ಜನ ಕಾರಣ ಹುಡುಕುತ್ತಲೇ ಇದ್ದಾರೆ…

ಭಾಮಿನಿ ಷಟ್ಪದಿ

ಚೇತನಾ ತೀರ್ಥಹಳ್ಳಿ
ಅವಳು ಸತ್ತು ಹೋಗಿದ್ದಾಳೆ. ಯಾಕಂದರೆ, ಯಾಕೋ… ಅಂತೂ ಅವಳು ಹೊರಟು ಹೋಗಿದ್ದಾಳೆ.
ಹೊಸಿಲು ದಾಟಿದ ದಿನದಿಂದ ಗಾಳಿ ಮಾತು ಕೇಳಿ ಕೇಳಿ ಸಾಕಾಗಿಯೇ ಹಾಗೆ ಮಾಡಿದಳೇನೋ?
ಆದರೂ, ಅವಳು ಹಾಗೆ ಸತ್ತುಬಿಡಬಾರದಿತ್ತು.
ಅಥವಾ,
ಬದುಕಿದ್ದರೂ ಅವಳನ್ನ ಬದುಕಲಿಕ್ಕೆ ಬಿಡುತ್ತಿದ್ದರೇನು?
ನಿಜವೇ ಸರಿ. ಹೆಣ್ಣುಗಳು ಬದುಕಲಿಕ್ಕೆ ಗಂಡುಗಳು ‘ಬಿಡ’ಬೇಕು!

ಇಷ್ಟೂ ವರ್ಷ ಯಾರು ಯಾರೋ ಸತ್ತುಹೋದರು. ‘ಬದುಕಲು ಬಾರದ ಹೇಡಿ’ ಅಂದುಕೊಂಡೇ ವಾರೆ
ನಕ್ಕಿದ್ದೆ ನಾನು. ಈಗ ಮಾತ್ರ….
ಅವಳು ತನ್ನ ತಾನೇ ಕೊಂದುಕೊಂಡಳು ಅಂತ ಹೇಳಲಾಗ್ತಲೇ ಇಲ್ಲ ನನಗೆ! ದೇಹ ಕತ್ತರಿಸಿ
ಕತ್ತರಿಸಿ ಮೆಡಿಕಲ್ ರಿಪೋರ್ಟು ಬರೆದರೂ, ಅದನ್ನ ಆತ್ಮ ಹತ್ಯೆ ಅನ್ನಲಿಕ್ಕೆ ಬಾಯಿ
ಬರ್ತಲೇ ಇಲ್ಲ….

ಹೌದಲ್ಲ?
ಅವಳ ಆಸೆಗಳನ್ನ, ಮನಸನ್ನ, ವ್ಯಕ್ತಿತ್ವವನ್ನ, ಜೀವನವನ್ನ, ನಂಬಿಕೆಯನ್ನೂ ಯಾರೋ
ಯಾವಾಗಲೋ ಕೊಂದು ಬಿಸಾಡಿದ್ದರು. ಈಗ ನೇಣಿಗೆ ಶರಣಾಗಿದ್ದು ದೇಹ ಮಾತ್ರ.

ಆದರೂ ಜನ ಕಾರಣ ಹುಡುಕುತ್ತಲೇ ಇದ್ದಾರೆ… ಅವಳು ಸತ್ತಿದ್ದು ಯಾಕೆ? ಕೇಳುತ್ತಲೇ ಇದ್ದಾರೆ…

ಇಷ್ಟಕ್ಕೂ,
ಕಾರಣ ಏನು ಅಂತ ಹೇಳುವುದು?
ಅಸಲು ಸಂಗತಿಗೆ ಹಣದ ಹೆಣ ಅಡ್ಡಿ. ಅಧಿಕಾರ ಅಡ್ಡಿ.

ಹಾಗೆ ನೋಡಿದರೆ ಅವಳಿಗೆ ಬೇಕಾದುದೆಲ್ಲವೂ ಇತ್ತು.
ಮನೆ ಇತ್ತು. ದೊಡ್ಡದೇ ಇತ್ತು.
ಹಣವಿತ್ತು. ಸಾಕಷ್ಟಿತ್ತು. ಕೊಂಚ ಕೂದಲು ಉದುರಿದ್ದರೂ ಗಂಡ ಗಟ್ಟಿಯೇ ಇದ್ದ. ಮುದ್ದಾದ
ಮಕ್ಕಳಿಬ್ಬರೂ ಗಂಡೇ…
ಮನೆ ತುಂಬ ಆಳು ಕಾಳು, ಮಾಡಲು ತನಗೂ ಒಂದಷ್ಟು ಅಧಿಕಾರದ ಕೆಲಸ, ಹೆಸರು-
ಹೆಚ್ಚುಗಾರಿಕೆ… ಎಲ್ಲ… ಎಲ್ಲವೂ ಇದ್ದವು.

ಆದರೂ….
ಸತ್ತಿದ್ದು ಯಾಕೆ?

ಕೆಲವರು ಹಾಗೇ… ನಾನೂ ಕೂಡ. ಜೀವನ ಅಂದರೆ ಬರಿ ಮೆದ್ದು, ಹೊದ್ದು ಮಲಗೋದಲ್ಲ
ಅಂದುಕೊಂಡವರೆಲ್ಲ ಹಾಗೇ…
ಅವಳಿಗೂ ಬಹುಶಃ ಹಾಗೇ…

ಅಥವಾ ಆ ಅಧಿಕಾರದವನ ಚಿಲಿಪಿಲಿ ಅವಳ ಕಿವಿ ಹೊಕ್ಕಿತ್ತೇನೋ? ಅವನ ಡೈರಿಯ ಪುಟಗಳ
ಜತೆಜತೆಗೇ ತನ್ನ ಬದುಕೂ ಮುಗಿದು ಹೋಗೋದನ್ನ ಅವಳು ಸಹಿಸದೆ ಹೋಗಿದ್ದಿರಬೇಕು.
ಹೆಣ್ಣು ಜೀವದ ಬೇಕು ಬೇಡಗಳನ್ನ ಕೇಳುತ್ತ ಕೂರುವವರಾದರೂ ಯಾರಿದ್ದಾರೆ?
ಹಾಗೆಂದೇ ಅವಳು ತನ್ನ ಬೇಕುಗಳನ್ನ ಪಟ್ಟಿ ಮಾಡಿಕೊಂಡಳು. ಹುಡುಕುತ್ತ ಹೊರಟಳು.

ಅವಳು ಹೊರಟುಹೋದಳು… ಅವನ ಮನೆಯ ನಾಯಿ ಊಳಿಟ್ಟಿತು. ಹೊಸ ಖುರ್ಚಿಗೆ ಹೊಡೆದ ಪೇಂಟಿನ
ವಾಸನೆಯೇ ಆರಿಲ್ಲ ಇನ್ನೂ! ಮತ್ತೀಗ ಇವಳದ್ದೇನು ಕಾರುಬಾರು? ಗುಂಡಿಗೆ
ಧಡಲ್ಲೆಂದಿರಬೇಕು ಬಹುಶಃ! ಉಸಿರಾಡಬೇಕೆಂದವಳಿಗೆ ಹಳೆಗೆಳೆಯ ಕಿಟಕಿ
ತೆರೆದುಕೊಟ್ಟಿದ್ದು ಹೊಟ್ಟೆ ಉರಿಸಿರಬೇಕು. ಹಗಲು ಇರುಳಾಗುವುದರೊಳಗೆ ಅವಳ ಚಿತ್ರಕ್ಕೆ
ಮಸಿ ಚೆಲ್ಲಿತ್ತು. ಛೇ!! ಹಾಗೆಲ್ಲ ಬದುಕಬೇಕೆಂದು ಆಸೆ ಪಡಬಹುದೇ ಹೆಣ್ಣು?
ಅವಳದೇನಿದ್ದರೂ ಗೌರವದ ಸ್ಥಾನ. ಗೌರವ, ಗಾಳಿಗೆ ತೆರೆದುಕೊಳ್ಳೋದಿಲ್ಲ.

ದಿನಗಟ್ಟಲೆ ಅವಳು ಇಲ್ಲವಾದ ಸುದ್ದಿಯದೇ ಗುಲ್ಲು. ಒಣ ಒಣ ಸಂಗತಿಗಳಿಗೆ ನೀರು
ಹನಿಹನಿಸಿ ಬೋರು ಹೊಡೆದಿದ್ದ ಮಂದಿಗೀಗ ಸುಗ್ಗಿ! ಹೆಸರಿನ ಮನೆ ಹೆಂಗಸು ಹಾಗೆ
ಇಲ್ಲವಾಗಿದ್ದು ವಿಶ್ವದ ಅತಿ ಘೋರ ದುರಂತವಲ್ಲವೇ? ಅಲ್ಲದಿದ್ದರೆ ಬಿಡಿ. ಸುದ್ದಿ
ಮಂದಿಗೆ ಅದು ಶತಮಾನದ ಸಂಭ್ರಮವೇ ಸರಿ…

ನಿಜ… ಹೆಸರಿನ ಮಂದಿಯ ಹೆಂಡತಿಯರಾಗೋದು ಎಷ್ಟು ಕಷ್ಟ!!

ಎಷ್ಟು ವೈನಾ(wine)ಗಿದೆ ಜುಗಲ್ ಬ೦ದಿ…

Santhosh Ananthapura | sansapndevu@gmail.com |

ಚಿಯರ್ಸ್….
ಸೋಮರಸವ ಕುಡಿದ ದೇವಾದಿ ದೇವರ ಕಾಣನೆ ನಮ್ಮ ಡುಂಡಿ
ಅವರ್‍ಯಾಕೆ ನಮ್ಮ ಬಗ್ಗೆ ಇಷ್ಟೊಂದು ಚಂಡಿ ?
ಜೋಗಿಯಾದ್ದೋ ಜಾಗರಣೆಯ ವೃತ್ತಿ
ಅದಕ್ಕಾಗಿ ಮಾಡಿಕೊಂಡಿದ್ದಾರೆ ಗುಂಡಿನ ಪ್ರವೃತ್ತಿ.

+++

ಕೆ.ಫಣಿರಾಜ್ | phanikottur@gmail.com

ಅಯ್ಯೋ ’ಕುಡಿ’ಯದ ’ಮಡಿ’ಗಳ
ಕಾರುಭಾರೇ!
’ಬಾರು’ ಏನು ’ಕಾರೇ’-
ದಡ ಸೇರಿದ ಮೇಲೆ ಡ್ರೈವರ್ … ಅನ್ನಲಿಕ್ಕೆ!
’ಬಾರು’ ಸೀ ಶೋರು
ಹಿಂದಿಕ್ಕಿದ ತೆರೆಗಳು ಮರಳಿ
ಬರುವುದು ಷೂರು!
ಇರಲಿ ನಿಮಗೆ ನಿಮ್ಮ
ತಕರಾರು
’ಮಧ್ಯ’ವಿದ್ದಲೆಲ್ಲಾ
ನಮ್ಮೂರು.

+++

ಘಾ | bbkaala@gmail.com

ಗುಂಡು ಹಾಕದ ಅಸಾಮಿ-
ಕತ್ತೆ ಮುಂದೆ ಇಟ್ಟು ನೋಡಿ
ವಿಸ್ಕಿ ಮತ್ತು ನೀರು
ಕತ್ತೆ ವಿಸ್ಕಿ ಮುಟ್ಟೋದಿಲ್ಲ
ಕುಡೀತದೆ ನೀರು
GHA- ಗುಂಡು ಹಾಕುವ ಅಸಾಮಿ-
ಹೇಳಿ ಕೇಳಿ ಕತ್ತೆ ಅದು
ವಿಸ್ಕಿ ರುಚಿ ಗೊತ್ತಿಲ್ಲ
ನೀರಾ ಬಿಟ್ಟು ನೀರು ಕುಡಿಯೋಕೆ
ನಾ ಕತ್ತೆ ಅಲ್ಲವಲ್ಲ

+++

ಸಿದ್ದಮುಖಿ | siddamukhi@rediffmail.com |

ಬಾರಿ ಬಾರಿಗೂ ಬಾರಿಗೆ ಹೋದರೆ
ಬೀರು ದ್ಯಾವರ ನೈವೇದ್ಯ

+++

ಅಹರ್ನಿಶಿ
http://aharnishisree.blogspot.com | sammu16092005@gmail.com

ಎಷ್ಟು ವೈನಾ(wine)ಗಿದೆ ಜುಗಲ್ ಬ೦ಧಿ
ಮಲ್ಯನ ಶಲ್ಯ ಬೀದಿ ಪಾಲಾಗಿದೆ
ಪ್ರೀಮಿಯರ್ ಲೀಗ್ ಜೂಜಾಡಿ
ಯೂಬಿಗೆ ಬೇಕಾಗಿದೆ ಬಕಾರ್ಡಿ
ಲಿಕ್ಕರ್ ಲಾಬಿಗಾಗಿ ಲಾಡಿ ಲೂಸಾಗಿದೆ
ಪ್ರಜೆಗಳ್ ಟೈಟಾಗಿದೆ.

+++

avani | avaniaa@yahoomail.com |

ಓಹ್‍ಹೋ!! ಇಂಥದ್ದು ತುಂಬ ಓದಿದ್ದೀವ್ರೀ… ಕಳಪೆ ಪ್ರಾಸದ ಚುಟುಕುಗಳು ಯಾಕೆ ಹೇಳಿ? ಪೋಸ್ಟಿಂಗಿಗೆ ಏನೂ ಸಿಕ್ಕಿಲ್ಲವಾ?!
ಜೋಗಿಯವರೇ- ನೀವೂನೂ!!

+++

ನಯನಿ | sunaainaas@yahoo.co.in

with due respect and apologies to Avani

’ಅವನಿ’ಗೇನು ಗೊತ್ತು ಇದರ ಕಿಮ್ಮತ್ತು
ಮುತ್ತಿಗಿಂತ ’ಮತ್ತು’ಗಮ್ಮತ್ತು
to Jogi and others…let the ‘knock-out’ challenge continue.

+++

AVANI | avaniaa@yahoomail.com

ಹಾಗೆ ನೋಡಿದರೆ ನಯನಿ…
ಅನ್ನುತ್ತಾಳೆ ಈ ಅವನಿ-

ನಾನೂ ನೀನೂ ಸೇರಿ ಒಂದು ಪ್ರಾಸವಾದೇವು
ಜೋಡಿಸಿಬಿಟ್ರೆ ಕೇಳೋರ ಕಿವಿಗೆ ತ್ರಾಸವಾದೇವು!

ಮತ್ತು ಮುತ್ತು ಗಮ್ಮತ್ತಂತ ಪದ್ಯ ಆಗೋ ಹಾಗಿದ್ರೆ
ಆಕಳಿಸೀತು ಪದ್ಯ, ಇನ್ನು ತೂಕಡಿಕೆ ನಿದ್ರೆ !!

+++

AVANI | avaniaa@yahoomail.com

ಮದ್ಯಸಾರಸ ನೆವ ಎಲ್ಲೆಲ್ಲೋ ಹೋದಂತಿದೆ. ಆ ಕ್ಷಣದ ಪ್ರತಿಕ್ರಿಯೆಗೆ ಕ್ಷಮೆಯಿರಲಿ, ನಯನಿ.

+++

naynee | sunainaas@yahoo.co.in

hey Avani, all in the game da. no problem, -)
naynee

+++

Santhosh Ananthapura | sansapndevu@gmail.com

Excellent. Cheeeeeeeeeeeers……