ಅಲ್ಲಿಟ್ಟು ಅದಕ್ಕೊದಗಿದ ಸ್ಥಿತಿಯನ್ನು ದುಖಃದಿಂದ ನೋಡಿ ಅನುಭವಿಸುತ್ತಿದ್ದರು. ಕೆಡವಲಾದ ಅಂಗಡಿ, ಹೋಟೆಲ್ ಗಳ ಅಳಿದುಳಿದ ಸಾಮಾನುಗಳನ್ನು ಅದರದರ ಒಡೆಯರು ಸಂಗ್ರಹಿಸುತ್ತಾ ಸಾಗಿಸುತ್ತಾ ಪರದಾಡುತ್ತಿದ್ದರು.

ಬೆಳಗಿನ ಹೊತ್ತು ಆ ದಾಳಿಯ ಬಗ್ಗೆ ಜನ ಚಿಂತೆಗೀಡಾಗಿದ್ದರು. ಈಗ ದಾಳಿಗೆ ಸಿಕ್ಕು ಏದುಸಿರು ಬಿಡುತ್ತಿದ್ದರು. ಆಟೋಗಳು ಇಲ್ಲ. ಬಜಾರವೇ ಬಂದು ವಿದ್ಯುತ್ ಇಲ್ಲ. ನಾನು ನಿಂತು ನೋಡುವುದರಲ್ಲೇ ತಲ್ಲೀನನಾಗಿದ್ದೆ. ಕ್ರೇನ್ ಎಂಬ ಯಂತ್ರ ಒಂದು ಪಾನ್ಬೀಡಾ ಡಬ್ಬಿ ಅಂಗಡಿಯನ್ನು ಎತ್ತಿ ಲಾರಿಗೆ ಹಾಕುವ ಸಿದ್ದತೆಯಲ್ಲಿತ್ತು. ‘ನದಾಫ್ ಕಾ ದುಕಾನ್’ ಅಂತ ಅಲ್ಲಿದ್ದ ಗುಂಪು ಕೂಗುತ್ತಿತ್ತು. ‘ಆ ಮಾರವಾಡಿ ದುಖಾನ್ ನೋಡ್ರೀ ಮುಸುಡಿ ಒಡಕಂಡಿದೆ’ ಅಂತ ಕೂಗುತ್ತಾ ಖುಷಿಯಲ್ಲಿದ್ದ ಗುಂಪು ಕಂಡಿತು. ಊರು ಅಲ್ಲೋಲ ಕಲ್ಲೋಲ.

ತಾಲ್ಲೂಕಿನ ರಾವೂರಿಗೆ ಬಹಳ ಎಂದರೆ ಮೂವತ್ತು ಕಿಲೋಮೀಟರ್ ದೂರ ಇಲ್ಲ. ಚಿತ್ತಾಪೂರದಿಂದ ರಾವೂರಿಗೆ ಎಂಟು ಕಿಲೋಮೀಟರ್. ಚಿತ್ತಾಪುರಕ್ಕೆ ಬರುವುದರಲ್ಲೇ ನಾನು ಸುಸ್ತು. ಒಂದು ಜೀಪು ಹತ್ತಿದೆವು. ಹತ್ತು ಜನ ಕೂಡುವ ಜೀಪಿನಲ್ಲಿ 22 ಜನ ಕುಳಿತ್ತಿದ್ದರು. ಬೇಡವೆಂದರೂ ಜನ ಏರಿಬಿಡುತ್ತಿದ್ದರು.

ಆ ರಸ್ತೆಯನ್ನು ನೋಡಿದರೆ ಅದು ಒಮ್ಮೆಯೂ ರಿಪೇರಿ ಕಂಡಿಲ್ಲ. ಮನುಷ್ಯನಿಗೇ ಅದರ ಮೇಲೆ ನಡೆಯಲು ಬರುವುದಿಲ್ಲ; ಜೀಪು ಆ ರಸ್ತೆ ಮೇಲೆ ಹೇಗೆ ಹೋಗುತ್ತದೆ ಎಂದು ನನ್ನ ಆತಂಕ. ಅದೇ ತಾನೇ ನಡೆಯಲು ಕಲಿಯುತ್ತಿದ್ದ ಮಗುವಿನಂತೆ ಜೀಪು ಹೊರಟಿತ್ತು. ನಡುನಡುವೆ ಇಳಿವವರು, ಏರುವವರು. ಈ ಪ್ರಯಾಣದ ಬಗ್ಗೆ ಜನ ಹೇಗೆ ಯೋಚಿಸುತ್ತಿರಬಹುದು ಅಂತ ಗಮನಿಸಿದೆ. ಹೆಂಗಸರು, ಗಂಡಸರು ಅವರವರ ಚಿಂತೆಗಳಲ್ಲೇ ಹರಟೆ ಹೊಡೆಯುತ್ತಿದ್ದರು. ಒಂದು ಕನ್ಯೆ ನೋಡಿ ಬಂದವರ ಗುಂಪು ಜೀಪಿನಲ್ಲಿತ್ತು. ಆ ಕನ್ಯೆಯನ್ನು ಹೆಂಗಸರು, ಗಂಡಸರು ವರ್ಣಿಸುತ್ತಿದ್ದರಲ್ಲ, ಅದನ್ನು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು! ಧರ್ಮಸಿಂಗ್, ಖರ್ಗೆ ಹಾಗೂ ಚಿತ್ತಾಪುರದ ಶಾಸಕನನ್ನು ಬಯ್ಯುತ್ತ ಕುಳಿತಿದ್ದವರ ನಡುವೆ ನನ್ನನ್ನು ಆ ಕನ್ಯೆಯ ವರ್ಣನೆ ಸೆಳೆದಿತ್ತು.

‘ಆಕೆ ಕುಡಿದ ನೀರು ಹೊಟ್ಟೆಯಲ್ಲಿ ಕಾಣ್ತದೆ’ ಅಂತ ಒಬ್ಬರು. ‘ಬೆಳದಿಂಗಳಿಗೆ ಬಾಡುತ್ತಾಳೆ’ ಅಂತ ಇನ್ನೂಬ್ಬರು! ದಾರಿಯುದ್ದಕ್ಕೂ ಶಹಬಾದ್ ಪರಸೆಗಳ ರಾಶಿ. ಗಣಿಗಳು, ಪಾಲೇಶ್ ಮಾಡುವ ಫ್ಯಾಕ್ಟರಿಗಳು. ವೇಸ್ಟ್ ಪೀಸುಗಳ ರಾಶಿ ರಾಶಿ ಅಂಗೈ ಅಗಲದ, ಗೇಣು ಉದ್ದದ ಪರಸೆಗಳು ನನ್ನನ್ನು ಮರುಳು ಮಾಡಿದವು. 8 ಕಿಲೋಮೀಟರ್ ಸಾಗುವುದಕ್ಕೆ ಒಂದೂವರೆ ತಾಸು ಸಮಯ. ರಾವೂರಿಗೆ ಇಳಿದಾಗ ಧೂಳೇ ಧೂಳು! ಅಲ್ಲಿ ಇರುವುದಕ್ಕೇ ಜನ ಸಾಧ್ಯವಿಲ್ಲ ಆದರೆ ಜನ ತಣ್ಣಗೆ ಇದ್ದರು. ಆ ರಾವೂರಿನ ತುಂಬ ಕಲ್ಲುಗಳ ಗಣಿಗಳು, ಸಿಮೆಂಟ್ ಫ್ಯಾಕ್ಟರಿಗಳು, ಪದರಿನ ಹಾಸು ಬಂಡೆಗಳನ್ನು ಪಾಲೀಸ್ ಮಾಡುವ, ಟೈಲ್ಸ್ ಗಳ ಮಾದರಿಯಲ್ಲಿ ಸಿದ್ಧ ಮಾಡುವ ಫ್ಯಾಕ್ಟರಿಗಳು. ಊರ ಜನರನ್ನು ವಿಚಾರಿಸಿದರೆ ಅವುಗಳ ಸರಿಯಾದ ಮಾಹಿತಿ ಅಥವಾ ಅವುಗಳ ಉದ್ದಿಮೆ, ವ್ಯಾಪಾರಗಳ ಬಗ್ಗೆ ಅರಿವು ಇರಲಿಲ್ಲ.

ಧೂಳು ತಡೆಯದೆ ಮನೆ ಸೇರಿದೆವು. ಶಾಹಾಬಾದಿ ಪರಸೆಗಳಿಂದ ಕಟ್ಟಿದ ಮನೆಗಳವು. ಆದುನಿಕ ತಂತ್ರಜ್ಞಾನ ಬಳಸದೇ ಕಟ್ಟಿದ ದೇಶೀ ಜ್ಞಾನ ಪರಂಪರೆಯಿಂದ ಸೃಷ್ಟಿಯಾದ ಮನೆಗಳನ್ನು ಮೂಕನಾಗಿ ನೋಡುತ್ತಾ ಬೆರಗಾದೆ. ರಾತ್ರಿ ನನ್ನ ವಿದ್ಯಾರ್ಥಿನಿಯ ಗಂಡನ ಮನೆಯಲ್ಲಿರುವುದು ಅನಿವಾರ್ಯವಾಗಿತ್ತು. ಸಿಮೆಂಟ್ ಫ್ಯಾಕ್ಟರಿಯಲ್ಲಿ ಏಳೆಂಟು ವರ್ಷ ದುಡಿದು, ಅದು ಮುಚ್ಚಿದ್ದರಿಂದ ಎಂ.ಎ. ಪಿ.ಹೆಚ್.ಡಿ ಮಾಡಿಕೊಂಡಿರುವ ಹೆಂಡತಿಗೆ ಕೆಲಸ ಸಿಗುತ್ತದೆಂದು 15 ವರ್ಷಗಳಿಂದ ದಾರಿ ಕಾಯುತ್ತಿದ್ದ ಆತ. ರಾತ್ರಿ ಮನೆಯಲ್ಲಿ ಊಟವಿಲ್ಲ. ಆ ಊರಲ್ಲಿ ಯಾವ ಖಾನಾವಳಿಯಿಂದ ಊಟ ತಂದು ತಿನ್ನುವುದು?

ರಾತ್ರಿ ಆ ಮನೆಯಲ್ಲಿ ಕುಂತು ಸುತ್ತಲೂ ನೋಡಿದೆ. ನಿಜವಾಗಿಯೂ ಭಯ ಬಂತು. ವೋಲ್ಟೇಜ್ ಕಡಿಮೆ, ಬೆಳಕು ಮಂದ, ಮುಂಬಾಗಿಲು ದಾಟಿ ಹೊರಬಂದು ಕಟ್ಟೆಗೆ ಕುಂತೆ. ಓಣಿಯಲ್ಲಿ ಜನರೇ ಇಲ್ಲ. ಮನೆಗಳಲ್ಲಿ ಜನಗಳು ಇದ್ದಾರೆಂಬ ಸುಳಿವು ಕಿವಿಗೊಟ್ಟು ಕೇಳಿದರೆ ಮಾತ್ರ ಸಿಗುತ್ತಿತ್ತು. ದೊಡ್ಡ ದೊಡ್ಡ ಮನೆಗಳ ಬಾಗಿಲು ಬಿಟ್ಟರೆ ಕಿಟಕಿಗಳನ್ನು ಹುಡುಕಿಯೇ ಪತ್ತೆ ಹಚ್ಚಬೇಕು. ಪುರಾತನ ಕಾಲದ ಊರುಗಳು. ಅಲ್ಲಿ ಕೂಡಲೂ ಭಯವಾಯ್ತು. ಎದ್ದು ಆತಂಕದಿಂದ ಸುತ್ತಲೂ ನೋಡಿದೆ. ಓಣಿಗಳು, ಕತ್ತಲ ಸಂದಿಗಳು. ದೇವರೇ ಗತಿ ಅಂದುಕೊಂಡೆ. ಊಟ ತಂದಾಗಲೇ ಮತ್ತದೇ ಗೆಳೆಯರೆಂಬ ಮನುಷ್ಯನ ಸಂಪರ್ಕ ಬಂದದ್ದು.

ಸ್ನೇಹಿತನ ಮನೆಯಲ್ಲಿ ಟಾಯ್ಲೆಟ್ ಇಲ್ಲ. ನೀರೂ ಇಲ್ಲ. ಅಡಿಗೆ ಮನೆಯಲ್ಲಿ ಗ್ಯಾಸ್ ಇಲ್ಲ. ನನ್ನ ವಿದ್ಯಾರ್ಥಿನಿ ಅಲ್ಲಿ ಜೀವನ ಮಾಡುತ್ತಿದ್ದದು ಕಂಡು ನನಗೆ ದುಃಖವಾಯಿತು. ಆಕೆಯ ಗಂಡನನ್ನು ದೈರ್ಯವಾಗಿ ಕೇಳಿದೆ- ‘ನೀವು ಈ ಮನೆಯಲ್ಲಿ ಹೇಗೆ ಇರುತ್ತೀರಿ’ ಅಂತ. ಆತ ಬ್ರಾಹ್ಮಣ. 55 ಎಕರೆ ಭೂಮಿ ಇರುವ ಭೂಮಾಲೀಕ. ಒಕ್ಕಲುತನದಿಂದ ದಿವಾಳಿ ಎದ್ದು, ಒಕ್ಕಲುತನದ ಸಹವಾಸ ಬೇಡವೆಂದು ದೂರ ಉಳಿದಿದ್ದ. ದುಡಿಯಲು ಸಾದ್ಯವಾಗದೆ, ಆಳುಗಳ ಮೇಲೆ, ದನಕರುಗಳ ಮೇಲೆ ಒಕ್ಕಲುತನ ಮಾಡಲು ಸಾದ್ಯವಿಲ್ಲವೆಂದು ಬೇಸತ್ತ, ಹೆಂಡತಿ ದುಡಿಯುವ 2500ರ ಸಂಬಳದಲ್ಲಿ ಆಕೆಯ ಜತೆಗಿದ್ದು ಬದುಕುತ್ತಿದ್ದ. ಮನೆ ಹೊಲ ದಿಂದ ಕಾಳುಕಡಿ ಒಯ್ದು ಜೀವನ ನಡೆಸುತ್ತಿದ್ದ ಆತ, ಆತನ ಹೆಂಡತಿ. ಅವರ ಜೀವನವನ್ನು ಕಣ್ಣಾರೆ ನೋಡಿ ಬೇಸರವಾಗತೊಡಗಿತು.

Good one! Devegowda may not have noticed.

ಪ್ರಕಾಶ್ ಶೆಟ್ಟಿ ಸಾಹಸ ‘ವಾರೆ ಕೋರೆ’ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.

ವಾರೆ ಕೋರೆ ಗೆ ಅವಧಿಯ ಮೂಲಕವೂ ಚಂದಾದಾರರಾಗಬಹುದು.

avadhi.pusthaka@gmail.comಗೆ ನಿಮ್ಮ ಹೆಸರು ವಿಳಾಸ ಕಳಿಸಿಕೊಡಿ

dsc_2185-1

ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative.

ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು ನೋಡಿ.

ಇನ್ನು ಮುಂದೆ ಕೈಗೆ ಸಿಗದ ರಾಜಕಾರಣಿಗಳಿಗೆ ಇದೇ ಉಪಾಯ ಮಾಡಿದ್ರೆ ಹೇಗೆ ??? !!!
ಅಯ್ಯೋ! ಅವ್ರು ಕೈಗೆ ಸಿಗೋದೇ ಬೇಡ ಅಂತೀರಾ. ಅದೂ ಒಳ್ಳೇದೇ.
ಈ ಮುಖವಾಡ ಪಾತ್ರಗಳು ಬಾಯಿ ಮುಚ್ಕೊಂಡು ತೆಪ್ಪಗಿರ್ತವೆ. ನಿಜ ಪಾತ್ರಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ಅಲ್ವಾ. !!

-ಹೇಮಶ್ರೀ

smilingcolours.blogspot.com

+++

simply superb… )

-nitin muttige

nitinmuttige.blogspot.com

+++

tumba Chennagide

-basavaraja halli

basuhaaliblogspot.com

+++

good coverage

avadi
you have done a fabulous job

thanks
-harini

harinigallery.blogspot.com

+++

 

ಹ್ಹೆ ಹ್ಹೆ.. ಚೆನ್ನಾಗಿದೆ! -D

-ಪ್ರದೀಪ್

prakavi.wordpress.com/

+++

Good one! Devegowda may have not noticed.

Else he would have drawn the artist to court )

-Radhika

mgradhikaa@yahoo.com

+++

Previous Older Entries

%d bloggers like this: