ಅಂತರಗಂಗೆ ಇಂದಿಗೂ ಹಾಗೇ ನಿಂತಿದ್ದಾಳೆ..

P for…

ಲೀಲಾ ಸಂಪಿಗೆ

ಎರಡು ಆಟೋಗಳು ಸ್ಟಾಟರ್್ ಆದ್ವು. ಒಂದರಲ್ಲಿ ಮಂಗಳ, ಸುಧಾ, ಪಂಕಜ, ಶಂಕರಮ್ಮ ಇದ್ರು. ಇನ್ನೊಂದರಲ್ಲಿ ನಾನು, ಫೀಲ್ಡ್ ವರ್ಕರ್ ಕೃಷ್ಣಪ್ಪ, ನಾಸೀನಾ, ಶಕು ಇದ್ವು. ಸೈಕಲ್ನಲ್ಲಿದ್ದ ರಂಗಣ್ಣ ಮುಂದೆ ಸಾಗುತ್ತಾ ದಾರಿ ತೋರ್ಸುತ್ತಾ ಹೊರಟ. ರಂಗಣ್ಣ ನಮಗೆಲ್ಲಾ ಪರಿಚಿತನೇ. ಕೋಲಾರದ ಕಚೇರಿಯಲ್ಲಿ ಲೈಂಗಿಕ ವೃತ್ತಿ ಮಹಿಳೆಯರ ವಾರದ ಸಭೆಗೆ ಬ್ರೆಡ್ ತಂದುಕೊಡುತ್ತಿದ್ದ. ಸೈಕಲ್ನ ಕ್ಯಾರಿಯರ್ನಲ್ಲಿ ಬ್ರೆಡ್, ಬಿಸ್ಕೆಟ್ಸ್, ಬನ್ಸ್ ಮಾರುವುದೇ ಅವನ ವೃತ್ತಿ. ಈ ಹುಡುಗಿಯರ ಪರಿಚಯವಿದ್ದವನೇ ಅವನು. ನನಗೂ ಕೂಡ. ಬಸ್ ಸ್ಟ್ಯಾಂಡ್ ದಾಟಿ, ಊರೆಲ್ಲಾ ಮುಗಿದು ಒಂದು ಓಣಿಯಲ್ಲಿ ಸೈಕಲ್ ಸಾಗಿತ್ತು. ರಂಗಣ್ಣನಿಗೆ ಆಯಾಸವಾದಂತಿತ್ತು. ಆದ್ರೂ ತನ್ನದೇ ಸ್ಪೀಡಲ್ಲಿ ಮುಂದೆ ಹೋಗ್ತಿದ್ದ. ಮುಖದಲ್ಲಿ ಎಂಥದೋ ವಿಷಾದದ ಛಾಯೆಯಿತ್ತು. ರಂಗಣ್ಣನಿಗಷ್ಟೇ ಅಲ್ಲ, ಆಟೋ ಡ್ರೈವರ್ಗಳಾದ ಸ್ವಾಮಿ ಮತ್ತು ರಾಜನನ್ನೂ ಸೇರಿಸಿ ಅಲ್ಲಿದ್ದ ಎಲ್ಲರಲ್ಲಿಯೂ ಅದೇ ಭಾವವಿತ್ತು.
ಆಟೋಗಳು ತಿರುವುಗಳಲ್ಲಿ ಸುತ್ತುತ್ತಾ ಹೊರವಲಯಕ್ಕೆ ಬಂದೊಡನೆ ಕತ್ತೆತ್ತಿ ನೋಡಿದೆ. ಅಂತರಗಂಗೆಯ ತಪ್ಪಲು, ಒಂದರಹಿಂದೊಂದರ ಬೆಟ್ಟದ ಲೇಯರ್ಗಳು ಚಿತ್ರ ಬರೆದಂತಿತ್ತು. ಮುಳುಗುವ ಸೂರ್ಯ ತನ್ನ ಹೊಂಗಿರಣಗಳಿಂದ ಅದಕ್ಕೊಂದು ಫ್ರೇಂ ಕೊಟ್ಟಿದ್ದ. ವಷರ್ಾಗಾಲ ತನ್ನೊಡಲಿನ ಯಾವುದೋ ಸೆಲೆಯಿಂದ ತಣ್ಣನೆಯ ಗಂಗೆಯನ್ನು ಗುಪ್ತಗಾಮಿನಿಯಾಗಿ ಹರಿಸುತ್ತಾ ಅದಕ್ಕೊಂದು ಐಡೆಂಟಿಟಿ ತಂದು ಕೊಟ್ಟಿರುವ ಅಂತರಗಂಗೆ ಹತ್ತಿರವಾದಳು.
ನಾಸೀನಾ ಜಗಿಯುತ್ತಿದ್ದ ಮಾಣಿಕ್ಚಂದ್, ಶಕು ಲೈಟಾಗಿ ಕುಡಿದು ಬಂದಿದ್ದ ಬಿಯರ್ನ ವಾಸನೆಗಳು ಒಂದಕ್ಕೊಂದು ಬೆರೆತು ಇಡೀ ಆಟೋಗೆ ಒಂದು ಕಮಟು ವಾಸನೆಯನ್ನು ತುಂಬಿದ್ದವು. ನನಗಂತೂ ಹೊಟ್ಟೆ ಕಲಸಿ ಬಂದಂತಾಗಿತ್ತು. ಹೀಗೇ ಸಾವಿರ ಸಲ ಇದೇ ಸಂಕಟ ಅನುಭವಿಸಿದ್ದೇನೆ. ಸಭೆಗಳಲ್ಲಿ, ಫೀಲ್ಡ್ನಲ್ಲಿ, ಪ್ರಯಾಣದಲ್ಲಿ…ಹೀಗೇ ನೂರಾರು ಬಾರಿ ಇಂತಹುದೇ ಹೊಟ್ಟೆಯ ಸಂಕಟ ಅನುಭವಿಸಿದ್ದೇನೆ.
ಆದ್ರೆ ಈ ದಿನದ ಈ ಪಯಣದಲ್ಲಿ ಮತ್ತದೇ  ನೀತಿ ಪಾಠ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅದೆಂಥಾ ಆತಂಕದಲ್ಲಿ ನನ್ನ ಮನಸ್ಸಿತ್ತು. ಅದೆಷ್ಟು ಪ್ರಶ್ನೆಗಳು ನನ್ನನ್ನು ಮತ್ತೆಮತ್ತೆ ಕೆಣಕುತ್ತಿದ್ದವು.  ಅಂತರಗಂಗೆಯ ಹೊಳಹೊಕ್ಕಿದ್ವು. ಸಂಜೆಯ ಮಬ್ಬು ಕಪ್ಪಾಗುವುದರೊಳಗೆ ನಮ್ಮ ಹುಡುಕಾಟ ಮುಗಿಸಬೇಕಾಗಿತ್ತು.


ಆಟೋಗಳ ದಾರಿ ಮುಗಿದಿತ್ತು. ಸರಸರನೆ ಇಳಿದ ನಾವೆಲ್ಲರೂ ರಂಗಣ್ಣನನ್ನ ಹಿಂಬಾಲಿಸಿದ್ವು. 25ರಿಂದ 30 ಮೀಟರ್ನಷ್ಟು ಗುಡ್ಡ ಇಳಿದೆವು. ಅಲ್ಲೊಂದು ಗುಂಡಿ. ಅದರಲ್ಲೊಂದಿಷ್ಟು ಮಲೆತ ನೀರು, ಹುಳುಗಳೂ ಇದ್ವೇನೋ! `ಅಮ್ಮಾ, ಇದೇ ಗುಂಡಿ ಹತ್ತಿರ ಕುಸುಮಾಳನ್ನ ನೋಡಿದ್ದು. ಇಲ್ಲೇ ಬಿದ್ದಿದ್ಲು. ಇದರಲ್ಲೇ ನೀರು ಕುಡಿದಿರೋದು’, `ಹೌದಾ, ಕೃಷ್ಣಪ್ಪ, ಶಕು, ಸುಧಾ ಇಲ್ಲೇ ಸುತ್ತಲ್ಲೆಲ್ಲಾ ಹುಡುಕಿ, ಹೆಚ್ಗೆ ದೂರ ಏನೂ ಹೋಗ್ಬೇಡಿ, ಅವ್ಳು ಆ ಸ್ಥಿತಿಯಲ್ಲಿ ಹೆಚ್ಚು ದೂರ ತೆವಳೋಕೇನೂ ಆಗಿರೋಲ್ಲ’ ಅಂದೆ. ಈ ನಾಯಕತ್ವದ ಪಾತ್ರವೇ ಒಂದು ಥ್ರಿಲ್. ಆ ಹೊಣೆಗಾರಿಕೆ, ಆ ದುಸ್ಸಾಹಸಗಳು, ಆ ಕಾಳಜಿ, ಆ ಸಿಟ್ಟು, ಆ ಪ್ರೀತಿ, ಆ ಒಡನಾಟ ಇಡಿಯಾಗಿ ನನ್ನಲ್ಲೇ ಉಳಿಪೆಟ್ಟಿನ ರೂಪಕದೊಂದಿಗೆ ಸದಾ ಹೆಣೆದುಕೊಂಡೇ ಇರುತ್ತಿದ್ವು.
`ಮೇಡಂ, ಮೇಡಂ, ಬನ್ನಿ ಇಲ್ಲಿ…’ ಕಿರುಚ್ಕೊಂಡ್ಲು ಶಕು. ಎಲ್ಲರೂ ಓಡಿದ್ವು. ಎದೆ ಝಲ್ಲೆಂತು. ದೇಶದ ತುಂಬೆಲ್ಲಾ ನಿರಂತರವಾಗಿ ಶತಶತಮಾನಗಳಿಂದ್ಲೂ ವೇಶ್ಯಾವಾಟಿಕೆಯ ನೆಪದಲ್ಲಿ ತಮ್ಮ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಸಾವಿರಾರು ಗರ್ಭಪಾತಗಳು ನನ್ನ ಸುತ್ತ ನತರ್ಿಸಿದಂತೆ ಭಾಸವಾಯ್ತು. ಅಬ್ಬಾ! ಇಂಥಾ ಅದೆಷ್ಟು ಗರ್ಭದ ಚೀಲ ಕಳಚದ ಭ್ರೂಣಗಳು ಮಣ್ಣಾಗಿಬಿಟ್ಟವೋ…  ಸಾವರಿಸಿಕೊಳ್ಳಲಾರದಷ್ಟು ಭಾವುಕಳಾಗಿಬಿಟ್ಟೆ. ಹತ್ತಿರ ಹೋದೆ. ಎಲ್ಲರೂ ಸುತ್ತುವರೆದ್ರು. ಅಲ್ಲಿದ್ದ ಗರಿಕೆಯೆಲ್ಲಾ ರಕ್ತಸಿಕ್ತವಾಗಿತ್ತು. ಕುಸುಮ ಬೆರ್ಸೆ ಗರ್ಭಚೀಲದೊಳಗಿನ ಜೀವ, ಜೀವ ತುಂಬುವ ಮೊದಲೇ ಇಲ್ಲವಾಗಿತ್ತು. ಒಂದು ಕ್ಷಣ ಏನೂ ತೋಚಲಿಲ್ಲ. ಮತ್ತೆ ಸಾವರಿಸಿಕೊಂಡೆ. `ಅಮ್ಮಾ, ನಾಯಿ ನರಿ ಎಳ್ದಾಡ್ಬುತ್ತವೆ. ಎಲ್ಲಾದ್ರೂ ಮುಚ್ಚಿ ಹೋಗೋಣ್ವಾ’ ಅಂದ್ಲು ಶಂಕ್ರಮ್ಮ. ಅಲ್ಲಿಯ ಲೈಂಗಿಕ ವೃತ್ತಿ ಮಹಿಳೆಯರ ಗುಂಪಿನಲ್ಲೇ ಹಿರಿಯಳಾದ ಶಂಕ್ರಮ್ಮನಿಗೂ ನೋವಾಗಿತ್ತು. ಎಲ್ರೂ ಸೇರಿ ಕುಸುಮ ನೀರು ಕುಡಿದು ಜೀವ ಉಳಿಸಿಕೊಂಡಿದ್ದ ಆ ಗುಂಡಿಯ ತಟದಲ್ಲೇ ಒಂದಷ್ಟು ಬಗೆದ್ರು. 2-3 ತಿಂಗಳಲ್ಲೇ ಕುಸುಮ ಹೆರ್ತ್ತಾಳೆ ಕಣಮ್ಮ ಅಂತ ಕೇಳ್ಬೇಕಾಗಿದ್ದ ಮಾತುಗಳನ್ನು ಇಲ್ಲವಾಗಿಸಿ ಮಣ್ಣಲ್ಲಿಟ್ಟು ಮೇಲೊಂದಿಷ್ಟು ಮಣ್ಣು ಹಾಕಿದ್ರು. ಇನ್ನಷ್ಟು

ಕಾಗದ ಬಂದಿದೆ…


ಜೋಗಿ ಅವರ ಸಾವೆಂಬ ಪರಕೀಯನ ಜೊತೆ ಅಸಂಬದ್ಧ ಮಾತುಕತೆಗೆ ಪ್ರತಿಕ್ರಿಯೆ 

 

 

Sunil Kulkarni| sunilmk23@gmail.com |

ಸಾಯುವುದು ಸತ್ತವನ ಪಾಲಿಗೆ ಏನೋ ಎಂತೋ ಗೊತ್ತಿಲ್ಲ, ಬದುಕಿರುವವರ ಪಾಲಿಗೆ ಮಾತ್ರ ಅಂಥ ಆಹ್ಲಾದಕರ ಅನುಭವ ಅಲ್ಲ.
ಸತ್ತ ಮೇಲೆ ಏನಾಗುತ್ತೇವೆ ಅನ್ನುವ ಪ್ರಶ್ನೆಗೆ ಬದುಕಿರುವವರು ಉತ್ತರಿಸಲಾರರು, ಉತ್ತರಿಸುವುದಕ್ಕೆ ಸತ್ತವರು ಸಿಗುವುದಿಲ್ಲ.

-ಲೇಖನದಲ್ಲಿ ನನಗೆ ಇಷ್ಟವಾದ ಸಾಲುಗಳು

ನಿನ್ನೆ ತಾನೆ ನನ್ನ ಹತ್ತಿರದ ಸ್ನೇಹಿತರೊಬ್ಬರು ಹೃದಯಾಘಾತದಿಂದ ತೀರಿಹೋದರು. ಆಗ ನಾನು  ಮಿತ್ರನಲ್ಲಿ ಹೇಳ್ತಾ ‘ನಿಜವಾಗ್ಲು ಯಾರ ಸಾವು ಯಾವಾಗ್ ಬರುತ್ತೋ ಗೊತ್ತಿಲ್ಲ ಇಂದು ಇದ್ದವನು ನಾಳೆ  ಇರುತ್ತಾನೋ ಇಲ್ವೋ ಬಿ ರೆಡಿ ಆಗಿರಬೇಕು ಕಣೋ’ ಎಂದು ಹೇಳಿದ್ದೆ. 

ಇವತ್ತು ಸ್ನೇಹಿತರೊಬ್ಬರ ಬ್ಲಾಗ್ ನೋಡ್ತಿರ್ಬೇಕದ್ರೆ ‘ಅವಧಿ’ ಸಂಪರ್ಕಕ್ಕೆ ಬಂದೆ 

ನಿಜವಾಗೂ ಈ ಲೇಖನ ಓದಿ ಸಾವಿಗೆ ಯಾಕೆ ಹೆದರಬೇಕು ಅನ್ನಿಸುತ್ತಿದೆ. ಸಾವಿನ ಬಗ್ಗೆ ಹೆಚ್ಚು  ಹೆಚ್ಚು  ಚರ್ಚೆ ಮಾಡಿದ್ರೆ ಇನ್ನೂ ಮಾಡ್ತಾ ಇರೋಣ ಅನ್ನಿಸುತ್ತೆ .

ಅದ್ರೆ ಲೇಖನದಲ್ಲಿ ಹೇಳಿದ ಹಾಗೆ ಸಾವು ಬರುವಾಗಿನ ಅನುಭವ ಹೇಗಿರುತ್ತೋ ಏನೋ ?

***

dundiraj |dundiraj@corpbank.co.in

ಇದು ಅಸಂಬದ್ಧವಲ್ಲ, ಸುಸಂಬದ್ಧ .
ಲೇಖನ ಇಷ್ಟವಾಯಿತು.

***

mayura | mayuravarma999@gmail.com |

Once again a brilliant article by Jogi. Can you please increase the frequency of your articles Mr.Jogi?