ಈಶಾನ್ಯೆ ಬರೆಯುತ್ತಾರೆ…

ಮೊದಲೆರಡು ದಿನಗಳು

nepal3

ಅಂತೂ ಮೇ ೩ ಬಂದೇ ಬಿಟ್ಟಿತು.ನಮಗೆ ಕೆಏಮ್ಎ ಕೊಟ್ಟ ಚಾರಣಿಗರ ಚೀಲದಲ್ಲಿ ಎಲ್ಲಾ ತುರುಕಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟೇ ಬಿಟ್ಟೆವು. ನಾವು ಡೆಲ್ಲಿ ತಲುಪಿದಾಗ ೧೦ ಗಂಟೆ, ಉರಿಬಿಸಿಲು. ಅಲ್ಲಿಂದ ನೇರವಾಗಿ ಅಂತರ ರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನಕ್ಕೆ ಹತ್ತಿದೆವು. ೨:೪೫ ಗಂಟೆಯಲ್ಲಿ ನಾವು ಕಟ್ಮಂಡುವಿನಲ್ಲಿಇದ್ದೆವು. ಅಲ್ಲಿ ಹಿಮಾಲಯನ್ ಅಡ್ವೆನ್ಚರ್ (himalayan adventure company) ಕಂಪನಿಯವರು ನಮಗಾಗಿ ಬಸ್ಸು ತಂದು ಕಾಯುತ್ತಾ ಇದ್ದರು. ಅಲ್ಲಿಂದ ನೇರವಾಗಿ ನಾವು ತಮೇಲ್ ಎಂಬ ಜಾಗಕ್ಕೆ ಹೋದೆವು. ಆಲ್ಲಿ ’ಜೆಡ್ ಸ್ಟ್ರೀಟ್’ ನಲ್ಲಿನ ನಮ್ಮ ಹೋಟೆಲ್ ’ಲಿಲ್ಲಿ’ ತಲುಪಿದೆವು.

ಸಂಪೂರ್ಣ ಓದಿಗೆ ಭೇಟಿ ಕೊಡಿ: ಜೀವ ಜಾಲ 

+++

ಬಿಳಿ ಹುಲಿಯ ಕಪ್ಪು ಬಣ್ಣ!

white-tiger

’ವೈಟ್ ಟೈಗರ್ ’ ಗೆ ಬೂಕರ್ ಪ್ರಶಸ್ತಿ ಸಿಕ್ಕಿತಂತೆ.ಅರವಿಂದ ಅಡಿಗ ಕನ್ನಡಿಗರಂತೆ(ಅದರಲ್ಲೂ ಮಂಗಳೂರು ಅಂದ ತಕ್ಷಣ ಎರಡು ಕಿವಿಗಳು ಒಂದೇ ಸಲ ನಿಮಿರುತ್ತವೆ) !ಇಷ್ಟು ದಿನ ಇದೇ ಸಂಭ್ರಮದಲ್ಲಿದ್ದೆ .ಆದ್ರೆ ಪುಸ್ತಕದ ಬಗ್ಗೆ ವಿಮರ್ಷೆಗಳನ್ನು ನೋಡಿದ ಮೇಲೆ ಯಾಕೋ ಸಂತೋಷಕ್ಕೆ ತಣ್ಣೀರೆರಚಿದ ಹಾಗಾಗಿದೆ.

ಅಡಿಗರು ಹೇಳಿದ್ದು ’ನಗ್ನ ಸತ್ಯ ’ವಂತೆ ! ಭಾರತದ ಇನ್ನೊಂದು ಮುಖ ತೋರಿಸಿದ್ದಾರಂತೆ !

ಇನ್ನೊಂದು ಮುಖ ತೋರಿಸಿದ್ದಾರಾ?? ಯಾವ ಮುಖ ????

ಓಹ್ ಅದಾ ! ಭಾರತ ಒಂದು ಭ್ರಷ್ಟರ ಕೂಪ,ಇಲ್ಲಿ ವಿದ್ಯುತ್ ಕೊರತೆ ಯಾವಾಗಲೂ ,ಇಲ್ಲಿನ ಎಡುಕೇಶನ್ ಸರಿ ಇಲ್ಲ (ಅದಕ್ಕೆ ಆಕ್ಸ್ಫರ್ಡ್ ನಲ್ಲಿ ಓದಿದ್ದು),ಇಲ್ಲಿನ ಟ್ರಾಫಿಕ್ ಸರಿ ಇಲ್ಲ,ಇಲ್ಲಿನ ಜನರಿಗೆ ಶಿಸ್ತಿಲ್ಲ ,ಇಲ್ಲಿ ಜಾತಿಗಳ ಹೆಸರಲ್ಲಿ ಮಾರಣ ಹೋಮವೇ ನಡೆಯುತ್ತೆ, etc etc etc …….

ಸಂಪೂರ್ಣ ಓದಿಗೆ ಭೇಟಿ ಕೊಡಿ:  ಕಡಲತೀರ