ನಿಯರೆಸ್ಟ್‌ ಬಾರಿನ ದಾರಿ ತೋರೊ..

ನಾನೂ ನಿಮ್ಮಂತೆಯೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ಆಗ ಬರೆದು ಬಳಸದೆ ಉಳಿದಿದ್ದ ಈ ಪದ್ಯಗಳು ಮೊನ್ನೆ ಸಿಕ್ಕವು. ಸಿನಿಮಾದ ಡಿವಿಡಿಯಲ್ಲಿನ ಡಿಲೀಟೆಡ್ ಸೀನ್‌ಗಳಂತೆ ಓದಿಕೊಳ್ಳಬಹುದೇನೊ ಎನಿಸಿ ಇಲ್ಲಿ ಹಾಕುತ್ತಿರುವೆ. ನಿಜಕ್ಕೂ ಇದು ಕಡೆಯ ಕಂತು!

-ಅಪಾರ

 ತುಸು ಜಾಸ್ತಿ ಆಗಿದೆ ಇಂದು

 ಮೈಮೇಲೆ ಬಿದ್ದದ್ದಕ್ಕೆ ಸಾರಿ

 ನಿಮ್ಮನ್ಯಾಕೆ ಅಳಿಸಲಿ ಹೇಳಿ

 ನನ್ನೆದೆ ಮೇಲ್ ಬಿದ್ದುದ ತೋರಿ

 ೨

ಯಾರು ಪರೀಕ್ಷೆ ಮಾಡಿದರೇನು

 ನೂರು ಪ್ರಶ್ನೆ ಹಾಕಿದರೇನು

 ಚೂರೂ ಹೆದರುವುದಿಲ್ಲ ನಾನು

 ಬಾರು ಎಲ್ಲಿದೆಯೆಂದು ಗೊತ್ತಿಲ್ಲವೇನು?

 ೩

ದ್ರೋಹದ ಬೆಂಕಿಯಲಿ ನಾನು

 ಉರೀತಿರುವೆ ನಖಶಿಖಾಂತ

 ಯಾರು ಕುಡೀತಿದ್ದರು ಹೀಗೆ

 ಆಗಿದ್ದರೆಲ್ಲವೂ ಸುಖಾಂತ?

 ೪

 ಪಾರು ಮಾಡೋ ಕೃಷ್ಣಾ

 ಪಾರು ಮಾಡೋ

 ನಿಯರೆಸ್ಟ್‌ ಬಾರಿನ

 ದಾರಿ ತೋರೊ

 ೫

ಮೋರಿಯಲಿ ಬಿದ್ದವನ ಕಾಣಬಲ್ಲ ನಿಮಗೆ

ಕಾಣದು ಅವನ ನರಕ ಸದೃಶ ಹಗಲು

ಬೆಚ್ಚಿಸುವ ಥರಥರದ ದಿಗಿಲು

ಮತ್ತೀಗ ಅವನು ತೇಲುತಿರುವ ಮುಗಿಲು

 ೬

ನೀನು ಕೈ ಕೊಟ್ಟದ್ದೂ

ಒಳ್ಳೆಯದೇ ಆಯಿತು

 ಇಲ್ಲದಿದ್ದರೆನಗೆ ಮದಿರೆಯ

ಪರಿಚಯವೇ ಆಗುತ್ತಿರಲಿಲ್ಲ

 ೭

 ಆದಿಯೂ ಇಲ್ಲ ಅಂತ್ಯವೂ ಇಲ್ಲ

 ನನ್ನದೊಂದು ವಿಚಿತ್ರ ವ್ಯಥೆ

ಮದ್ಯದಲ್ಲೇ ಶುರುವಾದದ್ದು

ಮದ್ಯದಲ್ಲೇ ಮುಗಿವುದೆ ಕತೆ?

ಕಾಗದ ಬಂದಿದೆ

‘ಬೆಂಗಳೂರು ಒಂದು ಅಡ್ರೆಸ್ ಪ್ರೂಫ್ ಕೇಳುತ್ತೆ ನವೊಮಿ’ ಗೆ ಪ್ರತಿಕ್ರಿಯೆ

vasudha | vasudhabhupati@gmail.com

ನವೊಮಿ,
ನಿಮ್ಮ ಬರಹಕ್ಕೆ ಸಲಾಂ.
ಇದೇ ಸಮಸ್ಯೆ ನನಗೂ ಕಾಡುತ್ತಿತ್ತು. ಸದಾ ದುಗುಡಗೊಳ್ಳುತ್ತಿದ್ದೆ. ಆದರೆ ಈಗ ಇಂತಹ ಸಮಸ್ಯೆಯನ್ನೂ  ಇಷ್ಟು ನಿರಾಳವಾಗಿ ಬರೆಯಬಹುದು ಎಂದು ನಿಮ್ಮಿಂದ ಗೊತ್ತಾಯಿತು. ಥ್ಯಾಂಕ್ಸ್
-ವಸುಧಾ ಭೂಪತಿ

***

subramani | etv.subbu@gmail.com |

ನಿಮ್ಮ ದಟ್ಟ ಅನುಭವಗಳು ತೀಕ್ಷ್ಣವಾಗಿ ಮನ ತಟ್ಟುತ್ತದೆ.

-ಸುಬ್ರಮಣಿ

***

malathi S | malathishenoy@yahoo.co.in |

Bravo navomi!!! Well done. :-)and all the very best to you. for all your future ad’ventures’.

***

Tejasvini | Teja_hegade@yahoo.co.in

ಒಂದು ಸರಳ ಬರಹದಂತೆ ಕಂಡರೂ ದೊಡ್ಡ ಅನುಭವವನ್ನು ಹೊಂದಿದೆ. ಇದು ಕೇವಲ ಅಡ್ರೆಸ್ ಪ್ರೂಫ್ ಕಥೆಯಲ್ಲ. ಅಸ್ತಿತ್ವದ ಕಥೆ. ಅದರಲ್ಲೂ ಕಳೆದುಹೋಗುತ್ತಿರುವ ಹೆಣ್ಣು ಮಕ್ಕಳ ಕಥೆ.
-ತೇಜಸ್ವಿನಿ ಹೆಗಡೆ

***

Shwetha, Hosabale | shwetha_gbhat@yahoo.co.in

ಚೇತನಾ,
ತುಂಬ ಚೆನಾಗಿ ಬರೀತೀರಾ, ನಾನಂತೂ ನಿಮ್ಮ ಬರಹಗಳನ್ನು ತುಂಬ ಇಷ್ಟಪಟ್ಟು
ಓದ್ತೀನಿ; ದೌಪದಿಯ ಇನ್ನೊಂದು ಮುಖದ ಅನಾವರಣ, ವಿಷಯ ನಿರೂಪಣೆ ಚೆನ್ನಾ
ಗಿದೆ,ಬೇರೆ ಬೇರೆ ಕೋನಗಳಿಂದ ಹೊರಹೊಮ್ಮುತ್ತಿರುವ ಸ್ತ್ರೀಪರ ಚಿಂತನೆಗಳು ಇನ್ನ
ಷ್ಟು ಹರಿತವಾಗಿ ಬರಲಿ, ಧನ್ಯವಾದಗಳು.

– ಪ್ರೀತಿಯಿಂದ
ಶ್ವೇತಾ, ಹೊಸಬಾಳೆ.

For ಜನ ಕೂಡ ಅವಳನ್ನ ಮರೆತುಬಿಟ್ಟಿದ್ದಾರೆ…

 

***

Tejaswini
http://www.manasa-hegde.blogspot.com | tejaswini.bhat@gmail.com

“ತಾಯಿ ಹತ್ತಿರದಲ್ಲಿಲ್ಲದಿದ್ದರೇನು?
ತಾಯ ಭಾವವನ್ನು ಎಲ್ಲೆಲ್ಲಿ ಕಾಣಬಹುದೋ ಬಲ್ಲವರು ಯಾರು?”

ನೆನಪಿಡುವಂತಹ ಸಾಲುಗಳು. ಭೂಮಿಯೂ ತಾಯಿ ಭಾವವನ್ನು ಹೊಂದಿದಂತವಳು ಅದಕ್ಕೇ ಇರಬೇಕು.. ಪಾಪ ಹೆಚ್ಚಾಗುತ್ತಿದ್ದರೂ ಇನ್ನೂ ಮನುಕುಲವನ್ನು ಕ್ಷಮಿಸುತ್ತಾ ಬಂದಿದ್ದಾಳೆ.

For ಕಾಪಾಡುವ ತಾಯಿಯರು 

***

Harish kera
http://bettadadi.blogspot.com | Harishkera@gmail.com

Dear Jogi,
Garudagamba, vibration, shrungarashayye…
ha ha !
yaru helidaru nimage vayassaguttide endu ?
-Harish kera

For ಕವಿ ಜೋಗಿ ಬರುತ್ತಿದ್ದಾರೆ ದಾರಿ ಬಿಡಿ…

‘ಜೋಗಿ’ ಎಂಬ ಶಕಾರ

ಜೋಗಪ್ಪ ಒಂದು ಕಡೆ ನೆಲೆ ನಿಲ್ಲದೆ ತಿರುಗ್ತಾನೆ ಅಂತಾರೆ ದೊಡ್ಡೋರು. ನಮಗಂತೂ ಗೊತ್ತಿರಲಿಲ್ಲ. ಜೋಗಿ ಅಲ್ಲಿ ಇಲ್ಲಿ ತಿರುಗಿ ಬೆಟ್ಟ ಹತ್ತಿ, ಕಣಿವೆ ಇಳಿದು, ಮಲೆನಾಡಲ್ಲಿ ತಿರುಗಿ, ಕರಾವಳಿಯಲ್ಲಿ ಈಜಿ ಈಗ ಮತ್ತೆ ಹಳೇಗಂಡನ ಪಾದವೇ ಗತಿ ಅಂತ ‘ಜೋಗಿಮನೆ’ ಸೇರಿಕೊಂಡಿದ್ದಾರೆ.

‘ದುರ್ದೈವವಶಾತ್’ ವಾಪಸ್ ಬಂದಿದ್ದೇನೆ ಎಂದು ಅವರೇ ಘೋಷಿಸಿಕೊಂಡಿದ್ದಾರೆ.

dear Friends,
ಹೋದೆಯಾ ಪಿಶಾಚಿ ಎಂದರೆ ಗವಾಕ್ಷೀಲಿ ಬಂದೆ ಅಂದಿತಂತೆ.
Iam, unfortunately, back here. You can hit me on
http://jogimane.blogspot.com/
Thank You

-Jogi

+++
ಅವರ ಲೇಟೆಸ್ಟ್ ಕವನದೊಂದಿಗೆ ಅವರನ್ನು ಮತ್ತೆ ಬ್ಲಾಗ್ ಲೋಕಕ್ಕೆ ಸ್ವಾಗತಿಸೋಣ-
ಸುಳಿಯಿದೆ, ಈಜುವುದು ಅಪಾಯಕಾರಿ
ವೈಶಾಖದ ರಾತ್ರಿಗಳಲ್ಲಿ
ಅಪರೂಪ ತಂಗಾಳಿ.
ವಸಂತಸೇನೆಯ ನೆನಪಿಗೆ
ಮನಸ್ಸು ಶಕಾರ

ಘಾಟಿ ರಸ್ತೆಯ ಆರಂಭಕ್ಕೆ ಸೂಚನೆ:
ಏರುಹಾದಿಗಳಲ್ಲಿ
ವಾಹನಗಳನ್ನು ಮುನ್ನಡೆಸಬೇಡಿರಿ’
ಇಳಿಯುವ ವಾಹನಗಳ ಬಗ್ಗೆ
ಅವಳಿಗೆ ನಿರಾಸಕ್ತಿ

ಹೆಬ್ಬೆರಳು ಎಡವಿ ನೆತ್ತರು ಒಸರಿದರೂ
ಕಣ್ಣಲ್ಲಿ ನೀರು.
ಆಹಾ ಎಂಥ ಸಂಬಂಧ.
ಆ ಬೆಟ್ಟದಲ್ಲಿ ಮೋಡಗುದ್ದಾಟ.
ಈ ಬಯಲಲ್ಲಿ
ಶ್ರಾವಣದ ಇಳಿನೀರು.

ಮುಟ್ಟಬೇಕು, ಮುಟ್ಟಿಯೂ
ಮುಟ್ಟದಂತಿರಬೇಕು.
ಮುಟ್ಟಬಾರದು, ಮುಟ್ಟದಿದ್ದರೂ
ಮುಟ್ಟಿದಂತಿರಬೇಕು
ಇವೆರಡರ ನಡುವೆ
ಮಾತೆ
ಜ್ಯೋತಿರ್ಲಿಂಗ
ಎಲ್ಲವೂ
ಕಣಿವೆಗೆ ಬಿದ್ದ ಉತ್ತರದ
ತುಡುಗು ಗಾಳಿಗೂಳಿ.

ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್!

ಡೋರ್ ನಂ 142

ಬಹುರೂಪಿ

 

`ಥೂತ್ತೇರಿಕಿ, ಇದ್ಯಾಕಿಂಗಾಯ್ತು’ ಅಂತ ತಲೆ ಮೇಲೆ ಕೈ ಹೊತ್ತು ಕೂತ್ಕಂಡೆ.

ಅಲ್ಲಾ ದಿನಾ ನನ್ನ ಜೊತೇನೇ ಇದ್ದು ಏನಾದ್ರೂ ಸಮಸ್ಯೆ ಇದ್ದಿದ್ರೆ ನಂಗೇ ಹೇಳ್ಕೋಬೌದಿತ್ತು. ಅದನ್ನ ಬಿಟ್ಟು ಆ ಅಮೇರಿಕಾದವ್ರಿಗೆ ಯಾಕಪ್ಪಾ ಹೇಳ್ದ ಅಂತ ವರಿ ಶುರುವಾಯ್ತು. ಆಗಿದ್ದಿಷ್ಟೇ, ಇಮೇಲ್ ಚೆಕ್ ಮಾಡ್ಬೇಕು ಅಂತ ಹೊರಟ್ನಾ, ಇನ್ಬಾಕ್ಸ್ನಲ್ಲಿ ನಿಗಿನಿಗಿ ಅನ್ತಾ ಈ ಮೇಲ್ ಕೂತಿತ್ತು. ನಂಗೋ ಹತ್ತು ನಿಮಿಷಕ್ಕೆ ಒಂದ್ಸಲಾ ಇಂಟರ್ನೆಟ್ ತಡಕೋ ಚಪಲ. ಒಂಥರಾ `ಜಪಾನ್ ಶೋಕಿ’ ಇದ್ದಂಗೆ. ತಡಕ್ತಾ ಇರ್ಬೇಕು ಅಷ್ಟೇ. ಆದ್ರೆ ನಾನು ಹತ್ತು ನಿಮಿಷಕ್ಕೆ ಒಂದ್ಸಲ ಬರ್ತೀನಿ ಅಂತ ಊರ್ನೋರೆಲ್ಲಾ ನನಗೆ ಮೇಲ್ ಕಳಸ್ತಾ ಕೂತ್ಕಳ್ತಾರಾ? ಹಾಗಾಗಿನೇ ಅವತ್ತು ಈ ನಿಗಿನಿಗಿ ಮೇಲ್ ನೋಡ್ದಾಗ ಖಂಡಾಪಟ್ಟೆ ಖುಸ್ ಆಗೋಯ್ತು. ಮೇಲ್ ಓಪನ್ ಮಾಡಿದ್ನಾ…ಥೂ! ಯಾಕಾದ್ರೂ ಓಪನ್ ಮಾಡಿದ್ನೋ, ದರಿದ್ರ ನನ್ಮಗಂದು ಹಗಲೂ ರಾತ್ರಿ ತಲೆ ತಿನ್ನೋದಕ್ಕೆ ಶುರುವಾಯ್ತು. `ನಿಮ್ದು ಸ್ವಲ್ಪ ಉದ್ದ ಜಾಸ್ತಿ ಮಾಡ್ಕೊಳಿ, ಮಾಡ್ಕೊಂಡ್ ನೋಡಿ, ಸ್ವರ್ಗ, ಸ್ವರ್ಗ’ ಅನ್ನೋ ಮೇಲ್ ಅದು.

ಯಾವ ಫ್ರೆಂಡಪ್ಪಾ ಇಷ್ಟೊಂದು ಕಷ್ಟುಸುಖ ವಿಚಾರಿಸ್ಕೊಳ್ತಾ ಇದಾನೆ. ನನ್ನ ಕ್ಲೋಸ್ ಫ್ರೆಂಡ್ಗಲ್ಲದೆ ಇನ್ಯಾರಿಗೆ ಗೊತ್ತಾಗಬೇಕು ಇಂತಾ ಕಷ್ಟ ಅಂತ ನೋಡಿದ್ರೆ ಪಾಪ ಯಾರೋ ಅಮೇರಿಕಾದವ್ನು. ಗುತರ್ಿಲ್ಲ ಪರಿಚಯ ಇಲ್ಲ, ಅದಿರ್ಲಿ, ನನ್ನ ಮುಖಾನೂ ನೋಡಿಲ್ಲ. ಅವಾಗ್ಲೇ ನಂಗೆ ಅದರ ಮೇಲೆ ಬೇಸರ ಬಂದಿದ್ದು. ‘ಗಂಡಸರಿಗೆ ಯಾಕೆ ಗೌರಿ ದುಃಖಾ’ ಅನ್ನೋ ಅಂಗೆ ಇದಕ್ಯಾಕಪ್ಪಾ ಅಮೇರಿಕಾದವರ ಮುಂದೆ ಕಷ್ಟಸುಖ ಹೇಳ್ಕೊಳ್ಳೋ ತೆವಲು ಅನಿಸ್ತು. ನಮ್ಮ ಜಮಾನಾದಲ್ಲಿ `ಪ್ರಜಾಮತ’ ಬರ್ತಿತ್ತು. ಅದು ನಮ್ಮನೆಗೆ ಬರ್ತಾ ಇದ್ದಾಗೆ ಎಲ್ಲಿ ಹೋಗ್ತಿತ್ತಪ್ಪ, ಒಳ್ಳೇ ಪಿ.ಸಿ.ಸಕರ್ಾರ್ ಕೈಯಲ್ಲಿ ಸಿಕ್ಕ ಸುಂದ್ರಿ ಥರಾ ಮಾಯಾ ಆಗೋಗೋದು. ಇನ್ನೂ ಮೀಸೆ ಬಂದಿರ್ಲಿಲ್ಲ. ಚಡ್ಡಿಯಿಂದ ಪ್ಯಾಂಟ್ಗೆ ಪ್ರಮೋಶನ್ ಸಿಕ್ಕಿರ್ಲಿಲ್ಲ. ಬಂದ ಮ್ಯಾಗಜಿನ್ ಎಲ್ಲೋಯ್ತಪ್ಪಾ ಅಂತ ಕೇಳಿದ್ರೆ `ಬಚ್ಚಾ’ ಅನ್ನೋಹಂಗೆ ನೋಡೋರು.

ಅದು ಬರ್ತಿದ್ದಂಗೆ ಗುಸುಗುಸು ಪಿಸಪಿಸ ಅಂತ ಏನೇನೋ ದೊಡ್ಡೋರು ಮಾತಾಡ್ಕೊಳ್ಳೋರು. ವಿಷಯ ಇಷ್ಟೇ. ಅದ್ರೊಳಗೆ `ಗುಪ್ತ ಸಮಾಲೋಚನೆ’ ಬರ್ತಿತ್ತು. ಪಾಪ ಯಾರ್ಯಾರಿಗೋ ಏನೇನೋ ಸಮಸ್ಯೆ. ನಂಗ್ ಅಂಗ್ ಆಗ್ಲಿಲ್ಲ. ನಂಗ್ ಇಂಗ್ ಆಗ್ಲಿಲ್ಲ. ದಪ್ಪ ಆಗ್ಲಿಲ್ಲ. ದಪ್ಪ ಅಂತಾನೇ ಇವ್ರಿಗೆ ಇಷ್ಟ ಆಗ್ಲಿಲ್ಲ ಅಂತ ಏನೇನೋ ಕೇಳೋರು. ಯಾರೋ ಉತ್ತರ ಹೇಳೋರು. ಇಷ್ಟಕ್ಕೆ ಪ್ರಜಾಮತಾನೇ ಗುಪ್ತಾಗುಪ್ತ ಆಗೋಗಿತ್ತು. ನಮ್ ಹಿಂದಿನ ರೋಡಲ್ಲಿ ಒಬ್ರು ಎಡಿಟರ್ ಇದ್ರು. ಅವ್ರ ಮನೇಗೋದ್ರೆ ಒಂದು ಪೇಪರ್ ಸಿಗೋದು. 20 ಪುಟ ಇರೋ ಪೇಪರ್-ಪ್ರಜಾಪ್ರಭುತ್ವ. ಅದ್ರಲ್ಲಿ ಅರ್ಧ ಪೇಜ್ ಹಾಟ್ ಹಾಟ್ ಆಗಿರೋದು. ಅಷ್ಟಕ್ಕೇ ಆ ಮ್ಯಾಗಜಿನ್ ನಮ್ಮ ಕೈಗೆಟುಕದಂಗೆ ಮೇಲಿಟ್ಟಿರೋರು. ಬಾಂಬೇನಲ್ಲಿ `ಬ್ಲಿಟ್ಜ್’ ಬಂತಾ, ಮೂರನೇ ಪುಟದಲ್ಲಿ ಹಾ! ಅನ್ನೋಂಗಿರೋ ಹುಡುಗೀರ್ ಬಂದ್ರಾ. ಇಲ್ಲೂ ಒಂದು ಪೇಪರ್ ಹಂಗೇ ಶುರು ಮಾಡಿದ್ರು. ಪೇಪರ್ರೇ ಹಾಂ! ಅಂದೋಯ್ತು.

ಇಷ್ಟ್ ಆಗಿ ಕೈಗೆ ಸಿಗದ ಅಟ್ಟ ಕೈಗೆ ಸಿಗೋ ಅಷ್ಟು ಬೆಳೆದ್ವಾ ತಕ್ಕಳಪ್ಪ ಬಳೇಪೇಟೇಲೆ ಬುಕ್ ತಗಳೋಕೆ ಅಂತಾ ಹೋದ್ರೆ ಮದನ, ರಮಣಿ ಬುಕ್ ಕೆಳಗೆ ಮಲಗಿರೋರು. ಇವೆಲ್ಲಾ ಗೊತ್ತಾಗೋದಿಕ್ಕೆ ಮುಂಚೆ ಜಿಂದೆ ನಂಜುಂಡಸ್ವಾಮಿ ಶಿವ!ಶಿವಾ! ಅನ್ನೋ ಹಾಗೆ ಪತ್ತೇದಾರೀನಲ್ಲಿ ಸಿಕ್ಸಿಕ್ದೋರ ಬಟ್ಟೆ ಬಿಚ್ಚಿಹಾಕವ್ರು. ಇಷ್ಟೇ ನಾವು ಮೈನೆರದ್ವಿ ಅನ್ನೋದಕ್ಕೆ ಇದ್ದ ಲಕ್ಷಣಗಳು. ಮದನ, ರಮಣಿ, ಜಿಂದೆ, ಪ್ರಜಾಮತ, ಪ್ರಜಾಪ್ರಭುತ್ವ ಇವೆಲ್ಲಾ ಓದಿದ್ರೆ ಅಬ್ಬಬ್ಬಾ ಅಂದ್ರೆ ಅದುವರ್ಗೂ ನಮಗೆ ಗೊತ್ತಿಲ್ಲದ ನಾಲ್ಕು ದರಿದ್ರ ಪದಗಳು ಗೊತ್ತಾಗಿತ್ತೇ ಹೊರ್ತು ಇನ್ನೇನೂ ಇಲ್ಲ. ಆದ್ರೆ ಇವಾಗ ಬಳೇಪೇಟೆಗೆ ಹೋಗ್ಬೇಕಾಗಿಲ್ಲ. ಪತ್ತೇದಾರಿ ಹುಡುಕಬೇಕಾಗಿಲ್ಲ. ಪ್ರಜಾಮತ ಬರ್ಬೇಕಾಗಿಲ್ಲ. ಕಂಪ್ಯೂಟರ್ ತಗೋ, ಇಂಟರ್ನೆಟ್ ಜೋಡಿಸ್ಕೋ. ಒಂದು ಬಟನ್ ಕುಟ್ಟಿದ್ರೆ ಇಪ್ಪತ್ತು ದಾರಿ. ಒಂದ್ರಲ್ಲಿ ಎಡವಿದ್ರೆ ನೂರು ಮುಲಾಮು. ಎಡವಿದ್ರೋ ಬಿಟ್ರೋ ಖಾಯಿಲೆ ಹಚ್ಚೋದೂ ಅವ್ರೇ, ಮುಲಾಮು ಸವರೋರು ಇವರೇ. ಇನ್ನಷ್ಟು