ವಸುಧೇಂದ್ರ ಹಾಗೂ ಫಿಶ್

vasuinv-for-blog

ನ್ಯೂಯಾರ್ಕ್ ನಿಂದ ವೆಂಕಿ

img_88101

ದೂರದ ಕನ್ನಡಿಗರಿಗೆ ಸಮ್ಮೇಳನದ ಸವಿಯನ್ನು ಹ೦ಚಿದ್ದಕ್ಕೆ ಧನ್ಯವಾದಗಳು. 
-ವೆ೦ಕಿ,

ನ್ಯೂಯಾರ್ಕ್

ಧೂಳು ತಿನ್ನದೇ ಸಮ್ಮೇಳನ- ಥ್ಯಾಂಕ್ಸ್ ‘ಅವಧಿ’

cta2

ಸಾಹಿತ್ಯ ಸಮ್ಮೇಳನದ ಧೂಳನ್ನು ತಿನ್ನದೆ ಬರೀ ಸವಿಯನ್ನಷ್ಟೇ ಸವಿಯಲು ಅನುವು ಮಾಡಿಕೊಟ್ಟ ಟೀಮ್ ’ಅವಧಿ’ ಗೆ ಧನ್ಯವಾದಗಳು

ಸಂದೀಪ್ ಕಾಮತ್
kadalateera.blogspot.com

+++

ಒಂದು ಬ್ಲಾಗ್ ಏನೆಲ್ಲಾ ಮಾಡಬಹುದು…,ಯಾವ ರೀತಿ ಇನೊವೇಟಿವ್ ಆಗಿ ಕೆಲಸ ನಿರ್ವಹಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ….”ಅವಧಿ”.
ಅವಧಿ ತಂಡವು ಯಾವತ್ತೂ ಓದುಗರಿಗೆ ಹೊಸತನ್ನೇ ಉಣಬಡಿಸುತ್ತದೆ. ಮೃಷ್ಟಾನ್ನದ ಜೊತೆಗೆ…ಮನ್‌ಚಿಂಗ್ ಅನ್ನೂ ಕಲಿಸಿ ಕೊಡುತ್ತಿರುವುದು ಅಹ್ಲಾದಕರ ವಿಷ್ಯ.
ಒಟ್ಟಿನಲ್ಲಿ ಅವಧಿಯು ಹೊಸ ಸಾಧ್ಯತೆಗಳತ್ತ ಮುಖಮಾಡಿ ಅನುಭವಗಳನ್ನು..ಭಾವನೆಗಳನ್ನು.. ಚಿಂತನೆಗಳನ್ನು ಅಭಿವ್ಯಕ್ತಿಸಲು ಉತ್ತಮ ವೇದಿಕೆಯಾಗಿರುವುದು
ಹೆಮ್ಮೆಯ ವಿಚಾರವೇ ಸರಿ.
ಮತ್ತೊಮ್ಮೆ ಅವಧಿ ಟೀಮ್ಗೆ ಅಭಿನಂದನೆಗಳು

ಪ್ರೀತಿಯಿಂದ,

ಸಂತೋಷ್ ಅನಂತಪುರ

Hey abhinandanegalu ) tumba chennagitu ella….

sunil

+++

best information
vishwanath sunkasal

+++

ಸಾಹಿತ್ಯ ಸಮ್ಮೇಳನದ ಸವಿ ಹೂರಣವನ್ನ ವಿಭಿನ್ನ ರೀತಿಯಲ್ಲಿ ನಮಗೆಲ್ಲರೀಗೂ
ತಲುಪಿಸಿದ ನಿಮಗೆ ಹಾಗೂ ನಿಮ್ಮ ಪ್ರೀತಿಯ ತಂಡಕ್ಕೆ ನನ್ನ ಧನ್ಯವಾದಗಳು.
ಇಂತಹ ಮತ್ತಷ್ಟು ನೂತನ ಪ್ರಯೋಗಗಳು ಈ ಕನ್ನಡ ನಾಡಿನಲ್ಲಿ ನಿಮ್ಮ ಮೂಲಕ
ನೆರವೇರುತ್ತಿರಲಿ ಹಾಗೂ ಈ ಮೂಲಕ ಕನ್ನಡ ಮತ್ತಷ್ಟು ಶ್ರೀಮಂತವಾಗಲಿ.

ಮಧುಸೂದನ್.ವಿ

+++

ಭಾಷಣ ಧೂಳು ಎರಡೂ ಕಿರಿಕಿರಿ ಇಲ್ಲದೆ ಸಮ್ಮೇಳನದಲ್ಲಿ ಭಾಗವಹಿಸಿದಂತಹ ಅನುಭವ ನಮ್ಮದಾಗಿತ್ತು. ಥ್ಯಾಂಕ್ಯೂ ಅವಧಿ

ಶ್ರೀನಿಧಿ

+++

 

You have done a commendable job team Avadhi.

-)
malathi S

 

+++

nice….

kallare

+++

Sir, really amazing job. I personally congratulate you and your team’s hard work for connecting person
like me who is away with the sammelana, with
live photos and interesting articles.
Once again thanks you a lot.

Kaligananath Gudadur

+++

Avadhi team did very good job… i hv got livephoto’s, n a on Kannada s report from chitradurga… photos and articles are much informative… thanks a lot AVADHI and all team members keep it up

Arkalgud Jayakumar

+++

good coverage
pailoor

+++

 

ಕೂತಲ್ಲಿಯೇ ಸಾಹಿತ್ಯ ಸಮ್ಮೇಳನದ ಆನಂದ ಸವಿಯಲು ಅವಕಾಶ ಮಾಡಿಕೊಟ್ಟ ’ಮೇ ಫ್ಲವರ್ ಬಳಗಕ್ಕೆ …….

ಜೈ!

ಸಂದೀಪ್ ಕಾಮತ್

 

+++

ಹ್ಮ್ಮ್…ತುಂಬ ಖುಷಿಯಾಗ್ತಿದೆ…ಧನ್ಯವಾದ ಅವಧಿ )

sunil

+++

 

good job
Harish kera

+++

ಬೇಡಾದ್ದೆಲ್ಲವನ್ನೂ ನೇರ ಪ್ರಸಾರ ಮಾಡುವ ನಮ್ಮ ವಾಹಿನಿಗಳು ಸಮ್ಮೇಳನವನ್ನು ಲೈವ್ ಆಗಿ ಪ್ರಸಾರ ಮಾಡಬಹುದಲ್ಲ ಅಂದ್ರೆ ’ಅದನ್ಯಾರೀ ನೋಡ್ತಾರೆ?’ ಅನ್ನೋ ಉಢಾಫೆ ತೋರಿಸ್ತವೆ.ಅವಧಿ ಚಿತ್ರಗಳನ್ನು ಹಾಕುತ್ತಿರುವುದು ಸಂತಸದ ವಿಷಯ. 

-ಡಿ.ಎಸ್.ರಾಮಸ್ವಾಮಿ

‘ಸಂಪಂಗಿ’ ಮರದ ಹಸಿರೆಲೆ ನಡುವೆ….

 

ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

-ಎನ್ ಎ ಎಂ ಇಸ್ಮಾಯಿಲ್ ‘

‘ಬರೆವ ಬದುಕಿನ ತಲ್ಲಣ’ದಿಂದ

 

corruption_india-1

 

ಜನವರಿ 29ರಂದು ಕರ್ನಾಟಕದ ಭ್ರಷ್ಟಾಚಾರದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದ್ದು ಇದೇ ಮೊದಲ ಬಾರಿಗೆ ಶಾಸಕನೊಬ್ಬ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು. ಎರಡನೆಯದ್ದು ಶುದ್ಧ ಹಸ್ತದ ರಾಜಕಾರಣಿ ಎಂದೇ ಎಲ್ಲರೂ ಗುರುತಿಸುವ ಸಿದ್ದರಾಮಯ್ಯನವರು `ಎಲ್ಲರೂ ಭ್ರಷ್ಟರೇ ದುರದೃಷ್ಟವಶಾತ್‌ ಈತ ಸಿಕ್ಕಿಬಿದ್ದಿದ್ದಾನೆ’ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು. ಈ ಪ್ರತಿಕ್ರಿಯೆಗೆ 225 ಮಂದಿ ವಿಧಾನಸಭೆ ಸದಸ್ಯರು ಮತ್ತು 75 ಮಂದಿ ವಿಧಾನ ಪರಿಷತ್ತಿನ ಸದಸ್ಯರಲ್ಲಿ ಯಾರೊಬ್ಬರೂ ವಿರೋಧ ವ್ಯಕ್ತಪಡಿಸದೇ ಇದ್ದದ್ದು. ಮತ್ತು ಲೋಕಾಯುಕ್ತ ಕಚೇರಿಗೆ ಶಾಸಕರ ದಂಡೊಂದು ನುಗ್ಗಿ ಬಂಧಿತ ಶಾಸಕ ವೈ ಸಂಪಂಗಿಯನ್ನು ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ರಂಪಾಟ ನಡೆಸಿದ್ದು. ಈ ಮೂರು ಘಟನೆಗಳು ಭ್ರಷ್ಟಾಚಾರದ ಸ್ವರೂಪವನ್ನು ವಿವರಿಸುತ್ತಿವೆ.

***
ಲೋಕಾಯುಕ್ತರ ಬಲೆಗೆ ಬಿದ್ದವರು ಆಡಳಿತಾರೂಢ ಬಿಜೆಪಿಗೆ ಸೇರಿದ ಕೋಲಾರ ಜಿಲ್ಲೆ ಕೆಜಿಎಫ್‌ ಶಾಸಕ ವೈ ಸಂಪಂಗಿ. ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ (ಐವತ್ತು ಸಾವಿರ ನಗದು, ಉಳಿದದ್ದು ಚೆಕ್‌) ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮಾನ್ಯ ಶಾಸಕರು ಈ ಮೊತ್ತ ಏಕೆ ಪಡೆಯುತ್ತಿದ್ದರು? ಲೋಕಾಯುಕ್ತ ಪೊಲೀಸರು ನೀಡುವ ಮಾಹಿತಿ ಹೀಗಿದೆ.

ಕೆಜಿಎಫ್‌ನ ಆಂಡರ್ಸನ್‌ ಪೇಟೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಯಿನ್‌ ಫಾರೂಕ್‌ ಎಂಬವರಿಗೆ ಒಂದು ನೀವೇಶನವಿದೆ. ಇದನ್ನು ಸುಳ್ಳು ದಾಖಲೆಗಳ ಮೂಲಕ ತಮ್ಮ ವಶಕ್ಕೆ ತೆಗೆದುಕೊಳ್ಳಲು ಇಲಿಯಾಸ್‌, ನಯಾಝ್‌ ಮತ್ತು ಖಾನ್‌ ಫಯಾಝ್‌ ಪ್ರಯತ್ನಿಸಿದ್ದರು. ಇದರ ವಿರುದ್ಧ ಮೊಯಿನ್‌ ಫಾರೂಕ್‌ ಇದೇ ಠಾಣೆಯಲ್ಲಿ ದೂರು ನೀಡಲು ಹೋದಾಗ ಅದನ್ನು ಠಾಣಾಧಿಕಾರಿ ಸ್ವೀಕರಿಸಿರಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠರು ನಿರ್ದೇಶಿಸಿದ ನಂತರ ದೂರು ದಾಖಲಿಸಿಕೊಂಡಿದ್ದರು. ಮೊಯಿನ್‌ ಫಾರೂಕ್‌ ವಿರುದ್ಧ ಇಲಿಯಾಸ್‌ ತಮ್ಮ ಪತ್ನಿಯ ಮೂಲಕ ದೂರು ಕೊಡಿಸಿದ್ದರು. ಈ ದೂರನ್ನೂ ಪಡೆದ ಪೊಲೀಸರು ಯಾರನ್ನೂ ಬಂಧಿಸುವುದಕ್ಕೆ ಹೋಗಿರಲಿಲ್ಲ.

ತನ್ನ ನಿವೇಶನ ಅಪಹರಿಸಲು ಪ್ರಯತ್ನಿಸಿದವರ ವಿರುದ್ಧ ತಾನು ದೂರು ನೀಡಿರುವಾಗಲೇ ತನ್ನ ಮೇಲೊಂದು ಕ್ರಿಮನಲ್‌ ಪ್ರಕರಣ ದಾಖಲಾಗಿರುವುದನ್ನು ಕಂಡು ಮೊಯಿನ್‌ ಫಾರೂಕ್‌ ಸಹಜವಾಗಿಯೇ ಭಯಪಟ್ಟಿದ್ದಾರೆ. ಈ ಪ್ರಕರಣದಿಂದ ಪಾರಾಗಲು ಠಾಣೆಯ ಇನ್ಸ್‌ಪೆಕ್ಟರ್‌ ಲಕ್ಷಣ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಪಾಶಾ ಒಂದು ಸಲಹೆಯನ್ನೂ ನೀಡಿದ್ದಾರೆ. ಅದರಂತೆ ಶಾಸಕರನ್ನು ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಫಾರೂಕ್‌ ಅವರು ಶಾಸಕ ವೈ ಸಂಪಂಗಿಯವರನ್ನು ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡಾಗ ಐದು ಲಕ್ಷ ರೂಪಾಯಿ ಕೊಟ್ಟರೆ ಕೇಸು ಇತ್ಯರ್ಥಗೊಳಿಸಿ `ಬಿ’ ರಿಪೋರ್ಟ್‌(ಪ್ರಕರಣ ಮುಕ್ತಾಯ)ಹಾಕಿಸುವುದಾಗಿ ಹೇಳಿದ್ದರು. ಈ ಮಾತುಕತೆಯನ್ನು ಫಾರೂಕ್‌ ಧ್ವನಿ ಮುದ್ರಿಸಿಕೊಂಡು ಲೋಕಾಯುಕ್ತವನ್ನು ಸಂಪರ್ಕಿಸಿದರು. ಲೋಕಾಯುಕ್ತ ಪೊಲೀಸರು ಶಾಸಕರನ್ನು ಲಂಚ ಪಡೆಯುವಾಗಲೇ ಹಿಡಿಯಲು ತೀರ್ಮಾನಿಸಿ ದಾಳಿಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಿದರು.

More

ಕಾಮನ ಬಿಲ್ಲು ಕಮಾನು ಕಟ್ಟಿದೆ…

ಒಂದು ಮನೆ. ಆ ಮನೆಯ ಗೇಟ್ ನೋಡಿ ಹೇಗಿದೆ..

color-pencil-fence

%d bloggers like this: