ಮುಖೇಡಿ ಬ್ಲಾಗ್ ಗಳು: CNN-IBN ಅನುಭವ

n1446277303_9291

ಡಿ ಪಿ ಸತೀಶ್

ಸುದ್ದಿ ಸಂಪಾದಕ

ಸಿ ಎನ್ ಎನ್ – ಐ ಬಿ ಎನ್

ನವದೆಹಲಿ

ನೀವು ಮುಖೇಡಿ ಬ್ಲಾಗ್ ಗಳು ಮತ್ತು ಅವುಗಳನ್ನು ನಡೆಸುವವರ ಬಗ್ಗೆಯೂ ಲೇಖನಗಳ ಸರಮಾಲೆಯನ್ನೇ ಪ್ರಕಟಿಸಬೇಕು. ಕೇವಲ ಕಾಮೆಂಟ್ ಮಾಡುವವರ ಷಂಡತನದ ಬಗ್ಗೆಯಲ್ಲ. ಈ ಮುಖಹೀನ, ಷಂಡ ಬ್ಲಾಗ್ ಗಳು ಮಾಡಿರುವ, ಮಾಡು ತ್ತಿರುವ ಮತ್ತು ಮಾಡಲಿರುವ ಕ್ರಿಮಿನಲ್ ಕೆಲಸಗಳು ಒಂದೆರಡಲ್ಲ.

ತಮ್ಮ ವಿಚಾರಧಾರೆ ಒಪ್ಪದ, ತಮಗಾಗದವರರನ್ನು ನ್ಯಾಯಯುತವಾಗಿ ಬೆಂಬಲಿಸುವ ಜನರ ಬಗ್ಗೆಯಲ್ಲ ಇಂತಹವರು ತಮ್ಮ ಮುಖ, ಮೂತಿ ತೋರಿಸದೆ ಬ್ಲಾಗ್ ಗಳಲ್ಲಿ ಅವಮಾನಕಾರಿಯಾಗಿ ಬರೆಯುತ್ತಾರೆ.

SW_floater_head

ಇಂತಹಾ ಅನುಭವ ನನಗೇ ಆಗಿದೆ. ರಾಷ್ಟ್ರಮಟ್ಟದ ಇಂಗ್ಲೀಷ್ ಟೀವಿ ಚಾನೆಲ್ ನ ಸುದ್ದಿ ಸಂಪಾದಕನಾಗಿರುವ ನನಗೆ ಆಬ್ಜೆಕ್ಟಿವ್ ಎನ್ನುವ ಆದರೆ ಕಾಂಟ್ರಾವರ್ಸಿಯಲ್ ಆದ ಸುದ್ದಿ ಪ್ರಕಟಿಸಿದಾಗ ಇಂತಹವರ ಧಾಳಿಗೆ ಒಳಗಾದ ಅನುಭವವಾಗಿದೆ.

ಕಳೆದ ಜನವರಿಯಲ್ಲಿ ಮಂಗಳೂರಿನ ಕರಾವಳಿ ಅಲೆ ಪತ್ರಿಕೆಯ ಬಿ ವಿ ಸೀತಾರಾಮ್ ಬಂಧನವಾಗಿದ್ದು ಎಲ್ಲರಿಗೂ ಗೊತ್ತು. ಈ ಸೀತಾರಾಮ್ ಪರ ಮತ್ತು ವಿರುದ್ಧ ಎರಡೂ ಬಲವಾದ ಅಭಿಪ್ರಾಯಗಳಿವೆ. ನಾನು ಈ ಸೀತಾರಮರ ಪತ್ರಿಕೆಯನ್ನು ನೋಡಿದ್ದೇನೆ. ಆದರೆ ಅವರನ್ನೆಂದೂ ಭೇಟಿಯಾಗಿಲ್ಲ. ಭೇಟಿಯಾಗುವ ಅಗತ್ಯವೂ ಬಂದಿಲ್ಲ. ಸೀತಾರಾಮ್ ಬಗ್ಗೆ ನನಗೆ ವೈಯಕ್ತಿಕವಾಗಿ ಯಾವ ಅಭಿಪ್ರಾಯವೂ ಇಲ್ಲ.

ಸೀತಾರಾಮ್ ಗೆ ಪೊಲೀಸರು ಕೈಕೋಳ ತೊಡಿಸಿದ್ದು ನವದೆಹಲಿಯಲ್ಲಿ ಪತ್ರಕರ್ತರಿಗೆ ಹಿಡಿಸಲಿಲ್ಲ. ಅವರ ಬಗ್ಗೆ ಏನೇ ದೂರಿದ್ದರೂ ಸೀತಾರಾಮ್ ಗೆ ಕೈಕೋಳ ತೊಡಿಸಿದ್ದನ್ನು ವಿರೋಧಿಸಿ ಸುದ್ದಿ ಮಾಡಬೇಕೆಂದು ನಿರ್ಧರಿಸಲಾಯಿತು.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರೂ ಆದ ನನ್ನ ಎಡಿಟರ್ ಇನ್ ಚೀಫ್ ರಾಜ್ ದೀಪ್ ಸರ್ ದೇಸಾಯಿ ನನ್ನ ಜೊತೆ ಈ ವಿಷಯ ಚರ್ಚಿಸಿ ಒಂದು ವರದಿ ಸಿದ್ಧಪಡಿಸಲು ಸೂಚಿಸಿದರು. ಅದನ್ನು ಕೇವಲ ಪತ್ರಿಕಾ ಸ್ವಾತಂತ್ರ್ಯದ ಹಿತದೃಷ್ಟಿಯಿಂದ ಸಿದ್ಧಪಡಿಸಿ, ಪ್ರಸರಣಮಾಡಲಾಯಿತು.

ಇದಾದ ಎರಡೇ ದಿನಗಳಲ್ಲಿ ಉಡುಪಿ ಪ್ರೆಸ್ ವಿಕ್ಟಿಮ್ಸ್ ಎನ್ನುವ ಮುಖೇಡಿ ಬ್ಲಾಗೊಂದು ನಾನು ಸೀತಾರಾಮರ ಸ್ನೇಹಿತನೆಂದೂ, ಅವರನ್ನು ರಕ್ಷಿಸಲಿಕ್ಕಾಗಿ ಇಂತಹಾ ವರದಿ ಸಿದ್ಧಪಡಿಸಿದ್ದೇನೆಂದೂ ನನ್ನ ಬಗ್ಗೆ ಕೆಟ್ಟದಾಗಿ ಬರೆಯಿತು.

ಇದಕ್ಕೆ ನಾನು ಕೊಟ್ಟ ಉತ್ತರವನ್ನು ಮೊದಲು ಪ್ರಕಟಿಸಲಿಲ್ಲ. ನಂತರ ನನ್ನ ಉತ್ತರದ ಆಯ್ದಭಾಗಗಳನ್ನು ಮಾತ್ರ ತಿರುಚಿ ಪ್ರಕಟಿಸಿತು.

ಆದ್ದರಿಂದ ನಾನು ನನ್ನ ಉತ್ತರದ ಪೂರ್ಣ ರೂಪವನ್ನು ಚುರುಮುರಿಯಲ್ಲಿ ಪ್ರಕಟಿಸಿದೆ. ಅದಾದನಂತರ ಉತ್ತರವನ್ನು ಈ ಶಿಖಂಡಿ ಬ್ಲಾಗ್ ಪ್ರಕಟಿಸಿತು. ಅಲ್ಲದೆ ನನ್ನನ್ನೇ ಬ್ಲಾಕ್ ಮೇಲ್ ಮಾಡುವ ಅಥವಾ ಇಂಟಿಮಿಡೇಟ್ ಮಾಡುವ ಯತ್ನವನ್ನೂ ಮಾಡಿತು.

ನಾನು ಚುರುಮುರಿಯಲ್ಲಿ ಪೋಸ್ಟ್ ಮಾಡಿದ ಉತ್ತರದ ಪೂರ್ಣ ರೂಪ ಇದು ……………..

I am posting this reply to udupipressvictims.wordpress.com here on churumuri because that blogsite, with the avowed aim of exposing “victims of the media”, doesn’t seem to know the basics of journalism or believe in following them.

I am posting this reply here also because that blogsite which wants to lecture the world on the ethics of journalism (as it believes must be practised), seems to mistakenly believe that its anonymity gives it a licence to do what it pleases.

It has selectively quoted from my full reply to it. I do not want them to give them the cheap thrill of twisting my reply a second time round to suit its ulterior interests.

1. The headline for my CNN-IBN story on the arrest of B.V. Seetharam said, ‘Editor arrested for criticising RSS’. That is a headline given by our web editorial staff. That headline may be right or wrong. If udupipressvictims thinks that our headline is wrong, that is its choice and it can question it by all means. But it has no right to malign my image and cast aspersions on my professional and/or personal integrity. It certainly cannot intimidate or blackmail journalists. Several other television channels and newspapers have carried similar headlines and similar stories with similar conclusions. How come udupipressvictims has not found the time to catch them “red-handed”?

2. My story was not only about B.V. Seetharam’s arrest by the BJP-led government in Karnataka and the protest march of journalists in Bangalore. It was also about how the media is being hounded by the Y.S. Rajasekhara Reddy-led Congress government in neighbouring Andhra Pradesh. Between a faceless blogsite which twists my response (while claiming to protect “press victims”), and a television channel which covers the violations of media freedoms in two different states ruled by two different parties, I am sure discerning readers of churumuri will be able to appreciate the difference and the objective.

3. If udupipressvictims doubts the contention that B.V. Seetharam’s was arrested because he criticised the RSS, on what grounds does it fully and completely trust a school teacher’s allegations of blackmail made in a press conference or in a newspaper report of the same? Only the courts can decide if Bhoja Shetty’s claims are genuine or not. If genuine, the law will take its own course. Till such time, neither udupipressvictims nor any other blog, website, newspaper, magazine or TV channel can sit in judgment over the case.

4. If B.V. Seetharam’s character is not above suspicion in the eyes of udupipressvictims, it has has no business to tarnish the image of other professional journalists merely to settle personal scores with Seetharam.

5. A blogsite which claims to champion “victims of the press” took five days to react to my mail, and when it did so, it twisted the facts. If this is its concern for the other side, god save the victims of udupipress.wordpress.com. True to its record of twisting facts to suit its interest, the blogsite now claims that I am threatening them. Can they produce any evidence to attest this claim? What I have demanded is that they carry my version of the story and an apology. Instead of admitting to its mistake, it is now trying to defend its malicious campaign against me and CNN-IBN by its own twisted explanation/ posts. In fact, they are the ones who are actually threatening me and other professional journalists from carrying out their duties.

6. If udupipressvictims.wordspress.com has nothing to hide or fear, if it really believes in exposing journalists, if it really believes in protecting “victims of the press”, it needs to demonstrate it on its website, instead of indulging in anonymous character assassination of the very nature it decries and claims to champion against. Being a blogger doesn’t give immunity from the law. Nobody has the right to malign others in the name of exposing the black sheep in the media.

8. As a blog udupipressvictims.wordpress.com has every right to ask questions, but it cannot intimidate, threaten or tarnish individuals or institutions, or impute motives, or twist and contort their stand. If they do, they will have to face the long arm of the law, sooner if not later.

ಅ ಬ್ಲಾಗ್ ಸೈಟ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಕಂಪೆನಿ ನಿರ್ಧರಿಸಿತು. ಅದರಂತೆ ಪೂರ್ಣ ವಿಳಾಸ, ಹೆಸರು ಇತ್ಯಾದಿ ನೀಡಲು ಕೇಳಿದಾಗ ಅದು ಮೌನ ವಹಿಸಿತು.

ನಂತರ ಅದರಲ್ಲಿದ್ದ ವಿಳಾಸಕ್ಕೆ ಕಳುಹಿಸಿದ ನೋಟೀಸ್ ಕೂಡಾ ವಾಪಸ್ ಬಂದಿತು. ನನಗೆ ಗೊತ್ತಿರುವಂತೆ ಈ ಬ್ಲಾಗ್ ನಡೆಸುವ ವ್ಯಕ್ತಿಗೆ ನಾನಾರೆಂದೂ ಗೊತ್ತಿಲ್ಲ. ಸೀತಾರಾಮರ ಮೇಲಿನ ದ್ವೇಷಕ್ಕೆ ಅವರ ಬಗ್ಗೆ ಸುದ್ದಿ ಬರೆಯುವವವರೆಲ್ಲರನ್ನೂ ಚಾರಿತ್ರ್ಯ ಹರಣಮಾಡಿ ಬರೆಯುವುದು ಇವನ ಕೆಲಸ.

ಈ ಬ್ಲಾಗ್ ಗೆ ಪತ್ರಕರ್ತರ ವ್ಯವಹಾರಗಳ ಬಗ್ಗೆ ಸಿಟ್ಟಿದ್ದರೆ, ಅದನ್ನು ಪಾರದರ್ಶಕವಾಗಿ ಮಾಡಬೇಕು. ಮುಚ್ಚಿಡಲು ಏನೂ ಇಲ್ಲದ ನನ್ನಂತಹ ಸಾವಿರಾರು ಪತ್ರಕರ್ತರು ಅದನ್ನು ಖಂಡಿತಾ ಬೆಂಬಲಿಸುತ್ತೇವೆ.

ಅದು ಬಿಟ್ಟು ಕಳ್ಳರಂತೆ ವರ್ತಿಸವವರಿಗೆ ಏನು ಮಾಡಬೇಕು. ಏನೇ ಇರಲಿ ಸೀತಾರಾಮ್ ಗೆ ಓಪನ್ ಆಗಿ ಮಾಡುವ ಧೈರ್ಯವಿದೆ. ಆದರೆ ಅವರನ್ನು ವಿರೋಧಿಸುವ ದೊಡ್ಡ ದೊಡ್ಡ ಮಾತಾಡುವ ಈ ಬ್ಲಾಗ್ ಗೆ ಮುಸುಡಿ ತೋರಿಸುವ ಧೈರ್ಯವಿಲ್ಲ. ಸಾರ್ವಜನಿಕವಾಗಿ ಚರ್ಚೆಗೆ ಬರುವ ತಾಕತ್ತಿಲ್ಲ. ಆದ್ದರಿಂದ ಇಂತಹವರು ಶುದ್ಧ ಕ್ರಿಮಿ ಕೀಟಗಳಂತೆ ಕಾಣುತ್ತಾರೆ.

ಆದರೆ ಇದಾದ ಕೆಲವೇ ದಿನಗಳಲ್ಲಿ ಕಂಪ್ಯೂಟರ್ ನ ಐಪಿ ನಂಬರ್ ನಿಂದ ಮತ್ತು ಇತರ ಮೂಲಗಳಿಂದ ಈ ಬ್ಲಾಗ್ ನ ಪೂರ್ಣ ಜಾತಕ ಸಿಕ್ಕಿತು. ಈ ವ್ಯಕ್ತಿಗಳು ಈ ಮುಖೇಡಿಗಳ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಇನ್ನೂ ಸಂಭ್ರಮಿಸುತ್ತಿರಬೇಕು. ನನಗೆ ಸೀತಾರಾಮರಿಂದ ಅಥವಾ ಈ ವ್ಯಕ್ತಿಗಳಿಂದ ಆಗುವುದು ಏನೂ ಇಲ್ಲದ್ದರಿಂದ ನಾನ್ಯಾಕೆ ಕೇರ್ ಮಾಡಲಿ. ಇದಾದ ಕೆಲವೇ ದಿನಗಳಲ್ಲಿ ಕರ್ನಾಟಕ ಹೈಕೋರ್ಟ್ ಸೀತಾರಾಮ್ ಗೆ ಕೈಕೋಳ ಹಾಕಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ ಮೂರ್ನಾಲ್ಕು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದಂಡವನ್ನು ವಿಧಿಸಿತು. ಈ ಬ್ಲಾಗ್ ಗೆ ಹೈಕೋರ್ಟ್ ಬಗ್ಗೆಯೂ ಇದೇ ರೀತಿ ಬರೆಯುವ ಧೈರ್ಯವಿದೆಯೆ.

ಮರೆಯಲ್ಲಿ ಕುಳಿತು ಕಲ್ಲು ಹೊಡೆದರೆ ಗೊತ್ತಾಗುವುದಿಲ್ಲ ಎಂದು ಈ ಮೂರ್ಖರು ಭಾವಿಸಿದ್ದರೆ, ಅದು ಶುದ್ಧ ಮೂರ್ಖತನ. ಭ್ರಷ್ಚ ಪತ್ರಕರ್ತರಿಗಿಂತ ಅವರ ಬಗ್ಗೆ ಮುಖ ತೋರಿಸದೇ ಬರೆಯುವ ಇಂತಹಾ ಷಂಡರ ಬಗ್ಗೆ ದೊಡ್ಡ ಆಂದೋಲನವಾಗಬೇಕು.

————————

ಇನ್ನೊಂದು ಮಾತು. ರಾಕೇಶ್ ಮಥಾಯಿಸ್ ಎನ್ನುವ ವ್ಯಕ್ತಿ ಕ್ಷಕಿರಣ ಎನ್ನುವ ಬ್ಲಾಗ್ ನಡೆಸುತ್ತಾನೆ. ಅವನೇ ಹೇಳುವಂತೆ ಇದು ಪತ್ರಿಕಾರಂಗದ ಕೊಳೆ ಎತ್ತಲು ಸಣ್ಣ ಪ್ರಯತ್ನ.

ಈ ಭ್ಲಾಗ್ ಒಳ್ಳೆಯ ಪ್ರಯತ್ನ. ಆದರೆ, ಈ ವ್ಯಕ್ತಿಗೆ ನಿಜವಾದ ಧೈರ್ಯವಿದ್ದರೆ, ಅದನ್ನು ನೇರವಾಗಿ ತನ್ನ ನಿಜವಾದ ಹೆಸರಲ್ಲಿ ಮಾಡಬೇಕು. ಅದು ಬಿಟ್ಟು ರಾಕೇಶ್ ಮಥಾಯಿಸ್ ಎನ್ನುವ ಹೆಸರಲ್ಲಲ್ಲ.

ಈ ಭ್ಲಾಗ್ ಎಂತಹಾ ಒಳ್ಳೇ ಕೆಲಸ ಮಾಡಿದರೂ, ಯಾರೂ ಅದನ್ನು ನಂಬುವುದಿಲ್ಲ. ಸತ್ಯ ಹೇಳಲು ಧೈರ್ಯಬೇಕು. ಅದಿಲ್ಲದಿದ್ದರೆ, ಸುಮ್ಮನೇ ಕುಳಿತಿರಬೇಕು. ಬೇನಾಮಿ ಹೆಸರಲ್ಲಿ ಬ್ಲಾಗ್ ದಂಧೆ ನಡೆಸಬಾರದು. ಮಥಾಯಿಸ್ ದಯವಿಟ್ಟು ನಿಮ್ಮ ನಿಜವಾದ ಹೆಸರನ್ನು ಮೊದಲು ಎಕ್ಸ್ ಪೋಸ್ ಮಾಡಿ. ನಂತರ ಭ್ರಷ್ಟ ಪತ್ರಕರ್ತರನ್ನು ನೋಡಿಕೊಳ್ಳಿ. ಇದು ಕೇವಲ ಕಿವಿಮಾತು. ನಾನು ಯಾರ ಪರ ಅಥವಾ ವಿರುದ್ಧವಾಗಿ ನಿಮಗೆ ಹೇಳುತ್ತಿಲ್ಲ.

ಏಕೆಂದರೆ ನನಗೆ ಯಾರಿಂದಲೂ ಮುಚ್ಚಿಡುವುದು ಏನೂ ಇಲ್ಲ. ಆಗಬೇಕಿರುವುದು ಮೊದಲೇ ಇಲ್ಲ.

-ಡಿ ಪಿ ಸತೀಶ್

ಸುದ್ದಿ ಸಂಪಾದಕ

ಸಿ ಎನ್ ಎನ್ – ಐ ಬಿ ಎನ್

ನವದೆಹಲಿ

5 ಟಿಪ್ಪಣಿಗಳು (+add yours?)

  1. mahendra kumar H M
    ಆಗಸ್ಟ್ 26, 2009 @ 17:27:15

    Good. Dear Friend your pains are very indepth..
    mahendra kumar H M
    Bellary – 9449068333
    mahendranews@gmail.com

    ಉತ್ತರ

  2. sughosh s. nigale
    ಆಗಸ್ಟ್ 24, 2009 @ 19:59:54

    ನನಗೆ ಬ್ಲಾಗ್ ಲೋಕದ ಸಂಪರ್ಕವಿದ್ದರೂ ನೇರವಾಗಿ ಪ್ರವೇಶಿಸಿದ್ದು ಇತ್ತೀಚೆಗೆ. ಆದರೆ ಎರಡು ತಿಂಗಳು ಕಳೆಯುವಷ್ಟರಲ್ಲಿಯೇ ಅನಾನಿಮಸ್ ಕಮೆಂಟುಗಳ ಹಾವಳಿ ಆರಂಭವಾಗಿದೆ. ನಾಸ್ಟಿ ಕಾಮೆಂಟ್ ಮಾಡಿ ಒಟ್ಟಾರೆ ಮನಸ್ಥಿತಿಯನ್ನೇ ಕೆಡಿಸಿಬಿಡುವ ಪ್ರಯತ್ನ. ನನಗೆನ್ನಿಸುವ ಮಟ್ಟಿಗೆ ಅನಾನಿಮಸ್ ಆಗಿ ನಾಸ್ಟಿ ಕಮೆಂಟ್ ಮಾಡುವವರು ಮಾನಸಿಕವಾಗಿ ಅಸ್ವಸ್ಥರು. They need treatment and counseling. ಆದರೆ ಅದನ್ನು ಕೊಡುವವರು ಯಾರು? ಯಾರೋ ಒಬ್ಬರು ಒಳ್ಳೆಯ ಆರ್ಟಿಕಲ್ ಬರೆಯುವುದು, ಉತ್ತಮ ಪೋಸ್ಟ್ ಹಾಕುವುದು, ಚೆನ್ನಾದ ಕವಿತೆ ಬರೆಯುವುದು, ಕರೆಂಟ್ ಇಷ್ಯು ಚರ್ಚಿಸುವುದು, ಅದ್ಭುತ ಫೋಟೋಗ್ರಾಫ್ ನೀಡುವಂತಹ ವಿಷಯಗಳನ್ನು ಅರಗಿಸಿಕೊಳ್ಳಲಾಗದವರು ಮನುಷ್ಯರೆ? ಜೊತೆಗೆ ಇಂತಹವರಿಗೆ ರಿಪ್ಲೈ ಮಾಡಲು ಹೋದರೆ, ಅವರು ಮತ್ತಷ್ಟು ಎಂಜಾಯ್ ಮಾಡುತ್ತಾರೆ. ಹಂದಿಯ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..
    ಜಗತ್ತಿನಲ್ಲಿ ನೀಡಬಹುದಾದ ಅತ್ಯಂತ ದೊಡ್ಡ ಶಿಕ್ಷೆಯೆಂದರೆ punishment of negligence ಅಂತೆ. ಇಗ್ನೋರ್ ಮಾಡುತ್ತ ಹೋಗುವುದೇ ಬೆಸ್ಟ್ ಡಿಫೆನ್ಸ್ ಅನಿಸುತ್ತದೆ.

    ಉತ್ತರ

  3. Agnihothri
    ಆಗಸ್ಟ್ 23, 2009 @ 18:21:50

    @ ಡಿ.ಪಿ. ಸತೀಶ್
    ವಂಡರ್, ನಿಮ್ಮ ವಿವರ ನಿಜಕ್ಕೂ ಉತ್ತಮವಾಗಿದೆ. ಅದರಲ್ಲೂ ಬಿವಿಸೀ (ಸೀತಾರಾಂ) ಅವರಿಗೆ ಕೈಕೋಳ ತೊಡಿಸಿದ ವಿಚಾರದ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದು ಹಿಡಿಸಿತು. ಬಿವಿಸೀ ವ್ಯಗ್ತಿಗತವಾಗಿ ಏನೇ ಅನಿಸಿಕೊಂಡರೂ ವ್ರತ್ತಿಯಲ್ಲಿ ಒಬ್ಬ ಪತ್ರಕರ್ತರೇ ಅಲ್ಲವೇ?
    ಇನ್ನು ಅನಾಮದೇಯ ಬ್ಲಾಗ್ ಗಳ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಖಂಡಿತ ನಿಮ್ಮ ಧ್ವನಿಗೆ ನಮ್ಮ ಬೆಂಬಲವಿದೆ. ಹೇಡಿ ಬ್ಲಾಗ್ ಗಳನ್ನು ಪತ್ತೆ ಹಚ್ಚುವ ಮಾಡಲೇ ಬೇಕಾಗಿದೆ.

    ಉತ್ತರ

  4. Vijaya kumar
    ಆಗಸ್ಟ್ 23, 2009 @ 15:00:53

    There is no necessity to visit these blogsites and then get exasperated about it. There is a Kannada proverb ‘Nayi boglidare Devloka halagutta’ It is better to ignore than create importance by reacting to such Blogs.

    ಉತ್ತರ

  5. srinivasa gowda
    ಆಗಸ್ಟ್ 22, 2009 @ 23:57:42

    ಅರೆರೆ… ಸತೀಶಣ್ಣಾ, ಸಕ್ಕತ್ ಆಗಿ ಬರೆದಿದ್ದೀಯಾ, ನಮಗೆಲ್ಲಾ ಈಗ, ಈಗ, ಆಗುತ್ತಿರೋ ಅನುಭವಗಳಿಗಿಂತ ದೊಡ್ಡ ಅನುಭವ ನಿನ್ನದು. ಆ ಅನಾನಿಮಸ್
    ಬ್ಲಾಗರ್ ನ ಕಂಡುಕೊಂಡೆಯಲ್ಲಾ ಅದು ನಿನ್ನ ಮತ್ತು ನಿನ್ನ ಸಂಸ್ಥೆಗಿರುವ ಶಕ್ತಿ.

    ನಿನ್ನ ಈ ಪೋಸ್ಟ್ ಇಂದ ಬ್ಲಾಗಿಗರಿಗೆಲ್ಲಾ ದೈರ್ಯ ಬಂದಿದೆ.

    ಕಡೆ ಮಾತು. ನಾನು ನಿಮ್ಮ ಒಟ್ಟಿಗೆ ಇದ್ದರೂ ನನಗೆ ಯಾವತ್ತೂ ಇದನ್ನೆಲ್ಲಾ ಹೇಳಲೇ ಇಲ್ಲ ಅಲ್ಲಾ… ಇನ್ನೊಮ್ಮೆ ಸಿಕ್ಕಾಗ ಹೇಳಿ ಆಯ್ತಾ.

    ಉತ್ತರ

ನಿಮ್ಮ ಟಿಪ್ಪಣಿ ಬರೆಯಿರಿ